"ಮನುಷ್ಯ ದೀಪವಾದರೂ ಆಗಬೇಕು, ಕನ್ನಡಿಯಾದರೂ ಆಗಬೇಕು. ಒಂದು ಬೆಳಕನ್ನು ಕೊಡುತ್ತದೆ ಮತ್ತೊಂದು ಅದನ್ನು ಪ್ರತಿಬಿಂಬಿಸುತ್ತದೆ. ಪ್ರತಿಯೊಬ್ಬರೂ ದೀಪ ಆಗದೇ ಹೋಗಬಹುದು ಆದರೆ ಕನ್ನಡಿ ಆಗಬಲ್ಲರು. ತಿಳಿದಿರುವ ಜ್ಞಾನವನ್ನು ಮತ್ತೊಬ್ಬರಿಗೆ ಹಂಚುವುದೇ ಜೀವನ.."—ಅರಿಸ್ಟಾಟಲ್

Tuesday 7 July 2015

☀ಅಧ್ಯಾಯ : 1.2.3) ಕರ್ನಾಟಕ ರಾಜ್ಯದ ಕೃಷಿ-ಕೈಗಾರಿಕೆಗಳು, ನೈಸರ್ಗಿಕ ಸಂಪನ್ಮೂಲಗಳು ಮತ್ತು ಪರಿಸರ:(ಸಂಕ್ಷಿಪ್ತ ಅವಲೋಕನ)  (Karnataka State Agro-industries, Natural Resources and the Environment:)

☀ಅಧ್ಯಾಯ : 1.2.3) ಕರ್ನಾಟಕ ರಾಜ್ಯದ ಕೃಷಿ-ಕೈಗಾರಿಕೆಗಳು, ನೈಸರ್ಗಿಕ ಸಂಪನ್ಮೂಲಗಳು ಮತ್ತು ಪರಿಸರ:(ಸಂಕ್ಷಿಪ್ತ ಅವಲೋಕನ)
(Karnataka State Agro-industries, Natural Resources and the Environment:)

━━━━━━━━━━━━━━━━━━━━━━━━━━━━━━━━━━━━━━━━━━━━━

✧.ಕರ್ನಾಟಕ ರಾಜ್ಯದ ಆರ್ಥಿಕತೆ.
(Karnataka state economy)

✧.ಐಎಎಸ್ / ಕೆಎಎಸ್ ಪರೀಕ್ಷೆಗಳಿಗಾಗಿ ಸಾಮಾನ್ಯ ಅಧ್ಯಯನ.
(GENERAL STUDIES FOR IAS/KAS)


☀Ⅰ. ಕೃಷಿ ಮತ್ತು ಕೃಷಿ ಸಂಬಂಧಿತ ಚಟುವಟಿಕೆಗಳು
━━━━━━━━━━━━━━━━━━━━━━━━━━━━━━━━━━━━━━━━━━━━━

                                            — ವಿವಿಧ ಮುಂಗಾರು ಮತ್ತು ಹಿಂಗಾರು ಬೆಳೆಗಳ ವಿಸ್ತೀರ್ಣ ವ್ಯಾಪ್ತಿ ಪ್ರದೇಶದಲ್ಲಿನ ಪ್ರಗತಿಯನ್ನು ಆಧರಿಸಿದ ಪ್ರಾಥಮಿಕ ಅಂದಾಜುಗಳು, ಕೆಲವು ಭಾಗಗಳಲ್ಲಿ ದೀರ್ಘ ಒಣ ಹವೆ/ಅತಿಯಾದ ಮಳೆಯಿಂದಾಗಿ ಇಳುವರಿಯಲ್ಲಿ ಸಂಭಾವ್ಯ ನಷ್ಟವಾಗುವುದರಿಂದ ಏಕದಳ ಧಾನ್ಯಗಳ 119.13 ಲಕ್ಷ ಟನ್‍ಗಳ ಉತ್ಪಾದನಾ ಗುರಿಗೆ ಎದುರಾಗಿ 114.77 ಲಕ್ಷ ಟನ್‍ ಗಳ ಉತ್ಪಾದನೆ, ದ್ವಿದಳ ಧಾನ್ಯಗಳ 15.87 ಲಕ್ಷ ಟನ್‍ ಗಳ ಉತ್ಪಾದನಾ ಗುರಿಗೆ ಎದುರಾಗಿ 15.2 4 ಲಕ್ಷ ಟನ್ ಗಳ ಉತ್ಪಾದನೆಯಾಗುವುದಾಗಿ ತೋರಿಸುತ್ತದೆ.

