☀.'ಎಬೋಲಾ' (Ebola) ಅಂದರೇನು ? ಇದು ಹೇಗೆ ಹರಡುತ್ತದೆ? ಪ್ರಸ್ತುತ ಭಾರತದಲ್ಲಿ ಎಬೋಲ ರೋಗದ ಸ್ಥಿತಿ-ಗತಿ ಕುರಿತು ಬರೆಯಿರಿ.
(What do you mean by 'Ebola'? How it spreads ? Write about the present status of the Ebola disease in India)
━━━━━━━━━━━━━━━━━━━━━━━━━━━━━━━━━━━━━━━━━━━━━
♦.ಸಾಮಾನ್ಯ ವಿಜ್ಞಾನ.
ಪಶ್ಚಿಮ ಆಪ್ರಿಕಾದಲ್ಲಿ (West Africa) ಈಗಾಗಲೇ ಸಾವಿರಾರು ಮಂದಿಯ ಪ್ರಾಣ ತೆಗೆದುಕೊಂಡು ಜಗತ್ತನ್ನು ತಲ್ಲಣಗೊಳಿಸಿದೆ ಎಬೋಲ ವೈರಸ್ (Ebola virus). ಬಾರತದಲ್ಲಿ ಎಬೋಲಾ ಹರಡಿರುವುದು ಇನ್ನೂ ಗಟ್ಟಿಯಾಗಿಲ್ಲವಾದರೂ, ಈ ಕುರಿತ ಅಂಜಿಕೆ ಎಲ್ಲೆಡೆ ಮನೆಮಾಡಿದೆ. ಎಬೋಲಾ ತಡೆಗಟ್ಟಲು ಯಾವುದೇ ಮದ್ದು ಇಲ್ಲದಿರುವುದು ಜಗತ್ತಿನೆಲ್ಲೆಡೆ ಆತಂಕಕ್ಕೆ ಕಾರಣವಾಗಿದೆ. ಮುಂತಾದವುಗಳ ಕುರಿತು ಈ ಬರಹದಲ್ಲಿ ತಿಳಿಯೋಣ.
— ಮನುಷ್ಯರು ಹಾಗು ಮನುಷ್ಯ ಜಾತಿಗೆ ಸೇರುವ ಕೋತಿಗುಂಪುಗಳನ್ನು (primates) ಕಾಡುವ ಈ ಬೇನೆಯನ್ನು ಎಬೋಲ ವೈರಸ್ ಗಳು (Ebola virus) ಉಂಟುಮಾಡುತ್ತವೆ. ಈ ವೈರಸ್ ವನ್ನು ಮೊದಲ ಬಾರಿಗೆ 1976 ರಲ್ಲಿ ಸುಡಾನ್ (ಈಗ ದಕ್ಷಿಣ ಸುಡಾನ್) ಹಾಗು ಕಾಂಗೋ ನಾಡುಗಳಲ್ಲಿ ಗುರುತಿಸಲಾಯಿತು. ಸಿಡಿಯುವಿಕೆ (outbreak) ಬಗೆಯಲ್ಲಿ ಹರಡುವ ಈ ವೈರಸ್, ಹೆಚ್ಚಾಗಿ ಉಷ್ಣವಲಯದ (tropical) ಭಾಗಗಳಲ್ಲಿ ಕಾಣಿಸಿಕೊಳ್ಳುತ್ತವೆ.
✧.ವಿಶ್ವ ಆರೋಗ್ಯ ಸಂಸ್ಥೆಯ (World Health Organization-WHO) ಮಾಹಿತಿಯ ಪ್ರಕಾರ 1976 ರಿಂದ 2013 ರವರೆಗೆ ಎಬೋಲ 1,716 ಮಂದಿಗೆ ತಗುಲಿತ್ತು.
ಹಿಂದೆಂದಿಗಿಂತಲೂ ದೊಡ್ಡದಾದ ಎಬೋಲಾ ಈಗ ಪಶ್ಚಿಮ ಆಪ್ರಿಕಾದ ಗಿನಿಯ (Guinea),ಸಿಯೆರ್ರ ಲಿಯೋನೆ (Sierra Leone) ಹಾಗು ನೈಜೀರಿಯ (Nigeria) ನಾಡುಗಳನ್ನು ಬಾದಿಸುತ್ತಿದೆ. 2014 ಆಗಸ್ಟ್ 22 ರವರೆಗೆ 2,615 ಮಂದಿಗೆ ಎಬೋಲ ತಗುಲಿದ್ದು, ಅವರಲ್ಲಿ 1,427 ಮಂದಿ ಸತ್ತಿರುವುದಾಗಿ ವರದಿಯಾಗಿದೆ.
