☀ಭಾರತದಂತಹ ಕೃಷಿ ಪಾರಮ್ಯದ, ಜೈವಿಕ ಸೂಕ್ಷ್ಮ ಆಕರತೆಗಳ ದೇಶಗಳ ಮೇಲೆ ಜಾಗತಿಕ ಹವಾಗುಣ ಬದಲಾವಣೆ (ಗ್ಲೋಬಲ್ ವಾರ್ಮಿಂಗ್) ಯಿಂದ ಉಂಟಾಗುವ ಪರಿಣಾಮಗಳನ್ನು ಚರ್ಚಿಸಿ. ವಿಶೇಷವಾಗಿ ಹವಾಗುಣ ಬದಲಾವಣೆ ವಿಷಯಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ (ಭಾರತ), ಸ್ಥಳೀಯ (ಕರ್ನಾಟಕ) ಹವಾಗುಣ ಬದಲಾವಣೆಗಳ ಕುರಿತು ಸಂಕ್ಷಿಪ್ತವಾಗಿ ವಿಶ್ಲೇಷಿಸಿ.
— Discuss the effects of the Global Climate Change (Global Warming) on countries those have same as Agricultural, organic diversity as India. Briefly analyze the issues of climate change that especially on the national (India), local (state) Climate.
━━━━━━━━━━━━━━━━━━━━━━━━━━━━━━━━━━━━━━━━━━━━━
(Ecology, Environmental Studies)
★ ಪರಿಸರ, ಪರಿಸರ ಅಧ್ಯಯನ
✧.ಐಎಎಸ್ / ಕೆಎಎಸ್ ಪರೀಕ್ಷೆಗಳಿಗಾಗಿ ಸಾಮಾನ್ಯ ಅಧ್ಯಯನ.
(GENERAL STUDIES FOR IAS/KAS)
●.`ಹವಾಗುಣ ಬದಲಾವಣೆ’(Climate Change) ಮತ್ತು ಜಾಗತಿಕ ಹವಾಗುಣ ಬದಲಾವಣೆ (Global Warming):
— ಬಹು ದೀರ್ಘ ಕಾಲಾವಧಿಯಲ್ಲಿ ಹವಾಗುಣದಲ್ಲಿ ಉಂಟಾಗುವ ಖಾಯಂ ಬದಲಾವಣೆಗಳನ್ನು `ಹವಾಗುಣ ಬದಲಾವಣೆ’ ಎಂದು (ಕ್ಲೈಮೇಟ್ ಚೇಂಜ್) ಕರೆಯುತ್ತಾರೆ.
— ಭೂಮಿಯ ಮೇಲೆ ಮನುಷ್ಯರ ವಾಸವು ಆರಂಭವಾಗುವುದಕ್ಕಿಂತ ಮುನ್ನವೇ ಈ ಬಗೆಯ ಹವಾಗುಣ ಬದಲಾವಣೆಯು ನೈಸರ್ಗಿಕವಾಗಿಯೇ ಆಗುತ್ತಿತ್ತು. ಆದರೆ ಈಗ ಮಾನವನ ವಿವಿಧ ಚಟುವಟಿಕೆಗಳ ಕಾರಣದಿಂದ ಈ ಹವಾಗುಣದಲ್ಲಿ ಸಾಕಷ್ಟು ಬದಲಾವಣೆಗಳಾಗುತ್ತಿವೆ. ಇದನ್ನೇ ಮಾನವನಿರ್ಮಿತ ಜಾಗತಿಕ ಹವಾಗುಣ ಬದಲಾವಣೆ (ಗ್ಲೋಬಲ್ ವಾರ್ಮಿಂಗ್) ಎಂದು ಹೇಳುತ್ತಾರೆ.
— ಈ ಬಗೆಯ ಹವಾಗುಣ ಬದಲಾವಣೆಯು ಹಿಂದೆಂದಿಗಿಂತ ಹೆಚ್ಚಿನ ವೇಗದಲ್ಲಿ ಉಂಟಾಗುತ್ತಿದೆ; ಇದಕ್ಕೆ ಮನುಷ್ಯರ ಚಟುವಟಿಕೆಗಳಿಂದ ಉಂಟಾಗುವ ಹಸಿರುಮನೆ ಪರಿಣಾಮವು ಮುಖ್ಯ ಕಾರಣವಾಗಿದೆ.