●.ಎಣ್ಣೆ ಕಾಳುಗಳ 14.80 ಲಕ್ಷ ಟನ್‍ಗಳ ಉತ್ಪಾದನಾ ಗುರಿಗೆ ಎದುರಾಗಿ 11.67 ಲಕ್ಷ ಟನ್‍ಗಳ ಉತ್ಪಾದನೆಯಾಗುವುದಾಗಿ ನಿರೀಕ್ಷಿಸಲಾಗಿದೆ. ಹೆಚ್ಚಿನ ಪ್ರದೇಶ ವ್ಯಾಪ್ತಿಯ ಕಾರಣದಿಂದ ಹತ್ತಿಯ 13.15 ಲಕ್ಷ ಬೇಲ್ಸ್ ಉತ್ಪಾದನಾ ಗುರಿಯ ಎದುರಿಗೆ 20.55
ಲಕ್ಷ ಬೇಲ್ಸ್ ಉತ್ಪಾದನೆಯಾಗುವುದಾಗಿ ನಿರೀಕ್ಷಿಸಲಾಗಿದೆ.

●.ಮಳೆಯ ಪ್ರತಿ ಹನಿಯನ್ನು ಸಂರಕ್ಷಿಸಲು ಮತ್ತು ವಿನೂತನವಾಗಿ ನಡುವೆ ಮಳೆಕೊಯ್ಲು ನೀರನ್ನು ನ್ಯಾಯಯುತವಾಗಿ ಬಳಕೆಮಾಡಲು 'ಕೃಷಿ ಭಾಗ್ಯ ಯೋಜನೆ'ಯನ್ನು ಜಾರಿಗೆ ತರಲಾಗಿರುತ್ತದೆ.

●.ಎಲ್ಲಾ ಕೃಷಿ ಮತ್ತು ತೋಟಗಾರಿಕಾ ಉತ್ಪನ್ನಗಳ ಬೆಲೆ ನೀತಿಯ ಮೇಲೆ ರಾಜ್ಯ ಸರ್ಕಾರಕ್ಕೆ ಸಲಹೆ ನೀಡುವುದಕ್ಕಾಗಿ ರಾಜ್ಯವು 2014-15ರಲ್ಲಿ ಕೃಷಿ ಬೆಲೆ ಆಯೋಗವನ್ನು ಸ್ಥಾಪಿಸಿರುತ್ತದೆ.

●.ಪ್ರಮುಖ ಕೃಷಿ ಯಂತ್ರೋಪಕರಣಗಳ /ಉಪಕರಣಗಳ ಸೇವೆಗಳನ್ನು ಪಡೆಯುವುದಕ್ಕಾಗಿ ಪ್ರತಿಯೊಂದು ಹೋಬಳಿ ಮಟ್ಟದಲ್ಲಿ ಒಂದರಂತೆ ಕಸ್ಟಮ್ ಹೈರ್ ಕೇಂದ್ರಗಳನ್ನು ಸ್ಥಾಪಿಸಲಾಗಿದೆ.

●.ಹೊಸದಾದ ಕೇಂದ್ರೀಯ ಪುರಸ್ಕøತ ಯೋಜನೆಯಾದ 'ರಾಷ್ಟ್ರೀಯ ಸಂರಕ್ಷಿತ ಕೃಷಿ ಅಭಿಯಾನ' (NMSA) ವನ್ನು ಕೃಷಿ ಉತ್ಪನ್ನದಲ್ಲಿ ಹೆಚ್ಚಳ, ಅದರಲ್ಲೂ ಮಳೆಯಾಶ್ರಿತ ಪ್ರದೇಶಗಳಲ್ಲಿ ಸಂಯೋಜಿತ ಬೇಸಾಯಕ್ಕೆ ಪ್ರಾಧಾನ್ಯತೆ, ನೀರಿನ ಬಳಕೆಯಲ್ಲಿನ ದಕ್ಷತೆ, ಮಣ್ಣಿನ ಫಲವತ್ತತೆಯ ನಿರ್ವಹಣೆ ಮತ್ತು ಸಂಪನ್ಮೂಲಗಳ ಸಂರಕ್ಷಣೆಗಾಗಿ ರೂಪಿಸಲಾಗಿರುತ್ತದೆ.

