"ಮನುಷ್ಯ ದೀಪವಾದರೂ ಆಗಬೇಕು, ಕನ್ನಡಿಯಾದರೂ ಆಗಬೇಕು. ಒಂದು ಬೆಳಕನ್ನು ಕೊಡುತ್ತದೆ ಮತ್ತೊಂದು ಅದನ್ನು ಪ್ರತಿಬಿಂಬಿಸುತ್ತದೆ. ಪ್ರತಿಯೊಬ್ಬರೂ ದೀಪ ಆಗದೇ ಹೋಗಬಹುದು ಆದರೆ ಕನ್ನಡಿ ಆಗಬಲ್ಲರು. ತಿಳಿದಿರುವ ಜ್ಞಾನವನ್ನು ಮತ್ತೊಬ್ಬರಿಗೆ ಹಂಚುವುದೇ ಜೀವನ.."—ಅರಿಸ್ಟಾಟಲ್

Wednesday, 13 December 2017

☀ ಈ ದಿನದ ಐಎಎಸ್ / ಕೆಎಎಸ್ ಮುಖ್ಯ ಪರೀಕ್ಷಾ ಮಾದರಿ ಪ್ರಶ್ನೆ : •► ಇತ್ತೀಚೆಗೆ ಸುಪ್ರೀಂ ಕೋರ್ಟ್ ನಿಂದ ತಿರಸ್ಕೃತಗೊಂಡ 'ರಾಷ್ಟ್ರೀಯ ನ್ಯಾಯಾಂಗ ನೇಮಕಾತಿ ಆಯೋಗ'ದ ಬಗ್ಗೆ ನಿಮ್ಮ ಅಭಿಪ್ರಾಯವೇನು? ಪ್ರಸ್ತುತ ಕೊಲಿ­ಜಿಯಂ ಪದ್ಧತಿ ಸೂಕ್ತವೇ? (What is your opinion about the 'National Judicial Appointment Commission' which was recently repealed by the Supreme Court? The Current Collegium System is appropriate? ) (200 ಶಬ್ದಗಳಲ್ಲಿ)

☀ ಈ ದಿನದ ಐಎಎಸ್ / ಕೆಎಎಸ್ ಮುಖ್ಯ ಪರೀಕ್ಷಾ ಮಾದರಿ ಪ್ರಶ್ನೆ :
•►  ಇತ್ತೀಚೆಗೆ ಸುಪ್ರೀಂ ಕೋರ್ಟ್ ನಿಂದ ತಿರಸ್ಕೃತಗೊಂಡ 'ರಾಷ್ಟ್ರೀಯ ನ್ಯಾಯಾಂಗ ನೇಮಕಾತಿ ಆಯೋಗ'ದ ಬಗ್ಗೆ ನಿಮ್ಮ ಅಭಿಪ್ರಾಯವೇನು? ಪ್ರಸ್ತುತ ಕೊಲಿ­ಜಿಯಂ ಪದ್ಧತಿ ಸೂಕ್ತವೇ?
(What is your opinion about the 'National Judicial Appointment Commission' which was recently repealed by the Supreme Court? The Current Collegium System is appropriate? )
(200 ಶಬ್ದಗಳಲ್ಲಿ)

━━━━━━━━━━━━━━━━━━━━━━━━━━━━━━━━━━━━━━━━━━
★ ಕೆಎಎಸ್ ಮುಖ್ಯ ಪರೀಕ್ಷಾ ಮಾದರಿ  ಪ್ರಶ್ನೆಗಳು
(kas Mains Exam Module Questions)

 ★ ಸಾಮಾನ್ಯ ಅಧ್ಯಯನ ಪತ್ರಿಕೆ
(General Studies Papers)


