☀ಅಧ್ಯಾಯ : 1.2.2 ) ಕರ್ನಾಟಕ ರಾಜ್ಯದ ಆರ್ಥಿಕ ಆಭಿವೃದ್ದಿ ಮತ್ತು ರಾಜ್ಯದ ಹಣಕಾಸು ಸ್ಥಿತಿ:(ಸಂಕ್ಷಿಪ್ತ ಅವಲೋಕನ)
(Karnataka State Economic Development And The financial condition)
━━━━━━━━━━━━━━━━━━━━━━━━━━━━━━━━━━━━━━━━━━━━━
✧.ಕರ್ನಾಟಕ ರಾಜ್ಯದ ಆರ್ಥಿಕತೆ.
(Karnataka state economy)
✧.ಐಎಎಸ್ / ಕೆಎಎಸ್ ಪರೀಕ್ಷೆಗಳಿಗಾಗಿ ಸಾಮಾನ್ಯ ಅಧ್ಯಯನ.
(GENERAL STUDIES FOR IAS/KAS)
☀ Ⅰ. ಆರ್ಥಿಕ ಆಭಿವೃದ್ದಿ ಮತ್ತು ರಾಜ್ಯದ ಹಣಕಾಸು ಸ್ಥಿತಿ :
━━━━━━━━━━━━━━━━━━━━━━━━━━━━━━━
✧.ರಾಜ್ಯದ ಆದಾಯ ಸಂಪನ್ಮೂಲಗಳು 2011-12 ನೇ ಸಾಲಿನಲ್ಲಿ ಇದ್ದ ಶೇ.16.07 ರಿಂದ ಚೇತರಿಕೆ ಚಿಹ್ನೆಗಳನ್ನು ತೋರಿಸುತ್ತಿದ್ದು 2014-15 ರಲ್ಲಿ ಶೇ . 1 6 . 2 1 ರಷ್ಟು ( ಆಯವ್ಯಯ ಅಂದಾಜು)ಏರಿಕೆಯನ್ನು ನಿರೀಕ್ಷಿಸಲಾಗಿದೆ.
✧.ರಾಜ್ಯದ ಸ್ವಂತ ತೆರಿಗೆ ರಾಜಸ್ವಗಳು 2008- 09ರಲ್ಲಿದ್ದ ರೂ.27646 ಕೋಟಿಗಳಿಂದ ಸಂಯುಕ್ತ ವಾರ್ಷಿಕ ಬೆಳವಣಿಗೆ ದರ ಶೇಕಡ 16.71 ರಲ್ಲಿ 2014-15ಕ್ಕೆ ರೂ.69870 ಕೋಟಿಗಳಿಗೆ (ಆಯವ್ಯಯ ಅಂದಾಜು) ಏರಿಕೆಯಾಗಿರುತ್ತದೆ.
✧.2008-09ರಲ್ಲಿದ್ದ ಅಭಿವೃದ್ಧಿ ವೆಚ್ಚದ ಪಾಲು ಶೇಕಡ 10.07ರಿಂದ ಗಮನಾರ್ಹವಾಗಿ 2014-15 ಕ್ಕೆ (ಆಯವ್ಯಯ ಅಂದಾಜು) ಶೇಕಡ 13.74ಕ್ಕೆ ಏರಿಕೆಯಾಗಿರುತ್ತದೆ ಮತ್ತು ಇದೇ ಅವಧಿಯಲ್ಲಿ ಬಡ್ಡಿ ಪಾವತಿಗಳ ಪಾಲು ಶೇಕಡ 1.69ರಿಂದ ಶೇಕಡ 1.42ಕ್ಕೆ ಇಳಿದಿರುತ್ತದೆ.