●.2013-14ರಲ್ಲಿ ಕೃಷಿ ಮತ್ತು ಸಂಬಂಧಿತ ಚಟುವಟಿಕೆಗಳ ಒಟ್ಟು ರಾಜ್ಯದ ಆಂತರಿಕ ಉತ್ಪನ್ನದಲ್ಲಿ ಪಶುಸಂಗೋಪನೆಯ ಪಾಲು ಶೇಕಡ 20.51ಆಗಿತ್ತು.

●.ರಾಜ್ಯದಲ್ಲಿನ ಜಾನುವಾರುಗಳ ಸಾಂದ್ರತೆಯು ಪ್ರತಿ ಚದರ ಕಿ.ಮೀ ಪ್ರದೇಶಕ್ಕೆ 151.21ರಷ್ಟು ಮತ್ತು 47468ರಷ್ಟು ತಲಾ ಲಕ್ಷ ಮಾನವ ಜನಸಂಖ್ಯೆಗೆ ಎಂದು ಅಂದಾಜಿಸಲಾಗಿದೆ.

●.ಹಾಲು ಉತ್ಪಾದನೆಯಲ್ಲಿ ಭಾರತವು ಪ್ರಪಂಚದಲ್ಲಿ ಎರಡನೇ ಸ್ಥಾನವನ್ನು ಗಳಿಸಿರುತ್ತದೆ (ಆಹಾರ ಮತ್ತು ಕೃಷಿ ಸಂಸ್ಥೆಗಳ ಅಂಕಿಅಂಶಗಳು-ವೆಬ್‍ಸೈಟ್ ವರ್ಷ2012) ಮತ್ತು ಭಾರತದ ರಾಜ್ಯಗಳ ಪೈಕಿ ಕರ್ನಾಟಕವು 11ನೇ ಸ್ಥಾನದಲ್ಲಿರುತ್ತದೆ.
2013-14ರ ಅವಧಿಯಲ್ಲಿ ರಾಜ್ಯದಲ್ಲಿನ ಹಾಲಿನ ಉತ್ಪಾದನೆಯು 5.99 ದಶಲಕ್ಷ ಮೆಟ್ರಿಕ್ ಟನ್‍ ಗಳಷ್ಟು ಆಗಿತ್ತು.

●.ತೋಟಗಾರಿಕಾ ಬೆಳೆಗಳು 18.35 ಲಕ್ಷ ಹೆಕ್ಟೇರು ಪ್ರದೇಶವನ್ನು ವ್ಯಾಪಿಸಿದ್ದು ವಾರ್ಷಿಕ ತೋಟಗಾರಿಕಾ ಬೆಳೆ ಉತ್ಪನ್ನವು 149.59 ಮೆಟ್ರಿಕ್ ಟನ್‍ಗಳಷ್ಟು ಆಗಿದ್ದು, ಇವುಗಳ ಮೌಲ್ಯವು ರೂ. 29741 ಕೋಟಿಗಳಾಗಿರುತ್ತದೆ.

●.2013-14ನೇ ವರ್ಷದಲ್ಲಿ ರಾಜ್ಯದ ಒಟ್ಟು ಮೀನು ಉತ್ಪಾದನೆಯು 5.55ಲಕ್ಷ ಟನ್‍ ಗಳಷ್ಟಾಗಿದ್ದು ಇದು, ರಾಷ್ಟ್ರೀಯ ಮೀನು ಉತ್ಪಾದನೆಯ ಶೇಕಡ 5.8ರಷ್ಟು ಕೊಡುಗೆಯನ್ನು ನೀಡಿರುತ್ತದೆ.

