"ಮನುಷ್ಯ ದೀಪವಾದರೂ ಆಗಬೇಕು, ಕನ್ನಡಿಯಾದರೂ ಆಗಬೇಕು. ಒಂದು ಬೆಳಕನ್ನು ಕೊಡುತ್ತದೆ ಮತ್ತೊಂದು ಅದನ್ನು ಪ್ರತಿಬಿಂಬಿಸುತ್ತದೆ. ಪ್ರತಿಯೊಬ್ಬರೂ ದೀಪ ಆಗದೇ ಹೋಗಬಹುದು ಆದರೆ ಕನ್ನಡಿ ಆಗಬಲ್ಲರು. ತಿಳಿದಿರುವ ಜ್ಞಾನವನ್ನು ಮತ್ತೊಬ್ಬರಿಗೆ ಹಂಚುವುದೇ ಜೀವನ.."—ಅರಿಸ್ಟಾಟಲ್

Monday 6 July 2015

☀(ಭಾಗ-Ⅲ): ಐಎಎಸ್ / ಕೆಎಎಸ್ ಪರೀಕ್ಷೆಗಳಿಗಾಗಿ ಬಹು ಆಯ್ಕೆಯ ಪ್ರಶ್ನೋತ್ತರಗಳು. (Part -Ⅲ): Multiple Choice Questions and Answers for IAS / KAS examinations. 

☀(ಭಾಗ-Ⅲ): ಐಎಎಸ್ / ಕೆಎಎಸ್ ಪರೀಕ್ಷೆಗಳಿಗಾಗಿ ಬಹು ಆಯ್ಕೆಯ ಪ್ರಶ್ನೋತ್ತರಗಳು.
(Part -Ⅲ): Multiple Choice Questions and Answers for IAS / KAS examinations.

━━━━━━━━━━━━━━━━━━━━━━━━━━━━━━━━━━━━━━━━━━━━━

★ಸಾಮಾನ್ಯ ಅಧ್ಯಯನಕ್ಕಾಗಿ ಬಹು ಆಯ್ಕೆಯ ಪ್ರಶ್ನೋತ್ತರಗಳು.
(Multiple Choice Questions for General studies)

★ ಸಾಮಾನ್ಯ ಅಧ್ಯಯನ
(General Studies)

— ಆತ್ಮೀಯ ಪರೀಕ್ಷಾರ್ಥಿಗಳೆ, ವಿಶೇಷವಾಗಿ ಐಎಎಸ್ / ಕೆಎಎಸ್ ಪರೀಕ್ಷೆಗಳನ್ನು ಗಮನದಲ್ಲಿಟ್ಟುಕೊಂಡು ಇದೇ ಮೊದಲ ಬಾರಿಗೆ ನಿಮ್ಮ ಸ್ಪರ್ಧಾಲೋಕ ಬ್ಲಾಗ್ ನಲ್ಲಿ ಕನ್ನಡ ಮಾಧ್ಯಮದಲ್ಲಿ ಬಹು ಆಯ್ಕೆಯ ಪ್ರಶ್ನೋತ್ತರಗಳನ್ನು ತಯಾರಿಸಿ ನಿಮ್ಮ ಮುಂದಿಡಲು ಒಂದು ಚಿಕ್ಕ ಪ್ರಯತ್ನ ಕೈಗೊಳ್ಳುತ್ತಿದ್ದೇನೆ. ಮರೀಚಿಕೆಯಾದ ಕನ್ನಡ ಮಾಧ್ಯಮ ಕರ್ನಾಟಕದ ಪರೀಕ್ಷೆಗಳಲ್ಲಷ್ಟೇ ಅಲ್ಲ, ಕೇಂದ್ರ ಸರ್ಕಾರ ನಡೆಸುವ ಪರೀಕ್ಷೆಗಳಲ್ಲೂ ತನ್ನ ಕೀರ್ತಿ ಪತಾಕೆ ಹರಾಡಿಸಬೇಕೆಂಬ ಧ್ಯೇಯ ಹೊಂದಿರುವ ಪರೀಕ್ಷಾರ್ಥಿಗಳಿಗಾಗಿ ಸಹಕಾರಿಯಾಗಲು ಈ ನನ್ನದೊಂದು ಚಿಕ್ಕ ಪ್ರಯತ್ನ.
— ದಯವಿಟ್ಟು ತಪ್ಪಿದ್ದಲ್ಲಿ ಕ್ಷಮೆ ಇರಲಿ.
— ನಿಮ್ಮ ಸಲಹೆಗಳು ನನಗೆ ಅತ್ಯಮೂಲ್ಯವಾದವುಗಳು.