★ ಹರಡುವ ಬಗೆ:
✧.ಎಬೋಲಾ ಮೊಟ್ಟಮೊದಲಿಗೆ ಬಾವಲಿಗಳಲ್ಲಿ ಕಂಡುಬಂದಿದ್ದಾಗಿ ತಿಳಿದುಬಂದಿದೆ. ಎಬೋಲ ಸೋಂಕು ತಗುಲಿದ ಪ್ರಾಣಿಗಳ ನೆತ್ತರು ಇಲ್ಲವೇ ಇನ್ಯಾವುದೇ ಮೈ ಹರಿಕಗಳು (body fluids) ಮನುಷ್ಯನನ್ನು ಸೋಕಿದಾಗ, ಎಬೋಲ ವೈರಸ್ ಗಳು ಮನುಷ್ಯರಲ್ಲಿ ಹರಡುತ್ತವೆ.
✧.ಆಪ್ರಿಕಾದ ನಾಡುಗಳಲ್ಲಿ ಎಬೋಲದಿಂದ ಸತ್ತ ಹಣ್ಣು ಬಾವಲಿ (fruit bat), ಚಿಂಪಾಂಜಿ, ಗೊರಿಲ್ಲ, ಕೋತಿ, ಜಿಂಕೆ ಇಲ್ಲವೇ ಮುಳ್ಳುಹಂದಿಗಳನ್ನು ಮನುಷ್ಯರು ಮುಟ್ಟುವ ಇಲ್ಲವೇ ಒಪ್ಪ ಮಾಡುವುದರಿಂದ ಎಬೋಲ ವೈರಸ್ ಹರಡಬಹುದೆಂದು ಎಣಿಸಲಾಗಿದೆ.
✧.ವೈರಸ್ ದ ಸೋಂಕು ಪ್ರಾಣಿಯಿಂದ ಮನುಷ್ಯನಿಗೆ ತಗುಲಿದ ಮೇಲೆ, ಬೇನೆಬಿದ್ದ ಮನುಷ್ಯರ ನೆತ್ತರು ಇಲ್ಲವೆ ಇನ್ಯಾವುದೇ ಮೈ ಗಂಧಗಳು (body fluids) ಮತ್ತೊಬ್ಬ ಮನುಶ್ಯನಿಗೆ ತಗುಲಿದರೆ ಸೋಂಕು ಹರಡುತ್ತದೆ.
✧.ಸೋಂಕು ತಗುಲಿದ ಗಂಡಸು ತನ್ನ ವೀರ್ಯದ (semen) ಮೂಲಕ ಎರಡು ತಿಂಗಳುಗಳವರೆಗೆ ಎಬೋಲ ವೈರಸ್ ವನ್ನು ಹರಡಲು ಸಾದ್ಯ.
✧.ಈ ಬಾರಿ ಕಂಡುಬರುತ್ತಿರುವ ಎಬೋಲಾ ಮೊದಲಿಗೆ ಆಪ್ರಿಕಾದಲ್ಲಿ 2 ವರ್ಷದ ಮಗುವಲ್ಲಿ ಕಾಣಿಸಿಕೊಂಡಿತು. ಆಮೇಲೆ ಆ ಮಗುವಿನ ತಾಯಿ ಮತ್ತು 3 ವರ್ಷದ ತಂಗಿಗೆ ಹರಡಿತು. ಅಲ್ಲಿಂದ ಆಪ್ರಿಕಾದ ಹಲವು ನಾಡುಗಳಿಗೆ ಮತ್ತು ಎಬೋಲಾದಿಂದ ಬಳಲುತ್ತಿರುವ ಮಂದಿಗೆ ಆರೈಯ್ಕೆ ನೀಡಿದ ಡಾಕ್ಟರ್, ನರ್ಸ್ ಗಳಿಗೂ ತಗುಲಿದ್ದು ವರದಿಯಾಗಿದೆ.
★ ಚಿಹ್ನೆಗಳು ಮತ್ತು ರೋಗಲಕ್ಷಣಗಳು (signs & symptoms):
✧.ಎಬೋಲ ವೈರಸ್ ಗಳು ಮನುಷ್ಯರ ಮಯ್ಯನ್ನು ಹೊಕ್ಕಿದ ಮೇಲೆ, ಮನುಷ್ಯರನ್ನು ಕಾಡಲು ಎರಡು ದಿನಗಳಿಂದ ಮೂರು ವಾರಗಳು ಬೇಕಾಗಬಹುದು.
