☀ಅಧ್ಯಾಯ : 1.2 ) ಕರ್ನಾಟಕ ರಾಜ್ಯದ ಆರ್ಥಿಕ ಸಮೀಕ್ಷೆ : (ರಾಜ್ಯದ ಆದಾಯ ಮತ್ತು ಬೆಲೆಗಳು):(ಸಂಕ್ಷಿಪ್ತ ಅವಲೋಕನ)
( Karnataka Economic Survey -Income and Prices of the Karnataka State )
━━━━━━━━━━━━━━━━━━━━━━━━━━━━━━━━━━━━━━━━━━━━━
...... ಮುಂದುವರಿದ ಭಾಗ.
✧.ಕರ್ನಾಟಕ ರಾಜ್ಯದ ಆರ್ಥಿಕತೆ.
(Karnataka state economy)
✧.ಐಎಎಸ್ / ಕೆಎಎಸ್ ಪರೀಕ್ಷೆಗಳಿಗಾಗಿ ಸಾಮಾನ್ಯ ಅಧ್ಯಯನ.
(GENERAL STUDIES FOR IAS/KAS)
●•ಕೇಂದ್ರ ಹಾಗೂ ರಾಜ್ಯ ಲೋಕಸೇವಾ ಆಯೋಗವು ನಡೆಸುವ ಪೂರ್ವಭಾವಿ ಹಾಗೂ ಮುಖ್ಯ ಪರೀಕ್ಷೆಗಳಿಗಾಗಿ ತುಂಬಾ ಉಪಯುಕ್ತವಾಗಿರುವ "ಕರ್ನಾಟಕ ರಾಜ್ಯದ ಆರ್ಥಿಕತೆ" (Karnataka state economy) ಕುರಿತ ಅಧ್ಯಯನ ಸಾಮಗ್ರಿಗಳನ್ನು ಪ್ರಸ್ತುತ ನೂತನ ಅಂಕಿ ಅಂಶಗಳನ್ನೊಳಗೊಂಡಂತೆ ಮಾಹಿತಿಯನ್ನು ಇಲ್ಲಿ ಪ್ರಸ್ತುತ ಪಡಿಸುವ ಒಂದು ಚಿಕ್ಕ ಪ್ರಯತ್ನ.
●. ಕರ್ನಾಟಕ ರಾಜ್ಯದ ಆದಾಯ ಮತ್ತು ಬೆಲೆಗಳು :
(Income and Prices of the Karnataka State)
━━━━━━━━━━━━━━━━━━━━━━━━━━━━━━━━━━━━
— 2014-15 ನೇ ಸಾಲಿನ ಆರ್ಥಿಕ ಸಮೀಕ್ಷೆಯು ರಾಜ್ಯದ ಆರ್ಥಿಕ ಮತ್ತು ಸಾಮಾಜಿಕ ಕ್ಷೇತ್ರಗಳಲ್ಲಿ ಸಾಧಿಸಿರುವ ಅಭಿವೃದ್ಧಿಯ ಪ್ರಗತಿಯ ಸಂಕ್ಷಿಪ್ತ ನೋಟವನ್ನು ನೀಡುತ್ತದೆ. ಬಹು ವರ್ಷಗಳಿಂದಲೂ ಆರ್ಥಿಕ ಗಣತಿಯ ಮುಖ್ಯ ಉದ್ದೇಶವು ರಾಜ್ಯ ಸರ್ಕಾರದ ಆರ್ಥಿಕ ನೀತಿಯ ಮತ್ತು ಕಾರ್ಯಕ್ರಮಗಳ ವಿವರಗಳನ್ನು ಮತ್ತು ರಾಜ್ಯದ ಒಟ್ಟಾರೆ ಕಾರ್ಯ ಪ್ರಗತಿಯ ವಿವರಣೆಯನ್ನು ನೀಡುವುದಾಗಿದೆ. ಇದುವರೆವಿಗೂ ರಾಜ್ಯದ ಆರ್ಥಿಕ ಆಯವ್ಯಯ ಮತ್ತು ಇತರೆ ಮುಖ್ಯ ಆರ್ಥಿಕ ಉದ್ದೇಶದ ಮುಖ್ಯ ವಿವರಣೆಗಳು ಆರ್ಥಿಕ ಸಮೀಕ್ಷೆಯಲ್ಲಿಯೇ ಅಧೀಕೃತವಾಗಿ ದೊರಕುತ್ತದೆ.
