"ಮನುಷ್ಯ ದೀಪವಾದರೂ ಆಗಬೇಕು, ಕನ್ನಡಿಯಾದರೂ ಆಗಬೇಕು. ಒಂದು ಬೆಳಕನ್ನು ಕೊಡುತ್ತದೆ ಮತ್ತೊಂದು ಅದನ್ನು ಪ್ರತಿಬಿಂಬಿಸುತ್ತದೆ. ಪ್ರತಿಯೊಬ್ಬರೂ ದೀಪ ಆಗದೇ ಹೋಗಬಹುದು ಆದರೆ ಕನ್ನಡಿ ಆಗಬಲ್ಲರು. ತಿಳಿದಿರುವ ಜ್ಞಾನವನ್ನು ಮತ್ತೊಬ್ಬರಿಗೆ ಹಂಚುವುದೇ ಜೀವನ.."—ಅರಿಸ್ಟಾಟಲ್

Friday, 30 December 2016

☀ ಪಂಚಾಯತ ರಾಜ್ ವ್ಯವಸ್ಥೆಯಲ್ಲಿ ಸ್ಥಾಯಿ ಸಮಿತಿಗಳು (2015 ರ ತಿದ್ದು ಪಡಿಯನ್ವಯ ) (The Standing Committees of the Panchayati Raj system)

☀ ಪಂಚಾಯತ ರಾಜ್ ವ್ಯವಸ್ಥೆಯಲ್ಲಿ ಸ್ಥಾಯಿ ಸಮಿತಿಗಳು (2015 ರ ತಿದ್ದು ಪಡಿಯನ್ವಯ )
(The Standing Committees of the Panchayati Raj system)
─━━━━━═══════════━━━━━─••─━━━━━═══════════━━━━━─•
★  ಪಂಚಾಯತ್ ರಾಜ್
(Panchayat Raj)



●.I) ಗ್ರಾಮ ಪಂಚಾಯತಿ (ಪ್ರಕರಣ-61)
━━━━━━━━━━━━━━━━━━━━━━━

    ಗ್ರಾಮ ಪಂಚಾಯತಿಯ 3 ಸ್ಥಾಯಿ ಸಮಿತಿಗಳು ಈ ಕೆಳಗಿನಂತಿವೆ.

    1) ಸಾಮಾನ್ಯ ಸ್ಥಾಯಿ ಸಮಿತಿ :  ಗ್ರಾಮ ಪಂಚಾಯತಿಯ ಉಪಾಧ್ಯಕ್ಷರು ಈ ಸಮಿತಿಯ ಪದನಿಮಿತ್ತ ಅಧ್ಯಕ್ಷರಾಗಿರುತ್ತಾರೆ
    2) ಹಣಕಾಸು ಲೆಕ್ಕ ಪರಿಶೋಧನೆ ಮತ್ತು ಯೋಜನೆ ಸ್ಥಾಯಿ ಸಮಿತಿ : ಗ್ರಾಮ ಪಂಚಾಯತಿಯ ಅಧ್ಯಕ್ಷರು ಈ ಸಮಿತಿಯ ಪದನಿಮಿತ್ತ ಅಧ್ಯಕ್ಷರಾಗಿರುತ್ತಾರೆ
   3) ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ : SC/ST  ಪೈಕಿ ಒಬ್ಬರು ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿಯ ಅಧ್ಯಕ್ಷರಾಗಿರುತ್ತಾರೆ. ಒಬ್ಬರು ಮಹಿಳಾ ಸದಸ್ಯರನ್ನು ಹೊಂದಿರತಕ್ಕದ್ದು


   ವಿವರಣೆ : * ಪ್ರತಿಯೊಂದು ಸ್ಥಾಯಿ ಸಮಿತಿಯು ಅಧ್ಯಕ್ಷರನ್ನು ಒಳಗೊಂಡಂತೆ 3 ಕಿಂತ ಕಡಿಮೆ ಇಲ್ಲದ ಹಾಗು 05 ಕಿಂತ ಹೆಚ್ಚಿಲ್ಲದ ಸದಸ್ಯರನ್ನು ಒಳಗೊಂಡಿರತಕ್ಕದ್ದು
               * ಪ್ರತಿ ಸಮಿತಿಯ ಸದಸ್ಯರ ಪಧಾವಧಿಯು(ಕಾಲಾವಧಿಯು) 30 ತಿಂಗಳು ಆಗಿರುತ್ತದೆ

●.II) ತಾಲ್ಲೂಕು ಪಂಚಾಯತಿ
   ━━━━━━━━━━━━━━━━━━━━━━━

 ತಾಲ್ಲೂಕು ಪಂಚಾಯತಿಯ ಸ್ಥಾಯಿ ಸಮಿತಿಗಳು ಈ ಕೆಳಗಿನಂತಿವೆ.

    1) ಸಾಮಾನ್ಯ ಸ್ಥಾಯಿ ಸಮಿತಿ :  ತಾಲ್ಲೂಕು ಪಂಚಾಯತಿಯ ಉಪಾಧ್ಯಕ್ಷರು ಈ ಸಮಿತಿಯ ಪದನಿಮಿತ್ತ ಅಧ್ಯಕ್ಷರಾಗಿರುತ್ತಾರೆ
    2) ಹಣಕಾಸು ಲೆಕ್ಕ ಪರಿಶೋಧನೆ ಮತ್ತು ಯೋಜನೆ ಸ್ಥಾಯಿ ಸಮಿತಿ : ತಾಲ್ಲೂಕು ಪಂಚಾಯತಿಯ ಅಧ್ಯಕ್ಷರು ಈ ಸಮಿತಿಯ ಪದನಿಮಿತ್ತ ಅಧ್ಯಕ್ಷರಾಗಿರುತ್ತಾರೆ
   3) ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ : ಆಯ್ಕೆಯಾದ ಸದಸ್ಯರ ಪೈಕಿ ಒಬ್ಬರು ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿಯ ಅಧ್ಯಕ್ಷರಾಗಿರುತ್ತಾರೆ.


   ವಿವರಣೆ : * ಪ್ರತಿಯೊಂದು ಸ್ಥಾಯಿ ಸಮಿತಿಯು ಅಧ್ಯಕ್ಷರನ್ನು ಒಳಗೊಂಡಂತೆ  06 ಕಿಂತ ಹೆಚ್ಚಿಲ್ಲದ ಸದಸ್ಯರನ್ನು ಒಳಗೊಂಡಿರತಕ್ಕದ್ದು
               * ಪ್ರತಿ ಸಮಿತಿಯ ಸದಸ್ಯರ ಪಧಾವಧಿಯು(ಕಾಲಾವಧಿಯು) 30 ತಿಂಗಳು ಆಗಿರುತ್ತದೆ
               * ಒಬ್ಬ ತಾಲ್ಲೂಕು ಪಂಚಾಯತಿಯ ಸದಸ್ಯ ಒಂದಕ್ಕಿಂತ ಹೆಚ್ಚು ಸ್ಥಾಯಿ ಸಮಿತಿಯಲ್ಲಿ ಸದಸ್ಯನಾಗಿ ಸೇವೆ ಸಲ್ಲಿಸಲು ಅರ್ಹನಲ್ಲ.
              * ತಾಲ್ಲೂಕು ಪಂಚಾಯತಿಯ ಕಾರ್ಯ ನಿರ್ವಾಹಕ ಅಧಿಕಾರಿಯು ಪ್ರತಿಯೊಂದು ಸ್ಥಾಯಿ ಸಮಿತಿಯ ಕಾರ್ಯದರ್ಶಿಯಾಗಿರತಕ್ಕದ್ದು


●.III) ಜಿಲ್ಲಾ ಪಂಚಾಯತಿ
━━━━━━━━━━━━━━━━━━━━━━━

    ಜಿಲ್ಲಾ ಪಂಚಾಯತಿಯು ಈ ಕೆಳಗಿನ 05 ಸ್ಥಾಯಿ ಸಮಿತಿಗಳನ್ನು ಹೊಂದಿರುತ್ತದೆ.

    1) ಸಾಮಾನ್ಯ ಸ್ಥಾಯಿ ಸಮಿತಿ :  ಜಿಲ್ಲಾ ಪಂಚಾಯತಿಯ ಉಪಾಧ್ಯಕ್ಷರು ಈ ಸಮಿತಿಯ ಪದನಿಮಿತ್ತ ಅಧ್ಯಕ್ಷರಾಗಿರುತ್ತಾರೆ
    2) ಹಣಕಾಸು ಲೆಕ್ಕ ಪರಿಶೋಧನೆ ಮತ್ತು ಯೋಜನೆ ಸ್ಥಾಯಿ ಸಮಿತಿ : ಜಿಲ್ಲಾ ಪಂಚಾಯತಿಯ ಅಧ್ಯಕ್ಷರು ಈ ಸಮಿತಿಯ ಪದನಿಮಿತ್ತ ಅಧ್ಯಕ್ಷರಾಗಿರುತ್ತಾರೆ
   3) ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ : ಆಯ್ಕೆಯಾದ ಸದಸ್ಯರ ಪೈಕಿ ಒಬ್ಬರು ಈ ಸಮಿತಿಯ ಅಧ್ಯಕ್ಷರಾಗಿರುತ್ತಾರೆ.
   4) ಶಿಕ್ಷಣ ಮತ್ತು ಆರೋಗ್ಯ ಸಮಿತಿ : ಆಯ್ಕೆಯಾದ ಸದಸ್ಯರ ಪೈಕಿ ಒಬ್ಬರು ಈ ಸಮಿತಿಯ ಅಧ್ಯಕ್ಷರಾಗಿರುತ್ತಾರೆ.
   5) ಕೃಷಿ ಮತ್ತು ಕೈಗಾರಿಕಾ ಸಮಿತಿ : ಆಯ್ಕೆಯಾದ ಸದಸ್ಯರ ಪೈಕಿ ಒಬ್ಬರು ಈ ಸಮಿತಿಯ ಅಧ್ಯಕ್ಷರಾಗಿರುತ್ತಾರೆ.


   ವಿವರಣೆ : * ಪ್ರತಿಯೊಂದು ಸ್ಥಾಯಿ ಸಮಿತಿಯು ಅಧ್ಯಕ್ಷರನ್ನು ಒಳಗೊಂಡಂತೆ  07 ಕಿಂತ ಹೆಚ್ಚಿಲ್ಲದ ಸದಸ್ಯರನ್ನು ಒಳಗೊಂಡಿರತಕ್ಕದ್ದು
               * ಪ್ರತಿ ಸಮಿತಿಯ ಸದಸ್ಯರ ಪಧಾವಧಿಯು(ಕಾಲಾವಧಿಯು) 30 ತಿಂಗಳು ಆಗಿರುತ್ತದೆ
               * ಜಿಲ್ಲಾ ಪಂಚಾಯತಿಯ ಕಾರ್ಯ ನಿರ್ವಾಹಕ ಅಧಿಕಾರಿಯು ಸಾಮಾನ್ಯ ಸ್ಥಾಯಿ ಸಮಿತಿಯ ಪದನಿಮಿತ್ತ ಕಾರ್ಯದರ್ಶಿಯಾಗಿರತಕ್ಕದ್ದು
              * ಉಳಿದ ಸ್ಥಾಯಿ ಸಮಿತಿಗಳಿಗೆ ಜಿಲ್ಲಾ ಪಂಚಾಯತಿಯ ಉಪಕಾರ್ಯದರ್ಶಿಗಳನ್ನು ಪದನಿಮಿತ್ತ ಕಾರ್ಯದರ್ಶಿಯಾಗಿ ಜಿಲ್ಲಾ ಪಂಚಾಯತಿಯ ಕಾರ್ಯ ನಿರ್ವಾಹಕ ಅಧಿಕಾರಿಯು ನಾಮನಿರ್ದೇಶನ ಮಾಡುವರು.

(courtesy :Manjunath Nerti)

Thursday, 29 December 2016

☀️ ಇಂಗ್ಲೀಷ್ ಗ್ರಾಮರ್ : ಹಲವು ಪರೀಕ್ಷೆಗಳಲ್ಲಿ ಕೇಳಲಾದ ಇಂಗ್ಲೀಷ್ ನುಡಿಗಟ್ಟುಗಳು, ನಾಣ್ಣುಡಿಗಳು & ಪದ ಸಮುಚ್ಚಯಗಳು ( Important Idioms & Phrases asked in various Exams held by central government)

☀️ ಇಂಗ್ಲೀಷ್ ಗ್ರಾಮರ್ : ಹಲವು ಪರೀಕ್ಷೆಗಳಲ್ಲಿ ಕೇಳಲಾದ ಇಂಗ್ಲೀಷ್ ನುಡಿಗಟ್ಟುಗಳು, ನಾಣ್ಣುಡಿಗಳು & ಪದ ಸಮುಚ್ಚಯಗಳು
( Important Idioms & Phrases asked in various Exams held by central government)
━━━━━━━━━━━━━━━━━━━━━━━━━━━━━━━━━━━━━━━━━━━━━

★️ಇಂಗ್ಲೀಷ್ ಗ್ರಾಮರ್
(English grammar for exams)


•► ಇತ್ತೀಚೆಗೆ ಕೇಂದ್ರ ಸರ್ಕಾರದಿಂದ ನಡೆಸಲ್ಪಟ್ಟ ಹಲವು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಇಂಗ್ಲೀಷ್ ಗ್ರಾಮರ್ ನ Idioms & Phrases ಸಂಬಂಧಿಸಿದಂತೆ ಹೆಚ್ಚು ಪ್ರಶ್ನೆಗಳನ್ನು ಕೇಳಿದ್ದು ಮಹತ್ವದ್ದಾಗಿವೆ. ಅದಕ್ಕಾಗಿ ನಾನು ಇಲ್ಲಿ 'ಸ್ಪರ್ಧಾಲೋಕ'ದಲ್ಲಿ ಕೇಂದ್ರ ಸರ್ಕಾರದಿಂದ ನಡೆಸಲ್ಪಟ್ಟ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕೇಳಲಾದ Idioms & Phrases (ನುಡಿಗಟ್ಟುಗಳು, ನಾಣ್ಣುಡಿಗಳು & ಪದ ಸಮುಚ್ಚಯ) ಗಳನ್ನು ನಿಮ್ಮ ಮುಂದಿಡಲು ಪ್ರಯತ್ನಿಸುತ್ತಿದ್ದೇನೆ, ಈ ಮೂಲಕ ನಿಮಗೆ ರಾಜ್ಯ ಸರ್ಕಾರದಿಂದ ನಡೆಸಲ್ಪಡುವ ಪರೀಕ್ಷೆಗಳಿಗೆ ಸಹಾಯವಾಗಬಹುದೆಂಬ ನಂಬಿಕೆ.

ತಪ್ಪು-ತಡೆಗಳಿದ್ದಲ್ಲಿ ನನ್ನ ಗಮನಕ್ಕೆ ತರಬೇಕೆಂದು ವಿನಂತಿ..


★ IDIOMS AND PHRASES

1. Sweeping Statement – Thoughtless statement (SO(Audit), 1997)
******
2. All at sea – Puzzled (SO(Audit), 1997)
******
3. Enough rope – Enough freedom for action (SO(Audit), 1997)
******
4. By fits and start – Irregularly (SO(Audit), 1997)
*******
5. Fall foul of – Got into trouble with (SO(Audit), 1997)
******
6. Token strike – Short strike held as warning (SO(Audit), 1997)
******
7. Face the music – Get reprimanded (SO(Audit), 1997)
******
8. Flogging a dead horse – Wasting time in useless effort (SO(Audit), 1997)
*****
9. Under a cloud – Under suspicion (SO(Audit), 1997)
*****
10. Green thumb – To have a natural interest (SO(Audit), 2001)
******
11. Played havoc – Caused destruction (SO(Audit), 2001)
*****
12.At stone’s throw – Very near (TA(IT & CE), 2007)
******
13. Blue-eyed boys – Favorites (TA(IT & CE), 2007)
******
14. Fair and square – Honest (SO(Audit), 2001)
******
15. A white elephant – Costly or troublesome possession (SO(Audit), 2001)
******
16. Out and out – Totally (SO(Audit), 2001)
******
17. On the cuff – On credit (SO(Audit), 2001)
******
18. Does not hold water – Cannot be believed (SO(Audit), 2001)
******
19. A wild goose chase – Futile search (SO(Audit), 2001)
******
20. In a tight corner – In a difficult situation (SO(Audit), 2001)
******
21. Going places – Talented and successful (SO(Audit), 2003)
******
22. In cold blood – A murder done without intention (SO(Audit), 2003)
*******
23. Off and on – Occasionally (SO(Audit), 2003)
*******
24. Hard and fast – Strict (SO(Audit), 2003)
*******
25. Took to heels – Run away in fear (SO(Audit), 2003)
*******
26. To steer clear of – Avoid (Statistical Investigator, 2005)
*******
27. Make a clean breast – Confess without reserve (SO(Audit), 2003)
********
28. To blow one’s own trumpet – To praise oneself (SO(CA), 2005)
********
29. Make no bones about – Do not have any hesitation in anything (SO(Audit), 2003)
********
30. Take after – Resembles (SO(Audit), 2003)
*********
31. To starve off – Postpone (SO(Audit), 2003)
**********
32. To give a piece of mind – To reprimand (SO(Audit), 2003)
********
33. Rest on laurels – To be complacent (SO(Audit), 2003)
********
34. Pay through nose – Pay an extremely high price (SO(Audit), 2003)
****"**""
35. Draw on fancy – Use imagination (SO(Audit), 2003)
*******
36. To go to the whole hog – To do it completely (SO(Audit), 2007)
*******
37. Give the game away – Give out the secret (SO(Audit), 2005)
********
38. Cheek by jowl – Very near (SO(Audit), 2005)
********
39. Give in – Yield (SO(Audit), 2005)
*****
40. Good Samaritan – Helpful person (SO(Audit), 2007)
*****
41. Go through fire and water – Undergo any risk (SO(Audit), 2005)
*****
42. Talking through hat – Talking nonsense (SO(Audit), 2005)
*****
43. Put up with – Tolerate (SO(Audit), 2005)
*****
44. Hand in glove – In close relationship (FCI, 2012)
*******
45. Reading between the lines – Understanding the hidden meaning (SO(Audit), 2005)
*******
46. Get the sack – dismissed from (SO(Audit), 2006)
*******
47. Pros and cons – Considering all the facts(good and bad points)(SO(Audit), 2006)
*******
48. By leaps and bounds – Very Quickly (SO(Audit), 2006)
********
49. Standstill – Complete halt (DEO, 2008)
********
50. In the long run – Ultimately (SO(Audit), 2006)

ಮುಂದುವರೆಯುವುದು. 

☀️ ಭಾಗ - IV: 2016 ರ ಪ್ರಮುಖ ಸ್ಥಳೀಯ / ರಾಷ್ಟ್ರೀಯ / ಅಂತರರಾಷ್ಟ್ರೀಯ ಘಟನೆಗಳು - ಒಂದು ಹಿನ್ನೋಟ : (Important Current Affairs of 2016 at glance)

☀️ ಭಾಗ - IV: 2016 ರ ಪ್ರಮುಖ ಸ್ಥಳೀಯ / ರಾಷ್ಟ್ರೀಯ / ಅಂತರರಾಷ್ಟ್ರೀಯ ಘಟನೆಗಳು - ಒಂದು ಹಿನ್ನೋಟ :
(Important Current Affairs of 2016 at glance)
━━━━━━━━━━━━━━━━━━━━━━━━━━━━━━━━━━━━━━━━━━━━━

★ 2016ರ ಪ್ರಚಲಿತ ಘಟನೆಗಳು.
(2016 current affairs in short)

...ಮುಂದುವರೆದ ಭಾಗ.



•►  ಬಜೆಟ್ ಘೊಷಣೆ

ರಾಜ್ಯ ಸರ್ಕಾರ:

*.ಕೃಷಿ ಅನುದಾನ 4,344 ಕೋಟಿ ರೂ.
*.ವಿಶೇಷ ಕೃಷಿ ವಲಯ ಸ್ಥಾಪನೆ
*.ಸುವರ್ಣ ಕೃಷಿ ಗ್ರಾಮ
*.ಕೃಷಿ ನವೋದ್ಯಮ
*.ಕರ್ನಾಟಕ ರಾಜ್ಯ ಕೃಷಿ ಮತ್ತು ರೈತರ ಕಲ್ಯಾಣ ಸಮಿತಿ ರಚನೆ
*.ಆರ್.ಕೆ.ವಿ.ವೈ., ಕೃಷಿ ಭಾಗ್ಯ ಹಾಗೂ ಮುಖ್ಯಮಂತ್ರಿಗಳ ಸೂಕ್ಷ್ಮ ನೀರಾವರಿ ಯೋಜನೆ
*/740 ರೈತ ಸಂಪರ್ಕ ಕೇಂದ್ರದ ವ್ಯಾಪ್ತಿಯಲ್ಲಿರುವ 12 ಲಕ್ಷ ರೈತರಿಗೆ ಹವಾಮಾನ ಮುನ್ಸೂಚನೆ, ಕೃಷಿ ಸಲಹೆ

•► ತೋಟಗಾರಿಕೆಗೆ 753 ಕೋಟಿ ರೂ.

*.ತೋಟಗಾರಿಕೆ ಪ್ರದೇಶವನ್ನು ಪ್ರತಿವರ್ಷ ಶೇ.5ರಂತೆ ಮತ್ತು ಉತ್ಪಾದನೆ ಶೇ.8.7 ದರದಲ್ಲಿ ಹೆಚ್ಚಿಸುವ ಪ್ರಸ್ತಾಪ.
*.ಆಲೂಗಡ್ಡೆ ಬೆಳೆಗಾರರಿಗೆ ಕೆ.ಜಿ.ಗೆ 10 ರೂ.ಗಳವರೆಗೆ ಶೇ.50ರಷ್ಟು ಸಹಾಯಧನ.
*.ಪಶುಸಂಗೋಪನೆಗೆ 1886 ಕೋಟಿ ರೂ.
*.ದೇಶೀಯ ತಳಿ ಪಶುಗಳ ವೀರ್ಯ ಬ್ಯಾಂಕ್​ಗಳ ಸ್ಥಾಪನೆ, ಸ್ಥಳೀಯ ತಳಿಗಳ ಹಾಲು ಸಂಗ್ರಹಣೆ, ಮಾರಾಟ ವ್ಯವಸ್ಥೆ
*.ಅನಿಯಂತ್ರಿತ ತಳಿ ಸಂವರ್ಧನಾ ಚಟುವಟಿಕೆ ನಿಯಂತ್ರಿಸಲು ‘ಕರ್ನಾಟಕ ಪಶು ತಳಿ ವಿಧೇಯಕ’ ಜಾರಿ.
*.ಕೆಎಂಎಫ್ ಹೂಡಿಕೆಯೊಡನೆ ಹಾಸನದ ಅರಕಲಗೂಡಿನಲ್ಲಿ ಪಶು ಆಹಾರ ಘಟಕ ಸ್ಥಾಪನೆ.

•►  ಮೀನುಗಾರಿಕೆಗೆ 302 ಕೋಟಿ ರೂ.

*.ಮತ್ಸ್ಯಾಶ್ರಯ ಯೋಜನೆಯಡಿ ವಸತಿರಹಿತ ಮೀನುಗಾರರಿಗೆ 3000 ಮನೆಗಳ ನಿರ್ವಣ.

 •►  ಸಹಕಾರಕ್ಕೆ 1463 ಕೋಟಿ ರೂ.

*.2016-17ನೇ ಸಾಲಿನಲ್ಲಿ 23 ಲಕ್ಷ ರೈತರಿಗೆ 11 ಸಾವಿರ ಕೋಟಿ ರೂ. ಕೃಷಿ ಸಾಲ ವಿತರಿಸುವ ಗುರಿ.
ಉಗಾಣ ನಿಗಮದ ಗೋದಾಮುಗಳ ಮೇಲ್ಛಾವಣಿಗಳ ಮೇಲೆ 1.8 ಕೋಟಿ ಚ.ಅಡಿ ವಿಸ್ತೀರ್ಣದ ಸೌರಶಕ್ತಿ ಪ್ಯಾನಲ್​ಗಳನ್ನು ಅಳವಡಿಸಿ 150 ಮೆ.ವ್ಯಾ. ವಿದ್ಯುತ್ ಉತ್ಪಾದಿಸಲು ಖಾಸಗಿ ಸಹಭಾಗಿತ್ವ ಮತ್ತು ಬಂಡವಾಳದೊಂದಿಗೆ ಯೋಜನೆ.
* ಎಪಿಎಂಸಿಯಲ್ಲಿ ಮಹಿಳಾ ಪ್ರಾತಿನಿಧ್ಯವನ್ನು 1ರಿಂದ 3ಕ್ಕೆ ಹೆಚ್ಚಿಸಲು ಉದ್ದೇಶ.


•► ಕೇಂದ್ರ ಸರ್ಕಾರ
ಕೃಷಿ/ಕೃಷಿಕರ ಕಲ್ಯಾಣ ಅನುದಾನ 35,984 ಕೋಟಿ ರೂ.

*.‘ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆ’ ಸಮರೋಪಾದಿಯಲ್ಲಿ ಅನುಷ್ಠಾನ, ಮೂರು ವರ್ಷಗಳ ಅವಧಿಯಲ್ಲಿ 28.5 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಸಾವಯವ ಕೃಷಿ, 5 ಲಕ್ಷ ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ.
*.ಎಐಬಿಪಿ ಯೋಜನೆ ಅಡಿ ದೀರ್ಘಕಾಲದಿಂದ ಬಾಕಿ ಇರುವ 89 ನೀರಾವರಿ ಯೋಜನೆ ಅನುಷ್ಠಾನ ಪ್ರಕ್ರಿಯೆ ತ್ವರಿತಗೊಳಿಸುವಿಕೆ
*.ಆರಂಭಿಕ 20,000 ಕೋಟಿ ರೂಪಾಯಿಗಳ ಮೂಲನಿಧಿಯೊಂದಿಗೆ ನಬಾರ್ಡ್​ನಲ್ಲಿ ದೀರ್ಘಾವಧಿಯ ನೀರಾವರಿ ನಿಧಿ ಸ್ಥಾಪನೆ
*.ಅಂತರ್ಜಲ ಮೂಲಗಳ ಸುಸ್ಥಿರ ನಿರ್ವಹಣೆಯ ಕಾರ್ಯಕ್ರಮ ಅನುಷ್ಠಾನಕ್ಕೆ ವಿವಿಧ ಮೂಲಗಳಿಂದ 6,000 ಕೋಟಿ ರೂ. ಮೀಸಲು
*.ನರೇಗಾ ಯೋಜನೆಯಂತೆ, ಮಳೆಯಾ ಧಾರಿತ ಕೃಷಿ ಪ್ರದೇಶಗಳಲ್ಲಿ 5 ಲಕ್ಷ ಕೃಷಿ ಹೊಂಡ, ಸಾವಯವ ಗೊಬ್ಬರ ತಯಾರಿಕೆಗೆ 10 ಲಕ್ಷ *.ಗೊಬ್ಬರದ ಹೊಂಡ ರಚನೆ
*.ಮುಂದಿನ ಮೂರು ವರ್ಷಗಳ ಅವಧಿಯಲ್ಲಿ ದೇಶದಲ್ಲಿ ಗೊಬ್ಬರದ ಕಂಪನಿ ಗಳ 2,000 ಮಾದರಿ ಔಟ್​ಲೆಟ್​ಗಳ ಸ್ಥಾಪನೆ
*.ರೈತರ ಸಾಲ ಮರುಪಾವತಿ ಹೊರೆ ಕಡಿಮೆ ಮಾಡುವುದಕ್ಕಾಗಿ ಬಡ್ಡಿ ಭರಿಸುವುದಕ್ಕೆ 15,000 ಕೋಟಿ ರೂ. ಅನುದಾನ
*.ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಗೆ 5,500 ಕೋಟಿ ರೂ.

