"ಮನುಷ್ಯ ದೀಪವಾದರೂ ಆಗಬೇಕು, ಕನ್ನಡಿಯಾದರೂ ಆಗಬೇಕು. ಒಂದು ಬೆಳಕನ್ನು ಕೊಡುತ್ತದೆ ಮತ್ತೊಂದು ಅದನ್ನು ಪ್ರತಿಬಿಂಬಿಸುತ್ತದೆ. ಪ್ರತಿಯೊಬ್ಬರೂ ದೀಪ ಆಗದೇ ಹೋಗಬಹುದು ಆದರೆ ಕನ್ನಡಿ ಆಗಬಲ್ಲರು. ತಿಳಿದಿರುವ ಜ್ಞಾನವನ್ನು ಮತ್ತೊಬ್ಬರಿಗೆ ಹಂಚುವುದೇ ಜೀವನ.."—ಅರಿಸ್ಟಾಟಲ್
Showing posts with label KAS mains General Studies. Show all posts
Showing posts with label KAS mains General Studies. Show all posts

Thursday, 14 December 2017

☀️ Part-8.>> ಕೆಎಎಸ್ ಮುಖ್ಯ ಪರೀಕ್ಷೆಯ ತಯಾರಿಗಾಗಿ (ಸಾಮಾನ್ಯ ಅಧ್ಯಯನ) ಮಾದರಿ ಪ್ರಶ್ನೆಗಳು: (KAS Mains Exam Module Questions for General Studies)

☀️ Part-8.>> ಕೆಎಎಸ್ ಮುಖ್ಯ ಪರೀಕ್ಷೆಯ ತಯಾರಿಗಾಗಿ (ಸಾಮಾನ್ಯ ಅಧ್ಯಯನ) ಮಾದರಿ ಪ್ರಶ್ನೆಗಳು:
(KAS Mains Exam Module Questions for General Studies)
━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━

★ ಕೆಎಎಸ್ ಮುಖ್ಯ ಪರೀಕ್ಷಾ ಮಾದರಿ  ಪ್ರಶ್ನೆಗಳು
(kas Mains Exam Module Questions)

 ★ ಸಾಮಾನ್ಯ ಅಧ್ಯಯನ ಪತ್ರಿಕೆ
(General Studies Papers)


Continued..(ಮುಂದುವರೆದ ಭಾಗ)


•••ಈ ಕೆಳಗಿನ ಪ್ರಶ್ನೆಗಳಿಗೆ 200 or 250 ಶಬ್ದಗಳಲ್ಲಿ ಉತ್ತರಿಸಲು ಪ್ರಯತ್ನಿಸಬೇಕು.


56. ದೇಶದ ವಿವಿಧ ನ್ಯಾಯಾಲಯಗಳಲ್ಲಿ ಬಾಕಿ ಉಳಿದಿರುವ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಲೇ ಹೋಗುತ್ತಿದ್ದು ದೇಶದ ನ್ಯಾಯಾಂಗ ಎದುರಿಸುತ್ತಿರುವ ಗಂಭೀರ ಸಮಸ್ಯೆಗಳಲ್ಲಿ ಒಂದಾಗಿದೆ. ಈ ಸಮಸ್ಯೆಯು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಹೋಗುತ್ತಿರುವುದಕ್ಕೆ ಕಾರಣೀಭೂತವಾದ ಅಂಶಗಳನ್ನು ಚರ್ಚಿಸಿ. ಪ್ರಕರಣಗಳ ವಿಲೇವಾರಿಯನ್ನು ತ್ವರಿತಗೊಳಿಸಲು ಯಾವ ಸಲಹೆಗಳನ್ನು ಸೂಚಿಸುವಿರಿ?
(ಪತ್ರಿಕೆ 3 — ಸಾಮಾನ್ಯ ಅಧ್ಯಯನ 2)


57. ಭಾರತೀಯ ಸಂಸ್ಕೃತಿಯಲ್ಲಿ ಪರಿಸರ ಸಂಬಂಧಿ ಮೌಲ್ಯಗಳಿಗೆ ನೀಡಲಾಗಿರುವ ಒತ್ತನ್ನು ಬಹುಶಃ ಬೇರಾವ ಸಂಸ್ಕೃತಿಯಲ್ಲಿ ನೀಡಲಾಗಿಲ್ಲ. ಚರ್ಚಿಸಿ.
(ಪತ್ರಿಕೆ 2 — ಸಾಮಾನ್ಯ ಅಧ್ಯಯನ 1)