✧.ತಲಾ ಅಭಿವೃದ್ಧಿ ವೆಚ್ಚವು 2011-12, 2012-2013 (ಪರಿಷ್ಕೃತ ಅಂದಾಜು) ಮತ್ತು 2013- 14(ಆಯವ್ಯಯ ಅಂದಾಜು) ಈ ಅವಧಿಗಳಲ್ಲಿ ಕ್ರಮವಾಗಿ ಎಲ್ಲಾ ರಾಜ್ಯಗಳ ಸರಾಸರಿಯಾದ ರೂ. 7044, ರೂ.8778 ಮತ್ತು ರೂ.9535ಕ್ಕೆ ಹೋಲಿಸಿದಾಗ ಕರ್ನಾಟಕದಲ್ಲಿ ಇದು ಕ್ರಮವಾಗಿ ರೂ.9972, ರೂ.11853 ಮತ್ತು ರೂ.13246 ಆಗಿರುತ್ತದೆ. ಕರ್ನಾಟಕದ ತಲಾ ಅಭಿವೃದ್ಧಿ ವೆಚ್ಚವು ಪ್ರಮುಖ ರಾಜ್ಯಗಳಿಗೆ ಹೋಲಿಸಿದಾಗ 2013- 14(ಆಯವ್ಯಯ ಅಂದಾಜು) ಅತೀ ಹೆಚ್ಚು ಮಟ್ಟದ್ದಾಗಿರುತ್ತದೆ.
✧.ರಾಜ್ಯ ಯೋಜನಾ ಹೂಡಿಕೆಯು ರೂ.17150 ಕೋಟಿಯಷ್ಟು ಗಮನಾರ್ಹವಾಗಿ ಏರಿಕೆಯಾಗಿದ್ದು, 2013-14ರ(ಪರಿಷ್ಕೃತ ಅಂದಾಜು) ರೂ.48450 ಕೋಟಿಯಿಂದ ರೂ.65600 ಕೋಟಿಗಳಿಗೆ 2014-15ರಲ್ಲಿ(ಆಯವ್ಯಯ ಅಂದಾಜು) ಏರಿರುತ್ತದೆ.
✧.2008-09ರಿಂದ ಯೋಜನಾ ವೆಚ್ಚದಲ್ಲಿ ಏರಿಕೆಯಾಗಿದ್ದು ಒಟ್ಟು ರಾಜ್ಯದ ಆಂತರಿಕ ಉತ್ಪನ್ನದ ಶೇಕಡ 7.42ರಿಂದ ಶೇಕಡ 9.79ಕ್ಕೆ 2014- 15ರಲ್ಲಿ(ಆಯವ್ಯಯ ಅಂದಾಜು) ಆಗಿರುತ್ತದೆ. 2008-09ರಲ್ಲಿನ ಯೋಜನೇತರ ವೆಚ್ಚವು ಒಟ್ಟು ರಾಜ್ಯದ ಆಂತರಿಕ ಉತ್ಪನ್ನದ ಶೇಕಡ 12.74ರಿಂದ 2014-15ಕ್ಕೆ (ಆಯವ್ಯಯ ಅಂದಾಜು) ಶೇಕಡ 11.73ಕ್ಕೆ ಇಳಿಕೆಯಾಗಿರುತ್ತದೆ.
✧.ಕರ್ನಾಟಕದ ಯೋಜನಾ ಸಾಧನೆಯು ಪರಿಣಾಮಕಾರಿಯಾಗಿದ್ದು, ಯೋಜನಾ ವೆಚ್ಚವು ವರ್ಷಗಳಿಂದ ಪರಿಣಾಮಕಾರಿ ಬೆಳವಣಿಗೆಯನ್ನು ತೋರಿಸುತ್ತಿದೆ ಮತ್ತು ಕರ್ನಾಟಕವು 2013- 14ರ(ಆಯವ್ಯಯ ಅಂದಾಜು) ರೂ.7472 ತಲಾ ಯೋಜನಾ ವೆಚ್ಚದೊಂದಿಗೆ ಅತ್ಯಂತ ತಲಾ ಯೋಜನಾ ವೆಚ್ಚ ಹೊಂದಿರುವ ರಾಷ್ಟ್ರದ ಪ್ರಮುಖ ರಾಜ್ಯಗಳ ಪೈಕಿ ಒಂದಾಗಿರುತ್ತದೆ.
