"ಮನುಷ್ಯ ದೀಪವಾದರೂ ಆಗಬೇಕು, ಕನ್ನಡಿಯಾದರೂ ಆಗಬೇಕು. ಒಂದು ಬೆಳಕನ್ನು ಕೊಡುತ್ತದೆ ಮತ್ತೊಂದು ಅದನ್ನು ಪ್ರತಿಬಿಂಬಿಸುತ್ತದೆ. ಪ್ರತಿಯೊಬ್ಬರೂ ದೀಪ ಆಗದೇ ಹೋಗಬಹುದು ಆದರೆ ಕನ್ನಡಿ ಆಗಬಲ್ಲರು. ತಿಳಿದಿರುವ ಜ್ಞಾನವನ್ನು ಮತ್ತೊಬ್ಬರಿಗೆ ಹಂಚುವುದೇ ಜೀವನ.."—ಅರಿಸ್ಟಾಟಲ್

Saturday 11 July 2015

☀ಪ್ರಾಜೆಕ್ಟ್‌ ಮೌಸಮ್‌:  (Project Mousam) (ಟಿಪ್ಪಣಿ ಬರಹ)

☀ಪ್ರಾಜೆಕ್ಟ್‌ ಮೌಸಮ್‌:
(Project Mousam) (ಟಿಪ್ಪಣಿ ಬರಹ)
━━━━━━━━━━━━━━━━━━━━━━━━━━━━━━━━━━━━━━━━━━━━━

★ ಐಎಎಸ್ / ಕೆಎಎಸ್ ಸಾಮಾನ್ಯ ಅಧ್ಯಯನ
(IAS / KAS General Studies)

★ ಪ್ರಚಲಿತ ಘಟನೆಗಳು
(Current Affairs)


— ಇತ್ತೀಚೆಗೆ ಕೇಂದ್ರ ಸರಕಾರವು ತನ್ನ ವಿದೇಶಾಂಗ ನೀತಿಯನ್ನು ಬಲಪಡಿಸುವ ನಿಟ್ಟಿನಲ್ಲಿ ಜಾರಿಯಲ್ಲಿ ತಂದಿರುವಂಥ ಪ್ರಮುಖ ಯೋಜನೆಗಳಲ್ಲಿ ಈ "ಪ್ರಾಜೆಕ್ಟ್‌ ಮೌಸಮ್‌ (Project Mousam)" ಯೋಜನೆಯು ಕೂಡ ಒಂದು.

●.ವಿಶೇಷವಾಗಿ ಹಿಂದೂ ಮಹಾಸಾಗರದಲ್ಲಿ ಚೀನಾದ ಪ್ರಭಾವಕ್ಕೆ ತಡೆಯೊಡ್ಡುವ ಮೂಲಕ ಮಹಾಸಾಗರ ಭಾಗದ ದೇಶಗಳ ಜತೆಗೆ ಸಾಗರ ಮಾರ್ಗಗಳ ಮೂಲಕ ಭಾರತದ ಪ್ರಾಚೀನ ಸಾಂಸ್ಕೃತಿಕ ಬಾಂಧವ್ಯವನ್ನು ಪುನರುಜ್ಜೀವನಗೊಳಿಸುವ ಉದ್ದೇಶ ಹೊಂದಿದೆ.

●.ಹಿಂದೂ ಮಹಾಸಾಗರದ ಉದ್ದಗಲಕ್ಕೂ ಸಾಗರ ಮಾರ್ಗಗಳು ಮತ್ತು ಸಾಂಸ್ಕೃತಿಕ ವಿನಿಮಯಗಳನ್ನು ಪುನಶ್ಚೇತನಗೊಳಿಸುವ ಉದ್ದೇಶದಿಂದ ಈ ಯೋಜನೆ ರೂಪಿಸಲಾಗಿದೆ.

●.ಪ್ರಾಚೀನ ಕಾಲದಿಂದಲೂ ಇಲ್ಲಿನ ಭೌಗೋಳಿಕ ಪರಿಸ್ಥಿತಿ ಭಾರತಕ್ಕೆ ಅನುಕೂಲಕರವಾಗಿಯೇ ಇದೆ. ಆದರೆ ಭಾರತ ಸರಕಾರ ಇದುವರೆಗೂ ಅದನ್ನು ಸಮರ್ಥವಾಗಿ ಬಳಸಿಕೊಳ್ಳದೆ ಚೀನಾದ ಪ್ರಾಬಲ್ಯ ಹೆಚ್ಚಲು ಅವಕಾಶ ಮಾಡಿಕೊಟ್ಟಿದೆ. ಈ ತಪ್ಪನ್ನು ಸರಿಪಡಿಸಲು ಕೇಂದ್ರ ಸರಕಾರ "ಪ್ರಾಜೆಕ್ಟ್‌ ಮೌಸಮ್" ಯೋಜನೆಯನ್ನು ರೂಪಿಸಿದೆ.

●.ಹಿಂದೂ ಮಹಾಸಾಗರದ ಮೂಲಕ ಪೂರ್ವ ಆಫ್ರಿಕಾ, ಅರಬ್‌ ದ್ವೀಪಕಲ್ಪ, ಭಾರತ ಉಪಖಂಡ ಮತ್ತು ಶ್ರೀಲಂಕಾವನ್ನು ಸಂಪರ್ಕಿಸುವ ಅನೇಕ ಸಾಗರ ಮಾರ್ಗಗಳಿವೆ. ಇವುಗಳನ್ನು ಮರು ಶೋಧಿಸುವ ಉದ್ದೇಶದಿಂದ ಪ್ರಾಜೆಕ್ಟ್‌ ಮೌಸಮ್‌ ರೂಪಿಸಲಾಗಿದೆ.

●.ಚೀನಾದ 'ಮ್ಯಾರಿಟೈಂ ಸಿಲ್ಕ್‌ ರೋಡ್‌'ನ ಭಾರೀ ಯಶಸ್ಸಿನ ಹಿನ್ನೆಲೆಯಲ್ಲಿ, ಭಾರತ ಕೂಡ ತನ್ನದೇ ಆದ 'ಪ್ರಾಜೆಕ್ಟ್‌ ಮೌಸಮ್'ಗೆ ಚಾಲನೆ ನೀಡಿದೆ.

No comments:

Post a Comment