"ಮನುಷ್ಯ ದೀಪವಾದರೂ ಆಗಬೇಕು, ಕನ್ನಡಿಯಾದರೂ ಆಗಬೇಕು. ಒಂದು ಬೆಳಕನ್ನು ಕೊಡುತ್ತದೆ ಮತ್ತೊಂದು ಅದನ್ನು ಪ್ರತಿಬಿಂಬಿಸುತ್ತದೆ. ಪ್ರತಿಯೊಬ್ಬರೂ ದೀಪ ಆಗದೇ ಹೋಗಬಹುದು ಆದರೆ ಕನ್ನಡಿ ಆಗಬಲ್ಲರು. ತಿಳಿದಿರುವ ಜ್ಞಾನವನ್ನು ಮತ್ತೊಬ್ಬರಿಗೆ ಹಂಚುವುದೇ ಜೀವನ.."—ಅರಿಸ್ಟಾಟಲ್

Thursday 9 July 2015

☀ UNIT: Ⅰ) ಕನ್ನಡ ವ್ಯಾಕರಣ: ಸಂಧಿಗಳು (Kannada Grammar)

☀ UNIT: Ⅰ) ಕನ್ನಡ ವ್ಯಾಕರಣ: ಸಂಧಿಗಳು
(Kannada Grammar)

━━━━━━━━━━━━━━━━━━━━━━━━━━━━━━━━━━━━━━━━━━━━━

★ ಕನ್ನಡ ಸಾಹಿತ್ಯ
(Kannada Literature)

★ ಕನ್ನಡ ವ್ಯಾಕರಣ
(Kannada Grammar)



●. ಮೊದಲ ಮಾತು:
•┈┈┈┈┈┈┈┈┈┈┈•
   — ಕನ್ನಡ ಭಾಷೆಯು ಸುಮಾರು ಎರಡು ಸಾವಿರಕ್ಕೂ ಹೆಚ್ಚು ವರ್ಷಗಳ ಇತಿಹಾಸವನ್ನು ಹೊಂದಿದೆ. ಅಂತೆಯೇ ಅದಕ್ಕೆ ಶಾಸ್ತ್ರೀಯ ಭಾಷೆಯ ಸ್ಥಾನವೂ ದೊರೆತಿದೆ. ಸಂಸ್ಕೃತದಿಂದ ಆಧುನಿಕ ಯುಗದ ಆಂಗ್ಲ ಭಾಷೆಯ ವರೆಗೂ ಹಲವಾರು ಭಾಷೆಗಳ ಪ್ರಭಾವ ಪ್ರೇರಣೆಗೆ ಒಳಗಾಗಿ ಪುಟಕ್ಕಿಟ್ಟ ಚಿನ್ನದಂತೆ ಹೊಳಪನ್ನೂ ಘನತೆಯನ್ನೂ ಪಡೆದುಕೊಂಡಿದೆ. ಕವಿರಾಜ ಮಾರ್ಗಕಾರನಿಂದ ಪ್ರಸ್ತುತ ಆಧುನಿಕ ಸಾಹಿತ್ಯದವರೆಗೂ ಸಾವಿರಾರು ಕವಿ-ಸಾಹಿತಿ-ವಿದ್ವಾಂಸರಿಂದ ಸಮೃದ್ಧವಾಗಿ ಬೆಳೆದು ನಿಂತಿದೆ. ಇದನ್ನು ಬಳಸಿ-ಉಳಿಸಿ-ಬೆಳೆಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ.

     ●.ಒಂದು ಚಿತ್ರ ಪಟವು ಚೌಕಟ್ಟಿನಿಂದ ಹೇಗೆ ಸುರಕ್ಷಿತವೂ ಸುಂದರವೂ ಆಗಿರುತ್ತದೋ ಹಾಗೆಯೇ ಒಂದು ಭಾಷೆಯು  ಶುದ್ಧವೂ ಸುರಕ್ಷಿತವೂ ಆಗಿರಬೇಕಾದರೆ ವ್ಯಾಕರಣ ಬಹಳ ಪ್ರಮುಖವಾದುದು.

