☀" ಏಷ್ಯಾದ ಅತಿದೊಡ್ಡ ಸೋಲಾರ್ ಪಾರ್ಕ್ " ಸೌರಶಕ್ತಿ ಕೇಂದ್ರದ ಕುರಿತು ವಿಶ್ಲೇಷಣೆ
(Asia's largest Solar Park)
━━━━━━━━━━━━━━━━━━━━━━━━━━━━━━━━━━━━━━━━━━━━━
♦.ಪರಿಸರ ಅಧ್ಯಯನ
— ಏಷ್ಯಾದಲ್ಲಿಯೇ ಬೃಹತ್ತಾದ, 600 ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸಬಹುದಾದ ಸೌರಶಕ್ತಿ ಕೇಂದ್ರವನ್ನು ಗುಜರಾತ್‌ನಲ್ಲಿ ಸ್ಥಾಪಿಸಲಾಗಿದೆ. ಆಗಿನ ಮುಖ್ಯಮಂತ್ರಿ ನರೇಂದ್ರ ಮೋದಿ ಈ ಘಟಕವನ್ನುಲೋಕಾರ್ಪಣೆಗೊಳಿಸಿದರು. ಕಛ್ ಪ್ರದೇಶದ ಪಠಣ್ ಜಿಲ್ಲೆಯ ಸುಮಾರು 3 ಸಾವಿರ ಎಕರೆಗಳಷ್ಟು ಬಂಜರು ಭೂಮಿಯಲ್ಲಿ ಸೋಲಾರ್ ಪಾರ್ಕ್ ಹರಡಿಕೊಂಡಿದೆ.
✧.ದೇಶದಲ್ಲಿ ಒಟ್ಟು 900 ಮೆಗಾವ್ಯಾಟ್ ಸೌರವಿದ್ಯುತ್ ಉತ್ಪಾದನೆಯಾಗುತ್ತಿದ್ದು, ಇದರಲ್ಲಿ ಗುಜರಾತ್‌ನ ಈ ಘಟಕವು ಸುಮಾರು ಮೂರನೇ ಎರಡು ಭಾಗದಷ್ಟು ಸೌರವಿದ್ಯುತ್ ಉತ್ಪಾದಿಸಲಿದೆ.
✧.ದಿನೇ ದಿನೇ ಏರುತ್ತಿರುವ ಜಾಗತಿಕ ತಾಪಮಾನ, ಹವಾಗುಣ ಬದಲಾವಣೆ ತಂದೊಡ್ಡುವ ದುಷ್ಪರಿಣಾಮಕ್ಕೆ ಪರಿಸರ ಸ್ನೇಹಿ ಯೋಜನೆಗಳೇ ಪರಿಹಾರ. ಇದಕ್ಕೆ ಸುಸ್ಥಿರ ಮತ್ತು ನವೀಕರಿಸಬಹುದಾದ ಇಂಧನ ಮೂಲವೇ ಮಾರ್ಗದರ್ಶಕವೆಂಬ ತತ್ವದಡಿ, ಗುಜರಾತ್ ಸರಕಾರದ ಈ ಮಾದರಿ ಕ್ರಮದಿಂದಾಗಿ ವಾತಾವರಣಕ್ಕೆ ಬಿಡುಗಡೆಯಾಗುತ್ತಿರುವ ಸುಮಾರು 80 ಲಕ್ಷ ಟನ್‌ಗಳಷ್ಟು ಇಂಗಾಲದ ಡೈ ಆಕ್ಸೆಡ್ ಪ್ರಮಾಣ ಕಡಿತವಾಗಲಿದೆ. ಜತೆಗೆ, ವಾರ್ಷಿಕವಾಗಿ ಸುಮಾರು 9 ಲಕ್ಷ ಟನ್ ನೈಸರ್ಗಿಕ ಅನಿಲ ಉಳಿತಾಯವಾಗಲಿದೆ.