 ಸಂಕ್ರಾಂತಿ ಕೊಡುಗೆ
•► ಫಸಲ್ ಬಿಮಾ: ಬರ, ಅನಾವೃಷ್ಟಿ ಸೇರಿದಂತೆ ನೈಸರ್ಗಿಕ ವಿಕೋಪಗಳಿಂದ ಅಪಾರ ಬೆಳೆ ಹಾನಿ ಸಂಭವಿಸಿದ ಸಂದರ್ಭದಲ್ಲಿ ರೈತರಿಗೆ ನೆರವು ನೀಡುವ ಉದ್ದೇಶದಿಂದ 2016 ಜ.13ರಂದು ಈ ಯೋಜನೆ ಜಾರಿಗೊಳಿಸಲಾಗಿದೆ. ಈ ಯೋಜನೆಯಲ್ಲಿ ಮುಂಗಾರು ಬೆಳೆಗೆ ವಿಮೆ ಪ್ರೀಮಿಯಂನ ಶೇ. 2ರಷ್ಟು ಹಾಗೂ ಹಿಂಗಾರು ಬೆಳೆಗಳಿಗೆ ಪ್ರೀಮಿಯಂನ ಶೇ. 1.5ರಷ್ಟನ್ನು ರೈತರು ಪಾವತಿಸಿದರೆ ಸಾಕು. ವಾರ್ಷಿಕ ವಾಣಿಜ್ಯ ಹಾಗೂ ತೋಟಗಾರಿಕೆ ಬೆಳೆಗೆ ಮಾತ್ರ ಶೇ. 5ರಷ್ಟು ಪ್ರೀಮಿಯಂ ಭರಿಸಬೇಕು. ವಿಮೆಯ ಉಳಿದ ಮೊತ್ತವನ್ನು ರಾಜ್ಯ ಮತ್ತು ಕೇಂದ್ರ ಸರ್ಕಾರಗಳೇ ಭರಿಸುತ್ತವೆ. 27 ಆಹಾರ ಮತ್ತು ಎಣ್ಣೆಕಾಳು ಬೆಳೆಗಳು, 14 ವಾಣಿಜ್ಯ ಮತ್ತು ತೋಟಗಾರಿಕೆ ಬೆಳೆಗಳಿಗೆ ಈ ಸೌಲಭ್ಯ ದೊರೆತಿದೆ.

•► ಒಂದು ದೇಶ-ಒಂದು ಮಂಡಿ!:
ರೈತರ ಉತ್ಪನ್ನಗಳಿಗೆ ಬೇಡಿಕೆ ನಿರ್ವಿುಸುವ ನಿಟ್ಟಿನಲ್ಲಿ ‘ಒಂದು ದೇಶ ಒಂದು ಮಂಡಿ’ಗೆ ಚಾಲನೆ ನೀಡಲಾಗಿದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ಇ-ಮಂಡಿಗೆ ಚಾಲನೆ ಸಿಕ್ಕಿದೆ. 8 ರಾಜ್ಯಗಳಲ್ಲಿ 21 ಮಂಡಿಗಳ ಅಭಿವೃದ್ಧಿ ಮಾಡಲಾಗಿದೆ. 12 ರಾಜ್ಯಗಳಲ್ಲಿ 365 ಮಂಡಿಗಳ ಬೇಡಿಕೆ ಪೂರೈಸಲು ಕೇಂದ್ರ ಮುಂದಾಗಿದೆ. 2018ಕ್ಕೆ ದೇಶಾದ್ಯಂತ 585 ಮಂಡಿಗಳನ್ನು ಸ್ಥಾಪಿಸುವುದರ ಜತೆಗೆ ಎಲ್ಲ ಮಂಡಿಗಳನ್ನು ಇ-ವ್ಯಾಪಾರದ ವ್ಯಾಪ್ತಿಗೆ ತರುವ ಗುರಿ ಹೊಂದಲಾಗಿದೆ. ಮಂಡಿ ಯೋಜನೆಯಡಿ 17 ರಾಜ್ಯಗಳು ಈಗಾಗಲೇ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿವೆ.

•► ಕರ್ನಾಟಕ ಮಾದರಿ:
ರಾಜ್ಯದಲ್ಲಿ ಈಗಾಗಲೇ ಏಕೀಕೃತ ಮಾರುಕಟ್ಟೆ ವ್ಯವಸ್ಥೆ ಜಾರಿಯಲ್ಲಿದೆ. ರಾಜ್ಯದ 105 ಎಪಿಎಂಸಿಗಳನ್ನು ಆನ್​ಲೈನ್ ಮೂಲಕ ಸಮನ್ವಯಗೊಳಿಸಲಾಗಿದ್ದು, ಈ ಮಾರುಕಟ್ಟೆಗೆ ರೈತರು ತರುವ ಕೃಷಿ ಉತ್ಪನ್ನಗಳಿಗೆ ಆನ್​ಲೈನ್ ಮೂಲಕ ಬಿಡ್ ಸಲ್ಲಿಸಬಹುದು. ಪ್ರತಿದಿನ ಮಾರುಕಟ್ಟೆಗೆ ಬರುವ ಉತ್ಪನ್ನಗಳು, ಅವುಗಳ ಬೆಲೆಗಳ ಕುರಿತೂ ರೈತರಿಗೆ ಮಾಹಿತಿ ನೀಡಲಾಗುತ್ತಿದೆ.

•► ಮೊದಲ ತದ್ರೂಪಿ ಮೇಕೆ:
ಚೀನಾದ ಯುನ್ನಾನ್ ಮತ್ತು ಮಂಗೋಲಿಯಾ ಪ್ರಾಂತ್ಯದ ಕೃಷಿ ವಿವಿಗಳು ಡಿಸೆಂಬರ್ 18ರಂದು ತದ್ರೂಪಿ ಮೇಕೆಯನ್ನು ಸೃಷ್ಟಿಸಿದ್ದಾರೆ. ಇದು ವಿಶ್ವದ ಮೊದಲ ತದ್ರೂಪಿ ಮೇಕೆ. ಈ ತಳಿಯಿಂದ ಸಿಗುವ ಕ್ಯಾಶ್​ವಿುಯರ್ ಉಣ್ಣೆ ಇನ್ನಷ್ಟು ತೆಳ್ಳಗಿರಲಿದೆ. ಅಂದರೆ ಕ್ಯಾಶ್​ವಿುಯರ್ ಉಣ್ಣೆಗಾಗಿ ಖ್ಯಾತಿ ಪಡೆದಿರುವ ಇರ್ಲಾಂಗ್ ಬೆಟ್ಟದ ಮೇಕೆಗಳ ಉಣ್ಣೆ 15.8 ಮೈಕ್ರೋ ಮೀಟರ್​ನಷ್ಟು ತೆಳ್ಳಗಿದ್ದರೆ ನೂತನ ತಳಿಯ ಉಣ್ಣೆ 13.8 ಮೈಕ್ರೋಮೀಟರ್​ನಷ್ಟಿರಲಿದೆ.


•► ಸಾಧನೆ ಘೊಷಣೆ

•► ಬಾಸ್ಮತಿ ಪರಿಮಳ:
ಪಂಜಾಬ್, ಹರಿಯಾಣ, ಹಿಮಾಚಲ ಪ್ರದೇಶ, ಉತ್ತರಾಖಂಡ, ಉತ್ತರಪ್ರದೇಶ ಹಾಗೂ ಜಮ್ಮುಕಾಶ್ಮೀರಗಳಲ್ಲಿ ಬೆಳೆಯುವ ಬಾಸ್ಮತಿ ಅಕ್ಕಿಗೆ ಭೌಗೋಳಿಕ ಸಂಕೇತ(ಜಿಐ)ದ ಟ್ಯಾಗ್ ನೀಡುವಂತೆ ಇಂಟಲೆಕ್ಚುವಲ್ ಪ್ರಾಪರ್ಟಿ ಅಪ್ಪಿಲೇಟ್ ಬೋರ್ಡ್ ಫೆಬ್ರವರಿಯಲ್ಲಿ ಜಿಯಾಗ್ರಫಿಕಲ್ ಇಂಡಿಕೇಷನ್ಸ್ ರಿಜಿಸ್ಟ್ರಿಗೆ ಆದೇಶಿಸಿತ್ತು.

•► ಕಬ್ಬಿನ ಜಲ್ಲೆಯಿಂದ ಕಾರ್ಬನ್ ಉತ್ಪಾದನೆ:
ಪುಣೆಯ ನ್ಯಾಷನಲ್ ಕೆಮಿಕಲ್ ಲ್ಯಾಬ್ ಮತ್ತು ಇಂಡಿಯನ್ ಇನಿಸ್ಟಿಟ್ಯೂಟ್ ಆಫ್ ಸೈನ್ಸ್ ಆಂಡ್ ರೀಸರ್ಚ್​ನ ವಿಜ್ಞಾನಿಗಳ ತಂಡ ಕಬ್ಬಿನ ಜಲ್ಲೆಯಿಂದ ಗರಿಷ್ಠ ಗುಣಮಟ್ಟದ ಕಾರ್ಬನ್ ಉತ್ಪಾದಿಸಬಹುದೆಂಬುದನ್ನು ವರ್ಷದ ಮಧ್ಯಭಾಗದಲ್ಲಿ ಕಂಡುಕೊಂಡಿದ್ದಾರೆ. ಇದನ್ನು ಲಿಯೋನ್ ಬ್ಯಾಟರಿಗಳಲ್ಲಿ ಬಳಸುವುದು ಸಾಧ್ಯ ಎಂಬುದನ್ನೂ ಸಾಬೀತು ಪಡಿಸಿದ್ದಾರೆ.

•► ಸಿಕ್ಕಿಂಗೆ ಸಿಕ್ಕಿದ ಸಾವಯವ ಗರಿ:
ಗ್ಯಾಂಗ್ಟಕ್​ನಲ್ಲಿ ಜನವರಿ 4ರಂದು ‘ಸುಸ್ಥಿರ ಕೃಷಿ’ ಸಮಾವೇಶ ಉದ್ಘಾಟಿಸಿದ ಪ್ರಧಾನಮಂತ್ರಿ ನರೇಂದ್ರ ಮೋದಿ, ‘ಸಿಕ್ಕಿಂ ಅನ್ನು ದೇಶದ ಮೊದಲ ಸಾವಯವ ರಾಜ್ಯ’ ಎಂದು ಘೊಷಿಸಿದರು. ಸಿಕ್ಕಿಂನ 75,000 ಹೆಕ್ಟೇರ್ ವಿಸ್ತಾರದ ಕೃಷಿ ಭೂಮಿಯಲ್ಲಿ ಸಾವಯವ ಪದ್ಧತಿಯ ಕೃಷಿಯನ್ನು ಅಳವಡಿಸಿಕೊಳ್ಳಲಾಗಿದೆ.

•► ಮತ್ತೆ ಕುಲಾಂತರಿ ಸದ್ದು:
ದೆಹಲಿ ವಿಶ್ವವಿದ್ಯಾಲಯ ಸಿದ್ಧಪಡಿಸಿದ ಕುಲಾಂತರಿ ಸಾಸಿವೆ ಡಿಎಂಎಚ್-11 ಹಾಗೂ ಇತರ ಎರಡು ತಳಿಗಳು ಮಾನವ, ಪ್ರಾಣಿಗಳು ಹಾಗೂ ಪರಿಸರಕ್ಕೆ ಮಾರಕವಲ್ಲ ಎಂದು ಕುಲಾಂತರಿ ಅನುಮೋದನಾ ಸಮಿತಿ (ಜಿಇಎಸಿ)ಯ ತಜ್ಞರ ತಂಡ ಸರ್ಕಾರಕ್ಕೆ ಈ ವರ್ಷದ ಮಧ್ಯಭಾಗದಲ್ಲಿ ವರದಿ ನೀಡಿತ್ತು. ಕುಲಾಂತರಿ ಸಾಸಿವೆಯನ್ನು ಪ್ರಾಯೋಗಿಕವಾಗಿ ಹಾಗೂ ವಾಣಿಜ್ಯಿಕವಾಗಿ ಬೆಳೆಯಲು ಅನುಮತಿ ನೀಡುವ ಪ್ರಸ್ತಾವವನ್ನು ಜಿಇಎಸಿ ಪರಿಶೀಲಿಸಲು ಕೈಗೆತ್ತಿಕೊಂಡು ಸಾರ್ವಜನಿಕ ಅಭಿಪ್ರಾಯ ಕೋರಿತ್ತು. ಇದಕ್ಕೆ ಪರ-ವಿರೋಧ ವ್ಯಕ್ತವಾಗಿತ್ತು.


•►  ಕೃಷಿಕರ ಆದಾಯ ದುಪ್ಪಟ್ಟು
ಯೋಜನೆಯ ಕಾರ್ಯಕ್ರಮಗಳು

*.ರಾಷ್ಟ್ರದ 14 ಕೋಟಿ ಕೃಷಿಕರಿಗೆ ಮಣ್ಣು ಆರೋಗ್ಯ ಪತ್ರ ವಿತರಣೆ.
* ಪರಂಪರಾಗತ್ ಕೃಷಿ ವಿಕಾಸ, ಪ್ರಧಾನಮಂತ್ರಿ ಕೃಷಿ ಸಿಂಚಾಯಿ, ಫಸಲ್ ವಿಮಾ ಯೋಜನೆಗಳಿಗೆ ಚಾಲನೆ
*.ರೈತರಿಗೆ ಬೇವು ಮಿಶ್ರಿತ ಯೂರಿಯಾ, ವೈವಿಧ್ಯಮಯ ಬೀಜಗಳ ಅಭಿವೃದ್ಧಿ, ಬಿತ್ತನೆ ವಸ್ತುಗಳ ಪೂರೈಕೆ
*/ದೇಶದಲ್ಲಿ 14 ಗೋಕುಲ ಗ್ರಾಮಗಳ ನಿರ್ವಣಕ್ಕೆ ಮಾನ್ಯತೆ
*.ದೇಶದಲ್ಲಿ ಎರಡು ಕೇಂದ್ರ ಕೃಷಿ ವಿಶ್ವವಿದ್ಯಾಲಯಗಳ ಸ್ಥಾಪನೆ
*.14 ಕೃಷಿ ಕಾಲೇಜುಗಳು ಮತ್ತು ವಿವಿಧ ಕೃಷಿ ಸಂಶೋಧನಾ ಕೇಂದ್ರಗಳ ಸ್ಥಾಪನೆ
*.ಹೆಚ್ಚಿನ ಕೃಷಿ ವಿಜ್ಞಾನಿಗಳ ನೇಮಕ
*.ಗ್ರಾಮೀಣ ಪ್ರದೇಶದ ಹತ್ತಿರದಲ್ಲೇ ಕೃಷಿ ವಿಜ್ಞಾನ ಕೇಂದ್ರಗಳ ನಿರ್ಮಾಣ
*. ಇ-ಪಶುಹಾತ್ ತಾಣ:
ಪಶುಸಂಗೋಪನೆಯಲ್ಲಿ ತೊಡಗಿರುವವರಿಗೆ ಅನುಕೂಲವಾಗುವಂತೆ ದೇಶದ ಕೃಷಿಕರು, ಸಹಕಾರಿ ಸಂಘಟನೆ, ಹಾಲು ಉತ್ಪಾದಕರ ಸಂಘ, ಖಾಸಗಿಯವರ ನಡುವೆ ಸಂಪರ್ಕ ಕಲ್ಪಿಸಲು ಕೇಂದ್ರ ಸರ್ಕಾರ ಆರಂಭಿಸಿದ ಅಂತರ್ಜಾಲ ತಾಣ ಇದಾಗಿದ್ದು, ನವೆಂಬರ್ ಕೊನೆಯಲ್ಲಿ ಲೋಕಾರ್ಪಣೆಗೊಂಡಿದೆ.


•►  ಸಂಶೋಧನೆ
ತದ್ರೂಪಿ ಕೋಣ ಸೃಷ್ಟಿ:
ಹರಿಯಾಣದ ಹಿಸ್ಸಾರ್​ನ ಸೆಂಟ್ರಲ್ ಇನ್​ಸ್ಟಿಟ್ಯೂಟ್ ಫಾರ್ ರೀಸರ್ಚ್ ಆನ್ ಬಫಲ್ಲೋಸ್(ಸಿಐಆರ್​ಬಿ)ನ ವಿಜ್ಞಾನಿಗಳು ಜನವರಿ ಮಧ್ಯಭಾಗದಲ್ಲಿ ತದ್ರೂಪಿ ಕೋಣನನ್ನು ಸೃಷ್ಟಿಸುವಲ್ಲಿ ಯಶಸ್ಸು ಕಂಡಿದ್ದಾರೆ. ಅದಕ್ಕೆ ‘ಸಿಐಆರ್​ಬಿ ಗೌರವ್’ ಎಂದು ನಾಮಕರಣ ಮಾಡಿದ್ದಾರೆ.

ಹೆಣ್ಣು ಕರುವೇ ಹುಟ್ಟುತ್ತೆ!: ಹಸುಗಳು ಹೆಣ್ಣು ಕರುವಿಗೇ ಜನ್ಮನೀಡುವಂತೆ ಮಾಡಲು ಬೆಂಗಳೂರಿನ ಎಬಿಎಸ್ ಕಂಪನಿ ಹೊಸ ವಿಧಾನ ಕಂಡುಹಿಡಿದದ್ದು ವರ್ಷದ ಮಧ್ಯಭಾಗದಲ್ಲಿ ಸುದ್ದಿಯಾಗಿತ್ತು. ಗಂಡು ಮತ್ತು ಹೆಣ್ಣು ಲಿಂಗ ನಿರ್ಧರಿಸುವ ಎಕ್ಸ್ ಮತ್ತು ವೈ ಕ್ರೊಮೊಸೊಮ್ಳನ್ನು ಗೂಳಿಯ ವೀರ್ಯದಿಂದ ಬೇರ್ಪಡಿಸಿ ಕೃತಕ ಗರ್ಭಧಾರಣೆ ಮಾಡಿಸುವುದೇ ಇದರ ವಿಶೇಷತೆ. ಆಕಳಿಗೆ ಎಕ್ಸ್ ಕ್ರೊಮೊಸೋಮ್ಂದ ವಿಶೇಷವಾಗಿ ಚಿಕಿತ್ಸೆ ನೀಡಿದರೆ ಹೆಣ್ಣು ಆಕಳು ಹುಟ್ಟುತ್ತದೆ ಎಂಬುದು ಕಂಪನಿಯ ವಾದ.

•► ಇಂದು ರಾಷ್ಟ್ರೀಯ ರೈತ ದಿನ
ಮಾಜಿ ಪ್ರಧಾನಿ ಚೌಧರಿ ಚರಣ್ ಸಿಂಗ್(23/12/1902- 29/05/1987) ಅವರ ಜಯಂತಿ ದಿನವಾದ ಡಿಸೆಂಬರ್ 23ರನ್ನು ರಾಷ್ಟ್ರೀಯ ರೈತ ದಿನವಾಗಿ ಆಚರಿಸಲಾಗುತ್ತದೆ. ಸ್ವತಃ ಕೃಷಿಕರಾಗಿದ್ದ ಚರಣ್ ಸಿಂಗ್, ಭಾರತದ ಕೃಷಿಕರ ಉನ್ನತಿಗಾಗಿ ಮಾಡಿದ ಕೆಲಸಗಳು ಇಂದಿಗೂ ಸ್ಮರಣೀಯ. ಜಮೀನ್ದಾರಿಕೆ ನಿಮೂಲನೆ ಕಾಯ್ದೆ, ಕೃಷಿ ಉತ್ಪನ್ನ ಮಾರುಕಟ್ಟೆ ಮಸೂದೆ ಸೇರಿ ಅನೇಕ ಯೋಜನೆಗಳನ್ನು ಅವರು ಜಾರಿಗೆ ತಂದಿದ್ದರು.

...ಮುಂದುವರೆಯುವುದು. 

☀️ V.ಜೆನರ್ಮ್: ಜವಾಹರ ಲಾಲ್ ನೆಹರೂ ನ್ಯಾಶನಲ್ ಅರ್ಬನ್ ರಿನೀವಲ್ ಮಿಷನ್ (ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಪ್ರಮುಖ ಯೋಜನೆಗಳು) (JNURM- Javaharlal Nehru National Urban Renewal Mission)

☀️ V.ಜೆನರ್ಮ್: ಜವಾಹರ ಲಾಲ್ ನೆಹರೂ ನ್ಯಾಶನಲ್ ಅರ್ಬನ್ ರಿನೀವಲ್ ಮಿಷನ್ (ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಪ್ರಮುಖ ಯೋಜನೆಗಳು)
(JNURM- Javaharlal Nehru National Urban Renewal Mission)
━━━━━━━━━━━━━━━━━━━━━━━━━━━━━━━━━━━━━━━━━━━━━

★ ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಪ್ರಮುಖ ಯೋಜನೆಗಳು :
(Central Sponsored schemes)



•► ಜೆನರ್ಮ್ : ಜವಾಹರ ಲಾಲ್ ನೆಹರೂ ನ್ಯಾಶನಲ್ ಅರ್ಬನ್ ರಿನೀವಲ್ ಮಿಷನ್


•► ಜವಾಹರ ಲಾಲ್ ನೆಹರೂ ನ್ಯಾಶನಲ್ ಅರ್ಬನ್ ರಿನೀವಲ್ ಮಿಷನ್ ಕೇಂದ್ರ ಸರ್ಕಾರದ ಯೋಜನೆಯಾಗಿದ್ದು, ಕೇಂದ್ರದ ಅನುದಾನದ ಅಡಿಯಲ್ಲಿ ನಗರಗಳನ್ನು ಆಧುನೀಕರಣಗೊಳಿಸುವುದಾಗಿದೆ.

•► ಕೇಂದ್ರ ನಗರಾಭಿವೃದ್ದಿ ಇಲಾಖೆ ಮೂಲಕ ಈ ಯೋಜನೆಯನ್ನು ಜಾರಿಗೊಳಿಸಲಾಗಿದ್ದು, 2005ರ ಡಿಸೆಂಬರ್ 3ರಂದು ಅಂದಿನ ಪ್ರಧಾನಿ ಮನಮೋಹನ್ ಸಿಂಗ್ ಚಾಲನೆ ನೀಡಿದ್ದರು. ಈ ಯೋಜನೆಯ ಅಡಿಯಲ್ಲಿ ಮೊದಲ 7 ವರ್ಷದಲ್ಲಿ ಸುಮಾರು 20 ಬಿಲಿಯನ್ ಅಮೆರಿಕನ್ ಡಾಲರ್ ಮೊತ್ತವನ್ನು ವಿನಿಯೋಗಿಸಲಾಗಿದ್ದು, ನಗರ ಪ್ರದೇಶಗಳಲ್ಲಿ ಮೂಲ ಸೌಕರ್ಯ ವೃದ್ದಿಸುವುದೇ ಇದರ ಪ್ರಮುಖ ಉದ್ದೇಶವಾಗಿದೆ.

•► ಆರಂಭಿಕ ಹಂತದಲ್ಲಿ ಕೇವಲ 7 ವರ್ಷಕ್ಕಾಗಿ ಅಂದರೆ, 2005ರಿಂದ 2012ರವರೆಗೆ ಮಾತ್ರ ಈ ಯೋಜನೆಯನ್ನು ಜಾರಿಗೊಳಿಸಲಾಯಿತು. ಆನಂತರ ಅಂದರೆ 2012ರ ಏಪ್ರಿಲ್‌ನಿಂದ 2014ರ ಮಾರ್ಚ್ 31ರವರೆಗೂ ವಿಸ್ತರಣೆ ಮಾಡಲಾಯಿತು.

•► ಭಾರತೀಯ ನಗರಗಳು ಮೂಲಭೂತ ಸೌಕರ್ಯಗಳಿಂದ ದೂರ ಎನ್ನುವ ಅಪವಾದವನ್ನು ದೂರವಾಗಿಸುವ ಸಲುವಾಗಿ ಈ ಯೋಜನೆಯನ್ನು ಜಾರಿಗೊಳಿಸಲಾಗಿದ್ದು, ನಗರ ಪ್ರದೇಶಗಳನ್ನು ಬೇರು ಮಟ್ಟದಿಂದ ಅಭಿವೃದ್ಧಿಗೊಳಿಸುವುದಾಗಿದೆ.

•► ನಗರ ಪ್ರದೇಶಗಳಲ್ಲಿ ಆರ್ಥಿಕ ಸಬಲೀಕರಣ ಮಾಡುವುದು, ಸಮಾನ ಪ್ರಾತಿನಿಧ್ಯ ಒದಗಿಸುವುದು, ಸಾಮಾಜಿಕ-ಆರ್ಥಿಕ ಅಭಿವೃದ್ಧಿ, ನಗರ ಪ್ರದೇಶಗಳಲ್ಲಿರುವ ಬಡ ವರ್ಗದ ಜನರಿಗೆ ಅಗತ್ಯವಿರುವ ಮೂಲಭೂತ ಸೌಲಭ್ಯ ಒದಗಿಸುವುದು, ಈ ಯೋಜನೆಯ ಅಡಿಯಲ್ಲಿವೆ. ಇದಕ್ಕಾಗಿ 1992ರಲ್ಲಿ ಸಂವಿಧಾನಕ್ಕೆ ತರಲಾದ 74ನೆಯ ತಿದ್ದುಪಡಿಯಲ್ಲಿನ ಅಂಶಗಳು ಆಧಾರವಾಗಿದ್ದು, ಮುನ್ಸಿಪಲ್ ಗವರ್ನೆನ್ಸ್‌ನ್ನೂ ಸಹ ಬಲಗೊಳಿಸುವುದು ಇದರ ಗುರಿಗಳಲ್ಲಿ ಒಂದಾಗಿದೆ.

•► ಯೋಜನೆಯ ಪ್ರಾಥಮಿಕ ಹಂತದಲ್ಲಿ ಎರಡು ವಿಭಾಗ ಮಾಡಲಾಗಿದ್ದು, ಇದರಲ್ಲಿ ನಗರ ಪ್ರದೇಶದಲ್ಲಿ ನೀರು ಸರಬರಾಜು, ಉತ್ತಮವಾದ ಚರಂಡಿ ವ್ಯವಸ್ಥೆ, ಘನ ತ್ಯಾಜ್ಯ ನಿರ್ವಹಣೆ, ರಸ್ತೆ ಸಂಪರ್ಕದ ಉನ್ನತೀಕರಣ, ನಗರ ಸಾರಿಗೆ ಸೌಲಭ್ಯ ಹಾಗೂ ಪ್ರಸ್ತುತ ಇರುವ ಬಡಾವಣೆಗಳ ಮರು ಅಭಿವೃದ್ಧಿ ಇದರಲ್ಲಿ ಸೇರಿದೆ.

ಜೆನರ್ಮ್ ಕುರಿತಾದ ಮಾಹಿತಿಗಾಗಿ  http://jnnurm.nic.in/  ವೀಕ್ಷಿಸಬಹುದು.

