"ಮನುಷ್ಯ ದೀಪವಾದರೂ ಆಗಬೇಕು, ಕನ್ನಡಿಯಾದರೂ ಆಗಬೇಕು. ಒಂದು ಬೆಳಕನ್ನು ಕೊಡುತ್ತದೆ ಮತ್ತೊಂದು ಅದನ್ನು ಪ್ರತಿಬಿಂಬಿಸುತ್ತದೆ. ಪ್ರತಿಯೊಬ್ಬರೂ ದೀಪ ಆಗದೇ ಹೋಗಬಹುದು ಆದರೆ ಕನ್ನಡಿ ಆಗಬಲ್ಲರು. ತಿಳಿದಿರುವ ಜ್ಞಾನವನ್ನು ಮತ್ತೊಬ್ಬರಿಗೆ ಹಂಚುವುದೇ ಜೀವನ.."—ಅರಿಸ್ಟಾಟಲ್

Sunday 15 February 2015

☀.' ಕರ್ನಾಟಕದ ನದಿ ವ್ಯವಸ್ಥೆ',—ಭಾಗ: Ⅵ  'ಕರ್ನಾಟಕದಲ್ಲಿ ಹರಿಯುವ ಪ್ರಮುಖ ನದಿಗಳು' ('The River System of the Karnataka, The Major Rivers Flowing In Karnataka')

☀.' ಕರ್ನಾಟಕದ ನದಿ ವ್ಯವಸ್ಥೆ',—ಭಾಗ: Ⅵ

 'ಕರ್ನಾಟಕದಲ್ಲಿ ಹರಿಯುವ ಪ್ರಮುಖ ನದಿಗಳು'
('The River System of the Karnataka, The Major Rivers Flowing In Karnataka')


♦. ಕರ್ನಾಟಕದ ಭೂಗೋಳ

━━━━━━━━━━━━━━━━━━━━━━━━━━━━━━━━━━━━━━━━━━━━━

...ಮುಂದುವರೆದ ಭಾಗ Ⅵ.


Ⅶ.ಕಾವೇರಿ ನದಿ ಏರ್ಪಾಟು:

✧.ಕಾವೇರಿ ನದಿಯು ದಕ್ಷಿಣ ಭಾರತದ ಅಂತರಾಜ್ಯಗಳ ನದಿಯಾಗಿದೆ. ಮುನ್ನೀರು ಭಾರತದ ಪೂರ್ವದ ಕಡೆಗೆ ಹರಿಯುವ ಈ ನದಿಯು ಬಂಗಾಳ ಕೊಲ್ಲಿ (ಕಡಲನ್ನು) ಸೇರುತ್ತದೆ.

✧.ಕೊಡಗಿನ ಕಾವೇರಿ ಎಂದೇ ಹೆಸರಾಗಿರುವ ಈ ನದಿಯು ಕೊಡಗಿನ ಬ್ರಹ್ಮಗಿರಿ ಬೆಟ್ಟದ ತಲಕಾವೇರಿಯಲ್ಲಿ ಸುಮಾರು 1341 ಮೀ. ಕಡಲ ಮಟ್ಟದಲ್ಲಿ ಹುಟ್ಟುತ್ತದೆ.

✧.ಕಾವೇರಿ ನದಿಯ ಒಟ್ಟು ಆಯಕಟ್ಟು 81,155 ಚದರ ಕಿ. ಮೀ.

✧.ಕಾವೇರಿ ನದಿ ಏರ್ಪಾಟಿನ ಇತರ ರಾಜ್ಯಗಳಲ್ಲಿ ಹರಡಿರುವ ಜಲಾನಯನ ಪ್ರದೇಶ ಮತ್ತು ಅದರ ಕಾಲುವೆ ವ್ಯವಸ್ತೆಯನ್ನು ಕೆಳಗಿನ ಪಟ್ಟಿಯಲ್ಲಿ ಕಾಣಬಹುದು.


★.ಜಲಾನಯನ (basin)ಇರುವ ರಾಜ್ಯ & ಆಯಕಟ್ಟು (catchment area ):

1ಕರ್ನಾಟಕ —  34,273 ಚದರ ಕಿ. ಮೀ

2ಕೇರಳ —   2,866 ಚದರ ಕಿ. ಮೀ

3ತಮಿಳು ನಾಡು—   43,868 ಚದರ ಕಿ. ಮೀ

4ಪಾಂಡಿಚರಿಯ ಕಾರೈಕಲ್ —   148 ಚದರ ಕಿ. ಮೀ

✧.ಒಟ್ಟು 81,155 ಚದರ ಕಿ. ಮೀ


✧.ಹಾರಂಗಿ, ಲಕ್ಶ್ಮಣ ತೀರ್ಥ, ಕಬಿನಿ, ಶಿಮ್ಶ, ಅರ್ಕಾವತಿ ಮತ್ತು ಸುವರ್ಣವತಿ ಇವೆಲ್ಲ ಕಾವೇರಿ ನದಿಯ ಬಹು ಮುಖ್ಯವಾದ ಉಪನದಿಗಳು.

✧.ಇವುಗಳಲ್ಲಿ ಕಬನಿ, ಅರ್ಕಾವತಿ ಮತ್ತು ಸುವರ್ಣವತಿ ನದಿಗಳು ಹೊರತಾಗಿ ಮಿಕ್ಕೆಲ್ಲ ನದಿಗಳು ನಮ್ಮ ಕರ್ನಾಟಕದಲ್ಲೆ ಹುಟ್ಟಿ, ಕರ್ನಾಟಕದಲ್ಲೆ ಹರಿಯುತ್ತವೆ.

