"ಮನುಷ್ಯ ದೀಪವಾದರೂ ಆಗಬೇಕು, ಕನ್ನಡಿಯಾದರೂ ಆಗಬೇಕು. ಒಂದು ಬೆಳಕನ್ನು ಕೊಡುತ್ತದೆ ಮತ್ತೊಂದು ಅದನ್ನು ಪ್ರತಿಬಿಂಬಿಸುತ್ತದೆ. ಪ್ರತಿಯೊಬ್ಬರೂ ದೀಪ ಆಗದೇ ಹೋಗಬಹುದು ಆದರೆ ಕನ್ನಡಿ ಆಗಬಲ್ಲರು. ತಿಳಿದಿರುವ ಜ್ಞಾನವನ್ನು ಮತ್ತೊಬ್ಬರಿಗೆ ಹಂಚುವುದೇ ಜೀವನ.."—ಅರಿಸ್ಟಾಟಲ್
Showing posts with label ಕರ್ನಾಟಕದ ಭೂಗೋಳ. Show all posts
Showing posts with label ಕರ್ನಾಟಕದ ಭೂಗೋಳ. Show all posts

Saturday, 12 September 2015

☀5.ಕರ್ನಾಟಕ ರಾಜ್ಯದ ಭೂ ಸ್ಥಳ (ಮೇಲ್ಮೈ) ಲಕ್ಷಣಗಳು:  Unit 2.ಕರ್ನಾಟಕ ರಾಜ್ಯದ ಭೂ ಭೌತ ಲಕ್ಷಣಗಳು:.. ಮುಂದುವರೆದ ಭಾಗ... (Karnataka land (surface) features)

☀5.ಕರ್ನಾಟಕ ರಾಜ್ಯದ ಭೂ ಸ್ಥಳ (ಮೇಲ್ಮೈ) ಲಕ್ಷಣಗಳು:
Unit 2.ಕರ್ನಾಟಕ ರಾಜ್ಯದ ಭೂ ಭೌತ ಲಕ್ಷಣಗಳು:.. ಮುಂದುವರೆದ ಭಾಗ...
(Karnataka land (surface) features)
━━━━━━━━━━━━━━━━━━━━━━━━━━━━━━━━━━━━━━━━━━━━━

♦.(ಕರ್ನಾಟಕ ಪ್ರಾಕೃತಿಕ ಭೂಗೋಳ)
(Karnataka physical Geography)


●.5. ಭೂ ಸ್ಥಳ (ಮೇಲ್ಮೈ) ಲಕ್ಷಣ:
•┈┈┈┈┈┈┈┈┈┈┈┈┈┈┈┈┈┈┈•
— ಸ್ಥಳ ಲಕ್ಷಣಗಳ ಎಲ್ಲ ವ್ಯತ್ಯಯಗಳ ನಮೂನೆಗಳನ್ನು ಕರ್ನಾಟಕ ಪ್ರತಿನಿಧಿಸುತ್ತದೆ. ಉನ್ನತ ಪರ್ವತಗಳು, ಪ್ರಸ್ಥಭೂಮಿ, ಶೇಷ ಗುಡ್ಡಗಳು ಹಾಗೂ ಕರಾವಳಿ ಬಯಲು. ರಾಜ್ಯವು ಪಶ್ಚಿಮ, ಪೂರ್ವ ಮತ್ತು ದಕ್ಷಿಣದಲ್ಲಿ ಪರ್ವತಮಾಲೆಯಿಂದ ಆವೃತವಾಗಿದೆ. ಆದರೆ ರಾಜ್ಯದ ಪ್ರಧಾನ ಲಕ್ಷಣವೆಂದರೆ ಪ್ರಸ್ಥಭೂಮಿ.

●.ಸರಾಸರಿ ಸಮುದ್ರ ಮಟ್ಟದಿಂದ ಪ್ರಸ್ಥಭೂಮಿಯು 600 ರಿಂದ 900 ಮೀಟರ್ ಎತ್ತರದಲ್ಲಿದೆ. ಇಡೀ ಭೂ ದೃಶ್ಯ ಅಂಕುಡೊಂಕಾಗಿದ್ದು, ಪರ್ವತಗಳಿಂದ, ಆಳ ಕಮರಿಗಳಿಂದ ಛೇದಿತವಾಗಿದೆ. ಅರಬ್ಬೀ ಸಮುದ್ರಕ್ಕೆ ಎದುರಾಗಿರುವ ಕಿರಿದಾದ ಕರಾವಳಿ ಪಟ್ಟಿಯಲ್ಲಿ ಮಾತ್ರ ಸರಾಸರಿ ಸಮುದ್ರ ಮಟ್ಟಕ್ಕಿಂತ ಮೇಲೆ 300 ಮೀಟರಿಗಿಂತ ಕಡಿಮೆ ಎತ್ತರದ ಮೈದಾನವನ್ನು ಕಾಣಬಹುದು. 1,500 ಮೀಟರಿಗಿಂತ ಹೆಚ್ಚು ಎತ್ತರದ ಕೆಲವೇ ಶೃಂಗಗಳು ಪಶ್ಚಿಮ ಮತ್ತು ಪೂರ್ವ ಘಟ್ಟದ ಸಮೂಹದಲ್ಲಿವೆ.

●.ಪಶ್ಚಿಮಘಟ್ಟವನ್ನು ಪಶ್ಚಿಮ ಪೂರ್ವ ದಿಕ್ಕುಗಳಲ್ಲಿ ಅಡ್ಡ ಕೊಯ್ದಂತೆ ಚಿತ್ರ ಪಡೆಯುವುದಾದರೆ ನಾವು ಸಾಮಾನ್ಯವಾಗಿ ಮೊದಲು ಕಿರಿದಾದ ಕರಾವಳಿ ಬಯಲು, ಮುಂದೆ ಪೂರ್ವಕ್ಕೆ ಹಾಯ್ದಂತೆ ಚಿಕ್ಕ ಚಿಕ್ಕ ಪ್ರಸ್ಥಭೂಮಿಗಳನ್ನು ವಿವಿಧ ಔನ್ನತ್ಯದಲ್ಲಿ ಕಾಣುತ್ತೇವೆ. ಮುಂದುವರಿದಂತೆ ದಿಢೀರೆಂದು ಬಹು ಎತ್ತರದ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಇದರ ನಂತರ ಪೂರ್ವಕ್ಕೆ ಇಳಿಜಾರು ಎದುರಾಗುತ್ತದೆ. ಹಾಗೆಯೇ ಪೂರ್ವ, ಉತ್ತರ ಮತ್ತು ಪಶ್ಚಿಮಕ್ಕೆ ಇಳಿಜಾರು ತೋರುವ ಪ್ರಸ್ಥಭೂಮಿ ಎದುರಾಗುತ್ತದೆ.

