"ಮನುಷ್ಯ ದೀಪವಾದರೂ ಆಗಬೇಕು, ಕನ್ನಡಿಯಾದರೂ ಆಗಬೇಕು. ಒಂದು ಬೆಳಕನ್ನು ಕೊಡುತ್ತದೆ ಮತ್ತೊಂದು ಅದನ್ನು ಪ್ರತಿಬಿಂಬಿಸುತ್ತದೆ. ಪ್ರತಿಯೊಬ್ಬರೂ ದೀಪ ಆಗದೇ ಹೋಗಬಹುದು ಆದರೆ ಕನ್ನಡಿ ಆಗಬಲ್ಲರು. ತಿಳಿದಿರುವ ಜ್ಞಾನವನ್ನು ಮತ್ತೊಬ್ಬರಿಗೆ ಹಂಚುವುದೇ ಜೀವನ.."—ಅರಿಸ್ಟಾಟಲ್

Sunday, 19 July 2015

☀ಕರ್ನಾಟಕದಲ್ಲಿ ರಕ್ಷಿತ ಹುಲಿ ಮೀಸಲು ಪ್ರದೇಶಗಳು: (Project Tiger Reserves in Karnataka) 

☀ಕರ್ನಾಟಕದಲ್ಲಿ ರಕ್ಷಿತ ಹುಲಿ ಮೀಸಲು ಪ್ರದೇಶಗಳು:
(Project Tiger Reserves in Karnataka)
━━━━━━━━━━━━━━━━━━━━━━━━━━━━━━━━━━━━━━━━━━━━━

★ಕರ್ನಾಟಕದ ಜೀವಿ ವೈವಿಧ್ಯತೆ.
(Karnataka Biodiversity)

★ ಕರ್ನಾಟಕದ ಭೂಗೋಳಶಾಸ್ತ್ರ.
(Karnataka Physical Geography)


●.ರಾಜ್ಯದ 5 ಹುಲಿ ಮೀಸಲುಗಳಲ್ಲಿ ರಾಷ್ಟ್ರದ ಅತಿ ಹೆಚ್ಚು ಹುಲಿಗಳಿವೆ ಹಾಗೂ ಹುಲಿ ಸಂತತಿಯಲ್ಲಿ ರಾಜ್ಯವು ಮೊದಲನೇ ಸ್ಥಾನದಲ್ಲಿದೆ. 2010ರ ಹುಲಿ ಗಣನೆಯಂತೆ ರಾಜ್ಯದಲ್ಲಿ 300 ಹುಲಿಗಳಿವೆ.

●.ಪ್ರಸ್ತುತ ಡಿಸೆಂಬರ್-2013ರಲ್ಲಿ ಹುಲಿ ಸಂತತಿಯ ಗಣತಿ ಆರಂಭವಾಗಿದೆ ಹಾಗೂ ಕೆಲಸ ಮುಕ್ತಾಯಗೊಂಡ ನಂತರ ನಿಖರವಾದ ಸಂಖ್ಯೆಯನ್ನು ಖಚಿತಪಡಿಸಿಕೊಳ್ಳಲಾಗುವುದು.

●.ಕರ್ನಾಟಕವನ್ನು ಹುಲಿ ಸಂತತಿಯಲ್ಲಿ ದೇಶದಲ್ಲಿ 1ನೇ ಸ್ಥಾನದಲ್ಲಿರುವ ರಾಜ್ಯವೆಂದು ಘೋಷಿಸಲಾಗಿದೆ.

●.ಭಾರತ ಸರ್ಕಾರದ ಪರಿಸರ ಮತ್ತು ಅರಣ್ಯ ಸಚಿವಾಲಯವು 2010ರಲ್ಲಿ ನಡೆಸಿದ ಹುಲಿ ಗಣತಿಯಂತೆ ಪ್ರಸ್ತುತ ಸುಮಾರು 300 ಹುಲಿಗಳ ಸಂತತಿ ಇದೆ.