58. ಭೂಮಿ ಪ್ರತಿಯೊಬ್ಬರ ಅವಶ್ಯಕತೆಯನ್ನು ಪೂರೈಸಬಲ್ಲದು. ಆದರೆ ಮಾನವನ ದುರಾಸೆಯನ್ನಲ್ಲ. — ಗಾಂಧೀಜಿ.
(ಪತ್ರಿಕೆ 4 — ಸಾಮಾನ್ಯ ಅಧ್ಯಯನ 3)


59. 'ಬ್ಯಾಂಕುಗಳ ಕ್ರೋಡೀಕರಣ' ನಮ್ಮ ದೇಶದ ಆರ್ಥಿಕ ಸುಧಾರಣೆಗೆ ನಿಜವಾಗಿಯೂ ಸಹಾಯ ಮಾಡುವುದೇ? ಇಂತಹ ಪ್ರಕ್ರಿಯೆಯನ್ನು ನಡೆಸಿದ ಇತರ ದೇಶಗಳ ಅನುಭವಗಳನ್ನು ಗಮನದಲ್ಲಿಟ್ಟುಕೊಂಡು ಅದರಿಂದ ಆಗುವ ತೊಂದರೆ ಮತ್ತು ಉಪಯೋಗಗಳನ್ನು ಪ್ರಸ್ತುತಪಡಿಸಿ.
(ಪತ್ರಿಕೆ 2 — ಸಾಮಾನ್ಯ ಅಧ್ಯಯನ 1)


60. ತ್ಯಾಜ್ಯದ ವಿಲೇವಾರಿಯಲ್ಲಿ ದೊಡ್ಡ ಸಮಸ್ಯೆ ಸೃಷ್ಟಿಸಿರುವುದು ಪ್ಲಾಸ್ಟಿಕ್‌. ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣೆಗೆ  ಪರ್ಯಾಯ ಮಾರ್ಗಗಳನ್ನು ಸೂಚಿಸಿ.
(ಪತ್ರಿಕೆ 4 — ಸಾಮಾನ್ಯ ಅಧ್ಯಯನ 3)
 

61. 1909 ರ ಭಾರತದ (ಮಿಂಟೋ ಮತ್ತು ಮಾರ್ಲೆ) ಶಾಸನವು "ಭಾರತದಲ್ಲಿ ಪ್ರತಿನಿಧಿಗಳ ಸರ್ಕಾರವನ್ನು ಆರಂಭಿಸುವಲ್ಲಿ ಇಟ್ಟ ದಿಟ್ಟ ಹೆಜ್ಜೆ" - ಚರ್ಚಿಸಿ.
(ಪತ್ರಿಕೆ 2 — ಸಾಮಾನ್ಯ ಅಧ್ಯಯನ 1)


62. ಒಳನಾಡು ಜಲಸಾರಿಗೆ ಒತ್ತು ನೀಡುವ ಕೇಂದ್ರ ಸರಕಾರದ ಮಹತ್ವಾಕಾಂಕ್ಷಿ ಸಾಗರಮಾಲಾ ಯೋಜನೆಯ ಮಹತ್ವವನ್ನು ಚರ್ಚಿಸಿ.
(ಪತ್ರಿಕೆ  — ಸಾಮಾನ್ಯ ಅಧ್ಯಯನ 1)

...ಮುಂದುವರೆಸುವುದು. 

Monday, 11 December 2017

☀️ Part-6.>> ಕೆಎಎಸ್ ಮುಖ್ಯ ಪರೀಕ್ಷೆಯ ತಯಾರಿಗಾಗಿ (ಸಾಮಾನ್ಯ ಅಧ್ಯಯನ) ಮಾದರಿ ಪ್ರಶ್ನೆಗಳು: (KAS Mains Exam Module Questions for General Studies)

☀️ Part-6.>> ಕೆಎಎಸ್ ಮುಖ್ಯ ಪರೀಕ್ಷೆಯ ತಯಾರಿಗಾಗಿ (ಸಾಮಾನ್ಯ ಅಧ್ಯಯನ) ಮಾದರಿ ಪ್ರಶ್ನೆಗಳು:
(KAS Mains Exam Module Questions for General Studies)
━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━

