☀️ ‘ಕೌಶಲ ಅಭಿಯಾನ’ ಅಥವಾ ‘ಕೌಶಲ ಮಿಷನ್’
(Koushal Abhiyana or Koushal Mission)
━━━━━━━━━━━━━━━━━━━━━━━━━━━━━━━━━━━
★ ರಾಜ್ಯ ಸರ್ಕಾರದ ಯೋಜನೆಗಳು
(State Government Programs)
★ ಸಾಮಾನ್ಯ ಅಧ್ಯಯನ
(General Studies)
ಕೇಂದ್ರ ಸರ್ಕಾರವು ಕಳೆದ ವರ್ಷ ಜಾರಿಗೆ ತಂದಿರುವ ‘ಕೌಶಲ ಭಾರತ’ ಯೋಜನೆಗೆ ಪರ್ಯಾಯವಾಗಿ ರಾಜ್ಯ ಸರ್ಕಾರವು ಕರ್ನಾಟಕ ವೃತ್ತಿ ತರಬೇತಿ ಮತ್ತು ಕೌಶಲ ಅಭಿವೃದ್ಧಿ ನಿಗಮದಡಿ ಗ್ರಾಮೀಣ ಭಾಗದ ಯುವಜನರಿಗೆ ‘ಕೌಶಲ ಮಿಷನ್’ ಯೋಜನೆ ರೂಪಿಸಿದೆ.
*ನಿಗಮವನ್ನು ರಚಿಸಿರುವ ಉದ್ದೇಶ :
ಗ್ರಾಮೀಣ ಪ್ರದೇಶದ ಯುವಜನರಿಗೆ ಉದ್ಯೋಗಾವಕಾಶ ಕಲ್ಪಿಸುವ ಹಾಗೂ ಉದ್ದಿಮೆ ಆರಂಭಿಸುವವರಿಗೆ ಆರ್ಥಿಕ ನೆರವು ನೀಡುವ ಉದ್ದೇಶದಿಂದ ಈ ನಿಗಮವನ್ನು ರಚಿಸಲಾಗಿದೆ. ಇತ್ತೀಚೆಗಷ್ಟೇ ನಿಗಮದ ಅಧ್ಯಕ್ಷರಾಗಿ ಮುರಳೀಧರ ಹಾಲಪ್ಪ ಅಧಿಕಾರ ಸ್ವೀಕರಿಸಿದ್ದಾರೆ.
*ಯಾರ್‍ಯಾರಿಗೆ ಕೌಶಲ ತರಬೇತಿ?
ಸ್ಪರ್ಧಾತ್ಮಕ ಯುಗದಲ್ಲಿ ಉದ್ಯೋಗ ಗಿಟ್ಟಿಸಿಕೊಳ್ಳುವಲ್ಲಿ ಅನೇಕ ಪದವೀಧರರು ಹಿಂದೆ ಬೀಳುತ್ತಿದ್ದಾರೆ. ಇದಕ್ಕೆ ಅವರಲ್ಲಿರುವ ಕೌಶಲ ಕೊರತೆಯೇ ಕಾರಣ. ಎಸ್ಎಸ್‌ಎಲ್‌ಸಿ, ಪಿಯುಸಿ, ಐಟಿಐ, ಡಿಪ್ಲೊಮಾ, ಬಿ.ಎ, ಬಿ.ಕಾಂ ಹಾಗೂ ಬಿ.ಎಸ್ಸಿ ಪದವಿ ಪಡೆದ ಅಭ್ಯರ್ಥಿಗಳಿಗೆ ಉತ್ಕೃಷ್ಟ ಕೌಶಲ ತರಬೇತಿ ನೀಡಲು ನಿರ್ಧರಿಸಲಾಗಿದೆ. ಹಳ್ಳಿಗಾಡಿನ ಯುವಕ, ಯುವತಿಯರಿಗೆ ಮೊದಲ ಆದ್ಯತೆ. ಈ ತರಬೇತಿಯು 3 ತಿಂಗಳು, 6 ತಿಂಗಳು ಹಾಗೂ ಒಂದು ವರ್ಷದ ಅವಧಿಯದ್ದಾಗಿದೆ. ‘ಕೌಶಲ ಅಭಿಯಾನ’ ಅಥವಾ ‘ಕೌಶಲ ಮಿಷನ್’ ಎನ್ನುವ ಹೆಸರಿನಲ್ಲಿ ದೊಡ್ಡ ಮಟ್ಟದಲ್ಲಿ ಇದಕ್ಕೆ ಚಾಲನೆ ನೀಡಲಾಗಿದೆ.
* ತರಬೇತಿ ಗುರಿ:
ಒಂದು ವರ್ಷದ ಅವಧಿಯಲ್ಲಿ ಸುಮಾರು 1 ಲಕ್ಷ ಮಂದಿಗೆ ಕೌಶಲ ತರಬೇತಿ ನೀಡುವ ಗುರಿ ಹೊಂದಲಾಗಿದೆ. ಹೋಟೆಲ್ ಮ್ಯಾನೇಜ್‌ಮೆಂಟ್, ಪ್ರವಾಸೋದ್ಯಮ, ತಾಂತ್ರಿಕ ಕ್ಷೇತ್ರ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಉದ್ಯೋಗವಕಾಶ ಪಡೆಯಲು ಅನುಕೂಲವಾಗುವಂತೆ ತರಬೇತಿಯನ್ನು ಆಯೋಜಿಸಲಾಗುವುದು.

No comments:
Post a Comment