✧.ರಾಜ್ಯ ಸರ್ಕಾರದ ಒಟ್ಟು ಹೊಣೆಗಾರಿಕೆಗಳು 2008-09ರಲ್ಲಿದ್ದ ಶೇಕಡ ರೂ.75286 ಕೋಟಿಗಳಿಂದ 2014-15ಕ್ಕೆ ರೂ.157681 ಕೋಟಿಗಳಿಗೆ ಸಂಯುಕ್ತ ವಾರ್ಷಿಕ ಬೆಳವಣಿಗೆ ದರ ಶೇಕಡ13.11ರಷ್ಟು ಏರಿರುತ್ತದೆ. ಆದಾಗ್ಯೂ ಒಟ್ಟು ಹೊಣೆಗಾರಿಕೆಗಳು 13ನೇ ಹಣಕಾಸು ಆಯೋಗವು ನಿಗದಿಪಡಿಸಿದ ಶೇಕಡ 25ರ ಮಿತಿಯೊಳಗೆ ಇರುತ್ತವೆ.
✧.ಜಿಲ್ಲಾ ವಲಯ ಯೋಜನಾ ಗಾತ್ರವು (ಕೇಂದ್ರದ ಪಾಲೂ ಸೇರಿದಂತೆ) 2010-11ರಲ್ಲಿದ್ದ ರೂ.4870 ಕೋಟಿಗಳಿಂದ 2014-15ಕ್ಕೆ (ಆಯವ್ಯಯ ಅಂದಾಜು) ರೂ. 10480 ಕೋಟಿಗೆ ಏರಿಕೆಯಾಗಿರುತ್ತದೆ.
✧.ರಾಜ್ಯದ ಸಾಲ-ಠೇವಣಿ ಅನುಪಾತವು ಮಾರ್ಚ್ 2014ರಂದು ಶೇಕಡ 75.24 ಆಗಿದ್ದು ಕಳೆದ ವರ್ಷದ ಶೇಕಡ 74.15ಕ್ಕೆ ಹೋಲಿಸಿದರೆ ಇದು ಅಲ್ಪ ಏರಿಕೆಯನ್ನು ತೋರಿಸುತ್ತಿದೆ.
☀Ⅱ. ಹೂಡಿಕೆ ಮತ್ತು ರಪ್ತು:
━━━━━━━━━━━━━━━━━
— ಏಪ್ರಿಲ್ 2 0 0 0 ದಿಂದ 2 0 1 4 ರ ನವೆಂಬರ್ ವರೆವಿಗೂ ಕರ್ನಾಟಕವು ವಿದೇಶಿ ನೇರ ಬಂಡವಾಳ ಹೂಡಿಕೆಗೆ US $ 14174 ಮಿಲಿಯನ್ ಆಕರ್ಷಿಸಿದ್ದು, ಇದು ರಾಷ್ಟ್ರ ಮಟ್ಟದ ವಿದೇಶಿ ಬಂಡವಾಳ ಹೂಡಿಕೆಯ ಶೇಕಡ 5.99 ರಷ್ಟಾಗಿದೆ.
✧.ಕರ್ನಾಟಕವು ವಾಣಿಜ್ಯ ರಫ್ತಿನಲ್ಲಿ 4ನೇ ಸ್ಥಾನವನ್ನು ಪಡೆದಿದ್ದು, ಸೇವಾ ವಿಭಾಗ ಮತ್ತು ಉತ್ಪನ್ನಗಳ ಕ್ಷ್ರೇತ್ರಗಳಲ್ಲಿ ಪ್ರಮುಖ ರಾಜ್ಯವಾಗಿದೆ. 2013-14 ನೇ ಸಾಲಿನಲ್ಲಿ ಕರ್ನಾಟಕದ ರಪ್ತು ರೂ.290418 ಕೋಟಿಗಳಾಗಿದ್ದು, ಇದು ರಾಷ್ಟ್ರದ ರಪ್ತಿನ ಶೇಕಡ 12.37 ರಷ್ಟು ಇರುತ್ತದೆ.