     ●.ಕನ್ನಡ ಭಾಷೆಯು ಮೂಲದಲ್ಲಿ ದ್ರಾವಿಡ ಭಾಷೆಯಿಂದ ಕವಲೊಡೆದು ಬೆಳೆದು ಬಂದಿದ್ದರೂ ಅದು ಬೆಳೆದು ಸಮೃದ್ಧವಾಗಿ ನಿಲ್ಲಲು ಸಂಸ್ಕೃತ ಭಾಷೆಯ ಪ್ರಭಾವ ಹೆಚ್ಚು ದಟ್ಟವಾಗಿರುವುದನ್ನು ಅಲ್ಲಗಳೆಯುವಂತಿಲ್ಲ. ಲೆಕ್ಕವಿಲ್ಲದಷ್ಟು ಪದಗಳು ಸಂಸ್ಕೃತ ಭಾಷೆಯಿಂದ ಯಥೇಚ್ಛವಾಗಿ ಹರಿದುಬಂದು ಕನ್ನಡ ನುಡಿ ಬೊಕ್ಕಸವನ್ನು ಶ್ರೀಮಂತಗೊಳಿಸಿವೆ. ಈ ಕಾರಣದಿಂದಲೇ ಕನ್ನಡ ವ್ಯಾಕರಣವು ಸಂಸ್ಕೃತ ವ್ಯಾಕರಣವನ್ನು ಅನುಸರಿಸಿಯೇ ಬೆಳೆದುಬರಬೇಕಾಯಿತು. ಇದು ಸಂಸ್ಕೃತ ವ್ಯಾಕರಣದ ಪಡಿಯಚ್ಚಾಗಿದ್ದರೂ ತನ್ನ ಜಾಯಮಾನಕ್ಕನುಗುಣವಾಗಿ ಹೊಂದಾಣಿಕೆ ಮಾಡಿಕೊಂಡು ತನ್ನ ತನವನ್ನು ಕಾಪಾಡಿಕೊಂಡಿದೆ ಎನ್ನುವುದನ್ನು ಮರೆಯುವಂತಿಲ್ಲ.

     ●.ಸು.ಕ್ರಿ.ಶ.1260 ರಲ್ಲಿ ಜೀವಿಸಿದ್ದ ಕೇಶಿರಾಜನು ಬರೆದಿರುವ 'ಶಬ್ದಮಣಿ ದರ್ಪಣ`ವು ಕನ್ನಡದಲ್ಲಿ ರಚಿತವಾದ ಮೊಟ್ಟ ಮೊದಲ ವ್ಯಾಕರಣ ಗ್ರಂಥವಾಗಿದೆ. ಈ ಗ್ರಂಥದಲ್ಲಿ ಅವನು ಸಂಧಿ, ನಾಮ, ಸಮಾಸ, ತದ್ಧಿತ, ಧಾತು, ಆಖ್ಯಾತ, ಅಪಭ್ರಂಶ, ಅವ್ಯಯ ಎಂದು ಒಟ್ಟು 8 ಪ್ರಕರಣಗಳಲ್ಲಿ ಕನ್ನಡ ವ್ಯಾಕರಣವನ್ನು ಪ್ರಸ್ತುತಪಡಿಸಿದ್ದಾನೆ.


☀ ಸಂಧಿಗಳು :
•┈┈┈┈┈┈┈┈┈┈•
— ನಾವು ಮಾತನಾಡುವಾಗ ಕೆಲವು ಶಬ್ದಗಳನ್ನು ಬಿಡಿಬಿಡಿಯಾಗಿ ಹೇಳುವುದಿಲ್ಲ.  “ಊರುಊರು” ಎಂಬೆರಡು ಶಬ್ದಗಳನ್ನು ‘ಊರೂರು' ಎಂದು ಕೂಡಿಸಿಯೇ ಮಾತನಾಡುತ್ತೇವೆ.

— ಅವನು + ಅಲ್ಲಿ ಎಂಬೆರಡು ಶಬ್ದ ರೂಪಗಳನ್ನು ಅವನಲ್ಲಿ ಎಂದು ಕೂಡಿಸಿ ಹೇಳುತ್ತೇವೆ.  ಮೇಲೆ ಹೇಳಿರುವ ಊರು + ಊರು ಎಂಬ ಶಬ್ದಗಳನ್ನೂ, ‘ಅವನು+ ಅಲ್ಲಿ' ಎಂಬ ಪ್ರಕೃತಿ ಪ್ರತ್ಯಯಗಳನ್ನೂ ಕೂಡಿಸಿಯೇ ಹೇಳುತ್ತೇವೆ. 

