"ಮನುಷ್ಯ ದೀಪವಾದರೂ ಆಗಬೇಕು, ಕನ್ನಡಿಯಾದರೂ ಆಗಬೇಕು. ಒಂದು ಬೆಳಕನ್ನು ಕೊಡುತ್ತದೆ ಮತ್ತೊಂದು ಅದನ್ನು ಪ್ರತಿಬಿಂಬಿಸುತ್ತದೆ. ಪ್ರತಿಯೊಬ್ಬರೂ ದೀಪ ಆಗದೇ ಹೋಗಬಹುದು ಆದರೆ ಕನ್ನಡಿ ಆಗಬಲ್ಲರು. ತಿಳಿದಿರುವ ಜ್ಞಾನವನ್ನು ಮತ್ತೊಬ್ಬರಿಗೆ ಹಂಚುವುದೇ ಜೀವನ.."—ಅರಿಸ್ಟಾಟಲ್

Saturday, 7 February 2015

☀ ಜುಲೈ 2014 ರ ಪ್ರಮುಖ ಪ್ರಚಲಿತ ವಿದ್ಯಮಾನಗಳು ☀ (Important Current Affairs of July 2014) ★ಜುಲೈ 2014 (July 2014) 

☀ ಜುಲೈ 2014 ರ ಪ್ರಮುಖ ಪ್ರಚಲಿತ ವಿದ್ಯಮಾನಗಳು ☀
(Important Current Affairs of July 2014)

★ಜುಲೈ 2014
(July 2014)

━━━━━━━━━━━━━━━━━━━━━━━━━━━━━━━━━━━━━━━━━━━━━


♦*ಜು.1: ಜುಲೈ ಒಂದರಿಂದ ಜಾರಿಗೆ ಬರುವಂತೆ ಅಫ್ಘಾನಿಸ್ತಾನ ಪ್ರಜೆಗಳಿಗೆ ಭಾರತ ಸರ್ಕಾರ ವೀಸಾ ಸರಳೀಕರಣ ಯೋಜನೆಯನ್ನು ಘೋಷಣೆ ಮಾಡಿತು. ಇದರ ಅನ್ವಯ ವೈದ್ಯಕೀಯ, ಶಿಕ್ಷಣ ಮತ್ತು ಸಮಾಜ ಸೇವೆ ನೆಲೆಗಟ್ಟಿನ ಅಡಿಯಲ್ಲಿ ಆಫ್ಘನ್‌ ಪ್ರಜೆಗಳು ಈ ವೀಸಾ ಸೌಲಭ್ಯ ಪಡೆಯಬಹುದು.


♦*ಜು. 1: ಫಿಲಿಡೆಲ್ಪಿಯಾ ದೇಶ ನೀಡುವ ಅತ್ಯುನ್ನತ ನಾಗರಿಕ ಪ್ರಶಸ್ತಿ ‘ಲಿಬರ್ಟಿ ಮೆಡಲ್‌’ ಪಾಕಿಸ್ತಾನದ ಯುವ ಸಾಮಾಜಿಕ ಸೇವಾಕರ್ತೆ ಮಲಾಲ ಯೂಸೂಫ್‌ಝೈಗೆ ಸಂದಿದೆ.
ಈ ಪ್ರಶಸ್ತಿಯನ್ನು ಇಲ್ಲಿನ ಸರ್ಕಾರ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡುವವರಿಗೆ 1998ರಿಂದ ನೀಡುತ್ತ ಬಂದಿದೆ.
 

♦*ಜು. 2: ಬಾಲಿವುಡ್‌ ನಟ ಶಾರೂಕ್‌ ಖಾನ್‌ ಅವರಿಗೆ ಫ್ರಾನ್ಸ್‌ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿ ‘ನೈಟ್‌ ಆಫ್‌ ದಿ ಲಿಜಿಯನ್‌ ಆಫ್‌ ಆನರ್‌’ (Knight of the Legion of Honor) ಪ್ರಶಸ್ತಿ ನೀಡಿ ಗೌರವಿಸಲಾಯಿತು. ಈ ಪ್ರಶಸ್ತಿಯನ್ನು ವಿಶ್ವದಾದ್ಯಂತ ಸಾಂಸ್ಕೃತಿಕ ಕ್ಷೇತ್ರದಲ್ಲಿ ಅಸಮಾನ್ಯ ಸೇವೆ ಸಲ್ಲಿಸಿದವರಿಗೆ ನೀಡಲಾಗುವುದು.