●.ರಾಜ್ಯದಲ್ಲಿ ಅಪರ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು (ಹುಲಿ ಯೋಜನೆ), ಮೈಸೂರು, ಶಿವಮೊಗ್ಗ ಇವರು ಮುಖ್ಯಸ್ಥರಾಗಿರುವ 5 ಹುಲಿ ಮೀಸಲು ಅರಣ್ಯಗಳಿದ್ದು ಅವುಗಳೆಂದರೆ :

✧.ಬಂಡೀಪುರ ರಾಷ್ಟ್ರೀಯ ಉದ್ಯಾನವನ:•┈┈┈┈┈┈┈┈• (1973ರಲ್ಲಿ)

✧.ಭದ್ರಾ ವನ್ಯಜೀವಿ ಅಭಯಾರಣ್ಯ:•┈┈┈┈┈┈┈┈• (1998ರಲ್ಲಿ)

✧.ನಾಗರಹೊಳೆ ರಾಷ್ಟ್ರೀಯ ಉದ್ಯಾನವನ:•┈┈┈┈┈┈┈┈• (2000ದಲ್ಲಿ)

✧.ಆನ್ಶಿ ರಾಷ್ಟ್ರೀಯ ಉದ್ಯಾನವನ – ದಾಂಡೇಲಿ ವನ್ಯಜೀವಿ ಅಭಯಾರಣ್ಯ:•┈┈┈┈┈• (2006ರಲ್ಲಿ)

✧.ಬಿಆರ್ಟಿ ವನ್ಯಜೀವಿ ಅಭಯಾರಣ್ಯ: •┈┈┈┈┈┈┈┈• (2011ರಲ್ಲಿ)


●.ಈ ಕೆಳಕೆಂಡ ವರ್ಷಗಳಲ್ಲಿ ಕರ್ನಾಟಕದಲ್ಲಿ ಕೆಳಕಂಡ ರಕ್ಷಿತ ಪ್ರದೇಶಗಳನ್ನು ಹುಲಿ ಮೀಸಲು ಎಂದು ಗುರುತಿಸಲಾಗಿದೆ :
━━━━━━━━━━━━━━━━━━━━━━━━━━━━━━━━━━━━━━━━━━━━━


●.ಹುಲಿ ಮೀಸಲು ಹೆಸರು:•┈┈┈┈• ಬಂಡೀಪುರ

✧.ವಿಸ್ತೀರ್ಣ (ಚದರ ಕಿ.ಮೀ.ಗಳಲ್ಲಿ) :•┈┈┈┈• 872.24 ಚದರ ಕಿ.ಮೀ.

✧.ಸ್ಥಾಪನೆಯಾದ ವರ್ಷ :•┈┈┈┈•1973ರಲ್ಲಿ


●.ಹುಲಿ ಮೀಸಲು ಹೆಸರು:•┈┈┈┈• ಭದ್ರಾ

✧.ವಿಸ್ತೀರ್ಣ (ಚದರ ಕಿ.ಮೀ.ಗಳಲ್ಲಿ) :•┈┈┈┈• 500.16 ಚದರ ಕಿ.ಮೀ.

✧.ಸ್ಥಾಪನೆಯಾದ ವರ್ಷ: •┈┈┈┈• 1998ರಲ್ಲಿ


●.ಹುಲಿ ಮೀಸಲು ಹೆಸರು:•┈┈┈┈• ನಾಗರಹೊಳೆ

✧.ವಿಸ್ತೀರ್ಣ (ಚದರ ಕಿ.ಮೀ.ಗಳಲ್ಲಿ) :•┈┈┈┈• 643.39 ಚದರ ಕಿ.ಮೀ.

✧.ಸ್ಥಾಪನೆಯಾದ ವರ್ಷ: •┈┈┈┈• 2000ರಲ್ಲಿ  


●.ಹುಲಿ ಮೀಸಲು ಹೆಸರು :•┈┈┈┈• ದಾಂಡೇಲಿ-ಆನ್ಶಿ

✧.ವಿಸ್ತೀರ್ಣ (ಚದರ ಕಿ.ಮೀ.ಗಳಲ್ಲಿ) :•┈┈┈┈• 475.00 ಚದರ ಕಿ.ಮೀ.

✧.ಸ್ಥಾಪನೆಯಾದ ವರ್ಷ: •┈┈┈┈• 2006ರಲ್ಲಿ  


●.ಹುಲಿ ಮೀಸಲು ಹೆಸರು:•┈┈┈┈• ಬಿಆರ್ಟಿ

✧.ವಿಸ್ತೀರ್ಣ (ಚದರ ಕಿ.ಮೀ.ಗಳಲ್ಲಿ) :•┈┈┈┈• 539.52 ಚದರ ಕಿ.ಮೀ.

✧.ಸ್ಥಾಪನೆಯಾದ ವರ್ಷ: •┈┈┈┈• 2011ರಲ್ಲಿ

No comments:

Post a Comment