★ ಆರ್ಥಿಕ ಸಮೀಕ್ಷೆಯ ಮುಖ್ಯಾಂಶಗಳನ್ನು ಈ ಕಳಕಂಡಂತೆ ನೀಡಲಾಗಿದೆ.
●.ರಾಜ್ಯದ ಆದಾಯ ಮತ್ತು ಬೆಲೆಗಳು :
━━━━━━━━━━━━━━━━━━━━━
✧.ರಾಜ್ಯದ ಒಟ್ಟು ಆಂತರಿಕ ಉತ್ಪನ್ನದ (GSDP) ತಲಾ ಆದಾಯವು ಸ್ಥಿರ ಬೆಲೆಗಳಲ್ಲಿ (2004-05) ರಲ್ಲಿ ಶೇಕಡ 7.0 ರಷ್ಟು ಏರಿಕೆಯಾಗುವ ನಿರೀಕ್ಷೆಯಿದ್ದು, ಆದಾಯವು 2013-14ರಲ್ಲಿ ರೂ.321455 ಕೋಟಿಗಳಿಂದ 2014-15 ನೇ ಸಾಲಿಗೆ ರೂ.344106 ಕೋಟಿಗಳಿಗೆ ಏರಿಕೆಯಾಗುವ ನಿರೀಕ್ಷೆಯಿದೆ.
✧.ರಾಜ್ಯದ ಆದಾಯವು ಹೆಚ್ಚಾಗಿರುವದಕ್ಕೆ ಮುಖ್ಯ ಕಾರಣ ಸೇವಾ ವಲಯದಲ್ಲಿ ಶೇಕಡ 8.9 ರಷ್ಟು ಪ್ರಗತಿಯಾಗಿರುತ್ತದೆ.
✧.2013-14 ನೇ ಸಾಲಿನಲ್ಲಿ ರಾಜ್ಯದ ಒಟ್ಟು ಆಂತರಿಕ ಉತ್ಪನ್ನದ (GSDP) ಕೃಷಿ ಮತ್ತು ಕೃಷಿಗೆ ಸಂಬಂಧಪಟ್ಟ ಕ್ಷೇತ್ರದಲ್ಲಿ ಶೇಕಡ 9.4 ರಷ್ಟು ಪ್ರಗತಿಯಾಗಿದ್ದು, 2014-15 ನೇ ಸಾಲಿನಲ್ಲಿ ಇದು ಶೇ.4.5 ರಷ್ಟು ಕಡಿಮೆಯಾಗುವ ನಿರೀಕ್ಷೆ ಇದೆ. ಇದಕ್ಕೆ ಮುಖ್ಯ ಕಾರಣ 2014-15 ನೇ ಸಾಲಿನಲ್ಲಿ ಆಹಾರ ಬೆಳೆಗಳ ಉತ್ಪಾದನೆಯಲ್ಲಿ ಶೇ.3 ರಷ್ಟು ಕುಂಠಿತವಾಗಿರುವುದು.
✧.ಕೈಗಾರಿಕೆ ವಲಯದಲ್ಲಿ 2013-14 ನೇ ಸಾಲಿನಲ್ಲಿ ಗಮನಿಸಲಾದ ಶೇ.4.2 ರಷ್ಟು ಸಾಧನೆಗೆ, 2014-15 ನೇ ಸಾಲಿನಲ್ಲಿ ಶೇ.4.4 ರಷ್ಟು ಹೆಚ್ಚು ಪ್ರಗತಿಯಾಗುವ ನಿರೀಕ್ಷೆ ಇದೆ.