★ ಕೆಎಎಸ್ ಮುಖ್ಯ ಪರೀಕ್ಷಾ ಮಾದರಿ  ಪ್ರಶ್ನೆಗಳು
(kas Mains Exam Module Questions)

 ★ ಸಾಮಾನ್ಯ ಅಧ್ಯಯನ ಪತ್ರಿಕೆ
(General Studies Papers)


Continued..(ಮುಂದುವರೆದ ಭಾಗ)


•••ಈ ಕೆಳಗಿನ ಪ್ರಶ್ನೆಗಳಿಗೆ 200 or 250 ಶಬ್ದಗಳಲ್ಲಿ ಉತ್ತರಿಸಲು ಪ್ರಯತ್ನಿಸಬೇಕು.


42. ವಿಶ್ವ ವ್ಯಾಪಾರದಲ್ಲಿರುವ ಅಸಮತೋಲವನ್ನು ಸರಿಪಡಿಸುವಲ್ಲಿ ಉರುಗ್ವೇ ಸುತ್ತಿನ ಮಾತುಕತೆಯ ಅನುಕೂಲಗಳನ್ನು ಚರ್ಚಿಸಿ.
(ಪತ್ರಿಕೆ 2 — ಸಾಮಾನ್ಯ ಅಧ್ಯಯನ 1)+
(ಪತ್ರಿಕೆ 1 — ಪ್ರಬಂಧ)

43. ಅಂತಾರಾಷ್ಟ್ರೀಯ ಹಣಕಾಸು ನಿಧಿ ತನ್ನ ಷರತ್ತುಗಳಿಂದಾಗಿ ಪಡೆದುಕೊಂಡಿರುವ ನಕಾರಾತ್ಮಕ ಆಯಾಮಗಳನ್ನು ಪರಿಶೀಲಿಸಿ.
(ಪತ್ರಿಕೆ 2 — ಸಾಮಾನ್ಯ ಅಧ್ಯಯನ 1)+
(ಪತ್ರಿಕೆ 1 — ಪ್ರಬಂಧ)

44. ಅಂತರರಾಷ್ಟ್ರೀಯ ಮಟ್ಟದ ವಾಣಿಜ್ಯ– ವ್ಯಾಪಾರ ಮತ್ತು ಆರ್ಥಿಕ ಬೆಳವಣಿಗೆಗೆ ಹೆಚ್ಚು ಪೂರಕವಾದ ತೆರಿಗೆ ಸರಳೀಕರಣಗೊಳಿಸುವುದರೊಂದಿಗೆ ದೇಶಿ  ವಾಣಿಜ್ಯೋದ್ಯಮ ರಂಗಕ್ಕೆ ಉತ್ತೇಜನ ಹಾಗೂ ಮಾರುಕಟ್ಟೆಗೆ ಏಕರೂಪದ ತೆರಿಗೆ ವ್ಯವಸ್ಥೆ ಜಾರಿಗೆ ತರುವಲ್ಲಿ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಯು ವಹಿಸಬಹುದಾದ ಗಮನಾರ್ಹ ಪಾತ್ರವನ್ನು ಕುರಿತು ಚರ್ಚಿಸಿ.
(ಪತ್ರಿಕೆ 2 — ಸಾಮಾನ್ಯ ಅಧ್ಯಯನ 1)+
(ಪತ್ರಿಕೆ 1 — ಪ್ರಬಂಧ)

45. ಮೌಢ್ಯಗಳನ್ನು ನಿವಾರಿಸುವ ಬದಲಿಗೆ ಮೌಢ್ಯಗಳನ್ನು ಬಿತ್ತುವುದೇ ಇಂದು ಒಂದು ದೊಡ್ಡ ಉದ್ಯಮವಾಗಿದೆ. ಈ ಹಿನ್ನೆಲೆಯಲ್ಲಿ ಮೂಢನಂಬುಗೆಗಳ ಹುಟ್ಟಿಗೆ ಕಾರಣಗಳು ಹಾಗು ಅವುಗಳ  ಪ್ರಸ್ತುತ ಆಚರಣೆಗಳ ಹಾಗು ಇತ್ತೀಚಿನ ಸರ್ಕಾರ ಕೈಗೊಳ್ಳುತ್ತಿರುವ ಕ್ರಮಗಳ ಕುರಿತು ಚರ್ಚಿಸಿರಿ..
(ಪತ್ರಿಕೆ 2 — ಸಾಮಾನ್ಯ ಅಧ್ಯಯನ 1)