Wednesday, 28 December 2016

☀️ ಇಂಗ್ಲೀಷ್ ಗ್ರಾಮರ್ : ಭಾಗ-II- ಉಪಯುಕ್ತ 200 ಇಂಗ್ಲೀಷ್ ವಿರುದ್ಧಾರ್ಥ ಪದಗಳು (Antonyms) ★ Important 200 Antonyms Words)

☀️ ಇಂಗ್ಲೀಷ್ ಗ್ರಾಮರ್ : ಭಾಗ-II- ಉಪಯುಕ್ತ 200 ಇಂಗ್ಲೀಷ್ ವಿರುದ್ಧಾರ್ಥ ಪದಗಳು (Antonyms)
★ Important 200 Antonyms Words)
━━━━━━━━━━━━━━━━━━━━━━━━━━━━━━━━━━━━━━━━━━━━━
★️ಇಂಗ್ಲೀಷ್ ಗ್ರಾಮರ್
(English grammar for exams)

•► ಇತ್ತೀಚೆಗೆ ನಡೆಸಲಾಗುತ್ತಿರುವ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಇಂಗ್ಲೀಷ್ ಗ್ರಾಮರ್ ಗೆ ಸಂಬಂಧಿಸಿದಂತೆ ಹೆಚ್ಚು ಒತ್ತು ಕೊಡುತ್ತಿದ್ದು, ಅವುಗಳಲ್ಲಿ Antonyms ಭಾಗ ಕೂಡ ಮಹತ್ವದ್ದಾಗಿದೆ. ಅದಕ್ಕಾಗಿ ನಾನು ಇಲ್ಲಿ 'ಸ್ಪರ್ಧಾಲೋಕ'ದಲ್ಲಿ 200 Antonyms (ಇಂಗ್ಲೀಷ್ ವಿರುದ್ಧಾರ್ಥ ಪದ) ಗಳನ್ನು ನಿಮ್ಮ ಮುಂದಿಡಲು ಪ್ರಯತ್ನಿಸುತ್ತಿದ್ದೇನೆ, ತಪ್ಪು-ತಡೆಗಳಿದ್ದಲ್ಲಿ ನನ್ನ ಗಮನಕ್ಕೆ ತರಬೇಕೆಂದು ವಿನಂತಿ..

ಮುಂದುವರೆದ ಭಾಗ....

101. Prosperity- Adversity
102. Deliberate- Unintentional
103. Disputable- Indisputable
104. Make- Break
105. Depressed- Elated
106. Ham-fisted- Adroit
107. Capture- Liberate
108. Misery- Joy
109. Anarchy- Order
110. Monotony- Variety
111. Latter- Former
112. Diligent- Lazy
113. Philistine- Cultured
114. Ingest- Disgorge
115. Laceration- Healing
116. Disorderly- Organized
117. Glossy- Dull
118. Accomplish- Fail
119. Orderly- Chaotic
120. Strife- Peace
121. Antique- Recent
122. Rapid- Slow
123. Initiated- Concluded
124. Fatigued- Rigid
125. Dynamic- Static
126. Hereditary- Acquired
127. Heretical- Orthodox
128. Implicate- Exonerate
129. Liberty- Slavery
130. Elevation- Reduction
131. Boon- Bane
132. Famous- Obscure
133. Gloomy- Radiant
134. Isolation- Association
135. Contented- Dissatisfied
136. Severe- Mild
137. Fatigued- Energised
138. Flexible- Rigid
139. Delete- Include
140. Evanescent- Eternal
141. Virtue- Vice
142. Confident- Diffident
143. Adamant- Yielding
144. Callous- Sensitive
145. Procrastinate- Expedite
146. Probity- Dishonesty
147. Sporadic- Continual
148. Apposite- Inappropriate
149. Chivalry- Cowardice
150. Sanguine temper- Despairing nature
151. Imperil- Safeguard
152. Consolidated- Disjoined
153. Vituperative- Laudatory
154. Benefactor- Enemy
155. Barren- Fertile
156. Nervous- Composed
157. Evident- Hidden
158. Professional- Amateur
159. Cessation- Commencement
160. Potent- Weak
161. Gregarious- Unsociable
162. Implication- Exoneration
163. Dismal- Bright
164. Meagre- Surplus
165. Flamboyant- Not showy
166. Chronic- Temporary
167. Awkward- Graceful
168. Despair- Hope
169. Validate- Disprove
170. Smug- Dissatisfied
171. Vicious- Virtuous
172. Obscure- Clear
173. Enervate- Strengthen
174. Autonomous- Dependent

ಮುಂದುವರೆಯುವುದು. 

☀️ ಭಾಗ - III: 2016 ರ ಪ್ರಮುಖ ಸ್ಥಳೀಯ, ರಾಷ್ಟ್ರೀಯ / ಅಂತರರಾಷ್ಟ್ರೀಯ ಘಟನೆಗಳು - ಒಂದು ಹಿನ್ನೋಟ : (Important Current Affairs of 2016 at glance)

☀️ ಭಾಗ - III: 2016 ರ ಪ್ರಮುಖ ಸ್ಥಳೀಯ, ರಾಷ್ಟ್ರೀಯ / ಅಂತರರಾಷ್ಟ್ರೀಯ ಘಟನೆಗಳು - ಒಂದು ಹಿನ್ನೋಟ :
(Important Current Affairs of 2016 at glance)
━━━━━━━━━━━━━━━━━━━━━━━━━━━━━━━━━━━━━━━━━━━━━

★ 2016ರ ಪ್ರಚಲಿತ ಘಟನೆಗಳು.
(2016 current affairs in short)

...ಮುಂದುವರೆದ ಭಾಗ.


•►  ಯೋಜನೆ -ಸಾಧನೆ


•► ಕೃಷಿ ಕ್ಷೇತ್ರದ ಮಟ್ಟಿಗೆ, ಈ ವರ್ಷವನ್ನು ಬರದೊಂದಿಗೆ ಸ್ವಾಗತಿಸಿ ಬರದೊಂದಿಗೆ ಬೀಳ್ಕೊಡುವಂತಾಗಿದೆ. ಇನ್ನೊಂದೆಡೆ ರೈತರ ಆತ್ಮಹತ್ಯೆ ಸರಣಿ ಮುಂದುವರಿಯಿತು. ಪಶುಭಾಗ್ಯ ಸೇರಿ ವಿವಿಧ ಯೋಜನೆಗಳು ಜಾರಿಗೊಂಡರೂ, ಕಬ್ಬು, ಈರುಳ್ಳಿ, ಅಡಕೆ ಮತ್ತಿತರೆ ಕೃಷಿಕರ ಬವಣೆ ತಪ್ಪಲಿಲ್ಲ. ಏತನ್ಮಧ್ಯೆ, ಕೇಂದ್ರ ಸರ್ಕಾರ ಜಾರಿಗೊಳಿಸಿದ ಫಸಲ್ ಬಿಮಾ ಯೋಜನೆ ಕೃಷಿಕರ ಪಾಲಿಗೆ ಸ್ವಲ್ಪ ಸಮಾಧಾನ ನೀಡಿತು. ಸಾವಯವ ಕೃಷಿ, ದೇಸೀ ಗೋ ತಳಿ ಕಡೆಗೆ ಜನರ ಒಲವು ಹೆಚ್ಚಾಗಿದ್ದು ವರ್ಷದ ಟ್ರೆಂಡ್.


•►  ಕೃಷಿ ಟೆಕ್ನಾಲಜಿ ಪಾರ್ಕ್:
ಸಾರ್ವಜನಿಕ ಮತ್ತು ಖಾಸಗಿ ಸಹಭಾಗಿತ್ವದಲ್ಲಿ ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿ ರೈಸ್ ಟೆಕ್ನಾಲಜಿ ಪಾರ್ಕ್ ಮತ್ತು ಹಾವೇರಿ ಜಿಲ್ಲೆಯ ರಾಣೆಬೆನ್ನೂರಿನಲ್ಲಿ ಜೋಳದ ಟೆಕ್ನಾಲಜಿ ಪಾರ್ಕ್ ಸ್ಥಾಪನೆಯಾಗಲಿದೆ.


•►  ಪರಂಪರಾಗತ ಕೃಷಿ ವಿಕಾಸ ಯೋಜನೆ:
ಆಯಾ ಪ್ರದೇಶದಲ್ಲಿ ಹೆಸರುವಾಸಿಯಾಗಿರುವ (ಉದಾಹರಣೆ ಭಟ್ಕಳದ ಮಲ್ಲಿಗೆ, ಬ್ಯಾಡಗಿ ಮೆಣಸಿನಕಾಯಿ, ನಂಜನಗೂಡಿನ ರಸಬಾಳೆ) ಬೆಳೆಗಳನ್ನು ಗುರುತಿಸಿ ಅದಕ್ಕೆ ಪ್ರೋತ್ಸಾಹ ನೀಡುವ ಯೋಜನೆ ಇದಾಗಿದೆ. ಯೋಜನಾ ಪ್ರದೇಶವನ್ನು ನಿರ್ದಿಷ್ಟ ಸಾವಯವ ಕ್ಲಸ್ಟರ್ ಎಂದು ಗುರುತಿಸುವ ಕಾರ್ಯ ನಡೆದಿದೆ.


•►  ಹವಾಮಾನ ಆಧಾರಿತ ಬೆಳೆವಿಮೆ:
ಈ ಯೋಜನೆಯನ್ನು ಕೇಂದ್ರ ಸರ್ಕಾರ ಜಾರಿಗೆ ತಂದಿದೆ. ಇದರಲ್ಲಿ ಅಡಕೆ, ತೆಂಗು, ಬಾಳೆ ಮುಂತಾದ 17 ಬೆಳೆಗಳು ಸೇರಿವೆ. ಆದರೆ, ಈ ವಿಮೆಯ ಕುರಿತು ಕರಾವಳಿ, ಮಲೆನಾಡಿನ ರೈತರಿಂದ ಕೆಲವು ಆಕ್ಷೇಪಗಳೂ ಕೇಳಿಬಂದವು.


•►  ಸಾವಯವಕ್ಕೆ ಸಹಕಾರ:
ಸಾವಯವ ಗ್ರಾಮ ಯೋಜನೆಯ ಮುಂದಿನ ಭಾಗವಾಗಿ ಸಾವಯವ ಪ್ರಾಂತೀಯ ಒಕ್ಕೂಟಗಳನ್ನು ರಚಿಸಲಾಗಿದೆ. ರಾಜ್ಯದಲ್ಲಿ 14 ಒಕ್ಕೂಟಗಳನ್ನು ಪ್ರಾರಂಭಿಸಲಾಗಿದೆ. ಸಾವಯವ ಉತ್ಪನ್ನಗಳಿಗೆ ಗುಂಪು ಪ್ರಮಾಣೀಕರಣಕ್ಕೆ ಅನುಕೂಲ ಮಾಡಿಕೊಡುವುದು, ಮಾರುಕಟ್ಟೆ ಒದಗಿಸುವುದು, ಉತ್ಪನ್ನಗಳ ಮೌಲ್ಯವರ್ಧನೆ ಈ ಒಕ್ಕೂಟಗಳ ಪ್ರಮುಖ ಕಾರ್ಯವಾಗಿದೆ. ಸಾವಯವ ಕೃಷಿಗೆ ಉತ್ತೇಜನ ನೀಡುವ ಉದ್ದೇಶದಿಂದ 2016-17ನೇ ಸಾಲಿನ ಬಜೆಟ್​ನಲ್ಲಿ ಸರ್ಕಾರ 412 ಕೋಟಿ ರೂ. ಅನುದಾನವನ್ನು ಮೀಸಲಿಟ್ಟಿದೆ. ಮುಂದಿನ ಮೂರು ವರ್ಷಗಳಲ್ಲಿ ಐದು ಲಕ್ಷ ರೈತರನ್ನು ಸಾವಯವ ಕೃಷಿಗೆ ಒಳಪಡಿಸುವ ಗುರಿಯನ್ನೂ ಹೊಂದಿದೆ.


★ ಸಂಕಷ್ಟ-ಸಂತಾಪ

•►  ರೈತರ ಆತ್ಮಹತ್ಯೆ:
ಬೆಳೆಗಳಿಗೆ ಮಾರುಕಟ್ಟೆಯಲ್ಲಿ ಬೆಲೆಯಿಲ್ಲದೆ ರೈತರು ಸಂಕಷ್ಟ ಅನುಭವಿಸಿದ ವರ್ಷ ಇದು. ಸತತ ಮೂರನೇ ವರ್ಷವೂ ಮಳೆ ಕೈಕೊಟ್ಟ ಪರಿಣಾಮ, ಬೆಳೆ ಹಾನಿ ಸಂಭವಿಸಿದೆ. ಬೆಳೆ ಹಾನಿ ಮತ್ತು ಸಾಲದ ಭಾರ ಮತ್ತಿತರ ಕಾರಣಗಳಿಂದಾಗಿ ಸಾವಿರಕ್ಕೂ ಅಧಿಕ ರೈತರು ನೇಣಿಗೆ ಶರಣಾಗಿದ್ದಾರೆ. ಕೃಷಿ ಇಲಾಖೆಯ ಅಂಕಿ ಅಂಶ ಪ್ರಕಾರ, 2015ರ ಏಪ್ರಿಲ್ 1ರಿಂದ 2016ರ ಜನವರಿ 11ರ ತನಕದ ಅವಧಿಯಲ್ಲಿ 1,002 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ವರ್ಷ ಜನವರಿಯಿಂದ ಡಿಸೆಂಬರ್ ಮಧ್ಯಭಾಗದವರೆಗಿನ ಅವಧಿಯಲ್ಲಿ 480 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.


 •► ಬರ ಎದುರಿಸಲು ವಿಶೇಷ ಪ್ಯಾಕೇಜ್:
ಈ ವರ್ಷ ರಾಜ್ಯದಲ್ಲಿ ಮಳೆ ಇಲ್ಲದೇ ಶೇ. 50ರಷ್ಟು ಬೆಳೆ ನಷ್ಟವಾಗಿದೆ. 139 ತಾಲೂಕುಗಳು ಬರಪೀಡಿತವಾಗಿವೆ. 25 ಸಾವಿರ ಕೋಟಿ ರೂ.ಗಳಿಗೂ ಹೆಚ್ಚಿನ ಮೊತ್ತದ ಮುಂಗಾರು ಹಾಗೂ ಹಿಂಗಾರು ಬೆಳೆ ನಷ್ಟವಾಗಿದೆ. ಕುಡಿಯುವ ನೀರು, ಮೇವು, ವಿದ್ಯುತ್ ಸಮಸ್ಯೆ ಭೀಕರವಾಗಿದೆ. ಮೂರು ವರ್ಷಗಳಿಂದ ಸತತ ಭೀಕರ ಬರದ ದವಡೆಗೆ ಸಿಲುಕಿರುವ ತುಮಕೂರು, ರಾಮನಗರ, ಕೋಲಾರ, ಕಲಬುರಗಿ, ಹಾಸನ, ಚಿಕ್ಕಬಳ್ಳಾಪುರ ಮತ್ತು ಬೀದರ್ ಜಿಲ್ಲೆಗಳ ಆಯ್ದ 23 ತಾಲೂಕುಗಳಿಗೆ ರಾಜ್ಯಸರ್ಕಾರ ಕೃಷಿ ಭಾಗ್ಯ ಯೋಜನೆಯಡಿ ವಿಶೇಷ ಪ್ಯಾಕೇಜ್ ಘೊಷಿಸಿತ್ತು. ಕೃಷಿಭಾಗ್ಯ ಪ್ಯಾಕೇಜ್​ನ ಲಾಭ ಪಡೆಯಲು ಸಾಮಾನ್ಯ ವರ್ಗದವರಿಗೆ ಶೇ.50-75 ಸಬ್ಸಿಡಿ ನೀಡಿದರೆ, ಎಸ್ಸಿ, ಎಸ್ಟಿ ರೈತರಿಗೆ ಶೇ.90-95 ಸಹಾಯಧನ ಕಲ್ಪಿಸಿದೆ.


•►  ಕಸಾಯಿಖಾನೆಗೆ ಜಾನುವಾರು:
ರಾಜ್ಯದ ಬರಪೀಡಿತ ತಾಲೂಕುಗಳ ಗ್ರಾಮೀಣ ಭಾಗದಲ್ಲಿ ಕುಡಿಯಲು ನೀರು ಮತ್ತು ಮೇವು ಸಿಗದೆ ರೈತಾಪಿ ವರ್ಗ ಅನಿವಾರ್ಯವಾಗಿ ಕಡಿಮೆ ದರದಲ್ಲಿ ಜಾನುವಾರುಗಳನ್ನು ಕಸಾಯಿಖಾನೆಗಳಿಗೆ ಮಾರಾಟ ಮಾಡಿದ ಪ್ರಕರಣಗಳು ವರದಿಯಾದವು. ಸರ್ಕಾರ ಮತ್ತು ಖಾಸಗಿ ಸಂಘ ಸಂಸ್ಥೆಗಳು ಮೇವು ಬ್ಯಾಂಕ್, ತಾತ್ಕಾಲಿಕ ಗೋಶಾಲೆಗಳನ್ನು ಸ್ಥಾಪಿಸಿದ್ದರಿಂದ ಕೆಲವೆಡೆ ರೈತರು ಜಾನುವಾರುಗಳನ್ನು ಅಲ್ಲಿ ಬಿಟ್ಟು ಕೊಂಚ ನಿರಾಳತೆ ಅನುಭವಿಸಿದರು.


•►  ಅಡಕೆ ಬೆಳೆಗಾರರ ಮೂಗಿಗೆ ತುಪ್ಪ:
ಗುಟ್ಖಾ ನಿಷೇಧ ಕ್ರಮ ಹಾಗೂ ಇನ್ನೊಂದೆಡೆ, ಆಮದು ನಿಯಂತ್ರಣ ಆಗದ್ದರಿಂದ ಅಡಕೆ ಮಾರುಕಟ್ಟೆಯಲ್ಲಿ ಹೇಳುವಂತಹ ಬದಲಾವಣೆ ಕಂಡು ಬರಲಿಲ್ಲ. ಧಾರಣೆಯೂ ಏರದೆ ಕುಸಿತವೇ ಕಂಡುಬಂದಿತ್ತು. ಈ ನಡುವೆ ಕೇಂದ್ರ ಸರ್ಕಾರ ಬೆಂಬಲ ಬೆಲೆಯನ್ನು ಘೊಷಣೆ ಮಾಡುವ ಮೂಲಕ ಆಶಾಕಿರಣ ಮೂಡಿಸಿತು. ಆದರೆ ಇದು ಡಿಸೆಂಬರ್ ಅಂತ್ಯದವರೆಗೆ ಎನ್ನಲಾಗುತ್ತಿದ್ದು, ಕೇಂದ್ರ ಸರ್ಕಾರ ಅಡಕೆಬೆಳೆಗಾರರ ಮೂಗಿಗೆ ತುಪ್ಪ ಸವರುವ ಕೆಲಸ ಮಾಡಿದೆ ಎಂಬ ಆಕ್ಷೇಪವೂ ಕೇಳಿಬಂದಿದೆ.


 •► ಈರುಳ್ಳಿ ರೈತರ ಗೋಳು:
ಈರುಳ್ಳಿ ಬೆಳೆದ ರೈತರು ಬೆಲೆ ಇಲ್ಲದೆ ರಸ್ತೆಯಲ್ಲಿ ಚೆಲ್ಲಬೇಕಾದ ಸ್ಥಿತಿಯನ್ನು ಎದುರಿಸಿದರು. ಹುಬ್ಬಳ್ಳಿ, ಗದಗ ಜಿಲ್ಲೆಯ ರೈತರು ಬೆಂಬಲ ಬೆಲೆಗೆ ಆಗ್ರಹಿಸಿ ಎಪಿಎಂಸಿಗಳ ಎದುರು ಪ್ರತಿಭಟನೆಯನ್ನೂ ನಡೆಸಿದರು.


•► ನೀರಿಗಾಗಿ ಹೋರಾಟ:
ಮಹದಾಯಿ, ಕಳಸಾ ಬಂಡೂರಿ ಹೋರಾಟ ಗದಗದಲ್ಲಿ ಇನ್ನೂ ಜೀವಂತವಾಗಿದೆ. ಗದಗ ಜಿಲ್ಲೆಯಲ್ಲಿ ನಡೆಸುತ್ತಿರುವ ಧರಣಿ 550 ದಿನಗಳನ್ನು ದಾಟಿದೆ. ಆದರೆ, ಯಾವುದೇ ರೀತಿಯ ಸಕಾರಾತ್ಮಕ ಭರವಸೆ ರೈತರಿಗೆ ದೊರೆತಿಲ್ಲ.


 •►  ಮಲೆನಾಡಲ್ಲಿ ಬಿಸಿಲ ಬೇಗೆ:
ಇತಿಹಾಸದಲ್ಲಿ ಮೊದಲ ಬಾರಿಗೆ ಅತ್ಯಧಿಕ ತಾಪಮಾನ ದಾಖಲಾಯಿತು.
ಮಲೆನಾಡು ಈ ಬಾರಿ ಅಕ್ಷರಶಃ ಬಯಲುಸೀಮೆಯಂತಾಗಿತ್ತು. ಹಿಂದೆಂದೂ ಕಂಡರಿಯದ ತಾಪಮಾನ ದಾಖಲಾಗಿ ಫೆಬ್ರವರಿ, ಮಾರ್ಚ್​ನಲ್ಲಿ 40 ಡಿಗ್ರಿ ಸೆಲ್ಸಿಯಸ್ ದಾಟಿತು. ಮಲೆನಾಡಿನಲ್ಲಿ ಏಪ್ರಿಲ್ ಹಾಗೂ ಮೇನಲ್ಲಿ ಕೆಲವು ದಿನಗಳು ಮಾತ್ರ 40 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗುತ್ತಿತ್ತಷ್ಟೆ.


•►   ನವೋದ್ಯಮದ ಕೃಷಿ :
‘ಡಿಜಿಟಲ್ ಇಂಡಿಯಾ’ದ ಕನಸು ಗ್ರಾಮೀಣ ಭಾರತಕ್ಕೂ ಹರಡುತ್ತಿದೆ. ನವೋದ್ಯಮಗಳ ಪಾಲಿಗೆ ಕರ್ನಾಟಕ ಆಡುಂಬೊಲವಾಗಿದ್ದು, ಸರ್ಕಾರವೂ ಈ ರಂಗಕ್ಕೆ ಉತ್ತೇಜನ ನೀಡುತ್ತಿದ್ದು, ಕೃಷಿ ಕ್ಷೇತ್ರದಲ್ಲೂ ಒಂದಷ್ಟು ಬದಲಾವಣೆಗೆ ಇದು ಕಾರಣವಾಗಿದೆ. ಕೆಲವೊಂದು ನವೋದ್ಯಮಗಳು ಉತ್ತಮ ಪ್ರಗತಿ ದಾಖಲಿಸಿವೆ. ಫ್ಲೈಬರ್ಡ್ ಇನೋವೇಷನ್ಸ್, ನೂಬ್​ಸೋಲ್, ಕ್ರಾಪ್​ಇನ್ ಮುಂತಾದ ನವೋದ್ಯಮಗಳು ಈಗಾಗಲೇ ಕೃಷಿಕರ ಬದುಕಿನ ಜೊತೆಗೆ ಹಾಸುಹೊಕ್ಕಿವೆ.


•►  ಬರದ ಗರ

ತಮಿಳುನಾಡಿಗೆ ಕಾವೇರಿ ನೀರು ಹರಿಯಬಿಟ್ಟಿದ್ದು ಸೇರಿ ರಾಜ್ಯದಲ್ಲಿ ಬರ ಹಾಗೂ ನೆರೆ ಹಾವಳಿಯಿಂದಾಗಿ ಅಪಾರ ಬೆಳೆನಷ್ಟವಾಗಿದೆ. ಕೃಷಿ ಇಲಾಖೆಯ ಪ್ರಾಥಮಿಕ ಅಂದಾಜಿನ ಪ್ರಕಾರ ರಾಜ್ಯದಲ್ಲಿ ಒಟ್ಟಾರೆ 25.05 ಲಕ್ಷ ಹೆಕ್ಟೇರ್​ನಲ್ಲಿ ಬೆಳೆಹಾನಿಯಾಗಿದೆ. 23 ಜಿಲ್ಲೆಗಳಲ್ಲಿ ಮಳೆ ಕೊರತೆಯಿಂದಾಗಿ 23.13 ಲಕ್ಷ ಹೆಕ್ಟೇರ್ ಬೆಳೆಹಾನಿಯಾಗಿದ್ದರೆ, ಅತಿವೃಷ್ಟಿಯಿಂದ ಹೈದರಾಬಾದ್ ಕರ್ನಾಟಕದ ಕಲಬುರಗಿ, ಯಾದಗಿರಿ ಜಿಲ್ಲೆಗಳಲ್ಲಿ 1.92 ಲಕ್ಷ ಹೆಕ್ಟೇರ್​ನಲ್ಲಿ ಬೆಳೆದು ನಿಂತಿದ್ದ ಬೆಳೆ ರೈತರ ಕೈ ಸೇರುತ್ತಿಲ್ಲ. ರಾಜ್ಯದಲ್ಲಿ ಮುಂಗಾರಿನಲ್ಲಿ ವಾಸ್ತವವಾಗಿ 73 ಲಕ್ಷ ಹೆಕ್ಟೇರ್ ಬಿತ್ತನೆಯಾಗಬೇಕು. ಆದರೆ, ಈ ಬಾರಿ ಶೇ.40ಕ್ಕೂ ಹೆಚ್ಚಿನ ಮಳೆ ಕೊರತೆಯಿಂದಾಗಿ 65 ಲಕ್ಷ ಹೆಕ್ಟೇರ್​ನಲ್ಲಿ ಬಿತ್ತನೆಯಾಗಿದೆ. ಅದರಲ್ಲಿ 23.13 ಲಕ್ಷ ಹೆಕ್ಟೇರ್ ಹಾನಿಗೀಡಾಗಿದೆ. ರೈತರು ಎಕರೆಗೆ 10ರಿಂದ 15 ಸಾವಿರ ರೂ. ತನಕ ಪರಿಹಾರ ನೀಡಬೇಕೆಂದು ಮನವಿ ಮಾಡುತ್ತಿದ್ದಾರೆ. ಬೆಳೆಗಳ ಆಧಾರದ ಮೇಲೆ ಪರಿಹಾರ ನೀಡುವುದಾದರೆ ಸುಮಾರು 2,000 ಕೋಟಿ ರೂ.ಗೂ ಹೆಚ್ಚಿನ ಮೊತ್ತ ಅಗತ್ಯ ಇದೆ. ಆದರೆ, ಪರಿಹಾರಕ್ಕೆ ಹಣ ಹೊಂದಿಸುವುದೇ ಸರ್ಕಾರಕ್ಕೆ ಸವಾಲಾಗಿದೆ.



•►  ಪ್ರಮುಖ ಬೆಳೆ ಎಷ್ಟು ನಷ್ಟ?

ಮೆಕ್ಕೆಜೋಳ 8.39 ಲಕ್ಷ
ರಾಗಿ 4.70 ಲಕ್ಷ
ಶೇಂಗಾ 4.23 ಲಕ್ಷ
ಹತ್ತಿ 1.93 ಲಕ್ಷ
ಭತ್ತ 1.31 ಲಕ್ಷ
ಸಜ್ಜೆ 1.10 ಲಕ್ಷ
ಹೆಸರು 1.09 ಲಕ್ಷ
ತೊಗರಿ 93 ಸಾವಿರ
(2016 ಅಕ್ಟೋಬರ್ 6ರ ಮಾಹಿತಿ ಹೆಕ್ಟೇರ್​ಗಳಲ್ಲಿ)


•►  ಅರೇಕಾ ಟೀ

ಕರ್ನಾಟಕದ ಪ್ರಮುಖ ವಾಣಿಜ್ಯ ಬೆಳೆ ಅಡಕೆಯ ಬಳಕೆಗೆ ಹೊಸ ಸ್ವರೂಪ ಸಿಕ್ಕಿತು. ಅಡಕೆಯಿಂದ ತಯಾರಿಸಲಾದ ಚಹಾವನ್ನು ಜನವರಿ ಮೊದಲ ಭಾಗದಲ್ಲಿ ಮಾರುಕಟ್ಟೆಗೆ ಬಿಡುಗಡೆಮಾಡಲಾಯಿತು. ‘ಅರೇಕಾ’ ಶೀರ್ಷಿಕೆಯಡಿ ಮಾರುಕಟ್ಟೆಗೆ ಬಂದಿರುವ ಈ ಹೊಸ ಉತ್ಪನ್ನವು ಶಿವಮೊಗ್ಗದ ಯುವಕ ನಿವೇದನ್ ನೆಂಪೆ ಅವರ ಸಂಶೋಧನೆಯ ಫಲ.