●.ಕರ್ನಾಟಕದ ಉನ್ನತ ಗಿರಿಶೃಂಗಗಳ ಪೈಕಿ ಮುಖ್ಯವಾದವುಗಳೆಂದರೆ ,
ಮುಳ್ಳಯ್ಯನಗಿರಿ (1,925 ಮೀಟರ್), ಬಾಬಾಬುಡನ್‍ಗಿರಿ (ಚಂದ್ರದ್ರೋಣ ಪರ್ವತ-1,894 ಮೀಟರ್), ಮತ್ತು ಕುದುರೆಮುಖ (1,895 ಮೀಟರ್). ಇವೆಲ್ಲವೂ ಚಿಕ್ಕಮಗಳೂರು ಜಿಲ್ಲೆಯಲ್ಲೇ ಇವೆ. ಪುಷ್ಪಗಿರಿ (1,908 ಮೀಟರ್) ಕೊಡಗು ಜಿಲ್ಲೆಯಲ್ಲಿದೆ.

(ಕೃಪೆ: ಕರ್ನಾಟಕ ಕೈಪಿಡಿ)

Sunday, 15 February 2015

☀.' ಕರ್ನಾಟಕದ ನದಿ ವ್ಯವಸ್ಥೆ',—ಭಾಗ: Ⅵ  'ಕರ್ನಾಟಕದಲ್ಲಿ ಹರಿಯುವ ಪ್ರಮುಖ ನದಿಗಳು' ('The River System of the Karnataka, The Major Rivers Flowing In Karnataka')

☀.' ಕರ್ನಾಟಕದ ನದಿ ವ್ಯವಸ್ಥೆ',—ಭಾಗ: Ⅵ

 'ಕರ್ನಾಟಕದಲ್ಲಿ ಹರಿಯುವ ಪ್ರಮುಖ ನದಿಗಳು'
('The River System of the Karnataka, The Major Rivers Flowing In Karnataka')


♦. ಕರ್ನಾಟಕದ ಭೂಗೋಳ

━━━━━━━━━━━━━━━━━━━━━━━━━━━━━━━━━━━━━━━━━━━━━

...ಮುಂದುವರೆದ ಭಾಗ Ⅵ.


Ⅶ.ಕಾವೇರಿ ನದಿ ಏರ್ಪಾಟು:

✧.ಕಾವೇರಿ ನದಿಯು ದಕ್ಷಿಣ ಭಾರತದ ಅಂತರಾಜ್ಯಗಳ ನದಿಯಾಗಿದೆ. ಮುನ್ನೀರು ಭಾರತದ ಪೂರ್ವದ ಕಡೆಗೆ ಹರಿಯುವ ಈ ನದಿಯು ಬಂಗಾಳ ಕೊಲ್ಲಿ (ಕಡಲನ್ನು) ಸೇರುತ್ತದೆ.

✧.ಕೊಡಗಿನ ಕಾವೇರಿ ಎಂದೇ ಹೆಸರಾಗಿರುವ ಈ ನದಿಯು ಕೊಡಗಿನ ಬ್ರಹ್ಮಗಿರಿ ಬೆಟ್ಟದ ತಲಕಾವೇರಿಯಲ್ಲಿ ಸುಮಾರು 1341 ಮೀ. ಕಡಲ ಮಟ್ಟದಲ್ಲಿ ಹುಟ್ಟುತ್ತದೆ.

✧.ಕಾವೇರಿ ನದಿಯ ಒಟ್ಟು ಆಯಕಟ್ಟು 81,155 ಚದರ ಕಿ. ಮೀ.

✧.ಕಾವೇರಿ ನದಿ ಏರ್ಪಾಟಿನ ಇತರ ರಾಜ್ಯಗಳಲ್ಲಿ ಹರಡಿರುವ ಜಲಾನಯನ ಪ್ರದೇಶ ಮತ್ತು ಅದರ ಕಾಲುವೆ ವ್ಯವಸ್ತೆಯನ್ನು ಕೆಳಗಿನ ಪಟ್ಟಿಯಲ್ಲಿ ಕಾಣಬಹುದು.


★.ಜಲಾನಯನ (basin)ಇರುವ ರಾಜ್ಯ & ಆಯಕಟ್ಟು (catchment area ):

1ಕರ್ನಾಟಕ —  34,273 ಚದರ ಕಿ. ಮೀ

2ಕೇರಳ —   2,866 ಚದರ ಕಿ. ಮೀ

3ತಮಿಳು ನಾಡು—   43,868 ಚದರ ಕಿ. ಮೀ

4ಪಾಂಡಿಚರಿಯ ಕಾರೈಕಲ್ —   148 ಚದರ ಕಿ. ಮೀ

✧.ಒಟ್ಟು 81,155 ಚದರ ಕಿ. ಮೀ


✧.ಹಾರಂಗಿ, ಲಕ್ಶ್ಮಣ ತೀರ್ಥ, ಕಬಿನಿ, ಶಿಮ್ಶ, ಅರ್ಕಾವತಿ ಮತ್ತು ಸುವರ್ಣವತಿ ಇವೆಲ್ಲ ಕಾವೇರಿ ನದಿಯ ಬಹು ಮುಖ್ಯವಾದ ಉಪನದಿಗಳು.

✧.ಇವುಗಳಲ್ಲಿ ಕಬನಿ, ಅರ್ಕಾವತಿ ಮತ್ತು ಸುವರ್ಣವತಿ ನದಿಗಳು ಹೊರತಾಗಿ ಮಿಕ್ಕೆಲ್ಲ ನದಿಗಳು ನಮ್ಮ ಕರ್ನಾಟಕದಲ್ಲೆ ಹುಟ್ಟಿ, ಕರ್ನಾಟಕದಲ್ಲೆ ಹರಿಯುತ್ತವೆ.

—ಈ ನದಿಗಳ ಅಡಕವನ್ನು ಕೆಳಗಿನ ಪಟ್ಟಿಯಲ್ಲಿ ಕಾಣಬಹುದು.


✧.ಕಾವೇರಿ ನದಿಯ ಉಪನದಿಗಳು (tributary)

1ಹಾರಂಗಿ

●.ಆಯಕಟ್ಟು (catchment area):— 717 ಚದರ ಕಿ.ಮೀ.

●.ನದಿಯ ಮೂಲ:—ಪಶ್ಚಿಮ ಘಟ್ಟದ ಪುಶ್ಪಗಿರಿ ಬೆಟ್ಟ

●.ಮೂಲದ ಎತ್ತರ:—1067 ಮೀ,

●.ನದಿಯ ಉದ್ದ:—50 ಕಿ. ಮೀ.

