"ಮನುಷ್ಯ ದೀಪವಾದರೂ ಆಗಬೇಕು, ಕನ್ನಡಿಯಾದರೂ ಆಗಬೇಕು. ಒಂದು ಬೆಳಕನ್ನು ಕೊಡುತ್ತದೆ ಮತ್ತೊಂದು ಅದನ್ನು ಪ್ರತಿಬಿಂಬಿಸುತ್ತದೆ. ಪ್ರತಿಯೊಬ್ಬರೂ ದೀಪ ಆಗದೇ ಹೋಗಬಹುದು ಆದರೆ ಕನ್ನಡಿ ಆಗಬಲ್ಲರು. ತಿಳಿದಿರುವ ಜ್ಞಾನವನ್ನು ಮತ್ತೊಬ್ಬರಿಗೆ ಹಂಚುವುದೇ ಜೀವನ.."—ಅರಿಸ್ಟಾಟಲ್

Friday, 10 July 2015

☀ಈ ದಿನದ ಪ್ರಚಲಿತ (KAS/IAS) ಪ್ರಶ್ನೆ:—   "2004-05 ರ ಅಧಿಕೃತ ವರದಿಯ ಪ್ರಕಾರ ಭಾರತದಲ್ಲಿ ಲಕ್ಷಾಂತರ ಜನರು ತಮ್ಮ ಸಾಂಪ್ರದಾಯಿಕ ಉದ್ಯೋಗವಾದ ಕೃಷಿಯನ್ನು ಬಿಟ್ಟುಕೊಟ್ಟಿದ್ದಾರೆ. ನಿಮ್ಮ ಪ್ರಕಾರ ಇದರ ಹಿಂದಿರುವ ಪ್ರಮುಖ ಕಾರಣಗಳು ಯಾವವು"? (Since 2004-05, official report says millions of people left their traditional occupation agriculture in India,what reasons do you see behind it?)

☀ಈ ದಿನದ ಪ್ರಚಲಿತ (KAS/IAS) ಪ್ರಶ್ನೆ:—

 "2004-05 ರ ಅಧಿಕೃತ ವರದಿಯ ಪ್ರಕಾರ ಭಾರತದಲ್ಲಿ ಲಕ್ಷಾಂತರ ಜನರು ತಮ್ಮ ಸಾಂಪ್ರದಾಯಿಕ ಉದ್ಯೋಗವಾದ ಕೃಷಿಯನ್ನು ಬಿಟ್ಟುಕೊಟ್ಟಿದ್ದಾರೆ. ನಿಮ್ಮ ಪ್ರಕಾರ ಇದರ ಹಿಂದಿರುವ ಪ್ರಮುಖ ಕಾರಣಗಳು ಯಾವವು"?

(Since 2004-05, official report says millions of people left their traditional occupation agriculture in India,what reasons do you see behind it?)

━━━━━━━━━━━━━━━━━━━━━━━━━━━━━━━━━━━━━━━━━━━━━

★ ವಿವರಣಾತ್ಮಕ ಸಾಮಾನ್ಯ ಅಧ್ಯಯನ.
(General Studies notes in Kannada Medium)

★ ಐಎಎಸ್ / ಕೆಎಎಸ್ ಪರೀಕ್ಷಾ ವಿಶೇಷಾಂಕ
(KAS/IAS Examination Special)



— ಸಾವಿರಾರು ವರ್ಷಗಳಿಂದ ಭಾರತದ ಎಲ್ಲ ಜನತೆಗೆ ಅನ್ನಹಾಕಿದ ಕೃಷಿ ಇಂದು ನಲುಗುತ್ತಿದೆ. ವಾಣಿಜ್ಯೀಕರಣ, ವ್ಯಾಪಾರೀಕರಣ, ಜಾಗತೀಕರಣ, ಕೈಗಾರೀಕರಣ ಮೊದಲಾದ ರಾಜಕಾರಣಿಗಳ ಹಾಗೂ ವಿಶ್ವವ್ಯಾಪಾರಿಗಳ ಹೊಂದಾಣಿಕೆ ಯೋಜನೆಗಳ ಕಾರಣದಿಂ ಇವತ್ತು ಕೃಷಿ ವಲಯ ನಲುಗುತ್ತಿದೆ.