♦*ಜು.2: ರಾಜಸ್ತಾನ ಸರ್ಕಾರ ಒಂಟೆಯನ್ನು ರಾಜ್ಯ ಪ್ರಾಣಿಯನ್ನಾಗಿ ಘೋಷಣೆ ಮಾಡಿತು. ಜೈಪುರದಲ್ಲಿ ನಡೆದ ವಿಶೇಷ ವಿಧಾನಸಭಾ ಅಧಿವೇಶನದಲ್ಲಿ ಈ ನಿರ್ಣಯ ಕೈಗೊಳ್ಳಲಾಯಿತು.


♦*ಜು.3: ಚೀನಾ ಮತ್ತು ಉತ್ತರ ಕೊರಿಯಾ ದೇಶಗಳ ದ್ವಿಪಕ್ಷೀಯ ಸಭೆ ಸಿಯೋಲ್‌ನಲ್ಲಿ ನಡೆಯಿತು. ಈ ಸಭೆಯಲ್ಲಿ ಉಭಯ ದೇಶಗಳು ಯುದ್ಧ ತಂತ್ರ ಕುರಿತಂತೆ ಚರ್ಚೆ ನಡೆಸಿದವು.


♦*ಜು.4: ಗೋವಾದ ರಾಜ್ಯಪಾಲ ಬಿ.ವಿ.ವಾಂಚೂ ಅವರು ರಾಜೀನಾಮೆ ನೀಡಿದರು. ಭೂ ಹಗರಣಕ್ಕೆ ಸಂಬಂಧಿಸಿದಂತೆ ಸಿಬಿಐ ಅಧಿಕಾರಿಗಳ ಎದುರು ವಿಚಾರಣೆಗೆ ಹಾಜರಾಗಬೇಕಿರುವ ಹಿನ್ನೆಲೆಯಲ್ಲಿ ಅವರು ರಾಜೀನಾಮೆ ನೀಡಿದರು.


♦*ಜು.6: ಸಚಿನ್‌ ತೆಂಡೂಲ್ಕರ್‌ ನೇತೃತ್ವದ ಎಂಸಿಸಿ ಇಲೆವನ್‌ ಕ್ರಿಕೆಟ್‌ ತಂಡವು, ವಿಶ್ವ ಇಲೆವನ್‌ ತಂಡವನ್ನು ಮಣಿಸುವ ಮೂಲಕ 200ನೇ ಗೆಲುವನ್ನು ದಾಖಲಿಸಿತು. ಈ ಪಂದ್ಯ ಕ್ರಿಕೆಟ್‌ ಕಾಶಿ ಇಂಗ್ಲೆಂಡ್‌ನ ಲಾರ್ಡ್ಸ್‌ ಮೈದಾನದಲ್ಲಿ ನಡೆಯಿತು.


♦*ಜು.6: ನೊವೊಕ್‌ ಜೊಕೊವಿಕ್‌ ಅವರು 2014ನೇ ಸಾಲಿನ ವಿಂಬಲ್ಡನ್‌ ಪುರುಷರ ಸಿಂಗಲ್‌ ಪ್ರಶಸ್ತಿಯನ್ನು ಗೆದ್ದರು. ಈ ಪ್ರಶಸ್ತಿಯನ್ನು ಅವರು ಎರಡನೇ ಸಲ ಪಡೆದರು. ಈ ಹಿಂದೆ 2011ರಲ್ಲಿ ವಿಂಬಲ್ಡನ್‌ ಪ್ರಶಸ್ತಿ ಗೆದ್ದಿದ್ದರು.


♦*ಜು.7: ಸುಪ್ರೀಂ ಕೋರ್ಟ್‌ ಷರಿಯತ್‌ ಕೋರ್ಟ್‌ಗಳು ಕಾನೂನು ಬಾಹಿರ ಎಂದು ಮಹತ್ವದ ತೀರ್ಪು ಪ್ರಕಟಿಸಿತು.


♦*ಜು.8: ಭಾರತೀಯ ಸಂವಿಧಾನ ತಜ್ಞ ಗ್ರೇನೆವಿಲ್‌ ಅಸ್ಟೀನ್‌ ಅವರು ವಾಷಿಂಗ್ಟನ್‌ನಲ್ಲಿ ನಿಧನರಾದರು. ಅವರು ಭಾರತೀಯ ಸಂವಿಧಾನ ಕುರಿತಂತೆ ಹಲವಾರು ಪುಸ್ತಕಗಳನ್ನು ಬರೆದಿದ್ದಾರೆ.


