"ಮನುಷ್ಯ ದೀಪವಾದರೂ ಆಗಬೇಕು, ಕನ್ನಡಿಯಾದರೂ ಆಗಬೇಕು. ಒಂದು ಬೆಳಕನ್ನು ಕೊಡುತ್ತದೆ ಮತ್ತೊಂದು ಅದನ್ನು ಪ್ರತಿಬಿಂಬಿಸುತ್ತದೆ. ಪ್ರತಿಯೊಬ್ಬರೂ ದೀಪ ಆಗದೇ ಹೋಗಬಹುದು ಆದರೆ ಕನ್ನಡಿ ಆಗಬಲ್ಲರು. ತಿಳಿದಿರುವ ಜ್ಞಾನವನ್ನು ಮತ್ತೊಬ್ಬರಿಗೆ ಹಂಚುವುದೇ ಜೀವನ.."—ಅರಿಸ್ಟಾಟಲ್

Friday, 7 July 2017

☀ ಪ್ರಚಲಿತ ಉಪಯುಕ್ತ ಸಮೀಕ್ಷೆಗಳು ಮತ್ತು ವಿಶೇಷ ವರದಿಗಳು (ಅಂಕಿ-ಅಂಶಗಳು) : ■. ವಿಶ್ವದ ದುಬಾರಿ ನಗರ - 2017: ಮೆರ್ಸೆರ್‌ ಕನ್ಸಲ್ಟಿಂಗ್‌ ಗ್ರೂಪ್‌ ನ ವಿಶೇಷ ವರದಿ: (Special Reports on the world’s most expensive cities)

☀ ಪ್ರಚಲಿತ ಉಪಯುಕ್ತ ಸಮೀಕ್ಷೆಗಳು ಮತ್ತು ವಿಶೇಷ ವರದಿಗಳು (ಅಂಕಿ-ಅಂಶಗಳು) :
■. ವಿಶ್ವದ ದುಬಾರಿ ನಗರ - 2017: ಮೆರ್ಸೆರ್‌ ಕನ್ಸಲ್ಟಿಂಗ್‌ ಗ್ರೂಪ್‌ ನ ವಿಶೇಷ ವರದಿ:
(Special Reports on the world’s most expensive cities)
━━━━━━━━━━━━━━━━━━━━━━━━━━━━━━━━━━━━━━━━━━━━━

★ ಪ್ರಚಲಿತ ಉಪಯುಕ್ತ ಸಮೀಕ್ಷೆಗಳು ಮತ್ತು ವಿಶೇಷ ವರದಿಗಳು (ಅಂಕಿ-ಅಂಶಗಳು)
(Current useful surveys and special reports-figures)

★ ಪ್ರಚಲಿತ ಘಟನೆಗಳು.
(Current Affairs)


■. ವಿಶ್ವದ ದುಬಾರಿ ನಗರ- 2017: ಮೆರ್ಸೆರ್‌ ಕನ್ಸಲ್ಟಿಂಗ್‌ ಗ್ರೂಪ್‌ ನ ವಿಶೇಷ ವರದಿ:
(Special Reports on the world’s most expensive cities)


✧. ಅಂಗೋಲಾದ ರಾಜಧಾನಿ ಲುವಾಂಡಾ  ಜಗತ್ತಿನಲ್ಲೇ ಅತ್ಯಂತ ದುಬಾರಿ ನಗರ ಎಂದು ಸಮೀಕ್ಷೆಯೊಂದು ತಿಳಿಸಿದೆ. ಮೆರ್ಸೆರ್‌ ಕನ್ಸಲ್ಟಿಂಗ್‌ ಗ್ರೂಪ್‌ ನಡೆಸಿದ 23ನೇ ವಾರ್ಷಿಕ ಸಮೀಕ್ಷೆಯಲ್ಲಿ ಈ ವಿಷಯ ತಿಳಿದು ಬಂದಿದೆ.

- ಡಾಲರ್‌ ಎದುರು ಅಂಗೋಲಾದ ಸ್ಥಳೀಯ ಕರೆನ್ಸಿ ‘ಕ್ವಾಂಝಾ’ ಮೌಲ್ಯ  ಕುಸಿತವಾಗಿದ್ದರೂ ಲುವಾಂಡಾ  ದುಬಾರಿ ನಗರದ ಪಟ್ಟ ಪಡೆದುಕೊಂಡಿದೆ.
- ಜೀವನ ವೆಚ್ಚ ಕುರಿತ ವರದಿಯಲ್ಲೂ  ಸತತ ಮೂರು ವರ್ಷಗಳ ಕಾಲ ಲುವಾಂಡಾ  ನಗರ ಪ್ರಥಮ ಸ್ಥಾನ ಪಡೆದಿತ್ತು.