●..... ಮುಂದುವರೆದ ಭಾಗ.


31) (i).ಚಂಡಮಾರುತ ನೀರಿನ ಮೇಲೆ (ಸಮುದ್ರದ ಮೇಲೆ) ರೂಪುಗೊಂಡರೆ, ಟಾರ್ನೆಡೊ (Tornado) ಭೂಮಿ ಮೇಲೆ ರೂಪುಗೊಳ್ಳುತ್ತವೆ.
(ii).ಟಾರ್ನೆಡೊದ ಗಾತ್ರ ಮತ್ತು ತೀವ್ರತೆಯು ಸಾಗರದಲ್ಲಿನ ಚಂಡಮಾರುತಗಳಿಗೆ ಹೋಲಿಸಿದರೆ ತುಂಬ ಕಡಿಮೆ ಇರುತ್ತದೆ.

— ಈ ಮೇಲಿನ ಹೇಳಿಕೆಗಳಲ್ಲಿ ಯಾವುದು ತಪ್ಪಾಗಿದೆ?
(ಎ) (i) ಮಾತ್ರ.
(ಬಿ) (ii) ಮಾತ್ರ.
(ಸಿ)ಮೇಲಿನೆಲ್ಲವೂ.
(ಡಿ) ಯಾವುದು ಅಲ್ಲ.

ಉತ್ತರ: (ಡಿ)

✧•┈┈┈┈┈┈┈┈┈•✧•┈┈┈┈┈┈┈┈┈•✧•┈┈┈┈┈┈┈┈┈•✧•┈┈┈┈┈┈┈┈┈•✧


32).ಮೊದಲ ಬೌದ್ಧ ಸಮ್ಮೇಳನಕ್ಕೆ ಸಂಬಂದಿಸಿದಂತೆ ಈ ಕೆಳಗಿನ ಯಾವ ಹೇಳಿಕೆ ಸರಿಯಾಗಿದೆ?
1. ಮೊದಲ ಬೌದ್ಧ ಸಮ್ಮೇಳನ ಪಾಟಲಿಪುತ್ರದಲ್ಲಿ ನಡೆಯಿತು.
2. ಮೊದಲ ಬೌದ್ಧ ಸಮ್ಮೇಳನ ರಾಜಗ್ರಹದಲ್ಲಿ ಅಜಾತ ಶತ್ರುವಿನ ಆಶ್ರಯದಲ್ಲಿ ನಡೆಯಿತು.
3.ಮೊದಲ ಬೌದ್ಧ ಸಮ್ಮೇಳನ ಕಾಶ್ಮೀರದಲ್ಲಿ ಕಾನಿಷ್ಕನ ಆಶ್ರಯದಲ್ಲಿ ನಡೆಯಿತು.
4.ಮೊದಲ ಬೌದ್ಧ ಸಮ್ಮೇಳನ ಕಾಶ್ಮೀರದಲ್ಲಿ ಅಜಾತ ಶತ್ರುವಿನ ಆಶ್ರಯದಲ್ಲಿ ನಡೆಯಿತು.

— ಸಂಕೇತಗಳು.
(ಎ) (i) ಮತ್ತು (ii) ಮಾತ್ರ.
(ಬಿ) (ii) ಮಾತ್ರ.
(ಸಿ) (i) ಮತ್ತು (iii) ಮಾತ್ರ.
(ಡಿ) ಯಾವುದು ಅಲ್ಲ.

