"ಮನುಷ್ಯ ದೀಪವಾದರೂ ಆಗಬೇಕು, ಕನ್ನಡಿಯಾದರೂ ಆಗಬೇಕು. ಒಂದು ಬೆಳಕನ್ನು ಕೊಡುತ್ತದೆ ಮತ್ತೊಂದು ಅದನ್ನು ಪ್ರತಿಬಿಂಬಿಸುತ್ತದೆ. ಪ್ರತಿಯೊಬ್ಬರೂ ದೀಪ ಆಗದೇ ಹೋಗಬಹುದು ಆದರೆ ಕನ್ನಡಿ ಆಗಬಲ್ಲರು. ತಿಳಿದಿರುವ ಜ್ಞಾನವನ್ನು ಮತ್ತೊಬ್ಬರಿಗೆ ಹಂಚುವುದೇ ಜೀವನ.."—ಅರಿಸ್ಟಾಟಲ್

Tuesday 14 July 2015

☀ಈ ದಿನದ ಪ್ರಚಲಿತ (KAS/IAS) ಪ್ರಶ್ನೆ:—   "ಕರ್ನಾಟಕ ಲೋಕಾಯುಕ್ತ ಇಲಾಖೆಯಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರ ಪ್ರಕರಣದ ಹಿನ್ನೆಲೆಯೇನು? ಈ ಹಿನ್ನೆಲೆಯಲ್ಲಿ ಲೋಕಾಯುಕ್ತರನ್ನು ಪದಚ್ಯುತಿಗೊಳಿಸುವಲ್ಲಿ ಇರುವ ಕಾನೂನು ಪ್ರಕ್ರಿಯೆಗಳೇನು? ಚರ್ಚಿಸಿ" (An recent allegation of corruption against the Karnataka's Lokayukta and the Law procedures of dismissing the Lokayukta) 

☀ಈ ದಿನದ ಪ್ರಚಲಿತ (KAS/IAS) ಪ್ರಶ್ನೆ:—

 "ಕರ್ನಾಟಕ ಲೋಕಾಯುಕ್ತ ಇಲಾಖೆಯಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರ ಪ್ರಕರಣದ ಹಿನ್ನೆಲೆಯೇನು? ಈ ಹಿನ್ನೆಲೆಯಲ್ಲಿ ಲೋಕಾಯುಕ್ತರನ್ನು ಪದಚ್ಯುತಿಗೊಳಿಸುವಲ್ಲಿ ಇರುವ ಕಾನೂನು ಪ್ರಕ್ರಿಯೆಗಳೇನು? ಚರ್ಚಿಸಿ".

(An recent allegation of corruption against the Karnataka's Lokayukta and the Law procedures of dismissing the Lokayukta)

━━━━━━━━━━━━━━━━━━━━━━━━━━━━━━━━━━━━━━━━━━━━━

★ ವಿವರಣಾತ್ಮಕ ಪ್ರಚಲಿತ ಸಾಮಾನ್ಯ ಅಧ್ಯಯನ.
(General Studies notes in Kannada Medium)

★ ಐಎಎಸ್ / ಕೆಎಎಸ್ ಪರೀಕ್ಷಾ ವಿಶೇಷಾಂಕ
(KAS/IAS Examination Special)



— ಸರ್ಕಾರಿ ನೌಕರರು ಮತ್ತು ಜನಪ್ರತಿನಿಧಿಗಳ ವಿರುದ್ಧ ಸಾರ್ವಜನಿಕರು ನೀಡುವ ದೂರುಗಳ ವಿಚಾರಣೆ ನಡೆಸುವ ಸಲುವಾಗಿ ಕೇಂದ್ರದಲ್ಲಿ ಲೋಕಪಾಲ ಮತ್ತು ರಾಜ್ಯಗಳಲ್ಲಿ ಲೋಕಾಯುಕ್ತ ಸಂಸ್ಥೆಗಳನ್ನು ನೇಮಿಸಲಾಗಿದೆ.

