"ಮನುಷ್ಯ ದೀಪವಾದರೂ ಆಗಬೇಕು, ಕನ್ನಡಿಯಾದರೂ ಆಗಬೇಕು. ಒಂದು ಬೆಳಕನ್ನು ಕೊಡುತ್ತದೆ ಮತ್ತೊಂದು ಅದನ್ನು ಪ್ರತಿಬಿಂಬಿಸುತ್ತದೆ. ಪ್ರತಿಯೊಬ್ಬರೂ ದೀಪ ಆಗದೇ ಹೋಗಬಹುದು ಆದರೆ ಕನ್ನಡಿ ಆಗಬಲ್ಲರು. ತಿಳಿದಿರುವ ಜ್ಞಾನವನ್ನು ಮತ್ತೊಬ್ಬರಿಗೆ ಹಂಚುವುದೇ ಜೀವನ.."—ಅರಿಸ್ಟಾಟಲ್

Tuesday, 10 February 2015

☀.ಅಗ್ನಿ-5 ಕ್ಷಿಪಣಿ: ಇಂಟರ್ ಕಾಂಟಿನೆಂಟಲ್ ಬ್ಯಾಲಿಸ್ಟಿಕ್ ಮಿಸೈಲ್ (ICBM)
(Missile Agni -5: Inter-Continental Ballistic Missile)
━━━━━━━━━━━━━━━━━━━━━━━━━━━━━━━━━━━━━━━━━━━━━
♦.ಸಾಮಾನ್ಯ ವಿಜ್ಞಾನ.

— ಸಂಪೂರ್ಣ ಸ್ವದೇಶಿ ತಂತ್ರಜ್ಞಾನದ 5,000 ಕಿಲೋ ಮೀಟರ್‌ಗಿಂತಲೂ ಹೆಚ್ಚು ದೂರ 1.5 ಟನ್ ಅಣ್ವಸ್ತ್ರ ಸಿಡಿತಲೆಯೊಂದಿಗೆ ಕ್ರಮಿಸಬಲ್ಲ ಡಿಆರ್‌ಡಿಓ ಮಹತ್ವಾಕಾಂಕ್ಷಿಯ ಭೂಮಿಯ ಮೇಲ್ಮೈನಿಂದ ಮೇಲ್ಮೈಗೆ ಜಿಗಿಯುವ ಇಂಟರ್ ಕಾಂಟಿನೆಂಟಲ್ ಬ್ಯಾಲಿಸ್ಟಿಕ್ ಮಿಸೈಲ್ (ಐಸಿಬಿಎಂ) ಅಗ್ನಿ-5 ಕ್ಷಿಪಣಿಯ ಪರೀಕ್ಷಾರ್ಥ ಉಡಾವಣೆ ಯಶಸ್ವಿಯಾಗಿದೆ. ಇದರೊಂದಿಗೆ ಜಗತ್ತಿನ ಖಂಡಾಂತರ ಕ್ಷಿಪಣಿ ಸಾಮರ್ಥ್ಯ ಹೊಂದಿರುವ ಪ್ರಮುಖ ರಾಷ್ಟ್ರಗಳ ಸಾಲಿಗೆ ಸೇರ್ಪಡೆಯಾದ ಹೆಮ್ಮೆಗೆ ಭಾರತ ಪಾತ್ರವಾಗಿದೆ.

✧.ಒಡಿಶಾ ಕರಾವಳಿಯ ವ್ಹೀಲರ್ ಐಲ್ಯಾಂಡ್‌ನಿಂದ Apr 19, 2012ರಲ್ಲಿ ಘನ ಇಂಧನ ಬಳಸಿ ಚಾಲನೆಗೊಳ್ಳುವ ಅಗ್ನಿ-5 ಕ್ಷಿಪಣಿಯನ್ನು ರಕ್ಷಣಾ ಅಭಿವೃದ್ಧಿ ಸಂಶೋಧನಾ ಸಂಸ್ಥೆಯು (ಡಿಆರ್‌ಡಿಒ) ಯಶಸ್ವಿಯಾಗಿ ಉಡಾಯಿಸಿತು. ಅಗ್ನಿ-5ರ ಮೊದಲ ಎರಡು ಪ್ರಯೋಗಗಳನ್ನು 'ಹಾಟ್ ಲಾಂಚ್ ಕಾನ್ಫಿಗರೇಶನ್'ನಲ್ಲಿ ಉಡಾವಣೆ ಮಾಡಲಾಗಿತ್ತು. ಮೊದಲ ಪ್ರಯೋಗ (ಎ5-01) 2012ರ ಏಪ್ರಿಲ್ 19ರಂದು ಹಾಗೂ ಎರಡನೇ ಪ್ರಯೋಗ (ಎ5-02) 2013ರ ಸೆಪ್ಟೆಂಬರ್ 15ರಂದು ನಡೆದಿದೆ.

