"ಮನುಷ್ಯ ದೀಪವಾದರೂ ಆಗಬೇಕು, ಕನ್ನಡಿಯಾದರೂ ಆಗಬೇಕು. ಒಂದು ಬೆಳಕನ್ನು ಕೊಡುತ್ತದೆ ಮತ್ತೊಂದು ಅದನ್ನು ಪ್ರತಿಬಿಂಬಿಸುತ್ತದೆ. ಪ್ರತಿಯೊಬ್ಬರೂ ದೀಪ ಆಗದೇ ಹೋಗಬಹುದು ಆದರೆ ಕನ್ನಡಿ ಆಗಬಲ್ಲರು. ತಿಳಿದಿರುವ ಜ್ಞಾನವನ್ನು ಮತ್ತೊಬ್ಬರಿಗೆ ಹಂಚುವುದೇ ಜೀವನ.."—ಅರಿಸ್ಟಾಟಲ್

Monday 20 July 2015

☀ ಸಾಮಾನ್ಯ ಜ್ಞಾನ (ಭಾಗ - 16)  ( General Knowledge (Part-16))  ☆.. ಪ್ರಚಲಿತ ಘಟನೆಗಳೊಂದಿಗೆ ...

☀ ಸಾಮಾನ್ಯ ಜ್ಞಾನ (ಭಾಗ - 16)
( General Knowledge (Part-16))
☆.. ಪ್ರಚಲಿತ ಘಟನೆಗಳೊಂದಿಗೆ ...
━━━━━━━━━━━━━━━━━━━━━━━━━━━━━━━━━━━━━━━━━━━━━

★ ಪ್ರಚಲಿತ ಘಟನೆಗಳು-2015.
(Current Affairs-2015)

★ ಸಾಮಾನ್ಯ ಜ್ಞಾನ
(General Knowledge)


661) ಪ್ರಸ್ತುತ ಭಾರತದ ವಿದೇಶಿ ಹೂಡಿಕೆದಾರರಲ್ಲಿ ಜರ್ಮನಿಯು ಎಷ್ಟನೇಯ ದೊಡ್ಡ ದೇಶವಾಗಿದೆ?
●.8ನೇ


662) ಪ್ರಸ್ತುತ ಫ್ರಾನ್ಸ್ ರಾಷ್ಟ್ರದ ಅಧ್ಯಕ್ಷರು ಯಾರು?
●.ಫ್ರಾಂಗ್ವ ಹೊಲಾನ್ಡ್


663) ಅಂತಾರಾಷ್ಟ್ರೀಯ ಯೋಗ ದಿನ ಯಾವಾಗ ಆಚರಿಸಲಾಗುತ್ತದೆ?
●.ಜೂನ್ 21ರಂದು


664) ಕರ್ನಾಟಕ ಚಲನಚಿತ್ರ ಅಕಾಡೆಮಿಯ ಅಧ್ಯಕ್ಷರು ಯಾರು?  
●.ಎಸ್.ವಿ. ರಾಜೇಂದ್ರಸಿಂಗ್ ಬಾಬು


665) ಪ್ರಸ್ತುತ ಕರ್ನಾಟಕ ರಾಜ್ಯದಲ್ಲಿ ಇರುವ ಗ್ರಾಮ ಪಂಚಾಯ್ತಿಗಳು ಎಷ್ಟು?
●.5,844


666) ಪ್ರಸ್ತುತ ಕರ್ನಾಟಕ ರಾಜ್ಯ ಚುನಾವಣಾ ಆಯುಕ್ತ ಯಾರು?
●.ಪಿ.ಎನ್‌. ಶ್ರೀನಿವಾಸಾಚಾರಿ


667) ಸಮಗ್ರ ಪರಿಷ್ಕರಣೆ ಮಾಡಲು ರಚಿಸಿರುವ ಪಠ್ಯಪುಸ್ತಕ ಪರಿಷ್ಕರಣಾ ಸಮಿತಿಗಳ ಅಧ್ಯಕ್ಷರನ್ನಾಗಿ ಸರ್ಕಾರವು ಯಾರನ್ನು ನೇಮಕ ಮಾಡಿದೆ?
●.ಸಾಹಿತಿ ಪ್ರೊ.ಬರಗೂರು ರಾಮಚಂದ್ರಪ್ಪ

668) ಇತ್ತೀಚೆಗೆ (2nd May, 2015) ಗ್ರಾಮ ಪಂಚಾಯ್ತಿಗಳಲ್ಲಿ ಮೊಬೈಲ್‌ ಮೂಲಕ ತೆರಿಗೆ ಸಂಗ್ರಹಿಸುವ ಇ–ಪಾವತಿ ವ್ಯವಸ್ಥೆಯನ್ನು ರಾಜ್ಯದಲ್ಲೇ ಪ್ರಥಮವಾಗಿ ಯಾವ ಜಿಲ್ಲೆಯಲ್ಲಿ ಜಾರಿ ಮಾಡಲಾಗಿದೆ?
●.ಉತ್ತರ ಕನ್ನಡ.