●.ರಾಷ್ಟ್ರದ ಮೀನು ಉತ್ಪಾದನೆಗೆ ಹೋಲಿಸಿದರೆ ಕರ್ನಾಟಕವು ಸಮುದ್ರದ ಮೀನು ಉತ್ಪಾದನೆಯಲ್ಲಿ 6ನೆಯ ಸ್ಥಾನವನ್ನೂ ಒಳನಾಡಿನ ಮೀನು ಉತ್ಪಾದನೆಯಲ್ಲಿ 9ನೆಯ ಸ್ಥಾನವನ್ನು ಪಡೆದಿರುತ್ತದೆ.

●.ಜಲಾನಯನ ಚಟುವಟಿಕೆಗಳಿಗೆ ಲಭ್ಯವಿರುವ ಒಟ್ಟು 129.70ಲಕ್ಷ ಹೆಕ್ಟೇರು ಪ್ರದೇಶಗಳ ಪೈಕಿ ಮಾರ್ಚ್ 2014ರವರೆಗೆ 63.27 ಹೆಕ್ಟೇರು ಪ್ರದೇಶವನ್ನು ಒಳಪಡಿಸಲಾಗಿರುತ್ತದೆ.

●.ಫೆಬ್ರವರಿ 2014ರಿಂದ ಆನ್‍ಲೈನ್ ವ್ಯಾಪಾರ ಪದ್ಧತಿಯನ್ನು ಅನುಷ್ಠಾನಗೊಳಿಸಲಾಗಿರುತ್ತದೆ.


☀Ⅱ. ನೈಸರ್ಗಿಕ ಸಂಪನ್ಮೂಲಗಳು ಮತ್ತು ಪರಿಸರ:
━━━━━━━━━━━━━━━━━━━━━━━━━━━━

                                        — ರಾಜ್ಯದ 2013-14ರ ಅರಣ್ಯ ಇಲಾಖೆಯ ವಾರ್ಷಿಕ ವರದಿಯಂತೆ ಕರ್ನಾಟಕವು 433356.47 ಚದರ ಕಿ.ಮೀ.ಗಳಷ್ಟು ಅರಣ್ಯ ಪ್ರದೇಶವನ್ನು ಹೊಂದಿದ್ದು, ಇದು ರಾಜ್ಯದ ಭೌಗೋಳಿಕ ಪ್ರದೇಶದ ಶೇಕಡ 22.61ರಷ್ಟಿರುತ್ತದೆ. ಇದರಲ್ಲಿ, ಮೀಸಲು ಅರಣ್ಯ ಪ್ರದೇಶವು ಶೇಕಡ 15.48, ಸಂರಕ್ಷಿತ ಅರಣ್ಯ ಪ್ರದೇಶವು ಶೇಕಡ 1.84, ವರ್ಗೀಕರಿಸದ ಅರಣ್ಯ ಪ್ರದೇಶವು ಶೇಕಡ 5.23 ಮತ್ತು ಖಾಸಗಿ ಅರಣ್ಯ ಪ್ರದೇಶವು ಶೇಕಡ 0.03ರಷ್ಟಿರುತ್ತದೆ.

●.2001ರಲ್ಲಿ ದಟ್ಟ ಅರಣ್ಯ ಪ್ರದೇಶ ವ್ಯಾಪ್ತಿಯನ್ನು ಸುಮಾರು 26156 ಚದರ ಕಿ.ಮೀ. ಎಂದು ಅಂದಾಜಿಸಲಾಗಿತ್ತು (ಶೇಕಡ70) ಮತ್ತು ಇದು 2013ರಲ್ಲಿ 21956 ಚದರ ಕಿ.ಮೀ.ಗೆ ಇಳಿದಿರುತ್ತದೆ. (ಶೇಕಡ 60) ಅಂದರೆ 12 ವರ್ಷಗಳಲ್ಲಿ ಶೇಕಡ10ರಷ್ಟು ಇಳಿಕೆಯಾಗಿರುತ್ತದೆ. ಆದರೆ, ಈ ಅವಧಿಯಲ್ಲಿ ಮುಕ್ತ ಅರಣ್ಯ ಪ್ರದೇಶ ವ್ಯಾಪ್ತಿಯು 10835 ಚದರ ಕಿ.ಮೀ.ಗಳಿಂದ 14176 ಚದರ ಕಿ.ಮೀ.ಗಳಿಗೆ ಏರಿಕೆಯಾಗಿರುತ್ತದೆ.