✧.ಸೇವಾ ವಲಯದಲ್ಲಿ 2013-14 ನೇ ಸಾಲಿನಲ್ಲಿ ಶೇ.8.0 ರಷ್ಟು ಸಾಧನೆಗೆ, 2014-15ನೇ ಸಾಲಿನಲ್ಲಿ ಶೇ.8.9 ರಷ್ಟು ಗಮನೀಯವಾಗಿ ಹೆಚ್ಚಾಗುವ ನಿರೀಕ್ಷೆ ಇದೆ.
✧.ರಾಜ್ಯದ ಒಟ್ಟು ಆಂತರಿಕ ಉತ್ಪನ್ನದಲ್ಲಿ, ಕೃಷಿ ಮತ್ತು ಕೃಷಿಗೆ ಸಂಬಂದಪಟ್ಟ ಕ್ಷೇತ್ರದಲ್ಲಿ ಹಾಗೂ ಸೇವಾ ವಲಯದಲ್ಲಿ ಒಟ್ಟಾರೆ ಕಂಡುಬರುವ ಕನಿಷ್ಟ ಏರಿಕೆಯು 2013-14 ನೇ ಸಾಲಿನಲ್ಲಿ ರಲ್ಲಿ ಶೇ. 17.1 ಮತ್ತು ಶೇ.58.2 ಕ್ಕಿಂತ 2014-15 ನೇ ಸಾಲಿನಲ್ಲಿ ಶೇ.17.5 ಮತ್ತು 59.1 ರಷ್ಟು ಹೆಚ್ಚಾಗಿದೆ.
✧.ಇದೇ ಸಮಯದಲ್ಲಿ ರಾಜ್ಯದ ಕೈಗಾರಿಕೆ ವಲಯದಲ್ಲಿ 2013-14 ನೇ ಸಾಲಿನಲ್ಲ್ಲಿ ಶೇ.23.7 ಕ್ಕಿಂತ, 2014- 15ನೇ ಸಾಲಿನಲ್ಲಿ ಶೇ.23.4 ರಷ್ಟು ಕಡಿಮೆಯಾಗಿದೆ.
✧.ರಾಜ್ಯದ ತಲಾ ಆದಾಯವು (ರಾಜ್ಯದ ಒಟ್ಟು ಆಂತರಿಕ ಉತ್ಪನ್ನದ ತಲಾ ಆದಾಯ) ಸ್ಥಿರ ಬೆಲೆಗಲ್ಲಿ 2013-14 ನೇ ಸಾಲಿನಲ್ಲಿದ್ದ ರೂ.89545 ಗಿಂತ 2014-15 ನೇ ಸಾಲಿಗೆ ರೂ.100594 ಕ್ಕೆ ಅಂದರೆ ಶೇ. 13.5 ರಷ್ಟು ಹೆಚ್ಚಾಗಬಹುದೆಂದು ಅಂದಾಜಿಸಲಾಗಿದೆ.
✧.ತಲಾ ಆದಾಯವು ಸ್ಥಿರ ಬೆಲೆಗಳಲ್ಲಿ (2004-05) 2013-14 ನೇ ಸಾಲಿನಲ್ಲ್ಲಿ ಇದ್ದ ರೂ.46012 ಗಿಂತ 2014-15 ನೇ ಸಾಲಿನಲ್ಲಿ 48907 ಗೆ ಹೆಚ್ಚಾಗಬಹುದೆಂದು ಅಂದಾಜಿಸಲಾಗಿದೆ.
✧.ಡಿಸೆಂಬರ್ 2013 ಅಂತ್ಯಕ್ಕೆ ಅಖಿಲ ಭಾರತ ಮಟ್ಟದ ಸಗಟು ಮಾರಾಟ ಸೂಚ್ಯಂಕ 179.6 ಇದ್ದು, ಇದು ಡಿಸೆಂಬರ್ 2014 ರ ಅಂತ್ಯಕ್ಕೆ 179.8 ರಷ್ಟು ಹೆಚ್ಚಾಗಿದ್ದು, ಇದರಿಂದಾಗಿ ವಾರ್ಷಿಕ ಹಣದುಬ್ಬರ ಶೇ.0.11 ರಷ್ಟು ಏರಿಕೆಯಾಗಿರುತದೆ.