✧. ಅಪವಾದದ ಸರಣಿಗೆ ಕರ್ನಾಟಕ ಲೋಕಾಯುಕ್ತದ್ದು ತೀರಾ ಇತ್ತೀಚಿನ ಸೇರ್ಪಡೆ. ಆ ಬಗ್ಗೆ ಬೇರೆ ಹೆಚ್ಚೇನೂ ಹೇಳುವ ಅಗತ್ಯವಿಲ್ಲ. ಈಗ ಎದ್ದಿರುವ ವಿವಾದದ ಸಂದರ್ಭದಲ್ಲಿ ಸತ್ಯವೆಷ್ಟು ಮಿಥ್ಯವೆಷ್ಟು ಎಂಬುದು ತನಿಖೆಯಿಂದ ಮಾತ್ರ ಗೊತ್ತಾಗಬೇಕಿರುವ ವಿಚಾರ. ಆದರೆ ಒಂದಂತೂ ನಿಜ, ಲೋಕಾಯುಕ್ತದ ಘನತೆಗೆ ಇನ್ನೆಂದೂ ರಿಪೇರಿ ಮಾಡಲಾಗದಷ್ಟು ಹಾನಿಯಾಗಿದೆ.

✧. ಲೋಕಾಯುಕ್ತ ಮಾತ್ರವಲ್ಲ, ಸಾರ್ವಜನಿಕ ವ್ಯವಸ್ಥೆಯಲ್ಲಿರುವ ಎಲ್ಲರೂ ತಪ್ಪು ಮಾಡಿ ದಕ್ಕಿಸಿಕೊಳ್ಳುವುದು ಪಕ್ಕಕ್ಕಿರಲಿ, ಅಪವಾದ, ಅನುಮಾನಗಳಿಗೆ ಆಸ್ಪದವೇ ಇರದಂತೆ ನಡೆದುಕೊಳ್ಳುವುದು ಹೊಣೆಗಾರಿಕೆಯ ಲಕ್ಷಣ. ಆ ನಿಟ್ಟಿನಲ್ಲಿ ಸಂಕ್ಷಿಪ್ತವಾಗಿ ಅವಲೋಕಿಸೋಣ.


●.ಏನಿದು ಪ್ರಕರಣ?
━━━━━━━━━━━
✧.ಲೋಕಾಯುಕ್ತ ಇಲಾಖೆಯ ಅಧಿಕಾರಿಗಳೇ ಭ್ರಷ್ಟಾಚಾರದಲ್ಲಿ ಭಾಗಿಯಾಗಿದ್ದು, ಒಂದು ಕೋಟಿ ಲಂಚ ಪಡೆದಿದ್ದಾರೆ ಎಂಬ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ತನಿಖೆ ಮುಂದುವರಿಸಿದ್ದ ಬೆಂಗಳೂರು ಲೋಕಾಯುಕ್ತ ಎಸ್‌ಪಿ ಸೋನಿಯಾ ನಾರಂಗ್ಅವರು ಈ ಪ್ರಕರಣದ ತನಿಖೆ ನಡೆಸುತ್ತಿದ್ದರು. ಆದರೆ ಅವರ ತನಿಖೆಗೆ ರಾಜ್ಯದ ಮುಖ್ಯ ಲೋಕಾಯುಕ್ತ ನ್ಯಾ.ವೈ.ಭಾಸ್ಕರ್ ರಾವ್ ಅವರು ತಡೆ ನೀಡಿ ಪ್ರಕರಣವನ್ನು ತಮ್ಮ ಸ್ವಂತ ಅಧಿಕಾರ ಬಳಸಿ ಸಿಸಿಬಿಗೆ ವಹಿಸಿದ್ದರು.

✧.ಈ ಸಂಬಂಧ ಪ್ರತಿಕ್ರಿಯಿಸಿದ್ದ ರಾಜ್ಯದ ಉಪ ಲೋಕಾಯುಕ್ತ ಸುಭಾಷ್ ಬಿ. ಅಡಿ ಅವರು, ಭ್ರಷ್ಟಾಚಾರದ ಪ್ರಕರಣಗಳನ್ನು ತನಿಖೆ ನಡೆಸುವ ಅಧಿಕಾರ ಸಿಸಿಬಿಗೆ ಇದೆಯೇ ಎಂಬ ಬಗ್ಗೆ ನನಗೆ ತಿಳಿದಿಲ್ಲ. ಆದರೆ ಪ್ರಕರಣವನ್ನು ಸಿಸಿಬಿಗೆ ವರ್ಗಾಯಿಸುತ್ತಿರುವಾಗಿ ಮುಖ್ಯ ಲೋಕಾಯುಕ್ತರು ತಮ್ಮ ಬಳಿ ಸಲಹೆ ಪಡೆದಿಲ್ಲ ಎಂದು ಆರೋಪಿಸಿದ್ದರು. ಇದು ಲೋಕಾಯುಕ್ತ ಇಲಾಖೆ ಹಾಗೂ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿತ್ತು.

