"ಮನುಷ್ಯ ದೀಪವಾದರೂ ಆಗಬೇಕು, ಕನ್ನಡಿಯಾದರೂ ಆಗಬೇಕು. ಒಂದು ಬೆಳಕನ್ನು ಕೊಡುತ್ತದೆ ಮತ್ತೊಂದು ಅದನ್ನು ಪ್ರತಿಬಿಂಬಿಸುತ್ತದೆ. ಪ್ರತಿಯೊಬ್ಬರೂ ದೀಪ ಆಗದೇ ಹೋಗಬಹುದು ಆದರೆ ಕನ್ನಡಿ ಆಗಬಲ್ಲರು. ತಿಳಿದಿರುವ ಜ್ಞಾನವನ್ನು ಮತ್ತೊಬ್ಬರಿಗೆ ಹಂಚುವುದೇ ಜೀವನ.."—ಅರಿಸ್ಟಾಟಲ್

Thursday, 3 August 2017

☀ ಈ ದಿನದ ಐಎಎಸ್ / ಕೆಎಎಸ್ ಮೇನ್ಸ್ ಮಾದರಿ ಪರೀಕ್ಷಾ ಪ್ರಶ್ನೆ : — ಕ್ರೈಸ್ತರ ಒಂದು ಸಂಪ್ರದಾಯದ ಪ್ರಕಾರ ಸಂತ ಪದವಿಗೆ ಏರುವುದು ಎಂದರೇನು ? ಮದರ್ ತೆರೇಸಾ ಸಂತ ಪದವಿಗೇರಲು ಕಾರಣವಾದ ಅಂಶಗಳೇನು? (According to Christian Tradition what do you mean by Saint declaration? what are the main facts led Pope to declare, honor Mother Teresa as a Saint?)

☀ ಈ ದಿನದ ಐಎಎಸ್ / ಕೆಎಎಸ್ ಮೇನ್ಸ್ ಮಾದರಿ ಪರೀಕ್ಷಾ ಪ್ರಶ್ನೆ :

— ಕ್ರೈಸ್ತರ ಒಂದು ಸಂಪ್ರದಾಯದ ಪ್ರಕಾರ ಸಂತ ಪದವಿಗೆ ಏರುವುದು ಎಂದರೇನು ? ಮದರ್  ತೆರೇಸಾ ಸಂತ ಪದವಿಗೇರಲು ಕಾರಣವಾದ ಅಂಶಗಳೇನು?
(According to Christian Tradition what do you mean by Saint declaration? what are the main facts led Pope to declare, honor Mother Teresa as a Saint?)
━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━

★ ಸಾಮಾನ್ಯ ಅಧ್ಯಯನ
(general Studies)

★ ಐಎಎಸ್ / ಕೆಎಎಸ್ ಮೇನ್ಸ್ ಪರೀಕ್ಷಾ ತಯಾರಿ
(IAS / KAS Mains Exam Preparation)


ಸಂತ ಪದವಿ ಎನ್ನುವುದು ಕ್ರೈಸ್ತರ ಒಂದು ಸಂಪ್ರದಾಯ. ಒಬ್ಬ ವ್ಯಕ್ತಿ ನಿಧನರಾದ ಐದು ವರ್ಷಗಳ ನಂತರ ಅವರ ಯಾವುದಾದರೂಒಂದು ಮಹತ್ತರ ಪವಾಡ ಸಾಬೀತಾದರೆ, ಅಂತಹ ವ್ಯಕ್ತಿ ಸ್ವರ್ಗ ಪ್ರಾಪ್ತರಾಗಿದ್ದಾರೆ (ಬೀಟಿಫಿಕೇಷನ್‌) ಎಂದು ಘೋಷಿಸಲಾಗುತ್ತದೆ.

ಈ ಪಟ್ಟ ದೊರೆತ ನಂತರ ಮತ್ತೂಂದು ಪವಾಡ ರುಜುವಾದರೆ ಸಿಗುವುದೇ ಸಂತ ಪದವಿ. ಸ್ವರ್ಗ ಪ್ರಾಪ್ತರಾದ ವ್ಯಕ್ತಿಗಳನ್ನು ಅವರಿಗೆ ಸಂಬಂಧಿಸಿದ ವ್ಯಕ್ತಿಗಳು ಮಾತ್ರವೇ ಆರಾಧಿಸುತ್ತಾರೆ. ಆದರೆ ಸಂತ ಪದವಿಗೇರಿದವರನ್ನು ವಿಶ್ವಾದ್ಯಂತ ಇರುವ ಕ್ಯಾಥೋಲಿಕ್‌ ಕ್ರೈಸ್ತರು ಪೂಜಿಸುತ್ತಾರೆ.