☀.ಜಾಗತಿಕ ಹವಾಗುಣ ಬದಲಾವಣೆ (ಗ್ಲೋಬಲ್ ವಾರ್ಮಿಂಗ್) ಯಿಂದ ಉಂಟಾಗುವ ಪರಿಣಾಮಗಳು:
━━━━━━━━━━━━━━━━━━━━━━━━━━━━━━━━━━━━━━━━━━━━━━
●.ಹವಾಗುಣ ಬದಲಾವಣೆಯು ಇಂದು ನಾವು ಎದುರಿಸುತ್ತಿರುವ ಅತ್ಯಂತ ಗಂಭೀರವಾದ ಜಾಗತಿಕ ಪಾರಿಸರಿಕ ಸವಾಲು ಎಂಬುದನ್ನು 1980ರ ದಶಕದಲ್ಲಿ ನಡೆಸಿದ ಹಲವು ಸಂಶೋಧನೆಗಳು ಖಚಿತಪಡಿಸಿವೆ.
— ಜಾಗತಿಕ ವಿಜ್ಞಾನಿಗಳ ಸಮುದಾಯದ ಪ್ರಕಾರ ವಾತಾವರಣದಲ್ಲಿನ ರಾಸಾಯನಿಕಗಳ ಸಂಯೋಜನೆಯಲ್ಲಿ ಆಗುತ್ತಿರುವ ಬದಲಾವಣೆಗಳು ಮತ್ತು ಹಸಿರುಮನೆ ಅನಿಲಗಳ (ಸಿಎಚ್‌ಜಿ:ಗ್ರೀನ್‌ಹೌಸ್ ಗ್ಯಾಸ್) ಸಾಂದ್ರತೆಯಲ್ಲಿ ಹೆಚ್ಚಳ – ಇವು ಮಳೆ ಪ್ರಮಾಣ, ಭೂಮಿಯ ಉಷ್ಣತೆ ಸೇರಿದಂತೆ ಪಾರಿಸರಿಕ ಸಮತೋಲನ ಮತ್ತು ಜೈವಿಕ-ಭೌಗೋಳಿಕ-ರಾಸಾಯನಿಕ ಚಕ್ರಕ್ಕೆ ಗಮನಾರ್ಹವಾದ ಧಕ್ಕೆಯನ್ನು ಒಡ್ಡಿವೆ.
— ಹವಾಗುಣ ಬದಲಾವಣೆ ಕುರಿತ ಅಂತರ್-ಸರ್ಕಾರಿ ಸಮಿತಿಯು (ಐಪಿಸಿಸಿ, ಇಂಟರ್ ನ್ಯಾಶನಲ್ ಪ್ಯಾನೆಲ್ ಆನ್ ಕ್ಲೈಮೇಟ್ ಚೇಂಜ್) ಪ್ರಕಟಿಸಿದ ಐದೂ ಅನುಕ್ರಮ ವಾರ್ಷಿಕ ವರದಿಗಳಲ್ಲಿ ಇಂಥ ನೈಸರ್ಗಿಕ ಜೀವನಚಕ್ರದಲ್ಲಿ ಆಗುತ್ತಿರುವ ಬದಲಾವಣೆಗಳು ಜಾಗತಿಕ – ಪ್ರಾದೇಶಿಕ ಮಟ್ಟದಲ್ಲಿ ಸಮಾಜೋ-ಆಕ ಸನ್ನಿವೇಶದ ಮೇಲೆ ತೀವ್ರ ಪರಿಣಾಮ ಬೀರುತ್ತವೆ ಮತ್ತು ಸಮಾಜದ ಎಲ್ಲ ರಂಗಗಳ ಮೇಲೂ ಪ್ರಭಾವ ಬೀರುತ್ತವೆ ಎಂದು ತಿಳಿಸಿವೆ.
●.ಮಳೆಬೀಳುವ ಪ್ರಮಾಣದಲ್ಲಿ ಆಗುವ ಬದಲಾವಣೆಗಳು ಕೃಷಿ ಹಾಗೂ ಜಲಮೂಲಗಳ ಮೇಲೆ ಪರಿಣಾಮ ಬೀರುತ್ತವೆ.
