"ಮನುಷ್ಯ ದೀಪವಾದರೂ ಆಗಬೇಕು, ಕನ್ನಡಿಯಾದರೂ ಆಗಬೇಕು. ಒಂದು ಬೆಳಕನ್ನು ಕೊಡುತ್ತದೆ ಮತ್ತೊಂದು ಅದನ್ನು ಪ್ರತಿಬಿಂಬಿಸುತ್ತದೆ. ಪ್ರತಿಯೊಬ್ಬರೂ ದೀಪ ಆಗದೇ ಹೋಗಬಹುದು ಆದರೆ ಕನ್ನಡಿ ಆಗಬಲ್ಲರು. ತಿಳಿದಿರುವ ಜ್ಞಾನವನ್ನು ಮತ್ತೊಬ್ಬರಿಗೆ ಹಂಚುವುದೇ ಜೀವನ.."—ಅರಿಸ್ಟಾಟಲ್
Showing posts with label ಭಾರತದ ಭೂಗೋಳ. Show all posts
Showing posts with label ಭಾರತದ ಭೂಗೋಳ. Show all posts

Sunday, 15 February 2015

☀.ಭಾರತದ ಬಂದರುಗಳು ಮತ್ತು ಅವುಗಳ ಪ್ರಮುಖ ಲಕ್ಷಣಗಳು: (Ports in India and their Salient Features)

☀.ಭಾರತದ ಬಂದರುಗಳು ಮತ್ತು ಅವುಗಳ ಪ್ರಮುಖ ಲಕ್ಷಣಗಳು:
(Ports in India and their Salient Features)

♦. ಭಾರತದ ಭೂಗೋಳ

━━━━━━━━━━━━━━━━━━━━━━━━━━━━━━━━━━━━━━━━━━━━━


●.ಬಂದರು ಎಂದರೇನು?

—ಹಡಗುಗಳು, ದೋಣಿಗಳು, ಮತ್ತು ಸರಕು ದೋಣಿಗಳು ಬಿರುಗಾಳಿಯ ಹವೆಯಿಂದ ಆಶ್ರಯ ಪಡೆಯುವ ಸ್ಥಳವಾಗಿದೆ ಅಥವಾ ಭವಿಷ್ಯದ ಬಳಕೆಗಾಗಿ ಸಂಗ್ರಹಿಸಲಾಗುತ್ತದೆ. ಬಂದರುಗಳು ನೈಸರ್ಗಿಕ ಅಥವಾ ಕೃತಕವಾಗಿರಬಹುದು.


●.ಕೃತಕ ಬಂದರುಗಳು ಎಂದರೇನು ?

—ಕೃತಕ ಬಂದರುಗಳನ್ನು ಸಾಮಾನ್ಯವಾಗಿ ಪೋರ್ಟ್‌ಗಳಾಗಿ ಬಳಕೆಗೆ ನಿರ್ಮಿಸಲಾಗುತ್ತದೆ.ಕೃತಕ ಬಂದರು ಉದ್ದೇಶಪೂರ್ವಕವಾಗಿ ನಿರ್ಮಿಸಿದ ಅಲೆತಡೆಗಳನ್ನು ಕಡಲಗೋಡೆಗಳನ್ನು ಅಥವಾ ಜೆಟ್ಟಿಗಳನ್ನು ಹೊಂದಿರುತ್ತದೆ.


●.ನೈಸರ್ಗಿಕ ಬಂದರುಗಳು ಎಂದರೇನು ?

 —ಭಾರತ ನೈಸರ್ಗಿಕ ಬಂದರು ಭೂರೂಪವಾಗಿದ್ದು, ನೀರಿನ ಸಂಗ್ರಹದ ಭಾಗವನ್ನು ರಕ್ಷಿಸಲಾಗಿದ್ದು, ಲಂಗರುದಾಣದ ಸೌಲಭ್ಯಕ್ಕೆ ಸಾಕಷ್ಟು ಆಳವಾಗಿದೆ. ಅಂತಹ ಅನೇಕ ಬಂದರುಗಳನ್ನು ಅಳಿವೆಗಳೆಂದು ಕರೆಯಲಾಗುತ್ತದೆ.


✧.ಭಾರತದಲ್ಲಿ ಜಲಮಾರ್ಗಗಳು ಪ್ರಾಧಿಕಾರವು ಭಾರತದ ಬಂದರುಗಳನ್ನು ಪ್ರಮುಖ, ಸಣ್ಣ ಮತ್ತು ಮಧ್ಯಂತರ ಬಂದರುಗಳೆಂದು ಮೂರು ವರ್ಗಗಳಾಗಿ ವಿಂಗಡಿಸುತ್ತದೆ.

✧.ಭಾರತವು ಸುಮಾರು 190 ಬಂದರುಗಳನ್ನು ಹೊಂದಿದ್ದು, 12 ಪ್ರಮುಖ ಮತ್ತು ಉಳಿದ ಎಲ್ಲಾ ಸಣ್ಣ ಮತ್ತು ಮಧ್ಯಂತರ ಬಂದರುಗಳಾಗಿ ಹೊಂದಿದೆ.


★.ಭಾರತದ ಪ್ರಮುಖ 12 ಬಂದರುಗಳು:


★.ಪೂರ್ವ ಕರಾವಳಿಯಲ್ಲಿ..

1.ಕಲ್ಕತ್ತಾ ಬಂದರು •—————• ಪಶ್ಚಿಮ ಬಂಗಾಳ (ಹಲ್ದಿಯಾ ಸೇರಿದಂತೆ)

2.ಪಾರಾದೀಪ ಬಂದರು •—————• ಒರಿಸ್ಸಾ.