•►  ನೂತನ ದೇಸೀ ತಳಿ ನೋಂದಣಿ

ರಾಷ್ಟ್ರೀಯ ಜಾನುವಾರು ವಂಶವಾಹಿ ಸಂಪನ್ಮೂಲ ಸಂಸ್ಥೆ(ಎನ್​ಬಿಎಜಿಆರ್) ಯಲ್ಲಿ ಈ ವರ್ಷ ಜಾನುವಾರುಗಳ 9 ನೂತನ ದೇಸೀ ತಳಿಗಳನ್ನು ನೋಂದಾಯಿಸಲಾಗಿದೆ. ಉತ್ತರಾಖಂಡದ ಬಾದ್ರಿ(ಗೋವು), ತಮಿಳುನಾಡಿ ಕೋಡಿ, ನಿಕೋಬಾರ್ ದ್ವೀಪದ ಟೆರೆಸ್ಸಾ(ಆಡು), ಒಡಿಶಾದ ಕೇಂದ್ರಪಾದ, ತಮಿಳುನಾಡಿನ ಚೇವಾಡು(ಕುರಿ) ನಿಕೋಬಾರ್ ದ್ವೀಪದ ನಿಕೋಬಾರಿ, ನಾಗಾಲೆಂಡ್​ನ ತೆನ್ಯಿ ವೋ,ಅಸ್ಸಾಂನ ಡೂವ್(ಹಂದಿ), ಮಣಿಪುರದ ಕೌನಾಯೆನ್(ಕೋಳಿ).

Courtesy : Vijayavani newspaper)
...ಮುಂದುವರೆಯುವುದು. 

Tuesday, 27 December 2016

☀️ ಇಂಗ್ಲೀಷ್ ಗ್ರಾಮರ್ : ಭಾಗ-I- ಉಪಯುಕ್ತ 200 ಇಂಗ್ಲೀಷ್ ವಿರುದ್ಧಾರ್ಥ ಪದಗಳು (Antonyms) ★ Important 200 Antonyms Words)

☀️ ಇಂಗ್ಲೀಷ್ ಗ್ರಾಮರ್ : ಭಾಗ-I- ಉಪಯುಕ್ತ 200 ಇಂಗ್ಲೀಷ್ ವಿರುದ್ಧಾರ್ಥ ಪದಗಳು (Antonyms)
★ Important 200 Antonyms Words)
━━━━━━━━━━━━━━━━━━━━━━━━━━━━━━━━━━━━━━━━━━━━━

★️ಇಂಗ್ಲೀಷ್ ಗ್ರಾಮರ್
(English grammar for exams)



•► ಇತ್ತೀಚೆಗೆ ನಡೆಸಲಾಗುತ್ತಿರುವ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಇಂಗ್ಲೀಷ್ ಗ್ರಾಮರ್ ಗೆ ಸಂಬಂಧಿಸಿದಂತೆ ಹೆಚ್ಚು ಒತ್ತು ಕೊಡುತ್ತಿದ್ದು, ಅವುಗಳಲ್ಲಿ Antonyms ಭಾಗ ಕೂಡ ಮಹತ್ವದ್ದಾಗಿದೆ. ಅದಕ್ಕಾಗಿ ನಾನು ಇಲ್ಲಿ 'ಸ್ಪರ್ಧಾಲೋಕ'ದಲ್ಲಿ 200 Antonyms (ಇಂಗ್ಲೀಷ್ ವಿರುದ್ಧಾರ್ಥ ಪದ) ಗಳನ್ನು ನಿಮ್ಮ ಮುಂದಿಡಲು ಪ್ರಯತ್ನಿಸುತ್ತಿದ್ದೇನೆ, ತಪ್ಪು-ತಡೆಗಳಿದ್ದಲ್ಲಿ ನನ್ನ ಗಮನಕ್ಕೆ ತರಬೇಕೆಂದು ವಿನಂತಿ..

1. Inevitable- Avoidable
2. Exceptional- Common
3. Permanent- Temporary
4. Dim- Luminous
5. Reckless- Careful
6. Explicit- Ambiguous
7. Incredible- Believable
8. Repel- Attract
9. Rapidly- Slowly
10. Meticulous- Careless
11. Barbarous- Civilized
12. Successor- Predecessor
13. Urban- Rural
14. Conclusive- Indecisive
15. Terminate-Begin
16. Niggardly- Lavishly
17. Advanced- Receded
18. Enlightened- Ignorant
19. Moderate- Extreme
20. Superficial- Thorough
21. Scorn- Admiration
22. Trivial- Serious
23. Loquacious- Reserved
24. Confiscate- Release
25. Often- Rarely
26. Eminent- Notorious
27. Embark upon- Conclude
28. Diffidence- Boldness
29. Paucity- Plenty
30. Triggered- Choked
31. Fastidious- Adjustable
32. Grandiose- Simple
33. Bleak- Bright
34. Insolent- Humble
35. Lurid- Mild
36. Unscrupulous- Conscientious
37. Melodious- Tuneless
38. Contaminate- Purify
39. Frugal- Extravagant
40. Falling off- Improvement
41. Genial- Unkind
42. Shallow- Deep
43. Immune- Vulnerable
44. Veneration- Disrespect
45. Yield to- Resist
46. Concur- Disagree
47. Vague- Precise
48. Humility- Pride
49. Extol- Censure
50. Takes off- Lands
51. Demolish- Build
52. Prevent- Induce
53. Frailty- Strength
54. Collapse- Rise
55. Anxious- Carefree
56. Thrifty- Wasteful
57. Innovate- Copy
58. Enduring- Fleeting
59. Progressive- Retrogressive
60. Purposely- Unintentionally
61. Brave- Timid
62. Opaque- Transparent
63. Hinder- Encourage
64. Zeal- Apathy
65. Shimmering-Gloomy
66. Plausible- Implausible/ Unbelievable
67. Flair- Inability
68. Dormant- Active
69. Hazy- Clear
70. Fantastic- Ordinary
71. Asceticism- Luxury
72. Dissolution- Establishment
73. Unnerved- Confident
74. Harmony- Disagreement
75. Guilty- Innocent
76. Duplicity- Honesty
77. Jocular- Morose
78. Uncompromising- Flexible
79. Desecration- Consecration
80. Far-fetched- Realistic
81. Parallel- Crooked
82. Blocked- Facilitated
83 Turn coat- Loyal
84. Embellish- Spoil
85. Intentional- Accidental
86. Expand- Contract
87. Stimulate- Discourage
88. Perilous- Safe
89. Audacious- Timid
90. Quiet- Pandemonium
91. Genuine- Fictitious
92. Implicit- Explicit
93. Repulsive- Attractive
94. Escalate- Decrease
95. Commotion- Tranquility
96. Manifested- Concealed
97. Vindictive- Forgiving
98. Inaugurate- Terminate
99. Detest- Like
100. Commence- Conclude

...ಮುಂದುವರೆಯುವುದು. 

☀️ IV.ನ್ಯಾಶನಲ್ ಪಾಲಿಸಿ ಆನ್ ಎಲೆಕ್ಟ್ರಾನಿಕ್ಸ್ : (ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಪ್ರಮುಖ ಯೋಜನೆಗಳು) (National Policy on Electronics)

☀️ IV.ನ್ಯಾಶನಲ್ ಪಾಲಿಸಿ ಆನ್ ಎಲೆಕ್ಟ್ರಾನಿಕ್ಸ್ : (ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಪ್ರಮುಖ ಯೋಜನೆಗಳು)
(National Policy on Electronics)
━━━━━━━━━━━━━━━━━━━━━━━━━━━━━━━━━━━━━━━━━━━━━

★ ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಪ್ರಮುಖ ಯೋಜನೆಗಳು :
(Central Sponsored schemes)


•► ನ್ಯಾಶನಲ್ ಪಾಲಿಸಿ ಆನ್ ಎಲೆಕ್ಟ್ರಾನಿಕ್ಸ್ :


•► ಇದು ಕೇಂದ್ರ ಸರ್ಕಾರದ ಅತ್ಯಾಧುನಿಕ ತಂತ್ರಜ್ಞಾನ ಆಧಾರಿತ ಯೋಜನೆಯಾಗಿದ್ದು, 2012ರಲ್ಲಿ ಇದು ಜಾರಿಯಾಯಿತು.

•► ಭಾರತದ ಎಲೆಕ್ಟ್ರಾನಿಕ್ಸ್ ಸಿಸ್ಟಮ್ ಡಿಸೈನ್ ಹಾಗೂ ಮ್ಯಾನುಫಾಕ್ಚರಿಂಗ್ ಸೆಕ್ಟರ್‌ನಲ್ಲಿ ಜಾಗತಿಕ ಹೂಡಿಕೆದಾರರನ್ನು ಆಕರ್ಷಿಸುವುದು ಹಾಗೂ ಇದಕ್ಕೆ ಪೂರಕವಾಗಿ ಬೇಕಾಗಿರುವ ಅವಕಾಶ ಮತ್ತು ಸಹಕಾರಿ ವಾತಾವರಣವನ್ನು ಸೃಷ್ಠಿಸುವುದು ಈ ಯೋಜನೆಯ ಪ್ರಮುಖ ಉದ್ದೇಶವಾಗಿದೆ.

•► ಇಎಸ್‌ಡಿಎಂನಲ್ಲಿ ಹಾಗೂ ಇದರ ಉತ್ಪಾದನೆಯಲ್ಲಿ ಭಾರತವೇ ಅಚಿತಿಮ ಗುರಿಯಾಗುವಂತೆ ಮಾಡುವುದು ಹಾಗೂ ಮಧ್ಯಮ ಹಾಗೂ ಉನ್ನತ ಮಟ್ಟದ ತಂತ್ರಜ್ಞಾನ ಆಧಾರಿತ ಎಲೆಕ್ಟ್ರಾನಿಕ್ಸ್ ಉತ್ಪನ್ನಗಳನ್ನು ಭಾರತದಲ್ಲೇ ಉತ್ಪಾದಿಸಿ, ಭಾರತವನ್ನು ಎಲೆಕ್ಟ್ರಾನಿಕ್ಸ್ ಮ್ಯಾನುಫಾಕ್ಚರಿಂಗ್ ಹಬ್‌ನ್ನಾಗಿ ಮಾಡುವುದು ಯೋಜನೆಯ ಗುರಿಯಾಗಿದೆ.


•► ಇದನ್ನು ಸಾಕಾರಗೊಳಿಸಲು 2012ರಲ್ಲಿ ಕೇಂದ್ರ ಸರ್ಕಾರ ಇದನ್ನು ಜಾರಿಗೊಳಿಸಿದ್ದು, ಈ ಯೋಜನೆಯ ಪ್ರಮುಖಾಂಶಗಳು ಈ ರೀತಿ ಇವೆ.
*ಸುಧಾರಿತ ವಿಶೇಷ ತಂತ್ರಜ್ಞಾನ ಯೋಜನೆಗಳಿಗೆ ಶೇ.25ರಷ್ಟು ಸಬ್ಸಿಡಿ ನೀಡಲಾಗುತ್ತದೆ.
*ಎಲೆಕ್ಟ್ರಾನಿಕ್ ಮ್ಯಾನುಫಾಕ್ಚರಿಂಗ್ ಕ್ಲಸ್ಟರ್ ಸ್ಕೀಂ ಎನ್ನುವುದು ಯೋಜನೆಯ ಭಾಗವಾಗಿದ್ದು, ಸಂಪನ್ಮೂಲ ಅಭಿವೃದ್ಧಿಯ ವೆಚ್ಚದಲ್ಲಿ ಶೇ. 50ರಷ್ಟು ಸಹಾಯಧನ, ಗ್ರೀನ್‌ಫೀಲ್ಡ್ ಸೆಕ್ಟರ್‌ನಲ್ಲಿನ ಅಭಿವೃದ್ಧಿಗಾಗಿ ಶೇ.75ರಷ್ಟು ಸಹಾಯಧನ ನೀಡಲಾಗುತ್ತದೆ.
*ಎಲೆಕ್ಟ್ರಾನಿಕ್ಸ್ ಸಾಧನಗಳನ್ನು ದೇಶದಲ್ಲೇ ಹೆಚ್ಚು ಹೆಚ್ಚು ಉತ್ಪಾದನೆ ಮಾಡಲು ಸಹಕಾರ ಹಾಗೂ ಪ್ರೋತ್ಸಾಹ ನೀಡುವುದು. ಇದಕ್ಕಾಗಿ ಶೇ.30ಕ್ಕೂ ಅಧಿಕ ಮೊತ್ತದ ಸಹಕಾರ ನೀಡುವುದು.
*ಪ್ರಮುಖವಾಗಿ ಬೇಡಿಕೆಯಿರುವ ಸೆಟ್ ಟಾಪ್ ಬಾಕ್ಸ್‌ಗಳನ್ನು ತಯಾರಿಸಿ ವಿದೇಶಗಳಿಗೆ ರಫ್ತು ಮಾಡುವುದು ಇದರಲ್ಲಿನ ಒಂದು ಅಂಶವಾಗಿದ್ದು, ಇದಕ್ಕಾಗಿ ಶೇ.2ರಿಂದ 5 ರಷ್ಟು ಇನ್‌ಸೆಂಟಿವ್ ನೀಡಲಾಗುತ್ತದೆ.
*ಎಲೆಕ್ಟ್ರಾನಿಕ್ಸ್ ಕ್ಷೇತ್ರದಲ್ಲಿನ ಹೊಸ ಆವಿಷ್ಕಾರಗಳಿಗೆ ಪೂರಕವಾಗಿ ಸಂಶೋಧನೆ ನಡೆಸಲು ಅನುದಾನವನ್ನು ನಿಗದಿಪಡಿಸಿ, ಪ್ರತ್ಯೇಕ ಮೊತ್ತವನ್ನು ಇಡುವುದು.
*ಬೇಡಿಕೆಯಿರುವ ಎಫ್‌ಎಬಿ ತಯಾರಿಕೆಗೆ ಹೆಚ್ಚಿನ ಒತ್ತು ನೀಡುವುದು.
*ಎಲೆಕ್ಟ್ರಾನಿಕ್ಸ್ ಕ್ಷೇತ್ರದತ್ತ ಯುವಕರನ್ನು ಹೆಚ್ಚು ಆಕರ್ಷಿಸಲು ಕೌಶಲ್ಯ ಅಭಿವೃದ್ಧಿಗಾಗಿ ವಿವಿಧ ಹಂತದ ಯೋಜನೆಗಳನ್ನು ರೂಪಿಸಿ, ಜಾರಿಗೊಳಿಸುವುದು.

III.ಉಜ್ವಲಾ : (ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಪ್ರಮುಖ ಯೋಜನೆಗಳು) (UJJAWALA Scheme )

☀️ III.ಉಜ್ವಲಾ : (ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಪ್ರಮುಖ ಯೋಜನೆಗಳು)
(UJJAWALA Scheme)
━━━━━━━━━━━━━━━━━━━━━━━━━━━━━━━━━━━━━━━━━━━━━

★ ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಪ್ರಮುಖ ಯೋಜನೆಗಳು :
(Central Sponsored schemes)

★ ಉಜ್ವಲಾ:


(UJJAWALA : A Comprehensive Scheme for Prevention of trafficking and Resue, Rehabilitation and Re-integration of Victims of Trafficking and Commercial Sexual Exploitation)

•► ಉಜ್ವಲಾ ಕೇಂದ್ರ ಸರ್ಕಾರದ ಯೋಜನೆಯಾಗಿದ್ದು, ವಾಣಿಜ್ಯಾತ್ಮಕ ಲೈಂಗಿಕ ಶೋಷಣೆಗೆ ಒಳಗಾಗಿ ಸಾಗಾಣಿಕೆಗೆ ಒಳಗಾದ ಮಹಿಳೆಯರು ಹಾಗೂ ಮಕ್ಕಳನ್ನು ಗುರುತಿಸಿ, ರಕ್ಷಿಸಿ, ಪುನರ್‌ವಸತಿ ಕಲ್ಪಿಸುವುದು ಈ ಯೋಜನಯೆ ಮೂಲ ಉದ್ದೇಶವಾಗಿದೆ.

•► ಇದರೊಂದಿಗೆ ಮಹಿಳೆಯರು ಹಾಗೂ ಮಕ್ಕಳ ಸಾಗಾಣಿಕೆಯನ್ನು ತಡೆಗಟ್ಟುವುದು ಸರ್ಕಾರದ ಉದ್ದೇಶವಾಗಿದ್ದು, ಇದಕ್ಕಾಗಿ ಜಾಗೃತಿ ಮೂಡಿಸುವ ಕಾರ್ಯವನ್ನೂ ಈ ಯೋಜನೆಯ ಅಡಿಯಲ್ಲಿ ರೂಪಿಸಲಾಗಿದೆ. ಕಳ್ಳ ಸಾಗಾಣಿಕೆಗೆ ಒಳಪಟ್ಟು, ಲೈಂಗಿಕ ಶೋಷಣೆಯ ಜಾಲಕ್ಕೆ ಗುರಿಯಾಗುವವರನ್ನು ರಕ್ಷಿಸುವ ಜೊತೆಯಲ್ಲಿ, ಸಾಮಾಜಿಕವಾಗಿ ಜಾಗೃತಿ ಮೂಡಿಸುವುದರೊಂದಿಗೆ, ಸ್ಥಳೀಯ ಮಟ್ಟದಲ್ಲೂ ಜಾಗೃತಿ ಮೂಡಿಸುವುದು ಉದ್ದೇಶವಾಗಿದೆ.

•► ಇದಕ್ಕಾಗಿ ವಿವಿಧ ರೀತಿಯ ಸೆಮಿನಾರ್, ವರ್ಕ್‌ಶಾಪ್‌ಗಳು ಸೇರಿದಂತೆ ಕ್ರಿಯಾತ್ಮಕ ಕಾರ್ಯಗಳನ್ನು ಇದರಲ್ಲಿ ಹಮ್ಮಿಕೊಳ್ಳಲಾಗುತ್ತಿದೆ. ದುಷ್ಕರ್ಮಿಗಳ ಜಾಲದಲ್ಲಿ ಸಿಲುಕಿರುವವರನ್ನು ಪತ್ತೆ ಮಾಡಿ, ಅವರಿಗೆ ಪುನರ್‌ವಸತಿ ಕಲ್ಪಿಸಿ, ರಕ್ಷಣೆ ನೀಡಲಾಗುತ್ತದೆ.

•► ರಕ್ಷಿಸಲಾದ ಮಹಿಳೆಯರು ಹಾಗೂ ಮಕ್ಕಳಿಗೆ ವಸತಿ, ಊಟ, ಔಷಧೋಪಚಾರ, ಕೌನ್ಸಿಲಿಂಗ್, ಕಾನೂನು ನೆರವು ನೀಡುವುದು ಸೇರಿದಂತೆ ಮುಂದಿನ ಜೀವನ ರೂಪಿಸಿಕೊಳ್ಳಲು ಸಹಕಾರಿಯಾಗುವಂತೆ ಕೌಶಲ್ಯಾಧಾರಿತ ತರಬೇತಿಯನ್ನು ನೀಡಲಾಗುತ್ತದೆ.

•► ಸರ್ಕಾರ ಈ ಯೋಜನೆಯನ್ನು ಸಮರ್ಪಕವಾಗಿ ಜಾರಿಗೊಳಿಸಲು ಸಮಾಜ ಕಲ್ಯಾಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಇಲಾಖೆ, ಮಹಿಳಾ ಅಭಿವೃದ್ಧಿ ಇಲಾಖೆ, ಸ್ಥಳೀಯ ಸಂಸ್ಥೆಗಳು, ಸ್ಥಳೀಯ ಮಟ್ಟದ ಹೆಸರಾಂತ ಸಾರ್ವಜನಿಕ ಅಥವಾ ಖಾಸಗೀ ಸಂಸ್ಥೆಗಳ ಸಹಯೋಗದಲ್ಲಿ ಯೋಜನೆಯನ್ನು ಜಾರಿಗೊಳಿಸಲಾಗುತ್ತಿದೆ.


•► ಯೋಜನೆಯ ಸಮರ್ಪಕ ಜಾರಿಗಾಗಿ ಐದು ಹಂತದ ಕ್ರಿಯಾಯೋಜನೆಯನ್ನು ಜಾರಿಗೊಳಿಸಲಾಗಿದೆ.

1.ತಡೆಗಟ್ಟುವಿಕೆ

2.ರಕ್ಷಣೆ

3.ಪುನರ್‌ವಸತಿ

4.ಏಕೀಕರಣ

5.ವಾಪಾಸಾತಿ


•► ಕೇಂದ್ರ ಸರ್ಕಾರ ರಾಜ್ಯ ಸರ್ಕಾರ, ಸ್ಥಳೀಯ ಸಂಸ್ಥೆಗಳು, ಎನ್‌ಜಿಒ ಹಾಗೂ ಖಾಸಗಿ ಸಂಸ್ಥೆಗಳ ಸಹಯೋಗದಲ್ಲಿ ಉಜ್ವಲಾ ಯೋಜನೆಯನ್ನು ಜಾರಿಗೊಳಿಸುತ್ತಿದ್ದು, ಇದಕ್ಕಾಗಿ ಕೇಂದ್ರ ಸರ್ಕಾರ ಬೃಹತ್ ಮೊತ್ತದ ಹಣವನ್ನು ವ್ಯಯ ಮಾಡುತ್ತಿದೆ. ಇದಕ್ಕಾಗಿ ಇದುವರೆಗೂ, ಎ ಗ್ರೇಡ್ ನಗರಗಳಲ್ಲಿನ ಜಾರಿಗಾಗಿ 18,86,000 ರೂ, ಬಿ ಗ್ರೇಡ್ ನಗರದಲ್ಲಿ ಜಾರಿಗಾಗಿ 18,26,500 ಮೊತ್ತವನ್ನು ವಾರ್ಷಿಕ ವ್ಯಯ ಮಾಡುತ್ತಿದೆ.

☀️ ಭಾಗ - II: 2016 ರ ಪ್ರಮುಖ ರಾಷ್ಟ್ರೀಯ / ಅಂತರರಾಷ್ಟ್ರೀಯ ಘಟನೆಗಳು - ಒಂದು ಹಿನ್ನೋಟ : (Important Current Affairs of 2016 at glance)

☀️ ಭಾಗ - II: 2016 ರ ಪ್ರಮುಖ ರಾಷ್ಟ್ರೀಯ / ಅಂತರರಾಷ್ಟ್ರೀಯ ಘಟನೆಗಳು - ಒಂದು ಹಿನ್ನೋಟ :
(Important Current Affairs of 2016 at glance)
━━━━━━━━━━━━━━━━━━━━━━━━━━━━━━━━━━━━━━━━━━━━━

★ 2016ರ ಪ್ರಚಲಿತ ಘಟನೆಗಳು.
(2016 current affairs in short)

...ಮುಂದುವರೆದ ಭಾಗ.



— ಭಾರತ ಈ ವರ್ಷವೂ ಹಲವು ಭಯೋತ್ಪಾದಕ ದಾಳಿಗಳನ್ನು ಎದುರಿಸಿತು. ಭಯೋತ್ಪಾದಕರು ಹೆಚ್ಚಾಗಿ ಸೇನಾನೆಲೆಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದ್ದು ಆತಂಕಕ್ಕೆ ಕಾರಣವಾಯಿತು.


•► ಪಠಾಣ್​ಕೋಟ್ ಜನವರಿ 2

ಪಠಾಣ್​ಕೋಟ್ ವಾಯುನೆಲೆ ಮೇಲೆ ಜಮ್ಮು -ಕಾಶ್ಮೀರ ಮೂಲದ ಯುನೈಟೆಡ್ ಜಿಹಾದ್ ಕೌನ್ಸಿಲ್ ಉಗ್ರರು ನಡೆಸಿದ ದಾಳಿಯಲ್ಲಿ ಓರ್ವ ನಾಗರಿಕ ಮೃತಪಟ್ಟು 7 ಸೈನಿಕರು ಹುತಾತ್ಮರಾದರು.


•► ಪ್ಯಾಂಪೋರ್ ಜೂನ್ 25

ಕೇಂದ್ರ ಮೀಸಲು ಪೊಲೀಸ್ ಪಡೆಯ 40 ಜನರು ಪ್ರಯಾಣಿಸುತ್ತಿದ್ದ ಆರು ಬಸ್​ಗಳ ಮೇಲೆ ಲಷ್ಕರ್ ಎ ತೋಯ್ಬಾದ ನಾಲ್ವರು ಉಗ್ರರು ದಾಳಿ ನಡೆಸಿದರು. ಈ ದಾಳಿಯಲ್ಲಿ 8 ಸೈನಿಕರು ಹುತಾತ್ಮರಾದರೆ 20ಕ್ಕೂ ಹೆಚ್ಚು ನಾಗರಿಕರಿಗೆ ಗಾಯಗಳಾದವು. ಸೈನಿಕರು ನಡೆಸಿದ ಪ್ರತಿದಾಳಿಯಲ್ಲಿ ಇಬ್ಬರು ಉಗ್ರರು ಹತರಾಗಿ ಇನ್ನಿಬ್ಬರು ಪರಾರಿಯಾದರು.


•► ಅಸ್ಸಾಂನಲ್ಲಿ ಬೋಡೊ ಅಟ್ಟಹಾಸ

ಆಗಸ್ಟ್ 5

ಸರಬಾನಂದ ಸೋನೋವಾಲ ನೇತೃತ್ವದಲ್ಲಿ ಅಸ್ಸಾಂನಲ್ಲಿ ಅಧಿಕಾರಕ್ಕೇರಿದ್ದ ಬಿಜೆಪಿ ಸರ್ಕಾರಕ್ಕೆ ಮೊದಲ ಸವಾಲು ಒಡ್ಡಿದ್ದು ಬೋಡೊ ಉಗ್ರರು. ಕೋಕ್ರಾಜಾರ್ ಜಿಲ್ಲೆಯ ಬಲಾಜನಾ ತಿನೈಲಿ ಪ್ರದೇಶದಲ್ಲಿದ್ದ ಮಾರುಕಟ್ಟೆ ಮೇಲೆ ಇಬ್ಬರು ಬೋಡೊ ಉಗ್ರರು ನಡೆಸಿದ ಬಾಂಬ್ ದಾಳಿಯಲ್ಲಿ 13 ಜನರು ಮೃತಪಟ್ಟು 16 ನಾಗರಿಕರು ಗಾಯಗೊಂಡರು. ಕೂಡಲೇ ಪ್ರತಿದಾಳಿ ನಡೆಸಿದ ಪೊಲೀಸರು ಓರ್ವ ಉಗ್ರನನ್ನು ಹತ್ಯೆಗೈದರು.


•► ಬಾರಾಮುಲ್ಲಾ

ಅಕ್ಟೋಬರ್ 3

ಉರಿ ದಾಳಿಯಾಗಿ ಕೆಲ ವಾರಗಳಲ್ಲೇ ಜಮ್ಮು-ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯ ಭಾರತೀಯ ಸೇನೆಯ 46 ರಾಷ್ಟ್ರೀಯ ರೈಫಲ್ಸ್ ಕೇಂದ್ರದ ಮೇಲೆ ದಾಳಿ ನಡೆಸಲಾಯಿತು. ಜೈಶ್ ಎ ಮುಹಮ್ಮದ್ ಸಂಘಟನೆಯ ಇಬ್ಬರು ಉಗ್ರರು ನಡೆಸಿದ ಈ ದಾಳಿಯಲ್ಲಿ ಓರ್ವ ಸೇನಾಧಿಕಾರಿ ಹುತಾತ್ಮರಾದರು. ಇಬ್ಬರೂ ಉಗ್ರರನ್ನು ಹತ್ಯೆಗೈಯಲಾಯಿತು.


