"ಮನುಷ್ಯ ದೀಪವಾದರೂ ಆಗಬೇಕು, ಕನ್ನಡಿಯಾದರೂ ಆಗಬೇಕು. ಒಂದು ಬೆಳಕನ್ನು ಕೊಡುತ್ತದೆ ಮತ್ತೊಂದು ಅದನ್ನು ಪ್ರತಿಬಿಂಬಿಸುತ್ತದೆ. ಪ್ರತಿಯೊಬ್ಬರೂ ದೀಪ ಆಗದೇ ಹೋಗಬಹುದು ಆದರೆ ಕನ್ನಡಿ ಆಗಬಲ್ಲರು. ತಿಳಿದಿರುವ ಜ್ಞಾನವನ್ನು ಮತ್ತೊಬ್ಬರಿಗೆ ಹಂಚುವುದೇ ಜೀವನ.."—ಅರಿಸ್ಟಾಟಲ್

Sunday 15 February 2015

☀. ಭಾರತದ ಜಲ ಸಾರಿಗೆ ಮತ್ತು ದೇಶದ 101 ನದಿಗಳ ಜಲ ಮಾರ್ಗ ಯೋಜನೆ: (Water Transport of India and The country's 101 rivers waterways plan)

☀. ಭಾರತದ ಜಲ ಸಾರಿಗೆ  ಮತ್ತು  ದೇಶದ 101 ನದಿಗಳ ಜಲ ಮಾರ್ಗ ಯೋಜನೆ:
(Water Transport of India and The country's 101 rivers waterways plan)

♦. ಭಾರತದ ಭೂಗೋಳ


━━━━━━━━━━━━━━━━━━━━━━━━━━━━━━━━━━━━━━━━━━━━━

✧.ಭಾರತದ ಜಲ ಸಾರಿಗೆಯು ಅತ್ಯಂತ ಸಮರ್ಥ, ಕಡಿಮೆ ವೆಚ್ಚದ ಮತ್ತು ಪರಿಸರ ಸ್ನೇಹಿ ಸಾರಿಗೆಯಾಗಿದೆ. ಭಾರತೀಯ ಸಂಚಾರ ಯೋಗ್ಯ ಜಲಮಾರ್ಗಗಳು ನದಿಗಳು, ಕಾಲುವೆಗಳು, ಹಿನ್ನೀರು ಇತ್ಯಾದಿಗಳ ಮೂಲಕ ಕಂಡುಬರುತ್ತವೆ.

✧.ಆರ್ಥಿಕ ಪ್ರಗತಿಯ ವೇಗ ಹೆಚ್ಚಿಸಲು ದೇಶದ 101 ನದಿಗಳನ್ನು ಜಲ ಮಾರ್ಗಗಳಾಗಿ ಪರಿವರ್ತಿಸುವ ಮಹತ್ವಾಕಾಂಕ್ಷಿ ಯೋಜನೆಯನ್ನು ಕೇಂದ್ರ ಸರ್ಕಾರ ಹೊಂದಿದೆ.

✧.‘ಜಲ ಮಾರ್ಗಗಳ ನಿರ್ಮಾಣ ಸರ್ಕಾರದ ಪ್ರಮುಖ ಆದ್ಯತೆಯಾಗಿದ್ದು, ಜಲ ಮಾರ್ಗಗಳಾಗಿ ಪರಿವರ್ತಿಸಲು 101 ನದಿಗಳನ್ನು ಗುರುತಿಸಲಾಗಿದೆ. ಇದು ಅತ್ಯಂತ ಅಗ್ಗದ ಸಂಚಾರ ವ್ಯವಸ್ಥೆಯಾಗಲಿದೆ.

✧.ಯಾವುದೇ ನದಿಯನ್ನು ಜಲ ಮಾರ್ಗವಾಗಿ ಪರಿವರ್ತಿಸಲು ಅವಕಾಶ ನೀಡುವ ಮಸೂದೆಗೆ ಸಂಸತ್ತಿನ ಒಪ್ಪಿಗೆ ಬೇಕಾಗಿದೆ. ಈ ತನಕ ಸರ್ಕಾರ ಐದು ನದಿಗಳನ್ನು ಮಾತ್ರ ಜಲಮಾರ್ಗಗಳಾಗಿ ಗುರುತಿಸಿದೆ.

✧.ರಸ್ತೆ ಮತ್ತು ರೈಲು ಸಾರಿಗೆಗಿಂತ ಜಲ ಸಾರಿಗೆ ಅಗ್ಗ. ಜಲ ಸಾರಿಗೆ ತಗಲುವ ವೆಚ್ಚ ಕಿಲೋಮೀಟರ್‌ಗೆ 50 ಪೈಸೆ ಮಾತ್ರ. ಹಾಗಿದ್ದರೂ ಜಲ ಸಾರಿಗೆಯ ಅವಕಾಶಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಲಾಗಿಲ್ಲ.

