"ಮನುಷ್ಯ ದೀಪವಾದರೂ ಆಗಬೇಕು, ಕನ್ನಡಿಯಾದರೂ ಆಗಬೇಕು. ಒಂದು ಬೆಳಕನ್ನು ಕೊಡುತ್ತದೆ ಮತ್ತೊಂದು ಅದನ್ನು ಪ್ರತಿಬಿಂಬಿಸುತ್ತದೆ. ಪ್ರತಿಯೊಬ್ಬರೂ ದೀಪ ಆಗದೇ ಹೋಗಬಹುದು ಆದರೆ ಕನ್ನಡಿ ಆಗಬಲ್ಲರು. ತಿಳಿದಿರುವ ಜ್ಞಾನವನ್ನು ಮತ್ತೊಬ್ಬರಿಗೆ ಹಂಚುವುದೇ ಜೀವನ.."—ಅರಿಸ್ಟಾಟಲ್

Wednesday 11 February 2015

☀.' ಕರ್ನಾಟಕದ ನದಿ ವ್ಯವಸ್ಥೆ', ಭಾಗ:Ⅰ 'ಕರ್ನಾಟಕದಲ್ಲಿ ಹರಿಯುವ ಪ್ರಮುಖ ನದಿಗಳು'  ('The River System of the Karnataka, The Major Rivers Flowing In Karnataka')

☀.' ಕರ್ನಾಟಕದ ನದಿ ವ್ಯವಸ್ಥೆ', ಭಾಗ Ⅰ
'ಕರ್ನಾಟಕದಲ್ಲಿ ಹರಿಯುವ ಪ್ರಮುಖ ನದಿಗಳು'
('The River System of Karnataka, The Major Rivers Flowing In Karnataka')

♦. ಕರ್ನಾಟಕದ ಭೂಗೋಳ
━━━━━━━━━━━━━━━━━━━━━━━━━━━━━━━━━━━━━━━━━━━━━


— ನಮ್ಮ ದಿನನಿತ್ಯದ ಬದುಕಿನಲ್ಲಿ ನೀರು ಬಹಳ ಮುಕ್ಯ ಪಾತ್ರ ವಹಿಸುತ್ತದೆ. ನೀರಿಲ್ಲದ ಜೀವನವನ್ನು ನೆನಿಸಿಕೊಳ್ಳಲೂ ಸಾದ್ಯವಾಗುವುದಿಲ್ಲ. ನೀರಿಗೆ ಮುಖ್ಯ ಆದಾರವೆ ನದಿಗಳು.


★ ನದಿ ಎಂದರೇನು ?
ಒಟ್ಟಾಗಿ ಹರಿಯುವ ನೀರಿನ ಒಂದು ಸಮೂಹವೆ ನದಿ. ಸಾಮಾನ್ಯವಾಗಿ ನದಿಗಳ ಮೂಲ ಬೆಟ್ಟಗಳೇ ಆದರೂ, ಅಷ್ಟು ನೀರು ನದಿಯಾಗಿ ಹರಿಯಲು ಕಾರಣ ಹಿಮ ಕರುಗುವಿಕೆ, ನೆಲದಡಿಯ ನೀರು ಇಲ್ಲವೇ ಮಳೆ ನೀರಿರಬಹುದು. ಮೊದಲಿನಿಂದಲೂ ನದಿಗಳು ಮಂದಿಯ ನಾಗರೀಕತೆಗಳಿಗೆ ಬಹು ಮುಖ್ಯವಾಗಿವೆ.


★ ಏನಿದು ಉಪನದಿ?
ಮಣ್ಣಿನ ಸವೆತದಿಂದಾಗಿ ಮುಡುಕು ಮೂಡಿಸುತ್ತ ಹರಿವ ದೊಡ್ದ ನದಿಗಳನ್ನು ಅಲ್ಲಲ್ಲಿ ಸಣ್ಣ ನದಿಗಳು ಸೇರುತ್ತವೆ. ಇಂತಹ ನದಿಗಳನ್ನು ಉಪನದಿ ಎನ್ನುತ್ತಾರೆ. ಸಣ್ಣ ನದಿ ಮತ್ತು ದೊಡ್ಡ ನದಿಗಳು ಕೂಡುವ ತಾಣಕ್ಕೆ ಕೂಡಲು ಎನ್ನಬಹುದು. ಹೀಗೆ ಹರಿವ ನದಿಯು ನದೀಮುಖವನ್ನು (ಸಾಗರ, ಕೆರೆ,ಕಟ್ಟೆ) ಸೇರುತ್ತದೆ ಹಾಗು ಸಣ್ಣ ಕಾಲುವೆಗಳಾಗುತ್ತವೆ.