♦*ಜು.8: ಸುಪ್ರೀಂ ಕೋರ್ಟ್‌ನ ನ್ಯಾಯಾಧೀಶರಾಗಿ ನ್ಯಾ. ಅರುಣ್‌ ಮಿಶ್ರಾ, ನ್ಯಾ.ಆದರ್ಶ್‌ ಕುಮಾರ್‌ ಗೋಯಲ್‌ ಮತ್ತು ಎಫ್‌.ನಾರಿಮನ್‌ ಅವರು ಪ್ರಮಾಣವಚನ ಸ್ವೀಕರಿಸಿದರು.


♦*ಜು.9: ನೈಜೀರಿಯಾ ತಂಡವನ್ನು ಅಂತರರಾಷ್ಟ್ರೀಯ ಫುಟ್‌ಬಾಲ್‌ ಪಂದ್ಯಾವಳಿಗಳಿಂದ ನಿಷೇಧಿಸಲಾಯಿತು. ಪ್ರಸಕ್ತ ವಿಶ್ವಕಪ್‌ ಪಂದ್ಯಾವಳಿಯಲ್ಲಿ ಅನುಚಿತ ವರ್ತನೆ ತೋರಿದಕ್ಕೆ ಫಿಫಾ ಈ ನಿರ್ಣಯ ಕೈಗೊಂಡಿತು.


♦*ಜು.10: ಬಾಲಿವುಡ್‌ ಹಿರಿಯ ನಟಿ ಜೋಹ್ರಾ ಸೆಹಗಲ್‌   ತಮ್ಮ 102ನೇ ವಯಸ್ಸಿಗೆ ನಿಧನರಾದರು. ಅವರನ್ನು ಬಾಲಿವುಡನ್‌ ‘ಗ್ರ್ಯಾಂಡ್‌ ಓಲ್ಡ್‌ ಲೇಡಿ’ ಎಂದು ಕರೆಯಲಾಗುತ್ತದೆ.


♦*ಜು.13: 2014ನೇ ಸಾಲಿನ ಫಿಫಾ ವಿಶ್ವಕಪ್‌ ಪ್ರಶಸ್ತಿಯನ್ನು ಜರ್ಮನಿ ಗೆದ್ದುಕೊಂಡಿತು. ಅರ್ಜೆಂಟಿನಾ ವಿರುದ್ಧ ನಡೆದ ರೋಚಕ ಪಂದ್ಯದಲ್ಲಿ 1–0ಯಿಂದ ಜರ್ಮನಿ ವಿಶ್ವಕಪ್‌ ಗೆದ್ದಿತು. ಜರ್ಮನಿ ಪರವಾಗಿ ಗೊಟ್ಜೆ ಒಂದು ಗೋಲು ಭಾರಿಸಿದರು.


♦*ಜು.13: ವಿಶ್ವ ಹಿಂದೂ ಪರಿಷತ್‌ನ ಹಿರಿಯ ನಾಯಕ ಗಿರಿರಾಜ್‌ ಕಿಶೋರ್‌ ಅವರು ನವದೆಹಲಿಯಲ್ಲಿ ನಿಧನರಾದರು. ಅವರಿಗೆ 94 ವರ್ಷ ವಯಸ್ಸಾಗಿತ್ತು.


♦*ಜು.16: ಇಂಡಿಯನ್‌ ಆಯಿಲ್‌ ಕಾರ್ಪೊರೇಶನ್‌ನ ಅಧ್ಯಕ್ಷರಾಗಿ ಬಿ. ಅಶೋಕ್‌ ಅವರನ್ನು ಕೇಂದ್ರ ಸರ್ಕಾರ ನೇಮಕಮಾಡಿತು.


♦*ಜು.16: ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ ರಾಹುಲ್‌ ದ್ರಾವಿಡ್‌ ಅವರು ವಿಶ್ವದ ಲಾರೆಸ್‌ ಅಕಾಡೆಮಿಯ ಸದಸ್ಯರಾಗಿ ನೇಮಕಗೊಂಡರು.


♦*ಜು.17: ಕೇರಳದಲ್ಲಿ  ಜುಲೈ 17 ರಿಂದ ಆಗಸ್ಟ್‌ 16ರವರೆಗೆ ರಾಮಾಯಣ ಪಾರಾಯಾಣ ಅಭಿಯಾನ ನಡೆಯಿತು. ಹಿಂದೂ ಭಕ್ತರು ದೇವಾಲಯ ಮತ್ತು ಮನೆಗಳಲ್ಲಿ ಒಂದು ತಿಂಗಳ ಕಾಲ ರಾಮಾಯಣ ಪಾರಾಯಣ ಮಾಡಿದರು.


