"ಮನುಷ್ಯ ದೀಪವಾದರೂ ಆಗಬೇಕು, ಕನ್ನಡಿಯಾದರೂ ಆಗಬೇಕು. ಒಂದು ಬೆಳಕನ್ನು ಕೊಡುತ್ತದೆ ಮತ್ತೊಂದು ಅದನ್ನು ಪ್ರತಿಬಿಂಬಿಸುತ್ತದೆ. ಪ್ರತಿಯೊಬ್ಬರೂ ದೀಪ ಆಗದೇ ಹೋಗಬಹುದು ಆದರೆ ಕನ್ನಡಿ ಆಗಬಲ್ಲರು. ತಿಳಿದಿರುವ ಜ್ಞಾನವನ್ನು ಮತ್ತೊಬ್ಬರಿಗೆ ಹಂಚುವುದೇ ಜೀವನ.."—ಅರಿಸ್ಟಾಟಲ್
Showing posts with label ಕೆಎಎಸ್ ಪಠ್ಯಕ್ರಮ. Show all posts
Showing posts with label ಕೆಎಎಸ್ ಪಠ್ಯಕ್ರಮ. Show all posts

Wednesday, 2 August 2017

☀.ಕೆಎಎಸ್ ಮುಖ್ಯ ಪರೀಕ್ಷೆಯ ಸಂಪೂರ್ಣ ಪಠ್ಯಕ್ರಮ : ಪತ್ರಿಕೆ-5: ಸಾಮಾನ್ಯ ಅಧ್ಯಯನ-4 (PART -X)... ಮುಂದುವರೆದ ಭಾಗ. ( KAS Mains General Studies Paper V Syllabus)

☀.ಕೆಎಎಸ್ ಮುಖ್ಯ ಪರೀಕ್ಷೆಯ ಸಂಪೂರ್ಣ ಪಠ್ಯಕ್ರಮ :  ಪತ್ರಿಕೆ-5: ಸಾಮಾನ್ಯ ಅಧ್ಯಯನ-4 (PART -X)... ಮುಂದುವರೆದ ಭಾಗ.
( KAS Mains General Studies  Paper V  Syllabus)
•─━━━━━═══════════━━━━━─••─━━━━━═══════════━━━━━─•

★ ಕೆಎಎಸ್ ಪರಿಕ್ಷೆಯ ಪಠ್ಯಕ್ರಮ
(KAS Exam Syllabus)

... ಮುಂದುವರೆದ ಭಾಗ.



●. ಪತ್ರಿಕೆ-5:       ಸಾಮಾನ್ಯ ಅಧ್ಯಯನಗಳು-4


●. ವಿಭಾಗ-1:

ನೀತಿಶಾಸ್ತ್ರ:

ಮಾನವ ಕ್ರಿಯೆಗಳಲ್ಲಿ ನೀತಿಶಾಸ್ತ್ರದ ಸಾರ, ನಿರ್ಣಾಯಕಗಳು ಮತ್ತು ಪರಿಣಾಮಗಳು, ನೀತಿಶಾಸ್ತ್ರದ ಆಯಾಮಗಳು, ಖಾಸಗಿ ಮತ್ತು ಸಾರ್ವಜನಿಕ ಸಂಬಂಧಗಳಲ್ಲಿ ನೀತಿಶಾಸ್ತ್ರ.
ಸಾರ್ವಜನಿಕ ಆಡಳಿತದಲ್ಲಿ ನೀತಿಶಾಸ್ತ್ರ, ಸ್ಥಾನಮಾನ ಮತ್ತು ಸಮಸ್ಯೆಗಳು, ಸರ್ಕಾರ ಮತ್ತು ಖಾಸಗಿ ಸಂಸ್ಥೆಗಳಲ್ಲಿ ನೀತಿಯ ಬಿಕ್ಕಟ್ಟುಗಳು, ನೀತಿ ಮಾರ್ಗದರ್ಶನದ ಮೂಲವಾಗಿ ಕಾನೂನುಗಳು, ನಿಯಮಗಳು, ವಿಧಿನಿಯಮಗಳು ಮತ್ತು ಧರ್ಮಪ್ರಜ್ಞೆ.
ಹೊಣೆಗಾರಿಕೆ ಮತ್ತು ನೈತಿಕ ಆಡಳಿತ, ಆಡಳಿತದಲ್ಲಿನ ನೀತಿ ಮತ್ತು ನೈತಿಕ ಮೌಲ್ಯಗಳ ಬಲಪಡಿಸುವಿಕೆ. ಅಂತರಾಷ್ಟೀಯ ಸಂಬಂಧಗಳಲ್ಲಿ ಮತ್ತು ಹಣ ನೀಡಿಕೆಯಲ್ಲಿ ನೀತಿ ವಿಷಯಗಳು, ನಿಗಮಿತ ಆಡಳಿತ.
ಸಾರ್ವಜನಿಕ ಸೇವೆಯ ಪರಿಕಲ್ಪನೆ, ಆಡಳಿತದ ತಾತ್ವಿಕ ಮೂಲ, ಸರ್ಕಾರದಲ್ಲಿ ಮಾಹಿತಿ ಹಂಚಿಕೆ ಮತ್ತು ಸರ್ಕಾರದ ಪಾರದರ್ಶಕತೆ, ಮಾಹಿತಿ ಹಕ್ಕು, ನೀತಿಶಾಸ್ತ್ರದ ಸಂಹಿತೆಗಳು, ನೀತಿ ಸಂಹಿತೆಗಳು, ನಾಗರಿಕ ಸನ್ನದುಗಳು, ಕೆಲಸದ ಸಂಸ್ಕೃತಿ, ಸೇವೆ ಸಲ್ಲಿಕೆಯ ಗುಣಮಟ್ಟ, ಸಾರ್ವಜನಿಕ ನಿಧಿ ಬಳಕೆ, ಭ್ರಷ್ಟ್ರಾಚಾರದ ಸವಾಲುಗಳು.
ಮಾನವ ಮೌಲ್ಯಗಳು – ಮಹಾನ್ ನಾಯಕರು ಸುಧಾರಕರು, ಆಡಳಿತಗಾರರ ಜೀವನಗಳು ಮತ್ತು ಬೋಧನೆಗಳಿಂದ ಪಾಠಗಳು, ಕುಟುಂಬದ ಪಾತ್ರ, ಸಮಾಜ ಮತ್ತು ಮೌಲ್ಯಗಳನ್ನು ಬೋಧಿಸುವ ಶೈಕ್ಷಣಿಕ ಸಂಸ್ಥೆಗಳು.