46. 1991ರಲ್ಲಿ ಹೊಸ ಆರ್ಥಿಕ ನೀತಿಯನ್ನು ನಾವು ಅಳವಡಿಸಿಕೊಂಡ ಬಳಿಕ ಬೆಳವಣಿಗೆ ಪ್ರಕ್ರಿಯೆಯು ವೇಗವನ್ನು ಪಡೆದುಕೊಂಡಿದ್ದರೂ, ರಾಷ್ಟ್ರೀಯ ಅಭಿವೃದ್ಧಿ ಮತ್ತು ಬುಡಕಟ್ಟು ಜನರ ಅಭಿವೃದ್ಧಿ ಗುರಿ ಸಾಧನೆಯಲ್ಲಿ ವ್ಯಾಪಕವಾದ ಅಂತರ ಏರ್ಪಟ್ಟಿದೆ. ಇದರ ಹಿಂದಿರುವ ಬಲವಾದ ಕಾರಣಗಳನ್ನು ಚರ್ಚಿಸಿ.

47. ನಗದುರಹಿತ ಗ್ರಾಮೀಣ ಅರ್ಥವ್ಯವಸ್ಥೆಯ ಸವಾಲುಗಳು.
(ಪತ್ರಿಕೆ 2 — ಸಾಮಾನ್ಯ ಅಧ್ಯಯನ 1)+
(ಪತ್ರಿಕೆ 1 — ಪ್ರಬಂಧ)

48. ರಾಜ್ಯದಲ್ಲಿ ಸ್ಥಳೀಯರ ಸಹಭಾಗಿತ್ವದಲ್ಲಿ (Community Based Tourism)  ಪ್ರವಾಸೋದ್ಯಮವನ್ನು ಬೆಳೆಸುವಲ್ಲಿ ಸರ್ಕಾರವು ಇತ್ತೀಚೆಗೆ ಕೈಗೊಂಡ ಕ್ರಮಗಳನ್ನು ಅವಲೋಕಿಸಿ.
(ಪತ್ರಿಕೆ 3 — ಸಾಮಾನ್ಯ ಅಧ್ಯಯನ 2)

...ಮುಂದುವರೆಯುವುದು. 

Thursday, 7 December 2017

☀️ Part-5.>> ಕೆಎಎಸ್ ಮುಖ್ಯ ಪರೀಕ್ಷೆಯ ತಯಾರಿಗಾಗಿ (ಸಾಮಾನ್ಯ ಅಧ್ಯಯನ) ಮಾದರಿ ಪ್ರಶ್ನೆಗಳು: (KAS Mains Exam Module Questions for General Studies)

☀️ Part-5.>> ಕೆಎಎಸ್ ಮುಖ್ಯ ಪರೀಕ್ಷೆಯ ತಯಾರಿಗಾಗಿ (ಸಾಮಾನ್ಯ ಅಧ್ಯಯನ) ಮಾದರಿ ಪ್ರಶ್ನೆಗಳು:
(KAS Mains Exam Module Questions for General Studies)
━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━

★ ಕೆಎಎಸ್ ಮುಖ್ಯ ಪರೀಕ್ಷಾ ಮಾದರಿ  ಪ್ರಶ್ನೆಗಳು
(kas Mains Exam Module Questions)

 ★ ಸಾಮಾನ್ಯ ಅಧ್ಯಯನ ಪತ್ರಿಕೆ
(General Studies Papers)


Continued..(ಮುಂದುವರೆದ ಭಾಗ)


•••ಈ ಕೆಳಗಿನ ಪ್ರಶ್ನೆಗಳಿಗೆ 200 or 250 ಶಬ್ದಗಳಲ್ಲಿ ಉತ್ತರಿಸಲು ಪ್ರಯತ್ನಿಸಬೇಕು.