♦*ಜು. 17: 7ನೇ ಬ್ರಿಕ್ಸ್‌ ಸಮ್ಮೇಳನ ರಷ್ಯಾದಲ್ಲಿ ನಡೆಯಲಿದೆ ಎಂದು ಬ್ರಿಕ್ಸ್‌ ಸಂಘಟನೆಯ ಕಾರ್ಯಾಲಯ ಪ್ರಕಟಿಸಿತು.


♦*ಜು.17: ಗುಜರಾತ್‌ನ ರಾಜ್ಯಪಾಲರಾಗಿ ಓಂ ಪ್ರಕಾಶ್‌ ಕೊಹ್ಲಿ ಪ್ರಮಾಣ ವಚನ ಸ್ವೀಕರಿಸಿದರು. ಕಮಲ್‌ ಬೆನ್ನಿವಾಲ್‌ ಅವರಿದ್ದ ಸ್ಥಾನಕ್ಕೆ ಕೊಹ್ಲಿ ಅವರನ್ನು ನೇಮಕ ಮಾಡಲಾಯಿತು. ಬೆನ್ನಿವಾಲ್‌ ಅವರನ್ನು ಮಿಜೊರಾಂ ಮತ್ತು ನಾಗಲ್ಯಾಂಡ್‌ ರಾಜ್ಯಪಾಲರನ್ನಾಗಿ ವರ್ಗಾವಣೆ ಮಾಡಲಾಗಿದೆ.


♦*ಜು.17: ಪ್ರಧಾನಿ ನರೇಂದ್ರ ಮೋದಿ ಅವರು 6ನೇ ಬ್ರಿಕ್ಸ್‌ ಸಮೇಳನದಲ್ಲಿ ಭಾಗವಹಿಸಲು ಬ್ರೆಜಿಲ್‌ ದೇಶಕ್ಕೆ ಪ್ರಯಾಣ ಬೆಳೆಸಿದರು. ಈ ಸಂದರ್ಭದಲ್ಲಿ ಬ್ರಿಕ್ಸ್‌ ದೇಶಗಳ ಜೊತೆ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಸಹಿ ಹಾಕಿದರು.


♦*ಜು.18: 7ನೇ ಇಬ್ಸಾ ಸಮ್ಮೇಳನ 2015ರಲ್ಲಿ ನವದೆಹಲಿಯಲ್ಲಿ ನಡೆಯಲಿದೆ. ಈ ಸಮಾವೇಶದಲ್ಲಿ ಇಂಡಿಯಾ, ಬ್ರೆಜಿಲ್‌, ದಕ್ಷಿಣ ಆಫ್ರಿಕಾ ದೇಶಗಳು ಬಾಗವಹಿಸಲಿವೆ.


♦*ಜು.18: ಮಲೇಶಿಯಾ ನಾಗರಿಕ ವಿಮಾನ ಉಕ್ರೇನ್‌ ವಾಯುನೆಲೆಯಲ್ಲಿ ಅಪಘಾತಕ್ಕೆ ಈಡಾಯಿತು. ಈ ದುರಂತದಲ್ಲಿ 300ಕ್ಕೂ ಹೆಚ್ಚು ಜನರು ಸಾವನ್ನಪ್ಪಿದರು.


♦*ಜು.19: ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್‌ ಅವರು 2013ನೇ ಸಾಲಿನ ಆರೋಗ್ಯ ಪಾಲಿಸಿಯನ್ನು ದೇಶಕ್ಕೆ ಪರಿಚಯಿಸಿದರು.


♦*ಜು.19: ರಾಷ್ಟ್ರಪತಿ ಪ್ರಣವ್‌ ಮುಖರ್ಜಿ ಅವರು ನಿತಾರಿ ಕೊಲೆ ಪ್ರಕರಣದ ಐವರು ಅಪರಾಧಿಗಳಿಗೆ ದಯಾಮರಣ ನೀಡಲು ನಿರಾಕರಿಸಿದರು. ಇವರಲ್ಲಿ ಪ್ರಮುಖ ಅಪರಾಧಿ ಸುರೇಂದರ್‌ ಕೋಲಿ ಅವರು ಸೇರಿದ್ದಾರೆ.

(ಕೃಪೆ: ಪ್ರಜಾವಾಣಿ)

No comments:

Post a Comment