669) ಇತ್ತೀಚೆಗೆ (6th May, 2015) ರಾಜ್ಯದಲ್ಲಿನ ಲೈಂಗಿಕ ವೃತ್ತಿನಿರತರ ಅಭ್ಯುದಯಕ್ಕಾಗಿ ಪ್ರತ್ಯೇಕ ನೀತಿ ರೂಪಿಸಲು ರಚಿಸಿರುವ ಸಮಿತಿಯ ಅಧ್ಯಕ್ಷರು ಯಾರು?
●.ವಿಧಾನ ಪರಿಷತ್‌ ಸದಸ್ಯೆ ಜಯಮಾಲಾ


670) ದಕ್ಷಿಣ ಆಫ್ರಿಕಾದ ಮೊದಲ ಚುನಾಯಿತ ಅಧ್ಯಕ್ಷ ನೆಲ್ಸನ್ ಮಂಡೇಲಾ ಅವರ ಆತ್ಮಚರಿತ್ರೆಯ ಹೆಸರೇನು?
●.‘ಲಾಂಗ್ ವಾಕ್ ಟು ಫ್ರೀಡಂ’


671) ಇತ್ತೀಚೆಗೆ ಕರ್ನಾಟಕದಲ್ಲಿ ಹೊಸ ಪ್ರವಾಸೋದ್ಯಮ ನೀತಿ ಜಾರಿಗೆ ತರುವ ನಿಟ್ಟಿನಲ್ಲಿ ಸರ್ಕಾರವು ಯಾರ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲಾಗುತ್ತಿದೆ?
●.ಮೋಹನ್‌ದಾಸ್‌ ಪೈ


672) ಪ್ರಸ್ತುತ ದಕ್ಷಿಣ ಕೊರಿಯಾ ರಾಷ್ಟ್ರದ ಅಧ್ಯಕ್ಷ ಯಾರು?
●.ಪಾರ್ಕ್‌ ಗ್ಯೂನ್‌ ಹೈ


673) ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳ (ಪಿಎಸ್‌ಯು) ಆಡಳಿತ ಸುಧಾರಣೆಗೆ ಸಂಬಂಧಿಸಿದಂತೆ ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ)ನೇಮಿಸಿದ್ದ ಸಮಿತಿ ಯಾವುದು?
●.ಪಿ.ಜೆ.ನಾಯಕ್‌ ನೇತೃತ್ವದ ಸಮಿತಿ.


674) ಇತ್ತೀಚೆಗೆ ಕೇಂದ್ರ ಜಾಗೃತ ದಳದ ಆಯುಕ್ತರನ್ನಾಗಿ (ಸಿವಿಸಿ) ಯಾರನ್ನು ನೇಮಕ ಮಾಡಲಾಯಿತು?
●.ಕೆ.ವಿ.ಚೌಧರಿ


675) ದಿ ಇಮ್ಮಾರ್ಟಲ್ಸ್ ಕೃತಿಯನ್ನು ರಚಿಸಿದವರು ಯಾರು?
●.ಅಮಿತ್ ಚೌಧರಿ


676) 'ತಾನಸೇನ್ ಸಮ್ಮಾನ್ ಪ್ರಶಸ್ತಿ'ಯನ್ನು ಕೆಳಕಂಡ ಯಾವ ರಾಜ್ಯ ನೀಡುತ್ತದೆ?
●.ಮಧ್ಯಪ್ರದೇಶ


677) ’ಆಫಿಸರ್ ಆಫ್ ದಿ ಲೀಜನ್ ಆಫ್ ಹಾನರ್’ ಇದು ಫ್ರಾನ್ಸ್ ಸರ್ಕಾರದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾಗಿದ್ದು, ಇದನ್ನು 1802 ರಲ್ಲಿ ನೆಪೋಲಿಯನ್ ಬೋನಾಪಾರ್ಟ್ ಆರಂಭಿಸಿದ್ದನು. ಇತ್ತೀಚೆಗೆ ಈ ಪ್ರಶಸ್ತಿಯನ್ನು ಪಡೆದ ಭಾರತದ ಮಾಜಿ ವಿತ್ತ ಸಚಿವ ಯಾರು?
●.ಯಶವಂತ್ ಸಿನ್ಹಾ


