"ಮನುಷ್ಯ ದೀಪವಾದರೂ ಆಗಬೇಕು, ಕನ್ನಡಿಯಾದರೂ ಆಗಬೇಕು. ಒಂದು ಬೆಳಕನ್ನು ಕೊಡುತ್ತದೆ ಮತ್ತೊಂದು ಅದನ್ನು ಪ್ರತಿಬಿಂಬಿಸುತ್ತದೆ. ಪ್ರತಿಯೊಬ್ಬರೂ ದೀಪ ಆಗದೇ ಹೋಗಬಹುದು ಆದರೆ ಕನ್ನಡಿ ಆಗಬಲ್ಲರು. ತಿಳಿದಿರುವ ಜ್ಞಾನವನ್ನು ಮತ್ತೊಬ್ಬರಿಗೆ ಹಂಚುವುದೇ ಜೀವನ.."—ಅರಿಸ್ಟಾಟಲ್

Saturday 7 February 2015

☀ ಸಾಮಾನ್ಯ ಜ್ಞಾನ (ಭಾಗ - 12) ☀ General Knowledge (Part-12): ☆.. ಪ್ರಚಲಿತ ಘಟನೆಗಳೊಂದಿಗೆ..

☀ ಸಾಮಾನ್ಯ ಜ್ಞಾನ (ಭಾಗ - 12) ☀ General Knowledge (Part-12):
☆.. ಪ್ರಚಲಿತ ಘಟನೆಗಳೊಂದಿಗೆ..
━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━

531) ಕಂಪೆನಿ ಅಕ್ಬರ್ ಎಂದು ಕರೆಯಲ್ಪಟ್ಟವರು ಯಾರು?
— ಲಾರ್ಡ್ ವೆಲ್ಲೆಸ್ಲಿ.


532) 'ವಿಶ್ವ ಅಂಚೆ ಚೀಟಿ ದಿನ' ಯಾವಾಗ ಆಚರಿಸಲಾಗುವುದು?
— ಅಕ್ಟೋಬರ್ 09.


533) IAEA ಎಂದರೆ ಅಂತರರಾಷ್ಟ್ರೀಯ ಅಣುಶಕ್ತಿ ಏಜೆನ್ಸಿ ಎಂದರ್ಥ.


534) ಪ್ರಸ್ತುತ ಬಾಂಗ್ಲಾದೇಶದಲ್ಲಿ ಆಡಳಿತಾರೂಢ ಹಾಗೂ ವಿರೋಧ ಪಕ್ಷಗಳು ಯಾವವು?
—ಆಡಳಿತಾರೂಢ ಪಕ್ಷ 'ಅವಾಮಿ ಲೀಗ್ ಪಕ್ಷ (ಎಎಲ್‌)' AALಮತ್ತು
—ವಿರೋಧ ಪಕ್ಷ 'ಬಾಂಗ್ಲಾದೇಶ್‌ ನ್ಯಾಷನಲಿಸ್ಟ್ ಪಾರ್ಟಿ (ಬಿಎನ್‌ಪಿ)'BNP.


535) ದಂತಕ್ಷಯ ತಡೆಯಲು ಟೂತ್ ಪೇಸ್ಟ್‌ನಲ್ಲಿ ಬಳಸುವ ಪದಾರ್ಥ ಯಾವುದು?
— ಸೋಡಿಯಂ ಫ್ಲೋರೈಡ್


536) "ಪೀಪಲ್ಸ್‌ ಲಿಬರೇಶನ್‌ ಆರ್ಮಿ (ಪಿಎಲ್‌ಎ) PLA" ಯಾವ ದೇಶಕ್ಕೆ ಸಂಬಂಧಿಸಿದ ಯೋಧರು?
— ಚೀನಾ.