✧.ರಾಜ್ಯದ ಒಟ್ಟು ಆಂತರಿಕ ಉತ್ಪನ್ನದಲ್ಲಿ (GSDP) ಕರ್ನಾಟಕದ ರಪ್ತು ಸಾಕಷ್ಟು ಹೆಚ್ಚಿನ ಭಾಗವಾಗಿದ್ದು, ಕಾಲಾನಂತರದಲ್ಲಿ ಹೆಚ್ಚಾಗಿರುತ್ತದೆ. ರಾಜ್ಯದ ಒಟ್ಟು ಆಂತರಿಕ ಉತ್ಪನ್ನದಲ್ಲಿ (GSDP) ರಫ್ತು ಭಾಗವು 1993-94 ರಲ್ಲಿ ಶೇಕಡ 7.36 ಇದ್ದು, 2013-14 ನೇ ಸಾಲಿಗೆ ಶೇಕಡ 47.3 ರಷ್ಟು ಹೆಚ್ಚಾಗಿದೆ.
✧.ಎಲೆಕ್ಟ್ರಾನಿಕ್ಸ್ ಮತ್ತು ಕಂಪ್ಯೂಟರ್ ತಂತ್ರಾಂಶವು ರಾಜ್ಯದ ರಪ್ತಿನ ಹೆಚ್ಚಿನ ಪಾಲನ್ನು ಹೊಂದಿರುತ್ತದೆ. 2013-14 ನೇ ಸಾಲಿನಲ್ಲಿ ಇದರ ಪಾಲು ಶೇಕಡ 61 ರಷ್ಟಾಗಿದೆ.
✧.ಕರ್ನಾಟಕದ ಮುಕ್ತ ರಪ್ತಿನಡಿ 2010-11 ರಲ್ಲಿ ಶೇಕಡ 40 ರಷ್ಟು ಇದ್ದು, 2013-14 ನೇ ಸಾಲಿಗೆ ಶೇಕಡ 47 ರಷ್ಟು ಏರಿಕೆಯಾಗಿದೆ. ಇದು ರಾಷ್ಟ್ರ ಮಟ್ಟದ ಶೇಕಡ 24 ಕ್ಕಿಂತ ಗಣನೀಯವಾಗಿ ಹೆಚ್ಚಾಗಿದೆ.
☀Ⅲ. ಗ್ರಾಮೀಣಾಭಿವೃದ್ದಿ :
━━━━━━━━━━━━━━━━━
✧.ಸುಮಾರು 6137 (ಶೇಕಡ 10.2) ವಸತಿಗಳು ದಿನಂಪ್ರತಿ ತಲಾ 55 ಲೀಟರ್‍ಗಳಷ್ಟು ನೀರನ್ನು ಪಡೆಯುತ್ತಿದ್ದು, 51243 (ಶೇಕಡ 85.8) ವಸತಿಗಳು ದಿನಂಪ್ರತಿ ತಲಾ 55 ಲೀಟರ್ ಗಿಂತ ಕಡಿಮೆ ನೀರನ್ನು ಪಡೆಯುತ್ತಿದ್ದು ಮತ್ತು 2393 (ಶೇಕಡ 4) ವಸತಿಗಳು ಗುಣ ಮಟ್ಟವಿಲ್ಲದ ನೀರನ್ನು ಪಡೆಯುತಿದ್ದಾರೆ.