ಉತ್ತರ: (ಬಿ)

✧•┈┈┈┈┈┈┈┈┈•✧•┈┈┈┈┈┈┈┈┈•✧•┈┈┈┈┈┈┈┈┈•✧•┈┈┈┈┈┈┈┈┈•✧


33) (i) ಕನ್ನಡ ರಾಜ್ಯೋದಯವಾದ ಸಂದರ್ಭದಲ್ಲಿ 1956ರಲ್ಲಿ ಬಿ. ಶಿವಮೂರ್ತಿ ಶಾಸ್ತ್ರೀ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದರು.
 (ii) ಎಚ್.ವಿ. ನಂಜುಂಡಯ್ಯ ಅವರು ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಥಮ ಅಧ್ಯಕ್ಷರಾದರು.
 (iii) ಪುಂಡಲೀಕ ಹಾಲಂಬಿ ಇವರು ಕನ್ನಡ ಸಾಹಿತ್ಯ ಪರಿಷತ್ತಿನ 24ನೆಯ ಅಧ್ಯಕ್ಷರು.

—ಈ ಮೇಲಿನ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ?
(ಎ) (i) ಮತ್ತು (ii) ಮಾತ್ರ.
(ಬಿ) (i) ಮತ್ತು (iii) ಮಾತ್ರ.
(ಸಿ) (ii) ಮತ್ತು (iii) ಮಾತ್ರ.
(ಡಿ) ಮೇಲಿನೆಲ್ಲವೂ.

ಉತ್ತರ: (ಡಿ).

✧•┈┈┈┈┈┈┈┈┈•✧•┈┈┈┈┈┈┈┈┈•✧•┈┈┈┈┈┈┈┈┈•✧•┈┈┈┈┈┈┈┈┈•✧


34) ಸಾಗರಗಳಿಗೆ ಉಪ್ಪು ಮುಖ್ಯವಾಗಿ ಕೆಳಕಂಡ ಮೂಲಗಳಿಂದ ಬರುತ್ತದೆ...
i) ಹಿಮನದಿಗಳಿಂದ
ii) ಸಾಗರ ಪ್ರವಾಹಗಳಿಂದ
iii) ಸೂರ್ಯನ ಬೆಳಕಿನಿಂದ
iv) ನದಿಗಳಿಂದ.

— ಸಂಕೇತಗಳು.
ಎ) (i) ಮಾತ್ರ.
(ಬಿ) (ii) ಮತ್ತು (iii)ಮಾತ್ರ.
(ಸಿ) (iii) ಮತ್ತು (iv) ಮಾತ್ರ.
(ಡಿ) (iv) ಮಾತ್ರ.

ಉತ್ತರ: (ಡಿ)

✧•┈┈┈┈┈┈┈┈┈•✧•┈┈┈┈┈┈┈┈┈•✧•┈┈┈┈┈┈┈┈┈•✧•┈┈┈┈┈┈┈┈┈•✧


35) ‘ಜ್ಯೋತಿ ಸಂಜೀವಿನಿ’ ಯೋಜನೆಗೆ ಸಂಬಂಧಿಸಿದಂತೆ ಕೆಳಕಂಡ ಹೇಳಿಕೆಯನ್ನು ಗಮನಿಸಿ.
(i) ಇದು ನೌಕರರ ಅವಲಂಬಿತ ಸದಸ್ಯರಿಗೂ ಅನ್ವಯವಾಗುತ್ತದೆ
(ii) ಇದು 7 ಮಾರಣಾಂತಿಕ ಕಾಯಿಲೆಗಳಿಗೆ ಸಂಬಂಧಪಟ್ಟಂತೆ ನಗದು ರಹಿತ ವೈದ್ಯಕೀಯ ಚಿಕಿತ್ಸಾ ಸೌಲಭ್ಯವನ್ನು ಒಳಗೊಂಡಿರುತ್ತದೆ
(iii) ರಾಜ್ಯ ಸರಕಾರಿ ನೌಕರರು ಪಡೆಯುತ್ತಿರುವ ವೇತನ ಶ್ರೇಣಿಗೆ ಅನುಗುಣವಾಗಿ ಆಸ್ಪತ್ರೆಗಳಲ್ಲಿ ವಾರ್ಡ್ ಸೌಲಭ್ಯ ದೊರೆಯುವುದು.
(iv) ಈ ಯೋಜನೆಯನ್ನು ಅನುಷ್ಠಾನ ಗೊಳಿಸುವ ಜವಾಬ್ದಾರಿಯನ್ನು ಸುವರ್ಣ ಆರೋಗ್ಯ ಸುರಕ್ಷಣಾ ಟ್ರಸ್ಟ್‌ಗೆ ವಹಿಸಲಾಗಿದೆ.