3.ವಿಶಾಖಪಟ್ಟಣಂ ಬಂದರು •—————• ಆಂಧ್ರಪ್ರದೇಶ

4.ಚೆನ್ನೈ ಬಂದರು •—————• ತಮಿಳುನಾಡು

5.ಎನ್ನೋರ್ ಬಂದರು •—————• ತಮಿಳುನಾಡು

6.ಟುಟಿಕೋರಿನ್ ಬಂದರು •—————• ತಮಿಳುನಾಡು


★.ಪಶ್ಚಿಮ ಕರಾವಳಿಯಲ್ಲಿ ...

7.ಕೊಚ್ಚಿನ್ ಬಂದರು •—————• ಕೇರಳ

8.ನವ ಮಂಗಳೂರು ಬಂದರು •—————• ಕರ್ನಾಟಕ

9.ಮರ್ಮಗೋವ ಬಂದರು •—————• ಗೋವಾ

10.ಜವಾಹರ ಲಾಲ ನೆಹರು ಬಂದರು •—————• ಮಹಾರಾಷ್ಟ್ರ

11.ಮುಂಬಯಿ ಬಂದರು •—————• ಮಹಾರಾಷ್ಟ್ರ

12.ಕಾಂಡ್ಲಾ ಬಂದರು •—————• ಗುಜರಾತ್


★.ಪ್ರಮುಖ ಲಕ್ಷಣಗಳು: (Salient Features)

●. ಕೋಲ್ಕತಾ ಬಂದರು (ಹಲ್ದಿಯಾ ಸೇರಿದಂತೆ) (Kolkata Port (including Haldia)):
—ಕೋಲ್ಕತಾದ ಬಂಗಾಳ ಕೊಲ್ಲಿಯಿಂದ 128 ಕಿ.ಮೀ, ದೂರದಲ್ಲಿರುವ ಹೂಗ್ಲಿ ನದಿಯ ತೀರದಲ್ಲಿದೆ.
*ಇದು ಒಂದು ನದಿ ತೀರದ ಬಂದರಾಗಿದೆ.
•.ಕೋಲ್ಕತ್ತಾ ಬಂದರನ್ನು ಭಾರತದ ಚಹದ ಬಂದರು ಎಂದು ಕರೆಯಲಾಗುತ್ತಿದೆ.

●.ಹಾಲ್ಡಿಯಾ ಬಂದರು (Haldia) :
—ಕೊಲ್ಕತ್ತಾ ಬಂದರಿನ ಒತ್ತಡ ಕಡಿಮೆ ಮಾಡಲು ನಿರ್ಮಿಸಿರುವ ಕೃತಕ ಬಂದರಾಗಿದೆ.
ಕೋಲ್ಕತಾ ಬಂದರಿನ ವಿಪರೀತ ಹೂಳು ತುಂಬುವಿಕೆಯಿಂದಾಗುತ್ತಿದ್ದ ದೊಡ್ಡ ಹಡಗುಗಳು ಪ್ರವೇಶ ತಡೆಯನ್ನು ನಿವಾರಿಸಲು ಈ ಹಲ್ದಿಯಾ ಬಂದರನ್ನು ಅಭಿವೃದ್ಧಿಪಡಿಸಲಾಯಿತು.

●.ಪಾರದೀಪ್ ಬಂದರು (Paradip Port):
— ಒರಿಸ್ಸಾದ ಬಂಗಾಳ ಕೊಲ್ಲಿಯ ತೀರದಲ್ಲಿದೆ.
ಭಾರತವು ಇಲ್ಲಿಂದ ಜಪಾನ್ ಗೆ ಕಚ್ಚಾ ಕಬ್ಬಿಣವನ್ನು ರಫ್ತು ಮಾಡುತ್ತದೆ.

●.ವಿಶಾಖಪಟ್ಟಣಂ ಬಂದರು (Vishakhapatnam Port):
— ಇದು ಅತ್ಯಂತ ಆಳವಾದ ಬಂದರಾಗಿದ್ದು, ಆಂಧ್ರಪ್ರದೇಶದಲ್ಲಿದೆ.
 ಇದು ಭಿಲಾಯಿ ಮತ್ತು ರೂರ್ಕೆಲಾ ಪ್ರದೇಶಗಳ ಉಕ್ಕು ಉತ್ಪಾದನೆಗೆ ಸಂಬಂಧಿಸಿದಂತೆ ಕಾರ್ಯನಿರ್ವಹಿಸುತ್ತದೆ.

●.ಚೆನೈ ಬಂದರು (Chennai Port):
— ಹಳೆಯ ಕೃತಕ ಬಂದರು.
ಈ ಬಂದರು ದಟ್ಟಣೆಯನ್ನು ನಿರ್ವಹಿಸುವ ಸಾಮರ್ಥ್ಯದ ವಿಷಯದಲ್ಲಿ ಎರಡನೇ ಮುಂಬೈ ನಂತರ ಸ್ಥಾನದಲ್ಲಿದೆ.