✧.ಈ ಹಿನ್ನೆಲೆಯಲ್ಲಿ ಸ್ವಯಂ ನಿರ್ಧಾರ ಕೈಗೊಂಡಿದ್ದ ರಾಜ್ಯ ಸರ್ಕಾರ, ಪ್ರಸ್ತುತ ವಿಶೇಷ ತನಿಖಾ ತಂಡ ರಚಿಸಿತನಿಖೆ ನಡೆಸುತ್ತಿದೆ. ಈ ಹಿನ್ನೆಲೆಯಲ್ಲಿ ಪ್ರತಿಪಕ್ಷಗಳು ಪದಚ್ಯುತಿಗೆ ಆಗ್ರಹಿಸಿವೆ.

✧.ಇನ್ನು ಪ್ರಕರಣದಲ್ಲಿ ಲೋಕಾಯುಕ್ತ ಇಲಾಖೆಯ ಜಂಟಿ ಆಯುಕ್ತ ರಿಯಾಜ್, ಲೋಕಾಯುಕ್ತ ನ್ಯಾ.ವೈ.ಭಾಸ್ಕರ್ ರಾವ್ ಅವರ ಪುತ್ರ ಅಶ್ವಿನ್ ರಾವ್ ಹಾಗೂ ಅವರ ಸಂಬಂಧಿ ಆಂಧ್ರ ಮೂಲದ ಕೃಷ್ಣ ರಾವ್ ಅಲಿಯಾಸ್ ನರಸಿಂಹ ರಾವ್ ಅವರು ಭಾಗಿಯಾಗಿದ್ದಾರೆ ಎಂಬ ಆರೋಪ ಕೇಳಿ ಬರುತ್ತಿದೆ.


●.ಕಾನೂನು ಪ್ರಕ್ರಿಯೆಗಳೇನು?
━━━━━━━━━━━━━━━━
— ಕಾನೂನು ತಜ್ಞರು ನೀಡಿರುವ ಮಾಹಿತಿಯಂತೆ ಕಾನೂನಿನಲ್ಲಿ ಲೋಕಾಯುಕ್ತ ಅಥವ ಉಪ ಲೋಕಾಯುಕ್ತರನ್ನು ಪದಚ್ಯುತಿಗೊಳಿಸಲು ಅವಕಾಶವಿದೆ.

— ಲೋಕಾಯುಕ್ತರನ್ನು ಪದಚ್ಯುತಿಗೊಳಿಸುವ ಪ್ರಕ್ರಿಯೆ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳನ್ನು ಪದಚ್ಯುತಿಗೊಳಿಸುವ ಪ್ರಕ್ರಿಯೆಯಂತೆಯೇ ಇರುತ್ತದೆ ಎಂದು ಕರ್ನಾಟಕ ಲೋಕಾಯುಕ್ತ ಕಾಯ್ದೆಯಲ್ಲಿ ಹೇಳಲಾಗಿದೆ.

✧.ನ್ಯಾಯಮೂರ್ತಿಗಳ (ವಿಚಾರಣೆ) ಕಾಯ್ದೆ 1968ರ ಪ್ರಕಾರ, ನ್ಯಾಯಮೂರ್ತಿಗಳನ್ನು ಪದಚ್ಯುತಿಗೊಳಿಸುವ ನಿರ್ಣಯವನ್ನು ಲೋಕಸಭೆಯಲ್ಲಿ ಮಂಡಿಸುವುದಾದರೆ 100 ಸಂಸದರ ಸಹಿ ಬೇಕು.

✧.ರಾಜ್ಯಸಭೆಯಲ್ಲಿ ಮಂಡಿಸಲು ಕನಿಷ್ಠ  50 ಸದಸ್ಯರ ಸಹಿ ಬೇಕು.ಆದರೆ ಲೋಕಾಯುಕ್ತರ ಪದಚ್ಯುತಿ ನಿರ್ಣಯವನ್ನು ವಿಧಾನಸಭೆ ಅಥವಾ ವಿಧಾನ ಪರಿಷತ್ತಿನಲ್ಲಿ ಮಂಡಿಸಲು ಎಷ್ಟು ಸದಸ್ಯರ ಸಹಿ ಬೇಕು ಎಂಬ ಬಗ್ಗೆ ಸ್ಪಷ್ಟತೆ ಇಲ್ಲ.