•► ಉರಿ

ಸೆಪ್ಟೆಂಬರ್ 18

ಕಳೆದ ಎರಡು ದಶಕಗಳಲ್ಲಿ ಕಾಶ್ಮೀರದಲ್ಲಿ ಸೇನೆಯ ಮೇಲಾದ ಅತಿ ಭೀಕರ ದಾಳಿ ಎಂದು ಕರೆಸಿಕೊಂಡಿದ್ದು ಉರಿ ಸೇನಾನೆಲೆ ಮೇಲಿನ ದಾಳಿ. ಸೆ.18ರಂದು ಮುಂಜಾನೆ 5.30ರ ವೇಳೆಗೆ ಸೈನಿಕರು ಶಿಫ್ಟ್ ಬದಲಾಯಿಸುವ ಅವಧಿಯನ್ನೇ ಬಳಸಿಕೊಂಡಿದ್ದ ಉಗ್ರರು ಉರಿ ಸೇನಾನೆಲೆ ಮೇಲೆ ದಾಳಿ ನಡೆಸಿದರು. ಕೇವಲ ಮೂರು ನಿಮಿಷಗಳ ಅಂತರದಲ್ಲಿ ನಡೆಸಿದ 17 ಗ್ರೆನೇಡ್​ಗಳ ದಾಳಿಯಲ್ಲಿ 19 ಸೈನಿಕರು ಹುತಾತ್ಮರಾಗಿ, 30ಕ್ಕೂ ಹೆಚ್ಚು ಸೈನಿಕರು ಗಾಯಗೊಂಡರು. 6 ಗಂಟೆಗಳ ಕಾಲ ನಡೆದ ಗುಂಡಿನ ಚಕಮಕಿಯಲ್ಲಿ ನಾಲ್ವರು ಉಗ್ರರನ್ನು ಹತ್ಯೆಗೈಯಲಾಗಿತ್ತು.


•► ಸ್ತಬ್ಧವಾಯ್ತು ಕಾಶ್ಮೀರ

ಹಿಜ್ಬುಲ್ ಮುಜಾಹಿದೀನ್ ಉಗ್ರಸಂಘಟನೆಯ ಕಮಾಂಡರ್ ಆಗಿದ್ದ ಬುರ್ಹಾನ್ ವಾನಿಯನ್ನು ಜುಲೈ 8ರಂದು ಎನ್​ಕೌಂಟರ್​ನಲ್ಲಿ ಹತ್ಯೆಗೈದಿದ್ದು, ಇಡೀ ಕಾಶ್ಮೀರವನ್ನೇ ಸ್ತಬ್ಧವಾಗುವಂತೆ ಮಾಡಿತ್ತು. ಕಾಶ್ಮೀರದಲ್ಲಿ ಭಾರತ ಆಡಳಿತ ನಡೆಸುವುದನ್ನು ವಿರೋಧಿಸಿ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್​ಗಳನ್ನು ಹಾಕಿಯೇ ಖ್ಯಾತಿಗಳಿಸಿದ್ದ ವಾನಿಯ ಎನ್​ಕೌಂಟರ್​ನಿಂದ ಕಾಶ್ಮೀರದಲ್ಲಿ ಭಾರಿ ಪ್ರತಿಭಟನೆಗಳು ನಡೆದವು. ಇದರಲ್ಲಿ 85 ಜನರು ಸಾವನ್ನಪ್ಪಿದರು, 13,000 ನಾಗರಿಕರು ಮತ್ತು ಭದ್ರತಾ ಪಡೆಯ 4,000 ಸಿಬ್ಬಂದಿ ಗಾಯಗೊಂಡರು. ನಿರಂತರ 53 ದಿನಗಳ ಕಾಲ ಕರ್ಫ್ಯೂ ವಿಧಿಸಲಾಗಿತ್ತು. ಆಗಸ್ಟ್ 31ರ ಬಳಿಕ ಕರ್ಫ್ಯೂ ತೆರವುಗೊಂಡಿತು.


•► ಕುಪ್ವಾರ ಸೇನಾ ಕ್ಯಾಂಪ್ ಮೇಲೆ ದಾಳಿ

ಅಕ್ಟೋಬರ್ 6

ಜಮ್ಮು-ಕಾಶ್ಮೀರದ ಕುಪ್ವಾರ ಜಿಲ್ಲೆಯ ಹಂದ್ವಾರದಲ್ಲಿರುವ ಸೇನಾ ಕ್ಯಾಂಪ್ ಮೇಲೆ ಪಾಕಿಸ್ತಾನದ ಮೂವರು ಉಗ್ರರು ದಾಳಿ ನಡೆಸಿದರು. ಸೈನಿಕರ ವಿಶ್ರಾಂತಿ ಕೊಠಡಿಗಳನ್ನೇ ಗುರಿಯಾಗಿಸಿಕೊಂಡು ದಾಳಿ ನಡೆಸಲಾಗಿತ್ತು. ಆದರೆ ಪ್ರತಿದಾಳಿ ನಡೆಸಿದ ಸೈನಿಕರು ಮೂವರೂ ಉಗ್ರರನ್ನು ಹತ್ಯೆಗೈದರು.

151 ಬಾರಿ ಕದನ ವಿರಾಮ ಉಲ್ಲಂಘನೆ!: ಈ ವರ್ಷ ಪಾಕಿಸ್ತಾನ ಸೇನೆ 151ಕ್ಕೂ ಹೆಚ್ಚು ಬಾರಿ ಕದನ ವಿರಾಮ ಉಲ್ಲಂಘನೆ ಮಾಡಿದೆ. ಅದರಲ್ಲೂ ಸೆಪ್ಟೆಂಬರ್ ತಿಂಗಳೀಚೆಗೆ 110 ಬಾರಿ ಉಲ್ಲಂಘನೆ ಮಾಡಿದೆ. 2003ರ ನ.26ರಂದು ಉಭಯ ರಾಷ್ಟ್ರಗಳ ನಡುವೆ ಕದನ ವಿರಾಮ ಘೊಷಿಸಲಾಗಿತ್ತು.


•► ಕ್ಷೀಣಿಸಿದ ಐಸಿಸ್ ಪ್ರಭಾವ

ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಆಂಡ್ ಲೆವಂಟ್(ಐಎಸ್​ಐಎಲ್) ಅಥವಾ ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಆಂಡ್ ಸಿರಿಯಾ (ಐಎಸ್​ಐಎಸ್) ಪಾಲಿಗೆ 2016 ಕೊಂಚ ಹಿನ್ನಡೆಯ ವರ್ಷ. ಆರ್ಥಿಕ ಹೊಡೆತ ಒಂದೆಡೆಯಾದರೆ, ಅಮೆರಿಕ ನೇತೃತ್ವದ ಸಂಯುಕ್ತ ಸೇನಾಪಡೆಗಳ ದಾಳಿಗೆ ಸಿಲುಕಿ ಹಲವು ನಾಯಕರು ಸಾವನ್ನಪ್ಪಿದ್ದು ಮತ್ತೊಂದು ಹೊಡೆತ. ಮಾರ್ಚ್, ಏಪ್ರಿಲ್ ವೇಳೆಗಾಗಲೇ ಈ ಉಗ್ರ ಸಂಘಟನೆ ತನ್ನ ಬಳಿ ಇದ್ದ ಭೂಪ್ರದೇಶದಲ್ಲಿ ಕಾಲಂಶವನ್ನು ಕಳೆದುಕೊಂಡಿತ್ತು.


•► ಭೂಪ್ರದೇಶ ಕಳೆದುಕೊಂಡ ಉಗ್ರರು

ಸಿರಿಯಾ ಮತ್ತು ಇರಾಕ್​ಗಳಲ್ಲಿ ಹಿಡಿತ ಉಳಿಸಿಕೊಂಡಿರುವ ಐಸಿಸ್ ತನ್ನ ವಶದಲ್ಲಿದ್ದ ಶೇ. 22 ಪ್ರದೇಶವನ್ನು ಮಾರ್ಚ್ ವೇಳೆಗಾಗಲೇ ಕಳೆದುಕೊಂಡಿತ್ತು. ಇದಾಗಿ, ಮೂರು ತಿಂಗಳ ಅವಧಿಯಲ್ಲಿ ಮತ್ತೆ ಶೇಕಡ 8 ಭಾಗ ಕೈತಪ್ಪಿದ್ದು ಐಸಿಸ್ ಪಾಲಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿತ್ತು. ರಷ್ಯಾ, ಅಮೆರಿಕ ಮತ್ತು ಫ್ರಾನ್ಸ್ ಮತ್ತಿತರ ರಾಷ್ಟ್ರಗಳು ಐಸಿಸ್ ವಿರುದ್ಧ ಯುದ್ಧ ಕೈಗೊಂಡಿವೆ. ಈ ಸಮರ 2016ರ ಅವಧಿಯಲ್ಲಿ ತೀವ್ರಗೊಂಡಿತ್ತು.


•► ಆರ್ಥಿಕ ಸಂಕಷ್ಟವೂ ಎದುರಾಯ್ತು

ಪೆಟ್ರೋಲಿಯಂ ಗಣಿಗಳ ನಾಶ, ಕಳ್ಳಸಾಗಣೆ ಮತ್ತು ಅಕ್ರಮ ಶಸ್ತ್ರಾಸ್ತ್ರ ಸಾಗಾಟಕ್ಕೆ ಕಡಿವಾಣ, ಮತ್ತಿತರ ವ್ಯವಹಾರಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ದಿಗ್ಬಂಧನ ವಿಧಿಸಿದ್ದು ಕೂಡಾ ಐಸಿಸ್ ಪರಿಸ್ಥಿತಿ ಬಿಗಡಾಯಿಸಲು ಕಾರಣವಾಯಿತು. ಅಮೆರಿಕದ ಅರ್ಥವ್ಯವಸ್ಥೆಯನ್ನೇ ಬುಡಮೇಲು ಮಾಡಲು ಪಣ ತೊಟ್ಟಿದ್ದ ಐಸಿಸ್ ಉಗ್ರರು, ತಮ್ಮದೇ ಆದ ಚಿನ್ನ, ಬೆಳ್ಳಿ ಹಾಗೂ ತಾಮ್ರದ ನಾಣ್ಯಗಳನ್ನು ಕಳೆದ ವರ್ಷ ಪರಿಚಯಿಸಿದ್ದರು. ಆದರೆ ಅವರ ಲೆಕ್ಕಾಚಾರ ತಲೆಕೆಳಗಾಗಿ ಈ ವರ್ಷ ಪ್ರತಿಯೊಂದು ವಹಿವಾಟಿಗೂ ಡಾಲರನ್ನು ಅವಲಂಬಿಸುವಂತಾಯಿತು. ಸಿರಿಯಾದ ಪ್ರಮುಖ ನಗರ ರಖ್ಖಾದಲ್ಲಿ ಕಾನೂನು ಉಲ್ಲಂಘಿಸುವ ಸ್ಥಳೀಯರಿಗೆ ದಂಡ ಪಾವತಿಯನ್ನು ಸಿರಿಯಾ ಪೌಂಡ್ ಅಥವಾ ದಿನಾರ್ ಬದಲಾಗಿ ಡಾಲರ್ ರೂಪದಲ್ಲೇ ಪಾವತಿಸುವಂತೆ ಐಸಿಸ್ ಸೂಚಿಸಿದ್ದು, ಅದರ ಆರ್ಥಿಕ ಸಂಕಷ್ಟಕ್ಕೆ ಸಾಕ್ಷಿ.


•► ಭಟ್ಕಳದ ಉಗ್ರ ಪೋಸ್ಟರ್​ಬಾಯ್

ಅಪ್ಘಾನಿಸ್ತಾನದಲ್ಲಿ ಎರಡು ವರ್ಷ ಹಿಂದೆ ಹತ್ಯೆಯಾದ ಭಟ್ಕಳದ ಉಗ್ರ ಅನ್ವರ್ ಹುಸೇನ್​ನನ್ನು ಐಸಿಸ್ ಸಂಘಟನೆ ಹೊಸ ಪೋಸ್ಟರ್​ಬಾಯ್ ಆಗಿ ಬಿಂಬಿಸಿದ್ದು, ಭಾರತದಿಂದ ಹೆಚ್ಚಿನ ಸಂಖ್ಯೆಯ ಯುವಕರನ್ನು ಸಂಘಟನೆಯತ್ತ ಸೆಳೆಯುವ ಯೋಜನೆ ರೂಪಿಸಿತ್ತು. ಈ ಕುರಿತ 14 ನಿಮಿಷದ ವಿಡಿಯೋವನ್ನು ಅದು ವರ್ಷದ ಮಧ್ಯಭಾಗದಲ್ಲಿ ಯೂಟ್ಯೂಬ್​ನಲ್ಲಿ ಬಿಡುಗಡೆ ಮಾಡಿತ್ತು.


•► ಅಲ್ ಬಗ್ದಾದಿ ಸಾವು?

ಐಸಿಸ್​ನ ಸ್ವಘೊಷಿತ ಮುಖ್ಯಸ್ಥ ಅಬು ಬಕ್ರ್ ಅಲ್ ಬಗ್ದಾದಿ ಸಾವಿನ ಕುರಿತಂತೆ ಇನ್ನೂ ನಿಖರ ಮಾಹಿತಿ ಹೊರಬಿದ್ದಿಲ್ಲ. ಆದರೆ, 2015ರ ಮಾ.18ರಂದು ನಡೆದ ವಾಯುದಾಳಿಯಲ್ಲಿ ಬಗ್ದಾದಿ ಹಾಗೂ ಆತನ ಮೂವರು ಬೆಂಬಲಿಗರು ಗಂಭೀರವಾಗಿ ಗಾಯಗೊಂಡಿದ್ದರು. ಈಗ 2016ರ ಏಪ್ರಿಲ್​ನಲ್ಲಿ ಸಿರಿಯಾ ಗಡಿಭಾಗದಲ್ಲಿ ಬೆಂಬಲಿಗರೊಂದಿಗೆ ಸಭೆ ನಡೆಸುತ್ತಿದ್ದ ವೇಳೆ ನ್ಯಾಟೋ ಮಿತ್ರಪಡೆಗಳು ನಡೆಸಿದ ಬಾಂಬ್ ದಾಳಿಯಲ್ಲಿ ಬಗ್ದಾದಿ ಗಾಯಗೊಂಡಿದ್ದಾನೆ ಎಂದು ವರದಿಯಾಗಿತ್ತು. ಇರಾಕಿನ ಟಿವಿ ಚಾನೆಲ್ ಜೂನ್ 9ರಂದು ಬಿತ್ತರಿಸಿದ ಸುದ್ದಿ ಪ್ರಕಾರ ಉತ್ತರ ಇರಾಕ್​ನಲ್ಲಿ ಅಮೆರಿಕ ಸೇನೆ ನಡೆಸಿದ ದಾಳಿಯಲ್ಲಿ ಅಲ್ ಬಗ್ದಾದಿ ಗಾಯಗೊಂಡಿದ್ದಾನೆ. ಜೂನ್ 14ರಂದು ಮಧ್ಯಪ್ರಾಚ್ಯದ ಅನೇಕ ಮಾಧ್ಯಮಗಳು ಬಿತ್ತರಿಸಿದ ವರದಿಯಲ್ಲಿ, ರಖ್ಖಾ ಮೇಲೆ ಅಮೆರಿಕ ಸೇನೆ ನಡೆಸಿದ ದಾಳಿಯಲ್ಲಿ ಜೂನ್ 12ರಂದೇ ಅಲ್ ಬಗ್ದಾದಿ ಹತನಾಗಿದ್ದಾನೆ ಎಂದಿದ್ದವು. ಇನ್ನೊಂದೆಡೆ, ಅಕ್ಟೋಬರ್ 3ರಂದು ಹಲವು ಮಾಧ್ಯಮಗಳು, ಅಲ್ ಬಗ್ದಾದಿ ಮತ್ತು ಆತನ ಮೂವರು ಸಹಚರರಿಗೆ ವಿಷ ಉಣಿಸಲಾಗಿದೆ. ಅವರನ್ನು ಒಬ್ಬ ಹಂತಕ ಜೀವಂತವಾಗಿ ಒತ್ತೆಯಾಳಾಗಿ ಇರಿಸಿಕೊಂಡಿದ್ದಾನೆ ಎಂಬ ವರದಿ ಬಿತ್ತರಿಸಿದ್ದವು. ಆದರೆ, ಇದ್ಯಾವುದನ್ನೂ ಐಸಿಸ್ ದೃಢೀಕರಿಸಿಲ್ಲ.


•► ಭಾರತದಲ್ಲಿ ಐಸಿಸ್​ಗೆ ಕಡಿವಾಣ

ಗುಪ್ತಚರ ಮೂಲಗಳ ಪ್ರಕಾರ ಇದುವರೆಗೆ 23 ಭಾರತೀಯರು ಐಸಿಸ್ ಸೇರ್ಪಡೆಯಾಗಿದ್ದು, ಇವರಲ್ಲಿ ಆರು ಮಂದಿ ಸಾವನ್ನಪ್ಪಿದ್ದಾರೆ. ಸಾಮಾಜಿಕ ಜಾಲತಾಣಗಳ ಮೇಲೆ ನಿಗಾ ಇಟ್ಟಿರುವ ಭದ್ರತಾ ಪಡೆಗಳು ಐಸಿಸ್ ಸೇರ ಹೊರಟಿದ್ದ 150 ಯುವಕರನ್ನು ತಡೆಹಿಡಿದಿವೆ. ಕಳೆದೊಂದು ವರ್ಷದ ಅವಧಿಯಲ್ಲಿ ಉಗ್ರ ನಿಗ್ರಹ ಕಾರ್ಯಾಚರಣೆ ತೀವ್ರಗೊಳಿಸಿದ್ದ

ಎನ್​ಐಎ ಸುಮಾರು 24 ಶಂಕಿತ ಐಸಿಸ್ ಉಗ್ರರು, ನೇಮಕಾತಿದಾರರನ್ನು ಬಂಧಿಸಿತ್ತು. ಅನೇಕ ಯುವಕರು ಸಿರಿಯಾಗೆ ತೆರಳುವುದನ್ನು ತಡೆಗಟ್ಟಿ ಅವರ ಮನಃಪರಿವರ್ತನೆಗೊಳಿಸುವಲ್ಲಿ ಯಶಸ್ವಿಯಾಗಿತ್ತು. ಇಂಥ ಕ್ರಮಗಳಿಂದ ಕಂಗಾಲಾಗಿರುವ ಉಗ್ರ ಸಂಘಟನೆ ಭಾರತದಲ್ಲಿ ಚಟುವಟಿಕೆಯ ಪ್ರಮಾಣ ತಗ್ಗಿಸುವಂತೆ ಬೆಂಬಲಿಗರಿಗೆ ಸೂಚಿಸಿದ್ದಾಗಿ ವರದಿಯಾಗಿತ್ತು.

**ಬಲೆಗೆ ಬಿದ್ದವರಲ್ಲಿ ಕರ್ನಾಟಕದ 6 ಜನ

ಎನ್​ಐಎ ಅಧಿಕಾರಿಗಳು ಜನವರಿ ತಿಂಗಳ ಆರಂಭದಲ್ಲಿ ಉತ್ತರಾಖಂಡದಲ್ಲಿ ನಾಲ್ವರು ಉಗ್ರರನ್ನು ಬಂಧಿಸಿದ್ದರು. ಈ ಆರೋಪಿಗಳು ಅರ್ಧಕುಂಭಮೇಳದ ಸಂದರ್ಭ ದಾಳಿ ನಡೆಸಲು ಸಂಚು ರೂಪಿಸಿದ್ದರು. ಅವರು ನೀಡಿದ ಮಾಹಿತಿಯನ್ನು ಆಧರಿಸಿ,

ಜ. 23ರಂದು ವಿವಿಧ ರಾಜ್ಯಗಳಲ್ಲಿ ಕಾರ್ಯಾಚರಣೆ ನಡೆಸಿ ಹಲವು ಶಂಕಿತ ಐಸಿಸ್ ಉಗ್ರರನ್ನು ಎನ್​ಐಎ ಬಂಧಿಸಿತ್ತು. ಈ ಉಗ್ರರು ಗಣರಾಜ್ಯೋತ್ಸವ ಸಮಾರಂಭದ ಸಂದರ್ಭ ದಾಳಿ ನಡೆಸಲು ಸಂಚು ರೂಪಿಸಿದ್ದರು. ಈ ಪೈಕಿ, ಆರು ಜನ ಕರ್ನಾಟಕ ಮೂಲದವರು ಎಂಬುದು ಬಳಿಕ ಬೆಳಕಿಗೆ ಬಂದಿತ್ತು.


•► ಪ್ರಮುಖ ಬೆಳವಣಿಗೆಗಳು

ಉಗ್ರನಿಗ್ರಹಕ್ಕೆ ಸಂಬಂಧಿಸಿ 33 ಅಂಶಗಳನ್ನೊಳಗೊಂಡ ನಿಲುವಳಿಯನ್ನು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಸಮಾವೇಶದಲ್ಲಿ ಮಂಡಿಸಿದರು. ಪಾಕ್ ಹೊರತುಪಡಿಸಿ ಉಳಿದೆಲ್ಲ ದೇಶಗಳು ನಿಲುವಳಿಯನ್ನು ಬೆಂಬಲಿಸಿದವು.

ಅಫ್ಘಾನಿಸ್ತಾನ ಹಾಗೂ ದಕ್ಷಿಣ ಏಷ್ಯಾ ಪ್ರದೇಶಗಳ ಮೇಲೆ ತಾಲಿಬಾನ್, ಲಷ್ಕರ್ ಎ ತೊಯ್ಬಾ ಹಾಗೂ ಜೈಶ್ ಎ ಮೊಹಮದ್ ಸಂಘಟನೆಗಳ ಕುರಿತು ಕಳವಳ ವ್ಯಕ್ತಪಡಿಸಿರುವ ಸದಸ್ಯ ರಾಷ್ಟ್ರಗಳು, ಭಯೋತ್ಪಾದಕರ ಸುರಕ್ಷಿತ ತಾಣಗಳನ್ನು ನಿರ್ನಾಮ ಮಾಡುವ ಕುರಿತು ಒಕ್ಕೊರಲಿನ ನಿರ್ಣಯ ಕೈಗೊಂಡಿವು.


•► ಕೈಗೊಂಡ ನಿರ್ಣಯಗಳು

ಭಯೋತ್ಪಾದಕರ ಸುರಕ್ಷಿತ ತಾಣವನ್ನು ನಿಮೂಲನೆ ಮಾಡಬೇಕು.
ದಕ್ಷಿಣ ಏಷ್ಯಾ ರಾಷ್ಟ್ರಗಳಲ್ಲಿ ಶಾಂತಿಭಂಗ ಉಂಟುಮಾಡುತ್ತಿರುವ ಎಲ್ಲ ರೀತಿಯ ಭಯೋತ್ಪಾದನೆಯನ್ನು ನಿಮೂಲನೆ ಮಾಡಬೇಕು.
ಭಯೋತ್ಪಾದನೆಗೆ ಬೆಂಬಲ ಹಾಗೂ ಆರ್ಥಿಕ ನೆರವು ನೀಡುತ್ತಿರುವರ ವಿರುದ್ಧ ಕೂಡ ಕ್ರಮ ಕೈಗೊಳ್ಳಬೇಕು.
ಭಯೋತ್ಪಾದಕರ ಸುರಕ್ಷಿತ ತಾಣಗಳನ್ನು ನಾಶಪಡಿಸಲು ಪ್ರಾದೇಶಿಕ ಹಾಗೂ ಅಂತಾರಾಷ್ಟ್ರೀಯ ಸಹಕಾರ ಅತ್ಯಗತ್ಯ.
ಭಯೋತ್ಪಾದಕ ತಂಡಗಳಿಗೆ ಯುವಜನತೆಯ ನೇಮಕ ಪ್ರಕ್ರಿಯೆ ತಡೆಯಲು ಕಠಿಣ ಕ್ರಮಗಳನ್ನು ಕೈಗೊಳ್ಳುವ ಅಗತ್ಯವಿದೆ.


•► ಚೀನಾ ಬೂಟಾಟಿಕೆ

ಎಲ್ಲ ರಂಗಗಳಲ್ಲೂ ಭಾರತದೊಂದಿಗೆ ಸ್ಪರ್ಧೆ ಒಡ್ಡಿರುವ ಚೀನಾ, ‘ಮಹಾಶಕ್ತಿ’ ಆಗುವ ಕನಸಿನಲ್ಲಿ ಭಾರತವಿರೋಧಿ ಶಕ್ತಿಗಳೊಂದಿಗೆ ಕೈಜೋಡಿಸುತ್ತಿದೆ. ಪಾಕಿಸ್ತಾನ ಭಯೋತ್ಪಾದನೆಯನ್ನು ಪ್ರಾಯೋಜಿಸುತ್ತಿದೆ ಎಂಬ ವಾಸ್ತವ ತಿಳಿದಿದ್ದರೂ ಭಾರತವನ್ನು ವಿರೋಧಿಸಬೇಕೆಂಬ ಕಾರಣದಿಂದ ಅದು ಪಾಕ್ ಬೆನ್ನಿಗೆ ನಿಂತಿದೆ. ಇದು ವಿಶ್ವಸಂಸ್ಥೆ ಮಹಾಧಿವೇಶನದಲ್ಲೂ ಪುನರಾವರ್ತನೆಯಾಗಿ, ಭಯೋತ್ಪಾದನೆ ವಿರುದ್ಧ ಹೋರಾಟದಲ್ಲಿ ಚೀನಾದ ಬದ್ಧತೆ ಬಗ್ಗೆ ಅನುಮಾನ, ಪ್ರಶ್ನೆ ಮೂಡಿತು. ಚೀನಾ ಪ್ರಧಾನಿ ಲಿ ಕಿಯಾಂಗ್ ಅವರು ವಿಶ್ವಸಂಸ್ಥೆಯ ಮಹಾಧಿವೇಶನದ ವೇಳೆ ಪಾಕ್ ಪ್ರಧಾನಿ ಷರೀಫ್ ಜತೆ ಮಾತನಾಡುತ್ತ, ಭಯೋತ್ಪಾದಕ ಕೃತ್ಯಗಳ ಸಂತ್ರಸ್ತ ದೇಶ ಪಾಕಿಸ್ತಾನ. ಹೀಗಾಗಿ ಪಾಕಿಸ್ತಾನದ ಪರವಾಗಿ ನಾವು ಎಲ್ಲ ವೇದಿಕೆಗಳಲ್ಲೂ ಧ್ವನಿ ಎತ್ತುವುದಾಗಿ ಭರವಸೆ ನೀಡಿದರು, ಮಾತ್ರವಲ್ಲ, ಕುಖ್ಯಾತ ಭಯೋತ್ಪಾದಕ ಮಸೂದ್ ಅಜಹರ್ ಮೇಲೆ ನಿಷೇಧ ಹೇರುವ ಭಾರತದ ಪ್ರಸ್ತಾವನೆಗೆ ಅಮೆರಿಕ, ರಷ್ಯಾ ಸೇರಿದಂತೆ ಹಲವು ರಾಷ್ಟ್ರಗಳು ಬೆಂಬಲಿಸಿದರೂ ಚೀನಾ ಬೆಂಬಲಿಸಲಿಲ್ಲ.