●.ಎನ್ನೋರ್ ಬಂದರು (Ennore Port):
— ಇದನ್ನು 2001ರಲ್ಲಿ ಪ್ರಮುಖ ಬಂದರು ಎಂದು ಘೋಷಿಸಲಾಯಿತು.
 ಇದು ಖಾಸಗಿ (ಕಾರ್ಪೊರೇಟ್) ಸಹಭಾಗಿತ್ವದಲ್ಲಿರುವ ಮೊದಲ ಬಂದರಾಗಿದೆ.
ಉಷ್ಣ ಸ್ಥಾವರಕ್ಕೆ ಬೇಕಾದ ಕಲ್ಲಿದ್ದಲನ್ನು ತಮಿಳುನಾಡು ವಿದ್ಯುಚ್ಛಕ್ತಿ ಮಂಡಳಿ ಪವರ್ ಸ್ಟೇಷನ್ ಗೆ ಪೂರೈಸಲು ಈ ಬಂದರನ್ನು ಎಲ್ಲಾ ರೀತಿಯಿಂದ ಸುಸಜ್ಜಿತ ಆಧುನೀಕರಣಗೊಳಿಸಲಾಗಿದೆ.

●.ಟುಟಿಕೊರಿನ್ ಬಂದರು (Tuticorin Port):
— ಇದು ಪಾಂಡ್ಯ ರಾಜರ ಆಳ್ವಿಕೆಯಲ್ಲಿ ಅಸ್ತಿತ್ವಕ್ಕೆ ಬಂದಿತು.
ಇದು ಕೃತಕ ಆಳವಾದ ಸಮುದ್ರದ ಬಂದರನ್ನು ಹೊಂದಿದೆ.

●.ಕೊಚ್ಚಿನ್ ಬಂದರು (Cochin Port):
— ಇದು ಕೇರಳ ಕರಾವಳಿಯಲ್ಲಿರುವ ಉತ್ತಮವಾದ ನೈಸರ್ಗಿಕ ಬಂದರು.
ಚಹಾ, ಕಾಫಿ ಮತ್ತು ಮೆಣಸು ಪದಾರ್ಥಗಳ ರಫ್ತು ಹಾಗು ಪೆಟ್ರೋಲಿಯಂ ಮತ್ತು ರಸ ಗೊಬ್ಬರಗಳ ಆಮದನ್ನು ನಿಭಾಯಿಸುತ್ತದೆ.

●.ನವ ಮಂಗಳೂರು ಬಂದರು (New Mangalore Port):
— ಇದನ್ನು 'ಕರ್ನಾಟಕದ ದ್ವಾರ' ಎಂದು ಕರೆಯುತ್ತಾರೆ.
ಕುದುರೆಮುಖದಲ್ಲಿ ತೆಗೆಯುವ ಕಬ್ಬಿಣದ ಅದಿರಿನ ರಫ್ತು ನಿಭಾಯಿಸುತ್ತದೆ.

●.ಮರ್ಮಗೋವಾ ಬಂದರು (Marmugao Port) :
— ಮರ್ಮಗೋವಾ ಬಂದರು ಗೋವಾ ರಾಜ್ಯದ ಝವಾರಿ ಕೊಲ್ಲಿಯ ಪ್ರದೇಶದಲ್ಲಿದೆ.
ಇದು ನೌಕಾ ನೆಲೆಯನ್ನು ಹೊಂದಿದ್ದು, ಭಾರತದ ಪ್ರಮುಖ ಕಬ್ಬಿಣದ ಅದಿರಿನ ರಫ್ತಿಗೆ ಹೆಸರಾದ ಬಂದರಾಗಿದೆ.

●.ಮುಂಬೈ ಬಂದರು (Mumbai Port):
— ಇದು ಒಂದು ನೈಸರ್ಗಿಕ ಬಂದರು.
ಭಾರತದ ಹೊಸ ಅತಿ ಜನನಿಬಿಡ ಬಂದರಾಗಿದೆ.

●.ನವಸೇವಾ ಬಂದರು (Nhava Sheva) :
— ಇದನ್ನು ಮುಂಬೈ ಬಂದರು ಬಳಿ ಅಭಿವೃದ್ಧಿಪಡಿಸಲಾಗುತ್ತಿದೆ.
ಮುಂಬಯಿ ಬಂದರಿನ ಒತ್ತಡವನ್ನು ತಗ್ಗಿಸುವ ಉದ್ದೇಶದಿಂದ ನವಶೇವಾ ಬಂದರನ್ನು ನಿರ್ಮಿಸಲಾಗಿದೆ.

●. ಜವಾಹರಲಾಲ್ ನೆಹರು ಬಂದರು (Jawaharlal Nehru Port):
— ವಿಶ್ವದ ವೇಗವಾಗಿ ಬೆಳೆಯುತ್ತಿರುವ ಬಂದರುಗಳಲ್ಲಿ ಇದು 5 ಸ್ಥಾನದಲ್ಲಿದೆ

●.ಕಾಂಡ್ಲಾ ಬಂದರು (Kandla Port) :
— ಇದನ್ನು ಕರಾಚಿ ಬಂದರಿನ ವಿಭಜನೆಯ ನಂತರ ಪರ್ಯಾಯವಾಗಿ ಅಭಿವೃದ್ಧಿಪಡಿಸಲಾಯಿತು.
ಇದು ಒಂದು ಉಬ್ಬರವಿಳಿತದ ಬಂದರಾಗಿದ್ದು, ಮುಕ್ತ ವ್ಯಾಪಾರ ವಲಯವಾಗಿದೆ.
 ಇದು ಕಛ್ ಖಾರಿಯ ರಣ್ ಪ್ರದೇಶದ ಶಿರೋಭಾಗದಲ್ಲಿದೆ.