(ಗೆಳೆಯರೇ... ನನ್ನ ಜ್ಞಾನ ಪರಿಮಿತಿಯಲ್ಲಿ ಹಲವು ನಂಬಲರ್ಹವಾದ ಮೂಲಗಳಿಂದ ಕಲೆಹಾಕಿ ಈ ಮೇಲಿನ ಪ್ರಶ್ನೆಗೆ ಉತ್ತರಿಸಲು ಪ್ರಯತ್ನಿಸಿದ್ದು, ಇದೇ ಕೊನೆಯಲ್ಲ. ಏನಾದರೂ ತಪ್ಪು-ತಡೆಗಳಿದ್ದಲ್ಲಿ ದಯವಿಟ್ಟು ನನ್ನ ಗಮನಕ್ಕೆ ತರಬೇಕೆಂದು ವಿನಂತಿ.
(G-Mail : yaseen7ash@gmail.com)



ನ್ಯಾಯಮೂರ್ತಿಗಳ ನೇಮಕಾತಿಯಲ್ಲಿ ಆಮೂಲಾಗ್ರ ಬದಲಾವಣೆ ತರುವ ಉದ್ದೇಶದಿಂದ  ನ್ಯಾಯಾಂ­ಗದ ಅಸಮಾಧಾನದ ನಡುವೆಯೂ ಉನ್ನತ ನ್ಯಾಯಮೂರ್ತಿಗಳ ನೇಮ­ಕಕ್ಕೆ ಈವರೆಗೆ ಚಾಲ್ತಿಯಲ್ಲಿರುವ ಕೊಲಿ­ಜಿಯಂ ಪದ್ಧತಿ ರದ್ದತಿ ಮಾಡಿ, ಸಂವಿಧಾನಕ್ಕೆ 124ನೇ ತಿದ್ದುಪಡಿಯನ್ನು ತಂದು ‘ರಾಷ್ಟ್ರೀಯ ನ್ಯಾಯಾಂಗ ನೇಮಕಾತಿ ಆಯೋಗ ಮಸೂದೆ 2014ರಲ್ಲಿ ಜಾರಿಯಲ್ಲಿ ತಂದಿತ್ತು. ನ್ಯಾಯಮೂರ್ತಿಗಳನ್ನು ನೇಮಿಸುವ ಕೊಲಿಜಿಯಂ ವ್ಯವಸ್ಥೆ ಬಗ್ಗೆ ವ್ಯಾಪಕ ಟೀಕೆಗಳು ಬಂದ ಹಿನ್ನೆಲೆಯಲ್ಲಿ ಈ ಮಸೂದೆಯನ್ನು ಅಂಗೀಕರಿಸಲಾಗಿತ್ತು.

ದೇಶದ ಪ್ರಧಾನಮಂತ್ರಿಯನ್ನು ಆತನ ಪಕ್ಷದ ಸಂಸತ್‌ ಸದಸ್ಯರು ಆಯ್ಕೆ ಮಾಡುತ್ತಾರೆ. ಅಂದರೆ ಕಾರ್ಯಾಂಗವೇ ಪ್ರಧಾನಿಯನ್ನು ನೇಮಿಸುತ್ತದೆ. ಹಾಗಿರುವಾಗ ನ್ಯಾಯಾಂಗವು ನ್ಯಾಯಾಧೀಶರನ್ನು ನೇಮಿಸುವುದು ಹೇಗೆ ತಪ್ಪಾಗುತ್ತದೆ? ಸಂವಿಧಾನ ನ್ಯಾಯಾಂಗಕ್ಕೆ ವಹಿಸಿಕೊಟ್ಟಿರುವ ಜವಾಬ್ದಾರಿಯನ್ನು ಸುಪ್ರೀಂಕೋರ್ಟು ಪ್ರಾಮಾಣಿಕವಾಗಿ ಪೂರೈಸಿದೆ.