●.ರಾಜ್ಯ :— ಕರ್ನಾಟಕ


2.ಹೇಮಾವತಿ

●.ಆಯಕಟ್ಟು (catchment area):— 5410 ಚದರ ಕಿ.ಮೀ.

●.ನದಿಯ ಮೂಲ:—ಪಶ್ಚಿಮ ಘಟ್ಟದ ಬಳ್ಳರಾಯನ ದುರ್ಗ,

●.ಮೂಲದ ಎತ್ತರ:—1219 ಮೀ,

●.ನದಿಯ ಉದ್ದ:— 245 ಕಿ. ಮೀ

●.ರಾಜ್ಯ :— ಕರ್ನಾಟಕ


3.ಕಬಿನಿ

●.ಆಯಕಟ್ಟು (catchment area):— 7040 ಚದರ ಕಿ.ಮೀ.

●.ನದಿಯ ಮೂಲ:—ಕೇರಳದ ಪಶ್ಚಿಮ ಘಟ್ಟ್ಟ,

●.ಮೂಲದ ಎತ್ತರ:—2,140 ಮೀ,

●.ನದಿಯ ಉದ್ದ:— 230 ಕಿ. ಮೀ.

●.ಒಳ –ಉಪನದಿಗಳು (sub-tributary):— ತರಕ, ಹೆಬ್ಬಳ್ಳ , ನುಗು, ಗುಂಡಲ್

●.ರಾಜ್ಯಗಳು :— ಕರ್ನಾಟಕ, ಕೇರಳ ಮತ್ತು ತಮಿಳು ನಾಡು


4.ಸುವರ್ಣವತಿ

●.ಆಯಕಟ್ಟು (catchment area):— 1787 ಚದರ ಕಿ.ಮೀ.

●.ನದಿಯ ಮೂಲ:—ನಸ್ರೂರ್ ಘಟ್ಟ್ಟದ ಸಾಲು,

●.ನದಿಯ ಉದ್ದ:— 88 ಕಿ. ಮೀ.

●.ರಾಜ್ಯಗಳು :— ಕರ್ನಾಟಕ ಮತ್ತು ತಮಿಳು ನಾಡು


5.ಲಕ್ಶ್ಮಣ ತೀರ್ಥ

●.ಆಯಕಟ್ಟು (catchment area):— 1690 ಚದರ ಕಿ.ಮೀ.

●.ನದಿಯ ಮೂಲ:— ಪಶ್ಚಿಮ ಘಟ್ಟ್ಟ,

●.ಮೂಲದ ಎತ್ತರ:—1,950 ಮೀ,

●.ನದಿಯ ಉದ್ದ:— 131 ಕಿ. ಮೀ.

●.ಒಳ –ಉಪನದಿಗಳು (sub-tributary):— ರಾಮತೀರ್ಥ,

●.ರಾಜ್ಯಗಳು :— ಕರ್ನಾಟಕ.


6.ಶಿಂಷಾ

●.ಆಯಕಟ್ಟು (catchment area):— 8469 ಚದರ ಕಿ.ಮೀ.

●.ನದಿಯ ಮೂಲ:— ತುಮುಕೂರು ಜಿಲ್ಲೆ,

●.ಮೂಲದ ಎತ್ತರ:—914 ಮೀ,

●.ನದಿಯ ಉದ್ದ:— 221 ಕಿ. ಮೀ.

●.ಒಳ –ಉಪನದಿಗಳು (sub-tributary):— ವೀರ ವೈಶ್ನವಿ, ಕಣಿಹಳ್ಳ, ಚಿಕ್ಕೊಳೆ, ಹೆಬ್ಬಹಳ್ಳ, ಮುಲ್ಲಹಳ್ಳ ಮತ್ತು ಕಣ್ವ

●.ರಾಜ್ಯಗಳು :— ಕರ್ನಾಟಕ.


7.ಅರ್ಕಾವತಿ

●.ಆಯಕಟ್ಟು (catchment area):— 4351ಚದರ ಕಿ.ಮೀ.

●.ನದಿಯ ಮೂಲ:— ನಂದಿದುರ್ಗ,

●.ಮೂಲದ ಎತ್ತರ:—1,480 ಮೀ,

●.ನದಿಯ ಉದ್ದ:— 161 ಕಿ. ಮೀ

●.ಒಳ –ಉಪನದಿಗಳು (sub-tributary):— ಕುಮುದಾವತಿ , ಮಣಿಹಳ್ಳ,ಕುಟ್ಟೆಹೊಳೆ, ವೃಷಭಾವತಿ

●.ರಾಜ್ಯಗಳು :— ಕರ್ನಾಟಕ ಮತ್ತು ತಮಿಳು ನಾಡು.


☀.' ಕರ್ನಾಟಕದ ನದಿ ವ್ಯವಸ್ಥೆ',—ಭಾಗ: Ⅲ  'ಕರ್ನಾಟಕದಲ್ಲಿ ಹರಿಯುವ ಪ್ರಮುಖ ನದಿಗಳು' ('The River System of the Karnataka, The Major Rivers Flowing In Karnataka')

☀.' ಕರ್ನಾಟಕದ ನದಿ ವ್ಯವಸ್ಥೆ',—ಭಾಗ: Ⅲ

 'ಕರ್ನಾಟಕದಲ್ಲಿ ಹರಿಯುವ ಪ್ರಮುಖ ನದಿಗಳು'
('The River System of the Karnataka, The Major Rivers Flowing In Karnataka')

♦. ಕರ್ನಾಟಕದ ಭೂಗೋಳ

━━━━━━━━━━━━━━━━━━━━━━━━━━━━━━━━━━━━━━━━━━━━━

...ಮುಂದುವರೆದ ಭಾಗ Ⅲ.



Ⅵ.ಕೃಷ್ಣಾ ನದಿ ಏರ್ಪಾಟು :

✧.ಮಹಾರಾಷ್ಟ್ರದ ಮಹಾಬಲೇಶ್ವರದಲ್ಲಿ 1337 ಮೀ. ಎತ್ತರದ ಪಶ್ಚಿಮ ಘಟ್ಟದಲ್ಲಿ ಹುಟ್ಟುವ ಈ ನದಿಯ ಪ್ರಸ್ಥಭೂಮಿಯು (peninsula) ಭಾರತದ ಎರಡನೆ ದೊಡ್ಡ ನದಿಯಾಗಿದೆ.

✧.ಪಶ್ಚಿಮದಿಂದ ದಕ್ಷಿಣಕ್ಕೆ ಹರಿಯುವ ಕೃಷ್ಣಾ ನದಿಯು 1400 ಕಿ. ಮೀ ಉದ್ದ (length) ಮಹಾರಾಷ್ಟ್ರ, ಕರ್ನಾಟಕ, ಆಂದ್ರಪ್ರದೇಶವನ್ನು ಹಾದು ಹೊಗುತ್ತದೆ.