✧.ಕರ್ನಾಟಕದಲ್ಲಿ ಒಟ್ಟು ಏಳು ಬಗೆಯ ನದಿ ಸಮೂಹಗಳಿವೆ. ಅವುಗಳ ಹೆಸರು ಮತ್ತು ಹರಿವನ್ನು ಕೆಳಗೆ ನೀಡಲಾಗಿದೆ.

1.ಗೋದಾವರಿ ನದಿ:  4.412.31ಚದರ ಕಿ.ಮೀ(sq.km)

2.ಕೃಷ್ಣ ನದಿ:   113.2959.48 ಚದರ ಕಿ.ಮೀ(sq.km)

3.ಕಾವೇರಿ ನದಿ:   34.2717.99 ಚದರ ಕಿ.ಮೀ(sq.km)

4.ಉತ್ತರ ಪೆನ್ನಾರ್ ನದಿ:   6.943.64 ಚದರ ಕಿ.ಮೀ(sq.km)

5.ದಕ್ಷಿಣ ಪೆನ್ನಾರ್ ನದಿ:   4.372.29 ಚದರ ಕಿ.ಮೀ(sq.km)

6.ಪಲಾರ್ ನದಿ:   2.971.56 ಚದರ ಕಿ.ಮೀ(sq.km)

7.ಪಶ್ಚಿಮಕ್ಕೆ ಹರಿಯುವ ಹೊಳೆಗಳು:   24.2512.73 ಚದರ ಕಿ.ಮೀ(sq.km)

✧.ಒಟ್ಟು190.5100 ಚದರ ಕಿ.ಮೀ(sq.km)



Ⅰ.ಗೋದಾವರಿ ನದಿ ಏರ್ಪಾಟು :

✧.ಅರಬ್ಬಿ ಕಡಲ ತೀರದಿಂದ ಸುಮಾರು 80 ಕಿ.ಮೀ. ದೂರದಲ್ಲಿ ಮಹಾರಾಷ್ಟ್ರದ ನಾಸಿಕ್ ನಲ್ಲಿ ಗೋದಾವರಿ ನದಿಯು ಹುಟ್ಟುತ್ತದೆ.

✧.1067 ಮೀ ಎತ್ತರದಲ್ಲಿ ಹುಟ್ಟುವ ಈ ನದಿಯು 1465 ಕಿ.ಮೀ.ನಷ್ಟು ಪೂರ್ವ ದಿಕ್ಕಿಗೆ ಹರಿದು ಮಹಾರಾಷ್ಟ್ರ, ಆಂದ್ರಪ್ರದೇಶದ ಮೂಲಕ ರಾಜಮುಂಡ್ರಿಯ ಮೇಲೆ ಬಂಗಾಳ ಕೊಲ್ಲಿ (ಕಡಲನ್ನು) ಸೇರುತ್ತದೆ.

✧.ಗೋದಾವರಿಯ ಆಯಕಟ್ಟು ಸುಮಾರು 3,12,813 ಚದರ ಕಿ ಮೀ ನಷ್ಟಿದೆ. ಇದರ ವಿವರವನ್ನು ಕೆಳಗಿನ ಪಟ್ಟಿಯಲ್ಲಿ ಕಾಣಬಹುದು.