— ಈ ಮೇಲಿನ ಹೇಳಿಕೆಗಳಲ್ಲಿ ಯಾವುದು ತಪ್ಪಾಗಿದೆ?
ಎ)(i) ಮತ್ತು (iii)ಮಾತ್ರ.ಮಾತ್ರ.
(ಬಿ) (ii) ಮತ್ತು (iii)ಮಾತ್ರ.
(ಸಿ) (iii) ಮತ್ತು (iv)
(ಡಿ) ಯಾವುದು ಅಲ್ಲ.

ಉತ್ತರ: (ಡಿ).

✧•┈┈┈┈┈┈┈┈┈•✧•┈┈┈┈┈┈┈┈┈•✧•┈┈┈┈┈┈┈┈┈•✧•┈┈┈┈┈┈┈┈┈•✧


36) ಕೆಳಗಿನ ವಿವರಣೆಗಳನ್ನು ಪರಿಶೀಲಿಸಿ.
(i) ರತ್ನಗಂಬಳಿಯನ್ನು ತೂರಿದಾಗ ಧೂಳಿನ ಕಣಗಳು ಹೊರ ಬರುವದು ಇದು ನ್ಯೂಟನ್ ನ ಮೊದಲನೆಯ ನಿಯಮಕ್ಕೆ ಅನ್ವಯವಾಗುತ್ತದೆ.
(ii) ನ್ಯೂಟನ್ ನ ಎರಡನೇಯ ನಿಯಮಕ್ಕೆ ಒಂದು ಅತ್ಯುತ್ತಮ ಅನ್ವಯವೆಂದರೆ ಬಾವಿಯಿಂದ ನೀರು ಎತ್ತುವುದು.
(iii) ನ್ಯೂಟನ್ ನ ಮೂರನೇಯ ನಿಯಮವನ್ನು ನಾವು ಗ್ರಹಗಳ ಚಲನೆಯಲ್ಲಿಯೂ ಕಾಣಬಹುದು.

— ಈ ಮೇಲಿನ ಹೇಳಿಕೆಗಳಲ್ಲಿ ಯಾವುದು ತಪ್ಪಾಗಿದೆ?
 ಎ) (i) ಮಾತ್ರ.
(ಬಿ) (ii) ಮಾತ್ರ.
(ಸಿ) (iii) ಮಾತ್ರ.
(ಡಿ) (ii) ಮತ್ತು (iii) ಮಾತ್ರ.

ಉತ್ತರ: (ಸಿ)

✧•┈┈┈┈┈┈┈┈┈•✧•┈┈┈┈┈┈┈┈┈•✧•┈┈┈┈┈┈┈┈┈•✧•┈┈┈┈┈┈┈┈┈•✧


37) ನಾಲ್ವಡಿ ಕೃಷ್ಣರಾಜ ಒಡೆಯರ್ ಕುರಿತು ತಪ್ಪಾಗಿರುವ ಹೇಳಿಕೆಗಳನ್ನು ಗುರುತಿಸಿ.
(i) ಸ್ತ್ರೀಯರಿಗೆ ಮತದಾನದ ಹಕ್ಕನ್ನು ಮೊಟ್ಟಮೊದಲ ಬಾರಿಗೆ ಕಲ್ಪಿಸಿಕೊಟ್ಟವರು
(ii) ದೇಶದಲ್ಲೇ ಮೊಟ್ಟಮೊದಲ ವಿಶ್ವವಿದ್ಯಾನಿಲಯವನ್ನು ಮೈಸೂರಿನಲ್ಲಿ ತೆರೆದು ದಾಖಲೆ ನಿರ್ಮಿಸಿದವರು
(iii) ಏಷ್ಯಾ ಖಂಡದಲ್ಲೇ ಮೊದಲ ಜಲ ವಿದ್ಯುತ್ ಯೋಜನೆಯನ್ನು ಪ್ರಾರಂಭಿಸಿದವರು.
(iv) ೧೯೧೫ ರಲ್ಲಿ ಬೆಂಗಳೂರಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತನ್ನು ಪ್ರಾರಂಭಿಸಿದವರು.