✧.ಇದು ಅಗ್ನಿ-5ರ ಮೂರನೇ ಪರೀಕ್ಷೆಯಾಗಿದ್ದು, ಇದೇ ಪ್ರಥಮ ಬಾರಿಗೆ ಕ್ಯಾನಿಸ್ಟರ್ ಮೂಲಕ ಉಡಾವಣೆ ಮಾಡಲಾಗಿದೆ. ಈ ಕ್ಷಿಪಣಿಯ ಎಲ್ಲ ಮೂರು ಹಂತಗಳನ್ನು ಫ್ಲೆಕ್ಸ್ ನೋಜಲ್ ಪದ್ಧತಿ ಮೂಲಕ ನಿಯಂತ್ರಿಸಲಾಗಿದೆ. 'ಇನ್ನೋವೇಟಿವ್ ಇನರ್ಶಿಯಲ್ ಎನರ್ಜಿ ಮ್ಯಾನೇಜ್‌ಮೆಂಟ್ ಎಕ್ಸ್‌ಪ್ಲಿಸಿಟ್ ಗೈಡೆನ್ಸ್‌'ನಿಂದ ಮಾರ್ಗದರ್ಶನ ಸಿಕ್ಕಿದೆ.
✧.ಅಗ್ನಿ-5ರ ಮೊದಲ ಎರಡು ಪ್ರಯೋಗಗಳನ್ನು 'ಹಾಟ್ ಲಾಂಚ್ ಕಾನ್ಫಿಗರೇಶನ್'ನಲ್ಲಿ ಉಡಾವಣೆ ಮಾಡಲಾಗಿತ್ತು. ಮೊದಲ ಪ್ರಯೋಗ (ಎ5-01) 2012ರ ಏಪ್ರಿಲ್ 19ರಂದು ಹಾಗೂ ಎರಡನೇ ಪ್ರಯೋಗ (ಎ5-02) 2013ರ ಸೆಪ್ಟೆಂಬರ್ 15ರಂದು ನಡೆದಿದೆ.

✧.ಈ ಪರೀಕ್ಷೆಯೊಂದಿಗೆ ಭಾರತ ಕ್ಷಿಪಣಿ ಪ್ರಾಬಲ್ಯದಲ್ಲಿ ಜಗತ್ತಿನ ಪ್ರಮುಖ ರಾಷ್ಟ್ರಗಳಲ್ಲಿ ಒಂದಾಗಿ ಹೊರ ಹೊಮ್ಮಿದೆ. ನೆಲದಿಂದ ನೆಲಕ್ಕೆ ಚಿಮ್ಮುವ ಸ್ವದೇಶಿ ನಿರ್ಮಿತ ಖಂಡಾಂತರ ಕ್ಷಿಪಣಿ ನೆರೆ ರಾಷ್ಟ್ರ ಚೀನಾದ ಯಾವುದೇ ಭಾಗವನ್ನು ಮತ್ತು ಯೂರೋಪ್ ರಾಷ್ಟ್ರಗಳನ್ನೂ ಗುರಿ ಮಾಡುವಷ್ಟು ಸಾಮರ್ಥ್ಯ ಹೊಂದಿದೆ.
✧.1.5 ಟನ್ ತೂಕದ ಅಣ್ವಸ್ತ್ರ ಸಿಡಿತಲೆಯನ್ನು ಈ ಪ್ರದೇಶಗಳಿಗೆ ಹೊತ್ತೊಯ್ಯುವ ಸಾಮರ್ಥ್ಯ ಇದಕ್ಕಿದೆ. ಅಲ್ಲದೇ ಇದು ಸ್ವಯಂಚಾಲಿತ ಸೌಲಭ್ಯವನ್ನೂ ಹೊಂದಿದೆ. ವಿವಿಧ ರೇಡಾರ್ ಮತ್ತು ಸಂಪರ್ಕ ವ್ಯವಸ್ಥೆಯ ಮೂಲಕವೂ ಮಾಹಿತಿ ಪಡೆಯುವ ವಿಶೇಷ ಗುಣ ಇದಕ್ಕಿದೆ.
✧.ಕ್ಷಿಪಣಿ ಬಂದೂಕಿನ ಗುಂಡುಗಳ ರೂಪ ಹೊಂದಿದ್ದು, ಇದನ್ನು ರಸ್ತೆ ಮತ್ತು ರೈಲು ಮಾರ್ಗದಲ್ಲಿ ಸುಲಭವಾಗಿ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸಾಗಿಸಬಹುದು. ರಾಷ್ಟ್ರ ರಕ್ಷಣೆಯಲ್ಲಿ ಶತ್ರುಗಳ ದಾಳಿ ತಡೆಯಲು ಮೇಲ್ಮೈಯಿಂದ ಮೇಲ್ಮೈಗೆಗೆ ಚಿಮ್ಮುವ ಕ್ಷಿಪಣಿ ಅತ್ಯುಪಯುಕ್ತವಾಗಿದೆ