★ಗೋದಾವರಿಯ ಜಲಾನಯನ (basin)ಕ್ಕೊಳಪಟ್ಟ ರಾಜ್ಯಗಳು:

1.ಮದ್ಯಪ್ರದೇಶ— 26,168 ಚದರ ಕಿ .ಮೀ

2.ಛತ್ತಿಸ್ ಗಡ್— 39,087 ಚದರ ಕಿ .ಮೀ

3.ಕರ್ನಾಟಕ— 4,406 ಚದರ ಕಿ .ಮೀ

4.ಆಂದ್ರಪ್ರದೇಶ— 73,201 ಚದರ ಕಿ .ಮೀ

5.ಒರಿಸ್ಸ— 17,752 ಚದರ ಕಿ .ಮೀ

✧.ಒಟ್ಟು 3,12,813 ಚದರ ಕಿ .ಮೀ


✧.ಗೋದಾವರಿ ನದಿಯ ಬಹು ಮುಖ್ಯ ಸೀಳುನದಿಗಳೆಂದರೆ:
ಪ್ರವರ, ಪೂರ್ಣಾ, ಮಾಂಜ್ರ, ಪ್ರಣಹಿತ, ಇಂದ್ರಾವತಿ ಮತ್ತು ಸಬರಿ.


✧.ಕರ್ನಾಟಕದಲ್ಲಿ ತನ್ನ ಆಯಕಟ್ಟನ್ನು ಹೊಂದಿರುವ ಮಾಂಜ್ರ ಸೀಳುನದಿಯ ವಿವರ ಕೆಳಗಿನ ಪಟ್ಟಿಯಲ್ಲಿ ತಿಳಿಸಲಾಗಿದೆ.

● ಉಪನದಿ:— ಮಾಂಜ್ರ

●.ಜಲಾನಯನ ಪ್ರದೇಶ:—15,667 ಚದರ ಕಿ ಮೀ

● ಮೂಲ:— ಮಹಾರಾಷ್ಟ್ರ,

● ಮೂಲದ ಎತ್ತರ (Origin , Altitude):— 4,406 ಚದರ ಕಿ ಮೀ

● ಒಳ-ಉಪನದಿ ರಾಜ್ಯಗಳು:

—ಮಹಾರಾಷ್ಟ್ರ, ಕರ್ನಾಟಕ ಮತ್ತು ಆಂದ್ರಪ್ರದೇಶ
— ಕರ್ನಾಟಕ, 10,772 ಚದರ ಕಿ ಮೀ
— ಆಂದ್ರಪ್ರದೇಶ ಬಾಲ ಘಾಟ್ ಬೆಟ್ಟಗಳ ಸಾಲು, 823 ಮೀ. ತಿರಿನ, ಕರಂಜ, ಹಲ್ ದಿ,ಲೆಂಡಿ ಮತ್ತು ಮನ್ನಾರ್


Ⅱ.ಪಶ್ಚಿಮಕ್ಕೆ ಹರಿವ ನದಿಗಳ ಏರ್ಪಾಟು:

✧.ಅರಬ್ಬಿ ಕಡಲತ್ತ ದಕ್ಷಿಣದಲ್ಲಿ, ಪಶ್ಚಿಮ ದಿಕ್ಕಿಗೆ ಬರುವ ಮುಂಗಾರಿಗೆ ಪಶ್ಚಿಮ ಘಟ್ಟಗಳು ಒಂದು ರೀತಿಯ ಅಡ್ಡಗೋಡೆಯಾಗಿ, ಪಶ್ಚಿಮದಲ್ಲಿ ಅತಿ ಹೆಚ್ಚು ಮಳೆಗೆ ಕಾರಣವಾಗಿವೆ ಹಾಗು ಜೂನ್ ನಿಂದ ಸೆಪ್ಟೆಂಬರ‍ವರೆಗಿನ ಮಳೆಗಾಲದಲ್ಲಿ ನೂರಕ್ಕೆ ತೊಂಬತ್ತರಷ್ಟು ಮಳೆಯನ್ನು ತನ್ನದಾಗಿಸಿಕೊಳ್ಳುತ್ತವೆ.

✧.ಪಶ್ಚಿಮ ಘಟ್ಟದಲ್ಲಿ ಹುಟ್ಟುವ ನದಿಗಳು ಸುಮಾರು 400 ರ ರಿಂದ 1600 ಮೀ. ಎತ್ತರದಲ್ಲಿ ಉತ್ತರ ಘಟ್ಟಗಳ ತುದಿಗೆ ಹತ್ತಿರವಾಗಿ ಕಡಲ ಮೇಲ್ಮಟ್ಟದಲ್ಲಿ ಹುಟ್ಟುತ್ತವೆ.