•► ಒಬ್ಬಂಟಿಯಾದ ಪಾಕಿಸ್ತಾನ

ಭಯೋತ್ಪಾದನೆಯ ರಫ್ತನ್ನು ಮುಂದುವರಿಸಿರುವ ಪಾಕಿಸ್ತಾನ ಈ ವರ್ಷ ಅಂತಾರಾಷ್ಟ್ರೀಯ ವಲಯದಲ್ಲಿ ಒಬ್ಬಂಟಿಯಾಯಿತು. ಇದು ಭಾರತ ಕೈಗೊಂಡ ಸತತ ರಾಜತಾಂತ್ರಿಕ ಪ್ರಯತ್ನಗಳಿಗೆ ಸಿಕ್ಕ ಯಶಸ್ಸು ಎಂದೇ ವ್ಯಾಖ್ಯಾನಿಸಬಹುದು. ಯುರೋಪಿಯನ್ ಯೂನಿಯನ್, ಬ್ರಿಕ್ಸ್, ಹಾರ್ಟ್ ಆಫ್ ಏಷ್ಯಾ ಸೇರಿದಂತೆ ಹಲವು ಶೃಂಗಗಳಲ್ಲಿ ಪಾಕ್ ಭಾರಿ ಮುಜುಗರಕ್ಕೀಡಾಯಿತು. ಹಲವು ದೇಶಗಳ ನಾಯಕರು ಭಯೋತ್ಪಾದನೆಯನ್ನು ಪ್ರಾಯೋಜಿಸುತ್ತಿರುವ ಪಾಕ್ ಧೋರಣೆಯನ್ನು ತೀವ್ರವಾಗಿ ಖಂಡಿಸಿದರು. ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನದ ಉಗ್ರದಮನ ಕಾರ್ಯವನ್ನು ವಿವರಿಸುವುದಕ್ಕೆ ಭಾಷಣದ ಶೇಕಡ 80ರಷ್ಟು ಭಾಗವನ್ನು ಪಾಕ್ ಪ್ರಧಾನಿ ಮೀಸಲಿಟ್ಟಿದ್ದರು. ಆದರೆ, ಯಾರೊಬ್ಬರೂ ಪಾಕಿಸ್ತಾನದ ಉಗ್ರ ದಮನ ರೀತಿಯನ್ನು ಬೆಂಬಲಿಸಿಲ್ಲ. ಇದೇ ವೇಳೆ, ಪಾಕಿಸ್ತಾನ ಯಾವ ರೀತಿ ಭಯೋತ್ಪಾದನೆಯ ಪ್ರಾಯೋಜಕತ್ವ ವಹಿಸುತ್ತಿದೆ ಎಂಬ ಸೂಕ್ಷ್ಮವನ್ನು ಜಗತ್ತಿನೆದುರು ನಿರೂಪಿಸುವಲ್ಲಿ ಭಾರತ ಯಶಸ್ವಿಯಾಯಿತು.

(Courtesy :ನಿರ್ವಹಣೆ: ನಾಗರಾಜ ಇಳೆಗುಂಡಿ. ವಿಜಯವಾಣಿ ಟೀಂ: ರವೀಂದ್ರ ಎಸ್.ದೇಶಮುಖ್, ಉಮೇಶ್ ಕುಮಾರ್ ಶಿಮ್ಲಡ್ಕ, ಅಕ್ಷತಾ ಮುಂಡಾಜೆ ವಿನ್ಯಾಸ: ಅಶ್ವತ್ಥ ಕೃಷ್ಣ)

☀️ ಭಾಗ - 1: 2016 ರ ಪ್ರಮುಖ ರಾಷ್ಟ್ರೀಯ / ಅಂತರರಾಷ್ಟ್ರೀಯ ಘಟನೆಗಳು - ಒಂದು ಹಿನ್ನೋಟ : (Important Current Affairs of 2016 at glance)

☀️ ಭಾಗ - 1: 2016 ರ ಪ್ರಮುಖ ರಾಷ್ಟ್ರೀಯ / ಅಂತರರಾಷ್ಟ್ರೀಯ ಘಟನೆಗಳು - ಒಂದು ಹಿನ್ನೋಟ :
(Important Current Affairs of 2016 at glance)
━━━━━━━━━━━━━━━━━━━━━━━━━━━━━━━━━━━━━━━━━━━━━

★ 2016ರ ಪ್ರಚಲಿತ ಘಟನೆಗಳು.
(2016 current affairs in short)


★ ಭಯೋತ್ಪಾದನೆ ವಿರೋಧಿ ಹೋರಾಟದ ವಿಷಯ :

ಭಯೋತ್ಪಾದನೆ ವಿರೋಧಿ ಹೋರಾಟದ ವಿಷಯದಲ್ಲಿ ಜಾಗತಿಕವಾಗಿ 2016ನೇ ವರ್ಷ ಅತಿ ಮಹತ್ವದ್ದು. ಉಗ್ರಶಕ್ತಿಗಳು ಅಂತಾರಾಷ್ಟ್ರೀಯ ಶಾಂತಿ ಮತ್ತು ಭದ್ರತೆಗೆ ಮಾರಕವಾಗಿರುವ ಅಪಾಯಕಾರಿ ಸನ್ನಿವೇಶವನ್ನು ಮನಗಂಡ ಜಾಗತಿಕ ವಲಯ, ಭಯೋತ್ಪಾದನೆ ವಿರುದ್ಧದ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಲು ಮತ್ತು ಒಗ್ಗಟ್ಟಾಗಿ ಹೋರಾಡಲು ಸಂಕಲ್ಪಿಸಿತು. ಹಲವು ಜಾಗತಿಕ ಶೃಂಗಗಳಲ್ಲಿ ಇದು ಪುನರುಚ್ಚರಿಸಲ್ಪಟಿತು. ಪರಿಣಾಮ, ಐಸಿಸ್ ಸೇರಿದಂತೆ ಹಲವು ಭಯೋತ್ಪಾದಕ ಸಂಘಟನೆಗಳ ಶಕ್ತಿ ಕುಗ್ಗಿದೆ. ಭಾರತ ಪಿಒಕೆಯಲ್ಲಿ ಸರ್ಜಿಕಲ್ ದಾಳಿ ಮೂಲಕ ಉಗ್ರರ ಅಡಗುದಾಣಗಳನ್ನು ಧ್ವಂಸಗೊಳಿಸಿದ್ದು ಮಹತ್ವದ ವಿದ್ಯಮಾನ.


•► ಸಾರ್ಕ್​ಗೆ ಬಹಿಷ್ಕಾರ

*.ನಿಗದಿಯಂತೆ ನವೆಂಬರ್ 15 ಮತ್ತು 16ರಂದು ಪಾಕಿಸ್ತಾನದ ಇಸ್ಲಾಮಾಬಾದ್​ನಲ್ಲಿ ಸಾರ್ಕ್ ರಾಷ್ಟ್ರಗಳ ಶೃಂಗಸಭೆ ನಡೆಯಬೇಕಿತ್ತು. ಆದರೆ, ಇದಕ್ಕೆ ಮುನ್ನ (ಸೆ.18) ಜಮ್ಮು-ಕಾಶ್ಮೀರದ ಉರಿ ವಾಯುನೆಲೆ ಮೇಲೆ ನಡೆದ ಭಯೋತ್ಪಾದಕ ದಾಳಿ ಪಾಕಿಸ್ತಾನದ ಬೂಟಾಟಿಕೆಯನ್ನು ಜಗಜ್ಜಾಹೀರುಗೊಳಿಸಿತು.
*.ಪಾಕಿಸ್ತಾನದ ಧೋರಣೆಯನ್ನು ಖಂಡಿಸಿ ಭಾರತವು ಆ ರಾಷ್ಟ್ರದಲ್ಲಿ ನಡೆಯಬೇಕಿದ್ದ ಸಾರ್ಕ್ ಶೃಂಗವನ್ನು ಬಹಿಷ್ಕರಿಸಿತು. ಇದರ ಬೆನ್ನಲ್ಲೇ, ಅಫ್ಘಾನಿಸ್ತಾನ, ಬಾಂಗ್ಲಾದೇಶ, ಭೂತಾನ್ ಹಾಗೂ ಮಾಲ್ಡೀವ್ಸ್ ಕೂಡ ಸಮ್ಮೇಳನಕ್ಕೆ ಹಾಜರಾಗದಿರಲು ನಿರ್ಧರಿಸಿದವು. ಇದರಿಂದ ಪಾಕಿಸ್ತಾನ ಅಂತಾರಾಷ್ಟ್ರೀಯ ಮಟ್ಟದಲ್ಲಿ ಒಬ್ಬಂಟಿಯಾಗಿ, ತೀವ್ರ ಮುಖಭಂಗ ಅನುಭವಿಸಿತು.


•► ಜಾಗತಿಕ ವೇದಿಕೆಗಳಲ್ಲಿ ಮೊಳಗಿದ ಬದ್ಧತೆ

*.ಭಾರತ ಈ ವರ್ಷ ಭಯೋತ್ಪಾದನಾ ದಾಳಿಗಳನ್ನು ಖಂಡಿಸುವ ಎಂದಿನ ಪರಿಪಾಠಕ್ಕೆ ಸೀಮಿತವಾಗಿ ಉಳಿಯಲಿಲ್ಲ. ಗಡಿ ಭಾಗದಲ್ಲಿ ಹೆಚ್ಚುತ್ತಿರುವ ಭಯೋತ್ಪಾದನಾ ದಾಳಿಗಳು, ಉಗ್ರರ ನುಸುಳುವಿಕೆಯ ಘಟನೆಗಳು ದೇಶಾದ್ಯಂತ ಆಕ್ರೋಶ ಸೃಷ್ಟಿಸಿದವು. ಮುಖ್ಯವಾಗಿ, ಸೈನಿಕರ ಬಲಿದಾನಕ್ಕೆ ಪ್ರತಿಯಾಗಿ ಪಾಕಿಸ್ತಾನಕ್ಕೆ ತಕ್ಕ ಪಾಠ ಕಲಿಸಬೇಕೆಂಬ ಆಗ್ರಹವೂ ಜೋರಾಗಿತ್ತು.
*.ನೇರ ಕಾರ್ಯಾಚರಣೆಗೆ ಮನಸ್ಸುಮಾಡಿದ ಕೇಂದ್ರ ಸರ್ಕಾರ ವಿಜಯದಶಮಿ ಮುನ್ನಾ ದಿನವಾದ ಸೆ.29ರಂದು ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಸರ್ಜಿಕಲ್ ದಾಳಿ ನಡೆಸಲು ಭಾರತೀಯ ಸೇನೆಗೆ ಹಸಿರು ನಿಶಾನೆ ತೋರಿತು. ಭಾರತೀಯ ಸೇನೆ ಕೆಲವೇ ಗಂಟೆಗಳಲ್ಲಿ ಪಿಒಕೆ ಒಳಗೆ 500 ಮೀಟರ್​ನಿಂದ 2ರಿಂದ 3 ಕಿ.ಮೀ ಅಂತರದಲ್ಲಿ ಭಿಂಬರ್, ಹಾಟ್​ಸ್ಪ್ರಿಂಗ್, ಕೆಲ್ ಮತ್ತು ಲಿಪಾ ಪ್ರದೇಶದಲ್ಲಿ ಏಳು ಉಗ್ರನೆಲೆಗಳನ್ನು ಧ್ವಂಸಗೊಳಿಸಿತು. 40ಕ್ಕೂ ಹೆಚ್ಚು ಭಯೋತ್ಪಾದಕರು ಹತರಾದರು.
*.ಭಾರತದ ಈ ದಾಳಿಗೆ ಬೆಚ್ಚಿಬಿದ್ದ ಪಾಕಿಸ್ತಾನ ತಾನು ಯುದ್ಧಕ್ಕೆ ಸಿದ್ಧನಿರುವುದಾಗಿ ಹೂಂಕರಿಸಿತು. ಪಿಒಕೆಯಲ್ಲಿ ನಡೆದ ಸೇನಾ ದಾಳಿಯನ್ನು ಸರ್ವಪಕ್ಷಗಳೂ ಶ್ಲಾಘಿಸಿದವಲ್ಲದೆ, ಭವಿಷ್ಯದಲ್ಲಿ ಕೈಗೊಳ್ಳುವ ಯಾವುದೇ ರೀತಿಯ ಕಾರ್ಯಾಚರಣೆಗೆ ಬೆಂಬಲ ನೀಡುವುದಾಗಿ ಘೊಷಿಸಿವು. ಅಷ್ಟೇ ಅಲ್ಲ, ಭಯೋತ್ಪಾದನೆಯಿಂದ ಸಂತ್ರಸ್ತವಾಗಿರುವ ಭಾರತ ಕೈಗೊಂಡಿರುವ ಈ ಕ್ರಮ ಸರಿಯಾಗಿಯೇ ಇದೆ ಎಂದು ಅಮೆರಿಕ, ರಷ್ಯಾ ಸೇರಿದಂತೆ ಹಲವು ಅಂತಾರಾಷ್ಟ್ರೀಯ ಶಕ್ತಿಗಳು ಬೆಂಬಲ, ಮೆಚ್ಚುಗೆ ಸೂಚಿಸಿದವು.
*.ಪಾಕಿಸ್ತಾನ ಬೆನ್ನಿಗೆ ನಿಂತಿರುವ ಚೀನಾ ಮಾತ್ರ ಜಾಣಮೌನ ವಹಿಸಿತು. ಒಟ್ಟಾರೆ, ಸಹನೆ ತನ್ನ ದೌರ್ಬಲ್ಯವಲ್ಲ, ಭಯೋತ್ಪಾದನೆಯಂಥ ಕೃತ್ಯಗಳನ್ನು ದೇಶ ಸಹಿಸುವುದಿಲ್ಲ ಎಂಬ ಸ್ಪಷ್ಟ ಸಂದೇಶವನ್ನು ಈ ಸರ್ಜಿಕಲ್ ದಾಳಿ ಮೂಲಕ ಅಂತಾರಾಷ್ಟ್ರೀಯ ವಲಯಕ್ಕೆ ನೀಡುವಲ್ಲಿ ಭಾರತ ಯಶಸ್ವಿಯಾಯಿತು.

*.ಒಟ್ಟಾದ ಅಂತಾರಾಷ್ಟ್ರೀಯ ಶಕ್ತಿಗಳು: ಜಾಗತಿಕ ಮಟ್ಟದಲ್ಲೂ ಹಲವು ಘೊಷಣೆ ಮತ್ತು ಮಹತ್ವದ ಒಪ್ಪಂದಗಳು ಏರ್ಪಟ್ಟವು. ಅಭಿವೃದ್ಧಿಯೇ ಮುಖ್ಯ ಕಾರ್ಯಸೂಚಿಯಾಗಿರುತ್ತಿದ್ದ ಜಾಗತಿಕ ಶೃಂಗಗಳಲ್ಲಿ ಈ ಬಾರಿ ಪ್ರಮುಖ ಕಾರ್ಯಸೂಚಿ ಭಯೋತ್ಪಾದನೆ ವಿರುದ್ಧದ ಹೋರಾಟವೇ ಆಗಿತ್ತು ಎಂಬುದು ಗಮನಾರ್ಹ.


•► ಮಹಿಳಾ ಬಾಂಬರ್ ದಾಳಿ

*.ಬೊಕೊ ಹರಾಮ್ ಉಗ್ರ ಸಂಘಟನೆಯ ಇಬ್ಬರು ಮಹಿಳಾ ಆತ್ಮಾಹುತಿ ಬಾಂಬರ್​ಗಳು ನೈಜೀರಿಯಾದ ಮೈದುಗಿರಿಯಲ್ಲಿ ಮಸೀದಿಯಲ್ಲೇ ಮಾರ್ಚ್ 16ರಂದು ಬಾಂಬ್ ದಾಳಿ ನಡೆಸಿದರು. ಈ ದಾಳಿಯಲ್ಲಿ 24 ಜನರು ಮೃತಪಟ್ಟು 18 ಜನ ಗಾಯಗೊಂಡರು.


•► ಯುರೋಪ್ ಒಕ್ಕೂಟದ ಬಲ

*.ಮಾರ್ಚ್ 30ರಂದು ಬೆಲ್ಜಿಯಂನ ರಾಜಧಾನಿ ಬ್ರಸೆಲ್ಸ್​ನಲ್ಲಿ ನಡೆದ ಭಾರತ-ಯುರೋಪ್ ಒಕ್ಕೂಟದ ಶೃಂಗಸಭೆಯಲ್ಲಿ ಭಯೋತ್ಪಾದನೆ ವಿರುದ್ಧ ಒಗ್ಗಟ್ಟಾಗಿ ಹೋರಾಡುವ ನಿರ್ಣಯ ಅಂಗೀಕರಿಸಲಾಯಿತು. ಅಷ್ಟೇ ಅಲ್ಲ, ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಯುರೋಪಿಯನ್ ಒಕ್ಕೂಟಕ್ಕೆ ಭಾರತ ಪ್ರಮುಖ ಜತೆಗಾರನಾಗಿದೆ. ಈ ವಿಷಯದಲ್ಲಿ ಭಾರತ ಹೆಚ್ಚು ಅನುಭವ ಹೊಂದಿರುವುದರಿಂದ ಪ್ರಧಾನಿ ಮೋದಿ ಸಕ್ರಿಯರಾಗಿ ಸಲಹೆ ನೀಡಬೇಕು ಎಂದು ಬೆಲ್ಜಿಯಂ ಸಂಸತ್ ಸದಸ್ಯರು ಮನವಿ ಮಾಡಿದರು.

•► ಅಮೆರಿಕ ಷರತ್ತುಬದ್ಧ ನೆರವು

*.ಅಮೆರಿಕ 2017ನೇ ವಿತ್ತವರ್ಷದಲ್ಲಿ ಪಾಕಿಸ್ತಾನಕ್ಕೆ 900 ದಶಲಕ್ಷ ಡಾಲರ್ ನೆರವು ಘೊಷಿಸಿದೆ. ಆದರೆ, ಪಾಕಿಸ್ತಾನ ಹಕ್ಕಾನಿ ನೆಟ್​ವರ್ಕ್ ಹತ್ತಿಕ್ಕಲು ಕ್ರಮ ಕೈಗೊಂಡಲ್ಲಿ ಮಾತ್ರ ಈ ನೆರವು ನೀಡಲಾಗುವುದು ಎಂಬ ಷರತ್ತನ್ನು ಒಡ್ಡಿರುವುದು ಗಮನಾರ್ಹ. ಉಗ್ರವಾದಕ್ಕೆ ಬೆಂಬಲ ನೀಡುತ್ತಿರುವ ಮತ್ತು ಅಣ್ವಸ್ತ್ರ ಬಲ ಹೊಂದಿರುವ ಪಾಕ್ ಜಗತ್ತಿಗೆ ಒಂದು ಸಮಸ್ಯೆಯಿದ್ದಂತೆ ಎಂಬ ಅಮೆರಿಕದ ನಿಯೋಜಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿಕೆಯೂ ಮಹತ್ವ ಪಡೆದುಕೊಂಡಿತು.

•►  ಬೆಚ್ಚಿಬಿದ್ದ ಬ್ರಸೆಲ್ಸ್

*.ಬ್ರಸೆಲ್ಸ್​ನ ವಿಮಾನ ನಿಲ್ದಾಣ ಮತ್ತು ಮೆಟ್ರೋ ಸ್ಟೇಷನ್ ಮೇಲೆ ಮಾರ್ಚ್ 22ರಂದು ನಡೆದ ಆತ್ಮಾಹುತಿ ಬಾಂಬ್ ದಾಳಿಯಲ್ಲಿ 32 ನಾಗರಿಕರು ಮೃತಪಟ್ಟು 300 ಜನರು ಗಾಯಗೊಂಡರು. ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಆಂಡ್ ಲಿವೆಂಡ್(ಐಎಸ್​ಐಎಲ್) ದಾಳಿಯ ಹೊಣೆ ಹೊತ್ತಿತು.
*.ಬೆಲ್ಜಿಯಂನ ಇತಿಹಾಸದಲ್ಲೇ ಇದು ಅತಿ ಭೀಕರ ಉಗ್ರ ದಾಳಿಯಾಗಿದ್ದು, ಸರ್ಕಾರ ಮೂರು ದಿನಗಳ ಶೋಕಾಚರಣೆ ಘೊಷಿಸಿತ್ತು.


•► ರ್ಪಾನಲ್ಲೇ ಬಾಂಬ್ ಸ್ಫೋಟ

*.ಲಾಹೋರ್​ನ ಪಾರ್ಕೆಂದರಲ್ಲಿ ಮಾರ್ಚ್ 28ರಂದು ತಾಲಿಬಾನ್​ನ ಅಂಗಸಂಸ್ಥೆ ಜಮಾತ್ ಉಲ್ ಅಹರಾರ್ ನಡೆಸಿದ ಆತ್ಮಾಹುತಿ ಬಾಂಬ್ ದಾಳಿಯಲ್ಲಿ 72 ಜನರು ಸಾವನ್ನಪ್ಪಿದರು. 300ಕ್ಕೂ ಹೆಚ್ಚು ಜನರು ಗಾಯಗೊಂಡರು. ಮೃತಪಟ್ಟವರಲ್ಲಿ ಮಹಿಳೆಯರು ಮತ್ತು ಮಕ್ಕಳ ಸಂಖ್ಯೆಯೇ ಹೆಚ್ಚಾಗಿತ್ತು.


•► ಗೋವಾದಲ್ಲಿ ಬ್ರಿಕ್ಸ್ ರಾಷ್ಟ್ರಗಳು

*.ಅಕ್ಟೋಬರ್ 15 ಮತ್ತು 16ರಂದು ಗೋವಾದಲ್ಲಿ ನಡೆದ ಬ್ರಿಕ್ಸ್ (ಬ್ರೆಜಿಲ್, ರಷ್ಯಾ, ಭಾರತ, ಚೀನಾ ಮತ್ತು ದಕ್ಷಿಣ ಆಫ್ರಿಕಾ ದೇಶಗಳ ಕೂಟ) ರಾಷ್ಟ್ರಗಳ 8ನೇ ಶೃಂಗಸಭೆಯು ಐತಿಹಾಸಿಕ ‘ಗೋವಾ ಘೊಷಣೆ’ಯನ್ನು ಅಂಗೀಕರಿಸಿ ಭಯೋತ್ಪಾದನೆ ವಿರುದ್ಧ ಒಗ್ಗಟ್ಟಿನ ಹೋರಾಟವನ್ನು ಪ್ರತಿಪಾದಿಸಿತು.


•► ಗೋವಾ ಘೊಷಣೆಯ ಮುಖ್ಯಾಂಶಗಳು

*.ಉಗ್ರವಾದ, ಹಿಂಸಾರೂಪದ ತೀವ್ರಗಾಮಿತನ, ಮೂಲಭೂತವಾದ, ಉಗ್ರರ ನೇಮಕಾತಿ, ಅವರ ಹಣಕಾಸು ಮೂಲ ಹತ್ತಿಕ್ಕಲು ಎಲ್ಲ ದೇಶಗಳು ಸಮಗ್ರ ಕ್ರಮ ಕೈಗೊಳ್ಳಬೇಕು.
*.ಭಯೋತ್ಪಾದನೆ ಮತ್ತು ಹಿಂಸೆಯನ್ನು ಪೋಷಿಸುವ, ಆಶ್ರಯ ನೀಡುವ, ಬೆಂಬಲಿಸುವ, ಪ್ರಾಯೋಜಿಸುವ ಶಕ್ತಿಗಳನ್ನು ಭಯೋತ್ಪಾದಕರಷ್ಟೇ ಬೆದರಿಕೆ ಎಂದು ಪರಿಗಣಿಸಬೇಕು.
*.ಎಲ್ಲ ದೇಶಗಳು ತಮ್ಮ ನೆಲದಲ್ಲಿ ನಡೆಯುವ ಅಥವಾ ನಡೆಯಬಹುದಾದ ಯಾವುದೇ ರೀತಿಯ ಭಯೋತ್ಪಾದಕ ಚಟುವಟಿಕೆಗಳನ್ನು ತಡೆಯಲು ಕ್ರಮ ಕೈಗೊಳ್ಳಬೇಕು.
*.ಜಾಗತಿಕ ಭಯೋತ್ಪಾದನೆ ಪಿಡುಗಿನ ವಿರುದ್ಧ ಪರಿಣಾಮಕಾರಿಯಾಗಿ ಹೋರಾಡಲು ವಿಶ್ವಸಂಸ್ಥೆಯ ಭಾರತ ಬೆಂಬಲಿತ ಒಪ್ಪಂದವನ್ನು ತಕ್ಷಣ ಅಳವಡಿಸಿಕೊಳ್ಳಬೇಕು.
*.ಯಾವುದೇ ರಾಷ್ಟ್ರವಾಗಿರಲಿ ಭಯೋತ್ಪಾದನೆಯನ್ನು ಪೋಷಿಸುವ ಚಾಳಿಯನ್ನು ಕೈಬಿಡಬೇಕು. ಇಲ್ಲವಾದಲ್ಲಿ, ಜಾಗತಿಕವಾಗಿ ಮೂಲೆಗುಂಪಾಗುವುದನ್ನು ಎದುರಿಸಲು ಸಿದ್ಧವಿರಬೇಕು.

★ ಶೃಂಗದಲ್ಲಿ ಭಾಗವಹಿಸಿದ್ದ ನಾಯಕರು:
*.ನರೇಂದ್ರ ಮೋದಿ: ಭಾರತದ ಪ್ರಧಾನಿ
*.ವ್ಲಾದಿಮಿರ್ ಪುಟಿನ್: ರಷ್ಯಾ ಅಧ್ಯಕ್ಷ
*.ಕ್ಸಿ-ಜಿನ್​ಪಿಂಗ್: ಚೀನಾ ಅಧ್ಯಕ್ಷ
*.ಜೇಕಬ್ ಜುಮಾ: ದಕ್ಷಿಣ ಆಫ್ರಿಕಾ ಅಧ್ಯಕ್ಷ
*.ಮಿಷೆಲ್ ಟೆಮೆರ್: ಬ್ರೆಜಿಲ್ ಅಧ್ಯಕ್ಷ


—ಅಫ್ಘಾನಿಸ್ತಾನ ಅಭಿವೃದ್ಧಿಗೆ ಪಾಕಿಸ್ತಾನ ಘೊಷಿಸಿದ್ದ ನೆರವನ್ನು ನಿರಾಕರಿಸಿದ ಆಫ್ಘನ್ ಅಧ್ಯಕ್ಷ, ಮೊದಲು ಭಯೋತ್ಪಾದನೆ ವಿರುದ್ಧ ಹೋರಾಡಿ ಎಂದು ತಾಕೀತು ಮಾಡಿದರು. ಈ ಸುದ್ದಿ ಓದಿದ ಪಾಕಿಸ್ತಾನಿಯೋರ್ವ ‘ಇನ್ನೆಷ್ಟು ದೇಶಗಳು ಈ ರೀತಿ ಮಂಗಳಾರತಿ ಎತ್ತಬೇಕೋ? ನಮಗೆ ತಿನ್ನಲು ಬೇಕಿರುವುದು ಅನ್ನ, ಅಣುಬಾಂಬ್​ಗಳಲ್ಲ ಎಂದು ಷರೀಫ್ ಸಾಹೇಬರಿಗೆ ಯಾರು ಹೇಳಬೇಕೋ’ ಅಂತ ನಿಟ್ಟುಸಿರುಬಿಟ್ಟನಂತೆ!


