☀ಈ ದಿನದ ಪ್ರಚಲಿತ (KAS/IAS) ಪ್ರಶ್ನೆ:—
☀ಪ್ರಮುಖವಾಗಿ ದೇಶದ ರೈಲ್ವೆ ಸಾರಿಗೆ ಮತ್ತು ವಿಮಾನ ಯಾನ ಗಮನದಲ್ಲಿಟ್ಟುಕೊಂಡು ಅಭಿವೃದ್ಧಿಪಡಿಸಿರುವ ನ್ಯಾವಿಗೇಶನ್ ಅನುಕೂಲವನ್ನು ಒದಗಿಸುವ ‘ಗಗನ್’ ದಿಕ್ಸೂಚಿ ವ್ಯವಸ್ಥೆ'ಯು ಪಥದರ್ಶಕ ಕ್ಷೇತ್ರದಲ್ಲಿ ಹೊಸ ಕ್ರಾಂತಿಕಾರಕ ಹೆಜ್ಜೆಯಾಗಿದೆ. ವಿಶ್ಲೇಷಿಸಿ.
(The 'GPS and geo-augmented navigation system (GAGAN))
━━━━━━━━━━━━━━━━━━━━━━━━━━━━━━━━━━━━━━━━━━━━━
★ ವಿಜ್ಞಾನ ಹಾಗೂ ತಂತ್ರಜ್ಞಾನ
(Science and Technology)
★ ಭಾರತೀಯ ನ್ಯಾವಿಗೇಶನ್ ವ್ಯವಸ್ಥೆ :
(Indian Navigation System)
— ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೊ ಅಭಿವೃದ್ಧಿಪಡಿಸಿರುವ ಗಗನ್ ಸ್ವದೇಶಿ ತಂತ್ರಜ್ಞಾನದ ನ್ಯಾವಿಗೇಶನಲ್ ವ್ಯವಸ್ಥೆಯಾಗಿದ್ದು, ಜಿಪಿಎಸ್ ತಂತ್ರಜ್ಞಾನ ಆಧಾರಿತ ಗಗನ್ ನ್ಯಾವಿಗೇಶನ್ ವ್ಯವಸ್ಥೆ ಇದಾಗಿದೆ. ಪ್ರಮುಖವಾಗಿ ದೇಶದ ರೈಲ್ವೆ ಇಲಾಖೆ ಮತ್ತು ವಿಮಾನ ಯಾನ ಗಮನದಲ್ಲಿಟ್ಟುಕೊಂಡು ನ್ಯಾವಿಗೇಶನ್ ಅನುಕೂಲವನ್ನು ಒದಗಿಸಿಕೊಡಲಿದೆ.
☀ಮುಖ್ಯಾಂಶಗಳು :
━━━━━━━━━━━━━
●.ಇಸ್ರೊ ಮತ್ತು ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರ (ಎಎಐ) ಜಂಟಿಯಾಗಿ ಅಭಿವೃದ್ಧಿಪಡಿಸಿರುವ ವಿಮಾನದ ದಿಕ್ಸೂಚಿ ಅಥವಾ ಜಿಪಿಎಸ್ ವ್ಯವಸ್ಥೆಗೆ 'ಗಗನ್' (ಜಿಪಿಎಸ್ ಏಡೆಡ್ ಜಿಯೊ ಆಗ್ಮೆಂಟೆಡ್ ನ್ಯಾವಿಗೇಷನ್-ಜಿಎಜಿಎಎನ್) ಎಂದು ಹೆಸರಿಡಲಾಗಿದೆ.
●.ಸುಮಾರು 15 ವರ್ಷಗಳ ಅವಿರತ ಶ್ರಮದಿಂದ ಗಗನ್ ವ್ಯವಸ್ಥೆ ಭಾರತಕ್ಕೆ ಒಲಿದಿದ್ದು, ಇದಕ್ಕಾಗಿ ಸುಮಾರು 774 ಕೋಟಿ ರೂ. ವೆಚ್ಚ ಮಾಡಲಾಗಿದೆ.
●.ಸೇನೆ, ರಸ್ತೆ ಸಂಚಾರ, ಕೃಷಿ, ಪ್ರಕೃತಿ ವಿಕೋಪದಂಥ ಸಂದರ್ಭದಲ್ಲಿ ಗಗನ್ ನೆರವಿಗೆ ಬರಲಿದೆ.