ಸಂವಿಧಾನದ ಅನುಚ್ಛೇದ 124ರ ಅಡಿಯಲ್ಲಿ ರಾಷ್ಟ್ರಾಧ್ಯಕ್ಷರು, ಸುಪ್ರೀಂಕೋರ್ಟು ಹಾಗೂ ರಾಜ್ಯಗಳ ಉಚ್ಚ ನ್ಯಾಯಾಲಯಗಳ ನ್ಯಾಯಾಧೀಶರನ್ನು ನೇಮಿಸತಕ್ಕದ್ದು. ಸುಪ್ರೀಂಕೋರ್ಟು ಹಾಗೂ ರಾಜ್ಯಗಳ ಉಚ್ಚ ನ್ಯಾಯಾಧೀಶರುಗಳೊಂದಿಗೆ ಸಮಾಲೋಚಿಸಿದ ಅನಂತರವೇ ಈ ನೇಮಕ ಮಾಡಬೇಕು. ಇಂತಹ ಸಮಾಲೋಚನೆ ನಡೆಸದೆ ನ್ಯಾಯಾಧೀಶರ ನೇಮಕಾತಿ ಸರಿಯಲ್ಲ. ನ್ಯಾಯಾಧೀಶರ ನೇಮಕಾತಿಯಲ್ಲಿ ಕಾರ್ಯಾಂಗದ ಹಸ್ತಕ್ಷೇಪ ಸಲ್ಲದು.

ನ್ಯಾ.ನೇ.ಆ. ಕಾಯಿದೆ, ನ್ಯಾಯಾಧೀಶರ ನೇಮಕಾತಿ ಸಮುಚ್ಚಯದೊಳಗೆ ಕೇಂದ್ರದ ಕಾನೂನು ಸಚಿವರು ಮತ್ತು ದೇಶದ ಇಬ್ಬರು ಗಣ್ಯ ಪ್ರಭಾವಿ ವ್ಯಕ್ತಿಗಳನ್ನು ತೂರುವ ಪ್ರಯತ್ನ ಮಾಡುತ್ತದೆ. ಗಣ್ಯ ಪ್ರಭಾವಿಗಳ ಆಯ್ಕೆಯನ್ನು ಸುಪ್ರೀಂಕೋರ್ಟಿನ ಮುಖ್ಯ ನ್ಯಾಯಾಧೀಶರು, ದೇಶದ ಪ್ರಧಾನಿ ಮತ್ತು ಕೇಂದ್ರ ಸರಕಾರದ ಕಾಯಿದೆ ಸಚಿವರು ಮಾಡತಕ್ಕದ್ದು. ಗಣ್ಯ ಪ್ರಭಾವಿಗಳ ಆಯ್ಕೆಯಲ್ಲಿಯೇ ನ್ಯಾಯಾಂಗದ ಆದ್ಯತೆ ನಷ್ಟವಾಗುತ್ತದೆ.  ಅಷ್ಟು ಮಾತ್ರವಲ್ಲದೆ 3 ನ್ಯಾಯಾಧೀಶರು ಮಾಡುವ ಆಯ್ಕೆಯನ್ನು ಕಾಯಿದೆ ಮಂತ್ರಿ ಮತ್ತು 2 ಗಣ್ಯ ಪ್ರಭಾವಿಗಳು ವಿಟೋ ನೀಡಿ ತಡೆಯಬಹುದು. ಇದು ಸಂವಿಧಾನದ ಆಶಯಕ್ಕೆ ಮತ್ತು ಮೂಲ ಸಂರಚನೆಗೆ ಹಾಗೂ ತಳಹದಿ ತತ್ವಗಳಿಗೆ ವ್ಯತಿರಿಕ್ತ. ಈ ಕಾರಣಕ್ಕಾಗಿ ಸುಪ್ರೀಂಕೋರ್ಟು ನ್ಯಾ.ನೇ.ಆ. ಕಾಯಿದೆಯನ್ನು ಅಸಿಂಧುಗೊಳಿಸಿದೆ.