— 2014ರಲ್ಲಿ ಐಪಿಸಿಸಿಯು ಪ್ರಕಟಿಸಿದ ಐದನೆಯ ಅಂದಾಜು ವರದಿಯು ಈ ಹಿಂದಿನ ವರದಿಗಳನ್ನೇ ಪುನರುಚ್ಚರಿಸಿದೆ. ಅಂದರೆ ಭಾರತದಂತಹ ಕೃಷಿ ಪಾರಮ್ಯದ, ಜೈವಿಕ ಸೂಕ್ಷ್ಮ ಆಕರತೆಗಳ ದೇಶಗಳ ಮೇಲೆ ಅತ್ಯಂತ ಹೆಚ್ಚಿನ ದುಷ್ಪರಿಣಾಮ ಉಂಟಾಗುತ್ತದೆ ಎಂಬುದು ವರದಿಯ ಮುಖ್ಯಾಂಶ. ಇದಕ್ಕೆ ಪ್ರಮುಖ ಕಾರಣವೆಂದರೆ ಭಾರತವು ಜನಸಂಖ್ಯಾತ್ಮಕವಾಗಿ ಪ್ರಪಂಚದಲ್ಲೇ ಎರಡನೇ ಅತಿದೊಡ್ಡ ದೇಶವಾಗಿದ್ದು, ಇಲ್ಲಿ ಜನಸಂಖ್ಯೆಯು ಇಲ್ಲಿ ಲಭ್ಯವಿರುವ ನೈಸರ್ಗಿಕ ಸಂಪನ್ಮೂಲಗಳಿಗೆ ಅನುಗುಣವಾಗಿ ಚದುರಿಕೊಂಡಿಲ್ಲ. ಆದ್ದರಿಂದ ಇಲ್ಲಿನ ಸಮಾಜದ ಪ್ರತಿಯೊಂದೂ ರಂಗದ ಮೇಲೆ ಗಂಭೀರ ಪರಿಣಾಮ ಉಂಟಾಗಬಹುದು ಎಂದು ಅಂದಾಜು ಮಾಡಲಾಗಿದೆ.
●.ವಾತಾವರಣದಲ್ಲಿ ಹಸಿರುಮನೆ ಅನಿಲಗಳು ಹೆಚ್ಚಾಗಿರುವುದಕ್ಕೆ ಹೆಚ್ಚುತ್ತಿರುವ ಜಲ ಹಾಗೂ ವಾಯು ಮಾಲಿನ್ಯವೇ ಕಾರಣ. ಇದರಿಂದಾಗಿ ಮನುಕುಲದ ಧೀರ್ಘಾವಧಿ ಕಲ್ಯಾಣವೇ ಧಕ್ಕೆಗೆ ಒಳಗಾಗಿದೆ.
— ಔದ್ಯಮಿಕ ಪ್ರದೇಶ ಮತ್ತು ನಗರೀಕರಣವಾದ ಪ್ರದೇಶಗಳಲ್ಲಿ ಕಲುಷಿತ ಜಲಮೂಲಗಳು, ಮಲಿನವಾದ ಗಾಳಿಯ ರೂಪದಲ್ಲಿ ಈ ಬಗೆಯ ಮಾಲಿನ್ಯದ ಪರಿಣಾಮವನ್ನು ಕಾಣಬಹುದಾಗಿದೆ.
— ವಾತಾವರಣಕ್ಕೆ ಹಸಿರುಮನೆ ಅನಿಲ ಹೊರಸೂಸುವಿಕೆಯನ್ನು ತಡೆಗಟ್ಟಲು ಈ ಬಗೆಯ ಮಾಲಿನ್ಯದ ಪ್ರಮಾಣವನ್ನು ಕಡಿಮೆ ಮಾಡುವುದೇ ಸಮರ್ಥ ಪರಿಹಾರವಾಗಿದೆ.
☀.ಹವಾಗುಣ ಬದಲಾವಣೆಯಿಂದ ರಾಷ್ಟ್ರೀಯ (ಭಾರತ), ಸ್ಥಳೀಯ (ಕರ್ನಾಟಕ) ಹವಾಗುಣ ಬದಲಾವಣೆಗಳ ಪರಿಣಾಮಗಳು :
━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━
●.ಭಾರತ ಸರ್ಕಾರದ ಅಂದಾಜಿನ ಪ್ರಕಾರವೇ ಹವಾಗುಣ ಬದಲಾವಣೆಯಿಂದ ಕೃಷಿರಂಗವು ಅತ್ಯಂತ ಗಂಭೀರವಾದ ಸಮಸ್ಯೆಗಳನ್ನು ಎದುರಿಸುತ್ತಿದೆ. ಉಷ್ಣತೆ ಹೆಚ್ಚುತ್ತಿದೆ; ಮಳೆಯು ಎರ್ರಾಬಿರ್ರಿಯಾಗಿ ಬರುತ್ತಿದೆ; ಪ್ರವಾಹ, ಬರಗಾಲ ಮತ್ತು ಚಂಡಮಾರುತಗಳ ತೀವ್ರತೆ ಮತ್ತು ಸಂಖ್ಯೆಯೂ ಹೆಚ್ಚುತ್ತಿದೆ.