•► ವಿಶ್ವಸಂಸ್ಥೆ ವೇದಿಕೆಯಲ್ಲಿ ಗಟ್ಟಿದನಿ

*.ಉರಿ ಉಗ್ರದಾಳಿ ಬೆನ್ನಲ್ಲೇ ವಿಶ್ವಸಂಸ್ಥೆಯಲ್ಲಿ ನಡೆದ ಮಹಾಧಿವೇಶನದಲ್ಲಿ (ಸೆಪ್ಟೆಂಬರ್) ಪಾಕಿಸ್ತಾನದ ಪ್ರಧಾನಮಂತ್ರಿ ನವಾಜ್ ಷರೀಫ್ ಅವರು ಕಾಶ್ಮೀರ ವಿಷಯ ಪ್ರಸ್ತಾಪಿಸಿ ವಿವಿಧ ದೇಶಗಳ ಮಧ್ಯಪ್ರವೇಶ ಕೋರಿದ್ದರು. ಆದರೆ ಅದಕ್ಕೆ ಸೂಕ್ತ ಬೆಂಬಲ ದಕ್ಕಲಿಲ್ಲ. ಅಷ್ಟೇ ಅಲ್ಲ, ವಿಶ್ವಸಂಸ್ಥೆಯೂ ಅದನ್ನು ದ್ವಿಪಕ್ಷೀಯವಾಗಿ ಬಗೆಹರಿಸಿಕೊಳ್ಳಿ ಎಂದಿತು. ಇನ್ನೊಂದೆಡೆ, ಭಾರತದ ರಾಜತಾಂತ್ರಿಕ ಪ್ರತಿನಿಧಿ, ಪಾಕಿಸ್ತಾನ ‘ಭಯೋತ್ಪಾದಕ ರಾಷ್ಟ್ರ’ ಎಂಬುದನ್ನು ಸಾಧಾರ ನಿರೂಪಿಸುವ ಮೂಲಕ ಸರಿಯಾದ ತಿರುಗೇಟನ್ನೇ ನೀಡಿದರು.
*.ಪಾಕಿಸ್ತಾನವು ನೂರಾರು ಕೋಟಿ ಡಾಲರ್​ಗಳನ್ನು ಅಂತಾರಾಷ್ಟ್ರೀಯ ನೆರವನ್ನಾಗಿ ಪಡೆಯುತ್ತಿದ್ದು, ಅದರಲ್ಲಿ ಬಹುತೇಕ ಪಾಲನ್ನು ಉಗ್ರ ಸಂಘಟನೆಗಳ ತರಬೇತಿಗೆ, ಅವುಗಳ ಖರ್ಚಿಗೆ ಬಳಸುತ್ತಿದೆ. ಈ ಉಗ್ರ ಸಂಘಟನೆಗಳನ್ನು ಮುಂದಿಟ್ಟುಕೊಂಡು ಅದು ನೆರೆರಾಷ್ಟ್ರಗಳ ಜತೆಗೆ ಛಾಯಾಸಮರ ನಡೆಸುತ್ತಿದೆ ಎಂದು ಭಾರತ ಸ್ಪಷ್ಟದನಿಯಲ್ಲಿ ಹೇಳಿತು.


•► ಹಾರ್ಟ್ ಆಫ್ ಏಷ್ಯಾ

*.ಡಿಸೆಂಬರ್ 3-4 ರಂದು ಪಂಜಾಬ್​ನ ಅಮೃತಸರದಲ್ಲಿ ನಡೆದ ‘ಹಾರ್ಟ್ ಆಫ್ ಏಷ್ಯಾ’ ಶೃಂಗಸಭೆಯ ಅಂತಿಮ ಘೊಷಣೆಯಲ್ಲಿ ತಾಲಿಬಾನ್ ಜತೆ ಮೊಟ್ಟಮೊದಲ ಬಾರಿಗೆ ಪಾಕ್ ಭಯೋತ್ಪಾದಕ ಸಂಘಟನೆಗಳಾದ ಲಷ್ಕರ್-ಎ-ತೋಯ್ಬಾ ಹಾಗೂ ಜೈಶ್-ಎ-ಮೊಹಮ್ಮದ್​ಗಳನ್ನೂ ಹೆಸರಿಸಿ ಖಂಡಿಸಲಾಯಿತು. ಅಷ್ಟೇ ಅಲ್ಲ, ಭಯೋತ್ಪಾದನೆಯನ್ನು ಪೋಷಿಸಿ ಅಫ್ಘಾನಿಸ್ತಾನವಲ್ಲದೇ ಇಡೀ ಪ್ರದೇಶವನ್ನೇ ಅಭದ್ರಗೊಳಿಸುತ್ತಿರುವ ಕಾರಣಕ್ಕಾಗಿ ಸಮ್ಮೇಳನದಲ್ಲಿ ಪಾಕಿಸ್ತಾನವನ್ನು ತರಾಟೆಗೆ ತೆಗೆದುಕೊಳ್ಳಲಾಯಿತು. ಈ ಶೃಂಗದಲ್ಲಿ 40 ರಾಷ್ಟ್ರಗಳ ಪ್ರತಿನಿಧಿಗಳು ಪಾಲ್ಗೊಂಡಿದ್ದರು. ಅಫ್ಘಾನಿಸ್ತಾನದ ಅಭಿವೃದ್ಧಿಗಾಗಿ 500 ದಶಲಕ್ಷ ಡಾಲರ್ ದೇಣಿಗೆ ನೀಡುವುದಾಗಿ ಪಾಕಿಸ್ತಾನ ಘೊಷಿಸಿದ್ದಕ್ಕೆ ಪ್ರತಿಕ್ರಿಯಿಸಿದ ಆಘ್ಘನ್ ಅಧ್ಯಕ್ಷ ಅಶ್ರಫ್ ಘನಿ, ಭಯೋತ್ಪಾದನೆ ಹತ್ತಿಕ್ಕಲು ಆ ಹಣವನ್ನು ಪಾಕಿಸ್ತಾನ ಬಳಸುವುದು ಒಳಿತು ಎಂದು ಹೇಳುವ ಮೂಲಕ ತಕ್ಕ ಪ್ರತ್ಯುತ್ತರ ನೀಡಿದರು.

... ಮುಂದುವರೆಯುವುದು. 

Friday, 16 December 2016

☀️ 2015-16ನೇ ಸಾಲಿನ ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಪ್ರಮುಖ ಯೋಜನೆಗಳು : 2.ಪ್ರಧಾನಮಂತ್ರಿ ಕೌಶಲ ವಿಕಾಸ್ ಯೋಜನಾ (PMKVY) (Pradhan Mantri Kousal Vikas Yojana)

☀️ 2015-16ನೇ ಸಾಲಿನ ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಪ್ರಮುಖ ಯೋಜನೆಗಳು :
2.ಪ್ರಧಾನಮಂತ್ರಿ ಕೌಶಲ ವಿಕಾಸ್ ಯೋಜನಾ (PMKVY)
(Pradhan Mantri Kousal Vikas Yojana)
━━━━━━━━━━━━━━━━━━━━━━━━━━━━━━━━━━━━━━━━━━━━━

★ ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಪ್ರಮುಖ ಯೋಜನೆಗಳು :I
(Central Sponsored schemes)


★ ಪ್ರಧಾನಮಂತ್ರಿ ಕೌಶಲ ವಿಕಾಸ್ ಯೋಜನೆಯ ಮುಖ್ಯಾಂಶಗಳು :    


•► ಇದೊಂದು ಕೇಂದ್ರ ಸರ್ಕಾರದ ಯೋಜನೆಯಾಗಿದ್ದು, 24 ಲಕ್ಷ ಯುವಕರಿಗೆ ಅರ್ಥಪೂರ್ಣ, ಕೈಗಾರಿಕೆ ಆಧಾರಿತ ಕೌಶಲ್ಯ ಆಧಾರಿತ ತರಬೇತಿ ನೀಡುವ ಉದ್ದೇಶವನ್ನು ಹೊಂದಿದ್ದು, ಇದರ ಅಡಿಯಲ್ಲಿ ತರಬೇತಿ ಪಡೆಯುವ ಯುವಕರಿಗೆ ವಿದ್ಯಾರ್ಥಿವೇತನ ಹಾಗೂ ಪ್ರಮಾಣ ಪತ್ರವನ್ನು ನೀಡಲಾಗುತ್ತದೆ.

•► ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಮೇಕ್ ಇನ್ ಇಂಡಿಯಾಗೆ ಇದನ್ನು ಪೂರಕವಾಗಿ ಆರಂಭಿಸಲಾಗಿದೆ. ಕೇಂದ್ರ ಕೌಶಲ್ಯಾಭಿವೃದ್ದಿ ಹಾಗೂ ವಾಣಿಜ್ಯೋದ್ಯಮ ಸಚಿವಾಲಯ ಈ ಯೋಜನೆಯನ್ನು 2015 ಮಾರ್ಚ್ 20ರಂದು ಜಾರಿಗೊಳಿಸಿತು.

•► ಪ್ರಸಕ್ತ ವರ್ಷದಲ್ಲಿ ಯೋಜನೆ ಜಾರಿಗೆ 1500 ಕೋಟಿ ಹಣವನ್ನು ಮೀಸಲಿಡಲಾಗಿದ್ದು, ಈ ಯೋಜನೆ ಮೂಲಕ ಪ್ರಮುಖವಾಗಿ 10 ಹಾಗೂ 12ನೇ ತರಗತಿಗಳಲ್ಲಿ ಫೇಲಾದ, ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಕೌಶಲ್ಯಾಧಾರಿತ ತರಬೇತಿ ನೀಡುವ ಗುರಿಯನ್ನು ಹೊಂದಿದೆ.

•► ಆರಂಭಿಕ ಹಂದಲ್ಲಿ ಬಿಹಾರ ರಾಜ್ಯದಲ್ಲಿ ಈ ಯೋಜನೆಯನ್ನು ಜಾರಿಗೊಳಿಲಾಗಿ, 2015ರ ಜುಲೈ 1ರ ವೇಳೆಗೆ 1.17,564 ಯುವಕರ ನೋಂದಣಿ ಮಾಡಿಕೊಂಡರು. ಇದರಲ್ಲಿ 1,07,080 ಯುವಕರಿಗೆ ಈಗಾಗಲೇ ತರಬೇತಿ ನೀಡಲಾಗಿದ್ದು, ಇದರಲ್ಲಿ 24 ಬಗೆಯ ವಿವಿಧ ರೀತಿಯ ಕೌಶಲ್ಯಾಧಾರಿತ ತರಬೇತಿ ಸೇರಿದೆ.

•► ಅಭಿವೃದ್ಧಿ ಹೊಂದಿರುವ ರಾಷ್ಟ್ರಗಳಿಗೆ ಪೈಪೋಟಿ ನೀಡುವ ಪ್ರಮುಖ ಪ್ರಯತ್ನದಲ್ಲಿ ಯುವಕರ ಪಾತ್ರ ಮಹತ್ವದ್ದು ಎಂದು ಮನಗಂಡ ಕೇಂದ್ರ ಸರ್ಕಾರದ ಈ ಯೋಜನೆಯಿಂದ ವಿದ್ಯೆಯನ್ನು ಅರ್ಧದಲ್ಲೆ ನಿಲ್ಲಿಸಿದ ವಿದ್ಯಾರ್ಥಿಗಳಿಗೆ ಜೀವನ ರೂಪಿಸಿಕೊಳ್ಳಲು ಸಹಕಾರಿಯಾಗಿದೆ. ಈಗಾಗಲೇ ದೇಶದಾದ್ಯಂತ 402832 ಅಭ್ಯರ್ಥಿಗಳು ನೋಂದಣಿ ಮಾಡಿಕೊಂಡಿದ್ದು, 256385 ತರಬೇತಿ ಪೂರ್ಣಗೊಳಿಸಿದ್ದಾರೆ.

•► ಪ್ರಸ್ತುತ ನೋಂದಣಿ ನಡೆಯುತ್ತಿದ್ದು, ಅ.31ಕ್ಕೆ ಮುಕ್ತಾಯವಾಗಲಿದೆ. ಮುಂದಿನ ನೋಂದಣಿ ನ.10ರಿಂದ 20ರವರೆಗೂ ನಡೆಯಲಿದೆ. ಮಾಹಿತಿಗಾಗಿ http://pmkvyofficial.org/Index.aspx ಸಂಪರ್ಕಿಸಬಹುದು.

...ಮುಂದುವರೆಯುವುದು. 

Thursday, 15 December 2016

☀ 2015-16 ನೇ ಸಾಲಿನ ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಪ್ರಮುಖ ಯೋಜನೆಗಳು : 1.ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆ(PMKSY) :

☀ 2015-16 ನೇ ಸಾಲಿನ ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಪ್ರಮುಖ ಯೋಜನೆಗಳು  :
 1.ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆ(PMKSY) :
━━━━━━━━━━━━━━━━━━━━━━━━━━━━━━━━━━━━━━━━━━━━━

★ ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಪ್ರಮುಖ ಯೋಜನೆಗಳು
(Central Sponsored schemes)



★ ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆಯ ಮುಖ್ಯಾಂಶಗಳು :    

•► ಕೃಷಿ ಕ್ಷೇತ್ರವನ್ನು ಸಬಲಗೊಳಿಸಲು ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಯೋಜನೆ ಇದಾಗಿದ್ದು, ಐದು ವರ್ಷಗಳ ಅವಧಿಯಲ್ಲಿ(2015-16 ರಿಂದ 2019-20ರವರೆಗೆ) 50 ಸಾವಿರ ಕೋಟಿ ಹಣ ವೆಚ್ಚ ಮಾಡಿ ನೀರಾವರಿ ಯೋಜನೆಗಳನ್ನು ಜಾರಿಗೊಳಿಸುವುದಾಗಿದೆ.

•► ಕೃಷಿಗೆ ಪೂರಕವಾಗಿರುವ ಭೂಮಿಯಲ್ಲಿ ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆಯನ್ನು ಜಾರಿಗೊಳಿಸುವುದು ಯೋಜನೆಯ ಉದ್ದೇಶವಾಗಿದ್ದು, ವಿಕೇಂದ್ರೀಕರಣದ ಅಡಿಯಲ್ಲಿ ರಾಜ್ಯ ಮಟ್ಟದಲ್ಲಿ ಇದಕ್ಕೆ ನೀಲನಕ್ಷೆ ರೂಪಿಸಬೇಕಿರುತ್ತದೆ.

•► ಇದಕ್ಕಾಗಿ ಜಿಲ್ಲೆ ಹಾಗೂ ಬ್ಲಾಕ್ ಮಟ್ಟದಲ್ಲಿ ರಾಜ್ಯ ಸರ್ಕಾರ ಯೋಜನೆಗಳನ್ನು ಕಾರ್ಯಗತಗೊಳಿಸಲು ಯೋಜನೆಯನ್ನು ರೂಪಿಸಬೇಕಾಗಿದ್ದು, ಮುಂದಿನ 5ರಿಂದ 7 ವರ್ಷಗಳ ಅವಧಿಗೆ ನೀಲನಕ್ಷೆಯನ್ನು ತಯಾರಿಸಬೇಕಿರುತ್ತದೆ.

•► ರಾಷ್ಟ್ರದ ಎಲ್ಲ ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳು ಹಾಗೂ ಈಶಾನ್ಯ ರಾಜ್ಯಗಳೂ ಸಹ ಈ ಯೋಜನೆಯನ್ನು ಕಾರ್ಯಗತಗೊಳಿಸಲು ಕೇಂದ್ರ ಸರ್ಕಾರ ಅವಕಾಶವನ್ನು ಕಲ್ಪಿಸಿದೆ.

•► ಇದಕ್ಕಾಗಿ ಪ್ರಧಾನಮಂತ್ರಿಯವರ ಅಧ್ಯಕ್ಷತೆಯಲ್ಲಿ ನ್ಯಾಶನಲ್ ಸ್ಟೀರಿಂಗ್ ಕಮಿಟಿಯೊಂದನ್ನು ರಚಿಸಲಾಗಿದೆ. ರಾಷ್ಟ್ರ ಮಟ್ಟದಲ್ಲಿ ಈ ಯೋಜನೆಯ ಮೇಲುಸ್ತುವಾರಿ ನೋಡಿಕೊಳ್ಳಲು ರಾಷ್ಟ್ರೀಯ ಕಾರ್ಯಕಾರಿ ಸಮಿತಿಯೊಂದನ್ನು ರಚಿಸಲಾಗಿದ್ದು, ನೀತಿ ಆಯೋಗದ ಉಪಾಧ್ಯಕ್ಷರು ಈ ಸಮಿತಿಯ ಅಧ್ಯಕ್ಷರಾಗಿರುತ್ತಾರೆ.

•► ಕೃಷಿಗೆ ಅಗತ್ಯವಾಗಿರುವ ನೀರಾವರಿ ಯೋಜನೆಗಳನ್ನು ಸಿದ್ಧಪಡಿಸಿ ಜಾರಿಗೊಳಿಸುವುದು, ನೀರಾವರಿ ನಿರ್ವಹಣೆ, ರೈತರಿಗೆ ಸಹಕಾರಿಯಾಗಬಲ್ಲ ಬೆಳೆ ಜೋಡಣೆ ಸೇರಿದಂತೆ ಕೃಷಿ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಬೇರುಮಟ್ಟದಿಂದ ಯೋಜನೆಗಳನ್ನು ರೂಪಿಸಿ ಜಾರಿಗೊಳಿಸುವುದು ಈ ಯೋಜನೆಯ ಪ್ರಮುಖ ಉದ್ದೇಶವಾಗಿದೆ.

•► ಪ್ರಸಕ್ತ ಆರ್ಥಿಕ ವರ್ಷಗದಲ್ಲಿ ಇದಕ್ಕಾಗಿ 5,300 ಕೋಟಿ ಹಣವನ್ನು ಬಿಡುಗಡೆ ಮಾಡಲಾಗಿದ್ದು, ಪ್ರಸ್ತುತ ದೇಶದಾದ್ಯಂತ 142 ಮಿಲಿಯನ್ ಹೆಕ್ಟೇರ್ ಕೃಷಿ ಭೂಮಿಯನ್ನು ಅಭಿವೃದ್ಧಿ ಪಡಿಸಲಾಗುತ್ತಿದ್ದು, ಇದರಲ್ಲಿ ಶೇ.45 ರಷ್ಟು ನೀರಾವರಿ ಭೂಮಿಯಾಗಿದೆ.

...ಮುಂದುವರೆಯುವುದು. 

Friday, 9 December 2016

☀PART : I ಪ್ರಮುಖ ಅಂತರ್‌ರಾಷ್ಟ್ರೀಯ ಸಂಸ್ಥೆಗಳು ಹಾಗೂ ಅವುಗಳ ಪ್ರಸ್ತುತ ಅಧಿಕಾರಿಗಳು (2016 October/November ನಲ್ಲಿರುವಂತೆ) : (Important International Officials and Appointments)

☀PART : I ಪ್ರಮುಖ ಅಂತರ್‌ರಾಷ್ಟ್ರೀಯ ಸಂಸ್ಥೆಗಳು ಹಾಗೂ ಅವುಗಳ ಪ್ರಸ್ತುತ ಅಧಿಕಾರಿಗಳು (2016 October/November ನಲ್ಲಿರುವಂತೆ)  :
(Important International Officials and Appointments)
━━━━━━━━━━━━━━━━━━━━━━━━━━━━━━━━━━━━━━━━━━━━━

★ ಅಂತರ್‌ರಾಷ್ಟ್ರೀಯ ಸಂಸ್ಥೆಗಳು ಹಾಗೂ ಅಧಿಕಾರಿಗಳು
(International Officials)



ಪ್ರಸ್ತುತ 2016 October ನಲ್ಲಿದ್ದಂತೆ ಹಾಗೂ November ನಲ್ಲಿ ಆದ ಬದಲಾವಣೆಗಳೊಂದಿಗೆ ವಿಶ್ವದ ಪ್ರಮುಖ ಅಂತಾರಾಷ್ಟ್ರೀಯ ಸಂಸ್ಥೆಗಳ ಅಧಿಕಾರಿಗಳು ಈ ಕೆಳಕಂಡಂತೆ ವಿವರಿಸಲಾಗಿದೆ...


•► ವಿಶ್ವಸಂಸ್ಥೆಯ(UNO) ಮಹಾಕಾರ್ಯದರ್ಶಿ ••┈┈┈┈┈┈┈•• ಬಾನ್ ಕಿ ಮೂನ್ 

•► ಅಂತರರಾಷ್ಟ್ರೀಯ ಹಣಕಾಸು ನಿಧಿ(IMF) ವ್ಯವಸ್ಥಾಪಕ ನಿರ್ದೇಶಕ, ••┈┈┈┈┈┈┈•• ಕ್ರಿಸ್ಟೀನ್ ಲಾಗರ್ಡ್ 

•► ವಿಶ್ವ ಬ್ಯಾಂಕ್ (WB)ನ ಅಧ್ಯಕ್ಷ, ••┈┈┈┈┈┈┈•• ಜಿಮ್ ಯಾಂಗ್ ಕಿಮ್

•► ವಿಶ್ವ ಬ್ಯಾಂಕ್ (World Bank)ನ ಉಪಾಧ್ಯಕ್ಷ ••┈┈┈┈┈┈┈•• ಹಿರೋಷಿ ನಾಕ 

•► ವಿಶ್ವ ವಾಣಿಜ್ಯ ಸಂಸ್ಥೆ(WTO) ಮಹಾನಿರ್ದೇಶಕ ••┈┈┈┈┈┈┈•• ರಾಬರ್ಟೊ ಅಜೆವೆಡೊ 

•► ವಿಶ್ವಸಂಸ್ಥೆಯ ಮಹಾಸಭೆ ಅಧ್ಯಕ್ಷ, ••┈┈┈┈┈┈┈•• ಮೋಗನ್ಸ್  ಲಿಕೆಟೋಪ್   

•► ವಿಶ್ವ ಆರೋಗ್ಯ ಸಂಸ್ಥೆಯ (WHO) ಮಹಾನಿರ್ದೇಶಕ ••┈┈┈┈┈┈┈•• ಮಾರ್ಗರೇಟ್ ಚಾನ್ 

•► ಅಂತಾರಾಷ್ಟ್ರೀಯ ನ್ಯಾಯಾಲಯದ (ICJ) ಅಧ್ಯಕ್ಷ  ••┈┈┈┈┈┈┈•• ಜಸ್ಟಿಸ್ ಪೀಟರ್ ಟೊಮ್ಕಾ 

•► ಏಷ್ಯಾ ಅಭಿವೃದ್ಧಿ ಬ್ಯಾಂಕ್ (ADB) ಅಧ್ಯಕ್ಷ, ••┈┈┈┈┈┈┈•• ಟಕೆಹಿಕೊ ನಕಾವೋ  

•► ನಾಸಾ (NASA)ದ ನಿರ್ವಾಹಕ(Administrator), ••┈┈┈┈┈┈┈•• ಚಾರ್ಲ್ಸ್ ಎಫ್.ಬೋಲ್ಡನ್ 

•► ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿ (UN HRC)ಯ ಅಧ್ಯಕ್ಷ, ••┈┈┈┈┈┈┈•• ರರೆಮಿಗೋಯಿಸ್ ಹೆಂಜೆಲ್. 

•► ಅಂತಾರಾಷ್ಟ್ರೀಯ ಅಣುಶಕ್ತಿ ಸಂಸ್ಥೆ(IAEA)ಯ ಮಹಾನಿರ್ದೇಶಕ ••┈┈┈┈┈┈┈•• ಯುಕಿಯಾ ಅಮನೋ 

•► ನ್ಯಾಟೋ (NATO)ದ ಮಹಾಕಾರ್ಯದರ್ಶಿ ••┈┈┈┈┈┈┈•• ಜೆನ್ಸ್ ಸ್ಟೊಲ್ಟೆನ್ಬರ್ಗ್ 

•► ಆಷಿಯಾನ್ (ASEAN)ನ ಮಹಾಕಾರ್ಯದರ್ಶಿ ••┈┈┈┈┈┈┈•• ಲೀ ಲ್ವಾಂಗ್ ಮಿನ್ಹ್ 

•► ಸಾರ್ಕ್(SAARC)ನ ಮಹಾಕಾರ್ಯದರ್ಶಿ ••┈┈┈┈┈┈┈•• ಅರ್ಜುನ್ ಬಹದ್ದೂರ್ ಥಾಪಾ 

•► ಕಾಮನ್ ವೆಲ್ತ್ ನ ಮಹಾಕಾರ್ಯದರ್ಶಿ ••┈┈┈┈┈┈┈•• ಪೆಟ್ರೀಷಿಯಾ ಸ್ಕಾಟ್ಲೆಂಡ್ 

•► ಫಿಫಾ (FIFA)ದ ಅಧ್ಯಕ್ಷ, ••┈┈┈┈┈┈┈•• ಗಿಯನ್ನಿ ಇನ್ಫಾಂಟಿನೋ 

•► ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ICC) ಅಧ್ಯಕ್ಷ, ••┈┈┈┈┈┈┈•• ಜಹೀರ್ ಅಬ್ಬಾಸ್ 

•► ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ICC) ನ ಚೇರಮನ್ ••┈┈┈┈┈┈┈•• ಶಶಾಂಕ್ ಮನೋಹರ್ 

•► ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿ (IOC)ಯ ಅಧ್ಯಕ್ಷ, ••┈┈┈┈┈┈┈•• ಥಾಮಸ್ ಬ್ಯಾಚ್ 

•► ಅಂತರರಾಷ್ಟ್ರೀಯ ಪ್ಯಾರಾಲಿಂಪಿಕ್ ಸಮಿತಿ (IPC)ಯ ಅಧ್ಯಕ್ಷ, ••┈┈┈┈┈┈┈•• ಫಿಲಿಪ್ ಕ್ರಾವೆನ್



☀ಇತ್ತೀಚಿನ Nov 2016 ರಂತೆ ಆದ ಬದಲಾವಣೆಗಳು..
━━━━━━━━━━━━━━━━━━━━━━━━━━━━━━━

•► ವಿಶ್ವಸಂಸ್ಥೆಯ ಅಂತಾರಾಷ್ಟ್ರೀಯ ಕಾನೂನು ಆಯೋಗಕ್ಕೆ ಭಾರತೀಯ ಮೂಲದ ಅನಿರುದ್ಧ ರಜಪೂತ್‌ ಆಯ್ಕೆಯಾಗಿದ್ದಾರೆ.

•► ಜಿಮ್ ಯಾಂಗ್ ಕಿಮ್ ಅವರು ಈಚೆಗೆ ವಿಶ್ವಬ್ಯಾಂಕ್ ಗೆ ಪುನಃ 5 ವರ್ಷದ ಅವಧಿಗೆ ಅಧ್ಯಕ್ಷರಾಗಿ ಪುನರಾಯ್ಕೆಗೊಂಡಿದ್ದಾರೆ.

•► ಪೋರ್ಚುಗಲ್ ನ ಮಾಜಿ ಪ್ರಧಾನಿ 'ಅಂಟೊನಿಯೊ ಗುಟೆರಸ್' ಅವರನ್ನು ವಿಶ್ವಸಂಸ್ಥೆಯ 9ನೇ ಮಹಾ ಪ್ರಧಾನ ಕಾರ್ಯದರ್ಶಿಯಾಗಿ ನೇಮಕ.

•►  ಪ್ರಸ್ತುತ ವಿಶ್ವಸಂಸ್ಥೆಯ ಮಹಾಪ್ರಧಾನ ಕಾರ್ಯದರ್ಶಿ ಬಾನ್ ಕಿ ಮೂನ್ ಅವರ ಅವಧಿ ಡಿಸೆಂಬರ್ 31ಕ್ಕೆ ಮುಕ್ತಾಯವಾಗಲಿದೆ.

•►  ವಿಶ್ವಸಂಸ್ಥೆಯ ಈಗಿನ ಸಾಮಾನ್ಯ ಸಭೆಯ ಅಧ್ಯಕ್ಷ : ಪೀಟರ್ ಥಾಮ್ಸನ್.

•►  ವಿಶ್ವಸಂಸ್ಥೆಯ 9ನೇ ಮಹಾ ಪ್ರಧಾನ ಕಾರ್ಯದರ್ಶಿ ಗುಟೆರಸ್ ರವರ ಅಧಿಕಾರ ಅವಧಿ : 2017ರ ಜನವರಿ 1ರಿಂದ 2022ರ ಡಿಸೆಂಬರ್ 31ರವರೆಗೆ ಇರಲಿದೆ.