●.ಭಾರಿ, ಮಧ್ಯಮ, ಮತ್ತು ಸಣ್ಣ ನೀರಾವರಿ ಯೋಜನೆಗಳಲ್ಲಿ 2013-14ರಲ್ಲಿ ಇದ್ದಂತಹ ಸಂಚಿತ ನೀರಾವರಿ ಸಾಮಥ್ರ್ಯವು 39.40ಲಕ್ಷ ಹೆಕ್ಟೇರ್‍ ಗಳಿಂದ 2014-15ರಲ್ಲಿ 40.52ಲಕ್ಷ ಹೆಕ್ಟೇರ್‍ ಗಳಿಗೆ ತಲುಪುವುದಾಗಿ ನಿರೀಕ್ಷಿಸಲಾಗಿದೆ.


☀Ⅲ.ಕೈಗಾರಿಕೆಗಳು:
━━━━━━━━━━━━━

                                     — ಗಣಿಗಾರಿಕೆ, ಉತ್ಪಾದನೆ ಮತ್ತು ವಿದುತ್ ಕ್ಷೇತ್ರಗಳನ್ನು ಒಳಗೊಂಡಿರುವ ಕೈಗಾರಿಕಾ ಉತ್ಪಾದನೆಯ ಸಾಮಾನ್ಯ ಸೂಚ್ಯಂಕವು 2013- 14ರಲ್ಲಿ 175.59ರಲ್ಲಿತ್ತು. ಕರ್ನಾಟಕದಲ್ಲಿನ ಒಟ್ಟಾರೆ ಸಂಘಟಿತ ಉದ್ಯಮ ವಲಯವನ್ನು 2012-13ಕ್ಕೆ ಹೋಲಿಸಿದಾಗ 2013-14ರಲ್ಲಿ ಅದು ಶೇಕಡ 3.66ರಷ್ಟು ಬೆಳವಣಿಗೆಯನ್ನು ದಾಖಲಿಸಿದೆ.

●.ಕೈಗಾರಿಕೆಗಳ ವಾರ್ಷಿಕ ಸಮೀಕ್ಷೆಯ ಅಂಕಿಅಂಶಗಳು, ರಾಷ್ಟ್ರದಲ್ಲಿನ ಒಟ್ಟು ನೋಂದಾಯಿತ ಕಾರ್ಖಾನೆಗಳ ಶೇಕಡ 5.27ರಷ್ಟು ಕರ್ನಾಟಕದಲ್ಲಿ ಇರುವುದನ್ನು ಸೂಚಿಸುತ್ತದೆ. ಕರ್ನಾಟಕದಲ್ಲಿ ಇರುವ ನೋಂದಾಯಿತ ಕಾರ್ಖಾನೆಗಳು ಶೇಕಡ 6.77ರಷ್ಟು ಒಟ್ಟು ಸ್ಥಿರ ಬಂಡವಾಳ, ಶೇ.6.84 ರಷ್ಟು ಒಟ್ಟು ಉತ್ಪಾದನೆ ಮತ್ತು ಶೇ.11 . 51 ರಷ್ಟು ಒಟ್ಟು ಮೌಲ್ಯಾಧಾರಿತವಾಗಿರುತ್ತದೆ(GVA).

●.ಪ್ರತಿ ಕಾರ್ಮಿಕರ ಮೌಲ್ಯಾಧಾರಿತದಲ್ಲಿ, ರೂ.49801 ಮೌಲ್ಯವನ್ನು ಸೇರಿಸಲಾಗಿದ್ದು, ಕರ್ನಾಟಕವು ರಾಷ್ಟ್ರ ಮಟ್ಟದ ಸರಾಸರಿಯಾದ ರೂ.44347ಕ್ಕಿಂತ ಉತ್ತಮ ಸ್ಥಿತಿಯಲ್ಲಿದೆ.