☀. ಭಾರತದ ಜಲ ಸಾರಿಗೆ ಮತ್ತು ದೇಶದ 101 ನದಿಗಳ ಜಲ ಮಾರ್ಗ ಯೋಜನೆ: (Water Transport of India and The country's 101 rivers waterways plan)

☀. ಭಾರತದ ಜಲ ಸಾರಿಗೆ  ಮತ್ತು  ದೇಶದ 101 ನದಿಗಳ ಜಲ ಮಾರ್ಗ ಯೋಜನೆ:
(Water Transport of India and The country's 101 rivers waterways plan)

♦. ಭಾರತದ ಭೂಗೋಳ


━━━━━━━━━━━━━━━━━━━━━━━━━━━━━━━━━━━━━━━━━━━━━

✧.ಭಾರತದ ಜಲ ಸಾರಿಗೆಯು ಅತ್ಯಂತ ಸಮರ್ಥ, ಕಡಿಮೆ ವೆಚ್ಚದ ಮತ್ತು ಪರಿಸರ ಸ್ನೇಹಿ ಸಾರಿಗೆಯಾಗಿದೆ. ಭಾರತೀಯ ಸಂಚಾರ ಯೋಗ್ಯ ಜಲಮಾರ್ಗಗಳು ನದಿಗಳು, ಕಾಲುವೆಗಳು, ಹಿನ್ನೀರು ಇತ್ಯಾದಿಗಳ ಮೂಲಕ ಕಂಡುಬರುತ್ತವೆ.

✧.ಆರ್ಥಿಕ ಪ್ರಗತಿಯ ವೇಗ ಹೆಚ್ಚಿಸಲು ದೇಶದ 101 ನದಿಗಳನ್ನು ಜಲ ಮಾರ್ಗಗಳಾಗಿ ಪರಿವರ್ತಿಸುವ ಮಹತ್ವಾಕಾಂಕ್ಷಿ ಯೋಜನೆಯನ್ನು ಕೇಂದ್ರ ಸರ್ಕಾರ ಹೊಂದಿದೆ.

✧.‘ಜಲ ಮಾರ್ಗಗಳ ನಿರ್ಮಾಣ ಸರ್ಕಾರದ ಪ್ರಮುಖ ಆದ್ಯತೆಯಾಗಿದ್ದು, ಜಲ ಮಾರ್ಗಗಳಾಗಿ ಪರಿವರ್ತಿಸಲು 101 ನದಿಗಳನ್ನು ಗುರುತಿಸಲಾಗಿದೆ. ಇದು ಅತ್ಯಂತ ಅಗ್ಗದ ಸಂಚಾರ ವ್ಯವಸ್ಥೆಯಾಗಲಿದೆ.

✧.ಯಾವುದೇ ನದಿಯನ್ನು ಜಲ ಮಾರ್ಗವಾಗಿ ಪರಿವರ್ತಿಸಲು ಅವಕಾಶ ನೀಡುವ ಮಸೂದೆಗೆ ಸಂಸತ್ತಿನ ಒಪ್ಪಿಗೆ ಬೇಕಾಗಿದೆ. ಈ ತನಕ ಸರ್ಕಾರ ಐದು ನದಿಗಳನ್ನು ಮಾತ್ರ ಜಲಮಾರ್ಗಗಳಾಗಿ ಗುರುತಿಸಿದೆ.

✧.ರಸ್ತೆ ಮತ್ತು ರೈಲು ಸಾರಿಗೆಗಿಂತ ಜಲ ಸಾರಿಗೆ ಅಗ್ಗ. ಜಲ ಸಾರಿಗೆ ತಗಲುವ ವೆಚ್ಚ ಕಿಲೋಮೀಟರ್‌ಗೆ 50 ಪೈಸೆ ಮಾತ್ರ. ಹಾಗಿದ್ದರೂ ಜಲ ಸಾರಿಗೆಯ ಅವಕಾಶಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಲಾಗಿಲ್ಲ.

✧.ಈ ಕ್ಷೇತ್ರದ ಅಭಿವೃದ್ಧಿಗೆ ಸರ್ಕಾರವು ಹಲವು ಕ್ರಮಗಳನ್ನು ಕೈಗೊಳ್ಳಲಿದೆ. ಜಲ ಮಾರ್ಗಗಳು ಆರ್ಥಿಕ ಅಭಿವೃದ್ಧಿಗೆ ಗಣನೀಯ ಕೊಡುಗೆ ನೀಡಲಿವೆ. ನದಿ, ಸರೋವರ, ಕಾಲುವೆ, ಖಾರಿಗಳು, ಹಿನ್ನೀರು ಇತ್ಯಾದಿಯನ್ನು ಒಳನಾಡು ಜಲಸಾರಿಗೆಗೆ ಬಳಸಿ ಕೊಳ್ಳಲಾಗುವುದು. ಇವುಗಳಲ್ಲಿ 14,500 ಕಿಲೋ ಮೀಟರ್‌ ಜಲ ಮಾರ್ಗ ಅಭಿವೃದ್ಧಿಗೆ ಅವಕಾಶ ಇದೆ.

✧.ಪ್ರಧಾನ ಮಂತ್ರಿ ಜಲ ಮಾರ್ಗ ಯೋಜನೆಯನ್ನು ಅನುಷ್ಠಾನಗೊಳಿಸಲು ಸರ್ಕಾರ ಈಗಾಗಲೇ ನಿರ್ಧಾರ ಕೈಗೊಂಡಿದೆ. ಭಾರತೀಯ ಒಳನಾಡು ಜಲಸಾರಿಗೆ ಪ್ರಾಧಿಕಾರವು (ಐಡಬ್ಲ್ಯುಎಐ) ಇತ್ತೀಚೆಗೆ ರಾಷ್ಟ್ರೀಯ ಜಲಮಾರ್ಗ 5 ಅಭಿವೃದ್ಧಿಗೆ ಒಡಿಶಾ ಸರ್ಕಾರ, ಪಾರಾದೀಪ್‌ ಬಂದರು ಮತ್ತು ಧಮ್ರಾ ಬಂದರುಗಳೊಂದಿಗೆ ಒಪ್ಪಂದ ಮಾಡಿಕೊಂಡಿದೆ.