ಸಂತ ಪದವಿಗೆ ಏರುವುದು ಕೆಲ ವರ್ಷಗಳ ಪ್ರಕ್ರಿಯೆ. ವ್ಯಕ್ತಿಯೊಬ್ಬರು ಮೃತರಾದ ಬಳಿಕ ಅವರ ಪವಾಡ ಸಾಬೀತಾದಾಗ ಅವರನ್ನು ಸಂತ ಪದವಿಗೇರಿಸುವ ಪ್ರಕ್ರಿಯೆಯನ್ನು ಒಂದು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರು ಆರಂಭಿಸುತ್ತಾರೆ. ಚರ್ಚ್‌ಗೆ ಸಂಬಂಧಪಟ್ಟವರು, ವ್ಯಕ್ತಿಯನ್ನು ಸಂಪರ್ಕಿಸಿ ಅವರಿಗಾದ ಪವಾಡದ ಅನುಭವ, ಅದರಿಂದೇನಾಯ್ತು? ಇತ್ಯಾದಿ ಮಾಹಿತಿಗಳನ್ನು, ಸಾಕ್ಷ್ಯಗಳನ್ನು ಸಂಪೂರ್ಣವಾಗಿ ಕಲೆ ಹಾಕುತ್ತಾರೆ. ಈ ಮಾಹಿತಿಗಳು ಸಮಾಧನ ತಂದಿದ್ದಲ್ಲಿ, ಅವುಗಳನ್ನು ಬಳಿಕ ವ್ಯಾಟಿಕನ್‌ಗೆ ಕಳಿಸಲಾಗುತ್ತದೆ. ಬಳಿಕ ಧರ್ಮಶಾಸ್ತ್ರಜ್ಞರು, ಮೃತರ ಪವಾಡ ಸದೃಶ, ದೈವಿಕವಾದ ಶಕ್ತಿಯನ್ನು ನಿಜವೆಂದು ಪುರಸ್ಕರಿಸುತ್ತಾರೆ. ಇದನ್ನು ಕ್ರೈಸ್ತರ ಪರಮೋಚ್ಚ ಧರ್ಮಗುರು ಪೋಪ್‌ ಅವರಿಗೆ ತಿಳಿಸಿ ವ್ಯಕ್ತಿಯು ಪೂಜ್ಯರಾದವರು ಎಂದು ಗುರುತಿಸಿ ಸಂತ ಪದವಿ ಅನುದಾನಿಸುವಂತೆ ಕೇಳಲಾಗುತ್ತದೆ.


★ತೆರೇಸಾ ಸಂತ ಪದವಿಗೇರಲು ಕಾರಣವಾದ (ಅಂಶಗಳು) ಪವಾಡಗಳು :

ಭಾರತೀಯರಾಗಿದ್ದು ಸಂತ ಪದವಿಗೇರುವವರಲ್ಲಿ ಮದರ್‌ ತೆರೇಸಾ ಅವರು ಮೂರನೆಯವರು.

ಮದರ್‌ ತೆರೇಸಾ. ನಿರ್ಗತಿಕರು ರೋಗಿಗಳ ಪಾಲಿಗೆ ದೇವರಾಗಿದ್ದವರು. ಶುಶ್ರೂಷೆ, ಸಾಂತ್ವನ ಪದಕ್ಕೆ ಅನ್ವರ್ಥ ನಾಮ. ಇದಕ್ಕಾಗಿಯೇ "ಮದರ್‌', ತಾಯಿ ಎಂಬ ಅಭಿದಾನ. ಸೇವೆಯಲ್ಲೇ ಜೀವನ ಸಾರ್ಥಕ್ಯ ಕಂಡ ಮದರ್‌ ತೆರೇಸಾಗೆ ಇದೀಗ ಸಂತ ಪದವಿಗೇರಲಿದ್ದಾರೆ. ಸೆ.5ರ ಅವರ ಜನ್ಮದಿನಕ್ಕೆ ಪೂರ್ವಭಾವಿಯಾಗಿ 2016ರ ಸೆ.4ರಂದು ಅವರಿಗೆ ಕ್ರೈಸ್ತರ ಪರಮೋಚ್ಚ ಧರ್ಮಗುರು ಪೋಪ್‌ ಫ್ರಾನ್ಸಿಸ್‌ ಸಂತ ಪದವಿ ಪ್ರದಾನ ಮಾಡಿದ್ದಾರೆ.

ತೆರೇಸಾ ಅವರನ್ನು ಸಂತ ಪದವಿಗೇರಿಸಲು ಕಾರಣವಾದ ಪವಾಡಗಳು ಪ್ರಮುಖವಾಗಿ ಎರಡು. ಇವುಗಳನ್ನು ಮಾನ್ಯ
ಮಾಡಿಯೇ ವ್ಯಾಟಿಕನ್‌ ತೆರೇಸಾ ಅವರನ್ನು ಪೂಜ್ಯರು ಎಂದು ಗುರುತಿಸುತ್ತಿದೆ. ಮೊದಲನೆಯದ್ದು, ಕೋಲ್ಕತಾದ
ಮಹಿಳೆಯೊಬ್ಬರು ತೆರೇಸಾರನ್ನು ಪ್ರಾರ್ಥಿಸಿದಾಗ ಅವರ ದೇಹದಲ್ಲಿದ್ದ ಗೆಡ್ಡೆ ಅಳಿದದ್ದು. ಈ ಘಟನೆ 2003ರಲ್ಲಿ
ನಡೆದಿದ್ದು ಇದನ್ನು ವ್ಯಾಟಿಕನ್‌ ಮಾನ್ಯ ಮಾಡಿತ್ತು. ಬಳಿಕ ತೆರೇಸಾ ಅವರನ್ನು ಪ್ರಾರ್ಥಿಸಿದ್ದರಿಂದ ತನ್ನ ಮೆದುಳಿನ ಸೋಂಕು, ಮೂತ್ರಪಿಂಡ ಕಾಯಿಲೆ ವಾಸಿಯಾಗಿದೆ ಎಂದು ಬ್ರೆಜಿಲ್‌ನ ವ್ಯಕ್ತಿ 2008ರಲ್ಲಿ ಹೇಳಿದ್ದು, ಇದೂ ಅಧಿಕೃತ
ಎಂದು ವ್ಯಾಟಿಕನ್‌ ಮಾನ್ಯ ಮಾಡಿತ್ತು. ಬಳಿಕ 2015ರಲ್ಲಿ ತೆರೇಸಾ ಅವರಿಗೆ ಸಂತ ಪದವಿ ನೀಡುವುದಾಗಿ
ಪೋಪ್‌ ಘೋಷಿಸಿದ್ದರು.

No comments:

Post a Comment