●.2013-14 ನೇ ಸಾಲಿನಲ್ಲಿ ರಾಜ್ಯದಲ್ಲಿ 25966 ಸೂಕ್ಷ್ಮ ಸಣ್ಣ ಮತ್ತು ಮದ್ಯಮ ಉದ್ಯಮ ಘಟಕಗಳು ನೊಂದಾಯಿಸಿದ್ದು, ಇವುಗಳ ಬಂಡವಾಳ ರೂ.285056 ಲಕ್ಷಗಳು ಮತ್ತು 167347 ಜನರಿಗೆ ಉದ್ಯೋಗ ನೀಡಲಾಗಿದೆ. 2012-13 ನೇ ಸಾಲಿಗೆ ಹೋಲಿಸಿದರೆ, ನೊಂದಾಯಿತ ಘಟಕಗಳ ಸಂಖ್ಯೆ ಶೇಕಡ 7.27 ರಷ್ಟು ಹೆಚ್ಚಾಗಿರುತ್ತದೆ, ಶೇ.31.45 ರಷ್ಟು ಬಂಡವಾಳ ಹೂಡಿಕೆಯಲ್ಲಿ ಹೆಚ್ಚಳವಾಗಿದ್ದು ಮತ್ತು ಶೇಕಡ 7.58 ರಷ್ಟು ಉದ್ಯೋಗಸ್ಥರ ಸಂಖ್ಯೆಯು 2013-14 ರಲ್ಲಿ ಸೂಕ್ಷ್ಮ ಸಣ್ಣ ಮತ್ತು ಮದ್ಯಮ ಉದ್ಯಮಗಳಲ್ಲಿ ಹೆಚ್ಚಾಗಿದೆ.

●.2014ರ ಡಿಸೆಂಬರ್ ಅಂತ್ಯಕ್ಕೆ ರಾಜ್ಯದಲ್ಲಿ ಸುಮಾರು 88.88 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಉಪ್ಪು ನೇರಳೆ ಕೃಷಿಯಾಗಿರುತ್ತದೆ. ಇದು 2013ರ ಇದೇ ಅವಧಿಯಲ್ಲಿನ 80.57 ಸಾವಿರ ಹೆಕ್ಟೇರ್ ಉಪ್ಪು ನೇರಳೆ ಕೃಷಿ ಪ್ರದೇಶಕ್ಕಿಂತ ಹೆಚ್ಚಾಗಿರುತ್ತದೆ. ಇದೇ ಅವಧಿಯಲ್ಲ್ಲಿ (ಎಪ್ರಿಲ್ ನಿಂದ ಡಿಸೆಂಬರ್ ವರೆಗೆ) ರೇಷ್ಮೆ ಮೊಟ್ಟೆಗಳು (50.79), ಕಚ್ಚಾ ರೇಷ್ಮೆ ಉತ್ಪಾದನೆ(7.11), ರೇಷ್ಮೆ ಕಾರ್ಮಿಕರು (11.55) 2013ಕ್ಕೆ ಹೋಲಿಸಿದರೆ 2014ರಲ್ಲಿ ಹೆಚ್ಚು ಇರುತ್ತದೆ.

●.2013-14ನೇ ಸಾಲಿನಲ್ಲಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯು ಭಾರಿ ಮತ್ತು ಮಧ್ಯಮ ಖನಿಜಗಳಿಂದ ರೂ. ರೂ.1282.06 ಕೋಟಿಗಳನ್ನು ರಾಜಧನ (Royalty)ವಾಗಿ ಸಂಗ್ರಹಿಸಿದ್ದು, 2014-15 ನೇ ಸಾಲಿನಲ್ಲಿ ಇದರ ಗುರಿಯು ರೂ.1750 ಕೋಟಿಗಳಾಗಿದೆ.

