"ಮನುಷ್ಯ ದೀಪವಾದರೂ ಆಗಬೇಕು, ಕನ್ನಡಿಯಾದರೂ ಆಗಬೇಕು. ಒಂದು ಬೆಳಕನ್ನು ಕೊಡುತ್ತದೆ ಮತ್ತೊಂದು ಅದನ್ನು ಪ್ರತಿಬಿಂಬಿಸುತ್ತದೆ. ಪ್ರತಿಯೊಬ್ಬರೂ ದೀಪ ಆಗದೇ ಹೋಗಬಹುದು ಆದರೆ ಕನ್ನಡಿ ಆಗಬಲ್ಲರು. ತಿಳಿದಿರುವ ಜ್ಞಾನವನ್ನು ಮತ್ತೊಬ್ಬರಿಗೆ ಹಂಚುವುದೇ ಜೀವನ.."—ಅರಿಸ್ಟಾಟಲ್

Tuesday, 17 February 2015

☀ಸಪ್ಟೆಂಬರ್ 2014 ರ ಪ್ರಮುಖ ಪ್ರಚಲಿತ ವಿದ್ಯಮಾನಗಳು ☀ (Important Current Affairs of September 2014)

☀ಸಪ್ಟೆಂಬರ್ 2014 ರ ಪ್ರಮುಖ ಪ್ರಚಲಿತ ವಿದ್ಯಮಾನಗಳು ☀
(Important Current Affairs of September 2014)

★ಸಪ್ಟೆಂಬರ್ 2014
(September 2014)

━━━━━━━━━━━━━━━━━━━━━━━━━━━━━━━━━━━━━━━━━━━━━


♦.*ಸೆ.1:   ಜಿಂಬಾಬ್ವೆ ರಾಜಧಾನಿ ಹರಾರೆಯಲ್ಲಿ ನಡೆದ ಆಸ್ಟ್ರೇಲಿಯಾ ಮತ್ತು ಜಿಂಬಾಬ್ವೆ ನಡುವಿನ ಏಕದಿನ ಕ್ರಿಕೆಟ್‌ ಪಂದ್ಯದಲ್ಲಿ ಜಿಂಬಾಬ್ವೆ 31 ವರ್ಷಗಳ ಬಳಿಕ ಆಸ್ಟ್ರೇಲಿಯಾ ತಂಡವನ್ನು ಮಣಿಸುವ ಮೂಲಕ ನೂತನ ದಾಖಲೆ ಬರೆಯಿತು.


♦.*ಸೆ.2:    ಭಾರತದ ಮಾಜಿ ಅಟಾರ್ನಿ ಜನರಲ್‌ ಜಿ. ಇ. ವಹನ್ವತಿ ನಿಧನರಾದರು. ಅವರು ಸುಪ್ರಿಂ ಕೋರ್ಟ್‌ನಲ್ಲಿ ನ್ಯಾಯಾಧೀಶರಾಗಿದ್ದರು.


♦.*ಸೆ.3:    ಸಾರ್ವಜನಿಕ ಸ್ಥಳ ಹಾಗೂ ಧಾರ್ಮಿಕ ಕೇಂದ್ರಗಳಲ್ಲಿ ಪ್ರಾಣಿ ಬಲಿಯನ್ನು ನಿಷೇಧಿಸುವಂತೆ ಹಿಮಾಚಲ ಪ್ರದೇಶ ಹೈಕೋರ್ಟ್‌ ಸರ್ಕಾರಕ್ಕೆ ಮಹತ್ವದ ನಿರ್ದೇಶನ ನೀಡಿತು.


♦.*ಸೆ.3:    ಸುಪ್ರಿಂ ಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ಪಿ. ಸದಾಶಿವಂ ಅವರನ್ನು ಕೇಂದ್ರ ಸರ್ಕಾರ ಕೇರಳ ರಾಜ್ಯದ ರಾಜ್ಯಪಾಲರನ್ನಾಗಿನೇಮಕ ಮಾಡಿತು.


♦.*ಸೆ.3:    ಸುಪ್ರಿಂ ಕೋರ್ಟ್‌ನ 42ನೇ ಮುಖ್ಯ ನ್ಯಾಯಮೂರ್ತಿಯನ್ನಾಗಿ ಕನ್ನಡಿಗ ಎಚ್‌.ಎಲ್‌ ದತ್ತು ಅವರನ್ನು ನೇಮಕ ಮಾಡಿ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರು ಆದೇಶ ಹೊರಡಿಸಿದರು.