✧.ಬೇರೆ ರಾಜ್ಯಗಳು ಕೂಡಿ ಈ ನದಿಯ ಒಟ್ಟು ಆಯಕಟ್ಟು ( catchment area) 2,58,948 ಚದರ ಕಿ. ಮೀ.


★.ಜಲಾನಯನ (basin)ಇರುವ ರಾಜ್ಯ & ಆಯಕಟ್ಟು (catchment area )

1ಮಹಾರಾಷ್ಟ್ರ—  69,425 ಚದರ ಕಿ. ಮೀ

2ಕರ್ನಾಟಕ—  113,271 ಚದರ ಕಿ. ಮೀ

3ಆಂದ್ರಪ್ರದೇಶ—  76,252 ಚದರ ಕಿ. ಮೀ

ಒಟ್ಟು—  2,58,948 ಚದರ ಕಿ. ಮೀ


✧.ಕರ್ನಾಟಕದಲ್ಲಿ ಕೃಷ್ಣಾ ನದಿಯ ಬಹು ಮುಖ್ಯ ಸೀಳುನದಿಗಳೆಂದರೆ ಘಟಪ್ರಭಾ, ಮಲಪ್ರಭಾ, ಭೀಮಾ ಮತ್ತು ತುಂಗಭದ್ರಾ.
ಇವುಗಳಲ್ಲಿ ಮಲಪ್ರಭಾ ನದಿಯು ಮಾತ್ರ ಮಹಾರಾಷ್ಟ್ರ ಮತ್ತು ಕರ್ನಾಟಕ ಎರಡು ರಾಜ್ಯಗಳಲ್ಲೂ ತನ್ನ ಆಯಕಟ್ಟನ್ನು ಹೊಂದಿದೆ.


✧.ಉಪನದಿಗಳು ಅಥವಾ ಸೀಳುನದಿಗಳ ಒಂದು ಇಣುಕುನೋಟ ಕೆಳಗಿನ ಪಟ್ಟಿಯಲ್ಲಿದೆ.


1.ಘಟಪ್ರಭಾ

●.ಆಯಕಟ್ಟು (catchment area):— 8829 ಚದರ ಕಿ.ಮೀ.

●.ನದಿಯ ಮೂಲ;—ಪಶ್ಚಿಮ ಘಟ್ಟ,

●.ಮೂಲದ ಎತ್ತರ:—884 ಮೀ,

●.ನದಿಯ ಉದ್ದ:—283 ಕಿ.ಮೀ

●.ಒಳ –ಉಪನದಿಗಳು (sub-tributary):— ಹಿರಣ್ಯಕೇಶಿ, ಮಾರ‍ಖಂಡೇಯ

●.ರಾಜ್ಯ:—ಮಹಾರಾಷ್ಟ್ರ, ಕರ್ನಾಟಕ


2.ಮಲಪ್ರಭಾ

●.ಆಯಕಟ್ಟು (catchment area):— 11549 ಚದರ ಕಿ.ಮೀ.

●.ನದಿಯ ಮೂಲ:—ಪಶ್ಚಿಮ ಘಟ್ಟ,

●.ಮೂಲದ ಎತ್ತರ:—792.48 ಮೀ,

●.ನದಿಯ ಉದ್ದ:—306 ಕಿ.ಮೀ

●.ಒಳ –ಉಪನದಿಗಳು (sub-tributary):— ಬೆಣ್ಣಿಹಳ್ಳ, ಹಿರೇಹಳ್ಳ, ಟಸ್ ನದಿ

●.ರಾಜ್ಯ:—ಕರ್ನಾಟಕ.


3.ಭೀಮಾ

●.ಆಯಕಟ್ಟು (catchment area):— 70,614 ಚದರ ಕಿ.ಮೀ.

●.ನದಿಯ ಮೂಲ:—ಪಶ್ಚಿಮ ಘಟ್ಟ,

●.ಮೂಲದ ಎತ್ತರ:—945 ಮೀ,

●.ನದಿಯ ಉದ್ದ:—861 ಕಿ.ಮೀ.

●.ಒಳ –ಉಪನದಿಗಳು (sub-tributary):— ಮುತ ಗೊಡ್, ನಿರ, ಸಿನ ನದಿಗಳ ಕೂಡುಹೊಳೆ ನೀರು

●.ರಾಜ್ಯಗಳು :—ಮಹಾರಾಷ್ಟ್ರ ಕರ್ನಾಟಕ


4.ತುಂಗಭದ್ರಾ

●.ಆಯಕಟ್ಟು (catchment area):— 47,866 ಚ.ಕಿ.ಮಿ

●.ನದಿಯ ಮೂಲ:—ಗಂಗ ಮೂಲದ ತುಂಗ & ಭದ್ರ, ವರದಾ, ಹಗರಿ (ವೇದಾವತಿ) ನದಿಗಳ ಕೂಡುಹೊಳೆ ನೀರು.

●.ಮೂಲ:—ಪಶ್ಚಿಮ ಘಟ್ಟ,

●.ಮೂಲದ ಎತ್ತರ:—1198 ಮೀ,

●.ನದಿಯ ಉದ್ದ:—531 ಕಿ.ಮೀ

●.ರಾಜ್ಯಗಳು :— ಕರ್ನಾಟಕ & ಆಂದ್ರಪ್ರದೇಶ.


...ಮುಂದುವರೆಯುವುದು

Saturday, 14 February 2015

☀.' ಕರ್ನಾಟಕದ ನದಿ ವ್ಯವಸ್ಥೆ',—ಭಾಗ: Ⅱ  'ಕರ್ನಾಟಕದಲ್ಲಿ ಹರಿಯುವ ಪ್ರಮುಖ ನದಿಗಳು' ('The River System of the Karnataka, The Major Rivers Flowing In Karnataka')

☀.' ಕರ್ನಾಟಕದ ನದಿ ವ್ಯವಸ್ಥೆ',—ಭಾಗ: Ⅱ
 'ಕರ್ನಾಟಕದಲ್ಲಿ ಹರಿಯುವ ಪ್ರಮುಖ ನದಿಗಳು'
('The River System of the Karnataka, The Major Rivers Flowing In Karnataka')

♦. ಕರ್ನಾಟಕದ ಭೂಗೋಳ

━━━━━━━━━━━━━━━━━━━━━━━━━━━━━━━━━━━━━━━━━━━━━

...ಮುಂದುವರೆದ ಭಾಗ Ⅱ.