537) ಪ್ರಸ್ತುತ ದೇಶದಲ್ಲಿ ಎಷ್ಟು ಅಣುವಿದ್ಯುತ್ ಸ್ಥಾವರಗಳಿವೆ?
-20 (ವಿಶ್ವದಲ್ಲಿ 1400 ಕ್ಕೂ ಹೆಚ್ಚು ಪರಮಾಣು ವಿದ್ಯುತ್ ಸ್ಥಾವರಗಳಿವೆ )


538) ಇತ್ತೀಚೆಗೆ 'ಕೇಂದ್ರ ಚುನಾವಣಾ ಆಯೋಗ'ದ ನೂತನ ಮುಖ್ಯ ಆಯುಕ್ತರಾಗಿ ನೇಮಕಗೊಂಡವರು ಯಾರು?
— ಹರಿಶಂಕರ್‌ ಬ್ರಹ್ಮ


539) ಪ್ರಸ್ತುತ ಭಾರತೀಯ ಸೇನಾ ಮುಖ್ಯಸ್ಥ ಯಾರು?
—ಜನರಲ್‌ ದಲ್ಬೀರ್ ಸಿಂಗ್‌ ಸುಹಾಗ್‌


540) ಬಿಳಿ ಆನೆಯ ನಾಡೆಂದು ಯಾವುದನ್ನು ಕರೆಯುತ್ತಾರೆ?
— ಥೈಲ್ಯಾಂಡ್


541) ಭಾಷಾವಾರು ಪ್ರಾಂತ್ಯಗಳ ಮೇರೆಗೆ ಸ್ಥಾಪನೆಗೊಂಡ ಮೊದಲ ಭಾರತೀಯ ರಾಜ್ಯ ಯಾವುದು?
— ಆಂಧ್ರ ಪ್ರದೇಶ


542) ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೊ) ISRO ಅಧ್ಯಕ್ಷ
—ಕೆ. ರಾಧಾಕೃಷ್ಣನ್


543) ಕರ್ನಾಟಕದ "ಚಿನ್ನದ ನಾಡು-ಭತ್ತದ ಕಣಜ" ಎಂದೇ ಖ್ಯಾತಿಯಾಗಿರುವ ಜಿಲ್ಲೆ ಯಾವುದು?
— ರಾಯಚೂರು ಜಿಲ್ಲೆ


544) ಪ್ರಸ್ತುತ ಕೇಂದ್ರ ಹಣಕಾಸು ಕಾರ್ಯದರ್ಶಿ ಯಾರು?
— ರಾಜೀವ್‌ ಮೆಹ್ರಿಷಿ.


545) ಓಜೋನ್ ಪದರಿಗೆ ಹಾನಿ ಮಾಡುವಂತ ರಾಸಾಯನಿಕ ಯಾವುದು?
— ಕ್ಲೋರೋಫ್ಲೋರೋ ಕಾರ್ಬನ್


546) IRNSS (ಐ.ಆರ್.ಎನ್.ಎಸ್.ಎಸ್) ಎಂದರೆ "ಭಾರತೀಯ ಪ್ರದೇಶ ದಿಕ್ಸೂಚಿ ಉಪಗ್ರಹ ವ್ಯವಸ್ಥೆ " ಎಂದರ್ಥ.


547) ಡೆಂಗ್ಯೂ ಜ್ವರ ಹರಡುವ ಮಾಡುವ ಸೊಳ್ಳೆ ಯಾವುದು?
— ಕ್ಯುಲೆಕ್ಸ್ ಸೊಳ್ಳೆ


548) ನೀತಿ ಆಯೋಗದ ಮೊದಲ ಉಪಾಧ್ಯಕ್ಷರಾಗಿ ಆಯ್ಕೆಯಾಗಿರುವರು ಯಾರು?
—ಅರವಿಂದ್‌ ಪನಗರಿಯಾ (ಮುಕ್ತ ಮಾರುಕಟ್ಟೆ ಆರ್ಥಿಕ ತಜ್ಞ)


549) KPCAL  (ಕೆಪಿಸಿಎಲ್‌) ಎಂದರೆ ಕರ್ನಾಟಕ ವಿದ್ಯುತ್‌ ನಿಗಮ ನಿಯಮಿತ ಎಂದರ್ಥ.