♦.*ಸೆ. 4:    ನ್ಯಾಯಮೂರ್ತಿ ಧರ್ಮಾಧಿಕಾರಿ ನೇತೃತ್ವದ ಸಮಿತಿ ಮಹಾರಾಷ್ಟ್ರದಲ್ಲಿ ಎಲ್ಲಾ ರೀತಿಯ ಡ್ಯಾನ್ಸ್‌ ಬಾರ್‌ಗಳನ್ನು ನಿಷೇಧಿಸುವಂತೆ ಬಾಂಬೆ ಹೈಕೋರ್ಟ್‌ಗೆ ವರದಿ ಸಲ್ಲಿಸಿತು.


♦.*ಸೆ.4:    ಅಮೆರಿಕದ ಖ್ಯಾತ ಹಾಸ್ಯಗಾರ ಹಾಗೂ ಭಾಷಣಕಾರ ಜಾನ್‌ ರಿವರ್‌ ನಿಧನರಾದರು. ಅವರು ವಿಶ್ವದಾದ್ಯಂತ ಹಲವಾರು ಹಾಸ್ಯ ಕಾರ್ಯಕ್ರಮಗಳನ್ನು ನೀಡುವ ಮೂಲಕ ಜನಪ್ರಿಯರಾಗಿದ್ದರು.


♦.*ಸೆ.5:    ಬೌದ್ಧ ಗುರು ದಲೈಲಾಮ ಅವರಿಗೆ ದಕ್ಷಿಣ ಆಫ್ರಿಕಾ ಸರ್ಕಾರ ವೀಸಾ ನೀಡಲು ನಿರಾಕರಿಸಿತು. ದಲೈಲಾಮ ಅವರನ್ನು ನೊಬೆಲ್‌ ಪ್ರಶಸ್ತಿ ಪ್ರದಾನ ಸಮಿತಿಯು ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಆಹ್ವಾನಿಸಿತ್ತು.


♦.*ಸೆ.5:    ರಾಷ್ಟ್ರೀಯ ಸಣ್ಣ ಕೈಗಾರಿಕ ನಿಗಮದ (ಎನ್‌ಎಸ್‌ಐಸಿ) ವ್ಯವಸ್ಥಾಪಕ ನಿರ್ದೇಶಕರಾಗಿ ರವೀಂದ್ರನಾಥ್‌ ಅಧಿಕಾರ ಸ್ವೀಕರಿಸಿದರು. ಅವರು ಈ ಹಿಂದೆರಾಷ್ಟ್ರೀಯ ಕೈಗಾರಿಕ ಹಣಕಾಸು ನಿಗಮದಲ್ಲಿ ಉನ್ನತ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದರು.


♦.*ಸೆ.5:   ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಅಡ್ವಾನ್ಸ್‌ ಸ್ಟಡಿ (ಐಐಎಎಸ್‌)ಯ ಮುಖ್ಯಸ್ಥರಾಗಿ ಚಂದ್ರಕಲಾ ಪಾಡಿಯ ಅವರು ನೇಮಕಗೊಂಡರು. ಪಾಡಿಯಾ ಅವರು ಈ ಸಂಸ್ಥೆಗೆ ನೇಮಕಗೊಂಡ ಮೊದಲ ಮಹಿಳಾ ಅಧ್ಯಕ್ಷರಾಗಿದ್ದಾರೆ.


♦.*ಸೆ.6:    ಆಸ್ಟ್ರೇಲಿಯಾದ ಪ್ರಧಾನಿ ಟೋನಿ ಅಬ್ಬಾಟ್‌ ಅವರು 11ನೇ ಶತಮಾನದ ಭಾರತೀಯ ವಿಗ್ರಹಗಳನ್ನು ಭಾರತ ಸರ್ಕಾರಕ್ಕೆ ಒಪ್ಪಿಸುವುದಾಗಿ ಪ್ರಕಟಿಸಿದರು. ಈ ವಿಗ್ರಹಗಳನ್ನು ಸುಮಾರು ಹತ್ತು ಶತಮಾನಗಳ ಹಿಂದೆ ಕಳವು ಮಾಡಿ ಅವುಗಳನ್ನು ಆಸ್ಟ್ರೇಲಿಯಾದಲ್ಲಿ ಇಡಲಾಗಿತ್ತು.


♦.*ಸೆ.7:    ಜವಾಹರ ಲಾಲ್‌ ನೆಹರೂ ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾದ ಪ್ರಿಯದರ್ಶಿನಿ ಮುಖರ್ಜಿ ಅವರಿಗೆ ಚೀನಾದ ಪ್ರತಿಷ್ಠಿತ ‘ಚೀನಾ ಬುಕ್‌ ಅವಾರ್ಡ್‌’ ಪ್ರಶಸ್ತಿ ಸಂದಿದೆ.