— ಈ ಮೇಲಿನ ಹೇಳಿಕೆಗಳಲ್ಲಿ ಯಾವುದು ತಪ್ಪಾಗಿದೆ?
ಎ)(i) ಮಾತ್ರ.
(ಬಿ) (ii) ಮಾತ್ರ.
(ಸಿ)(ii) ಮತ್ತು (iv) ಮಾತ್ರ.
(ಡಿ) ಎಲ್ಲವೂ ಸರಿ.

ಉತ್ತರ: (ಡಿ)

✧•┈┈┈┈┈┈┈┈┈•✧•┈┈┈┈┈┈┈┈┈•✧•┈┈┈┈┈┈┈┈┈•✧•┈┈┈┈┈┈┈┈┈•✧


38) ಅಜಂತಾ ಗುಹೆಗಳು ಇವರ ಅವಧಿಯಲ್ಲಿ ನಿರ್ಮಿಸಲಾಯಿತು.
ಎ ಗುಪ್ತರು
ಬಿ ಕುಶಾನರು
ಸಿ.ಮೌರ್ಯರು
ಡಿ ಚಾಲುಕ್ಯರು

ಉತ್ತರ :ಎ

✧•┈┈┈┈┈┈┈┈┈•✧•┈┈┈┈┈┈┈┈┈•✧•┈┈┈┈┈┈┈┈┈•✧•┈┈┈┈┈┈┈┈┈•✧


39) ಸಿಂಧೂ ಕಣಿವೆ ಜನರು ಈ ನಾಗರೀಕತೆಯೊಂದಿಗ ಸಂಪರ್ಕಗಳನ್ನು ಹೊಂದಿದ್ದರು.
ಎ ಈಜಿಪ್ಟಿನವರು.
ಬಿ ಸುಮೇರಿಯನ್ನರು.
ಸಿ ಚೀನೀ.
ಡಿ ಮೆಸೊಪಟ್ಯಾಮಿಯನ್ನರು.

ಉತ್ತರ: ಬಿ

✧•┈┈┈┈┈┈┈┈┈•✧•┈┈┈┈┈┈┈┈┈•✧•┈┈┈┈┈┈┈┈┈•✧•┈┈┈┈┈┈┈┈┈•✧


40) ಕೆಳಗಿನ ವಿವರಣೆಗಳನ್ನು ಪರಿಶೀಲಿಸಿ.
(i) ವಿಂದ್ಯಾಪರ್ವತವು ಉತ್ತರ ಭಾರತವನ್ನು ದಕ್ಷಿಣ ಭಾರತದಿಂದ ಪ್ರತ್ಯೇಕಿಸುವ ಶ್ರೇಣಿಯಾಗಿದೆ.
(ii) ಮೂರು ಸಮುದ್ರಗಳು ಸಂಗಮವಾಗುವ ರಾಜ್ಯವೆಂದರೆ, ತಮಿಳುನಾಡು.
(iii) ಸೈಬಿರಿಯಾದಿಂದ ಭಾರತದ ಕಡೆಗೆ ಬೀಸುವ ಮಾರುತವೆಂದರೆ ಶೀತಮಾರುತ.

—ಈ ಮೇಲಿನ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ?
(ಎ) (i) ಮತ್ತು (ii) ಮಾತ್ರ.
(ಬಿ) (i) ಮತ್ತು (iii) ಮಾತ್ರ.
(ಸಿ) (ii) ಮತ್ತು (iii) ಮಾತ್ರ.
(ಡಿ) ಮೇಲಿನೆಲ್ಲವೂ.

ಉತ್ತರ: (ಡಿ).

