"ಮನುಷ್ಯ ದೀಪವಾದರೂ ಆಗಬೇಕು, ಕನ್ನಡಿಯಾದರೂ ಆಗಬೇಕು. ಒಂದು ಬೆಳಕನ್ನು ಕೊಡುತ್ತದೆ ಮತ್ತೊಂದು ಅದನ್ನು ಪ್ರತಿಬಿಂಬಿಸುತ್ತದೆ. ಪ್ರತಿಯೊಬ್ಬರೂ ದೀಪ ಆಗದೇ ಹೋಗಬಹುದು ಆದರೆ ಕನ್ನಡಿ ಆಗಬಲ್ಲರು. ತಿಳಿದಿರುವ ಜ್ಞಾನವನ್ನು ಮತ್ತೊಬ್ಬರಿಗೆ ಹಂಚುವುದೇ ಜೀವನ.."—ಅರಿಸ್ಟಾಟಲ್

Monday, 25 December 2017

☀️ ಅಂತಾರಾಷ್ಟ್ರೀಯ ನ್ಯಾಯಾಲಯ : ಅದರ ಕಾರ್ಯಗಳು & ಕೋರ್ಟ್‌ನ ಅಧಿಕಾರ ವ್ಯಾಪ್ತಿ. (International Court of Justice: its functions & jurisdiction of the Court)

☀️ ಅಂತಾರಾಷ್ಟ್ರೀಯ ನ್ಯಾಯಾಲಯ : ಅದರ ಕಾರ್ಯಗಳು & ಕೋರ್ಟ್‌ನ ಅಧಿಕಾರ ವ್ಯಾಪ್ತಿ.
(International Court of Justice: its functions & jurisdiction of the Court)
━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━

★ ಸಾಮಾನ್ಯ ಅಧ್ಯಯನ ಪತ್ರಿಕೆ
(General Studies Paper)


ವಿಶ್ವಸಂಸ್ಥೆಯ ನಿರ್ಣಯವೊಂದರ ಅನ್ವಯ ಈ ಅಂತಾರಾಷ್ಟ್ರೀಯ ನ್ಯಾಯಾಲಯ 1945ರಲ್ಲಿ ರಚಿತವಾಗಿದೆ. ನೆದರ್ಲೆಂಡ್‌ನಲ್ಲಿರುವ ಈ ಕೋರ್ಟ್‌ನಲ್ಲಿ 15 ಮಂದಿ ನ್ಯಾಯಾಧೀಶರು ಇರುತ್ತಾರೆ. ವಿಶ್ವಸಂಸ್ಥೆಯ ಸದಸ್ಯ ದೇಶಗಳು ಸೂಚಿಸಿದ ನ್ಯಾಯತಜ್ಞರನ್ನು ಈ ಕೋರ್ಟ್‌ಗೆ ಆಯ್ಕೆ ಮಾಡಲಾಗುತ್ತದೆ. ವಿಶ್ವಸಂಸ್ಥೆ ಮತ್ತು ಭದ್ರತಾ ಮಂಡಳಿಯ ಸದಸ್ಯ ದೇಶಗಳು ಚುನಾವಣೆ ಮೂಲಕ ನ್ಯಾಯಾಧೀಶರನ್ನು ಆಯ್ಕೆ ಮಾಡುತ್ತವೆ. ನ್ಯಾಯಾಧೀಶರ ಅವಧಿ ಒಂಬತ್ತು ವರ್ಷ. ಮೂರು ವರ್ಷಕ್ಕೊಮ್ಮೆ ಐವರು ನ್ಯಾಯಾಧೀಶರ ನೇಮಕಗಳು ನಡೆಯುತ್ತವೆ.





●.ಕಾರ್ಯಗಳು :

ಸುಮಾರು ಎಪ್ಪತ್ತು ವರ್ಷಗಳಿಂದಲೂ ಈ ಕೋರ್ಟ್ ಕಾರ್ಯನಿರ್ವಹಿಸುತ್ತಿದೆಯಾದರೂ ಜಗತ್ತಿನ ವಿದ್ಯಮಾನಗಳ ಮೇಲೆ ಅದು ಪರಿಣಾಮ ಬೀರಿದ್ದು ಕಡಿಮೆಯೇ.
ದೇಶ-ದೇಶಗಳ ನಡುವಣ ವಿವಾದಗಳನ್ನು ಬಗೆಹರಿಸುವ ದಿಸೆಯಲ್ಲಿ ಅಗತ್ಯ ಸಲಹೆ ನೀಡುವುದು, ಅಷ್ಟೇ ಏಕೆ ನ್ಯಾಯದಾನ ಮಾಡುವುದು ಈ ಕೋರ್ಟ್‌ನ ಕೆಲಸ. ಈ ಕೋರ್ಟ್‌ನ ಮುಂದೆ ನೂರಾರು ಪ್ರಕರಣಗಳು ವಿಚಾರಣೆಗೆ ಬಂದಿವೆ. ಮುಖ್ಯವಾಗಿ ಗಡಿ ವಿವಾದಗಳು, ಒಂದು ದೇಶ ಮತ್ತೊಂದು ದೇಶದಲ್ಲಿ ಹಸ್ತಕ್ಷೇಪ ಮುಂತಾದ ಹತ್ತಾರು ರೀತಿಯ ಪ್ರಕರಣಗಳು ದಾಖಲಾಗಿವೆ.