✧.ಹಿಂದಿನ ಭಾಗದಲ್ಲಿ ತಿಳಿಸಿರುವ ಜಲಾನಯನಗಳ (basin) ಜೊತೆ ಇನ್ನೊಂದಷ್ಟು ಸಣ್ಣ ಸಣ್ಣ ಆಯಕಟ್ಟು ಹೊಂದಿರುವ ನದಿಗಳು ಕಡಲಿಗೆ ಹತ್ತಿರವಿದ್ದು, ಕಡಿಮೆ ಎತ್ತರದಿಂದ ಹರಿದು ನೇರವಾಗಿ ಅರಬ್ಬಿ ಕಡಲನ್ನು ಸೇರುತ್ತವೆ.

✧.ಪಶ್ಚಿಮಕ್ಕೆ ಹರಿವ ನದಿಗಳ ಏರ್ಪಾಟಿನಲ್ಲಿ ತನ್ನದೇ ಆದ ಆಯಕಟ್ಟನ್ನು(independent catchment) ಹೊಂದಿರುವ ಇನ್ನಷ್ಟು ನದಿಗಳು ಕೆಳಗಿನಂತಿವೆ.


Ⅲ.ಶರಾವತಿ ಮತ್ತು ಚಕ್ರ ನದಿಗಳ ನಡುವಿನ ಆಯಕಟ್ಟು:

✧.ಅರಬ್ಬಿ ಸಮುದ್ರಕ್ಕೆ ಸೇರುವ ಸಣ್ಣ-ಸಣ್ಣ ನದಿಗಳು ಬಹಳ ಇವೆ. ಅವುಗಳಲ್ಲಿ ಕೆಲವು ಕೊಲ್ಲೂರು ನದಿ, ಗಂಟಿಹೊಳೆ, ವೆಂಕಟಪುರ, ಬೈಂದೂರು ಹೊಳೆ, ಶಂಕರಗುಂಡಿ, ಕುಂಬಾರಹೊಳೆ, ಯೆಡಮಾವಿನಹೊಳೆ.
ಈ ನದಿಗಳ ಪೂರ್ತಿ ಆಯಕಟ್ಟು ಕರ್ನಾಟಕದಲ್ಲಿದೆ.


★ ವರಾಹಿ ಮತ್ತು ನೆತ್ರಾವತಿ ನದಿಗಳ ನಡುವಿನ ಆಯಕಟ್ಟು :

✧.ಕರ್ನಾಟಕದಲ್ಲೆ ಇರುವ ಈ ಆಯಕಟ್ಟಿನಲ್ಲಿ ಸ್ವರ್ಣ, ಸೀತಾನದಿ, ಮುಲ್ಕಿ ನದಿ, ಪಾವಂಜೆ ,ನದಿಸಾಲು, ಗುರಪುರ, ಎಣ್ಣೆ ಹೊಳೆ, ಮಡಿಸಲ್ ಹೊಳೆಗಳು ಹರಿಯುತ್ತವೆ.


★ ನೇತ್ರಾವತಿ ಮತ್ತು ಚಂದ್ರಗಿರಿ (ಪಯಸ್ವಾಣಿ) ನದಿಗಳ ನಡುವಿನ ಆಯಕಟ್ಟು:
ಈ ಆಯಕಟ್ಟಿನಲ್ಲಿ ಮುಖ್ಯವಾಗಿ ಚಂದ್ರಗಿರಿ ಮತ್ತು ಶಿರಿಯ ನದಿಗಳು ಹರಿಯುತ್ತವೆ.

✧.ಚಂದ್ರಗಿರಿ ನದಿಯು ಕೊಡಗು ಜಿಲ್ಲೆಯ ಪಶ್ಚಿಮದ ಮೆರ್ಕೇರದಲ್ಲಿ ಸುಮಾರು 600 ಮೀ. ಎತ್ತರದಲ್ಲಿ ಹುಟ್ಟುತ್ತದೆ.

✧.ಪಯಸ್ವಾಣಿ ನದಿಯು ಕೊಡಗಿನ ಪಟ್ಟಿ ಗಟ್ಟದ ಕಾಡಿನಲ್ಲಿ ಸುಮಾರು 1350 ಮೀ. ಎತ್ತರದಲ್ಲಿ ಹುಟ್ಟುತ್ತದೆ.

✧.ಈ ಎರಡು ನದಿಗಳು ಅರಬ್ಬಿ ಸಮುದ್ರದ ಗತಿಗೆ ವಿರುದ್ದವಾಗಿ 15 ಕಿ.ಮೀ ದೂರದಲ್ಲಿ ಕಾಸರಗೋಡಿನ ಮಚಿಪನದಲ್ಲಿ ಸೇರುತ್ತವೆ.

✧.ಇದರ ಒಟ್ಟು ಆಯಕಟ್ಟು 1406 ಚದರ ಕಿ.ಮೀ ಇದೆಯಾದರೂ 836 ಚದರ ಕಿ.ಮೀ ನಮ್ಮ ಕರ್ನಾಟಕದಲ್ಲಿದ್ದು ಉಳಿದದ್ದು ಕೇರಳ ರಾಜ್ಯಕ್ಕೆ ಸೇರುತ್ತದೆ.



Ⅳ.ಉತ್ತರ ಪೆನ್ನಾರ್ ನದಿ ಏರ್ಪಾಟು:

✧.ಉತ್ತರ ಪಿನಾಕಿನಿ (ಉತ್ತರ ಪೆನ್ನಾರ್ ನದಿ)

●.ಜಲಾನಯನ ಪ್ರದೇಶ: 6937 ಚದರ ಕಿ.ಮೀ.

●.ನದಿಯ ಮೂಲ:  ಕೊಲಾರದ ನಂದಿ ಬೆಟ್ಟ.

●.ನದಿಯ ಉದ್ದ: 597 ಕಿ.ಮೀ.

●.ಒಳ-ಉಪನದಿಗಳು :  ಜಯಮಂಗಲಿ, ಕುಮುದಾವತಿ, ಚಿತ್ರಾವತಿ ಮತ್ತು ಪಾಪಗ್ನಿ

●.ರಾಜ್ಯಗಳು:  ಕರ್ನಾಟಕ & ಆಂದ್ರಪ್ರದೇಶ


✧.ದಕ್ಷಿಣ ಪೆನ್ನಾರ್ ನದಿ ಏರ್ಪಾಟು:

●.ಜಲಾನಯನ ಪ್ರದೇಶ:  4370 ಚದರ ಕಿ.ಮೀ.

●.ನದಿಯ ಮೂಲ:  ಕೊಲಾರದ ನಂದಿ ಬೆಟ್ಟ.

●.ರಾಜ್ಯಗಳು: ಕರ್ನಾಟಕ ಮತ್ತು ತಮಿಳು ನಾಡು.


Ⅴ.ಪಾಲಾರ್ ನದಿ ಏರ್ಪಾಟು:

●.ಜಲಾನಯನ ಪ್ರದೇಶ: 2813 ಚದರ ಕಿ.ಮೀ.