●.ಈ ಮೂಲಕ 'ವಿಮಾನದ ಉಪಗ್ರಹ ಆಧಾರಿತ ಜಿಪಿಎಸ್ ವ್ಯವಸ್ಥೆ' ಹೊಂದಿರುವ ರಾಷ್ಟಗಳಾದ ಅಮೆರಿಕ, ಐರೋಪ್ಯ ಒಕ್ಕೂಟ ಮತ್ತು ಜಪಾನ್‌ನ ಗಣ್ಯ ರಾಷ್ಟ್ರಗಳ ಸಾಲಿಗೆ ಭಾರತ ಸೇರಿದೆ.
●.ವಿಶ್ವಕ್ಕೆ ಗಗನ ವಿಸ್ಮಯ ಗಗನ್ ವ್ಯವಸ್ಥೆಯು ಬಂಗಾಳ ಕೊಲ್ಲಿ, ಆಗ್ನೇಯ ಏಷ್ಯಾ, ಹಿಂದೂ ಮಹಾಸಾಗರ, ಮಧ್ಯಪ್ರಾಚ್ಯ ಮತ್ತು ಆಫ್ರಿಕಾದ ಪ್ರಾಂತ್ಯಗಳಲ್ಲಿ ಕೆಲಸ ಮಾಡಲಿದೆ. ಹೀಗಾಗಿ ದಕ್ಷಿಣ ಕೊರಿಯಾ, ಜಪಾನ್ ಮತ್ತು ಆಸಿಯಾನ್ ರಾಷ್ಟ್ರಗಳು ಗಗನ್ ವ್ಯವಸ್ಥೆಯತ್ತ ಕಣ್ಣರಳಿಸಿ ನೋಡುತ್ತಿವೆ.
●.ಗಗನ್ ವ್ಯವಸ್ಥೆಯು ಭಾರತ, ಬಂಗಾಳ ಕೊಲ್ಲಿ, ಆಗ್ನೇಯ ಏಷ್ಯಾ ಭಾಗ, ಮಧ್ಯ ಪ್ರಾಚ್ಯ ಪ್ರದೇಶ ಮತ್ತು ಆಫ್ರಿಕಾದ ಸ್ವಲ್ಪ ಭಾಗಗಳನ್ನು ಒಳಗೊಳ್ಳಲಿದೆ.
☀ವಿಮಾನ ಯಾನಕ್ಕಾಗುವ ಪ್ರಯೋಜನಗಳು :
━━━━━━━━━━━━━━━━━━━━━━━━━
●.ದೇಶದ 50 ವಿಮಾನ ನಿಲ್ದಾಣಗಳು ಹೊಸ ವ್ಯವಸ್ಥೆಯ ಲಾಭ ಪಡೆಯಲಿದ್ದು, ಸುಗಮ ವಿಮಾನ ಸಂಚಾರ, ಸುರಕ್ಷತೆ, ಇಂಧನ ಕ್ಷಮತೆ, ದರ ಕಡಿತಕ್ಕೆ ಈ ವ್ಯವಸ್ಥೆ ನೆರವಾಗಲಿದೆ.
●.ಪೈಲಟ್ ಸೇರಿದಂತೆ ವಿಮಾನದ ಸಿಬ್ಬಂದಿ ಹಾಗೂ ವಾಯು ಸಂಚಾರ ನಿಯಂತ್ರಣ ಕೇಂದ್ರದ ಸಿಬ್ಬಂದಿಯ ಕಾರ್ಯಭಾರ ಮತ್ತು ಒತ್ತಡವನ್ನು ಅರ್ಧದಷ್ಟು ಕಡಿಮೆ ಮಾಡಲಿದೆ.
●.ದೇಶೀಯ ಪಥನಿರ್ದೇಶಕ ವ್ಯವಸ್ಥೆಗಾಗಿ ಇಸ್ರೊ ಭೂ ಕಕ್ಷೆಗೆ ಸೇರಿಸಿರುವ ಮೂರು ಜಿಪಿಎಸ್ ಉಪಗ್ರಹಗಳು, ಭೂಮಿಯ ಮೇಲಿನ ಸಂದೇಶವಾಹಕ ನಿಲ್ದಾಣಗಳು ನೀಡುವ ಮಾಹಿತಿ ಆಧರಿಸಿ ಗಗನ್ ವ್ಯವಸ್ಥೆ ವಿಮಾನಗಳಿಗೆ ಮಾರ್ಗದರ್ಶನ ಮಾಡಲಿದೆ.