✧.ಕರ್ನಾಟಕದ ಲೋಕಾಯುಕ್ತರನ್ನು ಪದಚ್ಯುತಿಗೊಳಿಸುವ ನಿರ್ಣವನ್ನು ಮಂಡಿಸಬೇಕಾದರೆ 50ಶಾಸಕರು ಅಥವ 33 ವಿಧಾನಪರಿಷತ್ ಸದಸ್ಯರ ಸಹಿ ಇರುವ ಪತ್ರ ಬೇಕು. ಈ ನಿರ್ಣಯ ಒಪ್ಪುವ ಅಥವಾ ತಿರಸ್ಕರಿಸುವ ಅಧಿಕಾರ ಸ್ಪೀಕರ್ ಮತ್ತು ಸಭಾಪತಿ ಅವರಿಗೆ ಇದೆ.


●.ಯಾವ ಕಾಯ್ದೆ ಅನ್ವಯ ಪದಚ್ಯುತಿ?
━━━━━━━━━━━━━━━━━━━
— ಕರ್ನಾಟಕ ಲೋಕಾಯುಕ್ತ ಕಾಯ್ದೆ 1984ರ ಸೆಕ್ಷನ್ 6ಪ್ರಕಾರ ಲೋಕಾಯುಕ್ತರನ್ನು ದುರ್ವರ್ತನೆ ಮತ್ತು ಅಸಮರ್ಥತೆ ಆಧಾರದ ಮೇಲೆ ಪದಚ್ಯುತಗೊಳಿಸಲು ಅವಕಾಶವಿದೆ. ಸದ್ಯ, ಪ್ರತಿಪಕ್ಷಗಳು ಇದರ ಮೂಲಕವೇ ಲೋಕಾಯುಕ್ತರ ರಾಜೀನಾಮೆಗೆ ಆಗ್ರಹಿಸುತ್ತಿವೆ.

✧.ಶಾಸಕರ ಮನವಿ ಪತ್ರ ಪಡೆದ ಬಳಿಕ ಸ್ಪೀಕರ್ ಸುಪ್ರೀಂಕೋರ್ಟ್‌ ಮತ್ತು ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿಗಳಿರುವ ಮೂವರು ಸದಸ್ಯರ ಸಮಿತಿ ರಚನೆ ಮಾಡುತ್ತಾರೆ. ಲೋಕಾಯುಕ್ತರ ಮೇಲಿನ ಆರೋಪಗಳ ಬಗ್ಗೆ ಈ ಸಮಿತಿ ತನಿಖೆ ನಡೆಸಿ ವರದಿ ನೀಡುತ್ತದೆ. ಇದಕ್ಕೆ ಸಾಕಷ್ಟು ಕಾಲಾವಕಾಶವೂ ಬೇಕಾಗುತ್ತದೆ.

✧.ಸಮಿತಿಯು ಆರೋಪಗಳು ಸುಳ್ಳು ಎಂದು ವರದಿ ಕೊಟ್ಟರೆ ಪ್ರಕರಣ ಅಂತ್ಯಗೊಳ್ಳುತ್ತದೆ. ಆರೋಪಗಳು ಸಾಬೀತಾದರೆ ವಿಧಾನಸಭೆ ಮತ್ತು ವಿಧಾನಪರಿಷತ್‌ನಲ್ಲಿ ಈ ವಿಷಯದ ಬಗ್ಗೆ ಮತದಾನಕ್ಕೆ ಅವಕಾಶ ಕಲ್ಪಿಸಲಾಗುತ್ತದೆ.

✧.ಮತದಾನದ ನಂತರ ಈ ಕುರಿತ ವರದಿಯನ್ನು ರಾಜ್ಯಪಾಲರಿಗೆ ಸಲ್ಲಿಸಲಾಗುತ್ತದೆ. ರಾಜ್ಯಪಾಲರು ಪದಚ್ಯುತಿಯ ಅಂತಿಮ ನಿರ್ಧಾರವನ್ನು ಕೈಗೊಳ್ಳಲಿದ್ದಾರೆ.