— ಅಂದರೆ, ಅವನ್ನು ಸಂಧಿಸಿಯೇ ಹೇಳುತ್ತೇವೆ.ಒಮ್ಮೊಮ್ಮೆ ಶಬ್ದ ಶಬ್ದಗಳನ್ನು ಬಿಡಿಬಿಡಿಸಿ ಹೇಳಿದರೂ, ಪಕೃತಿ ಪ್ರತ್ಯಯಗಳನ್ನು ಮಾತ್ರ ಸಂಧಿಸಿಯೇ ಹೇಳುತ್ತೇವೆ.  ಅವನ್ನು ಬಿಡಿಬಿಡಿಯಾಗಿ ಹೇಳಲಾಗುವುದೇ ಇಲ್ಲ.  

— ಈ ಕೆಳಗೆ ನೋಡಿ:-
•┈┈┈┈┈┈┈┈┈┈┈┈•
★ ಪ್ರಕೃತಿ + ಪ್ರತ್ಯಯ= ಕೂಡಿಸಿದ ರೂಪ
ಆಡು+ಇಸು=ಆಡಿಸು

ಮರ+ಅನ್ನು=ಮರವನ್ನು

ಪುಸ್ತಕ+ಇಂದ=ಪುಸ್ತಕದಿಂದ

ದೇವರು+ಇಗೆ=ದೇವರಿಗೆ


●.ಪದಗಳನ್ನು ಕೂಡಿಸಿಯಾದರೂ ಹೇಳಬಹುದು ಅಥವಾ ಬಿಡಿಬಿಡಿಯಾಗಿಯೂ ಹೇಳಬಹುದು.

★ ಪದ + ಪದ= ಕೂಡಿಸಿದ ರೂಪ - ಕೂಡಿಸದ ರೂಪ
•┈┈┈┈┈┈┈┈┈┈┈┈┈┈┈┈┈┈┈┈┈┈┈•
ಅವನ+ಅಂಗಡಿ=ಅವನಂಗಡಿ-ಅವನಅಂಗಡಿ

ಅವನಿಗೆ+ಇಲ್ಲ=ಅವನಿಗಿಲ್ಲ-ಅವನಿಗೆ ಇಲ್ಲ

ಹಣ್ಣಿನ+ಅಂಗಡಿ=ಹಣ್ಣಿನಂಗಡಿ-ಹಣ್ಣಿನ ಅಂಗಡಿ

ಪದ+ಪದ=ಕೂಡಿಸಿದ ರೂಪ -ಕೂಡಿಸದ ರೂಪ

ಅವನ+ಅಂಗಡಿ=ಅವನಂಗಡಿ-ಅವನಅಂಗಡಿ

ಅವನಿಗೆ+ಇಲ್ಲ=ಅವನಿಗಿಲ್ಲ-ಅವನಿಗೆ ಇಲ್ಲ

ಹಣ್ಣಿನ+ಅಂಗಡಿ=ಹಣ್ಣಿನಂಗಡಿ-ಹಣ್ಣಿನ ಅಂಗಡಿ


— ಮೇಲೆ ಹೇಳಿರುವ ಅನೇಕ ಉದಾಹರಣೆಗಳಲ್ಲಿ ಪ್ರಕೃತಿ ಪ್ರತ್ಯಯಗಳನ್ನು ಸೇರಿಸುವಲ್ಲಿ ಅವನ್ನು ಕೂಡಿಸಿಯೇ ಹೇಳುತ್ತೇವಲ್ಲದೆ ಬಿಡಿಬಿಡಿಸಿ ಹೇಳಲು ಬರುವಂತೆಯೇ ಇಲ್ಲ.
ಆಡು ಇಸು ಎಂದು ಯಾರು ಹೇಳುವುದಿಲ್ಲ.
ಪುಸ್ತಕ ಅನ್ನು ತಾ ಎನ್ನಬಾರದು.
ಆಡಿಸು ಪುಸ್ತಕವನ್ನು ಹೀಗೆ ಕೂಡಿಸಿಯೇ ಹೇಳಬೇಕು.
ಆಡಿಸು ಎಂಬಲ್ಲಿ (ಆಡು+ಇಸು) ಉ+ಇ ಸ್ವರಗಳು ಸಂಧಿಸುತ್ತವೆ.
ಪುಸ್ತಕ+ಅನ್ನು ಎಂಬಲ್ಲಿ ಅ+ಅ ಸ್ವರಗಳು ಪರಸ್ಪರ ಸಂಧಿಸುತ್ತವೆ.

