☀ ಐಎಎಸ್ (ಯುಪಿಎಸ್ಸಿ) 2018ರ ಪ್ರಿಲಿಮ್ಸ್ ಪರೀಕ್ಷೆ ದಿನಾಂಕ ಪ್ರಕಟ :
(UPSC Released date for Civil Services Preliminary Exam 2018.) ━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━
★ ಯುಪಿಎಸ್ಸಿ / ಐಎಎಸ್ ಪರೀಕ್ಷಾ ತಯಾರಿ
(IAS Examination preparation)
★ ಐಎಎಸ್ ಪ್ರಿಲಿಮ್ಸ್ ಪರೀಕ್ಷಾ ತಯಾರಿ
(IAS Prelims Exam Preparation)
ಕೇಂದ್ರ ಲೋಕಸೇವಾ ಆಯೋಗದ (Union Public Service Commission (UPSC)) 2018 ರ ನಾಗರಿಕ ಸೇವೆಗಳ ಪ್ರಾಥಮಿಕ ಪರೀಕ್ಷೆ ಜೂನ್ 03 ರದು ನಡೆಯಲಿದೆ.
2014 ರಿಂದ 2016 ರವರೆಗೆ ಆಗಸ್ಟ್ ನಲ್ಲಿ ಪ್ರಾಥಮಿಕ ಪರೀಕ್ಷೆಗಳು ನಡೆದಿದ್ದವು. ಆದರೆ 2018 ರಲ್ಲಿ ಜೂನ್ 03 ರಂದು ನಡೆಸಲು ನಿರ್ಧರಿಸಿರುವುದಾಗಿ ಯುಪಿಎಸ್ಸಿ ತಿಳಿಸಿದೆ.
ಪರೀಕ್ಷೆಯ ಅಧಿಸೂಚನೆಯನ್ನು ಫೆಬ್ರವರಿ 7 ರಂದು ಪ್ರಕಟಿಸಲಾಗುವುದು.
ಅರ್ಜಿ ಸಲ್ಲಿಸಲು ಮಾರ್ಚ್ 6 ಕೊನೆಯ ದಿನವಾಗಿರುತ್ತದೆ. 2017ರ ಪ್ರಿಲಿಮ್ಸ್ ಪರೀಕ್ಷೆಯ ಫಲಿತಾಂಶವು ಜುಲೈ 27 ರಂದು ಪ್ರಕಟಿಸಲಾಗಿದೆ.
●.ಪ್ರಿಲಿಮ್ಸ್ ಪರೀಕ್ಷೆ ದಿನಾಂಕ ಪ್ರಕಟ
━━━━━━━━━━━━━━━━━━━
ಐಎಎಸ್, ಐಪಿಎಸ್, ಐಎಫ್‌ಎಸ್ ಸೇರಿದಂತೆ ಉನ್ನತ ಹುದ್ದೆಗಳಿಗಾಗಿ ಪ್ರತಿವರ್ಷ ಯುಪಿಎಸ್‌ಸಿ ಪರೀಕ್ಷೆ ನಡೆಸುತ್ತದೆ. ಮೂರು ಹಂತಗಳಲ್ಲಿ ಈ ಪರೀಕ್ಷೆ ಇದೆ.
ಪ್ರಿಲಿಮ್ಸ್, ಮೇನ್ಸ್ ಹಾಗೂ ಇಂಟರ್‌ವ್ಯೂ ಸೇರಿ ಮೂರು ಹಂತಗಳ ಪರೀಕ್ಷೆಯಲ್ಲಿ ತೇರ್ಗಡೆಯಾಗಬೇಕು.
●.ಪರೀಕ್ಷೆ ತೆಗೆದುಕೊಳ್ಳಲು ಬೇಕಾದ ಶೈಕ್ಷಣಿಕ ಮತ್ತು ಇತರೆ ಅರ್ಹತೆ
━━━━━━━━━━━━━━━━━━━━━━━━━━━━━━━━━━━━
ಪದವಿ ಪರೀಕ್ಷೆಯ ಅಂತಿಮ ಹಂತದಲ್ಲಿರುವವರೂ ಕೂಡ ಪ್ರಿಲಿಮ್ಸ್ ಬರೆಯಬಹುದು.ಪ್ರಿಲಿಮ್ಸ್‌ನಲ್ಲಿ ತೇರ್ಗಡೆಯಾಗಿ ಮುಖ್ಯ ಪರೀಕ್ಷೆಗೆ ಅರ್ಹತೆ ಪಡೆದರೆ ಆಗ ಪದವಿ ತೇರ್ಗಡೆಗೆ ಸಂಬಂಧಿಸಿದ ದಾಖಲೆಗಳನ್ನು ಒದಗಿಸಬೇಕು.
ಯುಪಿಎಸ್‌ಸಿಯ ದೃಷ್ಟಿಯಲ್ಲಿ ವಿ.ವಿ.ಗಳ ಪರೀಕ್ಷೆಗೆ ತತ್ಸಮಾನ ಎನಿಸುವ ಬೇರೆ ಪರೀಕ್ಷೆಗಳಲ್ಲಿ ತೇರ್ಗಡೆಯಾಗಿರುವ ಅಭ್ಯರ್ಥಿಗಳೂ ಐಎಎಸ್ ಪರೀಕ್ಷೆಗೆ ಅರ್ಹರಾಗುತ್ತಾರೆ.
ತಾಂತ್ರಿಕ ಪದವೀಧರರು: ಬಿಇ., ಎಂ.ಬಿ.ಬಿಎಸ್ ಪದವೀಧರರು ಐಎಎಸ್ ಬರೆಯಲು ಅರ್ಹರು. ಯಾವುದೇ ಒಂದು ವಿಷಯದಲ್ಲಿ ಯಶಸ್ವಿಯಾಗಿ ಉತ್ತೀರ್ಣರಾಗಿರುವುದು ಕಡ್ಡಾಯ. ವೈದ್ಯಕೀಯ ವಿದ್ಯಾರ್ಥಿಗಳಾಗಿದ್ದರೆ ಅಂತಿಮ ವರ್ಷದ ಪರೀಕ್ಷೆ ಪಾಸಾಗಿರಬೇಕು, ಇಂಟರ್ನ್‌ಶಿಪ್ ಮುಗಿಸಿರದಿದ್ದರೂ ಪರೀಕ್ಷೆ ತೆಗೆದುಕೊಳ್ಳಬಹುದು.
ಸಂದರ್ಶನದ ವೇಳೆಗೆ ಅವರು ಅಂತಿಮ ಪರೀಕ್ಷೆಯೊಂದಿಗೆ ಇಂಟರ್ನ್‌ಶಿಪ್ ಕೂಡ ತೇರ್ಗಡೆಯಾಗಿದ್ದು ಸಂಬಂಧಿಸಿದ ಪ್ರಮಾಣಪತ್ರ ಹೊಂದಿರಬೇಕು.
ಕರ್ನಾಟಕದಲ್ಲಿ ವಿವಿಧ ವಿಶ್ವವಿದ್ಯಾನಿಲಯಗಳ ಮೂಲಕ ಡಿಗ್ರಿ ಮಾಡಿರುವವರು ಈ ಪರೀಕ್ಷೆಗೆ ಅರ್ಹ ಅಭ್ಯರ್ಥಿಗಳು.
●.ಶಿಕ್ಷಣದ ನಂತರ/ಜತೆಗೆ ಹೊಂದಿರಬೇಕಾದ ಇತರೆ ಅರ್ಹತೆಗಳು
━━━━━━━━━━━━━━━━━━━━━━━━━━━━━━━━━━
ಐಎಎಸ್ ಮತ್ತು ಐಪಿಎಸ್ ಹುದ್ದೆಗಳಿಗೆ ಭಾರತದ ನಾಗರಿಕರಿಗೆ ಮಾತ್ರ ಪ್ರವೇಶಾವಕಾಶ.
ಯುಪಿಎಸ್‌ಸಿ ನಡೆಸುವ ಬೇರೆ ಪರೀಕ್ಷೆಗಳಿಗೆ ಭಾರತದ ನಾಗರಿಕರೊಡನೆ ನೇಪಾಳ, ಭೂತಾನ್ ಪ್ರಜೆಗಳೂ ಭಾಗ ವಹಿಸಬಹುದು.
ಜನವರಿ 1, 1962ಕ್ಕಿಂತ ಮೊದಲೇ ಭಾರತದಲ್ಲಿ ನೆಲೆಸಲು ಆಶ್ರಯ ಕೋರಿಬಂದಿರುವ ಟಿಬೆಟ್ಟಿನವರು ಸಹ ಇದೇ ರೀತಿ ಅರ್ಹರಾಗಿರುತ್ತಾರೆ.
●.ವಯೋಮಿತಿ
━━━━━━━━━
ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ಗರಿಷ್ಠ ಆರು ಬಾರಿ ಹಾಗೂ ಒಬಿಸಿ ಅಭ್ಯರ್ಥಿಗಳಿಗಾಗಿ ಗರಿಷ್ಠ ಒಂಬತ್ತು ಬಾರಿ ಪರೀಕ್ಷೆ ಬರೆಯಲು ಅನುಮತಿಯಿದೆ. ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಅಭ್ಯರ್ಥಿಗಳು ಎಷ್ಟು ಬಾರಿಯಾದರೂ ಪರೀಕ್ಷೆಗೆ ಹಾಜರಾಗಬಹುದು.
ಪರೀಕ್ಷೆಗೆ ಹಾಜರಾಗಲು ಗರಿಷ್ಠ ವಯೋಮಿತಿ ಪರಿಶಿಷ್ಟ ಜಾತಿ/ಪಂಗಡದವರಿಗೆ 37, ಒಬಿಸಿಗಾಗಿ 35 ಹಾಗೂ ಇತರೆ ವರ್ಗದವರಿಗೆ 32. ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಯು ಆ ವರ್ಷ ಆಗಸ್ಟ್ 1ರಂದು 32ರ ವಯಸ್ಸು ದಾಟಿರಬಾರದು. ಕನಿಷ್ಠ ವಯೋಮಿತಿ 21 ವರ್ಷ
(Courtesy : careerindia)

No comments:
Post a Comment