35. ಸಾಂಸ್ಕೃತಿಕವಾಗಿ ಮತ್ತು ಭೌಗೋಳಿಕವಾಗಿ ವಿಭಿನ್ನವಾಗಿರುವ ದೇಶದ ವಿವಿಧ ಬುಡಕಟ್ಟು ಸಮುದಾಯಗಳಿಗೆ ಒಂದೇ ರೀತಿಯ ಅಭಿವೃದ್ಧಿ ಯೋಜನೆಗಳನ್ನು ಜಾರಿಗೊಳಿಸುತ್ತಿರುವುದು ನಾವು ಮಾಡುತ್ತಿರುವ ದೊಡ್ಡ ತಪ್ಪು ಎಂಬುದು ತಜ್ಞರ ಅಭಿಪ್ರಾಯ. ಈ ವಾದ ಎಷ್ಟರಮಟ್ಟಿಗೆ ಔಚಿತ್ಯ? ವಿವರಿಸಿ.
(ಪತ್ರಿಕೆ 2 — ಸಾಮಾನ್ಯ ಅಧ್ಯಯನ 1)


36. ನಗದುರಹಿತ ವ್ಯವಹಾರಗಳ ಅನುಕೂಲ ಮತ್ತು ಅನಾನುಕೂಲಗಳು.
(ಪತ್ರಿಕೆ 2 — ಸಾಮಾನ್ಯ ಅಧ್ಯಯನ 1)+
(ಪತ್ರಿಕೆ 1 — ಪ್ರಬಂಧ)


37. ಇತ್ತೀಚೆಗೆ ಕೇಂದ್ರ ಸರ್ಕಾರವು ಭಾರತೀಯ ರಿಸರ್ವ್‌ ಬ್ಯಾಂಕ್‌, ಸಾರ್ವಜನಿಕ ಮತ್ತು ಖಾಸಗಿ ಕ್ಷೇತ್ರದ ಬ್ಯಾಂಕ್‌ಗಳ ಸಹಯೋಗದಲ್ಲಿ ಜನರಲ್ಲಿ ಆರ್ಥಿಕ ಸಾಕ್ಷರತೆ ಮೂಡಿಸಲು ಕೈಗೊಂಡಿರುವ ಕ್ರಮ ಯೋಜನೆಗಳನ್ನು ಅವಲೋಕಿಸಿ.
(ಪತ್ರಿಕೆ 2 — ಸಾಮಾನ್ಯ ಅಧ್ಯಯನ 1)


38. " ಹಳ್ಳಿಗರಿಗೆ ಕೆಲಸ ಕೊಡಬೇಕಾಗಿರುವುದು ಯಂತ್ರಗಳ ಮೂಲಕವಲ್ಲ, ಅವರು ಹಿಂದಿನಿಂದಲೂ ನಡೆಸಿಕೊಂಡು ಬಂದಿರುವ ಗುಡಿ ಕೈಗಾರಿಕೆಗಳ ಮೂಲಕ. - ಆಧುನಿಕ ಗ್ರಾಮೀಣ ಗುಡಿಕೈಗಾರಿಕೆಗಳ ಅಭಿವೃದ್ದಿ ಪ್ರಸ್ತುತತೆಯೊಂದಿಗೆ ಗಾಂಧೀಜಿಯವರ ಈ ಮಾತು ಇವತ್ತಿನ ಸನ್ನಿವೇಶಕ್ಕೆ ಎಷ್ಟರಮಟ್ಟಿಗೆ ಔಚಿತ್ಯ. ಚರ್ಚಿಸಿ.?
(ಪತ್ರಿಕೆ 2 — ಸಾಮಾನ್ಯ ಅಧ್ಯಯನ 1)


39.  ಬುಡಕಟ್ಟು ಆರ್ಥಿಕತೆಯನ್ನು ಸಮಗ್ರ ಆರ್ಥಿಕತೆಗೆ ಒಳಪಡಿಸುವ ಬದಲು ತಾಂತ್ರಿಕ - ಪರಿಸರ ಆಧಾರಿತ ಕೌಶಲಗಳನ್ನು ಜನರಲ್ಲಿ ಬೆಳೆಸುವುದು ಉತ್ತಮ ಎನ್ನುವುದು ಇತ್ತೀಚೆಗೆ ಕೇಳಿಬರುತ್ತಿರುವ ಕೆಲವರ ವಾದ. ಇದಕ್ಕೆ ನಿಮ್ಮ ಅಭಿಪ್ರಾಯವೇನು?
(ಪತ್ರಿಕೆ 2 — ಸಾಮಾನ್ಯ ಅಧ್ಯಯನ 1)