550) ಪ್ರಸ್ತುತ ಕೇಂದ್ರ ಸರ್ಕಾರದ ಮುಖ್ಯ ಆರ್ಥಿಕ ಸಲಹೆಗಾರ ಯಾರು?
—ಅರವಿಂದ್‌ ಸುಬ್ರಹ್ಮಣಿಯನ್‌,


551) ಇತ್ತೀಚೆಗೆ ಇಸ್ರೊದ ನೂತನ ಅಧ್ಯಕ್ಷರಾಗಿ ನೇಮಕಗೊಂಡವರು ಯಾರು?
— ಆಲೂರು ಸೀಳಿನ್‌ ಕಿರಣ್‌ ಕುಮಾರ್‌.


552) ರಾಜಾಸಂಸಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಎಲ್ಲಿದೆ?
— ಅಮೃತ ಸರ


553) ಇತ್ತೀಚೆಗೆ '19ನೇ ರಾಷ್ಟ್ರೀಯ ಯುವ ಉತ್ಸವ' ಯಾವ ಸ್ಥಳದಲ್ಲಿ ಹಮ್ಮಿಕೊಳ್ಳಲಾಗಿತ್ತು?
— ಗುವಾಹಟಿಯಲ್ಲಿ


554) ಸಂವಿಧಾನದ ಯಾವ ತಿದ್ದುಪಡಿಯಲ್ಲಿ ಮತದಾನದ ವಯಸ್ಸು 21 ರಿಂದ 18ಕ್ಕೆ ವರ್ಷಕ್ಕೆ ಇಳಿಸಲಾಯಿತು?
—62 ನೇ ತಿದ್ದುಪಡಿ


555) 2013 ನೇ ಸಾಲಿನ ‘ಬಸವ ಪುರಸ್ಕಾರ’ಕ್ಕೆ ಆಯ್ಕೆಯಾಗಿದ್ದವರು ಯಾರು?
—ಡಾ.ಎಂ.ಎಂ. ಕಲಬುರ್ಗಿ (ಹಂಪಿ ಕನ್ನಡ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ, ಹಿರಿಯ ಸಂಶೋಧಕ )


556) NDFB (ಎನ್‌ಡಿಎಫ್‌ಬಿ) ಎಂದರೆ "ನಿಷೇಧಿತ ನ್ಯಾಷನಲ್‌ ಡೆಮಾಕ್ರಟಿಕ್‌ ಫ್ರಂಟ್‌ ಆಫ್‌ ಬೋಡೊಲ್ಯಾಂಡ್‌ನ ಬಂಡುಕೋರರು" ಎಂದರ್ಥ.


557) ಇತ್ತೀಚೆಗೆ ಉಗ್ರಗಾಮಿಗಳಿಂದ ದಾಳಿಗೊಳಗಾದ ವಿಡಂಬನಾ ಪತ್ರಿಕೆ ‘ಚಾರ್ಲಿ ಹೆಬ್ಡೊ’ ಪ್ರಕಟಗೊಳ್ಳುವುದು ಯಾವ ದೇಶದಿಂದ? ಫ್ರಾನ್ಸ್‌ (ಪ್ಯಾರಿಸ್‌ನ ಕೇಂದ್ರಭಾಗದಲ್ಲಿ)


558) ಇತ್ತೀಚೆಗೆ 'ಬೋಕೊ ಹರಾಮ್'‌ ಉಗ್ರ ಸಂಘಟನೆಯ ತೀವ್ರ ದಾಳಿಗೊಳಗಾಗುತ್ತಿರುವ ದೇಶ ಯಾವುದು?
—  ನೈಜೀರಿಯಾ


559) ಪ್ರಸ್ತುತ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯ (ಕೆಎಸ್‌ಟಿಎ) ಅಧ್ಯಕ್ಷರು ಯಾರು?
— ಪ್ರೊ. ಯು.ಆರ್‌. ರಾವ್‌


560) ಗೋಬರ್ ಗ್ಯಾಸ್‌ನಲ್ಲಿರುವ ಅನಿಲ ಯಾವುದು?
—ಮೀಥೇನ್


561) ಪ್ರಸ್ತುತ ಕೇಂದ್ರ ಹಣಕಾಸು ಸಚಿವ ಯಾರು?
—ಅರುಣ್‌ ಜೇಟ್ಲಿ .