●.ರಾಜ್ಯಕ್ಕೆ ಬರುತ್ತಿರುವ ಪ್ರವಾಸಿಗಳ ಸಂಖ್ಯೆಯು 2011ರಲ್ಲಿ 8.41 ಕೋಟಿ ಇದ್ದು, 2013 ರಲ್ಲಿ 9.81 ಕೋಟಿಗೆ ಪ್ರವಾಸಿಗಳ ಸಂಖ್ಯೆ ನಿರಂತರವಾಗಿ ಏಕಪ್ರಕಾರವಾಗಿ ಏರಿಕೆಯಾಗುತ್ತಿದೆ, ಇದು ಸಮಗ್ರವಾಗಿ ಶೇಕಡ 16.64 ರಷ್ಟು ಹೆಚ್ಚಾಗಿರುವುದನ್ನು ಸೂಚಿಸುತ್ತದೆ.


☀Ⅳ. ಉದ್ಯೋಗ ಮತ್ತು ಕಾರ್ಮಿಕರ ಕಲ್ಯಾಣ:
━━━━━━━━━━━━━━━━━━━━━━━━━

                                    — ಉದ್ಯೋಗ ನೀಡಿಕೆಯು ಮೂರು ಪ್ರಮುಖ ಅಂಶಗಳ ಮೇಲೆ ಅಂದಾಜಿಸಲಾಗಿದೆ ಅಂದರೆ, ಆದಾಯ, ವರ್ಷಗಳ ಅವಧಿಯಲ್ಲಿನ ಉದ್ಯೋಗ ಸ್ಥಿತಿ ಸ್ಥಾಪಕತ್ವ ಮತ್ತು 2013-14ರ ಒಟ್ಟು ಆಂತರಿಕ ಉತ್ಪನ್ನದ ನಿರೀಕ್ಷಿತ ಅಂದಾಜುಗಳು. 2013-14 ನೇ ಸಾಲಿನಲ್ಲಿ 297.84 ಲಕ್ಷ ಮಾನವ ದಿನಗಳಾಗಿದ್ದು ಕಳೆದ ಸಾಲಿನಲ್ಲಿ 292.57 ಲಕ್ಷ ಮಾನವ ದಿನಗಳಾಗಿರುತ್ತದೆ.

●.ಕಾರ್ಮಿಕ ಜನಸಂಖ್ಯೆಯ ಅನುಪಾತವು 2011ರಲ್ಲಿ ಲಿಂಗಭೇಧವಿಲ್ಲದೇ ಸಾಮಾನ್ಯವಾಗಿ ಏರಿಕೆಯಾಗಿದ್ದು, ಪ್ರಮುಖವಾಗಿ ನಗರ ಪ್ರದೇಶಗಳಲ್ಲಿ 2001ಕ್ಕೆ ಹೋಲಿಸಿದಾಗ ಹೆಚ್ಚಾಗಿರುತ್ತದೆ (ಶೇಕಡ 4). ಇದೇ ಅವಧಿಯಲ್ಲಿ ಮಹಿಳಾ ಕಾರ್ಮಿಕ ಜನಸಂಖ್ಯೆ ಅನುಪಾತವು (WPR) ಗ್ರಾಮೀಣ ಕರ್ನಾಟಕದಲ್ಲಿ ಅಲ್ಪ ಇಳಿಕೆಯಾಗಿರುತ್ತದೆ.

●.ಪ್ರಧಾನ ಕಾರ್ಮಿಕರ ಸಂಖ್ಯೆಯಲ್ಲಿ 2001ರಿಂದ 2011ಕ್ಕೆ ಅಲ್ಪ ಏರಿಕೆಯಾಗಿದ್ದು (ಶೇಕಡ 1.66) ಅಲ್ಪಾವಧಿ ಕಾರ್ಮಿಕರ ಸಂಖ್ಯೆಯಲ್ಲಿ ಅಲ್ಪ ಇಳಿಕೆಯಾಗಿರುತ್ತದೆ. (ಶೇಕಡ 1.66).