ರಾಷ್ಟ್ರೀಯ ನ್ಯಾಯಾಧೀಶರ ನೇಮಕಾತಿ ಆಯೋಗದ ಕುರಿತು ಸರ್ವೋಚ್ಚ ನ್ಯಾಯಾಲಯ ನೀಡಿರುವ ತೀರ್ಪು ಬಹಳ ಸಕಾಲಿಕವಾದದ್ದು, ದೂರದರ್ಶಿತ್ವವುಳ್ಳದ್ದು. ಹಾಗೂ ಇದು ಸಂವಿಧಾನದ ಹೃದಯ ಭಾಗವಾಗಿರುವ ನ್ಯಾಯಾಂಗದ ಸ್ವಾತಂತ್ರ್ಯ, ಅಧಿಕಾರ, ಹಕ್ಕು ಮತ್ತು ಕರ್ತವ್ಯಗಳನ್ನು ರಕ್ಷಿಸುವಂತಿದೆ. ನ್ಯಾ.ನೇ.ಆ. ಕಾಯಿದೆ ಮತ್ತು ಸಂವಿಧಾನದ ತಿದ್ದುಪಡಿ ಕಾಯಿದೆಗಳನ್ನು ಅಸಿಂಧುಗೊಳಿಸಿ, ಹಾಲಿ ಇದ್ದ ಕೊಲೀಜಿಯಮ್‌ ವ್ಯವಸ್ಥೆಯನ್ನು ಈ ತೀರ್ಪು ಪುನರುತ್ಥಾನಗೊಳಿಸಿದೆ. ಅಲ್ಲದೆ  ಲೋಪ ಹೋಗಲಾಡಿಸಿ ಸುಧಾರಿಸುವ ಬಗ್ಗೆ ಸಲಹೆ ಸೂಚನೆಗಳನ್ನೂ ಆಹ್ವಾನಿಸಿದೆ. ಈ ತೀರ್ಪು ನಮ್ಮ ಸಂವಿಧಾನದ ಬೆಳವಣಿಗೆಯ ಚರಿತ್ರಾರ್ಹ ಮುನ್ನಡೆಯ ಹೆಜ್ಜೆ.
➖➖End➖➖
━━━━━━━━━━━━━━━━━━━━━━━━━━━━━━━━━━━━━━━━━━

•••Extra Tips :
ನ್ಯಾ.ನೇ.ಆ. ಕಾಯಿದೆ ಪ್ರಕಾರ ರಚಿಸುವ ಸಮುಚ್ಚಯದಲ್ಲಿ ಒಟ್ಟು 6 ಮಂದಿ ಸದಸ್ಯರಿರುತ್ತಾರೆ. ಅವರ ಪೈಕಿ ಸುಪ್ರೀಂಕೋರ್ಟಿನ ಉಚ್ಚ ನ್ಯಾಯಾಧೀಶರು, 2 ಮಂದಿ ಹಿರಿಯ ನ್ಯಾಯಾಧೀಶರ, ಕಾಯಿದೆ ಮಂತ್ರಿ ಮತ್ತು 2 ಗಣ್ಯ ಪ್ರಭಾವಿಗಳು ಇರತಕ್ಕದ್ದು. ಅಂದರೆ ನ್ಯಾಯಾಂಗದ ಪರ 3 ಸದಸ್ಯರು ಮತ್ತು ಕಾರ್ಯಾಂಗದ ಪರ 3 ಸದಸ್ಯರು. ಇಲ್ಲಿಯೂ ನ್ಯಾಯಾಂಗದ ಆದ್ಯತೆ ನಷ್ಟವಾಗುತ್ತದೆ.

ಸಂವಿಧಾನ ಮತ್ತು ಸುಪ್ರೀಂಕೋರ್ಟಿನ ತೀರ್ಪುಗಳಲ್ಲಿ ವ್ಯಾಖ್ಯಾನಿಸಿರುವಂತೆ, ನ್ಯಾಯಾಂಗಕ್ಕೆ ಆದ್ಯತೆ ಇರತಕ್ಕದ್ದು. ಆದರೆ ನ್ಯಾ.ನೇ.ಆ. ಕಾಯಿದೆಯಂತೆ ನ್ಯಾಯಾಂಗದ ಆದ್ಯತೆ ಸಂಪೂರ್ಣ ನಷ್ಟವಾಗುತ್ತದೆ.

No comments:

Post a Comment