✧.ಈ ಕ್ಷೇತ್ರದ ಅಭಿವೃದ್ಧಿಗೆ ಸರ್ಕಾರವು ಹಲವು ಕ್ರಮಗಳನ್ನು ಕೈಗೊಳ್ಳಲಿದೆ. ಜಲ ಮಾರ್ಗಗಳು ಆರ್ಥಿಕ ಅಭಿವೃದ್ಧಿಗೆ ಗಣನೀಯ ಕೊಡುಗೆ ನೀಡಲಿವೆ. ನದಿ, ಸರೋವರ, ಕಾಲುವೆ, ಖಾರಿಗಳು, ಹಿನ್ನೀರು ಇತ್ಯಾದಿಯನ್ನು ಒಳನಾಡು ಜಲಸಾರಿಗೆಗೆ ಬಳಸಿ ಕೊಳ್ಳಲಾಗುವುದು. ಇವುಗಳಲ್ಲಿ 14,500 ಕಿಲೋ ಮೀಟರ್‌ ಜಲ ಮಾರ್ಗ ಅಭಿವೃದ್ಧಿಗೆ ಅವಕಾಶ ಇದೆ.

✧.ಪ್ರಧಾನ ಮಂತ್ರಿ ಜಲ ಮಾರ್ಗ ಯೋಜನೆಯನ್ನು ಅನುಷ್ಠಾನಗೊಳಿಸಲು ಸರ್ಕಾರ ಈಗಾಗಲೇ ನಿರ್ಧಾರ ಕೈಗೊಂಡಿದೆ. ಭಾರತೀಯ ಒಳನಾಡು ಜಲಸಾರಿಗೆ ಪ್ರಾಧಿಕಾರವು (ಐಡಬ್ಲ್ಯುಎಐ) ಇತ್ತೀಚೆಗೆ ರಾಷ್ಟ್ರೀಯ ಜಲಮಾರ್ಗ 5 ಅಭಿವೃದ್ಧಿಗೆ ಒಡಿಶಾ ಸರ್ಕಾರ, ಪಾರಾದೀಪ್‌ ಬಂದರು ಮತ್ತು ಧಮ್ರಾ ಬಂದರುಗಳೊಂದಿಗೆ ಒಪ್ಪಂದ ಮಾಡಿಕೊಂಡಿದೆ.

✧.ರಾಷ್ಟ್ರೀಯ ಜಲಮಾರ್ಗ–5 ಅಭಿವೃದ್ಧಿಗೆ ಪೂರ್ವ ಕರಾವಳಿ ಕಾಲುವೆಯನ್ನು ಬ್ರಹ್ಮಿಣಿ ಮತ್ತು ಮಹಾನದಿ ಮುಖಜ ಭೂಮಿಯ ನದಿಗಳೊಂದಿಗೆ ಜೋಡಿಸಲಾಗಿದೆ.

✧.ದಕ್ಷಿಣ ಬಕಿಂಗ್‌­ಹ್ಯಾಮ್‌ ಕಾಲುವೆಯಲ್ಲಿ ಶೋಲಿಂಗ ನಲ್ಲೂರು–ಕಲ್ಲಪಕ್ಕಂ ರಾಷ್ಟ್ರೀಯ ಜಲಮಾರ್ಗ–4 ಮಂಜೂರಾಗಿದೆ. ರಾಷ್ಟ್ರೀಯ ಜಲ ಮಾರ್ಗ 1, 2 ಮತ್ತು 3ಈಗಾಗಲೇ ಕಾರ್ಯನಿರ್ವಹಿಸುತ್ತಿವೆ.

✧.ಇವುಗಳ ಒಟ್ಟು ಉದ್ದ 14,500 ಕಿ.ಮೀ. ಇದರಲ್ಲಿ 3700 ಕಿ.ಮೀ ಯಾಂತ್ರೀಕೃತ ದೋಣಿಗಳ ಸಂಚಾರವನ್ನು ಒಳಗೊಂಡಿದೆ.


★.ಭಾರತ ಸರ್ಕಾರವು ಈ ಕೆಳಗಿನ ರಾಷ್ಟ್ರೀಯ ಜಲಮಾರ್ಗಗಳು ಗುರುತಿಸಿದೆ.
(National Waterways of India)

●.NW 1:  ಗಂಗಾ–ಭಾಗೀರಥಿ–ಹೂಗ್ಲಿ ನದಿ ವ್ಯವಸ್ಥೆ •————• (ಅಲಹಾಬಾದ್‌ನಿಂದ— ಹಲ್ದಿಯಾ– 1620 ಕಿ. ಮೀ)

●.NW 2:  ಬ್ರಹ್ಮಪುತ್ರಾ ನದಿ •————• (ಧುಬ್ರಿಯಿಂದ— ಸಾದಿಯ– 891 ಕಿ.ಮೀ)

●.NW 3;  ಪಶ್ಚಿಮ ಕರಾವಳಿ ಕಾಲುವೆ •————• (ಕೋಟಪುರಂನಿಂದ—ಕೊಲ್ಲಂ) ಮತ್ತು ಉದ್ಯೋಗಮಂಡಲ್‌, ಚಂಪಕರ ಕಾಲುವೆಗಳು (205 ಕಿ. ಮೀ)

●.4.NW 4: ಗೋದಾವರಿ ಮತ್ತು ಕೃಷ್ಣಾ ನದಿಗಳಲ್ಲಿ •————• ಕಾಕಿನಾಡ–ಪುದುಚೇರಿ ಕಾಲುವೆಗಳು (1078 ಕಿ. ಮೀ)

●.NW 5: ಬ್ರಹ್ಮಿಣಿ, ಮಹಾನದಿ ಮುಖಜ ಭೂಮಿಯ ನದಿಗಳು ಸೇರಿದಂತೆ ಪೂರ್ವ ಕರಾವಳಿ ಕಾಲುವೆ (588 ಕಿ. ಮೀ).

No comments:

Post a Comment