"ಮನುಷ್ಯ ದೀಪವಾದರೂ ಆಗಬೇಕು, ಕನ್ನಡಿಯಾದರೂ ಆಗಬೇಕು. ಒಂದು ಬೆಳಕನ್ನು ಕೊಡುತ್ತದೆ ಮತ್ತೊಂದು ಅದನ್ನು ಪ್ರತಿಬಿಂಬಿಸುತ್ತದೆ. ಪ್ರತಿಯೊಬ್ಬರೂ ದೀಪ ಆಗದೇ ಹೋಗಬಹುದು ಆದರೆ ಕನ್ನಡಿ ಆಗಬಲ್ಲರು. ತಿಳಿದಿರುವ ಜ್ಞಾನವನ್ನು ಮತ್ತೊಬ್ಬರಿಗೆ ಹಂಚುವುದೇ ಜೀವನ.."—ಅರಿಸ್ಟಾಟಲ್

Tuesday, 16 May 2017

☀ ಇತ್ತೀಚೆಗೆ ಉದ್ಘಾಟನೆಗೊಂಡ ದೇಶದ ಅತಿ ಉದ್ದದ ರಸ್ತೆ ಸುರಂಗದ ವಿಶೇಷತೆ: (Specialities of India's Longest Tunnel Road Inaugurated recently)


☀ ಇತ್ತೀಚೆಗೆ ಉದ್ಘಾಟನೆಗೊಂಡ ದೇಶದ ಅತಿ ಉದ್ದದ ರಸ್ತೆ ಸುರಂಗದ ವಿಶೇಷತೆ:
(Specialities of India's Longest Tunnel Road Inaugurated recently)
━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━

★ ಸಾಮಾನ್ಯ ಅಧ್ಯಯನ
(general studies)

★ ಪ್ರಚಲಿತ ಘಟನೆಗಳು.
(Current Affairs)


●.ಜಮ್ಮು-ಕಾಶ್ಮೀರದ ರಾಜಧಾನಿ ಶ್ರೀನಗರವನ್ನು ಜಮ್ಮುವಿಗೆ ಸಂರ್ಪಸುವ ಚೆನಾನಿ ಮತ್ತು ನಶ್ರಿ ನಡುವಿನ ರಸ್ತೆ ಸುರಂಗ ಮಾರ್ಗವನ್ನು 02.04.2017 ರಂದು ಸಂಚಾರಕ್ಕೆ ಮುಕ್ತಗೊಳಿಸಲಾಯಿತು.

●.ಒಂಬತ್ತು ಕಿ.ಮೀ. ಉದ್ದದ ಸುರಂಗ ಮಾರ್ಗ ದೇಶದ ಅತಿ ಉದ್ದದ ರಸ್ತೆ ಸುರಂಗ ಎಂಬ ಶ್ರೇಯಕ್ಕೆ ಪಾತ್ರವಾಗಿದೆ. ಸಮುದ್ರ ಮಟ್ಟದಿಂದ 1200 ಮೀಟರ್ ಎತ್ತರದಲ್ಲಿ ದ್ವಿಮುಖ ಮಾರ್ಗದಲ್ಲಿ ನಿರ್ವಿುಸಲಾಗಿರುವ ಈ ಸುರಂಗವು ಸರ್ವಋತು ಬಾಳಿಕೆಯ ರಸ್ತೆ ಹೊಂದಿದ್ದು, ಇದರ ನಿರ್ವಣಕ್ಕೆ 2,500 ಕೋಟಿ ರೂ. ವೆಚ್ಚವಾಗಿದೆ. ಐದೂವರೆ ವರ್ಷಗಳ ಅವಧಿಯ ಈ ಕಾಮಗಾರಿಯಲ್ಲಿ 1500 ತಂತ್ರಜ್ಞರು ಶ್ರಮಿಸಿದ್ದಾರೆ.

●.ಪರ್ವತ ಪ್ರದೇಶದಲ್ಲಿ ಈ ದಾರಿ ಹಾದು ಹೋಗುತ್ತಿತ್ತು. ಈ ಸುರಂಗ ಮಾರ್ಗ ನಿರ್ವಣದಿಂದ ಶ್ರೀನಗರ ಮತ್ತು ಜಮ್ಮು ನಡುವಣ ಪ್ರಯಾಣ 31 ಕಿ.ಮೀ. (ಚೆನಾನಿ ಮತ್ತು ನಶ್ರಿ ಮಧ್ಯೆಯ 44 ಕಿ.ಮಿ. ಅಂತರ 9 ಕಿ.ಮೀ.ಗೆ ಇಳಿಕೆ) ಕಡಿಮೆಯಾಗಲಿದ್ದು, ಸುಮಾರು ಎರಡು ತಾಸು ಪ್ರಯಣದ ಅವಧಿ ತಗ್ಗಲಿದೆ. ಪ್ರತಿದಿನ ಅಂದಾಜು 27 ಲಕ್ಷ ರೂ. ಮೌಲ್ಯದ ಇಂಧನವೂ ಉಳಿತಾಯ ಆಗಲಿದೆ.

