"ಮನುಷ್ಯ ದೀಪವಾದರೂ ಆಗಬೇಕು, ಕನ್ನಡಿಯಾದರೂ ಆಗಬೇಕು. ಒಂದು ಬೆಳಕನ್ನು ಕೊಡುತ್ತದೆ ಮತ್ತೊಂದು ಅದನ್ನು ಪ್ರತಿಬಿಂಬಿಸುತ್ತದೆ. ಪ್ರತಿಯೊಬ್ಬರೂ ದೀಪ ಆಗದೇ ಹೋಗಬಹುದು ಆದರೆ ಕನ್ನಡಿ ಆಗಬಲ್ಲರು. ತಿಳಿದಿರುವ ಜ್ಞಾನವನ್ನು ಮತ್ತೊಬ್ಬರಿಗೆ ಹಂಚುವುದೇ ಜೀವನ.."—ಅರಿಸ್ಟಾಟಲ್

Monday, 9 February 2015

☀ಜೈವಿಕ ಎಥೆನಾಲನ್ನು ಹೇಗೆ ತಯಾರಿಸಲಾಗುತ್ತದೆ?  (How can be prepared Organic Ethenal)

☀ಜೈವಿಕ ಎಥೆನಾಲನ್ನು ಹೇಗೆ ತಯಾರಿಸಲಾಗುತ್ತದೆ?
(How can be prepared Organic Ethenal)


☆.ಜೈವಿಕ ಎಥೆನಾಲನ್ನು ಕಬ್ಬು, ಸಿಹಿಜೋಳ, ಗೋವಿನಜೋಳ ಮುಂತಾದ ಶರ್ಕಾರಾಂಶಗಳಿಂದ ಉತ್ಪಾದಿಸಲಾಗುತ್ತದೆ. ಕೃಷಿ ತ್ಯಾಜ್ಯಗಳಾದ ಕಬ್ಬಿನ ಸಿಪ್ಪೆ, ಹುಲ್ಲು ಮೊದಲಾದವುಗಳಲ್ಲಿರುವ ಸೆಲ್ಯುಲೋಸ್ ಎಂಬ ಸಂಯುಕ್ತ ಶರ್ಕರಾಂಶದಿಂದಲೂ ಎಥೆನಾಲ್ ಅನ್ನು ಉತ್ಪಾದಿಸಬಹುದಾಗಿದೆ. ಜೊತೆಗೆ, ಅನುಪಯುಕ್ತ ಹಣ್ಣುಗಳನ್ನು ಕೂಡ ಉಪಯೋಗಿಸಿ ಎಥೆನಾಲ್ ತಯಾರಿಸುವ ತಂತ್ರಜ್ಞಾನವನ್ನು ಅಭಿವೃದ್ಧಿ ಪಡಿಸಲಾಗಿದೆ.

☆.ಮೊದಲಿಗೆ ಸಂಯುಕ್ತಗಳನ್ನು ಸರಳ ಸಕ್ಕರೆಯನ್ನಾಗಿ ಪರಿವರ್ತಿಸಲಾಗುತ್ತದೆ. ನಂತರಇದನ್ನು ಸೂಕ್ಷ್ಮಜೀವಿಗಳನ್ನು ಬಳಸಿ ಹುದುಗಿಸಲಾಗುತ್ತದೆ. ಹೀಗೆ ಬರುವ ಎಥನಾಲ್ ಅನ್ನು ಭಟ್ಟಿಇಳಿಸುವಿಕೆಯ ಮುಖಾಂತರ ಜೈವಿಕ ಎಥೆನಾಲ್ ಅನ್ನು ಪಡೆಯಬಹುದು.

☆.ಜೈವಿಕ ಎಥೆನಾಲನ್ನು ಸಾಮಾನ್ಯವಾಗಿ ಇ 100 ಅಂದರೆ ಶೇ.100 ರಷ್ಟು ಎಥೆನಾಲ್, ಇ 85 ಅಂದರೆ ಶೇ.85 ರಷ್ಟು ಎಥೆನಾಲನ್ನು ಶೇ.15 ರ ಗ್ಯಾಸೋಲಿನ್ ಮಿಶ್ರಣದೊಂದಿಗೆ ಉಪಯೋಗಿಸುವುದು. ಶೇ.10 ರಷ್ಟು ಎಥೆನಾಲನ್ನು ಶೇ.90 ರಷ್ಟು ಗ್ಯಾಸೋಲಿನ್ ಮಿಶ್ರಣದೊಂದಿಗೆ ಗ್ಯಾಸೋಹಾಲ್ ಎಂಬ ಹೆಸರಿನಿಂದ ವಿವಿಧೆಡೆ ಉಪಯೋಗದಲ್ಲಿದೆ.

No comments:

Post a Comment