●.ಲೋಕಾಯುಕ್ತರ ಪದಚ್ಯುತಿ ಪ್ರಕ್ರಿಯೆ ಹೇಗೆ?
━━━━━━━━━━━━━━━━━━━━━━
✧.ಲೋಕಾಯುಕ್ತ ಕಾಯ್ದೆ 1985ರ ಸೆಕ್ಷನ್ 6, ಲೋಕಾಯುಕ್ತ ಮತ್ತು ಉಪ ಲೋಕಾಯುಕ್ತರ ಪದಚ್ಯುತಿ ಪ್ರಕ್ರಿಯೆ ಬಗ್ಗೆ ವಿವರಣೆ ನೀಡಿದೆ. ನ್ಯಾಯಮೂರ್ತಿಗಳ (ವಿಚಾರಣಾ) ಕಾಯ್ದೆ 1968ರ ಪ್ರಕಾರವೇ ಅವರನ್ನು ಹುದ್ದೆಯಿಂದ ತೆಗೆಯಬಹುದು.

✧.ಲೋಕಾಯುಕ್ತ ಅಥವಾ ಉಪ ಲೋಕಾಯುಕ್ತರ ವಿರುದ್ಧದ ಆರೋಪಗಳು ಸಾಬೀತಾದ ನಂತರ ರಾಜ್ಯಪಾಲರು ತಮ್ಮ ವಿಶೇಷ ಆದೇಶದ ಮೂಲಕ ವಿಧಾನಮಂಡಲದ ಉಭಯ ಸದನಗಳ ನಿರ್ಣಯವನ್ನು ಗಣನೆಗೆ ತೆಗೆದುಕೊಂಡು ಅವರನ್ನು ಪದಚ್ಯುತಗೊಳಿಸಬಹುದು.

✧.ಇಂತಹ ನಿರ್ಣಯಕ್ಕೆ ವಿಧಾನಮಂಡಲದ ಉಭಯ ಸದನಗಳಲ್ಲಿ ಮೂರನೇ ಎರಡರಷ್ಟು ಸದಸ್ಯರ ಬೆಂಬಲ ಇರಬೇಕು.

✧.ಲೋಕಾಯುಕ್ತರನ್ನು ಪದಚ್ಯುತಗೊಳಿಸುವ ನಿರ್ಣಯವನ್ನು ವಿಧಾನಸಭೆಯಲ್ಲಿ ಮಂಡಿಸಿದಾಗ, ಸಭಾಧ್ಯಕ್ಷರು ಅದರ ಬಗ್ಗೆ ತಮಗೆ ಸೂಕ್ತವೆನಿಸಿದ ವ್ಯಕ್ತಿಗಳ ಜೊತೆ ಸಮಾಲೋಚನೆ ನಡೆಸಬಹುದು. ತಮಗೆ ಸೂಕ್ತ ಎಂದು ಕಂಡುಬಂದ ದಾಖಲೆಗಳನ್ನು ಪರಿಶೀಲಿಸಬಹುದು. ನಂತರ, ಪದಚ್ಯುತಿ ನಿರ್ಣಯವನ್ನು ಒಪ್ಪಲು ನಿರಾಕರಿಸಬಹುದು ಅಥವಾ ನಿರ್ಣಯ ಒಪ್ಪಬಹುದು.

✧.ಪದಚ್ಯುತಿ ನಿರ್ಣಯವನ್ನು ಒಪ್ಪಿಕೊಂಡರೆ ಸಭಾಧ್ಯಕ್ಷರು ಆ ನಿರ್ಣಯವನ್ನು ತಮ್ಮ ಬಳಿ ಇರಿಸಿಕೊಂಡು, ಲೋಕಾಯುಕ್ತರ ವಿರುದ್ಧ ಇರುವ ಆರೋಪಗಳ ಬಗ್ಗೆ ಪರಿಶೀಲನೆಗೆ ಒಂದು ಸಮಿತಿ ರಚಿಸಬೇಕು. ಈ ಸಮಿತಿಯಲ್ಲಿ ಇಬ್ಬರು ನ್ಯಾಯಮೂರ್ತಿಗಳು, ಒಬ್ಬರು ನ್ಯಾಯವಿಜ್ಞಾನ ತಜ್ಞರಿರಬೇಕು.