562) ಇತ್ತೀಚೆಗೆ ರಾಜಕೀಯ ಮೊಗಸಾಲೆಯಲ್ಲಿ ತಲ್ಲಣ ಸೃಷ್ಟಿಸಿರುವ 'ಶಾರದಾ ಚಿಟ್‌ ಫಂಡ್‌ ಹಗರಣ' ಸಂಬಂಧಿಸಿದ್ದು ಯಾವ ರಾಜ್ಯಕ್ಕೆ?— ಪಶ್ಚಿಮ ಬಂಗಾಳ


563) ಮೊದಲ ಬಾರಿಗೆ ಭೂಮಿಯ ಮೇಲೆ ಕಾಣಿಸಿಕೊಂಡ ಸಸ್ಯಜಾತಿ ಯಾವುದು?
— ಥ್ಯಾಲೋಪೈಟ್


564) ಪ್ರಸ್ತುತ ಕೇಂದ್ರ ಹಣಕಾಸು ಖಾತೆ ರಾಜ್ಯ ಸಚಿವ ಯಾರು?
— ಜಯಂತ್‌ ಸಿನ್ಹಾ


565) (POK) ಎಂದರೆ "ಪಾಕಿಸ್ತಾನ ಆಕ್ರಮಿತ ಕಾಶ್ಮೀರ " ಎಂದರ್ಥ.


566) ಭಾರತದ ಮೊದಲನೆಯ ಮುಖ್ಯ ಚುನಾವಣಾ ಆಯುಕ್ತರು ಯಾರು?
— ಸುಕುಮಾರ್ ಸೇನ್


567) ಪ್ರಸ್ತುತ ದಕ್ಷಿಣ ಕೊರಿಯಾದ ಅಧ್ಯಕ್ಷೆ ಯಾರಾಗಿದ್ದಾರೆ?
— ಪಾರ್ಕ್‌ ಜ್ಯುನ್‌ ಹೈ


568) ಪ್ರಸ್ತುತ ಉತ್ತರ ಕೊರಿಯಾದ ಮುಖಂಡ ಯಾರಾಗಿದ್ದಾರೆ?
—ಕಿಮ್‌ ಜಾಂಗ್‌ ಉನ್‌


569) ಆರೋಗ್ಯವಂತ ವಯಸ್ಕನ ದೇಹದಲ್ಲಿ ಎಷ್ಟು ಪ್ರಮಾಣದಲ್ಲಿ ರಕ್ತವಿರುತ್ತದೆ?
—5-6 ಲೀಟರ್‌ಗಳು


570) ಬಾಂಗ್ಲಾದೇಶದ ಪ್ರಸ್ತುತ ಅಧ್ಯಕ್ಷರು ಯಾರು?
— ಮೊಹ್ಮದ್‌ ಅಬ್ದುಲ್‌ ಹಮೀದ್‌


571) ಇತ್ತೀಚೆಗೆ ನಿಧನರಾದ 1950–60 ರ ದಶಕದಲ್ಲಿ ಸ್ವಿಟ್ಜರ್‌ಲೆಂಡ್‌ನ ‘ಸೌಂದರ್ಯದ ಗಣಿ’ ಎಂದೇ ಹೆಸರಾಗಿದ್ದ ಖ್ಯಾತ ಅಂತರ್ರಾಷ್ಟ್ರೀಯ ನಟಿ ಯಾರು?
— ಸ್ವಿಟ್ಜರ್‌ಲೆಂಡ್‌ನ ಅನಿಟಾ ಎಕ್‌ಬರ್ಗ್‌(83).