✧.ಫೆಬ್ರವರಿ 2015 ರ ಅಂತ್ಯಕ್ಕೆ ಸುಮಾರು ಶೇಕಡ 50 ರಷ್ಟು ಗ್ರಾಮೀಣ ಪ್ರದೇಶದ ಜನರು ಶೌಚಾಲಯದ ಮಾಲೀಕತ್ವ ವನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
✧.ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಅಧಿನಿಯಮದಡಿ ಡಿಸೆಂಬರ್2014ರ ಅಂತ್ಯಕ್ಕೆ 288.61 ಲಕ್ಷ ಮಾನವ ಉದ್ಯೋಗ ದಿನಗಳನ್ನು ಉತ್ಪಾದಿಸಲಾಗಿದೆ.
✧.2000-01 ರಿಂದ 2014-15ರ ಅವಧಿಯಲ್ಲಿ (ಡಿಸೆಂಬರ್ 2014ರ ವರೆಗೆ) ಸುಮಾರು 29.67 ಲಕ್ಷ ಮನೆಗಳನ್ನು ವಿವಿಧ ವಸತಿ ಯೋಜನೆಗಲ್ಲಿ ನಿರ್ಮಿಸಲಾಗಿದೆ.
✧.2000-01 ರಿಂದ 2014-15 ಡಿಸೆಂಬರ್ ಅಂತ್ಯಕ್ಕೆ ಸುಮಾರು 2.62 ಲಕ್ಷ ವಸತಿ ನಿವೇಶನಗಳನ್ನು ಹಂಚಲಾಗಿದ್ದು, ಇದರಲ್ಲಿ 1.49 ಲಕ್ಷ ಗ್ರಾಮೀಣ ಪ್ರದೇಶದಲ್ಲಿ ಮತ್ತು 1.13 ಲಕ್ಷ ನಗರ ಪ್ರದೇಶದಲ್ಲಿ ಹಂಚಲಾಗಿದೆ. ಅಲ್ಲದೇ 31,806 ನಿವೇಶನಗಳನ್ನು ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಹಂಚಲಾಗಿದೆ.
✧.ವಿವಿಧ ಯೋಜನೆಗಳಡಿ ಗೃಹ ನಿರ್ಮಾಣ ವೆಚ್ಚವನ್ನು ರೂ.1.20 ಲಕ್ಷದವರೆಗೆ ಹೆಚ್ಚಿಸಲಾಗಿದೆ.
☀Ⅳ. ನಗಾರಾಭಿವೃದ್ದಿ :
━━━━━━━━━━━━━
✧.ಪ್ರಸ್ತುತ ಕರ್ನಾಟಕದಲ್ಲಿ 10 ನಗರ ಕಾರ್ಪೋರೇಷನ್ ಗಳು, 41 ನಗರ ಮುನಿಸಿಪಲ್ ಕೌನ್ಸಿಲ್‍ಗಳು, 68 ಪಟ್ಟಣ ಮುನಿಸಿಪಲ್ ಕೌನ್ಸಿಲ್‍ಗಳು ಮತ್ತು 94 ಪಟ್ಟಣ ಪಂಚಾಯಿತಿಗಳು ಇರುತ್ತದೆ.
✧.2011 ನೇ ಜನಗಣತಿ ಪ್ರಕಾರ 32.91 ಲಕ್ಷ ಜನಸಂಖ್ಯೆಯು ನಗರ ಕೊಳಚೆ ಪ್ರದೇಶದಲ್ಲಿರುತ್ತಾರೆ. 2001ರಿಂದ 2011ರ ಅವಧಿಯಲ್ಲಿ ಕೊಳಚೆ ಪ್ರದೇಶಗಳ ಜನಸಂಖ್ಯೆಯು ತೀವ್ರವಾಗಿ 18.89 ಲಕ್ಷ ಹೆಚ್ಚಾಗಿರುತ್ತದೆ. ಬೆಂಗಳೂರಿನಲ್ಲಿ ರಾಜ್ಯದ ಒಟ್ಟಾರೆ ಶೇಕಡ 21.5ರಷ್ಟು ಕೊಳಚೆ ಪ್ರದೇಶ ನಿವಾಸಿಗಳಿರುತ್ತಾರೆ.