●. ವಿಭಾಗ-2:

ನೀತಿನಿಷ್ಠೆ:

ನೀತಿನಿಷ್ಠೆ, ನಿಷ್ಪಕ್ಷಪಾತ ಮತ್ತು ಪಕ್ಷಪಾತ ಮಾಡದಿರುವುದು, ಉದ್ದೇಶ, ಸಾರ್ವಜನಿಕ ಸೇವೆಗೆ ಸಮರ್ಪಣೆ, ದುರ್ಬಲ ವರ್ಗಗಳಿಗಾಗಿ ಅನುಭೂತಿ, ತಾಳ್ಮೆ ಮತ್ತು ಅನುಕಂಪ.


●. ವಿಭಾಗ-3:

ಅಭಿರುಚಿ:

ನಾಗರಿಕ ಸೇವೆಗಾಗಿ ಅಭಿರುಚಿ ಮತ್ತು ಬುನಾದೀಯ ಮೌಲ್ಯಗಳು, ಒಳಾಂಶ ರಚನೆ, ಪ್ರಕಾರ್ಯ, ಚಿಂತನೆಗಳು ಮತ್ತು ಕಾರ್ಯರೀತಿಯೊಂದಿಗೆ ಅದರ ಸಂಬಂಧ, ನೈತಿಕ ಮತ್ತು ರಾಜಕೀಯ ಮನೋಭವಗಳು, ಸಾಮಾಜಿಕ ಪ್ರಭಾವ ಮತ್ತು ಪ್ರೇರಣೆ. ನಾಗರೀಕ ಸೇವೆಗಾಗಿ ಅಭಿರುಚಿ ಮತ್ತು ಬುನಾದೀಯ ಮೌಲ್ಯಗಳು, ಭಾವನಾತ್ಮಕ ಬುದ್ಧಿವಂತಿಕೆ ಮತ್ತು ಅದರ ಉಪಯುಕ್ತತೆಗಳು ಹಾಗೂ ಆಡಳಿತ ಮತ್ತು ನಿರ್ವಹಣೆಯ ಅನ್ವಯತೆ, ಭಾರತ ಮತ್ತು ವಿಶ್ವದಿಂದ ನೈತಿಕ ಚಿಂತಕರ ಕೊಡುಗೆಗಳು. ಮೇಲಿನ ಅಂಶಗಳಿಗೆ ಸಂಬಂಧಿಸಿದಂತೆ ವಿಷಯಗಳ ವಾಸ್ತವಾಂಶ ಅಧ್ಯಯನಗಳು.

...ಮುಂದುವರೆಯುವುದು. 

(ಕೃಪೆ: ಯುಸಿಸಿ ಬೆಂಗಳೂರು) 

Monday, 27 February 2017

☀.ಕೆಎಎಸ್ ಮುಖ್ಯ ಪರೀಕ್ಷೆಯ ಸಂಪೂರ್ಣ ಪಠ್ಯಕ್ರಮ : ಅರ್ಹತಾ ಪತ್ರಿಕೆ - ಕನ್ನಡ, ಇಂಗ್ಲೀಷ್ ಹಾಗು ಪತ್ರಿಕೆ-1: ಪ್ರಬಂಧ (PART -V) ( KAS Mains Compulsory Kannada and English Papers and Paper I Essay Syllabus)

☀.ಕೆಎಎಸ್ ಮುಖ್ಯ ಪರೀಕ್ಷೆಯ ಸಂಪೂರ್ಣ ಪಠ್ಯಕ್ರಮ :  ಅರ್ಹತಾ ಪತ್ರಿಕೆ - ಕನ್ನಡ, ಇಂಗ್ಲೀಷ್ ಹಾಗು ಪತ್ರಿಕೆ-1: ಪ್ರಬಂಧ  (PART -V)
( KAS Mains Compulsory Kannada and English Papers and Paper I Essay Syllabus)
•─━━━━━═══════════━━━━━─••─━━━━━═══════════━━━━━─•

★ ಕೆಎಎಸ್ ಪರಿಕ್ಷೆಯ ಪಠ್ಯಕ್ರಮ
(KAS Exam Syllabus)

... ಮುಂದುವರೆದ ಭಾಗ.



●. ಅರ್ಹತಾ ಪತ್ರಿಕೆ                  ಕನ್ನಡ

ಈ ಪತ್ರಿಕೆಯ ಗುರಿ, ಅಭ್ಯರ್ಥಿಗಳು ಗಂಭೀರವಾದ ತಾರ್ಕಿಕ ಗದ್ಯವನ್ನು ಓದಲು ಮತ್ತು ಅರ್ಥಮಾಡಿಕೊಳ್ಳುವುದು ಮತ್ತು ತನ್ನ ವಿಚಾರಗಳನ್ನು ಕನ್ನಡದಲ್ಲಿ ಸ್ವಷ್ಟವಾಗಿ ಮತ್ತು ಸರಿಯಾಗಿ ವ್ಯಕ್ತಪಡಿಸುವ ಪರೀಕ್ಷೆಯಾಗಿರುವುದು.

ಪ್ರಶ್ನೆಗಳ ವಿಧಾನವು ಕೆಳಗಿನಂತೆ ಸ್ಥೂಲವಾಗಿರುತ್ತದೆ:


●. ಸಾಮಾನ್ಯ ಕನ್ನಡ

1 ವಿಷಯದ ಸಮಗ್ರ ಅರ್ಥೈಸುವಿಕೆ 25 ಅಂಕಗಳು

2 ಪದ ಪ್ರಯೋಗ 25 ಅಂಕಗಳು

3 ವಿಷಯ ಸಂಕ್ಷೇಪಣೆ 25 ಅಂಕಗಳು

4 ಪದಜ್ಞಾನ 25 ಅಂಕಗಳು

5 ಲಘು ಪ್ರಬಂಧ 25 ಅಂಕಗಳು

6 ಇಂಗ್ಲೀಷಿನಿಂದ ಕನ್ನಡಕ್ಕೆ ಭಾಷಾಂತರ 25 ಅಂಕಗಳು

━━━━━━━━━━━━━━━━━━━━━━━━━━━━━━━━━━━━━━━━━━━━━


●. ಅರ್ಹತಾ ಪತ್ರಿಕೆ            ಇಂಗ್ಲೀಷ್

ಈ ಪತ್ರಿಕೆಯ ಗುರಿ, ಅಭ್ಯರ್ಥಿಗಳು ಗಂಭೀರವಾದ ತಾರ್ಕಿಕ ಗದ್ಯವನ್ನು ಓದಲು ಮತ್ತು ಅರ್ಥಮಾಡಿಕೊಳ್ಳಲು ಮತ್ತು ತನ್ನ ವಿಚಾರಗಳನ್ನು ಇಂಗ್ಲೀಷ್ನಲ್ಲಿ ಸ್ವಷ್ಟವಾಗಿ ಮತ್ತು ಸರಿಯಾಗಿ ವ್ಯಕ್ತಪಡಿಸುವ ಪರೀಕ್ಷೆಯಾಗಿರುವುದು.