✧•┈┈┈┈┈┈┈┈┈•✧•┈┈┈┈┈┈┈┈┈•✧•┈┈┈┈┈┈┈┈┈•✧•┈┈┈┈┈┈┈┈┈•✧

41) ಕೆಳಗಿನ ವಿವರಣೆಗಳನ್ನು ಪರಿಶೀಲಿಸಿ.
(i) ಯುರೇನಿಯಮ್ ಲೋಹವು ಸೈಸರ್ಗಿಕವಾಗಿ ದೊರೆಯುವ ಆವರ್ತಕ ಕೋಷ್ಟಕದ (periodic table) ಕೊನೆಯ ಮೂಲವಸ್ತು.
(ii) ಯುರೇನಿಯಮ್ ನ ನಂತರ ಬರುವ ಇತರೆ ಮೂಲವಸ್ತುಗಳನ್ನು ಪರಮಾಣು ರಿಯಾಕ್ಟರುಗಳಲ್ಲಿ ಹುಟ್ಟಿಸಬಹುದು.

—ಈ ಮೇಲಿನ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ?
ಎ) (i) ಮಾತ್ರ.
(ಬಿ) (ii) ಮಾತ್ರ.
(ಸಿ) ಎರಡೂ ಸರಿ.
(ಡಿ) ಯಾವುದು ಅಲ್ಲ.

ಉತ್ತರ: (ಸಿ)

✧•┈┈┈┈┈┈┈┈┈•✧•┈┈┈┈┈┈┈┈┈•✧•┈┈┈┈┈┈┈┈┈•✧•┈┈┈┈┈┈┈┈┈•✧


42) ಕೆಳಗಿನ ವಿವರಣೆಗಳನ್ನು ಪರಿಶೀಲಿಸಿ .
(i) ಮೇಣದ ಬಸದಿ ನಿರ್ಮಿಸಿದವರು ಚಾಲುಕ್ಯರು
(ii) ಐಹೊಳೆಯಲ್ಲಿನ ದುರ್ಗಾ ದೇವಾಲಯವನ್ನೇ ಮಾದರಿಯಾಗಿಟ್ಟುಕೊಂಡು ದೇಶದ ರಾಜಧಾನಿ ದೆಹಲಿಯಲ್ಲಿರುವ ‘ಸಂಸತ್‌ ಭವನ’ವನ್ನು ನಿರ್ಮಿಸಿರುವುದು.
(iii) ವಿಶ್ವ ಪರಂಪರೆ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿರುವ ಪಟ್ಟದಕಲ್ಲು ಮಲಪ್ರಭಾ ನದಿ ತೀರದಲ್ಲಿದೆ.
(iv) ಶಿಲ್ಪಕಲೆಯ ವಿಶ್ವವಿದ್ಯಾಲಯ ಎಂದೇ ಪಟ್ಟದಕಲ್ಲು ಪ್ರಸಿದ್ಧಿಯಾಗಿದೆ.

—ಈ ಮೇಲಿನ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ?
(ಎ) (i) ಮತ್ತು (ii) ಮಾತ್ರ.
(ಬಿ) (ii) ಮತ್ತು (iii) ಮಾತ್ರ.
(ಸಿ) (iii) ಮತ್ತು (iv) ಮಾತ್ರ.
(ಡಿ) ಮೇಲಿನೆಲ್ಲವೂ.

ಉತ್ತರ: (ಡಿ).

✧•┈┈┈┈┈┈┈┈┈•✧•┈┈┈┈┈┈┈┈┈•✧•┈┈┈┈┈┈┈┈┈•✧•┈┈┈┈┈┈┈┈┈•✧


43) ಈ ಕೆಳಗಿನ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ?
(i) ರಾಷ್ಟ್ರೀಯ ಭೂಸೇನಾ ದಿನ ವನ್ನು ' ಜನವರಿ 15' ರಂದು ಆಚರಿಸಲಾಗುತ್ತದೆ.
(ii) ಏಪ್ರಿಲ್ 18 ನ್ನು ' ವಿಶ್ವ ಪಾರಂಪರಿಕ ದಿನ' ವನ್ನಾಗಿ ಆಚರಿಸಲಾಗುತ್ತದೆ.

— ಸಂಕೇತಗಳು.
ಎ) (i) ಮಾತ್ರ.
(ಬಿ) (ii) ಮಾತ್ರ.
(ಸಿ) ಎರಡೂ ಸರಿ.
(ಡಿ) ಯಾವುದು ಅಲ್ಲ.