✧. ಮೊದಲ ಸ್ಥಾನದಲ್ಲಿದ್ದ ಹಾಂಗ್‌ಕಾಂಗ್‌ ನಗರ ಈಗ ಎರಡನೇ ಸ್ಥಾನ ಪಡೆದಿದೆ.  ಆದರೆ, ಏಷ್ಯಾದಲ್ಲೇ ಅತ್ಯಂತ ದುಬಾರಿ ನಗರವಾಗಿದೆ. ಈ ನಗರದಲ್ಲಿ ವಾಸಿಸುವ ಮನೆಗಳು ದುಬಾರಿಯಾಗಿವೆ ಎಂದು ಸಮೀಕ್ಷೆ ತಿಳಿಸಿದೆ.

✧. 200 ನಗರಗಳಲ್ಲಿ ಈ ಸಮೀಕ್ಷೆ ನಡೆಸಿದ್ದು,  ವಸತಿ, ಆಹಾರ, ಸಾರಿಗೆ ಮತ್ತು ಮನರಂಜನೆ ಸೇರಿದಂತೆ  200 ಅಂಶಗಳನ್ನು ಹೋಲಿಕೆ ಮಾಡಲಾಗಿದೆ.

- ಕಳೆದ ಬಾರಿ 5ನೇ ಸ್ಥಾನದಲ್ಲಿದ್ದ ಟೋಕಿಯೊ ಈ ಸಲ ಮೂರನೇ ಸ್ಥಾನ ಪಡೆದಿದೆ. ಯೆನ್‌ ಮೌಲ್ಯ ಮತ್ತು ವಸತಿ ವಹಿವಾಟಿನಲ್ಲಿ ಹೆಚ್ಚಳವಾಗಿರುವುದು  ಇದಕ್ಕೆ ಕಾರಣವಾಗಿದೆ.

- ಸಿಂಗಪುರ 5ನೇ ಸ್ಥಾನದಲ್ಲಿದ್ದರೆ, ನ್ಯೂಯಾರ್ಕ್‌ ಒಂಬತ್ತನೇ ಸ್ಥಾನ ಪಡೆದಿದೆ.

✧. ಸಮೀಕ್ಷೆಯನ್ನು ವಿವಿಧ ದೇಶಗಳು ಮತ್ತು ಉದ್ಯಮಗಳು ಗಂಭೀರವಾಗಿ ಪರಿಗಣಿಸಿವೆ. ವಿದೇಶಗಳಿಗೆ ತಮ್ಮ ನೌಕರರನ್ನು ಕಳುಹಿಸುವ ಸಂದರ್ಭದಲ್ಲಿ ಈ ಅಂಶಗಳನ್ನು ಪರಿಗಣಿಸುತ್ತವೆ ಎಂದು ವಿಶ್ಲೇಷಿಸಲಾಗಿದೆ.
ರಷ್ಯಾದ ಕೆಲವು ನಗರಗಳು ಮತ್ತಷ್ಟು ದುಬಾರಿಯಾಗಿವೆ. ಕಳೆದ ವರ್ಷ 53ನೇ ಸ್ಥಾನದಲ್ಲಿದ್ದ  ಮಾಸ್ಕೊ ನಗರ ಈ ಬಾರಿ 14ನೇ ಸ್ಥಾನದಲ್ಲಿದೆ. ಸೇಂಟ್‌ ಪೀಟರ್ಸ್‌ಬರ್ಗ್‌ 116ರಿಂದ 36ನೇ ಸ್ಥಾನಕ್ಕೇರಿದೆ.

✧. ದುಬಾರಿ ನಗರಗಳು
-  ಲುವಾಂಡಾ
- ಹಾಂಗ್‌ಕಾಂಗ್
- ಟೋಕಿಯೊ
- ಜ್ಯೂರಿಚ್‌
- ಸಿಂಗಪುರ

✧. ಬೆಂಗಳೂರಿಗೆ 166ನೇ ಸ್ಥಾನ

- ವಲಸಿಗರಿಗೆ ಮುಂಬೈ ದೇಶದಲ್ಲಿ ದುಬಾರಿ ನಗರವಾಗಿದ್ದು, ಜಗತ್ತಿನ ಪ್ರಮುಖ ನಗರಗಳ ಪಟ್ಟಿಯಲ್ಲಿ 57ನೇ ಸ್ಥಾನ ಪಡೆದಿದೆ.
- ಆರ್ಥಿಕ ಬೆಳವಣಿಗೆ, ಹಣದುಬ್ಬರ ಇದಕ್ಕೆ ಪ್ರಮುಖ ಕಾರಣಗಳಾಗಿವೆ.

✧. ಜಾಗತಿಕ ಪಟ್ಟಿಯಲ್ಲಿ ನವದೆಹಲಿ 99, ಚೆನ್ನೈ 135, ಬೆಂಗಳೂರು 166 ಹಾಗೂ ಕೋಲ್ಕತ್ತ 184ನೇ ಸ್ಥಾನದಲ್ಲಿವೆ.

2 comments: