☀️ ರೋಲ್-ಆನ್-ರೋಲ್ ಆಫ್ (ಆರ್‍ಒಆರ್‍ಒ) :ರೋರೋ ಸಮುದ್ರಯಾನ ಸೇವೆ :
(Roll On Roll Off) : RORO Naval (Marine) Shipping Service
━━━━━━━━━━━━━━━━━━━━━━━━━━━━━━━━━━━━━━━━━━━━━
★ ಸಾಮಾನ್ಯ ಅಧ್ಯಯನ ಪತ್ರಿಕೆ
(General Studies Paper)
●.ರೋಲ್ ಆಫ್ ರೋಲ್ ಆಫ್ ಸಾಗರ ಸೇವೆಯಾಗಿದ್ದು ಈ ಯೋಜನೆಯನ್ನು ಗುಜರಾತ್ ಸಮುದ್ರ ನಿಗಮ ಅನುಷ್ಟಾನಗೊಳಿಸಲಾಗಿದೆ. ಇದು 615 ಕೋಟಿ ಮೊತ್ತದ ಯೋಜನೆಯಾಗಿದೆ. ದೇಶದ ಸಮಗ್ರ ಅಭಿವೃದ್ಧಿ ದೃಷ್ಟಿಯಿಂದ ರಾಷ್ಟ್ರದ ಎಲ್ಲ ಬಂದರುಗಳನ್ನು ಅತ್ಯಾಧುನಿಕ ಮಾದರಿಯಲ್ಲಿ ಅಭಿವೃದ್ಧಿ ಪಡಿಸುವ ಇಂಗಿತದೊಂದಿಗೆ ಈ ಸೇವೆಯನ್ನು ಪ್ರಾರಂಭಿಸಲಾಗಿದೆ. ಭಾರತದಲ್ಲಿ ಮೊದಲ ಬಾರಿಗೆ ಇಂತಹ
ಯೋಜನೆಯನ್ನು ಆರಂಭಿಸಲಾಗಿದ್ದು, ಆಧುನಿಕ ತಂತ್ರಜ್ಞಾನದಿಂದ ಹಡಗನ್ನು ನಿರ್ಮಾಣ ಮಾಡಲಾಗಿದೆ.
●.ಒಳನಾಡು ಜಲಸಾರಿಗೆ ಒತ್ತು ನೀಡುವ ಕೇಂದ್ರಸರಕಾರದ ಮಹತ್ವಾಕಾಂಕ್ಷಿ ಸಾಗರಮಾಲಾ ಯೋಜನೆಯ ಮೊದಲ ಭಾಗ ಎಂದೇ ವಿಶ್ಲೇಷಿಸಲಾಗಿರುವ ಸೌರಾಷ್ಟ್ರದ ಘೋಘಾ ಹಾಗೂ ದಕ್ಷಿಣ ಗುಜರಾತ್ ದಹೇಜ್ ನಡುವಿನ ದೇಶದ ಪ್ರಪ್ರಥಮ ರೋರೋ ಒಳನಾಡು ಸಮುದ್ರಯಾನಕ್ಕೆ (October 2017 ರಲ್ಲಿ ) ಚಾಲನೆ ನೀಡಿದ್ದಾರೆ. ಸಾಗರ ಮಾಲಾ ಯೋಜನೆಯಡಿ ಹಳೆಯ ಬಂದರುಗಳನ್ನು ಪರಿಪೂರ್ಣವಾಗಿ ಅಭಿವೃದ್ಧಪಡಿಸಲಾಗುತ್ತಿದೆ.