●.ಐರೋಪ್ಯ ಒಕ್ಕೂಟ ಮತ್ತು ಜಪಾನ್ ಹೊಂದಿರುವ ವಿಮಾನದಿಕ್ಸೂಚಿ ವ್ಯವಸ್ಥೆಯ ವ್ಯಾಪ್ತಿ ಮೀರಿದ ಪ್ರದೇಶಗಳಲ್ಲಿ ಗಗನ್ ಕೆಲಸ ಮಾಡಲಿದ್ದು, ಈ ಎರಡು ವ್ಯವಸ್ಥೆಗಳ ಕಂದರವನ್ನು ತುಂಬಲಿದೆ.
●.ದೇಶಕ್ಕೆ ವರವಾದ ವ್ಯವಸ್ಥೆ ಗಗನ್ ವ್ಯವಸ್ಥೆ ವಿಮಾನಗಳಿಗೆ ನಿಖರ ಮಾರ್ಗದರ್ಶನ ಮಾಡುವುದರಿಂದ ಅನಗತ್ಯ ದಾರಿ ಕ್ರಮಿಸುವುದು ತಪ್ಪಲಿದೆ.
●.ಗುಂಡು ಹೊಡೆದಂತೆ ನಿಶ್ಚಿತ ದಾರಿಯಲ್ಲಿ ಹಾರಾಟ ನಡೆಸಿ ಗುರಿ ಮುಟ್ಟಲಿವೆ.ಇದರಿಂದ ಪ್ರಯಾಣದ ಅವಧಿ ಕಡಿಮೆಯಾಗುವುದಷ್ಟೇ ಅಲ್ಲದೆ, ಇಂಧನ ವೆಚ್ಚವೂ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗಲಿದೆ.
☀ನಿಖರ ದಿಕ್ಸೂಚಿ ಹೇಗೆ?
━━━━━━━━━━━━━━━
●.ಈಗಲೂ ಎಲ್ಲ ವಿಮಾನಗಳು ಜಿಪಿಎಸ್ ಉಪಗ್ರಹಗಳಿಂದ ಮಾಹಿತಿ ಪಡೆದೇ ಹಾರಾಟ ನಡೆಸುತ್ತವೆ. ಭಾರತವೂ ಸೇರಿ ಸಾರ್ಕ್ ದೇಶಗಳ ಆಕಾಶದಲ್ಲಿ ಮೂರು ಜಿಪಿಎಸ್ ಉಪಗ್ರಹಗಳು ಪ್ರತಿ ವಿಮಾನದ ಜಾಡು ಹಿಡಿಯುತ್ತವೆ. ಆದರೆ, ಜಿಪಿಎಸ್ ಉಪಗ್ರಹಗಳು ನೀಡುವ ವಿಮಾನಗಳ ಹಾರಾಟ ಬಿಂದು 50 ಮೀಟರ್ ಆಚೀಚೆ ಇರುತ್ತದೆ. ಈ ಅಂತರವನ್ನು ಗಗನ್ ವ್ಯವಸ್ಥೆ ಬರೀ 3.5 ಮೀಟರ್‌ಗೆ ಇಳಿಸುತ್ತದೆ. ಹೀಗಾಗಿ ಪೈಲಟ್‌ಗಳಿಗೆ ನಿಖರವಾಗಿ ಏರ್ ಕಂಟ್ರೋಲರ್‌ಗಳು ಮಾರ್ಗದರ್ಶನ ಮಾಡಲು ಅನುವಾಗಲಿದೆ.
☀ಅಳವಡಿಕೆ ಕಡ್ಡಾಯವೇ?