678) ಇತ್ತೀಚೆಗೆ ಫೋರ್ಬ್ಸ್ ನಿಯತಕಾಲಿಕೆ ತನ್ನ 12ನೇ ವರ್ಷದ ವಿಶ್ವದ 100 ಪ್ರಭಾವಿ ಮಹಿಳೆಯರ ಪಟ್ಟಿಯಲ್ಲಿ ಭಾರತದ ಎಷ್ಟು ಮಹಿಳೆಯರು ಸ್ಥಾನ ಪಡೆದಿದ್ದಾರೆ?
●.ನಾಲ್ವರು ಮಹಿಳೆಯರು
1.ಎಸ್​ಬಿಐನ ಮುಖ್ಯಸ್ಥೆ ಅರುಂಧತಿ ಭಟ್ಟಾಚಾರ್ಯ,
2.ಐಸಿಐಸಿಐಬ್ಯಾಂಕ್​ನ ಮುಖ್ಯಸ್ಥೆ ಚಂದಾ ಕೊಚ್ಚಾರ್,
3.ಬಯೋಕಾನ್ ಸ್ಥಾಪಕಿ ಕಿರಣ್ ಮಜುಂಮ್ದಾರ್ ಷಾ,
4.ಎಚ್​ಟಿ ಮೀಡಿಯಾ ಮುಖ್ಯಸ್ಥೆ ಶೋಭಾನಾ ಭಾರ್ತಿಯಾ


679) ಭಾರತೀಯ ವಾಯುಸೇನೆಯ ಈಗಿನ 'ಏರ್ ಚೀಫ್ ಮಾರ್ಶಲ್' ಯಾರು?
●.ಅರೂಪ್ ರಾಹಾ


680) ಇತ್ತೀಚೆಗೆ ವಿಶ್ವಸಂಸ್ಥೆ ತರಬೇತಿ ಮತ್ತು ಸಂಶೋಧನಾ ಸಂಸ್ಥೆಯ (ಯುನಿಟರ್) ಮುಖ್ಯಸ್ಥರಾಗಿ ನೇಮಕಗೊಂಡ ಭಾರತೀಯ ಯಾರು?
●.ನಿಖಿಲ್ ಸೇಥ್


681) ಇತ್ತೀಚೆಗೆ ಅಮೆರಿಕದ ಶ್ವೇತಭವನ ನೀಡುವ ‘ಬದಲಾವಣೆಯ ರೂವಾರಿ’ (ಚಾಂಪಿಯನ್‌ ಆಫ್‌ ಚೇಂಜ್‌) ಪ್ರಶಸ್ತಿಗೆ ಆಯ್ಕೆಯಾದ ಭಾರತ ಮೂಲದವರು ಯಾರು?
●.ಸುನೀತಾ ವಿಶ್ವನಾಥ್‌.
(‘ವುಮೆನ್‌ ಫಾರ್‌ ಆಫ್ಘನ್‌ ವುಮೆನ್‌’ ಹಾಗೂ ಪ್ರಗತಿಪರ ಹಿಂದೂಗಳ ಒಕ್ಕೂಟ ‘ಸಾಧನಾ’ ಸಂಘಟನೆಗಳ ಸಹ ಸಂಸ್ಥಾಪಕಿ ಹಾಗೂ ಮಂಡಳಿಯ ಸಕ್ರಿಯ ಸದಸ್ಯೆ)


682) ಇತ್ತೀಚೆಗೆ ‘ಫೆಮಿನಿಸ್ಟ್‌ ಮೆಜಾರಿಟಿ ಫೌಂಡೇಶನ್ಸ್‌’ನ 2011ನೇ ಸಾಲಿನ ಜಾಗತಿಕ ಮಹಿಳಾ ಹಕ್ಕುಗಳ ಪ್ರಶಸ್ತಿಗೆ ಪಾತ್ರರಾವರು ಯಾರು?
●.ಸುನೀತಾ ವಿಶ್ವನಾಥ್
(‘ವುಮೆನ್‌ ಫಾರ್‌ ಆಫ್ಘನ್‌ ವುಮೆನ್‌’ ಸಂಘಟನೆಯಲ್ಲಿ ಸಲ್ಲಿಸಿದ ಸೇವೆಗೆ)