●.2001 ರಿಂದ 2011 ರ ಅವಧಿಯಲ್ಲಿ ಕೃಷಿ ಕಾರ್ಮಿಕರ ಸಂಖ್ಯೆಯು ಶೇಕಡ 14.92 ರಷ್ಟು ಏರಿಕೆಯಾಗಿದ್ದರೂ, ಒಟ್ಟು ಉದ್ಯೋಗಸ್ಥರ ಅನುಪಾತದಲ್ಲಿ ಶೇಕಡ 0.73ರಷ್ಟು ಅಲ್ಪ ಇಳಿಕೆಯಾಗಿರುತ್ತದೆ.

●.ರಾಜ್ಯ ಮಟ್ಟದ ಒಟ್ಟು ಕಾರ್ಮಿಕರಲ್ಲಿ ಇತರೆ ಕಾರ್ಮಿಕ ವರ್ಗದವರ ಸಂಖ್ಯೆಯು ಅತ್ಯಂತ ಹೆಚ್ಚಾಗಿದ್ದು, ಅಂದರೆ 1,32,22,758 ಅಥವಾ ಶೇಕಡ 47.44 ರಷ್ಟು ಇರುತ್ತದೆ. 2011 ನೇ ಜನಗಣತಿ ಪ್ರಕಾರ ಇತರೆ ಕಾರ್ಮಿಕರ ಸಂಖ್ಯೆಯು ಶೇಕಡ 7.23ರಷ್ಟು ಏರಿಕೆಯಾಗಿರುತ್ತದೆ.

●.ಕೆಲವು ಆಯ್ದ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಪುರುಷ ಕಾರ್ಮಿಕ ಭಾಗವಹಿಸುವಿಕೆ ದರವು (ಎಲ್‍ಎಫ್‍ ಪಿಆರ್) ಹೆಚ್ಚಾಗಿರುತ್ತದೆ. (ಆಂದ್ರ ಪ್ರದೇಶ ಹಾಗೂ ರಾಷ್ಟ್ರ ಮಟ್ಟದಲ್ಲಿ ಹೊರತು ಪಡಿಸಿ) ಕೆಲವು ರಾಜ್ಯಗಳ ನಿರುದ್ಯೋಗ ದರವು ಸಹ ಉಳಿದ ದಕ್ಷಿಣದ ರಾಜ್ಯಗಳಿಗಿಂತ ಕಡಿಮೆ ಇರುತ್ತದೆ.

●.ಕರ್ನಾಟಕವು ಎದುರಿಸುತ್ತಿರುವ ಪ್ರಮುಖ ಉದ್ಯೋಗ ಸವಾಲುಗಳು ಹೊಸ ಉದ್ಯೋಗಗಳ ಸೃಷ್ಠಿಸುವುದು ಹಾಗೂ ಪ್ರಸ್ತುತ ಉದ್ಯೋಗಗಳ ಗುಣಮಟ್ಟ ಸುಧಾರಿಸುವುದು ಇವೆರಡನ್ನು ಒಳಗೊಂಡಿರುತ್ತದೆ. ವೇಗವಾದ ಆರ್ಥಿಕ ಬೆಳವಣಿಯೇ ಇದರ ಪ್ರಮುಖವಾಗಿರುವ ಸವಾಲಾಗಿರುತ್ತದೆ.

●.ಉದ್ಯೋಗವನ್ನು ವೇಗವಾಗಿ ಬೆಳೆಸುವ ದೃಷ್ಟಿಯಿಂದ ವಲಯಗಳಲ್ಲಿ ಮತ್ತು ಚಟುವಟಿಕೆಗಳನ್ನು ತುಲನಾತ್ಮಕವಾಗಿ ಹೆಚ್ಚಿನ ಸ್ಥಿತಿಸ್ಥಾಪಕತ್ವವನ್ನು ಸಾಧಿಸುವ ಉದ್ಧೇಶದೊಂದಿಗೆ ನಿರ್ದಿಷ್ಟವಾಗಿ ಹೆಚ್ಚಿನ ಆರ್ಥಿಕ ಬೆಳವಣಿಗೆ ಸಾಧಿಸುವ ಗುರಿಯಾಗಿರುತ್ತದೆ.

...ಮುಂದುವರೆಯುವುದು.

(courtesy :Karnataka Economic Survey)

No comments:

Post a Comment