40. ಗರಿಷ್ಠ ಮುಖಬೆಲೆಯ ನೋಟು ರದ್ದತಿ ಮತ್ತು ಸರಕು ಹಾಗೂ ಸೇವಾ ತೆರಿಗೆ (ಜಿಎಸ್‌ಟಿ) ಜಾರಿಯಿಂದ ದೇಶದ ಅರ್ಥವ್ಯವಸ್ಥೆಯಲ್ಲಿ ಆದ ಬದಲಾವಣೆಗಳನ್ನು ಅವಲೋಕಿಸಿ.
(ಪತ್ರಿಕೆ 2 — ಸಾಮಾನ್ಯ ಅಧ್ಯಯನ 1)

41. ಸಾಂಪ್ರದಾಯಿಕ ವ್ಯವಸ್ಥೆಯಿಂದ ಡಿಜಿಟಲ್‌ ಯುಗಕ್ಕೆ ಬದಲಾಗುತ್ತಿರುವ ಇಂದಿನ ದಿನಮಾನಗಳಲ್ಲಿ  ಮಾಹಿತಿ ಕಳ್ಳತನ, ಸೈಬರ್‌ ದಾಳಿಯಂತಹ ಅನೇಕ ಡಿಜಿಟಲ್‌ ಯುಗದ ಸವಾಲುಗಳು ಎದುರಾಗಿವೆ.
(ಪತ್ರಿಕೆ 4 — ಸಾಮಾನ್ಯ ಅಧ್ಯಯನ 3)

... ಮುಂದುವರೆಯುವುದು. 

Wednesday, 27 September 2017

☀️ ಕೆಎಎಸ್ ಮುಖ್ಯ ಪರೀಕ್ಷೆ : ಸ್ಪರ್ಧಾರ್ಥಿಗಳು ಗಮನಿಸಬೇಕಾದ ಅಂಶಗಳು : (KAS Mains Exam : Aspirants Should Know)

☀️ ಕೆಎಎಸ್ ಮುಖ್ಯ ಪರೀಕ್ಷೆ : ಸ್ಪರ್ಧಾರ್ಥಿಗಳು ಗಮನಿಸಬೇಕಾದ ಅಂಶಗಳು :
(KAS Mains Exam : Aspirants Should Know)
━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━

★ ಕೆಎಎಸ್ ಮುಖ್ಯ ಪರೀಕ್ಷೆ ತಯಾರಿ
(Kas mains exam preparation)


1. ಕಡ್ಡಾಯ ಕನ್ನಡ ಮತ್ತು ಇಂಗ್ಲೀಷ್ ಪತ್ರಿಕೆಗಳಲ್ಲಿ ಪಡೆದ ಅಂಕಗಳು ಅರ್ಹತಾದಾಯಕ ಸ್ವರೂಪದ್ದಾಗಿರುತ್ತವೆ. ಅರ್ಹತೆ ಪಡೆಯಲು ಈ ಪ್ರತಿಯೊಂದು ಪತ್ರಿಕೆಯಲ್ಲಿ ಕನಿಷ್ಠ ಶೇಕಡ 35 (52.5) ಅಂಕಗಳನ್ನು ನಿಗದಿಪಡಿಸಲಾಗಿದೆ. ಈ ಎರಡೂ ಪತ್ರಿಕೆಗಳಲ್ಲಿ ಗಳಿಸಿದ ಅಂಕಗಳನ್ನು ಅಭ್ಯರ್ಥಿಗಳ ಆಯ್ಕೆಯ ಅರ್ಹತೆಯನ್ನು ನಿಗದಿಪಡಿಸುವಲ್ಲಿ ಪರಿಗಣಿಸಲಾಗುವುದಿಲ್ಲ. ಈ ಎರಡು ಪತ್ರಿಕೆಗಳಲ್ಲಿ ನಿಗದಿತ ಅಂಕಗಳನ್ನು ಗಳಿಸದ ಅಭ್ಯರ್ಥಿಗಳು ಇತರೆ ಪತ್ರಿಕೆಗಳಲ್ಲಿ ಎಷ್ಟೇ ಹೆಚ್ಚು ಅಂಕಗಳನ್ನು ಗಳಿಸಿದ್ದರೂ ವ್ಯಕ್ತಿತ್ವ ಪರೀಕ್ಷೆಗೆ ಮತ್ತು ಆಯ್ಕೆಗೆ ಅರ್ಹರಾಗುವುದಿಲ್ಲ ಹಾಗೂ ಇಂತಹ ಅಭ್ಯರ್ಥಿಗಳ ಇತರೆ ವಿಷಯಗಳಲ್ಲಿ ಪಡೆದ ಅಂಕಗಳನ್ನು ಪ್ರಕಟಿಸುವುದಿಲ್ಲ.