✧.ರಾಷ್ಟ್ರೀಯ ಜಲಮಾರ್ಗ–5 ಅಭಿವೃದ್ಧಿಗೆ ಪೂರ್ವ ಕರಾವಳಿ ಕಾಲುವೆಯನ್ನು ಬ್ರಹ್ಮಿಣಿ ಮತ್ತು ಮಹಾನದಿ ಮುಖಜ ಭೂಮಿಯ ನದಿಗಳೊಂದಿಗೆ ಜೋಡಿಸಲಾಗಿದೆ.

✧.ದಕ್ಷಿಣ ಬಕಿಂಗ್‌­ಹ್ಯಾಮ್‌ ಕಾಲುವೆಯಲ್ಲಿ ಶೋಲಿಂಗ ನಲ್ಲೂರು–ಕಲ್ಲಪಕ್ಕಂ ರಾಷ್ಟ್ರೀಯ ಜಲಮಾರ್ಗ–4 ಮಂಜೂರಾಗಿದೆ. ರಾಷ್ಟ್ರೀಯ ಜಲ ಮಾರ್ಗ 1, 2 ಮತ್ತು 3ಈಗಾಗಲೇ ಕಾರ್ಯನಿರ್ವಹಿಸುತ್ತಿವೆ.

✧.ಇವುಗಳ ಒಟ್ಟು ಉದ್ದ 14,500 ಕಿ.ಮೀ. ಇದರಲ್ಲಿ 3700 ಕಿ.ಮೀ ಯಾಂತ್ರೀಕೃತ ದೋಣಿಗಳ ಸಂಚಾರವನ್ನು ಒಳಗೊಂಡಿದೆ.


★.ಭಾರತ ಸರ್ಕಾರವು ಈ ಕೆಳಗಿನ ರಾಷ್ಟ್ರೀಯ ಜಲಮಾರ್ಗಗಳು ಗುರುತಿಸಿದೆ.
(National Waterways of India)

●.NW 1:  ಗಂಗಾ–ಭಾಗೀರಥಿ–ಹೂಗ್ಲಿ ನದಿ ವ್ಯವಸ್ಥೆ •————• (ಅಲಹಾಬಾದ್‌ನಿಂದ— ಹಲ್ದಿಯಾ– 1620 ಕಿ. ಮೀ)

●.NW 2:  ಬ್ರಹ್ಮಪುತ್ರಾ ನದಿ •————• (ಧುಬ್ರಿಯಿಂದ— ಸಾದಿಯ– 891 ಕಿ.ಮೀ)

●.NW 3;  ಪಶ್ಚಿಮ ಕರಾವಳಿ ಕಾಲುವೆ •————• (ಕೋಟಪುರಂನಿಂದ—ಕೊಲ್ಲಂ) ಮತ್ತು ಉದ್ಯೋಗಮಂಡಲ್‌, ಚಂಪಕರ ಕಾಲುವೆಗಳು (205 ಕಿ. ಮೀ)

●.4.NW 4: ಗೋದಾವರಿ ಮತ್ತು ಕೃಷ್ಣಾ ನದಿಗಳಲ್ಲಿ •————• ಕಾಕಿನಾಡ–ಪುದುಚೇರಿ ಕಾಲುವೆಗಳು (1078 ಕಿ. ಮೀ)

●.NW 5: ಬ್ರಹ್ಮಿಣಿ, ಮಹಾನದಿ ಮುಖಜ ಭೂಮಿಯ ನದಿಗಳು ಸೇರಿದಂತೆ ಪೂರ್ವ ಕರಾವಳಿ ಕಾಲುವೆ (588 ಕಿ. ಮೀ).

Saturday, 4 October 2014

★ ಭಾರತದ ಭೂಗೋಳ: UNIT: IV] ಭಾರತದ ದ್ವೀಪಗಳು: (Indian Islands)


★ ಭಾರತದ ಭೂಗೋಳ:
(Indian Geography)


UNIT: IV] ಭಾರತದ ದ್ವೀಪಗಳು:
(Indian Islands)

★ ಮುಖಜಭೂಮಿಯ ದ್ವೀಪಗಳು:

*. ಗಂಗಾ, ಕೃಷ್ಣಾ ಮತ್ತು ಮಹಾನದಿ ದ್ವೀಪಗಳು:

*. ಗಂಗಾ ನದಿಯ ಮುಖಜಭೂಮಿಯಲ್ಲಿರುವ ದ್ವೀಪಗಳು: 'ನ್ಯೂಮರ್ ದ್ವೀಪಗಳು'

*. ಮುಖಜಭೂಮಿಯ ದ್ವೀಪಗಳಲ್ಲಿಯೇ ಅತೀ ದೊಡ್ಡ ದ್ವೀಪ: ನರ್ಮದಾ ನದಿ ಅಳಿವೆಯಲ್ಲಿರುವ 'ಆಲಿಯಾಬೆಟ್' (16 ಕಿ.ಮೀ.)