ಪ್ರಶ್ನೆಗಳ ಮಾದರಿ ಈ ಕೆಳಗಿನಂತೆ ಸ್ಥೂಲವಾಗಿರುತ್ತದೆ:

1 (Compreshension of given passages)
ನೀಡಲಾದ ವಾಕ್ಯವೃಂದಗಳ ವ್ಯಾಪಕತೆ 25 ಅಂಕಗಳು

2 (precise writing) ನಿಖರವಾದ ಬರವಣಿಗೆ 25 ಅಂಕಗಳು

3 (usage) ಪದ ಪ್ರಯೋಗ 25 ಅಂಕಗಳು

4 (Vocabulary) ಶಬ್ದ ಸಂಗ್ರಹ 25 ಅಂಕಗಳು

5 (Short Essay) ಲಘು ಪ್ರಬಂಧ 25 ಅಂಕಗಳು

6 (Communication Skills) ಸಂವಹನ ಕೌಶಲ್ಯಗಳು 25 ಅಂಕಗಳು

━━━━━━━━━━━━━━━━━━━━━━━━━━━━━━━━━━━━━━━━━━━━━


●. ಪತ್ರಿಕೆ-1: ಪ್ರಬಂಧ                  250 ಅಂಕಗಳು,                  3 ಗಂಟೆಗಳು

ಎರಡು ಪ್ರಬಂಧಗಳು (ಕನ್ನಡ/ಇಂಗ್ಲೀಷ್ ಭಾಷೆಯಲ್ಲಿ) ಪ್ರತಿಯೊಂದು 125 ಅಂಕಗಳು.

ಪ್ರಬಂಧ-1:
ಅಂತರಾಷ್ಟ್ರೀಯ/ರಾಷ್ಟ್ರೀಯ ಮಹತ್ವದ ವಿಷಯಗಳು

ಪ್ರಬಂಧ-2:
ರಾಜ್ಯ ಮಹತ್ವ/ಸ್ಥಳೀಯ ಮಹತ್ವ ವಿಷಯಗಳು

ಮುಂದುವರೆಯುವುದು. 

Friday, 24 February 2017

☀.ಕೆ.ಎ.ಎಸ್. ಮುಖ್ಯ ಪರೀಕ್ಷೆಯ ಪಠ್ಯಕ್ರಮ : (PART -IV) (KAS Mains Paper's Syllabus)

☀.ಕೆ.ಎ.ಎಸ್. ಮುಖ್ಯ ಪರೀಕ್ಷೆಯ ಪಠ್ಯಕ್ರಮ : (PART -IV)
(KAS Mains Paper's Syllabus)
•─━━━━━═══════════━━━━━─••─━━━━━═══════════━━━━━─•

★ ಕೆಎಎಸ್ ಪರಿಕ್ಷೆಯ ಪಠ್ಯಕ್ರಮ
(KAS Exam Syllabus)

●.2ನೇ ಪ್ರಕರಣದ ಮೇರೆಗೆ ಭಾಗ-ಬಿ ಯ ಉಪ-ಶೀರ್ಷಿಕೆಯ ಅಡಿಯಲ್ಲಿ ಮುಖ್ಯ ಪರೀಕ್ಷೆಗೆ, ಅದಕ್ಕೆ ಸಂಬಂಧಿಸಿದ ನಮೂದುಗಳನ್ನು ಈ ಕೆಳಗಿನಂತೆ ಬದಲಿಯಾಗಿ ಸೇರಿಸತಕ್ಕದ್ದು ಎಂದರೆ:


☀.ಅರ್ಹತಾ ಪತ್ರಿಕೆಗಳು

1.ಕನ್ನಡ                 150 ಅಂಕಗಳು                 2 ಗಂಟೆಗಳು
2.ಇಂಗೀಷ್               150 ಅಂಕಗಳು                 2 ಗಂಟೆಗಳು


●. ಪತ್ರಿಕೆಗಳು

ಪತ್ರಿಕೆ-1: ಪ್ರಬಂಧಗಳು               ಎರಡು ಪ್ರಬಂಧಗಳು                 (ಕನ್ನಡ/ಇಂಗ್ಲೀಷ್‍ನಲ್ಲಿ)
ಒಟ್ಟು ಅಂಕಗಳು 250    (ಎರಡು ಪ್ರಬಂಧಗಳು ಪ್ರತಿ ಪ್ರಬಂಧ 125 ಅಂಕ)     3 ಗಂಟೆಗಳು  

ಪ್ರಬಂಧ-1: ರಾಷ್ಟ್ರೀಯ/ ಅಂತರಾಷ್ಟ್ರೀಯ ಮಹತ್ವ ವಿಷಯ.

ಪ್ರಬಂಧ-2: ರಾಜ್ಯ ಮಹತ್ವ / ಸ್ಥಳೀಯ ಮಹತ್ವ ವಿಷಯ


ಪತ್ರಿಕೆ-2: ಸಾಮಾನ್ಯ ಅಧ್ಯಯನಗಳು-1        
ಒಟ್ಟು ಅಂಕಗಳು 250          3 ಗಂಟೆಗಳು  

1.  ಇತಿಹಾಸ ಮತ್ತು ಸಂಕೃತಿಕ ಪರಂಪರೆ (ಭಾರತ ಮತ್ತು ಕರ್ನಾಟಕ)
2. ಸಾಮಾಜಿಕ ಮತ್ತು ರಾಜಕೀಯ ದೃಷ್ಠಿಕೋನ
3.  ಭಾರತದ ಅರ್ಥವ್ಯವಸ್ಥೆ –ಯೋಜನೆ, ಗ್ರಾಮೀಣ ಅಭಿವೃದ್ಧಿ, ದತ್ತಾಂಶ ಸಂಗ್ರಹಣೆಗಳ ವಿಶ್ಲೇಷಣೆ,
ಅರ್ಥವಿವರಣೆ    
ಮೂರು ವಿಭಾಗಗಳು
ಮೂರು ವಿಭಾಗಗಳು