●.ಅವೆರಡೂ ಸಂಧಿಸುವಾಗ ಮೊದಲಿನ ಸ್ವರಗಳು ಎರಡೂ ಕಡೆ ಹೋಗುತ್ತವೆ. 
— ಈ ಸಂಧಿಸುವಿಕೆಯು ಕಾಲವಿಳಂಬವಿಲ್ಲದೆ ಹಾಗೆ ಆಗುತ್ತದೆ.

— ಇವು ಪ್ರಕೃತಿ ಪ್ರತ್ಯಯಗಳ ಸಂಧಿಸುವಿಕೆಯನ್ನು ತಿಳಿಸುವ ಉದಾಹರಣೆಗಳು.
ಅವನ ಅಂಗಡಿ ಎಂಬ ಪದಗಳನ್ನು ಬೇಕಾದರೆ ಸಂಧಿಯಾಗುವಂತೆ ಅವನಂಗಡಿ ಎಂದಾದರೂ ಹೇಳಬಹುದು; ಅಥವಾ ಕಾಲವನ್ನು ಸ್ವಲ್ಪ ವಿಳಂಬ ಮಾಡಿ ಅವನ ಅಂಗಡಿ ಎಂದಾದರೂ ಹೇಳಬಹುದು.  ಅದು ಹೇಳುವವನ ಇಚ್ಛೆಯನ್ನು ಅವಲಂಬಿಸಿರುತ್ತದೆ.  ಅವನಂಗಡಿ ಎನ್ನುವಾಗ (ಅವನ+ಅಂಗಡಿ) ಇಲ್ಲಿ ಸಂಧಿಸುವ ಸ್ವರಗಳು ಅ+ಅ ಎಂಬುವು.

— ಇವುಗಳಲ್ಲಿ ಮೊದಲಿನ ಅಕಾರವನ್ನು ತೆಗೆದುಹಾಕುತ್ತೇವೆ.
ಆದ್ದರಿಂದ ಎರಡು ಅಕ್ಷರಗಳು ಸಂಧಿಸುವಿಕೆಯೇ ಸಂಧಿಯೆನಿಸುವುದೆಂದ ಹಾಗಾಯಿತು.

●.ಇದರ ಸೂತ್ರವನ್ನು ಹೀಗೆ ಹೇಳಬಹುದು:-
•┈┈┈┈┈┈┈┈┈┈┈┈┈┈┈┈┈┈┈┈┈•
— (೧೫) ಎರಡು ವರ್ಣಗಳು (ಅಕ್ಷರಗಳು) ಕಾಲವಿಳಂಬವಿಲ್ಲದಂತೆ ಸೇರುವುದೇ ಸಂಧಿಯೆನಿಸುವುದು.

(i) ಸ್ವರದ ಮುಂದೆ ಸ್ವರ ಬಂದು ಹೀಗೆ ಸಂಧಿಯಾದರೆ ಸ್ವರಸಂಧಿಯೆನ್ನುತ್ತೇವೆ.

(ii) ಸ್ವರದ ಮುಂದೆ ವ್ಯಂಜನ ಬಂದು ಅಥವಾ ವ್ಯಂಜನದ ಮುಂದೆ ವ್ಯಂಜನ ಬಂದು ಸಂಧಿಯಾದರೆ ವ್ಯಂಜನಸಂಧಿಯೆನ್ನುತ್ತೇವೆ.

(iii) ಹೀಗೆ ಸಂಧಿಯಾಗುವಾಗ ಹಲಕೆಲವು ವ್ಯತ್ಯಾಸಗಳು ಆ ಸಂಧಿಸಿದ ಅಕ್ಷರಗಳಲ್ಲಿ ಉಂಟಾಗುವುವು. ಅವನ್ನೇ ಸಂಧಿಕಾರ್ಯಗಳು ಎನ್ನುತ್ತೇವೆ.

●.ಅವುಗಳನ್ನು ಈ ಮುಂದೆ ತಿಳಿಯೋಣ.

.... ಮುಂದುವರೆಯುವುದು.

(Courtesy :Kannada Deevige)

No comments:

Post a Comment