●.ರೋಲ್-ಆನ್-ರೋಲ್ ಆಫ್ (ಆರ್‍ಒಆರ್‍ಒ) ನೌಕಾ ಸೇವೆಯಲ್ಲಿ ಜನರ ಜತೆಗೆ ಸರಕು ಹೊತ್ತ ಲಾರಿಗಳು ಮತ್ತಿತ್ತರ ಸರಕು ಹೊತ್ತ ಲಾರಿಗಳು ಮತ್ತಿತ್ತರ ವಾಹನಗಳನ್ನು ಬಾರ್ಜ್ ಮಾದರಿಯಲ್ಲಿ ಫೆರಿಯಲ್ಲಿ(ನೌಕೆ) ಸಾಗಿಸಲಾಗುತ್ತದೆ. ಸದ್ಯ ಚಾಲನೆ ಪಡೆದಿರುವ ಮೊದಲ ಹಂತದ ಯೋಜನೆಯಲ್ಲಿ 250 ಜನರನ್ನಷ್ಟೇ
ಸಾಗಿಸಲು ಅವಕಾಶವಿದೆ. ಇದಕ್ಕಾಗಿ ಘೋಘಾ ಮತ್ತು ದಹೇಜ್ ಬಳಿ ವಿಶ್ವ ಗುಣಮಟ್ಟದ ಟರ್ಮಿನಲ್‍ಗಳನ್ನು ನಿರ್ಮಿಸಲಾಗಿದೆ.
●.ಪೋರಾಬಂದರ್, ಘೋಘಾ, ದಹೇಜ್, ಹಾಜಿರಾ-ಪಿಪಾವಾವ್, ಪಿಪಾವಾವ್-ಪೋರಾಬಂದರ್, ಪೋರಾಬಂದ್ರರ-ಓಕಾ ಮತ್ತು ಓಕಾ-ಮುಂದ್ರಾ ಅಲ್ಲದೆ, ದಕ್ಷಿಣ
ಭಾರತದ ನಾನಾ ಸ್ಥಳಿಗಳಿಗೆ ಆರ್‍ಒಆರ್‍ಒ ನೌಕಾ ಸೇವೆ ವಿಸ್ತರಿಸುವ ಚಿಂತನೆ ಇದೆ.
●.ಸಿಂಧು ನದಿ ನಾಗರಿಕತೆಯ ಸಂದರ್ಭದಲ್ಲಿ ಗುಜರಾತ್‍ನ ಅಹಮದಾಬಾದ್ ಜಿಲ್ಲೆಯ ಢೋಲ್ಕಾ ತಾಲೂಕಿನ ಸಾರಾಗ್‍ವಾಲಾ ಗ್ರಾಮದ ಬಳಿ ಇರುವ ಲೋತಲ್ ಎಂಬ ಗ್ರಾಮದಲ್ಲಿ ಸಮುದ್ರ ಮಾರ್ಗದಲ್ಲಿನ ವಾಣಿಜ್ಯ ವಹಿವಾಟು ನಡೆಯುತ್ತಿತ್ತು. ಇದಕ್ಕಾಗಿ ಅಲ್ಲಿ ಹಡಗುಗಟ್ಟೆ ನಿರ್ಮಿಸಿ ಸರಕು ಇಳಿಸಲು ಮತ್ತು ತುಂಬುವ ವ್ಯವಸ್ಥೆ ರೂಪಿಸಲಾಗುತ್ತಿತ್ತು. 1950ರ ದಶಕದಲ್ಲಿ ಭಾರತೀಯ ಪುರಾತತ್ವ ಇಲಾಖೆ ನಡೆಸಿದ್ದ ಉತ್ಖನನದಲ್ಲಿ ಹಡಗುಗಟ್ಟೆ ಮತ್ತಿತ್ತರ ನಿರ್ವಣಗಳ ಪಳೆಯುಳಿಕೆಗಳು ಲಭಿಸಿದ್ದವು. ಲೋತಲ್‍ನ ಗತವೈಭವವನ್ನು ನೆನಪಿಸುವಂತೆ ಸೌರಾಷ್ಟ್ರ ಮತ್ತು ದಕ್ಷಿಣ ಗುಜರಾತ್ ನಡುವೆ ಆರ್‍ಒಆರ್‍ಒ ನೌಕಾ ಸೇವೆಯನ್ನು ಆರಂಭಿಸಲಾಗಿದೆ.

No comments:
Post a Comment