ಪತ್ರಿಕೆ-3 ಸಾಮಾನ್ಯ ಅಧ್ಯಯನಗಳು-2        
ಒಟ್ಟು ಅಂಕಗಳು 250          3 ಗಂಟೆಗಳು  

1. ಭೌತಿಕ ಲಕ್ಷಣಗಳು ಮತ್ತು ಸ್ವಾಭಾವಿಕ ಸಂಪನ್ಮೂಲಗಳು
2. ಭಾರತ ಸಂವಿಧಾನದ ಸ್ಥೂಲ ಸಮೀಕ್ಷೆ
3. ಸಾರ್ವಜನಿಕ ಆಡಳಿತ ಮತ್ತು ನಿರ್ವಹಣೆ, ಅಂತರಾಷ್ಟ್ರೀಯ ಸಂಬಂಧಗಳು  


ಪತ್ರಿಕೆ-4 ಸಾಮಾನ್ಯ ಅಧ್ಯಯನಗಳು-3        
ಒಟ್ಟು ಅಂಕಗಳು 250          3 ಗಂಟೆಗಳು      

1. ಭಾರತದ ಅಭಿವೃದ್ಧಿಯಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನದ ಪಾತ್ರ ಮತ್ತು ಪ್ರಭಾವ ಸಾರ್ವಜನಿಕ
ವಲಯದಲ್ಲಿ ಮಾಹಿತಿ ತಂತ್ರಜ್ಞಾನ
2. ಸ್ವಾಭಾವಿಕ ವಿಜ್ಞಾನ, ಜೀವ ವಿಜ್ಞಾನ, ಕೃಷಿ ವಿಜ್ಞಾನದ ಆರೋಗ್ಯ ಮತ್ತು ನೈರ್ಮಲ್ಯದಲ್ಲಿ
ಮುಂದುವರೆದ ಮತ್ತು ಆಧುನಿಕ ಪ್ರವೃತ್ತಿಗಳು    


ಪತ್ರಿಕೆ-5 ಸಾಮಾನ್ಯ ಅಧ್ಯಯನಗಳು-4        
ಒಟ್ಟು ಅಂಕಗಳು 250          3 ಗಂಟೆಗಳು  

1. ನೀತಿಶಾಸ್ತ್ರ
2. ಸಮಗ್ರತೆ
3. ಕೌಶಲ್ಯ      


ಪತ್ರಿಕೆ-6 ವಿಷಯ ಪತ್ರಿಕೆ-1-        
ಒಟ್ಟು ಅಂಕಗಳು 250          3 ಗಂಟೆಗಳು  

ಪತ್ರಿಕೆ-7 ವಿಷಯ ಪತ್ರಕೆ-2        
ಒಟ್ಟು ಅಂಕಗಳು 250          3 ಗಂಟೆಗಳು  

ಒಟ್ಟು -                 -1750

ವ್ಯಕ್ತಿತ್ವ ಪರೀಕ್ಷೆ                    200

ಒಟ್ಟು ಅಂಕಗಳು                 1950

 ...ಮುಂದುವರೆಯುವುದು.

Wednesday, 22 February 2017

☀.ಕೆ.ಎ.ಎಸ್. ಮುಖ್ಯ ಪರೀಕ್ಷೆಯ ಪಠ್ಯಕ್ರಮ : (PART-III) (KAS Mains Paper's Syllabus)

☀.ಕೆ.ಎ.ಎಸ್. ಮುಖ್ಯ ಪರೀಕ್ಷೆಯ ಪಠ್ಯಕ್ರಮ : (PART-III)
(KAS Mains Paper's Syllabus)
•─━━━━━═══════════━━━━━─••─━━━━━═══════════━━━━━─•

★ ಕೆಎಎಸ್ ಪರಿಕ್ಷೆಯ ಪಠ್ಯಕ್ರಮ
(KAS Exam Syllabus)

... ಮುಂದುವರೆದ ಭಾಗ.


ಮುಖ್ಯ ಪರೀಕ್ಷೆಯು ಲಿಖಿತ ಪರೀಕ್ಷೆ ಮತ್ತು ವ್ಯಕ್ತತ್ವ ಪರೀಕ್ಷೆಯನ್ನು ಒಳಗೊಂಡಿರತಕ್ಕದ್ದು.



  • ಲಿಖಿತ ಪರೀಕ್ಷೆ:


●.ಅರ್ಹತಾ ಪತ್ರಿಕೆಗಳು

1.ಕನ್ನಡ.                150 ಅಂಕಗಳು                2 ಗಂಟೆಗಳು

2.ಇಂಗ್ಲೀಷ್                 150 ಅಂಕಗಳು                2 ಗಂಟೆಗಳು


●.ಕಡ್ಡಾಯ ಪತ್ರಿಕೆಗಳು

ಪತ್ರಿಕೆ-1                 ಪ್ರಬಂಧ.                250 ಅಂಕಗಳು                3 ಗಂಟೆಗಳು

ಪತ್ರಿಕೆ-2                 ಸಾಮಾನ್ಯ ಅಧ್ಯಯನ-1                250 ಅಂಕಗಳು                3 ಗಂಟೆಗಳು

ಪತ್ರಿಕೆ-3                 ಸಾಮಾನ್ಯ ಅಧ್ಯಯನ-2                250 ಅಂಕಗಳು                3 ಗಂಟೆಗಳು

ಪತ್ರಿಕೆ-4                 ಸಾಮಾನ್ಯ ಅಧ್ಯಯನ-3                250 ಅಂಕಗಳು                3 ಗಂಟೆಗಳು

ಪತ್ರಿಕೆ-5                 ಸಾಮಾನ್ಯ ಅಧ್ಯಯನ-4                250 ಅಂಕಗಳು                3 ಗಂಟೆಗಳು

ಪತ್ರಿಕೆ-6                 ಐಚ್ಛೆಕ ವಿಷಯ (ಪತ್ರಿಕೆ-1)               250 ಅಂಕಗಳು                3 ಗಂಟೆಗಳು

ಪತ್ರಿಕೆ-7                 ಐಚ್ಛಿಕ ವಿಷಯ (ಪತ್ರಿಕೆ-2)               250 ಅಂಕಗಳು                 3 ಗಂಟೆಗಳು

●.ಲಿಖಿತ ಪರೀಕ್ಷೆಗೆ ಒಟ್ಟು ಅಂಕಗಳು                 1750 ಅಂಕಗಳು  


●.ಸೂಚನೆ:

1. ಅರ್ಹತಾ ಪತ್ರಿಕೆಗಳು ಎಂದರೆ, ಕನ್ನಡ ಮತ್ತು ಇಂಗ್ಲೀಷ್ನಲ್ಲಿ ಅರ್ಹತಾ ಪತ್ರಿಕೆಗಳಲ್ಲಿ ಪಡೆದ ಅಂಕಗಳು ಅರ್ಹತಾ ಸ್ವರೂಪದ್ದಾಗಿರತಕ್ಕದ್ದು. ಈ ಪತ್ರಿಕೆಗಳಲ್ಲಿ ಅರ್ಹತೆಗಾಗಿ ಪ್ರತಿಯೊಂದು ಪತ್ರಿಯೊಂದು ಪತ್ರಿಕೆಯಲ್ಲಿ ಕನಿಷ್ಠ 35% ಎಂದು ನಿಗಧಿಪಡಿಸಿದೆ. ಈ ಎರಡು ಪತ್ರಿಕೆಗಳಲ್ಲಿ ಪಡೆದ ಅಂಕಗಳನ್ನು ಆಯ್ಕೆಗಾಗಿ ಮೆರಿಟ್ಟನ್ನು ನಿರ್ಧರಿಸುವುದಕ್ಕಾಗಿ ಪರಿಗಣಿಸತಕ್ಕದ್ದಲ್ಲ. ಅರ್ಹತಾ ಪರೀಕ್ಷೆಗಳು ಎಂದರೆ, ಕನ್ನಡ ಮತ್ತು ಇಂಗ್ಲೀಷ್ನಲ್ಲಿ ನಿಗದಿಪಡಿಸಿದ ಕನಿಷ್ಠ ಅಂಕಗಳನ್ನು ಪಡೆಯದೆ ಇರುವಂಥ ಅಭ್ಯರ್ಥಿಗಳು ವ್ಯಕ್ತಿತ್ವ ಪರೀಕ್ಷೆಗೆ ಮತ್ತು ಆಯ್ಕೆಗೆ ಅರ್ಹರಾಗತಕ್ಕದ್ದಲ್ಲ.

2. ಪರೀಕ್ಷೆಯು, ಸಾಂಪ್ರಾದಾಯಿಕವಾದ ವಿವರಣಾತ್ಮಕ ರೀತಿಯ ಸ್ವರೂಪದ್ದಾಗಿರತಕ್ಕದ್ದು ಮತ್ತು ಎಲ್ಲಾ ಪತ್ರಿಕೆಗಳು ಕಡ್ಡಾಯವಾಗಿರತಕ್ಕದ್ದು.

3. ಪ್ರಶ್ನೆಪತ್ರಿಕೆಗಳು ಕನ್ನಡ ಮತ್ತು ಇಂಗ್ಲೀಷ್ ಎರಡೂ ಭಾಷೆಯಲ್ಲಿ ಸಿದ್ಧ ಗೊಂಡಿರುತ್ತವೆ. ಅಭ್ಯರ್ಥಿಯು ಪತ್ರಿಕೆಯನ್ನು ಸಂಪೂರ್ಣವಾಗಿ ಕನ್ನಡದಲ್ಲಾಗಲಿ ಮತ್ತು ಇಂಗ್ಲೀಷ್ನಲ್ಲಾಗಲಿ ಉತ್ತರಿಸಬಹುದು.

4. ಮುಖ್ಯಪರೀಕ್ಷೆಯ ಪತ್ರಿಕೆ-1 ಕನ್ನಡ ಮತ್ತು ಪತ್ರಿಕೆ-2 ಇಂಗ್ಲೀಷ್ನ್ನು ಹೊರತುಪಡಿಸಿ ಮುಖ್ಯ ಪರೀಕ್ಷೆಯ ಮಟ್ಟವು ಪದವಿಯ ಹಂತದಲ್ಲಿರುತ್ತದೆ. ಪತ್ರಿಕೆ-1 ಕನ್ನಡ ಮತ್ತು ಪತ್ರಿಕೆ-2 ಇಂಗ್ಲೀಷ್ ಮಟ್ಟವು ಮೊದಲ ಭಾಷೆ ಕನ್ನಡ ಮತ್ತು ಮೊದಲ ಭಾಷೆ ಇಂಗ್ಲೀಷ್ ಅನುಕ್ರಮವಾಗಿ ಎಸ್.ಎಸ್.ಎಲ್.ಸಿ ಹಂತದಲ್ಲಿರುತ್ತವೆ.

5. ಎಲ್ಲಾ ಏಳು ಪತ್ರಿಕೆಗಳು ಕಡ್ಡಾಯವಾಗಿರುವವು ಪತ್ರಿಕೆ-2 ರಿಂದ 5 ನೇ ಪತ್ರಿಕೆ ಮೂರು ವಿಭಾಗಗಳನ್ನು ಒಳಗೊಂಡಿರುತ್ತದೆ. ಪ್ರತಿಯೊಂದು ಪತ್ರಿಕೆ ಗರಿಷ್ಠ 250 ಅಂಕಗಳನ್ನು ಒಳಗೊಮಡಿರುವುದು ಮತ್ತು ಮೂರು ಗಂಟೆಗಳ ಕಾಲಾವಧಿ ಮಾತ್ರ ಇರುತ್ತದೆ.

6. ಲಿಖಿತ ಮತ್ತು ಮೌಖಿಕ ಪರೀಕ್ಷೆ ಅಂಕಗಳನ್ನು ಆಯ್ಕೆ ಪಟ್ಟಿಯೊಂದಿಗೆ ಪ್ರಕಟಿಸಲಾಗುವುದು.


●.ವ್ಯಕ್ತಿತ್ವ ಪರೀಕ್ಷೆ:

ಆತ/ಆಕೆಯು ಮುಖ್ಯ ಪರೀಕ್ಷೆಯಲ್ಲಿ ಪಡೆದ ಅಂಕಗಳನ್ನು ಹೊರತುಪಡಿಸಿ, ಅವರ ಮುಂದೆ ದಾಖಲೆಗಳನ್ನು ಹಾಜರುಪಡಿಸಲಾಗುವ ಆ ಅಭ್ಯರ್ಥಿಯನ್ನು ಮಂಡಳಿಯು ಸಂದರ್ಶನ ನಡೆಸುತ್ತದೆ. ಆತ/ಆಕೆಯನ್ನು ಸಾಮಾನ್ಯ ಆಸಕ್ತಿಗಳ ವಿಷಯಗಳಿಗೆ ಸಂಬಂಧಿಸಿದ ಪ್ರಶ್ನೆಗಳನ್ನು ಕೇಳಲಾಗುವುದು.