ಉತ್ತರ: (ಸಿ)

✧•┈┈┈┈┈┈┈┈┈•✧•┈┈┈┈┈┈┈┈┈•✧•┈┈┈┈┈┈┈┈┈•✧•┈┈┈┈┈┈┈┈┈•✧


44) ರಾಷ್ಟ್ರೀಯ ನ್ಯಾಯಾಂಗ ನೇಮಕ ಮಂಡಳಿಗೆ ಸಂಬಂಧಿಸಿದಂತೆ ಕೆಳಕಂಡ ಹೇಳಿಕೆಯನ್ನು ಗಮನಿಸಿ.
(i) ಸುಪ್ರೀಂಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗಳು ಮಂಡಳಿಯ ಅಧ್ಯಕ್ಷತೆ ವಹಿಸುತ್ತಾರೆ.
(ii) ಅಟಾರ್ನಿ ಜನರಲ್ ನು ಮಂಡಳಿಯ ಮುಖ್ಯ ನಿರ್ದೇಶಕನಾಗಿರುವನು.
(iii) ಈ ಹೊಸ ವ್ಯವಸ್ಥೆಯಲ್ಲಿ 6 ಮಂದಿ ಸದಸ್ಯರಿರುತ್ತಾರೆ. ಇದರಲ್ಲಿ ಇಬ್ಬರು ಹಿರಿಯ ನ್ಯಾಯಮೂರ್ತಿಗಳು, ಕಾನೂನು ಸಚಿವರು ಮತ್ತು ಇಬ್ಬರು ತಜ್ಞರು ಇರುತ್ತಾರೆ.

— ಈ ಮೇಲಿನ ಹೇಳಿಕೆಗಳಲ್ಲಿ ಯಾವುದು ತಪ್ಪಾಗಿದೆ?
ಎ)(i) ಮಾತ್ರ.
(ಬಿ) (ii) ಮಾತ್ರ.
(ಸಿ) (ii) ಮತ್ತು (iii) ಮಾತ್ರ.
(ಡಿ) ಯಾವುದು ಅಲ್ಲ.

ಉತ್ತರ: (ಬಿ)

✧•┈┈┈┈┈┈┈┈┈•✧•┈┈┈┈┈┈┈┈┈•✧•┈┈┈┈┈┈┈┈┈•✧•┈┈┈┈┈┈┈┈┈•✧


45) ಈ ಕೆಳಗಿನ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ?
(i) ಕೆಂಪು ರಕ್ತಕಣಗಳ ಪ್ರಮುಖ ಕಾರ್ಯ ದೇಹದ ಪ್ರತಿಯೊಂದು ಕೋಶಕ್ಕೂ ಆಕ್ಸಿಜನ್ ಸರಬರಾಜು ಮಾಡುವುದು.
(ii) ಬಿಳಿರಕ್ತ ಕಣಗಳ ಪ್ರಮುಖ ಕಾರ್ಯ ರೋಗಾಣುಗಳನ್ನು ನಾಸಪದಿಸುತ್ತದೆ ಮತ್ತು ದೇಹವನ್ನು ಸೊಂಕು ರೋಗಗಳಿಂದ ರಕ್ಷಿಸುತ್ತದೆ.
(iii) ಬಿಳಿರಕ್ತ ಕಣಗಳ ಆಯಸ್ಸು 12ಗಂಟೆಯಿಂದ 300 ದಿನಗಳು.
(iv) ಕೆಂಪು ರಕ್ತಕಣಗಳ ಆಯಸ್ಸು 120 ದಿನ.

— ಸಂಕೇತಗಳು.
ಎ)(i) ಮಾತ್ರ.
(ಬಿ) (ii) ಮಾತ್ರ.
(ಸಿ) (iii) ಮತ್ತು (iv) ಮಾತ್ರ.
(ಡಿ) ಮೇಲಿನೆಲ್ಲವೂ.

ಉತ್ತರ: (ಡಿ)

....ಮುಂದುವರೆಯುವುದು..ಲ

No comments:

Post a Comment