✧.ಈ ಬೇನೆಯಲ್ಲಿ ಕಂಡುಬರುವ ಕುರುಹುಗಳೆಂದರೆ (symptoms) ಜ್ವರ, ಗಂಟಲು ನೋವು, ಮೈ ನೋವು ಹಾಗು ತಲೆನೋವು. ವಾಂತಿ, ಬೇದಿ, ಗಂದೆಗಳ (rashes) ಜೊತೆಗೆ ಲೀವರ್ (liver) ಹಾಗು ಕಿಡ್ನಿಗಳ (kidney) ಎಂದಿನ ಕೆಲಸವು ಇಳಿಮುಕವಾಗುತ್ತದೆ.
✧. ಲೀವರ್ ಹಾಗು ಕಿಡ್ನಿಗಳ ಕೆಡುವುದರಿಂದ ಮಯ್ ಮೇಲೆ ಹಾಗು ಮೈ ಒಳಗೆ ರಕ್ತ ಸೋರಿಕೆಯಾಗುತ್ತದೆ.
★ ಎಬೋಲ ರೋಗವನ್ನು ಕಂಡುಹಿಡಿಯುವ ಬಗೆ (diagnosis):
1) ಎಬೋಲದಲ್ಲಿ ಕಾಣಿಸುವ ಬೇನೆಯ ಕುರುಹುಗಳು ಮಲೇರಿಯ (malaria), ಟಯಪಾಯ್ಡ್ ಜ್ವರ (typhoid fever), ಪ್ಲೇಗ್ (plague), ಕಾಲರ (cholera) ಮುಂತಾದ ಬೇನೆಗಳಲ್ಲಿಯೂ ಇರುತ್ತವೆ.
ಮೊದನೆಯದಾಗಿ, ಸೋಂಕು ತಗುಲಿದ ಮನುಷ್ಯರಲ್ಲಿ ಕಂಡುಬರುತ್ತಿರುವ ಬೇನೆಯ ಕುರುಹುಗಳು ಕಾಣಿಸಲು ಈ ಬೇನೆಗಳು ಕಾರಣವಲ್ಲ ಎಂಬುವುದನ್ನು ಗೊತ್ತು ಮಾಡಿಕೊಳ್ಳುವುದು.
2) ಬೇನೆಯನ್ನು ಕಂಡುಹಿಡಿಯುವ ಎರಡನೆಯ ಹೆಜ್ಜೆಯಾಗಿ, ಕಾಡುತ್ತಿರುವ ಬೇನೆಯು ಎಬೋಲ ಎಂದು ಗಟ್ಟಿ ಮಾಡಿಕೊಳ್ಳಲು, ರೋಗದಿಂದ ಬಳಲುತ್ತಿರುವವರ ನೆತ್ತರನ್ನು ಎಬೋಲ ವೈರಸ್ ದ ಪ್ರತಿಕಾಯಗಳು (antibodies), ಆರ್.ಎನ್.ಎ (RNA) ಇಲ್ಲವೆ ಎಬೋಲ ವೈರಸ್ ಗಳಿಗಾಗಿ ಒರೆಹಚ್ಚಲಾಗುತ್ತದೆ.
★ ಎಬೋಲ ರೋಗವನ್ನು ತಡೆಯುವ ಬಗೆ:
1) ವೈರಸ್ ಗಳು ಪ್ರಾಣಿಗಳಿಂದ ಮನುಷ್ಯರಿಗೆ ಹರಡುವುದನ್ನು ತಡೆಯವುದು.
—ನಮ್ಮ ಸುತ್ತಮುತ್ತಲಿನ ಪ್ರಾಣಿಗಳಲ್ಲಿ, ಈ ಸೋಂಕು ಇರುವುದರ ಬಗ್ಗೆ ಹುಡುಕಾಟ ನಡೆಸುವುದು. ಒರೆನೋಡಿದ ಪ್ರಾಣಿಗಳಲ್ಲಿ, ಈ ಸೋಂಕು ಇದೆ ಎಂದಾದರೆ, ಅವುಗಳನ್ನು ಸರಿಯಾದ ಬಗೆಯಲ್ಲಿ ಕೊಲ್ಲುವುದು ಹಾಗು ಕೊಂದ ಪ್ರಾಣಿಯನ್ನು ವೈರಸ್ ಹರಡದಂತೆ ಹೂಳುವುದು ಇಲ್ಲವೆ ಸುಡುವುದು.