ಸಂದರ್ಶನ ಉದ್ದೇಶ ಸಕ್ಷಮ ಮಂಡಳಿಯು ಮತ್ತು ವೀಕ್ಷಕರು, ನಿಷ್ಪಕ್ಷಪಾತವಾಗಿ ಸಾರ್ವಜನಿಕ ಸೇವೆಗಳ ನಿರ್ವಹಣೆಗೆ ಅಭ್ಯರ್ಥಿಯ ವೈಯಕ್ತಿಕ ಅರ್ಹತೆಯನ್ನು ನಿರ್ವಹಿಸುವುದಾಗಿದೆ, ಪರೀಕ್ಷೆಯು, ಅಭ್ಯರ್ಥಿಯ ಮಾನಸಿಕ ಸಾಮಥ್ರ್ಯವನ್ನು ನಿರ್ಣಯಿಸಲು ಉದ್ದೇಶಿಸಲಾಗಿದೆ.

ಸ್ಥೂಲವಾಗಿ ಆತ/ಆಕೆಯ ಬೌದ್ಧಿಕ ಅರ್ಹತೆಗಳನ್ನು ಮಾತ್ರವಲ್ಲದೆ ವಾಸ್ತವಿಕತೆಯನ್ನು ನಿರ್ಧರಿಸುವುದಾಗಿದೆ, ನಿರ್ಧರಿಸುವ ಕೆಲವು ಅರ್ಹತೆಗಳು ಮಾನಸಿಕವಾಗಿ ಜಾಗರೂಕತೆ, ಹೊಂದಾಣಿಕೆಯ ಸಂಧಿಗ್ಧ ಅಧಿಕಾರಗಳು, ಸ್ಪಷ್ಟತೆ ಮತ್ತು ತಾರ್ಕಿಕ ನಿರೂಪಣೆ, ಸರಿ ಹೊಂದುವ ನಿರ್ಣಯಗಳು ವಿಭಿನ್ನ ಆಸಕ್ತಿ, ಗಾಢತೆ, ಸಾಮಾಜಿಕ ಒಗ್ಗಟ್ಟು ಮತ್ತು ನಾಯಕತ್ವ, ಬೌದ್ಧಕ ಹಾಗೂ ನೈತಿಕ ದೃಢ ನಿಷ್ಠೆಯಾಗಿರುವುದು, ಸಂದರ್ಶನ ಕೌಶಲವು ಕಟ್ಟುನಿಟ್ಟಾದ ಪಾಟೀ ಸವಾಲು ಆಗಿರುವುದಿಲ್ಲ. ಆದರೆ, ಸಹಜವಾದುದಾಗಿರುತ್ತದೆ. ಪ್ರತ್ಯಕ್ಷವಾಗಿ ಮತ್ತು ಉದ್ದೇಶಿತ ಚರ್ಚೆ ಇದ್ದಾಗ್ಯೂ ಅಭ್ಯರ್ಥಿಯ ಮಾನಸಿಕ ಸಾಮಥ್ರ್ಯವನ್ನು ವ್ಯಕ್ತಪಡಿಸುವ ಉದ್ದೇಶವಾಗಿದೆ.

 ಸಂದರ್ಶನ ಪರೀಕ್ಷೆಯು ಅಭ್ಯರ್ಥಿಯ ವಿಶಿಷ್ಟತೆ ಅಥವಾ ಸಾಮಾನ್ಯ ಜ್ಞಾನವನ್ನಾಗಲಿ ಪರೀಕ್ಷಿಸುವ ಉದ್ದೇಶವಲ್ಲ. ಅದನ್ನು ಈಗಾಗಲೇ ಲಿಖಿತ ಪರೀಕ್ಷೆಗಳ ಮೂಲಕ ಪರೀಕ್ಷಿಸಿರುವುದಾಗಿರುತ್ತದೆ. ಅಭ್ಯರ್ಥಿಗಳು ಅವರ ಶೈಕ್ಷಣಿಕ ಅಧ್ಯಯನಕ್ಕೆ ಸಂಬಂಧಿಸಿದಂತೆ ವಿಶೇಷ ವಿಷಯಗಳಲ್ಲಿ ಆಸಕ್ತಿವಹಿಸುವುದು ಮಾತ್ರವಲ್ಲದೆ ಉತ್ತಮ ಶಿಕ್ಷಣ ಯುವಕರ ಕೌತುಕವನ್ನು ಕೆರಳಿಸುವಂತಹ ಘಟನೆಗಳು, ಅವರ ಸುತ್ತಮುತ್ತ ನಡೆಯುತ್ತಿರುವ ರಾಜ್ಯದ ಅಥವಾ ದೇಶದ ಒಳಗಿನ ಹಾಗೂ ಹೊರಗಿನ ಘಟನೆಗಳು ಬಗ್ಗೆ ಹಾಗೂ ಆಧುನಿಕ ಚಿಂತನೆಗಳು ಮತ್ತು ಹೊಸ ಅನ್ವೇಷಣೆಗಳ ಬಗ್ಗೆ ಆಸಕ್ತಿವಹಿಸಬೇಕಾಗುತ್ತದೆ.

ಆಯೋಗವು ಸಂದರ್ಭಾನುಸಾರ ಗ್ರೂಪ್-ಎ ಮತ್ತು ಗ್ರೂಪ್-ಬಿ ನ ಸೇವೆಗಳಲ್ಲಿ ಖಾಲಿ ಇರುವ ಹುದ್ದೆಗಳ ಅಭ್ಯರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಮೂರರಷ್ಟು ಅಭ್ಯರ್ಥಿಗಳನ್ನು ವ್ಯಕ್ತಿತ್ವ ಪರೀಕ್ಷೆಗೆ ಅಹ್ವಾನಿಸತಕ್ಕದ್ದು. ಪರಿಶಿಷ್ಟ ಜಾತಿಗಳು, ಪರಿಶಿಷ್ಟ ಪಂಗಡಗಳು ಮತ್ತು ಇತರೆ ಹಿಂದುಳಿದ ವರ್ಗಗಳಿಗೆ ಮೀಸಲಾತಿಯನ್ನು ಖಚಿತಪಡಿಸಿಕೊಂಡು, ಖಾಲಿ ಹುದ್ದೆಗಳ ಅನುಪಾತದ ಆಧಾರದಲ್ಲಿ ಮುಖ್ಯ ಪರೀಕ್ಷೆಯ ಫಲಿತಾಂಶದ ಆಧಾರದ ಮೇಲೆ ಮೆರಿಟ್ ಕ್ರಮಾನುಸಾರ ಅಭ್ಯರ್ಥಿಗಳನ್ನು ವ್ಯಕ್ತತ್ವ ಪರೀಕ್ಷೆಗೆ ಆಹ್ವಾನಿಸುವುದು ವ್ಯಕ್ತಿತ್ವ ಪರೀಕ್ಷೆಯನ್ನು ಗರಿಷ್ಠ 200 ಅಂಕಗಳಿಗೆ ನಡೆಸತಕ್ಕದ್ದು.