✧.ಹೀಗೆ ಹುಟ್ಟುವ ನದಿಗಳು ಪಶ್ಚಿಮ ದಿಕ್ಕಿನಲ್ಲಿ ಹರಿದು ಸುಮಾರು 50 ರಿಂದ 300 ಕಿ.ಮೀ. ದೂರದಲ್ಲಿ ಅರಬ್ಬಿ ಕಡಲನ್ನು ಸೇರುತ್ತವೆ. ನದಿಗಳು ತನ್ನ ಮೆಲ್ಬಾಗದಲ್ಲಿ ಅತಿಹೆಚ್ಚು ಕಡಿದಾಗಿದ್ದು (steep), ನಡುಭಾಗದಲ್ಲಿ ಕಡಿಮೆ ಇರುತ್ತವೆ. ಕೇವಲ ಕಡಲ ಹತ್ತಿರ ಸಮನಾದ ನೆಲವನ್ನು (flat gradient) ಮತ್ತು ಹೊನಲು ಹರಿದ ಸಮತಲ ಬೂಮಿಯನ್ನು (flood plain) ಕಾಣಬಹುದು.



★.ಪಶ್ಚಿಮಕ್ಕೆ ಹರಿಯುವ ಇನ್ನಷ್ಟು ನದಿಗಳು, ಉಪನದಿಗಳು ಮತ್ತು ಇವುಗಳು ಹರಿವ ರಾಜ್ಯಗಳನ್ನು ಕೆಳಗಿನ ಪಟ್ಟಿಯಲ್ಲಿ ಕಾಣಬಹುದು.

1.ಮಹಾದಾಯಿ/ಮಾಂಡವಿ ನದಿ.

●.ಜಲಾನಯನ ಪ್ರದೇಶ:— 2,032 ಚದರ ಕಿ.ಮೀ.

●.ಮೂಲ:— ಪಡುವಣ ಗಟ್ಟದ ಬೆಳಗಾವಿ ಜಿಲ್ಲೆ

●.ಮೂಲದ ಎತ್ತರ:— 600 ಮೀ.

●.ನದಿಯ ಉದ್ದ:— 87 ಕಿ.ಮೀ.

●.ಒಳ –ಉಪನದಿಗಳು:— ಮದೇರಿ

●.ರಾಜ್ಯ:— ಕರ್ನಾಟಕ, ಗೋವ


2.ಕಾಳಿ ನದಿ.
●.ಜಲಾನಯನ ಪ್ರದೇಶ:— 4,188 ಚದರ ಕಿ.ಮೀ.

●.ಮೂಲ:— ಪಡುವಣ ಗಟ್ಟದ ಬಿಡಿ ಹಳ್ಳಿ

●.ಮೂಲದ ಎತ್ತರ:— 600 ಮೀ.

●.ನದಿಯ ಉದ್ದ:— 153ಕಿ.ಮೀ.

●.ಒಳ –ಉಪನದಿಗಳು:— ಪಂಡರಿ, ತಟ್ಟಿ ಹಳ್ಳ ಮತ್ತು ನಾಗಿ

●.ರಾಜ್ಯ:— ಕರ್ನಾಟಕ


3.ಗಂಗವಲ್ಲಿ (ಬೆಡ್ತಿ) ನದಿ.

●.ಜಲಾನಯನ ಪ್ರದೇಶ:— 3,574 ಚದರ ಕಿ.ಮೀ.

●.ಮೂಲ:— ಪಡುವಣ ಘಟ್ಟದ ತೆಂಕಣ ದಾರವಾಡ

●.ಮೂಲದ ಎತ್ತರ:  700 ಮೀ.

●.ನದಿಯ ಉದ್ದ: 152ಕಿ.ಮೀ.

●.ರಾಜ್ಯ:  ಕರ್ನಾಟಕ


4.ಅಘನಾಶಿನಿ (ತದ್ರಿ) ನದಿ.

●.ಜಲಾನಯನ ಪ್ರದೇಶ:  1,330 ಚದರ ಕಿ.ಮೀ.