683) ಇತ್ತೀಚೆಗೆ ವಿದೇಶ ಪ್ರವಾಸದಲ್ಲಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ಜರ್ಮನಿಯ ’ಹ್ಯಾನೋವರ್ ಮೇಳ’ದಲ್ಲಿ ವ್ಯಕ್ತಪಡಿಸಿದ '3D'ಗಳ ಅರ್ಥವೇನು?
●.’ಡೆಮಾಗ್ರಫಿ, ಡೆಮಾಕ್ರಸಿ ಮತ್ತು ಡಿಮ್ಯಾಂಡ್ (ಜನಸಂಖ್ಯೆ, ಪ್ರಜಾಪ್ರಭುತ್ವ ಮತ್ತು ಬೇಡಿಕೆ)


684) 'ಮದೀಬಾ' ಎಂಬ ಹೆಸರಿನಿಂದ ಪ್ರಖ್ಯಾತರಾದವರು ಯಾರು ?
●.ನೆಲ್ಸನ್ ಮಂಡೇಲಾ


685) ದಕ್ಷಿಣ ಆಫ್ರಿಕಾದಲ್ಲಿನ ತುಳಿತಕ್ಕೊಳಗಾದ ಸಮುದಾಯಗಳಿಗೆ ಸಲ್ಲಿಸಿದ ಅಪಾರ ಸೇವೆಯನ್ನು ಪರಿಗಣಿಸಿ ಫ್ರಾನ್ಸ್‌ ಸರ್ಕಾರವು ಇತ್ತೀಚೆಗೆ ಭಾರತ ಮೂಲದ ವ್ಯಕ್ತಿಯೊಬ್ಬರಿಗೆ‌ ನೈಟ್‌ಹುಡ್‌ ಪ್ರಶಸ್ತಿ ನೀಡಿ ಗೌರವಿಸಿದೆ. ಅವರ ಹೆಸರೇನು?
●.ಅಹ್ಮದ್


686) ಭಾರತೀಯ ಮಹಿಳಾ ಬ್ಯಾಂಕಿನ (BMB) ಪ್ರಸ್ತುತ ಅಧ್ಯಕ್ಷರು ಯಾರು?
●.ಉಷಾ ಅನಂತಸುಬ್ರಮಣ್ಯ


687) ಅಂಟಾರ್ಕ್ಟಿಕಾದಲ್ಲಿರುವ ಪರ್ವತವೊಂದಕ್ಕೆ ಭಾರತೀಯ ಮೂಲದವರೊಬ್ಬರ ಹೆಸರನ್ನು ಇಡಲಾಗಿದೆ. ಅವರ ಹೆಸರೇನು?
●.ಅಖೋರಿ ಸಿನ್


688) ಪ್ರಸ್ತುತ ದಕ್ಷಿಣ ಕೊರಿಯಾ ದೇಶದ ಅಧ್ಯಕ್ಷರು ಯಾರು?
●.ಪಾರ್ಕ್ ಗಿಯುನ್ ಹೆ


689) ಇತ್ತೀಚೆಗೆ ಫೋರ್ಬ್ಸ್ ನಿಯತಕಾಲಿಕೆ ತನ್ನ 12ನೇ ವರ್ಷದ ವಿಶ್ವದ 100 ಪ್ರಭಾವಿ ಮಹಿಳೆಯರ ಪಟ್ಟಿಯಲ್ಲಿ ವಿಶ್ವದ ಅತ್ಯಂತ ಪ್ರಭಾವಿ ಮಹಿಳೆಯಾಗಿ ಮೊದಲ ಸ್ಥಾನ ಪಡೆದವರು ಯಾರು?
●.ಜರ್ಮನ್ ಚಾನ್ಸೆಲರ್ ಏಂಜೆಲಾ ಮೆರ್ಕೆಲ್


690) ದೇಹದಲ್ಲಿ ವಯಸ್ಸನ್ನು ನಿರ್ಧರಿಸುವಲ್ಲಿ ಪ್ರಮುಖ ಪಾತ್ರ ವಹಿಸುವ, ಬೇಗ ವಯಸ್ಸಾದಂತೆ ತೋರಲು, ದೇಹ ಸುಕ್ಕುಗಟ್ಟಲು ಕಾರಣವಾಗುವ ಕಿಣ್ವಗಳು ಯಾವವು?
●.11ಬೇಟಾ-ಎಚ್​ಎಸ್​ಡಿ1 ಕಿಣ್ವಗಳು.

No comments:

Post a Comment