...ಮುಂದುವರೆಯುವುದು. 
(Courtesy : UCC Bangalore) 

Monday, 20 February 2017

☀️ ಕೆಎಎಸ್‌ ಪೂರ್ವಭಾವಿ ಪರಿಕ್ಷೆಯ ಪಠ್ಯಕ್ರಮ : (PART I) (KAS PRELIMINARY PAPERS SYLLABUS)

☀️ ಕೆಎಎಸ್‌ ಪೂರ್ವಭಾವಿ ಪರಿಕ್ಷೆಯ ಪಠ್ಯಕ್ರಮ : (PART I)
(KAS PRELIMINARY PAPERS SYLLABUS)
━━━━━━━━━━━━━━━━━━━━━━━━━━━━━━━━━━━━━━━━━━━━━

★ ಕೆಎಎಸ್ ಪರಿಕ್ಷೆಯ ಪಠ್ಯಕ್ರಮ
(KAS Exam Syllabus)


 ಪೂರ್ವಭಾವಿ ಪರಿಕ್ಷೆಯು ಕೇಂದ್ರ ಲೋಕ ಸೇವಾ ಆಯೋಗ ನಡೆಸುವ ಐಎಎಸ್‌ ಪೂರ್ವಭಾವಿ ಪರೀಕ್ಷೆಯ ಸ್ವರೂಪದಲ್ಲಿರುತ್ತದೆ.

ಪೂರ್ವಭಾವಿ ಪರೀಕ್ಷೆಯು ವಸ್ತುನಿಷ್ಠ (ಬಹು ಆಯ್ಕೆ) ಮಾದರಿಯ ಎರಡು ಸಾಮಾನ್ಯ ಜ್ಞಾನ ಪತ್ರಿಕೆಗಳನ್ನು ಒಳಗೊಂಡಿರುತ್ತದೆ.

ಪ್ರತಿ ಪತ್ರಿಕೆಯು ಎರಡು ಗಂಟೆ ಕಾಲಾವಧಿಯನ್ನು ಹೊಂದಿರುತ್ತದೆ. ಹಾಗೇ ಗರಿಷ್ಠ 200 ಅಂಕಗಳನ್ನು ನಿಗದಿಪಡಿಸಲಾಗಿದೆ.

ಪ್ರತಿ ಪತ್ರಿಕೆಯಲ್ಲಿ ನೂರು ಪ್ರಶ್ನೆಗಳಿರುತ್ತವೆ.

ಒಂದು ಪ್ರಶ್ನೆಗೆ ಎರಡು ಅಂಕಗಳನ್ನು ನಿಗದಿಪಡಿಸಲಾಗಿದೆ.

ತಪ್ಪು ಉತ್ತರವನ್ನು ಗುರುತಿಸುವ ಪ್ರಶ್ನೆಗಳಿಗೆ ಅಂಕಗಳನ್ನು ಕಳೆಯುವ ಋಣಾತ್ಮಕ ಅಂಕ ಪದ್ಧತಿಯನ್ನು ಇದೇ ಮೊದಲ ಬಾರಿಗೆ ಪರಿಚಯಿಸಲಾಗಿದೆ.

ಈ ಪದ್ಧತಿಯಿಂದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ ಎಂದು ತಜ್ಞರು ಭಾವಿಸಿದ್ದಾರೆ. @spardhaloka


☀️ KAS PRELIMINARY PAPERS SYLLABUS (explanation)
━━━━━━━━━━━━━━━━━━━━━━━━━━━━━━━━━━━━━━━━━━━━━

ಕೆಎಎಸ್‌ ಹುದ್ದೆಗಳಿಗೂ ಐಎಎಸ್‌  ಪೂರ್ವಭಾವಿ ಪರೀಕ್ಷೆಯ ಪಠ್ಯಕ್ರಮದ ಮಾದರಿಯನ್ನೇ ಅನುಸರಿಸಲಾಗಿದೆ. ಪೂರ್ವಭಾವಿ ಪರೀಕ್ಷೆಯು ಒಟ್ಟು 400 ಅಂಕಗಳಿಗೆ ನಡೆಸಲಾಗುವುದು.

ಎರಡು ಸಾಮಾನ್ಯ ಜ್ಞಾನ ಪತ್ರಿಕೆಗಳ ಪಠ್ಯಕ್ರಮ ಈ ಕೆಳಕಂಡಂತಿದೆ.


☀️ ಪತ್ರಿಕೆ–1:

ಈ ಪತ್ರಿಕೆಯಲ್ಲಿ 100 ಪ್ರಶ್ನೆಗಳಿರುತ್ತವೆ. ಪ್ರತಿ ಪ್ರಶ್ನೆಗೂ ಎರಡು ಅಂಕಗಳನ್ನು ನಿಗದಿಪಡಿಸಲಾಗಿದೆ. ಅಭ್ಯರ್ಥಿಗಳು ಎರಡು ಗಂಟೆಯ ಕಾಲಾವಧಿಯಲ್ಲಿ ಉತ್ತರಿಸಬೇಕು.

ಅಂತರರಾಷ್ಟ್ರೀಯ ಮತ್ತು ರಾಷ್ಟ್ರೀಯ ಪ್ರಚಲಿತ ವಿದ್ಯಮಾನಗಳು,
ಕರ್ನಾಟಕವನ್ನು ಮುಖ್ಯವಾಗಿರಿಸಿಕೊಂಡು ಭಾರತ ಇತಿಹಾಸದ ಮೇಲೆ ಪ್ರಶ್ನೆಗಳನ್ನು ಕೇಳಲಾಗುವುದು.
ಮುಖ್ಯವಾಗಿ ರಾಷ್ಟ್ರೀಯ ಚಳವಳಿ, ಸ್ವಾತಂತ್ರ್ಯಹೋರಾಟ, ಆ ಕಾಲಘಟ್ಟದ ಸಾಮಾಜಿಕ, ಆರ್ಥಿಕ ಪರಿಸ್ಥಿತಿ, ಸಾಂಸ್ಕೃತಿಕ ಮತ್ತು ರಾಜಕೀಯ ಇತಿಹಾಸದ ಪ್ರಶ್ನೆಗಳಿರುತ್ತವೆ.
ಜಾಗತಿಕ ಭೂಗೋಳ, ಭಾರತದ ಭೂಗೋಳ ಸೇರಿದಂತೆ ಕರ್ನಾಟಕ ಭೂಗೋಳವನ್ನು ಮುಖ್ಯವಾಗಿರಿಸಿಕೊಂಡ ಪ್ರಶ್ನೆಗಳು,
ಕರ್ನಾಟಕವನ್ನು ಮುಖ್ಯವಾಗಿರಿಸಿಕೊಂಡು ದೇಶದ ರಾಜಕೀಯ ವ್ಯವಸ್ಥೆ, ಆರ್ಥಿಕ ಸುಧಾರಣೆಗಳು, ಗ್ರಾಮೀಣಾಭಿವೃದ್ಧಿ, ಬಡತನ ನಿರ್ಮೂಲನೆ, ಜನಸಂಖ್ಯಾ ಶಾಸ್ತ್ರ ಹಾಗೂ ಸಾಮಾಜಿಕ ಬದಲಾವಣೆಗಳನ್ನು ಒಳಗೊಂಡ ಭಾರತದ ಆರ್ಥಿಕ ಮತ್ತು ರಾಜಕೀಯ ವ್ಯವಸ್ಥೆ, ಈ ಅಂಶಗಳನ್ನು ಪ್ರಾಮುಖ್ಯವಾಗಿರಿಸಿಕೊಂಡು ಪ್ರಶ್ನೆಗಳನ್ನು ಕೇಳಲಾಗುವುದು.

ಈ ಪತ್ರಿಕೆಯು ಸಂಪೂರ್ಣವಾಗಿ ಪದವಿ ಮಟ್ಟದಾಗಿರುತ್ತದೆ.


☀️ ಪತ್ರಿಕೆ–2:

ಈ ಪತ್ರಿಕೆಯಲ್ಲಿ ಅಭ್ಯರ್ಥಿಗಳು ಎರಡು ಗಂಟೆಯ ಕಾಲಾವಧಿಯಲ್ಲಿ 200 ಅಂಕಗಳಿಗೆ 100 ಪ್ರಶ್ನೆಗಳಿಗೆ ಉತ್ತರಿಸಬೇಕು.

ರಾಜ್ಯದ ಪ್ರಚಲಿತ ವಿದ್ಯಮಾನಗಳು ಮತ್ತು ರಾಜ್ಯ ಸರ್ಕಾರದ ಯೋಜನೆಗಳು, ದೈನಂದಿನ ವಿಜ್ಞಾನ, ಪರಿಸರ ವಿಜ್ಞಾನ ಮತ್ತು ಸಮಕಾಲೀನ ತಂತ್ರಜ್ಞಾನ ಕುರಿತ ಪ್ರಶ್ನೆಗಳು ಇರುತ್ತವೆ.
ವಿಜ್ಞಾನ, ಪರಿಸರ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರಶ್ನೆಗಳು ಎಸ್‌ಎಸ್‌ಎಲ್‌ಸಿ ಮಟ್ಟದಾಗಿರುತ್ತವೆ. ಅಥವಾ ಒಬ್ಬ ಸುಕ್ಷಿತ ವ್ಯಕ್ತಿ ಸಾಮಾನ್ಯವಾಗಿ ತಿಳಿದಿರುವ ಜ್ಞಾನ ಮಟ್ಟದಲ್ಲಿ ವಿಜ್ಞಾನ ಪ್ರಶ್ನೆಗಳನ್ನು ಕೇಳಲಾಗುವುದು.
ಎಸ್‌ಎಸ್‌ಎಲ್‌ಸಿ ಮಟ್ಟದ ಮನೋ ಸಾಮರ್ಥ್ಯದ ಪ್ರಶ್ನೆಗಳನ್ನು ಕೇಳಲಾಗುವುದು. ಇದರಲ್ಲಿ ಗ್ರಹಿಕೆ, ತಾರ್ಕಿಕ ಸಮರ್ಥನೆ ಮತ್ತು ವಿಶ್ಲೇಷಣೆ, ನಿರ್ಧಾರ ಕೈಗೊಳ್ಳುವಿಕೆ, ಸಮಸ್ಯೆ ಬಿಡಿಸುವಿಕೆ, ಮೂಲ ಗಣಿದ ಜ್ಞಾನ, ದತ್ತಾಂಶ, ಪರಿಮಾಣ, ಸಂಖ್ಯೆಗಳು, ನಕ್ಷೆಗಳು, ರೇಖಾಚಿತ್ರಗಳು ಮತ್ತು ಕೋಷ್ಟಕಗಳಿಗೆ ಸಂಬಂಧಿಸಿದ ಪ್ರಶ್ನೆಗಳು ಇರುತ್ತವೆ.

ಎರಡನೇ ಪತ್ರಿಕೆಯಲ್ಲಿ ಮನೋಸಾಮರ್ಥ್ಯ ಮತ್ತು ಗಣಿತದ ಪ್ರಶ್ನೆಗಳನ್ನು ಹೊರತು ಪಡಿಸಿದರೆ ಉಳಿದ ಎಲ್ಲಾ ಪ್ರಶ್ನೆಗಳು ಪದವಿ ಮಟ್ಟದಲ್ಲಿರುತ್ತವೆ.


☀️ ಋಣಾತ್ಮಕ ಮೌಲ್ಯಮಾಪನ:

ಅಭ್ಯರ್ಥಿಗಳು ತಪ್ಪು ಉತ್ತರವನ್ನು ಗುರುತಿಸಿದ ಪ್ರಶ್ನೆಗೆ ಪಡೆದ ಅಂಕಗಳಲ್ಲಿ 1/4 ಅಂಕವನ್ನು ಕಳೆಯಲಾಗುವುದು.
ಅಂದರೆ ಅಭ್ಯರ್ಥಿಯು 100 ಪ್ರಶ್ನೆಗಳಲ್ಲಿ 40 ಪ್ರಶ್ನೆಗಳನ್ನು ತಪ್ಪಾಗಿ ಗುರುತಿಸಿದ್ದರೆ ಅಭ್ಯರ್ಥಿಯು ಪಡೆದ ಒಟ್ಟು ಅಂಕಗಳಲ್ಲಿ 10 ಅಂಕಗಳನ್ನು ಕಳೆಯಲಾಗುವುದು. ಆದ್ದರಿಂದ ಅಭ್ಯರ್ಥಿಗಳು ಉತ್ತರವನ್ನು ನಿಖರವಾಗಿ ಗೊತ್ತಿದ್ದಲ್ಲಿ ಮಾತ್ರ ಉತ್ತರಿಸಬೇಕು.
(Courtesy : UCC Bangalore)