*. ಜಗತ್ತಿನ ದೊಡ್ಡದಾದ ನದಿ ದ್ವೀಪ:  ಆಸ್ಸಾಂನಲ್ಲಿ ಹರಿಯುವ ಬ್ರಹ್ಮಪುತ್ರ ನದಿಯಲ್ಲಿರುವ 'ಮಂಜೂಲಿ ದ್ವೀಪ'


★ ಸಾಗರಿಕ ದ್ವೀಪಗಳು:
*. ಭಾರತದಲ್ಲಿ ಎರಡು ಪ್ರಮುಖ ಸಾಗರಿಕ ದ್ವೀಪಸ್ತೋಮಗಳಿವೆ.

1) ಬಂಗಾಳಕೊಲ್ಲಿಯಲ್ಲಿರುವ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು.

2) ಅರಬ್ಬೀ ಸಮುದ್ರದಲ್ಲಿರುವ ಲಕ್ಷದ್ವೀಪಗಳು.

*. ಭಾರತದಲ್ಲಿ ಒಟ್ಟು 247 ದ್ವೀಪಗಳಿವೆ. ಅರಬ್ಬಿ ಸಮುದ್ರದಲ್ಲಿ 43 ಹಾಗೂ ಬಂಗಾಳಕೊಲ್ಲಿಯಲ್ಲಿ 204 ದ್ವೀಪಗಳಿವೆ.



★ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು:

*. ವಿಸ್ತೀರ್ಣ: 8,236,85 ಚ.ಕಿ.ಮೀ.

*. ಪೂರ್ವ-ಪಶ್ಚಿಮವಾಗಿ 58 ಕಿ.ಮೀ ಹಾಗೂ ಉತ್ತರ-ದಕ್ಷಿಣವಾಗಿ 590 ಕಿ.ಮೀ. ವಿಸ್ತರಿಸಿದೆ.

*. ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳನ್ನು 10⁰ ಕಾಲುವೆ (10⁰ Channel) ಯು ಪ್ರತ್ಯೇಕಿಸುವುದು.



★ ಅಂಡಮಾನ್ ದ್ವೀಪಗಳು:

*. ಈ ದ್ವೀಪಗಳು ಜ್ವಾಲಾಮುಖಿ ನಿರ್ಮಿತ ಗಟ್ಟಿಶಿಲೆಗಳಿಂದ ಕೂಡಿವೆ.

*. ನಾರ್ಕೊಂಡಂ ಮತ್ತು ಬ್ಯಾರನ್ ದ್ವೀಪಗಳು ಇಲ್ಲಿನ ಪ್ರಮುಖ ಜ್ವಾಲಾಮುಖಿ ದ್ವೀಪಗಳು.

*. ಬ್ಯಾರನ್ ದ್ವೀಪವು ಪೋರ್ಟ್ ಬ್ಲೇರ್ ನಿಂದ ಈಶಾನ್ಯದಲ್ಲಿದ್ದು 'ಭಾರತದ ಏಕಮೇವ ಸಜೀವ ಜ್ವಾಲಾಮುಖಿ ದ್ವೀಪ'ವಾಗಿದೆ.

*. ಅಂಡಮಾನ್ ದ್ವೀಪಗಳಲ್ಲಿನ 'ಮಧ್ಯ ಅಂಡಮಾನ್ ದ್ವೀಪವು 'ಭಾರತದಲ್ಲಿನ ಅತಿದೊಡ್ಡ ದ್ವೀಪವಾಗಿದೆ.

*. ದಕ್ಷಿಣ ಅಂಡಮಾನ್ ನಲ್ಲಿ ಪೋರ್ಟ್ ಬ್ಲೇರ್ ಇರುವುದರಿಂದ ದಕ್ಷಿಣ ಅಂಡಮಾನ್ ಅತೀ ಹೆಚ್ಚು ಜನಸಂಖ್ಯೆಯನ್ನು ಹೊಂದಿದ ದ್ವೀಪವಾಗಿದೆ.

*. ದಕ್ಷಿಣ ಅಂಡಮಾನ್ ಮತ್ತು ಚಿಕ್ಕ ಅಂಡಮಾನ್ ಗಳನ್ನು ಪ್ರತ್ಯೇಕಿಸುವ ಕಾಲುವೆ: ಡಂಕನ್ ಕಾಲುವೆ(Duncan Channel).

*. ಅಂಡಮಾನ್ ದ್ವೀಪಗಳಲ್ಲಿ ಅತಿ ಎತ್ತರದ ಶಿಖರ: 'ಸ್ಯಾಡಲ್ ಶಿಖರ'(738 ಮೀ.)

*. ಅಂಡಮಾನ್ ದ್ವೀಪಗಳಲ್ಲಿನ ಪ್ರಮುಖ ನದಿ: 'ರಾಂಗೋ ನದಿ'.



★ ನಿಕೋಬಾರ್ ದ್ವೀಪಗಳು:

*. ನಿಕೋಬಾರ್ ದ್ವೀಪಗಳು ಅಂಡಮಾನ್ ದ ದಕ್ಷಿಣಭಾಗದಲ್ಲಿವೆ.

*. ನಿಕೋಬಾರ್ ದ್ವೀಪಗಳಲ್ಲಿನ ಅತಿದೊಡ್ಡ ದ್ವೀಪ: 'ಗ್ರೇಟ್ ನಿಕೋಬಾರ್' (862 ಚ.ಕಿ.ಮೀ).