━━━━━━━━━━━━━━━━
●.ಉಪಗ್ರಹ ಆಧಾರಿತ ದಿಕ್ಸೂಚಿ ವ್ಯವಸ್ಥೆ (ಎಸ್‌ಬಿಎಎಸ್) ಅಳವಡಿಸಿರುವ ವಿಮಾನಗಳಲ್ಲಿ ಮಾತ್ರ ಗಗನ್ ಕೆಲಸ ಮಾಡಲಿದೆ. ಈಗ ಇರುವ ವಿಮಾನಗಳಲ್ಲಿ ಎಸ್‌ಬಿಎಎಸ್ ಸಾಧನಾ ಅಳವಡಿಕೆಯಾಗಿಲ್ಲ. ಇವು ದುಬಾರಿಯಾಗಿರುವುದರಿಂದ ಹಾಗೂ ಈಗಾಗಲೇ ಭಾರತೀಯ ವಿಮಾನಯಾನ ಕ್ಷೇತ್ರ ಹಣದ ಮುಗ್ಗಟ್ಟಿನಿಂದ ನರಳುತ್ತಿರುವುದರಿಂದ ಎಸ್‌ಬಿಎಎಸ್ ಉಪಕರಣ ಅಳವಡಿಕೆ ಕಷ್ಟ ಸಾಧ್ಯ. ಹೀಗಾಗಿಯೇ, ಗಗನ್ ತಂತ್ರಜ್ಞಾನ ಬಳಸಿಕೊಳ್ಳುವುದನ್ನು ಎಲ್ಲ ವಿಮಾನ ಸಂಸ್ಥೆಗಳಿಗೆ ಕಡ್ಡಾಯ ಮಾಡುವುದಿಲ್ಲ; ಆದರೆ, ಹೊಸದಾಗಿ ಖರೀದಿಯಾಗುವ ವಿಮಾನಗಳಿಗೆ ಕಡ್ಡಾಯವಾಗಿ ಈ ಸಾಧನಾ ಅಳವಡಿಕೆಯಾಗಿರುವುದನ್ನು ಖಚಿತಪಡಿಸಿಕೊಳ್ಳಲು ಸಚಿವಾಲಯ ನಿರ್ಧರಿಸಿದೆ.
☀ರೈಲ್ವೆಗಾಗುವ ಪ್ರಯೋಜನಗಳು :
━━━━━━━━━━━━━━━━━━━━
— ರೈಲ್ವೆಗೆ ಗಗನ್‌ನಿಂದ ಹಲವಾರು ಪ್ರಯೋಜನಗಳು ಇವೆ.
●.ಉಪಗ್ರಹಗಳಿಂದ ದೊರೆಯುವ ಮಾಹಿತಿಯನ್ನು ಇಸ್ರೊ ತನ್ನ ಬಾಹ್ಯಾಕಾಶ ತಂತ್ರಜ್ಞಾನ ಸಾಧನಗಳ ನೆರವಿನಿಂದ ರೈಲ್ವೆಗೆ ನೀಡಲಿದೆ.
●.ಕಾವಲು ರಹಿತ ಲೆವೆಲ್ ಕ್ರಾಸಿಂಗ್ ಇರುವ ಸ್ಥಳಗಳ ಬಗ್ಗೆ ಮುಂಚಿತವಾಗಿ ರೈಲಿಗೆ ಗಗನ್ ಮಾಹಿತಿ ಕೊಡಬಲ್ಲುದು.
●.ಇಂತಹ ಕ್ರಾಸಿಂಗ್‌ನಲ್ಲಿ ಎಚ್ಚರಿಕೆಯ ಸಿಗ್ನಲ್ ತೋರಿಸುತ್ತದೆ. ಕೂಡಲೇ ರೈಲ್ವೆಯ ಹಾರ್ನ್ ಮೊಳಗುತ್ತದೆ. ಇದರಿಂದ ಸಂಭವನೀಯ ಅವಘಡಗಳನ್ನು ತಪ್ಪಿಸಬಹುದು.
●.ಕೆಲವು ಪ್ರದೇಶಗಳಲ್ಲಿ ರೈಲ್ವೆ ಹಳಿಗಳಲ್ಲಿ ನೀರು ತುಂಬಿಕೊಳ್ಳುತ್ತದೆ. ಅಂತಹ ಸಂದರ್ಭದಲ್ಲಿ ಗಗನ್ ಮೂಲಕ ಅಂತಹ ಹಳಿಗಳ ಬಗ್ಗೆ ಮಾಹಿತಿ ಪಡೆಯಬಹುದು.
●.ಸುರಂಗ ಮಾರ್ಗಗಳಲ್ಲಿ ಹೋಗುವಾಗ ಹೆಚ್ಚು ಸದೃಢವಾಗಿರುವ ಹಳಿಗಳನ್ನು ಗುರುತಿಸಬಹುದು.

No comments:
Post a Comment