♦.*ಸೆ.8:    ಭಾರತದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್‌ ಅವರು ಬಹರೇನ್‌ ದೇಶಕ್ಕೆ ತೆರಳಿದರು.ಬಹರೇನ್‌ ದೇಶಕ್ಕೆ ಭೇಟಿ ನೀಡಿದ ಮೊದಲ ಮಹಿಳಾ ವಿದೇಶಾಂಗ ಸಚಿವೆ ಎಂಬ ಹೆಗ್ಗಳಿಕೆಗೆ ಸುಷ್ಮಾ ಸ್ವರಾಜ್‌ ಪಾತ್ರರಾಗಿದ್ದಾರೆ.


♦.*ಸೆ.9:    ಭಾರತದ ವೃತ್ತಿಪರ ಸ್ನೂಕರ್‌ ಆಟಗಾರ ಪಂಕಜ್‌ ಅಡ್ವಾಣಿ ನಿವೃತ್ತಿ ಘೋಷಿಸಿದರು. ಪಂಕಜ್‌ ಸ್ನೂಕರ್‌ ವಿಶ್ವ ಕಿರೀಟ ಸೇರಿದಂತೆ ಹಲವಾರು ಅಂತರರಾಷ್ಟ್ರೀಯ ಟ್ರೋಫಿಗಳನ್ನು ಜಯಿಸಿದ್ದಾರೆ.


♦.*ಸೆ.10:    ಭಾರತದ ಹಿರಿಯ ಐಎಎಸ್‌ ಅಧಿಕಾರಿ ಸುಭಾಶ್‌ ಚಂದ್ರ ಗಾರ್ಗ್‌ ಅವರನ್ನು ವಿಶ್ವಬ್ಯಾಂಕ್‌ನ ಎಕ್ಸಿಕ್ಯೂಟಿವ್‌ ನಿರ್ದೇಶಕರನ್ನಾಗಿ ನೇಮಕ ಮಾಡಲಾಯಿತು.


♦.*ಸೆ.11:    ಸ್ವಾತಂತ್ರ್ಯ ಹೋರಾಟಗಾರ ಮತ್ತು ಹಿರಿಯ ಪತ್ರಕರ್ತ ಜಿತೇಂದ್ರ ಪಾಲ್‌ ನಿಧನರಾದರು. ಅವರು ಸ್ವಾತಂತ್ರ್ಯ ಪೂರ್ವದ ಹಲವು ಪತ್ರಿಕೆಗಳಲ್ಲಿವರದಿಗಾರರಾಗಿ ಕೆಲಸ ಮಾಡಿದ್ದರು.

♦.*ಸೆ.12:    ಬಾಲಿವುಡ್‌ನ ಹಿರಿಯ ನಟ ನಾಸಿರುದ್ದೀನ್‌ ಶಾ ಅವರ ಆತ್ಮಕತೆ ‘ಅಂಡ್‌ ದೆನ್‌ ಒನ್‌ ಡೇ: ಎ ಮೆಮೊರ್‌’(And then One Day: A Memoir) ಪುಸ್ತಕವನ್ನು ಬಿಡುಗಡೆ ಮಾಡಲಾಯಿತು.


♦.*ಸೆ.13:    ಐಎಸ್‌ಐಎಸ್‌ ಉಗ್ರರು ಬ್ರಿಟಿಷ್‌ ಪ್ರಜೆ ಡೇವಿಡ್‌ ಹೇನ್ಸ್‌ ಅವರ ತಲೆ ಕತ್ತರಿಸಿದ ವಿಡಿಯೊ ತುಣುಕನ್ನು ‘ಜಿಹಾದಿ’ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದರು. ಡೇವಿಡ್‌ ಹೇನ್ಸ್‌ ಅವರನ್ನು ಸಿರಿಯಾ ದೇಶದಿಂದ ಅಪಹರಿಸಲಾಗಿತ್ತು.


♦.*ಸೆ.14:    ದೇಶದಲ್ಲಿ ಮೊಟ್ಟ ಮೊದಲ ಬಾರಿಗೆ ದೆಹಲಿ ಪೊಲೀಸರು ‘ಇ–ಪೊಲೀಸ್‌ ಠಾಣೆಯನ್ನು ಆರಂಭಿಸಿದರು. ಈ ಠಾಣೆಯಲ್ಲಿ ವಾಹನ ಕಳೆದುಕೊಂಡವರು ದೂರು ಸಲ್ಲಿಸಬಹುದು.