●. ಇವತ್ತು ಬಡವನಿಂದ ಹಿಡಿದು ಶ್ರೀಮಂತರಿಗೆ ತಲೆತಲಾಂತರದಿಂದ ಹೊಟ್ಟೆಗೆ ಹಿಟ್ಟು ಹಾಕಿದ್ದ ಕೃಷಿ, ಇಂದು ತನ್ನ ಒಡಲು ತುಂಬಿಸಿಕೊಳ್ಳಲು ಇನ್ನೊಬ್ಬರ ಮರ್ಜಿ ಕಾಯುವ ಸ್ಥಿತಿ ತಲುಪಿದೆ.

●. ಕೃಷಿಯಲ್ಲಿ ಲಾಭ ಇಲ್ಲ. ಇದನ್ನು ನಂಬಿದರೆ ಹೊಟ್ಟೆಗೆ ಹಿಟ್ಟು ಸಿಗುವುದಿಲ್ಲ ಎಂದು ಭ್ರಮನಿರಸನಗೊಂಡ ಕೃಷಿಕರು ಹಾಗೂ ಅವರ ಮಕ್ಕಳು ಹಳ್ಳಿ ತೊರೆದು ಪೇಟೆ ಹಾದಿ ಹಿಡಿದ ಪರಿಣಾಮ, ಹಳ್ಳಿಯಲ್ಲಿ ಹೊನ್ನು ಬೆಳೆಯುವ ಹೊಲ ಗದ್ದೆಗಳು ಇಂದು ಗೆದ್ದಲು ಹಿಡಿದಿವೆ.

●. ಭಾರತದಲ್ಲಿ ಶೇಕಡ 70 ಕ್ಕೂ ಹೆಚ್ಚಿನ ಜನತೆ ಕೃಷಿಯನ್ನೇ ನಂಬಿದ್ದಾರೆ. ಆದರೆ ಕೃಷಿ ಅನುತ್ಪಾದಕ ಕ್ಷೇತ್ರ ಎಂದು ನಂಬಿ ಪಟ್ಟಣಕ್ಕೆ ವಲಸೆ ಹೋಗುವವರ ಸಂಖ್ಯೆ ಪ್ರತಿವರ್ಷ ಲೆಕ್ಕಕ್ಕೆ ಸಿಗದಷ್ಟು ಹೆಚ್ಚುತ್ತಲಿದೆ. 2040ರ ವೇಳೆಗೆ ಶೇ.50ರಷ್ಟು ಜನತೆ ನಗರ ಪ್ರದೇಶದಲ್ಲಿ ವಾಸಿಸುತ್ತಾರೆ ಎಂದು ಅಂದಾಜಿಸಲಾಗಿದೆ. ಹೀಗಾದರೆ ದೇಶದ ಜನತೆಗೆ ಆಹಾರ ಒದಗಿಸುವವರು ಯಾರು ಎಂಬ ಚಿಂತೆೆ ನಮ್ಮನ್ನು ಕಾಡತೊಡಗಿದೆ.

●. ದೇಶದಲ್ಲಿ ಶೇ. 67ರಷ್ಟು ಜನ ಕೃಷಿಯನ್ನು ಅವಲಂಬಿಸಿದ್ದರೂ ಒಟ್ಟಾರೆ ಬೇಡಿಕೆಯ ಶೇ.27ರಷ್ಟು ಆಹಾರ ಉತ್ಪಾದನೆಯಾಗುತ್ತಿದೆ. ಉಳಿದ ಆಹಾರ ಪದಾರ್ಥಗಳನ್ನು ಬೇರೆ ಬೇರೆ ಕಡೆಗಳಿಂದ ಆಮದು ಮಾಡಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ.

●. ಉತ್ತಮ ಜೀವನ, ಬದುಕಿಗಾಗಿ ಅನೇಕ ಜನರು ತಮ್ಮ ಕೃಷಿ ಉದ್ಯೋಗ ಬಿಟ್ಟುಕೊಡುತ್ತಿರುವುದು ಗ್ರಾಮೀಣ ವಲಸೆಯ ಹಿಂದಿರುವ ಒಂದು ಪ್ರಮುಖ ಕಾರಣ. ತುಲನಾತ್ಮಕವಾಗಿ ಕೃಷಿಯಲ್ಲಿ ಯಾಂತ್ರೀಕರಣ ಮತ್ತು ಉತ್ತಮ ನೀರಾವರಿ ಮತ್ತು ಕೃಷಿ ಉಪಕರಣಗಳಿಗಾಗಿ ಯಾವುದೇ ರೀತಿಯ ಹೂಡಿಕೆ ಇಲ್ಲದಿರುವುದು ಹಾಗು ಪರಿಣಾಮಕಾರಿ ತರಬೇತಿಯ ಕೊರತೆ ಮತ್ತು ಅತ್ಯಂತ ಮುಖ್ಯವಾಗಿ ಕಳಪೆ ಭೂ ದಾಖಲೆಗಳ ನಿರ್ವಹಣೆ ಮುಂತಾದವುಗಳು ಕೃಷಿಯಲ್ಲಿ ಉತ್ಪಾದಕತೆ ಮತ್ತು ಇಳುವರಿ ಇಳಿಮುಖವಾಗಲು ಪ್ರಮುಖ ಕಾರಣವಾಗಿವೆ.