2.ಮುಖ್ಯ ಪರೀಕ್ಷೆಯು ವಿವರಣಾತ್ಮಕ ಮಾದರಿಯಲ್ಲಿರುತ್ತದೆ ಮತ್ತು ಎಲ್ಲಾ ಪತ್ರಿಕೆಗಳು ಕಡ್ಡಾಯವಾಗಿರುತ್ತವೆ.

3.ಪ್ರಶ್ನೆ ಪತ್ರಿಕೆಗಳು ಕನ್ನಡ ಮತ್ತು ಇಂಗ್ಲೀಷ್ ಭಾಷೆಗಳೆರಡರಲ್ಲೂ ಮುದ್ರಿಸಲಾಗಿರುತ್ತದೆ. ಅಭ್ಯರ್ಥಿಗಳು ಪತ್ರಿಕೆಯ ಉತ್ತರಗಳನ್ನು ಸಂಪೂರ್ಣವಾಗಿ ಕನ್ನಡ ಅಥವಾ ಆಂಗ್ಲಭಾಷಾ ಮಾಧ್ಯಮದಲ್ಲಿಯೇ ಉತ್ತರಿಸತಕ್ಕದ್ದು.

4.ಮುಖ್ಯ ಪರೀಕ್ಷೆಯ ಕಡ್ಡಾಯ ಕನ್ನಡ ಹಾಗೂ ಕಡ್ಡಾಯ ಆಂಗ್ಲಭಾಷೆ ಪತ್ರಿಕೆಗಳನ್ನು ಹೊರತುಪಡಿಸಿ ಉಳಿದ ಪತ್ರಿಕೆಗಳು ಪದವಿ ಮಟ್ಟದ್ದಾಗಿರುತ್ತದೆ. ಕಡ್ಡಾಯ ಕನ್ನಡ ಹಾಗೂ ಕಡ್ಡಾಯ ಆಂಗ್ಲಭಾಷೆ ಪತ್ರಿಕೆಗಳು ಎಸ್.ಎಸ್.ಎಲ್.ಸಿಯ ಪ್ರಥಮ ಭಾಷೆಯ ಮಟ್ಟದ್ದಾಗಿರುತ್ತದೆ.

5.ಎಲ್ಲಾ 07 ಪತ್ರಿಕೆಗಳು ಕಡ್ಡಾಯ ಪತ್ರಿಕೆಗಳಾಗಿರುತ್ತವೆ. ಪತ್ರಿಕೆ- (02) ರಿಂದ (05)ರವರೆಗಿನ ಪತ್ರಿಕೆಗಳು ಮೂರು ಭಾಗಗಳನ್ನು ಒಳಗೊಂಡಿರುತ್ತದೆ. ಪ್ರತಿ ಪತ್ರಿಕೆಯು ಗರಿಷ್ಠ 250 ಅಂಕಗಳನ್ನು ಒಳಗೊಂಡಿರುತ್ತದೆ ಮತ್ತು 03 ಗಂಟೆಗಳ ಅವಧಿಯದ್ದಾಗಿರುತ್ತದೆ.
ಲಿಖಿತ ಮತ್ತು ವ್ಯಕ್ತಿತ್ವ ಪರೀಕ್ಷೆಯ ಅಂಕಗಳನ್ನು ಅಂತಿಮ ಆಯ್ಕೆಪಟ್ಟಿಯೊಂದಿಗೆ ಪ್ರಕಟಿಸಲಾಗುವುದು. @spardhaloka