●.ಮೂಲ:  ಸಿರಸಿ ಹತ್ತಿರದ ಪಡುವಣ ಘಟ್ಟಗಳು

●.ಮೂಲದ ಎತ್ತರ: 500 ಮೀ.

●.ನದಿಯ ಉದ್ದ: 84 ಕಿ.ಮೀ.

●.ರಾಜ್ಯ: ಕರ್ನಾಟಕ


5.ಶರಾವತಿ ನದಿ.

●.ಜಲಾನಯನ ಪ್ರದೇಶ: 3,592 ಚದರ ಕಿ.ಮೀ.

●.ಮೂಲ: ಶಿವಮೊಗ್ಗ ಜಿಲ್ಲೆಯ ಹುಮಾಚ ಪಡುವಣ ಘಟ್ಟಗಳು

●.ಮೂಲದ ಎತ್ತರ: 700 ಮೀ.

●.ನದಿಯ ಉದ್ದ: 122 ಕಿ.ಮೀ.

●.ರಾಜ್ಯ: ಕರ್ನಾಟಕ


6.ಚಕ್ರ ನದಿ.

●.ಜಲಾನಯನ ಪ್ರದೇಶ: 336 ಚದರ ಕಿ.ಮೀ.

●.ಮೂಲ: ಮೂಡಣದ ಕೊಡಚಾದ್ರಿ, ಶಿವಮೊಗ್ಗ ಜಿಲ್ಲೆ

●.ಮೂಲದ ಎತ್ತರ: 600 ಮೀ.

●.ನದಿಯ ಉದ್ದ: 52 ಕಿ.ಮೀ.

●.ಒಳ –ಉಪನದಿಗಳು: ಕೊಲ್ಲೂರು

ರಾಜ್ಯ: ಕರ್ನಾಟಕ


7.ವರಾಹಿ (ಹಲದಿ) ನದಿ.

●.ಜಲಾನಯನ ಪ್ರದೇಶ: 759 ಚದರ ಕಿ.ಮೀ.

●.ಮೂಲ: ಕವಲೆದುರ್ಗ, ಶಿವಮೊಗ್ಗ ಜಿಲ್ಲೆ

●.ಮೂಲದ ಎತ್ತರ: 600 ಮೀ.

●.ನದಿಯ ಉದ್ದ: 66 ಕಿ.ಮೀ.

●.ರಾಜ್ಯ: ಕರ್ನಾಟಕ


8.ನೇತ್ರಾವತಿ ನದಿ.

●.ಜಲಾನಯನ ಪ್ರದೇಶ: 3,222 ಚದರ ಕಿ.ಮೀ.

●.ಮೂಲ: ತೆಂಕಣ ಕನ್ನಡದ ಬೆಳ್ಳರಾಯನ ದುರ್ಗ

●.ಮೂಲದ ಎತ್ತರ: 1000ಮೀ.

●.ನದಿಯ ಉದ್ದ: 103 ಕಿ.ಮೀ.

●.ಒಳ –ಉಪನದಿಗಳು: ಗುಡಿಹೊಳೆ, ಕುಮಾರದಾರ ಮತ್ತು ಶಿಸಿಯ ಹೊಳೆ

●.ರಾಜ್ಯ: ಕರ್ನಾಟಕ


9.ಬರಪೊಳೆ (ವಾಲಪಟ್ಟಣ) ನದಿ.

●.ಜಲಾನಯನ ಪ್ರದೇಶ: 1,867 ಚ.ಕಿ.ಮೀ

●.ಮೂಲ:  ಕೊಡಗಿನ ಬ್ರಮ್ಹಗಿರಿ ಘಟ್ಟದ ಕಾಡು

●.ಮೂಲದ ಎತ್ತರ:  900 ಮೀ.

●.ನದಿಯ ಉದ್ದ: 110 ಕಿ.ಮೀ.

●.ರಾಜ್ಯ: ಕರ್ನಾಟಕ ಮತ್ತು ಕೇರಳ.


*** ಉಳಿದದ್ದನ್ನು  ಮಂದುವರೆಯುವುದು.

No comments:

Post a Comment