2) ಬೇನೆಗೆ ಒಳಗಾದ ರೋಗಿಯ ರಕ್ತ ಹಾಗು ಇತರ ಮೈ ಗಂಧಗಳು (body fluid) ಮತ್ತೊಬ್ಬ ಆರೋಗ್ಯವಂತ ಮನುಷ್ಯನಿಗೆ ತಗುಲಿದಾಗ, ಎಬೋಲ ವೈರಸ್, ಆರೋಗ್ಯವಂತ ಮನುಷ್ಯನಿಗೆ ಹರಡುತ್ತದೆ.
—ಎಬೋಲದಿಂದ ಬಳಲುತ್ತಿರುವವರ ಹಾಗು ಆರೈಯ್ಕೆಯಲ್ಲಿ ತೊಡಗಿರುವವರ ಹಾಗು ಅವರ ಸುತ್ತಮುತ್ತ ಇರುವವರು ಬೇನೆ ಬಿದ್ದವರಿಂದ ಒಂದು ಮೀಟರಗಿಂತಲೂ ಕಡಿಮೆದೂರದಲ್ಲಿರುವಾಗ ವೈರಸ್ ದಿಂದ ಕಾಪನ್ನು (protection) ಒದಗಿಸುವಂತಹ ಉದ್ದನೆಯ ತೋಳಿನ ಬಟ್ಟೆಗಳನ್ನು (gown) ತೊಡುವುದು, ಕನ್ನಡಕ (protective goggles), ಹ್ಯಾಂಡ್ ಗ್ಲೋವ್ಸ್ (gloves) ಹಾಗು ಮುಖ ಮಾಸ್ಕಗಳನ್ನು (face mask) ತೊಡುವುದು, ಎಬೋಲದಿಂದ ನರುಳುತ್ತಿರುವವರನ್ನು ಆರೈಕೆಯ ಬಳಿಕ ಕೈಗಳನ್ನು ಸರಿಯಾಗಿ ತೊಳೆದುಕೊಳ್ಳುವುದು.
3) ಒರೆ ಹಚ್ಚಲು ಎಬೋಲ ರೋಗಿಯಿಂದ ತೆಗೆದುಕೊಳ್ಳುವ ಮೈ ಗಂಧಗಳು(body fluids) ಹಾಗು ಗೂಡುಕಟ್ಟುಗಳನ್ನು (tissue samples) ತೆಗೆದುಕೊಳ್ಳುವಾಗ, ಸಾಗಿಸುವಾಗ ಹಾಗು ಒರೆ ಹಚ್ಚುವಾಗ ಎಚ್ಚರವಹಿಸುವುದು.
ಎಬೋಲ ಬೇನೆಗೆ ಇದುವರೆಗೂ ಯಾವುದೇ ಗೊತ್ತುಪಡಿಸಿದ ಔಷಧ (medicine/treatment) ಇಲ್ಲದಿರುವುದರಿಂದ ಬೇನೆ ತಗುಲಿದವರಲ್ಲಿ 50-90%ರಶ್ಟು ಮಂದಿ ಸಾಯುತ್ತಾರೆ.
— ಎಬೋಲ ವೈರಸ್ ವನ್ನು ತಡೆಯುವ ಮದ್ದನ್ನು (vaccine) ತಯಾರಿಸುವಲ್ಲಿ ಎಲ್ಲಾ ಬಗೆಯ ಪ್ರಯತ್ನಗಳು ನಡೆಯುತ್ತಿವೆ. ಆದರೆ ಸದ್ಯದ ಮಟ್ಟಿಗೆ ಈ ಬೇನೆಗೆ ಯಾವುದೇ ಔಷಧ (medicine) ಹಾಗು ಮದ್ದು (vaccine) ಇಲ್ಲ.