✧.ಸಮಿತಿಯು ಲೋಕಾಯುಕ್ತರ ವಿರುದ್ಧ ಇರುವ ನಿರ್ದಿಷ್ಟ ಆರೋಪಗಳ ಪಟ್ಟಿ ಸಿದ್ಧಪಡಿಸಿ, ಲೋಕಾಯುಕ್ತರಿಗೆ ನೀಡಬೇಕು. ತನ್ನ ವಿರುದ್ಧ ಇರುವ ಆರೋಪಗಳ ಬಗ್ಗೆ ಲಿಖಿತ ಪ್ರತಿಕ್ರಿಯೆ ಸಲ್ಲಿಸಲು ಲೋಕಾಯುಕ್ತರಿಗೂ ಕಾಲಾವಕಾಶ ನೀಡಬೇಕು.

✧.ಲೋಕಾಯುಕ್ತರು ತಪ್ಪೆಸಗಿರುವುದು ನಿಜ ಎಂಬ ವರದಿಯನ್ನು ಸಮಿತಿಯು ಸಭಾಧ್ಯಕ್ಷರಿಗೆ ನೀಡಿದರೆ, ಅದನ್ನು ಸಭಾಧ್ಯಕ್ಷರು ಮತಕ್ಕೆ ಹಾಕುತ್ತಾರೆ. ಮತದಾನ ನಡೆಯುವ ವೇಳೆ ಸದನದಲ್ಲಿ ಹಾಜರಿರುವ ಸದಸ್ಯರಲ್ಲಿ ಮೂರನೆಯ ಎರಡರಷ್ಟು ಜನ, ಪದಚ್ಯುತಿ ಪರವಾಗಿ ಮತ ಚಲಾಯಿಸಿದರೆ ಆ ನಿರ್ಣಯವನ್ನು ಸಭಾಧ್ಯಕ್ಷರು ರಾಜ್ಯಪಾಲರಿಗೆ ತಿಳಿಸುತ್ತಾರೆ. ರಾಜ್ಯಪಾಲರುಇದನ್ನು ಆಧರಿಸಿ, ಲೋಕಾಯುಕ್ತರ ಪದಚ್ಯುತಿ ಆದೇಶ ಹೊರಡಿಸುತ್ತಾರೆ.


●.ಲೋಕಾಯುಕ್ತರನ್ನು ಪದಚ್ಯುತಗೊಳಿಸಲು ಎಷ್ಟು ಶಾಸಕರ ಸಹಿ ಬೇಕು?

— ಕರ್ನಾಟಕ ಲೋಕಾಯುಕ್ತ ಕಾಯ್ದೆ 1984ರ ಪ್ರಕಾರ ಲೋಕಾಯುಕ್ತರನ್ನು ದುರ್ವರ್ತನೆ ಮತ್ತು ಅಸಮರ್ಥತೆ ಆಧಾರದ ಮೇಲೆ ಪದಚ್ಯುತಗೊಳಿಸಲು ಪ್ರತಿಪಕ್ಷಗಳು ಮುಂದಾಗಿವೆ. ಇದಕ್ಕಾಗಿ ನಿರ್ಣಯ ಮಂಡಿಸಲು ಅವಕಾಶ ನೀಡುವಂತೆ ಸಭಾಪತಿಗಳಿಗೆ ಶಾಸಕರ ಸಹಿ ಇರುವ ಮನವಿ ಪತ್ರ ಸಲ್ಲಿಸಲಾಗುತ್ತದೆ.

✧.ಪದಚ್ಯುತಿ ನಿರ್ಣಯವನ್ನು ಮಂಡಿಸಲು ಸ್ಪೀಕರ್ ಅವಕಾಶ ನೀಡಿದರೆ, ಪ್ರತಿಪಕ್ಷ ನಾಯಕರು ನಿರ್ಣಯವನ್ನು ಮಂಡಿಸಬಹುದಾಗಿದೆ.

✧.ವಿಧಾನಸಭೆ ಅಥವಾ ವಿಧಾನ ಪರಿಷತ್ತಿನ ಒಟ್ಟು ಸದಸ್ಯ ಬಲದ ಶೇ. 20ರಷ್ಟು ಸದಸ್ಯರಸಹಿ ಇರುವ ಪತ್ರವನ್ನು ಸ್ಪೀಕರ್‌ಗೆ ಸಲ್ಲಿಸಬೇಕಾಗುತ್ತದೆ.

1 comment:

  1. Great work. Helpful for the Aspirants.

    It would be more helpful if an option to save the article as PDF or print option is provided

    ReplyDelete