✧.ನಗರದಲ್ಲಿ ಮೂಲ ಭೂತ ಸೌಕರ್ಯಗಳಾದ ನೀರು ಸರಬರಾಜು ಮತ್ತು ಶೌಚಾಲಯ ಸೌಲಭ್ಯಗಳನ್ನು ಒದಗಿಸಲು 200 ನಗರ ಸ್ಥಳೀಯ ಸಂಸ್ಥೆಗಳಿಗೆ ರೂ.183.00 ಕೋಟಿಗಳನ್ನು ಹೂಡಿಕೆ ಮಾಡಲಾಗಿದ್ದು, ರೂ.2440 ಕೋಟಿಗಳನ್ನು ಮಳೆನೀರು ಒಳ ಚರಂಡಿಗಳಿಗಾಗಿ, ರೂ.1372 ಕೋಟಿಗಳನ್ನು ರಸ್ತೆಗಳು ಮತ್ತು ರಸ್ತೆಗೆ ಸಂಬಂಧಿಸಿದ ಮೂಲ ಸೌಕರ್ಯಕ್ಕಾಗಿ, ರೂ.762 ಕೋಟಿಗಳನ್ನು ಒಳ ಚರಂಡಿ ವ್ಯವಸ್ಥೆಗಾಗಿ ಮತ್ತು ರೂ.3803 ಕೋಟಿಗಳನ್ನು ಘನ ತ್ಯಾಜ್ಯ ನಿರ್ವಹಣೆಗಾಗಿ ನೀಡಲಾಗಿದೆ.
✧.ನಗರದ ಬಡ ಜನರ ಮೂಲ ಭೂತ ಸಮಸ್ಯೆಗಳ ನಿವಾರಣಾ ಕಾರ್ಯಕ್ರಮದಡಿಯಲ್ಲಿ, 24508 ವಸತಿಗಳ ನಿರ್ಮಾಣ ಗುರಿಗೆ, ಇದುವರೆಗೆ 21554 ವಸತಿಗಳನ್ನು ನಿರ್ಮಿಸಲಾಗಿದೆ ಮತ್ತು 2761 ವಸತಿಗಳು ವಿವಿಧ ನಿರ್ಮಾಣ ಹಂತದಲ್ಲಿದೆ. 39785 ವಸತಿ ನಿವೇಶನಗಳನ್ನು ಕಳೆದ 3 ವರ್ಷಗಳಲ್ಲಿ ನೀಡಲಾಗಿದೆ.
✧.ಮಳೆ ನೀರು ಕೊಯ್ಲು ಯೊಜನೆಯನ್ನು 42.3 ಕಿ.ಮೀ ಕಮಾನು ಸೇತವೆಗಳ ಗುರಿಗೆ 33.5 ಕಿ.ಮೀ., ಮತ್ತು 33 ನಿಲ್ದಾಣಗಳನ್ನು ನಿರ್ಮಿಸಲಾಗಿದೆ. ಕಮಾನು ಸೇತುವೆಯ ಮೇಲೆ ಬೀಳುವ ಮಳೆನೀರು ಭೂಮಿ ಮಟ್ಟಕ್ಕೆ ಹರಿಯುವಂತೆ ಅನೇಕ ಪೈಪ್ ಗಳನ್ನು ಪ್ರತಿಯೊಂದು ಸ್ತಂಭದಲ್ಲಿ ಅಳವಡಿಸಲಾಗಿದೆ.
...ಮುಂದುವರೆಯುವುದು.
(courtesy :Karnataka Economic Survey)

No comments:
Post a Comment