*. ಭಾರತದ ಭೂಪ್ರದೇಶದ ಅತ್ಯ೦ತ ದಕ್ಷಿಣದ ತುತ್ತತುದಿ 'ಇಂದಿರಾ ಪಾಯಿಂಟ್' ಇರುವುದು: 'ಗ್ರೇಟ್ ನಿಕೋಬಾರ್' ದ್ವೀಪದ ದಕ್ಷಿಣದ ತುದಿಯಲ್ಲಿನ 6⁰.45¹ ಉ.ಅಕ್ಷಾಂಶದಲ್ಲಿ.

*. ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ರಾಜಧಾನಿ: ಪೋರ್ಟ್ ಬ್ಲೇರ್ ,ದಕ್ಷಿಣ ಅಂಡಮಾನ್ ನಲ್ಲಿದೆ.



★ ಲಕ್ಷ ದ್ವೀಪಗಳು:

*. ರಾಜಧಾನಿ: ಕವರತ್ತಿ, ಕಣ್ಣಾನೂರು ದ್ವೀಪದಲ್ಲಿದೆ.

*.  ಇವು ಅರಬ್ಬೀ ಸಮುದ್ರದಲ್ಲಿರುವ ಹವಳದ ದಿಬ್ಬಗಳಾಗಿವೆ.

*. ಇವು 25 ದ್ವೀಪಗಳ ಸಮೂಹವಾಗಿದೆ.

*. ಭೂ ಮೇಲ್ಮೈ ಸಂಪೂರ್ಣವಾಗಿ ಸಮತಟ್ಟಾಗಿದ್ದು ಯಾವುದೇ ಬಗೆಯ ಬೆಟ್ಟಗುಡ್ಡಗಳು, ಝರಿಗಳು ಕಂಡುಬರುವುದಿಲ್ಲ.

*. ಪ್ರಮುಖವಾಗಿ ಎರಡು ದ್ವೀಪಸಮೂಹಗಳಿದ್ದು 1) ಉತ್ತರಕ್ಕೆ ಅಮಿನ್ ಡಿವಿ ದ್ವೀಪಗಳು ಮತ್ತು ದಕ್ಷಿಣಕ್ಕೆ ಕಣ್ಣಾನೂರು ದ್ವೀಪಗಳು.

*. ಲಕ್ಷ ದ್ವೀಪಗಳಲ್ಲಿನ ಅತಿದೊಡ್ಡ ದ್ವೀಪ: ಮಿನಿಕಾಯ್ (4.53 ಚ.ಕಿ.ಮೀ).

*. ಮಿನಿಕಾಯ್ ದ್ವೀಪಸಮೂಹವನ್ನು ಇತರ ಲಕ್ಷ ದ್ವೀಪಗಳಿಂದ ಪ್ರತ್ಯೇಕಿಸುವ ಕಾಲುವೆ: 9⁰ ಕಡಲ್ಗಾಲುವೆ (9⁰ Channel).

*. ಲಕ್ಷ ದ್ವೀಪಕ್ಕೆ ಸಮೀಪವಿರುವ ದೇಶ: ಮಾಲ್ಡೀವ್ಸ್(140 ಕಿ.ಮೀ).

to be continued...

Wednesday, 1 October 2014

★ ಭಾರತದ ಭೂಗೋಳ: UNIT: I] ಭೌಗೋಳಿಕ ಪರಿಚಯ: ..Continued.


★ ಭಾರತದ ಭೂಗೋಳ ★


UNIT: I] ಭೌಗೋಳಿಕ ಪರಿಚಯ:

★ ಭಾರತವು ಹಿಂದೂಮಹಾಸಾಗರದಲ್ಲಿ ಚಾಚಿಕೊಂಡಿರುವ ಪರ್ಯಾಯ ದ್ವೀಪ.

*. ಇದು ಏಷ್ಯಾ ಖಂಡದ ದಕ್ಷಿಣ ಭಾಗದಲ್ಲಿ ನೆಲೆಗೊಂಡ ಅತೀ ದೊಡ್ಡ ಪರ್ಯಾಯ ದ್ವೀಪ.

*. ಭೂಖಂಡದ ಉತ್ತರಾರ್ಧ ಗೋಳದ ಪೂರ್ವಭಾಗದಲ್ಲಿದೆ.


★ ಭಾರತವು 32,87,263 ಚ.ಕಿ.ಮೀ. ವಿಸ್ತೀರ್ಣ (ಇದು ಕಾಶ್ಮೀರದ ಪಾಕ್ ಆಕ್ರಮಿತ ಪ್ರದೇಶ (Pok) ಹಾಗೂ ಚೀನಾದಿಂದ ಆಕ್ರಮಿತವಾಗಿರುವ ಅಕ್ ಸಾಯ್ ಚೀನ್ (Aksai Chin) ಪ್ರದೇಶಗಳನ್ನು ಸೇರಿ)  ಹೊಂದಿದೆ.

— ಜಗತ್ತಿನ 7ನೇ ದೊಡ್ಡ ರಾಷ್ಟ್ರವಾಗಿದೆ.

— ಒಟ್ಟು ಭೂಭಾಗದಲ್ಲಿ ಭಾರತದ ಪಾಲು 2.47ರಷ್ಟು.


★ ಇದು ಉತ್ತರ ದಕ್ಷಿಣವಾಗಿ 3214 ಕಿ.ಮೀ ಇದೆ.

— ಉತ್ತರದ ಕೊನೆಯ ತುದಿ: ಇಂದಿರಾ ಕೋಲ್ (ಜಮ್ಮು ಕಾಶ್ಮೀರ).

— ದಕ್ಷಿಣದ ಕೊನೆಯ ಭೂ ತುದಿ: ಕನ್ಯಾಕುಮಾರಿ (ತಮಿಳುನಾಡು).