●.ಈ ಸುರಂಗ ಮಾರ್ಗ ನಿರ್ವಣದಿಂದ ಪ್ರಯಾಣಿಕರಿಗೆ ಸಾಕಷ್ಟು ಭದ್ರತೆ ದೊರೆಯಲಿದೆ. ಜಮ್ಮುದ ಹಲವು ಭಾಗ ಉಗ್ರರ ಹಾವಳಿಗೆ ತುತ್ತಾಗಿದೆ. ರಸ್ತೆಯ ಮೇಲೆ ಸಂಚರಿಸುವ ವಾಹನಗಳ ಮೇಲೆ ಉಗ್ರರು ದಾಳಿ ನಡೆಸಿದ ಉದಾಹರಣೆ ಸಾಕಷ್ಟಿದೆ. ಸುರಂಗ ಮಾರ್ಗ ನಿರ್ವಣವಾಗಿದ್ದರಿಂದ ಉಗ್ರರ ದಾಳಿ ಸಾಧ್ಯತೆ ಕಡಿಮೆಯಾಗಿದೆ.

●.ಇದು ಸರ್ವಋತು ಮಾರ್ಗವಾಗಿದ್ದು, ಚಳಿಗಾಲದಲ್ಲಿ ಭಾರಿ ಹಿಮ ಸುರಿಯುತ್ತಿದ್ದರೂ ಸಂಚಾರಕ್ಕೆ ಯಾವುದೇ ತೊಂದರೆ ಉಂಟಾಗುವುದಿಲ್ಲ.


●.ಪ್ರಮುಖ ಅಂಶಗಳು :

- 1200 ಮೀಟರ್ ಎತ್ತರದ ಪರ್ವತ ಶ್ರೇಣಿಯಲ್ಲಿನ ರಸ್ತೆ ಸುರಂಗ

- ದ್ವಿಮುಖ ಮಾರ್ಗದ ಸುರಂಗಕ್ಕೆ 2,500 ಕೋಟಿ ರೂ. ವೆಚ್ಚ- ಐದೂವರೆ ವರ್ಷಗಳಲ್ಲಿ ನಿರ್ಮಾಣ

- ಸುರಂಗದಲ್ಲಿ 9.35 ಮೀಟರ್ ಅಗಲದ ರಸ್ತೆ- ಸುರಂಗದ ಎತ್ತರ 5 ಮೀಟರ್

- 31 ಕಿ.ಮೀ. ಪ್ರಯಾಣ ಇಳಿಕೆ

- ತುರ್ತ ನಿರ್ಗಮನದ ಮಾರ್ಗಗಳು- ಮಾಹಿತಿ ಘೊಷಣಾ ವ್ಯವಸ್ಥೆ

- ಪ್ರತಿ 300 ಮೀಟರ್ ಅಂತರಕ್ಕೆ ಒಂದರಂತೆ ಅಡ್ಡರಸ್ತೆಗಳ ನಿರ್ಮಾಣ

- ಪ್ರತಿ 150 ಮೀಟರ್​ಗೆ ಒಂದು ತುರ್ತಕರೆಯ ದೂರವಾಣಿ ಪೆಟ್ಟಿಗೆ

- ಸಮಗ್ರ ಸಂಚಾರ ನಿಯಂತ್ರಣ ವ್ಯವಸ್ಥೆ ಮತ್ತು 124 ಸಿಸಿಟಿವಿ ಕ್ಯಾಮೆರಾ ಅಳವಡಿಕೆ

- ಗಾಳಿಯಾಡಲು ಸಮರ್ಪಕ ವಾತಾನುಕೂಲ- ಬೆಂಕಿ ಅವಘಡ ನಿಯಂತ್ರಣದ ವ್ಯವಸ್ಥೆ

-ಉಗ್ರರಿಂದ ರಕ್ಷಣೆ

(Courtesy : Vijayavani) 

No comments:

Post a Comment