●. ಹೆಚ್ಚಿನ ರೈತರು ಇನ್ನೂ ತಮ್ಮ ನೀರಾವರಿ ಅವಶ್ಯಕತೆಗಳನ್ನು ಪೂರೈಸಿಕೊಳ್ಳಲು ಮಾನ್ಸೂನ್ ಮಾರುತಗಳ ಮೇಲೆ ಅವಲಂಬಿತರಾಗಿದ್ದಾರೆ ಮತ್ತು ರೈತರ ದೊಡ್ಡ ಕುಟುಂಬಗಳು ಸಣ್ಣ ಗಾತ್ರದ ಭೂ ಹಿಡುವಳಿಗಳನ್ನು ಹೊಂದಿದ್ದು ಕೃಷಿಯು ಅನೇಕ ಕುಟುಂಬಗಳಿಗೆ ನಷ್ಟವನ್ನುಂಟು ಮಾಡುವ ಸಾಹಸೋದ್ಯಮವಾಗಿ ಮಾರ್ಪಟ್ಟಿದೆ.

●. ಹಳ್ಳಿಗಳಲ್ಲಿ ಮುಖ್ಯವಾಗಿ ಶಿಕ್ಷಣ ಮತ್ತು ಆರೋಗ್ಯ ಸೌಲಭ್ಯಗಳ ಕೊರತೆ ಹಾಗು ಸಾಮಾನ್ಯವಾಗಿ ನಗರಗಳಲ್ಲಿನ ಹೆಚ್ಚಿದ ಅಭಿವೃದ್ಧಿಯೂ ಅನೇಕ ಮೂಲಭೂತ ಅವಶ್ಯಕತೆಗಳನ್ನು ಪೂರೈಸಲು ಜನರು ನಗರಗಳಿಗೆ ಪ್ರಯಾಣ ಕೈಗೊಳ್ಳುತ್ತಿರುವುದು. ಇಂತಹ ವ್ಯತಿರಿಕ್ತ ಅಭಿವೃದ್ಧಿಯ ಕಾರಣದಿಂದಾಗಿ ಗ್ರಾಮೀಣ ವಲಸೆಗೆ ಕಾರಣವಾಗಿದೆ.

●. ನಗರಗಳಲ್ಲಿನ ಹೊಸ ಮಧ್ಯಮ ವರ್ಗದವರ ಏಳಿಗೆಯಿಂದ ಮುಖ್ಯವಾಗಿ ಕಟ್ಟಡ ನಿರ್ಮಾಣದಂತಹ ಬಹಳಷ್ಟು ಉದ್ಯೋಗಾವಕಾಶಗಳನ್ನು ನಿರ್ಮಾಣಗೊಳ್ಳುತ್ತಿರುವುದು ಹಾಗು ದೇಶೀಯ ಸಹಾಯ ಅಥವಾ ಸಣ್ಣ ಪುಟ್ಟ ವ್ಯವಹಾರಗಳಲ್ಲಿ ಪರ್ಯಾಯ ಕೆಲಸ, ಉದ್ಯೋಗಗಳ ಉಗಮಕ್ಕೆ ಕಾರಣವಾಗಿದೆ.

●. ಭಾರತದ ಆರ್ಥವ್ಯವಸ್ಥೆಯಲ್ಲಿ ಸೇವಾ ವಲಯ ಪಡೆಯುತ್ತಿರುವ ಪ್ರಸಿದ್ಧಿ, ಶಿಕ್ಷಣ ಕ್ಷೇತ್ರದಲ್ಲಿನ ಸಣ್ಣ ಹೂಡಿಕೆಗಳು ಕೂಡಾ ಕೃಷಿಯಲ್ಲಿನ ಕಳಪೆ ಆದಾಯಕ್ಕೆ ಪರೋಕ್ಷ ಕಾರಣವಾಗಿದೆ.