●.ನದಿಯ ಮೂಲ:  ಕೊಲಾರದ ತಲಗಾವರ ಹಳ್ಳಿ,

●.ಮೂಲದ ಎತ್ತರ:  900 ಮೀ

●.ನದಿಯ ಉದ್ದ:  348ಕಿ.ಮೀ.

●.ರಾಜ್ಯಗಳು:  ಕರ್ನಾಟಕ, ಆಂದ್ರಪ್ರದೇಶ ಮತ್ತು ತಮಿಳು ನಾಡು


...ಉಳಿದದ್ದನ್ನು ಮುಂದುವರೆಸಲಾಗುವುದು.

Wednesday, 11 February 2015

☀.' ಕರ್ನಾಟಕದ ನದಿ ವ್ಯವಸ್ಥೆ', ಭಾಗ:Ⅰ 'ಕರ್ನಾಟಕದಲ್ಲಿ ಹರಿಯುವ ಪ್ರಮುಖ ನದಿಗಳು'  ('The River System of the Karnataka, The Major Rivers Flowing In Karnataka')

☀.' ಕರ್ನಾಟಕದ ನದಿ ವ್ಯವಸ್ಥೆ', ಭಾಗ Ⅰ
'ಕರ್ನಾಟಕದಲ್ಲಿ ಹರಿಯುವ ಪ್ರಮುಖ ನದಿಗಳು'
('The River System of Karnataka, The Major Rivers Flowing In Karnataka')

♦. ಕರ್ನಾಟಕದ ಭೂಗೋಳ
━━━━━━━━━━━━━━━━━━━━━━━━━━━━━━━━━━━━━━━━━━━━━


— ನಮ್ಮ ದಿನನಿತ್ಯದ ಬದುಕಿನಲ್ಲಿ ನೀರು ಬಹಳ ಮುಕ್ಯ ಪಾತ್ರ ವಹಿಸುತ್ತದೆ. ನೀರಿಲ್ಲದ ಜೀವನವನ್ನು ನೆನಿಸಿಕೊಳ್ಳಲೂ ಸಾದ್ಯವಾಗುವುದಿಲ್ಲ. ನೀರಿಗೆ ಮುಖ್ಯ ಆದಾರವೆ ನದಿಗಳು.


★ ನದಿ ಎಂದರೇನು ?
ಒಟ್ಟಾಗಿ ಹರಿಯುವ ನೀರಿನ ಒಂದು ಸಮೂಹವೆ ನದಿ. ಸಾಮಾನ್ಯವಾಗಿ ನದಿಗಳ ಮೂಲ ಬೆಟ್ಟಗಳೇ ಆದರೂ, ಅಷ್ಟು ನೀರು ನದಿಯಾಗಿ ಹರಿಯಲು ಕಾರಣ ಹಿಮ ಕರುಗುವಿಕೆ, ನೆಲದಡಿಯ ನೀರು ಇಲ್ಲವೇ ಮಳೆ ನೀರಿರಬಹುದು. ಮೊದಲಿನಿಂದಲೂ ನದಿಗಳು ಮಂದಿಯ ನಾಗರೀಕತೆಗಳಿಗೆ ಬಹು ಮುಖ್ಯವಾಗಿವೆ.


★ ಏನಿದು ಉಪನದಿ?
ಮಣ್ಣಿನ ಸವೆತದಿಂದಾಗಿ ಮುಡುಕು ಮೂಡಿಸುತ್ತ ಹರಿವ ದೊಡ್ದ ನದಿಗಳನ್ನು ಅಲ್ಲಲ್ಲಿ ಸಣ್ಣ ನದಿಗಳು ಸೇರುತ್ತವೆ. ಇಂತಹ ನದಿಗಳನ್ನು ಉಪನದಿ ಎನ್ನುತ್ತಾರೆ. ಸಣ್ಣ ನದಿ ಮತ್ತು ದೊಡ್ಡ ನದಿಗಳು ಕೂಡುವ ತಾಣಕ್ಕೆ ಕೂಡಲು ಎನ್ನಬಹುದು. ಹೀಗೆ ಹರಿವ ನದಿಯು ನದೀಮುಖವನ್ನು (ಸಾಗರ, ಕೆರೆ,ಕಟ್ಟೆ) ಸೇರುತ್ತದೆ ಹಾಗು ಸಣ್ಣ ಕಾಲುವೆಗಳಾಗುತ್ತವೆ.

✧.ಕರ್ನಾಟಕದಲ್ಲಿ ಒಟ್ಟು ಏಳು ಬಗೆಯ ನದಿ ಸಮೂಹಗಳಿವೆ. ಅವುಗಳ ಹೆಸರು ಮತ್ತು ಹರಿವನ್ನು ಕೆಳಗೆ ನೀಡಲಾಗಿದೆ.

1.ಗೋದಾವರಿ ನದಿ:  4.412.31ಚದರ ಕಿ.ಮೀ(sq.km)

2.ಕೃಷ್ಣ ನದಿ:   113.2959.48 ಚದರ ಕಿ.ಮೀ(sq.km)

3.ಕಾವೇರಿ ನದಿ:   34.2717.99 ಚದರ ಕಿ.ಮೀ(sq.km)

4.ಉತ್ತರ ಪೆನ್ನಾರ್ ನದಿ:   6.943.64 ಚದರ ಕಿ.ಮೀ(sq.km)

5.ದಕ್ಷಿಣ ಪೆನ್ನಾರ್ ನದಿ:   4.372.29 ಚದರ ಕಿ.ಮೀ(sq.km)

6.ಪಲಾರ್ ನದಿ:   2.971.56 ಚದರ ಕಿ.ಮೀ(sq.km)

7.ಪಶ್ಚಿಮಕ್ಕೆ ಹರಿಯುವ ಹೊಳೆಗಳು:   24.2512.73 ಚದರ ಕಿ.ಮೀ(sq.km)

✧.ಒಟ್ಟು190.5100 ಚದರ ಕಿ.ಮೀ(sq.km)



Ⅰ.ಗೋದಾವರಿ ನದಿ ಏರ್ಪಾಟು :

✧.ಅರಬ್ಬಿ ಕಡಲ ತೀರದಿಂದ ಸುಮಾರು 80 ಕಿ.ಮೀ. ದೂರದಲ್ಲಿ ಮಹಾರಾಷ್ಟ್ರದ ನಾಸಿಕ್ ನಲ್ಲಿ ಗೋದಾವರಿ ನದಿಯು ಹುಟ್ಟುತ್ತದೆ.