●.ಕೋರ್ಟ್‌ನ ಅಧಿಕಾರ ವ್ಯಾಪ್ತಿ :

ಬಹಳ ಪ್ರಕರಣಗಳಲ್ಲಿ ಈ ಕೋರ್ಟ್‌ನ ಅಧಿಕಾರ ವ್ಯಾಪ್ತಿ ಕುರಿತಂತೆಯೇ ವಿವಾದ ಆರಂಭವಾಗಿ, ವಿಚಾರಣೆ ಏಕಪಕ್ಷೀಯವಾಗಿ ನಡೆದದ್ದು ಮತ್ತು ಅಂತಿಮ ತೀರ್ಪನ್ನು ಒಪ್ಪಲು ನಿರಾಕರಿಸಿರುವುದು ಸಾಮಾನ್ಯ. ಅಂಥ ಸಂದರ್ಭದಲ್ಲಿ ತೀರ್ಪನ್ನು ಜಾರಿಗೊಳಿಸುವ ಬಗ್ಗೆ ಕ್ರಮ ತೆಗೆದುಕೊಳ್ಳುವ ಪ್ರಸ್ತಾಪವನ್ನು ಕೋರ್ಟ್ ಭದ್ರತಾ ಮಂಡಳಿಗೆ ಒಪ್ಪಿಸಿತ್ತು. ಭದ್ರತಾ ಮಂಡಳಿಯ ಮುಂದೆ ಬಂದಾಗ ಅದನ್ನು ಮತಕ್ಕೆ ಹಾಕಲಾಯಿತು. ಸಹಜವಾಗಿ ಒಂದು ದೇಶ ವಿಟೋ ಚಲಾಯಿಸಿ ತೀರ್ಪು ಜಾರಿಯಾಗದಂತೆ ಮಾಡಿತು.

ನಿಕಾರಗುವಾದಲ್ಲಿನ ಬಂಡುಕೊರರಿಗೆ ಅಮೆರಿಕ ರಹಸ್ಯವಾಗಿ ಶಸ್ತ್ರಾಸ್ತ್ರ ಸರಬರಾಜು ಮಾಡಿ ಸರ್ಕಾರವನ್ನು ಪದಚ್ಯುತಗೊಳಿಸಲು ಯತ್ನಿಸಿದ್ದು ಶೀತಲ ಸಮರದ ಕಾಲದ ಒಂದು ಘಟನೆ. ಆಗ ನಿಕಾರಗುವಾ ಈ ಕುರಿತಂತೆ ಅಂತಾರಾಷ್ಟ್ರೀಯ ಕೋರ್ಟ್‌ನಲ್ಲಿ ದೂರು ಸಲ್ಲಿಸಿತ್ತು (1986). ಈ ವಿಷಯವನ್ನು ವಿಚಾರಣೆಗೆ ಕೈಗೆತ್ತಿಕೊಳ್ಳುವ ಅಧಿಕಾರ ಕೋರ್ಟ್‌ಗೆ ಇಲ್ಲ ಎಂದು ಅಮೆರಿಕ ವಾದ ಮಾಡಿತು. ಅಂತಿಮವಾಗಿ ಏಕಪಕ್ಷೀಯವಾಗಿಯೇ ವಿಚಾರಣೆ ನಡೆದು, ಅಮೆರಿಕದ ಹಸ್ತಕ್ಷೇಪ ಕಾನೂನುಬಾಹಿರವಾದುದು ಎಂದು ತೀರ್ಪು ನೀಡಿತು. ಅಮೆರಿಕ ತೀರ್ಪಿಗೆ ಮಾನ್ಯತೆಯನ್ನೇ ನೀಡಲಿಲ್ಲ. ಅಮೆರಿಕ ಅಷ್ಟೇ ಏಕೆ, ಬಹುಪಾಲು ದೇಶಗಳು ಅನೇಕ ಪ್ರಕರಣಗಳಲ್ಲಿ ಇಂಥದ್ದೇ ಧೋರಣೆ ತಳೆದದ್ದುಂಟು.

ಭಾರತಕ್ಕೆ ಸಂಬಂಧಿಸಿದ ಆರು ಪ್ರಕರಣಗಳು ಈ ಕೋರ್ಟ್ ಮುಂದಿವೆ. ಕುಲಭೂಷಣ್ ಜಾದವ್ ಪ್ರಕರಣ ಇತ್ತೀಚಿನದ್ದು.

No comments:

Post a Comment