✧.ಹಾಗೆಯೇ, ರಾಜ್ಯದ ಸೌರಶಕ್ತಿ ನೀತಿ ಅಡಿಯಲ್ಲಿ ಈ ವರ್ಷದ ಅಂತ್ಯಕ್ಕೆ ಸುಮಾರು 968.5 ಮೆಗಾವ್ಯಾಟ ಸೌರಶಕ್ತಿ ಉತ್ಪಾದಿಸುವ ಗುರಿಯೊಂದಿಗೆ ಗುಜರಾತ್ ಸರಕಾರ ಕಾರ್ಯೊನ್ಮುಖವಾಗಿದೆ.ಸೌರ ಶಕ್ತಿ ಉತ್ಪಾದಿಸುವ ಉಳಿದ ಯೋಜನೆಗಳನ್ನು ರಾಜ್ಯದ ಆನಂದ್, ಬಾನಾಸ ಕಾಂತ, ಜಾಮ್‌ನಗರ,ಜುನಾಘಡ, ಕಛ್, ಪೋರ್‌ಬಂದರ್, ರಾಜ್‌ಕೋಟ್, ಸೂರತ್ ಹಾಗೂ ಸುರೇಂದ್ರ ನಗರಗಳಲ್ಲಿ ಕೈಗೊಳ್ಳಲಾಗುತ್ತಿದೆ.
✧.`ಸೋಲಾರ್ ಪಾರ್ಕ್ನ ಉದ್ದೇಶ ಸೌರ ವಿದ್ಯುತ್ ಉತ್ಪಾದನೆ ಮಾತ್ರವಲ್ಲ, ಇದಕ್ಕೆ ಪೂರಕ ಚಟುವಟಿಕೆಗಳಿಗೆ ಉತ್ತೇಜನವೂ ಸೇರಿದೆ. ಸೌರ ಘಟಕದ ನಿರ್ವಹಣೆ ಮತ್ತು ಸ್ಥಾಪನೆಗೆ ಅಗತ್ಯ ಬಿಡಿಭಾಗಗಳ ಉತ್ಪಾದನಾ ಘಟಕಗಳನ್ನು ತೆರೆಯುವ ಯೋಜನೆ ಮುಂದಿನ ಹಂತದಲ್ಲಿದೆ. ಇದರಿಂದ ಉದ್ಯೋಗಾವಕಾಶ ಹೆಚ್ಚಲಿದೆ. `ಸೋಲಾರ್ ಪಾರ್ಕ್ ನ ನಿರ್ಮಾಣದ ಹಂತದಲ್ಲಿ 6ರಿಂದ 8 ಸಾವಿರ ಮಂದಿಗೆ ಉದ್ಯೋಗ ದೊರಕಿತ್ತು.
★.ಮೋದಿ ಮಾದರಿ:
ಸೋಲಾರ್ ಪಾರ್ಕ್‌ಗಳ ಸ್ಥಾಪನೆ ಆಗಿನ ಮೋದಿ ಸರಕಾರದ ಒಂದು ವಿಭಿನ್ನ ಹಾಗೂ ಮಾದರಿ ಕ್ರಮವಾಗಿದೆ. ಸೌರಶಕ್ತಿ ಉತ್ಪಾದನೆಗಾಗಿ ಮೂಲಭೂತ ಸೌಕರ್ಯಗಳನ್ನು ಸಮರ್ಪಕವಾಗಿ ನೀಡಲಾಗುತ್ತಿದೆ. ಸೌರಶಕ್ತಿ ಯೋಜನೆಗಳಿಗೆ ಹಣ ಒಟ್ಟುಗೂಡಿಸುವ ಬಂಡವಾಳ ಹಾಗೂ ತಂತ್ರಜ್ಞಾನ ಮೇಳವೂ ಗುಜರಾತ್‌ನ ಗಾಂಧಿನಗರದಲ್ಲಿ ಏ.20 ಮತ್ತು 21ರಂದು ಆಯೋಜನೆಯಾಗಿತ್ತು.

No comments:
Post a Comment