✧.1067 ಮೀ ಎತ್ತರದಲ್ಲಿ ಹುಟ್ಟುವ ಈ ನದಿಯು 1465 ಕಿ.ಮೀ.ನಷ್ಟು ಪೂರ್ವ ದಿಕ್ಕಿಗೆ ಹರಿದು ಮಹಾರಾಷ್ಟ್ರ, ಆಂದ್ರಪ್ರದೇಶದ ಮೂಲಕ ರಾಜಮುಂಡ್ರಿಯ ಮೇಲೆ ಬಂಗಾಳ ಕೊಲ್ಲಿ (ಕಡಲನ್ನು) ಸೇರುತ್ತದೆ.

✧.ಗೋದಾವರಿಯ ಆಯಕಟ್ಟು ಸುಮಾರು 3,12,813 ಚದರ ಕಿ ಮೀ ನಷ್ಟಿದೆ. ಇದರ ವಿವರವನ್ನು ಕೆಳಗಿನ ಪಟ್ಟಿಯಲ್ಲಿ ಕಾಣಬಹುದು.


★ಗೋದಾವರಿಯ ಜಲಾನಯನ (basin)ಕ್ಕೊಳಪಟ್ಟ ರಾಜ್ಯಗಳು:

1.ಮದ್ಯಪ್ರದೇಶ— 26,168 ಚದರ ಕಿ .ಮೀ

2.ಛತ್ತಿಸ್ ಗಡ್— 39,087 ಚದರ ಕಿ .ಮೀ

3.ಕರ್ನಾಟಕ— 4,406 ಚದರ ಕಿ .ಮೀ

4.ಆಂದ್ರಪ್ರದೇಶ— 73,201 ಚದರ ಕಿ .ಮೀ

5.ಒರಿಸ್ಸ— 17,752 ಚದರ ಕಿ .ಮೀ

✧.ಒಟ್ಟು 3,12,813 ಚದರ ಕಿ .ಮೀ


✧.ಗೋದಾವರಿ ನದಿಯ ಬಹು ಮುಖ್ಯ ಸೀಳುನದಿಗಳೆಂದರೆ:
ಪ್ರವರ, ಪೂರ್ಣಾ, ಮಾಂಜ್ರ, ಪ್ರಣಹಿತ, ಇಂದ್ರಾವತಿ ಮತ್ತು ಸಬರಿ.


✧.ಕರ್ನಾಟಕದಲ್ಲಿ ತನ್ನ ಆಯಕಟ್ಟನ್ನು ಹೊಂದಿರುವ ಮಾಂಜ್ರ ಸೀಳುನದಿಯ ವಿವರ ಕೆಳಗಿನ ಪಟ್ಟಿಯಲ್ಲಿ ತಿಳಿಸಲಾಗಿದೆ.

● ಉಪನದಿ:— ಮಾಂಜ್ರ

●.ಜಲಾನಯನ ಪ್ರದೇಶ:—15,667 ಚದರ ಕಿ ಮೀ

● ಮೂಲ:— ಮಹಾರಾಷ್ಟ್ರ,

● ಮೂಲದ ಎತ್ತರ (Origin , Altitude):— 4,406 ಚದರ ಕಿ ಮೀ

● ಒಳ-ಉಪನದಿ ರಾಜ್ಯಗಳು:

—ಮಹಾರಾಷ್ಟ್ರ, ಕರ್ನಾಟಕ ಮತ್ತು ಆಂದ್ರಪ್ರದೇಶ
— ಕರ್ನಾಟಕ, 10,772 ಚದರ ಕಿ ಮೀ
— ಆಂದ್ರಪ್ರದೇಶ ಬಾಲ ಘಾಟ್ ಬೆಟ್ಟಗಳ ಸಾಲು, 823 ಮೀ. ತಿರಿನ, ಕರಂಜ, ಹಲ್ ದಿ,ಲೆಂಡಿ ಮತ್ತು ಮನ್ನಾರ್


Ⅱ.ಪಶ್ಚಿಮಕ್ಕೆ ಹರಿವ ನದಿಗಳ ಏರ್ಪಾಟು:

✧.ಅರಬ್ಬಿ ಕಡಲತ್ತ ದಕ್ಷಿಣದಲ್ಲಿ, ಪಶ್ಚಿಮ ದಿಕ್ಕಿಗೆ ಬರುವ ಮುಂಗಾರಿಗೆ ಪಶ್ಚಿಮ ಘಟ್ಟಗಳು ಒಂದು ರೀತಿಯ ಅಡ್ಡಗೋಡೆಯಾಗಿ, ಪಶ್ಚಿಮದಲ್ಲಿ ಅತಿ ಹೆಚ್ಚು ಮಳೆಗೆ ಕಾರಣವಾಗಿವೆ ಹಾಗು ಜೂನ್ ನಿಂದ ಸೆಪ್ಟೆಂಬರ‍ವರೆಗಿನ ಮಳೆಗಾಲದಲ್ಲಿ ನೂರಕ್ಕೆ ತೊಂಬತ್ತರಷ್ಟು ಮಳೆಯನ್ನು ತನ್ನದಾಗಿಸಿಕೊಳ್ಳುತ್ತವೆ.

✧.ಪಶ್ಚಿಮ ಘಟ್ಟದಲ್ಲಿ ಹುಟ್ಟುವ ನದಿಗಳು ಸುಮಾರು 400 ರ ರಿಂದ 1600 ಮೀ. ಎತ್ತರದಲ್ಲಿ ಉತ್ತರ ಘಟ್ಟಗಳ ತುದಿಗೆ ಹತ್ತಿರವಾಗಿ ಕಡಲ ಮೇಲ್ಮಟ್ಟದಲ್ಲಿ ಹುಟ್ಟುತ್ತವೆ.

✧.ಹೀಗೆ ಹುಟ್ಟುವ ನದಿಗಳು ಪಶ್ಚಿಮ ದಿಕ್ಕಿನಲ್ಲಿ ಹರಿದು ಸುಮಾರು 50 ರಿಂದ 300 ಕಿ.ಮೀ. ದೂರದಲ್ಲಿ ಅರಬ್ಬಿ ಕಡಲನ್ನು ಸೇರುತ್ತವೆ. ನದಿಗಳು ತನ್ನ ಮೆಲ್ಬಾಗದಲ್ಲಿ ಅತಿಹೆಚ್ಚು ಕಡಿದಾಗಿದ್ದು (steep), ನಡುಭಾಗದಲ್ಲಿ ಕಡಿಮೆ ಇರುತ್ತವೆ. ಕೇವಲ ಕಡಲ ಹತ್ತಿರ ಸಮನಾದ ನೆಲವನ್ನು (flat gradient) ಮತ್ತು ಹೊನಲು ಹರಿದ ಸಮತಲ ಬೂಮಿಯನ್ನು (flood plain) ಕಾಣಬಹುದು.