4) ಎಬೋಲದಿಂದ ನರಳುತ್ತಿರುವವರಲ್ಲಿ ನೀರಿಳಿತ (dehydration) ಹೆಚ್ಚುವುದರಿಂದ, ಆರೈಕೆಯ ಬಾಗವಾಗಿ ಉಪ್ಪು-ಸಕ್ಕರೆಗಳನ್ನು ಹೊಂದಿರುವ ನೀರನ್ನು ಕುಡಿಸುವುದು ಹಾಗು ಬೇನೆಬಿದ್ದವರ ರಕ್ತಪರಿಚಲನೆಯ ವ್ಯವಸ್ಥೆ (circulatory system), ವಿದ್ಯುದ್ವಿಚ್ಛೇದ್ಯಗಳು (electrolytes) ಹೊಂದಿರುವ ರಕ್ತವನ್ನು ಏರಿಸುವುದು. ಇಂತಹ ಕೆಲವು ಆರೈಕೆಗಳನ್ನಷ್ಟೇ ಈಗ ಕಯ್ಗೊಳ್ಳಲಾಗುತ್ತಿದೆ.
★ ಭಾರತದಲ್ಲಿ ಎಬೋಲ ಸ್ಥಿತಿ-ಗತಿ:
✧.ಭಾರತ ಸರ್ಕಾರವು 2014 ಆಗಸ್ಟ್ ಎಂಟರಂದು, ಎಬೋಲದಿಂದ ಬಳಲುತ್ತಿರುವ ನಾಡುಗಳಿಂದ ಬರುವ ಜನರ ಮೇಲೆ ಕಣ್ಗಾವಲಿಗೆ ತನ್ನ ಎಲ್ಲಾ ವಿಮಾನ ನಿಲ್ದಾಣಗಳಲ್ಲಿ ಕಟ್ಟೆಚರಿಕೆಯನ್ನು ವಹಿಸುವ ವ್ಯವಸ್ತೆಯನ್ನು ಮಾಡಿದೆ.
✧.ಎಬೋಲ ಬೇನೆಗೆ ಸಂಬಂದಿಸಿದಂತೆ ಇರಬಹುದಾದ ಬೇನೆ ಕುರುಹುಗಳು, ಪಯಣಿಗರು ಬರುತ್ತಿರುವ ನಾಡು ಹೀಗೆ ಎಬೋಲ ಸೋಂಕು ಇದ್ದಲ್ಲಿ, ಅದನ್ನು ಗುರುತಿಸುವ ಸಲುವಾಗಿ ಪಶ್ಚಿಮ ಆಪ್ರಿಕಾದ (Wester Africa) ನಾಡುಗಳಿಂದ ಬರುವ ಪಯಣಿಗರಿಂದ ಒಂದು ಅರ್ಜಿಯನ್ನು ತುಂಬಿಸಲಾಗುತ್ತಿದೆ.
✧.2014 ಆಗಸ್ಟ್ 26 ರಂದು ಲೈಬೀರಿಯಾದಲ್ಲಿ ನೆಲೆಸಿದ್ದ ಎಬೋಲಕ್ಕೆ ತುತ್ತಾಗಿರಬಹುದಾದ 112 ಮಂದಿ ಬಾರತದ ನಾಡಿಗರು ಮುಂಬಯಿ ಹಾಗು ಡೆಲ್ಲಿಗಳ ವಿಮಾನ ನಿಲ್ದಾಣವನ್ನು ತಲುಪಿದ್ದು, ಎಬೋಲ ವೈರಸ್ ಹರಡುವುದನ್ನು ತಡೆಯಲು, ಇವರನ್ನು ಉಳಿಸಿಕೊಳ್ಳಲು ಮುಂಬಯಿ ಹಾಗು ಡೆಲ್ಲಿಯ ಆಸ್ಪತ್ರೆಗಳಲ್ಲಿ (hospital) ಬೇರ್ಪಡಿತ (isolation) ಕೋಣೆಗಳಲ್ಲಿ ಇರಿಸಲಾಗಿದೆ.
— ಜಗತ್ತಿಗೆ ಸವಾಲೊಡ್ಡಿರುವ ಈ ಎಬೋಲಾ ವೈರಸ್ ತಡೆಗಟ್ಟುವ ಮುನ್ನೆಚ್ಚರಿಕೆಯ ಕೆಲಸಗಳು, ಇದನ್ನು ತೊಡೆದುಹಾಕಲು ಬೇಕಾಗಿರುವ ಮದ್ದಿನ ಅರಕೆಗಳು ಬಿರುಸಿನಿಂದ ಜಗತ್ತಿನೆಲ್ಲೆಡೆ ನಡೆಯುತ್ತಿವೆ, ಎಬೋಲಾ ಎದುರಿಸಲು ಜಗತ್ತು ಸಜ್ಜಾಗುತ್ತಿದೆ.
(ಕೃಪೆ: ಹೊನಲು)

No comments:
Post a Comment