★ ಪೂರ್ವ ಪಶ್ಚಿಮವಾಗಿ 2933 ಕಿ.ಮೀ ಇದೆ.

— ಪೂರ್ವದ ಕೊನೆಯ ತುದಿ:  ಕಿಬಟಿ (ಅರುಣಾಚಲ ಪ್ರದೇಶ).

— ಪಶ್ಚಿಮದ ಕೊನೆಯ ತುದಿ:  ಗುಹಾರಮೋತಿ (ಗುಜರಾತ್).


★ ಭಾರತದ ಅತ್ಯಂತ ಎತ್ತರವಾದ ಪ್ರದೇಶ: K2.

— ಭಾರತದ ಅತ್ಯಂತ ತಗ್ಗಾದ ಪ್ರದೇಶ: ಕೇರಳದ ಕುಟ್ಟನಾಡ.

— ಭಾರತದ ದೊಡ್ದ ಸರೋವರ: ಚಿಲ್ಕಾ ಸರೋವರ.


★ ಭಾರತವು ರಾಜಕೀಯವಾಗಿ 29 ರಾಜ್ಯಗಳು, 6 ಕೇಂದ್ರಾಡಳಿತ ಪ್ರದೇಶಗಳು, 1  ದೇಶದ ರಾಜಧಾನಿ ಪ್ರದೇಶಗಳನ್ನು ಹೊಂದಿದೆ.

*. ಭೌಗೋಳಿಕವಾಗಿ ಅತೀ ದೊಡ್ದ ರಾಜ್ಯಗಳು:
ರಾಜಸ್ಥಾನ, ಮಧ್ಯಪ್ರದೇಶ, ಮಹಾರಾಷ್ಟ್ರ.

*. ಭೌಗೋಳಿಕವಾಗಿ ಚಿಕ್ಕ ರಾಜ್ಯಗಳು:
ಗೋವಾ, ಸಿಕ್ಕಿಂ, ತ್ರಿಪುರಾ, ನಾಗಾಲ್ಯಾಂಡ್.

*. ಜನಸಂಖ್ಯೆಯಲ್ಲಿ ಅತೀ ದೊಡ್ದ ರಾಜ್ಯ:
ಉತ್ತರಪ್ರದೇಶ.

*. ಜನಸಂಖ್ಯೆಯಲ್ಲಿ ಅತೀ ಚಿಕ್ಕ ರಾಜ್ಯ:
ಸಿಕ್ಕಿಂ.

*. ಜನಸಾಂದ್ರತೆಯಲ್ಲಿ ದೊಡ್ದ ರಾಜ್ಯ:
ಬಿಹಾರ.

*. ಜನಸಾಂದ್ರತೆಯಲ್ಲಿ ಚಿಕ್ಕ ರಾಜ್ಯ:
ಅರುಣಾಚಲ ಪ್ರದೇಶ.

*. ಭೌಗೋಳಿಕವಾಗಿ ದೇಶದ ಅತೀ ದೊಡ್ದ ಕೇಂದ್ರಾಡಳಿತ ಪ್ರದೇಶ:
ಅಂಡಮಾನ್ ಮತ್ತು ನಿಕೋಬಾರ್.

*. ಭೌಗೋಳಿಕವಾಗಿ ದೇಶದ ಅತೀ ಚಿಕ್ಕ ಕೇಂದ್ರಾಡಳಿತ ಪ್ರದೇಶ:
ಲಕ್ಷದ್ವೀಪ.

*. ದೇಶದ 7 ಕೇಂದ್ರಾಡಳಿತ ಪ್ರದೇಶಗಳಲ್ಲಿ 'ರಾಜ್ಯದ ಸ್ಥಾನಮಾನ'(Statehood) ಪಡೆದ ಕೇವಲ ಎರಡು ಕೇಂದ್ರಾಡಳಿತ ಪ್ರದೇಶಗಳು:
 1) ದೆಹಲಿ 2) ಪಾಂಡಿಚೇರಿ.

*. ಪ್ರಸ್ತುತ ಭಾರತದಲ್ಲಿರುವ ಒಟ್ಟು ಜಿಲ್ಲೆಗಳ ಸಂಖ್ಯೆ:
640 (2011 ರ ಜನಗಣತಿಯ ಪ್ರಕಾರ)

*. ಅತಿ ಹೆಚ್ಚು ಜಿಲ್ಲೆಗಳನ್ನು ಹೊಂದಿರುವ ರಾಜ್ಯ:
 ಉತ್ತರ ಪ್ರದೇಶ (71),

*. ಅತಿ ಕಡಿಮೆ ಜಿಲ್ಲೆಗಳನ್ನು ಹೊಂದಿರುವ ರಾಜ್ಯ:
 ಗೋವಾ (2).

*. ಭೌಗೋಳಿಕ ವಿಸ್ತಾರದಲ್ಲಿ ದೇಶದ ಅತೀ ದೊಡ್ದ ಜಿಲ್ಲೆ:
ಗುಜರಾತ್ ರಾಜ್ಯದ ಕಚ್ (Kachchh) ( 46,000 ಚ.ಕಿ.ಮೀ).

*. ಭೌಗೋಳಿಕ ವಿಸ್ತಾರದಲ್ಲಿ ದೇಶದ ಅತೀ ಚಿಕ್ಕ ಜಿಲ್ಲೆ:
ಪಾಂಡಿಚೇರಿಯ 'ಮಾಹೆ'(Mahe) (9 ಚ.ಕಿ.ಮೀ)

....Continued.