★.ಪ್ರಮುಖ ರಾಷ್ಟ್ರಗಳ ಸಾಲಿಗೆ ಭಾರತ:
ಅಗ್ನಿ-5 ಕ್ಷಿಪಣಿ ಪರೀಕ್ಷಾರ್ಥ ಉಡಾವಣೆಯಲ್ಲಿ ಭಾರತ ಯಶಸ್ವಿಯಾಗುವುದರೊಂದಿಗೆ ಖಂಡಾಂತರ ಕ್ಷಿಪಣಿ ಸಾಮರ್ಥ್ಯವನ್ನು ಹೊಂದಿರುವ ಜಗತ್ತಿನ ಪ್ರತಿಷ್ಠಿತ ರಾಷ್ಟ್ರಗಳ ಸಾಲಿಗೆ ಸೇರಿದೆ. ಅಮೆರಿಕಾ, ಬ್ರಿಟನ್, ಚೀನಾ, ಫ್ರಾನ್ಸ್ ಮತ್ತು ರಷ್ಯಾ ಇದಕ್ಕೂ ಮೊದಲು ಈ ಸಾಮರ್ಥ್ಯ ಹೊಂದಿದ್ದವು.

★'ಅಗ್ನಿ-5'ರ ವಿಶೇಷತೆಗಳು :
* 17 ಮೀಟರ್ ಉದ್ದ, 2 ಮೀಟರ್ ವ್ಯಾಸ, 50 ಟನ್ ತೂಕ.* ಸುಮಾರು 5 ಸಾವಿರ ಕಿ.ಮೀ ದೂರವನ್ನು ಕ್ರಮಿಸಬಲ್ಲ ಸಾಮರ್ಥ್ಯ.* 1.5 ಟನ್ ತೂಕದ ಅಣ್ವಸ್ತ್ರ ಸಿಡಿತಲೆಯನ್ನು ಹೊತ್ತೊಯ್ಯುವಷ್ಟು ಶಕ್ತಿಶಾಲಿ.* ಕ್ಷಿಪಣಿ ನಿರ್ಮಾಣಕ್ಕೆ 2,500 ಕೋಟಿ ರೂ. ವೆಚ್ಚ.* ಸೇನೆಗೆ 2014-15ರ ವೇಳೆಗೆ ನಿಯೋಜನೆ .* ಈ ಕ್ಷಿಪಣಿಯನ್ನು ಸಣ್ಣ ಕೃತಕ ಉಪಗ್ರಹಗಳ ಉಡ್ಡಯನಕ್ಕೂ ಬಳಸಬಹುದಾಗಿದೆ.* ಕಕ್ಷೆಯಲ್ಲಿರುವ ವೈರಿ ರಾಷ್ಟ್ರದ ಕೃತಕ ಉಪಗ್ರಹಗಳನ್ನು ಹೊಡೆದುರುಳಿಸುವ ಸಾಮರ್ಥ್ಯ.* ಒಂದು ಸಲ ಉಡಾವಣೆ ಮಾಡಿದರೆ, ಅದನ್ನು ತಡೆಯುವುದು ಅಸಾಧ್ಯ.* ಭದ್ರತೆಗಾಗಿನ ಸಂಪುಟ ಸಮಿತಿ ಒಪ್ಪಿಗೆ ಕೊಟ್ಟರೆ ಮಾತ್ರ ಈ ಕ್ಷಿಪಣಿ ಉಡಾವಣೆಗೆ ಅವಕಾಶ.* ನಿಕೋಬಾರ್ ದ್ವೀಪದಿಂದ ಉಡಾವಣೆ ಮಾಡಿದರೆ ಇಡೀ ಚೀನಾ ತಲುಪಬಲ್ಲುದು.* ಪೂರ್ವ ಯುರೋಪ್, ಉತ್ತರ ಯುರೋಪ್, ಪೂರ್ವ ಆಫ್ರಿಕಾ ಮತ್ತು ಆಸ್ಟ್ರೇಲಿಯಾವನ್ನುಕ್ರಮಿಸುವ ಸಾಮರ್ಥ್ಯ.* ಭೂ ವಾತಾವರಣವನ್ನು ಮರು ಪ್ರವೇಶಿಸಿದಾಗ 5 ಸಾವಿರ ಡಿಗ್ರಿ ಉಷ್ಣಾಂಶವನ್ನು ಕಾಯ್ದಿಟ್ಟುಕೊಳ್ಳುತ್ತದೆ.* ಕ್ಷಿಪಣಿ ಪರೀಕ್ಷಾರ್ಥ ಉಡಾವಣೆ ಯಶಸ್ವಿಯಾಗುವುದರೊಂದಿಗೆ ಚೀನಾದ ಪ್ರಾಬಲ್ಯ ಹತ್ತಿಕ್ಕಿ ಪ್ರಾದೇಶಿಕ ಶಕ್ತಿಯಾಗಿ ಭಾರತ ಮಹತ್ವದ ಹೆಜ್ಜೆ.

No comments:

Post a Comment