✧.ಡಿಸೆಂಬರ್ 2013 ರಲ್ಲಿ ಇದ್ದ ಗ್ರಾಹಕ ಬೆಲೆ ಸೂಚ್ಯಂಕ 239, ಡಿಸೆಂಬರ್ 2014ಕ್ಕೆ 253 ಕ್ಕೆ ಮುಂದುವರೆದಿರುತ್ತದೆ.
✧.ಹಣದುಬ್ಬರದ ಪ್ರತಿಬಿಂಬದಂತೆ 2014 ನೇ ಡಿಸೆಂಬರ್ ಗೆ ಶೇ.5.86 ರಷ್ಟು ಇದ್ದು, ಇದೇ ಮಾಹೆಯ ಕಳೆದ ವರ್ಷ ಶೇ.9.13 ರಷ್ಟಾಗಿರುತ್ತದೆ.
✧.ಅಖಿಲ ಭಾರತ ಮಟ್ಟದ ಸರಾಸರಿ ಒಟ್ಟು ಮಾರಾಟ ಸೂಚ್ಯಂಕ 2013-14 ನೇ ಸಾಲಿನಲ್ಲಿ ತಲಾ 253 ಇದ್ದು, 2014-15 ನೇ ಸಾಲಿನಲ್ಲಿ 250 ರಷ್ಟು ಇರುತ್ತದೆ, ಅಂದರೆ ಕಳೆದ ವರ್ಷಕ್ಕಿಂತ ಶೇ.6.38 ರಷ್ಟು ಏರಿಕೆಯಾಗಿದೆ.
✧.ಕೃಷಿ ಕಾರ್ಮಿಕರ ಅಖಿಲ ಭಾರತ ಮಟ್ಟದ ಗ್ರಾಹಕ ಬೆಲೆ ಸೂಚ್ಯಂಕವು 2014ರ ಎಪ್ರಿಲ್ ಗೆ ಶೇಕಡ 4.67 ಇದ್ದು, ಇದು ಡಿಸೆಂಬರ್ 2014ಗೆ ಶೇಕಡ 5.70 ಗೆ ಏರಿಕೆಯಾಗಿದೆ, ರಾಷ್ಟ್ರ ಮಟ್ಟದ ಆಹಾರ ಸೂಚ್ಯಂಕ ಶೇಕಡ 4.13 ಗೆ, ಕರ್ನಾಟಕ ರಾಜ್ಯದ ಆಹಾರ ಸೂಚ್ಯಂಕ ಶೇಕಡ 3.99 ರಷ್ಟು ಇರುತ್ತದೆ.
✧.2014-15 ನೇ ಸಾಲಿಗೆ ಗ್ರಾಮೀಣ ಚಿಲ್ಲರೆ ಬೆಲೆ ಸೂಚ್ಯಂಕವು 2014ರ ಎಪ್ರಿಲ್ ನಲ್ಲಿದ್ದ 3934ರಿಂದ ಡಿಸೆಂಬರ್ 2014ಕ್ಕೆ 4264ರಷ್ಟು ನಿರಂತರವಾಗಿ ಏರಿಕೆಯಾಗಿದ್ದು, ಒಟ್ಟಾರೆ ಶೇಕಡ 8.39ರಷ್ಟು ಕಂಡುಬಂದಿರುತ್ತದೆ, ಮತ್ತು ನಗರ ಚಿಲ್ಲರೆ ಬೆಲೆ ಸೂಚ್ಯಂಕವು 2014ರ ಎಪ್ರಿಲ್ ಗೆ 2716ರಿಂದ ಡಿಸೆಂಬರ್ 2014ಕ್ಕೆ 3093ಕ್ಕೆ ಏರಿಕೆಯಾಗಿದ್ದು ಇದರಿಂದಾಗಿ 377ರಷ್ಟು ಅಂಶಗಳು ಅಂದರೆ ಶೇಕಡ 13.88ರಷ್ಟು ಏರಿಕೆಯಾಗಿದೆ.
...ಮುಂದುವರೆಯುವುದು.
(courtesy :Karnataka Economic Survey)

No comments:
Post a Comment