●.ಭಾರತವು ಹವಾಗುಣ ಬದಲಾವಣೆಗೆ ತಕ್ಕಂತೆ ತನ್ನ ನೀತಿಯನ್ನು ಬದಲಿಸಿಕೊಳ್ಳದಿದ್ದರೆ ಜಾಗತಿಕ ತಾಪಮಾನ ಏರಿಕೆಯಿಂದ ಕ್ರಿ.ಶ. 2080-2100ರ ವರ್ಷದ ಹೊತ್ತಿಗೆ ಭಾರತದ ಧಾನ್ಯ ಉತ್ಪಾದನೆಯಲ್ಲಿ ಶೇ. 10ರಿಂದ 40ರಷ್ಟು ಕುಸಿತ ಉಂಟಾಗಲಿದೆ. ಆಕರಗಳ ಬೆಳವಣಿಗೆ, ಆಹಾರ ಭದ್ರತೆ ಮತ್ತು ಬಡತನದ ವಿರುದ್ಧದ ಹೋರಾಟಗಳ ವಿಫಲವಾಗಲಿವೆ. ಹವಾಗುಣ ಬದಲಾವಣೆಯನ್ನು ತಡೆಯಲು ಮಧ್ಯಮಾವಧಿ ಮತ್ತು ದೀರ್ಘಾವಧಿ ತಡೆ ಕ್ರಮಗಳನ್ನು ತಕ್ಷಣವೇ ಕೈಗೊಳ್ಳಬೇಕಿದೆ.
●.ಹವಾಗುಣ ಬದಲಾವಣೆ ವಿಷಯಕ್ಕೆ ಸಂಬಂಧಿಸಿದಂತೆ ಕರ್ನಾಟಕದ ಮೇಲೂ ಹಲವು ಗಂಭೀರ ಪರಿಣಾಮಗಳು ಉಂಟಾಗಲಿವೆ. ರಾಜ್ಯದ ಶೇ. 77ರಷ್ಟು ಭೂಪ್ರದೇಶವು ಶುಷ್ಕ ಅಥವಾ ಅರೆಶುಷ್ಕ ಪ್ರದೇಶ ಎಂದು ಅಧಿಕೃತವಾಗಿ ಅಂದಾಜು ಮಾಡಲಾಗಿದೆ.
●.ರಾಜ್ಯದ ಮೂರನೇ ಎರಡರಷ್ಟು ಪ್ರದೇಶವು ವಾರ್ಷಿಕ ಕೇವಲ 750 ಮಿಲಿಮೀಟರ್ಗಿಂತ ಕಡಿಮೆ ಪ್ರಮಾಣದ ಮಳೆಯನ್ನು ಪಡೆಯುತ್ತಿದೆ; ಇದರಿಂದಾಗಿ ಬರಗಾಲದ ಅಪಾಯ ಇದ್ದೇ ಇದೆ. ರಾಜ್ಯದ ಶೇ. 54ರಷ್ಟು ಭೂಪ್ರದೇಶವು ಬರಗಾಲ ಸಾಧ್ಯತೆಯ ವ್ಯಾಪ್ತಿಯಲ್ಲಿದೆ.
●.ರಾಜ್ಯದಲ್ಲಿ ಒಟ್ಟು ಭೂಪ್ರದೇಶದ ಶೇ. 19.96ರಷ್ಟು ಮಾತ್ರ ಕಾಡಿನಿಂದ ಆವೃತವಾಗಿದೆ. ಈ ರಾಜ್ಯದ ಪಶ್ಚಿಮಟ್ಟ ಪ್ರದೇಶವು ಜಾಗತಿಕ ಜೀವವೈವಿಧ್ಯದ ಪ್ರಮುಖ ತಾಣಗಳಲ್ಲಿ ಒಂದಾಗಿದೆ. ಆದ್ದರಿಂದ ಜಾಗತಿಕ ಮಟ್ಟದಲ್ಲಿ ಇಂಗಾಲವನ್ನು ಹುಗಿಯುವಲ್ಲಿ ರಾಜ್ಯಕ್ಕೆ ಅತ್ಯಂತ ಪ್ರಮುಖವಾದ ಪಾತ್ರವಿದೆ.

No comments:
Post a Comment