●. ಭಾರತದಲ್ಲಿ ಕೃಷಿ ಯೋಗ್ಯ ಭೂಮಿ ಹೇರಳವಾಗಿದ್ದರೂ, ಕೃಷಿ ಕಾರ್ಯ ನಿರ್ವಹಿಸುವವರ(ಕೃಷಿ ಕೂಲಿ ಕಾರ್ಮಿಕರ) ಕೊರತೆ ಕಾರಣದಿಂದ ಕೃಷಿ ನಶಿಸುತ್ತಿದೆ. ಅಲ್ಲದೆ ಕೃಷಿ ಮಾಡಿ ಮಗ ಬದುಕುವುದು ಬೇಡ. ಲಂಚ ಕೊಟ್ಟದರೂ ಸರಿ. ಸರಕಾರಿ ನೌಕರಿ ಸೇರಲಿ ಎನ್ನುವ ಕೃಷಿ ಪಾಲಕರ ಹಪಹಪಿಯೂ ಕೃಷಿ ನಾಶಕ್ಕೆ ಬಹುತೇಕ ಕಾಣಿಕೆ ನೀಡಿದೆ.

●. ಬೆಳಗಿನಿಂದ ಸಂಜೆಯವರೆಗೆ ಹೊಲ ಗದ್ದೆಗಳಲ್ಲಿ ದುಡಿದು 100 ರೂ. ಸಂಪಾದಿಸುವ ಬದಲು, ಯಾವುದಾದರೂ ಪಟ್ಟಣಕ್ಕೆ ಹೋಗಿ ಯಾವುದೋ ಕಟ್ಟಡ ನಿರ್ಮಾಣ, ರಸ್ತೆ ನಿರ್ಮಾಣ, ಚರಂಡಿ ನಿರ್ಮಾಣ ಕಾಮಗಾರಿಯಲ್ಲಿ ಕೆಲಸ ಮಾಡಿ ದಿನಕ್ಕೆ 200 ರೂ. ಕೂಲಿ ಪಡೆದು‘ಚೈನಿ’ಹೊಡೆಯುವ ಹಳ್ಳಿ ಹೈದರ ಕಾರಣದಿಂದ, ಹಳ್ಳಿಯಲ್ಲಿ ಕೃಷಿ ಕಾರ್ಯಗಳಿಗೆ ಕೆಲಸಗಾರರು ಅತಿ ಕಡಿಮೆಯಾಗುತ್ತಿರುವುದು, ಕೃಷಿ ನಶಿಸುತ್ತಿರುವುದಕ್ಕೆ ಬಹು ದೊಡ್ಡ ಕಾರಣವಾಗುತ್ತಿದೆ.

●. ಹೀಗಾಗಿ ಕೃಷಿ ಕರಗಿದರೆ ಹೊಟ್ಟೆ ಬರಿದಾದೀತು. ಇದನ್ನು ತಡೆಯಲು ಅಧಿಕಾರ ಗದ್ದುಗೆಯಲ್ಲಿರುವ ಜನಪ್ರತಿನಿಧಿಗಳಿಂದ ಹಿಡಿದು, ವಿಜ್ಞಾನಿಗಳು, ತಂತ್ರಜ್ಞರು ಸೇರಿದಂತೆ ನಾವೂ ಕೂಡ ಅತ್ಯಂತ ಜವಾಬ್ದಾರಿಯುತವಾಗಿ ಯೋಚಿಸಿ ಕಾರ್ಯನಿರ್ವಹಿಸಬೇಕಾದ ಅವಶ್ಯಕತೆ ಇದೆ. ಇದರಿಂದ ನಶಿಸುವ ಕೃಷಿ ಕೊನರ ಬೇಕಾಗಿದೆ. ಆ ಮೂಲಕ ಆಹಾರಕ್ಕಾಗಿ ನಾವು ಇನ್ನೊಬ್ಬರ ಮುಂದೆ ಕೈಯೊಡ್ಡುವ ದೈನ್ಯ ಪರಿಸ್ಥಿತಿ ತಪ್ಪಿಸಬೇಕಾಗಿದೆ.

No comments:

Post a Comment