♦.*ಸೆ.15:    ದೂರದರ್ಶನದಲ್ಲಿ ಸುದ್ದಿ ವಾಚನ ಮಾಡುವ ಮೂಲಕ ದ್ವಿಲಿಂಗಿ ಪದ್ಮಿನಿ ಪ್ರಕಾಶ್‌ ನೂತನ ದಾಖಲೆ ಬರೆದರು.


♦.*ಸೆ.17:    ರಾಷ್ಟ್ರಪತಿ ಪ್ರಣವ್‌ ಮುಖರ್ಜಿ ಎರಡು ದಿನಗಳ ಸೌಹಾರ್ದ ಭೇಟಿಗಾಗಿ ವಿಯೆಟ್ನಾಂ ದೇಶಕ್ಕೆ ಪ್ರಯಾಣ ಬೆಳೆಸಿದರು. ವಿಯೆಟ್ನಾಂ ಸೋಶಿಯಲ್‌ ರಿಪಬ್ಲಿಕ್‌ ದೇಶವಾಗಿವೆ.


♦.*ಸೆ.18:    ಲಲಿತಾ ಕುಮಾರ ಮಗಳಂ ಅವರನ್ನು ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಯಿತು.


♦.*ಸೆ.19:    ಪ್ರಾಚೀನ ನಳಂದ ವಿಶ್ವವಿದ್ಯಾಲಯವನ್ನು 800 ವರ್ಷಗಳ ಬಳಿಕ ಪುನರಾರಂಭಿಸಲಾಯಿತು.


♦.*ಸೆ.23:    ಹಿಂದಿ ಸಾಹಿತಿ ಗೋವಿಂದ್‌ ಮಿಶ್ರಾ 2013ನೇ ಸಾಲಿನ ಸರಸ್ವತಿ ಸಮ್ಮಾನ್‌ ಪ್ರಶಸ್ತಿಯನ್ನು ಸ್ವೀಕರಿಸಿದರು. 2008ರಲ್ಲಿ ಪ್ರಕಟವಾದ ‘ದೂಲ್‌ ಪದೂನ್‌ ಪರ್‌’ ಕಾದಂಬರಿಗೆ ಈ ಪುರಸ್ಕಾರ ಸಂದಿದೆ.


♦.*ಸೆ.24:    ಪ್ರಧಾನಿ ನರೇಂದ್ರ ಮೋದಿ ಅವರು ಕರ್ನಾಟಕದ ತುಮಕೂರು ಸಮೀಪ ದೇಶದ ಮೊದಲ ಫುಡ್‌ಪಾರ್ಕ್‌ ಘಟಕವನ್ನು ಲೋಕಾರ್ಪಣೆ ಮಾಡಿದರು.


♦.*ಸೆ.25:    ಸಚಿನ್‌ ತೆಂಡೂಲ್ಕರ್‌ ಮತ್ತು ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಸ್ಟಿವಾ ಅವರು 201*ನೇ ಸಾಲಿನ ಬ್ರಾಡ್‌ಮನ್‌ ಪುರಸ್ಕಾರಕ್ಕೆ ಆಯ್ಕೆಯಾಗಿದ್ದರು.


♦.*ಸೆ. 29:    ತಮಿಳುನಾಡಿನ ಮುಖ್ಯಮಂತ್ರಿಯಾಗಿ ಒ ಪನ್ನಿರ್‌ ಸೆಲ್ವಂ ಪ್ರಮಾಣವಚನ ಸ್ವೀಕರಿಸಿದರು.


♦.*ಸೆ.30:    ಟರ್ಕಿ ಸರ್ಕಾರ ಶಾಲಾ ಮಕ್ಕಳು ಟ್ಯಾಟು ಹಾಕುವುದರ ಮೇಲೆ ನಿಷೇಧ ಹಾಕಿತು. ಇದನ್ನು ವಿರೋಧಿಸಿ ಸರ್ಕಾರದ ವಿರುದ್ಧ ನಡೆದ ಪ್ರತಿಭಟನೆಯಲ್ಲಿನೂರಕ್ಕೂ ಹೆಚ್ಚು ಮಕ್ಕಳು ಪೊಲೀಸರ ಗುಂಡಿಗೆ ಬಲಿಯಾದರು.

1 comment:

  1. Sir can u give notes of state govt programmes for kas prelims

    ReplyDelete