—ಈ ನದಿಗಳ ಅಡಕವನ್ನು ಕೆಳಗಿನ ಪಟ್ಟಿಯಲ್ಲಿ ಕಾಣಬಹುದು.


✧.ಕಾವೇರಿ ನದಿಯ ಉಪನದಿಗಳು (tributary)

1ಹಾರಂಗಿ

●.ಆಯಕಟ್ಟು (catchment area):— 717 ಚದರ ಕಿ.ಮೀ.

●.ನದಿಯ ಮೂಲ:—ಪಶ್ಚಿಮ ಘಟ್ಟದ ಪುಶ್ಪಗಿರಿ ಬೆಟ್ಟ

●.ಮೂಲದ ಎತ್ತರ:—1067 ಮೀ,

●.ನದಿಯ ಉದ್ದ:—50 ಕಿ. ಮೀ.

●.ರಾಜ್ಯ :— ಕರ್ನಾಟಕ


2.ಹೇಮಾವತಿ

●.ಆಯಕಟ್ಟು (catchment area):— 5410 ಚದರ ಕಿ.ಮೀ.

●.ನದಿಯ ಮೂಲ:—ಪಶ್ಚಿಮ ಘಟ್ಟದ ಬಳ್ಳರಾಯನ ದುರ್ಗ,

●.ಮೂಲದ ಎತ್ತರ:—1219 ಮೀ,

●.ನದಿಯ ಉದ್ದ:— 245 ಕಿ. ಮೀ

●.ರಾಜ್ಯ :— ಕರ್ನಾಟಕ


3.ಕಬಿನಿ

●.ಆಯಕಟ್ಟು (catchment area):— 7040 ಚದರ ಕಿ.ಮೀ.

●.ನದಿಯ ಮೂಲ:—ಕೇರಳದ ಪಶ್ಚಿಮ ಘಟ್ಟ್ಟ,

●.ಮೂಲದ ಎತ್ತರ:—2,140 ಮೀ,

●.ನದಿಯ ಉದ್ದ:— 230 ಕಿ. ಮೀ.

●.ಒಳ –ಉಪನದಿಗಳು (sub-tributary):— ತರಕ, ಹೆಬ್ಬಳ್ಳ , ನುಗು, ಗುಂಡಲ್

●.ರಾಜ್ಯಗಳು :— ಕರ್ನಾಟಕ, ಕೇರಳ ಮತ್ತು ತಮಿಳು ನಾಡು


4.ಸುವರ್ಣವತಿ

●.ಆಯಕಟ್ಟು (catchment area):— 1787 ಚದರ ಕಿ.ಮೀ.

●.ನದಿಯ ಮೂಲ:—ನಸ್ರೂರ್ ಘಟ್ಟ್ಟದ ಸಾಲು,

●.ನದಿಯ ಉದ್ದ:— 88 ಕಿ. ಮೀ.

●.ರಾಜ್ಯಗಳು :— ಕರ್ನಾಟಕ ಮತ್ತು ತಮಿಳು ನಾಡು


5.ಲಕ್ಶ್ಮಣ ತೀರ್ಥ

●.ಆಯಕಟ್ಟು (catchment area):— 1690 ಚದರ ಕಿ.ಮೀ.

●.ನದಿಯ ಮೂಲ:— ಪಶ್ಚಿಮ ಘಟ್ಟ್ಟ,

●.ಮೂಲದ ಎತ್ತರ:—1,950 ಮೀ,

●.ನದಿಯ ಉದ್ದ:— 131 ಕಿ. ಮೀ.

●.ಒಳ –ಉಪನದಿಗಳು (sub-tributary):— ರಾಮತೀರ್ಥ,

●.ರಾಜ್ಯಗಳು :— ಕರ್ನಾಟಕ.


6.ಶಿಂಷಾ

●.ಆಯಕಟ್ಟು (catchment area):— 8469 ಚದರ ಕಿ.ಮೀ.

●.ನದಿಯ ಮೂಲ:— ತುಮುಕೂರು ಜಿಲ್ಲೆ,

●.ಮೂಲದ ಎತ್ತರ:—914 ಮೀ,

●.ನದಿಯ ಉದ್ದ:— 221 ಕಿ. ಮೀ.

●.ಒಳ –ಉಪನದಿಗಳು (sub-tributary):— ವೀರ ವೈಶ್ನವಿ, ಕಣಿಹಳ್ಳ, ಚಿಕ್ಕೊಳೆ, ಹೆಬ್ಬಹಳ್ಳ, ಮುಲ್ಲಹಳ್ಳ ಮತ್ತು ಕಣ್ವ

●.ರಾಜ್ಯಗಳು :— ಕರ್ನಾಟಕ.


7.ಅರ್ಕಾವತಿ

●.ಆಯಕಟ್ಟು (catchment area):— 4351ಚದರ ಕಿ.ಮೀ.

●.ನದಿಯ ಮೂಲ:— ನಂದಿದುರ್ಗ,

●.ಮೂಲದ ಎತ್ತರ:—1,480 ಮೀ,

●.ನದಿಯ ಉದ್ದ:— 161 ಕಿ. ಮೀ

●.ಒಳ –ಉಪನದಿಗಳು (sub-tributary):— ಕುಮುದಾವತಿ , ಮಣಿಹಳ್ಳ,ಕುಟ್ಟೆಹೊಳೆ, ವೃಷಭಾವತಿ

●.ರಾಜ್ಯಗಳು :— ಕರ್ನಾಟಕ ಮತ್ತು ತಮಿಳು ನಾಡು.


No comments:

Post a Comment