☀ ‘ಜೇಮ್ಸ್ ವೆಬ್’ ಬಾಹ್ಯಾಕಾಶ ದೂರದರ್ಶಕ (ಟೆಲಿಸ್ಕೋಪ್) :
(James Webb Space Telescope (JWST))
━━━━━━━━━━━━━━━━━━━━━━━━━━━━━━━━━━
★ ಪ್ರಚಲಿತ ಸಾಮಾನ್ಯ ಅಧ್ಯಯನ
(Current Affairs for General Studies)
★ ಸಾಮಾನ್ಯ ವಿಜ್ಞಾನ
(General Science)
- ಅಮೆರಿಕದ ಬಾಹ್ಯಾಕಾಶ ಸಂಸ್ಥೆಯಾದ ‘ನಾಸಾ’ ಇತ್ತೀಚೆಗೆ (2016ರಲ್ಲಿ) ನಿರ್ಮಿಸಿದ ಜಗತ್ತಿನ ಅತ್ಯಂತ ದೊಡ್ಡ ಮತ್ತು ಶಕ್ತಿಶಾಲಿ ಬಾಹ್ಯಾಕಾಶ ದೂರದರ್ಶಕ (ಟೆಲಿಸ್ಕೋಪ್) ಕ್ಕೆ ಜೇಮ್ಸ್‌ವೆಬ್ ಎಂದು ಹೆಸರಿಡಲಾಗಿದೆ.
- ಬ್ರಹ್ಮಾಂಡ ಉಗಮದ ನಂತರ ಸೃಷ್ಟಿಯಾದ ತಾರಾಗುಚ್ಛಗಳ (ಗೆಲಾಕ್ಸಿ) ಪತ್ತೆಗಾಗಿ ಈ ದೂರದರ್ಶಕವನ್ನು ವಿಜ್ಞಾನಿಗಳು ಬಳಸಿಕೊಳ್ಳಲಿದ್ದಾರೆ. ಜತೆಗೆ ದೂರದಲ್ಲಿರುವ ನಕ್ಷತ್ರಗಳನ್ನು ಸುತ್ತುಹಾಕುತ್ತಿರುವ ಗ್ರಹಗಳ ಅನ್ವೇಷಣೆಗೂ ಇದನ್ನು ಬಳಸಿಕೊಳ್ಳಲಾಗುತ್ತದೆ.
- ಇದು ಅತ್ಯಾಧುನಿಕ ದೂರದರ್ಶಕವು ಅತಿ ಸೂಕ್ಷ್ಮಗ್ರಾಹಿ ‘ಇನ್ಫ್ರಾರೆಡ್’ ಕ್ಯಾಮೆರಾಗಳನ್ನು ಹೊಂದಿದ್ದು, ಇವುಗಳನ್ನು ಸೂರ್ಯನ ಕಿರಣಗಳಿಂದ ರಕ್ಷಿಸಲು ಚಿಪ್ಪಿನಂತೆ ವಿಶೇಷ ರಕ್ಷಾ ಕವಚ ನಿರ್ಮಿಸಲಾಗಿದೆ.
- ಟೆನಿಸ್ ಕೋರ್ಟ್ ಗಾತ್ರದಷ್ಟಿರುವ ಈ ರಕ್ಷಾ ಕವಚವು ಐದು ಅತಿ ತೆಳ್ಳನೆಯ (ತಲೆಕೂದಲಿನಷ್ಟು) ಪದರಗಳನ್ನು ಹೊಂದಿದೆ. ಕ್ಯಾಮೆರಾದಲ್ಲಿರುವ ‘ಇನ್ಫ್ರಾರೆಡ್ ಸೆನ್ಸರ್’ಗಳನ್ನು ಸೂರ್ಯನ ಅತಿಯಾದ ಶಾಖದಿಂದ ಇದು ರಕ್ಷಿಸುತ್ತದೆ.
- ದೂರದರ್ಶಕದ ಉಷ್ಣತೆಯನ್ನು ಕನಿಷ್ಠ –298 ಡಿಗ್ರಿ ಸೆಲ್ಸಿಯಸ್ ಮತ್ತು ಗರಿಷ್ಠ 298 ಡಿಗ್ರಿ ಸೆಲ್ಸಿಯಸ್ ನಡುವೆ ನಿಯಂತ್ರಿಸಲು ಈ ಐದು ಪದರಗಳ ಕವಚಗಳು ಒಂದಕ್ಕೊಂದು ಪೂರಕವಾಗಿ ಕಾರ್ಯ ನಿರ್ವಹಿಸುತ್ತವೆ.
- ಪ್ರತಿ ಪದರವನ್ನು ‘ಕಪ್ಟಾನ್’ ಎಂಬ ವಸ್ತುವಿನಿಂದ ತಯಾರಿಸಲಾಗಿದೆ. ಅತ್ಯಂತ ಹೆಚ್ಚು ಉಷ್ಣತೆಯನ್ನು ನಿಗ್ರಹಿಸುವ ಸಾಮರ್ಥ್ಯ ಇದಕ್ಕಿದೆ.
ಉಡಾವಣೆ ಸಂದರ್ಭದಲ್ಲಿನ ವಾತಾವರಣವನ್ನು ತಾಳಿಕೊಳ್ಳುವ ರೀತಿಯಲ್ಲಿ ‘ಜೇಮ್ಸ್ ವೆಬ್’ ವಿನ್ಯಾಸ ಮಾಡಲಾಗಿದೆ.
☀ ಜೇಮ್ಸ್ ವೆಬ್ ವೈಶಿಷ್ಟ್ಯಗಳು :
━━━━━━━━━━━━━━━━━
* ಹಬಲ್ ದೂರದರ್ಶಕಕ್ಕಿಂತ 100 ಪಟ್ಟು ಹೆಚ್ಚು ಸಾಮರ್ಥ್ಯ
* 26 ವರ್ಷಗಳಷ್ಟು ಹಳೆಯ ಹಬಲ್ ದೂರದರ್ಶಕದ ಉತ್ತರಾಧಿಕಾರಿ
* ನಿರ್ಮಾಣ ಕಾರ್ಯದಲ್ಲಿ ಯುರೋಪ್ ಮತ್ತು ಕೆನಡಾದ ಬಾಹ್ಯಾಕಾಶ ಸಂಸ್ಥೆಗಳ ನೆರವು
* ಇನ್‌ಫ್ರಾರೆಡ್ ಕ್ಯಾಮೆರಾ ರಕ್ಷಣೆಗೆ ಐದು ಪದರಗಳ ಟೆನಿಸ್ ಕೋರ್ಟ್ ಗಾತ್ರದ ರಕ್ಷಾ ಕವಚ

No comments:
Post a Comment