★.ಪಶ್ಚಿಮಕ್ಕೆ ಹರಿಯುವ ಇನ್ನಷ್ಟು ನದಿಗಳು, ಉಪನದಿಗಳು ಮತ್ತು ಇವುಗಳು ಹರಿವ ರಾಜ್ಯಗಳನ್ನು ಕೆಳಗಿನ ಪಟ್ಟಿಯಲ್ಲಿ ಕಾಣಬಹುದು.

1.ಮಹಾದಾಯಿ/ಮಾಂಡವಿ ನದಿ.

●.ಜಲಾನಯನ ಪ್ರದೇಶ:— 2,032 ಚದರ ಕಿ.ಮೀ.

●.ಮೂಲ:— ಪಡುವಣ ಗಟ್ಟದ ಬೆಳಗಾವಿ ಜಿಲ್ಲೆ

●.ಮೂಲದ ಎತ್ತರ:— 600 ಮೀ.

●.ನದಿಯ ಉದ್ದ:— 87 ಕಿ.ಮೀ.

●.ಒಳ –ಉಪನದಿಗಳು:— ಮದೇರಿ

●.ರಾಜ್ಯ:— ಕರ್ನಾಟಕ, ಗೋವ


2.ಕಾಳಿ ನದಿ.
●.ಜಲಾನಯನ ಪ್ರದೇಶ:— 4,188 ಚದರ ಕಿ.ಮೀ.

●.ಮೂಲ:— ಪಡುವಣ ಗಟ್ಟದ ಬಿಡಿ ಹಳ್ಳಿ

●.ಮೂಲದ ಎತ್ತರ:— 600 ಮೀ.

●.ನದಿಯ ಉದ್ದ:— 153ಕಿ.ಮೀ.

●.ಒಳ –ಉಪನದಿಗಳು:— ಪಂಡರಿ, ತಟ್ಟಿ ಹಳ್ಳ ಮತ್ತು ನಾಗಿ

●.ರಾಜ್ಯ:— ಕರ್ನಾಟಕ


3.ಗಂಗವಲ್ಲಿ (ಬೆಡ್ತಿ) ನದಿ.

●.ಜಲಾನಯನ ಪ್ರದೇಶ:— 3,574 ಚದರ ಕಿ.ಮೀ.

●.ಮೂಲ:— ಪಡುವಣ ಘಟ್ಟದ ತೆಂಕಣ ದಾರವಾಡ

●.ಮೂಲದ ಎತ್ತರ:  700 ಮೀ.

●.ನದಿಯ ಉದ್ದ: 152ಕಿ.ಮೀ.

●.ರಾಜ್ಯ:  ಕರ್ನಾಟಕ


4.ಅಘನಾಶಿನಿ (ತದ್ರಿ) ನದಿ.

●.ಜಲಾನಯನ ಪ್ರದೇಶ:  1,330 ಚದರ ಕಿ.ಮೀ.

●.ಮೂಲ:  ಸಿರಸಿ ಹತ್ತಿರದ ಪಡುವಣ ಘಟ್ಟಗಳು

●.ಮೂಲದ ಎತ್ತರ: 500 ಮೀ.

●.ನದಿಯ ಉದ್ದ: 84 ಕಿ.ಮೀ.

●.ರಾಜ್ಯ: ಕರ್ನಾಟಕ


5.ಶರಾವತಿ ನದಿ.

●.ಜಲಾನಯನ ಪ್ರದೇಶ: 3,592 ಚದರ ಕಿ.ಮೀ.

●.ಮೂಲ: ಶಿವಮೊಗ್ಗ ಜಿಲ್ಲೆಯ ಹುಮಾಚ ಪಡುವಣ ಘಟ್ಟಗಳು

●.ಮೂಲದ ಎತ್ತರ: 700 ಮೀ.

●.ನದಿಯ ಉದ್ದ: 122 ಕಿ.ಮೀ.

●.ರಾಜ್ಯ: ಕರ್ನಾಟಕ


6.ಚಕ್ರ ನದಿ.

●.ಜಲಾನಯನ ಪ್ರದೇಶ: 336 ಚದರ ಕಿ.ಮೀ.

●.ಮೂಲ: ಮೂಡಣದ ಕೊಡಚಾದ್ರಿ, ಶಿವಮೊಗ್ಗ ಜಿಲ್ಲೆ

●.ಮೂಲದ ಎತ್ತರ: 600 ಮೀ.

●.ನದಿಯ ಉದ್ದ: 52 ಕಿ.ಮೀ.

●.ಒಳ –ಉಪನದಿಗಳು: ಕೊಲ್ಲೂರು

ರಾಜ್ಯ: ಕರ್ನಾಟಕ


7.ವರಾಹಿ (ಹಲದಿ) ನದಿ.

●.ಜಲಾನಯನ ಪ್ರದೇಶ: 759 ಚದರ ಕಿ.ಮೀ.

●.ಮೂಲ: ಕವಲೆದುರ್ಗ, ಶಿವಮೊಗ್ಗ ಜಿಲ್ಲೆ

●.ಮೂಲದ ಎತ್ತರ: 600 ಮೀ.

●.ನದಿಯ ಉದ್ದ: 66 ಕಿ.ಮೀ.

●.ರಾಜ್ಯ: ಕರ್ನಾಟಕ


8.ನೇತ್ರಾವತಿ ನದಿ.

●.ಜಲಾನಯನ ಪ್ರದೇಶ: 3,222 ಚದರ ಕಿ.ಮೀ.

●.ಮೂಲ: ತೆಂಕಣ ಕನ್ನಡದ ಬೆಳ್ಳರಾಯನ ದುರ್ಗ

●.ಮೂಲದ ಎತ್ತರ: 1000ಮೀ.

●.ನದಿಯ ಉದ್ದ: 103 ಕಿ.ಮೀ.

●.ಒಳ –ಉಪನದಿಗಳು: ಗುಡಿಹೊಳೆ, ಕುಮಾರದಾರ ಮತ್ತು ಶಿಸಿಯ ಹೊಳೆ

●.ರಾಜ್ಯ: ಕರ್ನಾಟಕ


9.ಬರಪೊಳೆ (ವಾಲಪಟ್ಟಣ) ನದಿ.

●.ಜಲಾನಯನ ಪ್ರದೇಶ: 1,867 ಚ.ಕಿ.ಮೀ

●.ಮೂಲ:  ಕೊಡಗಿನ ಬ್ರಮ್ಹಗಿರಿ ಘಟ್ಟದ ಕಾಡು

●.ಮೂಲದ ಎತ್ತರ:  900 ಮೀ.

●.ನದಿಯ ಉದ್ದ: 110 ಕಿ.ಮೀ.

●.ರಾಜ್ಯ: ಕರ್ನಾಟಕ ಮತ್ತು ಕೇರಳ.


*** ಉಳಿದದ್ದನ್ನು  ಮಂದುವರೆಯುವುದು.