572) ರಾಮನಾಥ ಅಂಕಿತವಿಟ್ಟು ವಚನಗಳನ್ನು ಬರೆದ ವಚನಕಾರ ಯಾರು?
— ದೇವರದಾಸಿಮಯ್ಯ


573) `ಮನುಷ್ಯನಲ್ಲಿ ಕೇವಲ ನಾಲ್ಕು ವರ್ಣಗ್ರಾಹಿ ನರಪುಂಜಗಳಿವೆ; ಆದರೆ ಆಸ್ಟ್ರೇಲಿಯಾದ ಕಡಲಂಚಿನ `ಮ್ಯೋಂಟಿಸ್' ಸೀಗಡಿಗಳಲ್ಲಿ ಹದಿನಾರು ನರಪುಂಜಗಳಿವೆ.


574) ಬೆಂಗಳೂರಿನಲ್ಲಿ ಹೈಕೋರ್ಟ್ ಪ್ರಾರಂಭವಾದ ವರ್ಷ ಯಾವುದು?
—1864 ರಲ್ಲಿ.


575) ಇತ್ತೀಚೆಗೆ ಬಾಂಗ್ಲಾಕ್ಕೆ ಮೊದಲ ಹಿಂದೂ ಮುಖ್ಯ ನ್ಯಾಯಮೂರ್ತಿಯಾಗಿ ನೇಮಕಗೊಂಡವರು ಯಾರು?
—ಸುಪ್ರೀಂಕೋರ್ಟ್‌ನ ಹಿರಿಯ ನ್ಯಾಯಮೂರ್ತಿಯಾಗಿದ್ದ ಎಸ್‌.ಕೆ.ಸಿನ್ಹಾ


576) ಭಾರತದ ಮುಖ್ಯ ಚುನಾವಣಾ ಆಯುಕ್ತರನ್ನು ನೇಮಕ ಮಾಡುವವರು ಯಾರು?
— ರಾಷ್ಟ್ರಪತಿ


577) ಪ್ರಸ್ತುತ ಅಂತರರಾಷ್ಟ್ರೀಯ ಕಾಫಿ ಮಂಡಳಿಯ ಅಧ್ಯಕ್ಷರಾಗಿ ನೇಮಕಗೊಂಡವರು ಯಾರು?
—  ಜಾವೇದ್‌ ಅಖ್ತರ್‌ (ಪ್ರಸ್ತುತ ಭಾರತೀಯ ಕಾಫಿ ಮಂಡಳಿ ಅಧ್ಯಕ್ಷ)


578) IS (ಐ.ಎಸ್‌) ಎಂದರೆ ಇಸ್ಲಾಮಿಕ್ ಸ್ಟೇಟ್‌ ಉಗ್ರರು ಎಂದರ್ಥ.


579) ಭಾರತದ ಮೊಗಲ ಸಾಮ್ರಾಜ್ಯ ಕೊನೆಯ ಚಕ್ರವರ್ತಿ ಯಾರು?
— 2ನೇಯ ಬಹದ್ಧೂರ ಷಾ


580) ಮದ್ಯದ ಬಾಟಲಿ ಮತ್ತು ಟಿನ್‌ಗಳ ಮೇಲೆ ಮಹಾತ್ಮ ಗಾಂಧೀಜಿ ಅವರ ಭಾವಚಿತ್ರ ಮುದ್ರಿಸಿ ವಿವಾದಕ್ಕೆ ಸಿಲುಕಿದ್ದ ಮದ್ಯ ತಯಾರಿಕಾ ಕಂಪೆನಿ ಯಾವುದು?
— ಅಮೆರಿಕದ ಕನೆಕ್ಟಿಕಟ್‌ ಮೂಲದ ನ್ಯೂ ಇಂಗ್ಲೆಂಡ್

To be continued.....

No comments:

Post a Comment