... ಮುಂದುವರೆಯುವುದು.

Saturday, 3 December 2016

☀️ 2016-17 ರ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಓದಿಕೊಳ್ಳಲೇಬೇಕಾದ ಮಹತ್ವದ ಅಂಶಗಳು : (Important topics for all upcoming competitive exams)

☀️ 2016-17 ರ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಓದಿಕೊಳ್ಳಲೇಬೇಕಾದ ಮಹತ್ವದ ಅಂಶಗಳು :
(Important topics for all upcoming competitive exams)
━━━━━━━━━━━━━━━━━━━━━━━━━━━━━━━━━━━━━━━━━━━━━

★ ಪರೀಕ್ಷೆಗಳಿಗಾಗಿ ಮಹತ್ವದ ಅಂಶಗಳು
(important topics for exams)


(ON REQUEST : AS PER MY OPINION)

•►   KPSC "ಸಿ ಗ್ರುಪ್" ಹುದ್ದೆಗಳ ಹಾಗೂ ಪಿ.ಡಿ.ಓ ಮತ್ತು ಇತರೇ ಪದವಿ ಅರ್ಹತಾ ಪರೀಕ್ಷೆಗಳಿಗಾಗಿ ಸ್ಪರ್ಧಾರ್ಥಿಗಳು ಓದಿಕೊಳ್ಳಲೇಬೇಕಾದ ಕೆಲವು ಆಯ್ದ ಮಹತ್ವದ ಅಂಶಗಳನ್ನು ನಾನು ಇಲ್ಲಿ ಬರೆಯುವೆ. ಇವೇ ಅಂತಿಮವಲ್ಲ!. I hope ತಾವೆಲ್ಲರೂ ಈಗಾಗಲೇ ಇವನ್ನೆಲ್ಲಾ ಕಣ್ಣು ಹಾಯಿಸಿರಬಹುದು.

•►   (ಕೆ.ಪಿ.ಎಸ್.ಸಿ., ಪಿ.ಡಿ.ಓ, ಪಿ.ಎಸ್.ಐ) ಪರೀಕ್ಷೆಗಳಿಗೆ ಸಂಬಂಧಿಸಿದಂತೆ - ಇವೆಲ್ಲ ವಿಷಯಗಳ ಬಗ್ಗೆ ಪ್ರಸ್ತುತ ಬದಲಾವಣೆ, ಇತ್ತೀಚಿನ ಪ್ರವೃತ್ತಿಗಳು ಹಾಗೂ ಪ್ರಚಲಿತ ಜಾರಿ ಕುರಿತ ಸಮಗ್ರವಾಗಿ ಅವಲೋಕನ ಅತ್ಯಗತ್ಯ.



*.ಸಂವಿಧಾನದ ತಿದ್ದುಪಡಿಗಳು (42, ಭೂ ಸುಧಾರಣೆ, ಪಕ್ಷಾಂತರ, ಶಿಕ್ಷಣ ಮೂಲಭೂತ, ಬಾಂಗ್ಲಾ - ಭಾರತ ಭೂ ವಿನಿಮಯ, NJAC, 73,74, ಸ್ಥಾನ ಮೀಸಲಾತಿ,371J, ಜಿ.ಎಸ್.ಟಿ ಮಸೂದೆ)


*.FDI-ಮಿತಿ, (ಕ್ಷೇತ್ರಗಳ ಪಾಲು), ಡಿಜಿ ಲಾಕರ್, ಕೇಂದ್ರ ನೇರ ತೆರಿಗೆ ಮಂಡಳಿಯು (ಸಿಬಿಡಿಟಿ)

*.SDG's, ಸಮುದಾಯ ಅಭಿವೃದ್ಧಿ, ಮಹಿಳಾ ಕಾರ್ಯಕ್ರಮಗಳು,

*.ಭಾರತದ ನೀತಿ ಆಯೋಗ -ವಿಷನ್ ಡಾಕ್ಯುಮೆಂಟ್ (ಪಂಚವಾರ್ಷಿಕ ಯೋಜನೆಯ ಬದಲಿಗೆ 15 ವರ್ಷಗಳ ವಿಷನ್ ಡಾಕ್ಯುಮೆಂಟ್ ಜಾರಿಯಲ್ಲಿ ತಂದಿದ್ದಾರಲ್ಲ ಅದಕ್ಕೆ)

*.ವಿಶ್ವಸಂಸ್ಥೆಯ ಪ್ಯಾರಿಸ್ ಸಮ್ಮೇಳನ.ಪರಮಾಣು ಪೂರೈಕೆದಾರರ ಗುಂಪು (ಎನ್ಎಸ್‌ಜಿ) ,ಅಣ್ವಸ್ತ್ರ ಪ್ರಸರಣ ನಿಷೇಧ ಒಪ್ಪಂದೆ (ಎನ್‌ಪಿಟಿ)

*.ಇನ್ವೆಷ್ಟ್ ಕರ್ನಾಟಕ -೨೦೧೬, -82ನೇ ಸಾಹಿತ್ಯ ಸಮ್ಮೇಳನ, ಕರ್ನಾಟಕ ಸ್ಟಾರ್ಟ್ ಅಪ್ ನೀತಿ :೨೦೧೫-೨೦೨೦, ಬಾಹುಬಲಿ ಮಹಾಮಸ್ತಾಭಿಷೇಕ, ಕನ್ನಡ ಸಾಹಿತ್ಯ ಪರಿಷತ್ತು, ಐ4 ನೀತಿ, ಜೈವಿಕ ಇಂಧನ ನೀತಿ,

*.ದೇಶದ, ರಾಜ್ಯದ ವಿಶ್ವ ಪರಂಪರೆ ತಾಣಗಳು (ಹೊಸದಾಗಿ ಆಯ್ಕೆಯಾದವು), ವಿಶ್ವದ ಅತಿ ಎತ್ತರದ ರಸ್ತೆ ಸುರಂಗ ಮಾರ್ಗದ ನಿರ್ಮಾಣ -ಚೀನಾ,

*.ಮಾಹಿತಿ ಹಕ್ಕು, writs, ಅಂತರರಾಜ್ಯ ಸಂಬಂಧಗಳು- ಮಂಡಳಿಗಳು, ಜಲನ್ಯಾಯ ಮಂಡಳಿಗಳು (ಜಲ, ವ್ಯಾಪಾರ, crime mitigation, transport etc..)

*.ಗ್ರಾಮೀಣಾಭಿವೃದ್ಧಿ, ವಿಕೇಂದ್ರೀಕರಣ, PURA, IAY,ನನ್ನ ಮನೆ, ಗ್ರಾಮ ಸ್ವರಾಜ್,  ಗ್ರಾಮೀಣ - ನಗರ ಸ್ಥಳೀಯ ಪಂಚಾಯಿತಿ ಸಂಸ್ಥೆಗಳು

*.ಸಂದಾಯ ಬಾಕಿ, ವಿತ್ತೀಯ ಕೊರತೆ-ಕೊರತೆಯ ಹಣಕಾಸು, ಹಣದುಬ್ಬರ, ಹಣದ ಅಪಮೌಲ್ಯ,  ಚೀನಾದ ಯುಆನ್ ಕರೆನ್ಸಿ, ನೇರ ತೆರಿಗೆ (Direct Taxes) ಮತ್ತು ಪರೋಕ್ಷ ತೆರಿಗೆಗಳು (Indirect Taxes), ರೆಪೋ ದರ, ರಿವರ್ಸ್ ರೆಪೊ ದರ, ಹಣಕಾಸು ನೀತಿ ಸಮಿತಿ,

*.ರಾಜ್ಯದ/ರಾಷ್ಟ್ರದ ಪ್ರಸ್ತುತ ಒಟ್ಟು ಆಂತರಿಕ ಉತ್ಪನ್ನದಲ್ಲಿ ವಲಯವಾರು ಕೊಡುಗೆ, ಭಾರತದ ಜಿಡಿಪಿ ,ರಾಷ್ಟ್ರೀಯ / ರಾಜ್ಯ ಆದಾಯ - ವಲಯಗಳ ಕೊಡುಗೆಗಳು, ಮಹಾರತ್ನ, ನವರತ್ನ ಕೈಗಾರಿಕೆಗಳು,

*. ಅಂತರರಾಷ್ಟ್ರೀಯ ಸಂಸ್ಥೆಗಳು (ADB, AIIB,NDB, IMF, IMO, WTO,NDB)

*.ಭಾರತ ವಿಶ್ವದಲ್ಲಿ ಹೊಂದಿರುವ ಹಲವು ಕ್ಷೇತ್ರಗಳಲ್ಲಿ ಸ್ಥಾನ- ಸಮೀಕ್ಷೆ

*.ರಾಷ್ಟ್ರೀಯ ಸಾರ್ವಜನಿಕ ಸಂಸ್ಥೆಗಳು :ರಾಜ್ಯ ಲೋಕಸೇವಾ ಆಯೋಗ, ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ, CAG, ಹಣಕಾಸು ಆಯೋಗ,SC&ST, ಹಿಂದುಳಿದ ವರ್ಗಗಳ ಆಯೋಗ, ಜಾಗೃತ ದಳ, ಲೋಕಪಾಲ್ & ಲೋಕಾಯುಕ್ತ

*.ಚುನಾವಣಾ ಆಯೋಗ, ರಾಷ್ಟ್ರೀಯ ಪಕ್ಷಗಳ ಸ್ಥಾನ-ಮಾನ ಪಡೆಯುವ ನಿಯಮಗಳು ,ಏಕರೂಪ ನಾಗರಿಕ ಸಂಹಿತೆ ,

*.ರಾಜ್ಯ/ರಾಷ್ಟ್ರ ಹಣಕಾಸು ಆಯೋಗ, ಠಂಕಶಾಲೆಗಳು & ಮುದ್ರಣಾಲಯಗಳು

*.ಕರ್ನಾಟಕದಲ್ಲಿ ಸ್ವಾತಂತ್ರ್ಯ ಚಳುವಳಿಗಳು - ಏಕೀಕರಣ, ರೈತರ ದಂಗೆಗಳು, ದಿವಾನ್, ಕಮೀಷನರ್ ಗಳ ಸುಧಾರಣೆಗಳು,

*.ಕರ್ನಾಟಕದ ಕೃಷಿ ಇಲಾಖೆ, NABARD, ಕೃಷಿ ಬೆಲೆ ಆಯೋಗ, ಕನಿಷ್ಠ ಬೆಂಬಲ ಬೆಲೆ, sustained agriculture, ಆಹಾರ ಭದ್ರತೆ, PKSY, Food Parks, ಸಣ್ಣ, ಗೃಹ ಕೈಗಾರಿಕೆ , ಭೂದಾಖಲೆ ಮಾಹಿತಿ ಡಿಜಟಲೀಕರಣ,‘ ಕೌಶಲ ಮಿಷನ್‌’

*.ಭಾರತೀಯ ಮಹಿಳಾ ಬ್ಯಾಂಕ, ಪ್ರಾದೇಶಿಕ ಗ್ರಾಮೀಣ ಬ್ಯಾಂಕಿಂಗ್, ಸ್ವ ಸಹಾಯ ಬ್ಯಾಂಕುಗಳು, ಸಹಕಾರಿ ಬ್ಯಾಂಕುಗಳು

*.ರಾಷ್ಟ್ರೀಯ ಅಭಿವೃದ್ಧಿ ಬ್ಯಾಂಕ, ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ, ಭಾರತೀಯ ರಿಜರ್ವ್ ಬ್ಯಾಂಕ (RBI GOVERNOR ನೇಮಕಾತಿ ಬಗ್ಗೆ)

*.ಜಿಎಸ್ ಟಿ - ಮಂಡಳಿ. ಡಿಜಿಟಲ್ ಕೃಷಿ ಮಾರುಕಟ್ಟೆ(eNAM), ನಾಲ್ಕು ಸ್ತರಗಳಲ್ಲಿ ಸರಕು ಹಾಗೂ ಸೇವಾ ತೆರಿಗೆಯನ್ನು ವಿಧಿಸುವಿಕೆ,ಕೇಂದ್ರ ಜಿಎಸ್‌ಟಿ, ರಾಜ್ಯ ಜಿಎಸ್‌ಟಿ ಮತ್ತು ಸಮಗ್ರ ಜಿಎಸ್‌ಟಿ ಕಾನೂನುಗಳು,

*.ಇತ್ತೀಚಿನ ಜಾಗತಿಕ ಶೃಂಗಸಭೆಗಳು, EAST ASIAN, ASEAN, BRICS, BIMSTEC, SAARC, ಅಲಿಪ್ತ ಶೃಂಗಸಭೆ, ಮಸಾಲಾ ಬಾಂಡ್‌, ಮೀಸಲು ಕರೆನ್ಸಿಗಳು, ಸೇನಾ ಸರಕು ವಿನಿಮಯ ಒಪ್ಪಂದ (LEMOA),

*.ಕಾರ್ಬನ್ ಸಿಂಕ್ಸ್, UNFCCC, ಕ್ಯೂಟೋ ಒಪ್ಪಂದ,  IPCC, COP, ಮಾಂಟ್ರಿಯಲ್ ಪ್ರೋಟೊಕಾಲ್,

*.ದಿನಾಚರಣೆಗಳು (ವಿಶ್ವ ಪರಿಸರ ದಿನಾಚರಣೆ:,ವಿಶ್ವ ಅರಣ್ಯ, ಜಲ, ವನ್ಯಜೀವಿ, ಜೀವ ವೈವಿಧ್ಯಮಯ, ಓಝೋನ್ ಸಂರಕ್ಷಣಾ, ಅರ್ಥ್ ಅವರ್, ರೆಡ್ ಡೇಟಾ ಬುಕ್, ಪಶ್ಚಿಮ ಘಟ್ಟ, ಪ್ರವಾಸೋದ್ಯಮ ದಿನ- ಗಳು etc)

*. ರಾಷ್ಟ್ರೀಯ ವಿಜ್ಞಾನ ಸಮ್ಮೇಳನ, LIGO, MTCR ಸದಸ್ಯತ್ವ , ಪರಮಾಣು ಭದ್ರತಾ ಶೃಂಗಸಭೆ (Nuclear Industry Summit2016) , ಸೂಪರ್ ಮೂನ್,

*.NASA/ ISRO,ಡಿಆರ್‌ಡಿಒ , CHINA, RASSIA, ಉಡಾಯಿಸಿದ ಇತ್ತೀಚಿನ ಉಪಗ್ರಹಗಳು, ಬಾಹ್ಯಾಕಾಶ ನಿಲ್ದಾಣ, ಎಕ್ಸೊಮಾರ್ಸ್’ ಗಗನ ನೌಕೆ ,‘ಹಂಟಿಂಗ್ ಏಲಿಯನ್ಸ್’ಸ್ಯಾಟನ್-2 ಕ್ಷಿಪಣಿ ,ರುಸ್ತುಂ-2',ಯುದ್ಧನೌಕೆಗಳು,ಕಾಮೋವ್‌ –ಕೆಎ226 , ರಾಫೆಲ್,ಎಸ್‌400 ,ಶೆಂಝೌ–11’,ಟಿಯಾಂಗಾಂಗ್-2 , ಜೇಮ್ಸ್‌ ವೆಬ್‌ ದೂರದರ್ಶಕ,  ‘ಕ್ಯೂಬ್‌ಸ್ಯಾಟ್‌’,ಜಲಾಂತರ್ಗಾಮಿಗಳು

*.ಸ್ಟ್ರಿಂಗ್ ಆಪ್ ಪರ್ಲ್ಸ್, ಸಾಗರಮಾಲಾ, ಚಹಬಾರ್, ಗ್ವಾದಾರ್ ಬಂದರುಗಳು, ಸಿಂಧೂ, ಬ್ರಹ್ಮಪುತ್ರ, ಕಾವೇರಿ, ಮಹಾದಾಯಿ, ನರ್ಮದಾ, ಗಂಗಾ, ಗ್ರೀನ್ ಎನರ್ಜಿ, TAPI,

*.ಭಾರತೀಯ ವಿದೇಶಿ ವ್ಯವಹಾರ, ‘ಜೀರೋ ಟಾಲರೆನ್ಸ್‌ ಪಾಲಿಸಿ’(ಶೂನ್ಯ ಸೈರಣ ನೀತಿ)

*.ಈಶಾನ್ಯ ರಾಜ್ಯಗಳ ಕುರಿತು,ಪ್ರಕೃತಿ ವಿಕೋಪ ನಿರ್ವಹಣೆ

*.ಪರಿಸರ, ಅರಣ್ಯ ಮತ್ತು ಹವಾಮಾನ ಪರಿವರ್ತನೆ ಸಚಿವಾಲಯ, ಜಾಗತಿಕ ಸೈಕ್ಲೋನ್ಗಳು, ವಾಯುಮಂಡಲ ವಲಯಗಳು, ಮಾನ್ಸೂನ್, ಖನಿಜ,ಅರಣ್ಯಗಳು, ಬೆಳೆ,ಅಂತಾರಾಷ್ಟ್ರೀಯ ಪರಿಸರ ಸಂರಕ್ಷಣೆ ಒಕ್ಕೂಟ(ಐಯುಸಿಎನ್)

*.ಶಾಸನಗಳು, ಪ್ರಸಿದ್ಧ ಐತಿಕಾಸಿಕ ಕೃತಿಗಳು, ಗವರ್ನರಗಳು, ಮೈಸೂರು, ಪಾಣಿಪಟ್, ತರೈನ್, ಮರಾಠಾ,- etc ಯುದ್ಧಗಳು ,

*.ಅಧ್ಯಯನ ಸಮಿತಿಗಳು, ಆಯೋಗಗಳು (border ಭದ್ರತೆ, ಜಿ.ಎಸ್.ಟಿ, ಕರ್ನಾಟಕದಲ್ಲಿ ಬರ ಸ್ಥಿತಿ ನಿರ್ವಹಣೆ,(ರಾಜ್ಯ ಸರ್ಕಾರ ಈಗಾಗಲೇ ‘15 ಜಿಲ್ಲೆಗಳ 139 ತಾಲ್ಲೂಕುಗಳು ಬರಪೀಡಿತ’ ಎಂದು ಘೋಷಣೆ ಮಾಡಿದೆ.),

*.ಕಪ್ಪು ಹಣ’ (black money) - 2016ರ ಪ್ರಧಾನ ಮಂತ್ರಿ ಗರೀಬ್‌ ಕಲ್ಯಾಣ್‌ ಯೋಜನೆ, ಅಘೋಷಿತ ಕಪ್ಪು ಹಣದ ಆದಾಯದ ಮೇಲೆ ಶೇ. 50 ತೆರಿಗೆ ಪಾವತಿ, ಪಿಎಂಜಿಕೆ ಸೆಸ್‌ ,ಆದಾಯ ತೆರಿಗೆ ಕಾಯಿದೆ ತಿದ್ದುಪಡಿ ಮಸೂದೆ 2016, ಸ್ವಚ್ಛ ಭಾರತ್ ಸೆಸ್ (ಎಸ್ ಬಿಸಿ),

*.ರಾಜ್ಯ / ರಾಷ್ಟ್ರೀಯ ಮಹತ್ವದ ಪ್ರಚಲಿತ ಯೋಜನೆಗಳು
(HRIDAY,ಮೇಕ್ ಇನ್ ಇಂಡಿಯಾ ಯೋಜನೆ, SBA,SMART CITY,PMJDY, PMGSY, Start-up, Stand-up India, ಫಸಲ್ ವಿಮಾ ಯೋಜನೆ, ಮಣ್ಣು ಆರೋಗ್ಯ ಕಾರ್ಡ್, UJWAL, ಪಹಲ್,  TRYSEM, MGNERGA etc..)

*.2011ರ ರಾಜ್ಯದ / ದೇಶದ ಜನಗಣತಿ - ಸಾಕ್ಷರತೆ, ಲಿಂಗಾನುಪಾತ, ತಾಯಂದಿರ-ಮಕ್ಕಳ ಜನನ ಮರಣ ಪ್ರಮಾಣ, ಜನಸಾಂದ್ರತೆ, (ಪ್ರಸ್ತುತ 2014-15 / 2015-16 ರ ಸಮೀಕ್ಷೆ)

*.2016ರ ರಾಷ್ಟ್ರೀಯ / ಅಂತರರಾಷ್ಟ್ರೀಯ - ಪ್ರಶಸ್ತಿಗಳು (Nobel, Booker, ಮಾಗ್ಸೆಸ್ಸೇ, ಪುಲಿಟ್ಜರ್‌ ಪ್ರಶಸ್ತಿ, ಕೇಂದ್ರ ಸಾಹಿತ್ಯ ಅಕಾಡೆಮಿ, ಜ್ಞಾನಪೀಠ, etc..)

*. ಪ್ರಚಲಿತ ಪ್ರಶಸ್ತಿ ವಿಜೇತ ಕೃತಿಗಳು,

*.ಓಲಂಪಿಕ್ / ಪ್ಯಾರಾಲಂಪಿಕ್ಸ್, ಕ್ರಿಕೆಟ್, ವಿಶ್ವ ಬಾಡ್ಮಿಂಟನ್, ವಿಶ್ವ ಕಬ್ಬಡ್ಡಿ,

*.ನೂತನ ನೇಮಕಾತಿಗಳು / ಪ್ರಸಿದ್ಧ ನಿಧನರಾದ ವ್ಯಕ್ತಿಗಳು.


— ಈಗಾಗಲೇ ಮೇಲೆ ಹೇಳಿದ ಬಹು ವಿಷಯಗಳ ಕುರಿತು "ಸ್ಪರ್ಧಾಲೋಕ"ದಲ್ಲಿ ವಿವರಿಸಲಾಗಿದ್ದು, ಹೆಚ್ಚಿನ ಮಾಹಿತಿಯನ್ನು "Telegram App ಹಾಗೂ "Facebook Page"ನಲ್ಲಿ ಹಂಚಿಕೊಳ್ಳಲಾಗಿದೆ. ಉಳಿದ ವಿಷಯಗಳನ್ನು ಶೀಘ್ರದಲ್ಲೇ ನಿಮ್ಮೊಂದಿಗೆ ಹಂಚಿಕೊಳ್ಳಲಾಗುವುದು.




★ವಿಶೇಷ ಸೂಚನೆ : (For Kpsc C post...

 ಹಿಂದಿನ ಪರೀಕ್ಷೆಗಳ ಪ್ರಶ್ನೆ ಪತ್ರಿಕೆಗಳನ್ನು ಅವಲೋಕಿಸಿದಾಗ ಹೆಚ್ಚೆಚ್ಚು ಪ್ರಶ್ನೆಗಳು ಕ್ರಮವಾಗಿ " ಆರ್ಥಿಕತೆ, ಪ್ರಚಲಿತ ವಿದ್ಯಮಾನಗಳು, ಭೂಗೋಳಶಾಸ್ತ್ರ, ರಾಜಕೀಯ & ಸಂವಿಧಾನ, ಪರಿಸರ ವ್ಯವಸ್ಥೆ, ಮತ್ತು ಸಮಾಜ - ಗ್ರಾಮೀಣಾಭಿವೃದ್ಧಿ, ಸಾಮಾನ್ಯ ವಿಜ್ಞಾನ "ಗಳ ಮೇಲೆ ಕೇಳಲಾಗಿದೆ,  ತಾವು ಈ ವಿಷಯಗಳ ಕಡೆಗೆ ಹೆಚ್ಚು ಗಮನಹರಿಸುವುದು ಒಳಿತು.)

★★ ಇವುಗಳನ್ನು ಹೊರತುಪಡಿಸಿ ಮತ್ತೇನಾದರೂ ವಿಷಯವಸ್ತು ಸೇರ್ಪಡೆಗೊಳಿಸಬೇಕೆಂದಾದಲ್ಲಿ ದಯವಿಟ್ಟು ಕಮೆಂಟ್ ಮಾಡಿ,


— "ಐಎಎಸ್ /ಕೆಎಎಸ್ & ಇತರೆ ಪರೀಕ್ಷೆಗಳಿಗಾಗಿ ಕನ್ನಡದಲ್ಲಿ ವಿಸ್ತೃತ ನೋಟ್ಸ್ "(IAS/KAS Notes in Kannada Medium)

★ "ಸ್ಪರ್ಧಾಲೋಕ"Telegram Channel Link — to Join...https://telegram.me/spardhaloka

★ "ಸ್ಪರ್ಧಾಲೋಕ"Telegram ಚರ್ಚಾಕೂಟ Link —https://telegram.me/joinchat/BOzO2Dy1N_VCmZf7DMM38A

★"ಸ್ಪರ್ಧಾಲೋಕ" Blog Link— https://www.spardhaloka.blogspot.in/

★"ಸ್ಪರ್ಧಾಲೋಕ"FaceBook link— https://m.facebook.com/spardhaloka.blogspot.in/

Friday, 25 November 2016

☀ ಕೆಪಿಎಸ್ ಸಿ, ಪಿಡಿಓ, ಮತ್ತು ಪದವಿ ಆಧಾರಿತ ಪರೀಕ್ಷೆಗಳಿಗೆ ಸಹಾಯಕವಾಗುವ ಮಹತ್ವಪೂರ್ಣ ಇಂಗ್ಲೀಷ್ ಜ್ಞಾನ : (List of Synonyms and Antonyms for Competitive Exams):

☀ ಕೆಪಿಎಸ್ ಸಿ, ಪಿಡಿಓ, ಮತ್ತು ಪದವಿ ಆಧಾರಿತ ಪರೀಕ್ಷೆಗಳಿಗೆ ಸಹಾಯಕವಾಗುವ ಮಹತ್ವಪೂರ್ಣ ಇಂಗ್ಲೀಷ್ ಜ್ಞಾನ : 
(List of Synonyms and Antonyms for Competitive Exams):
━━━━━━━━━━━━━━━━━━━━━━━━━━━━━━━━━━━━━━━━━━━━━

★ ಇಂಗ್ಲೀಷ್ ಗ್ರಾಮರ್
(English Grammar)


★. Words – Synonyms  (Antonyms)

1. Kindred – relation, species (unrelated, dissimilar)
2. Keen – sharp, poignant (vapid, insipid)
3. Knave – dishonest, scoundrel (paragon, innocent)
4.Knell – death knell, last blow (reconstruction, rediscovery)
5. Knotty – complicated difficult (simple, manageable)
6. Luxuriant – profuse, abundant (scanty, meagre)
7. Luscious – palatable, delicious (unsavoury, tart)
8. Lure – attract, entice (repel, dissuade)
9. Lunacy – delusion, insanity (normalcy, sanity)
10. Lucid – sound, rational (obscure, hidden)
11. Listless – indifferent, inattentive (brisk, attentive)
12. Linger – loiter, prolong (hasten, quicken)
13. Liberal – magnanimous, generous (stingy, malicious)
14. Liable – accountable, bound (unaccountable, apt to)
15. Lenient – compassionate, merciful (cruel, severe)
16. Lax – slack, careless (firm, reliable)
17. Lavish – abundant, excessive (scarce, deficient)
18. Mutual – joint, identical (separate, distinct)
19.Mutinous – recalcitrant, insurgent (submissive, faithful)
20. Murky – dusky, dreary (bright shining)
21. Munificent – liberal, hospitable (frugal, penurious)
22. Monotonous – irksome, tedious (varied, pleasant)
23. Momentous – notable, eventful (trivial, insignificant)
24. Mollify – appease, assuage (irritate, infuriate)
25. Molest – harass, tease (console, soothe)
26. Modest – humble, courteous (arrogant, pompous)
27. Mitigate – alleviate, relieve (augment, enhance)
28. Miraculous – marvellous, extraordinary (ordinary, trivial)
29. Minute – diminutive, miniature (large, colossal)
30. Numerous – profuse, various (scarce, deficient)
31. Nullify – cancel, annual (confirm, uphold)
32. Noxious – baneful, injurious (healing, profitable)
33. Novice – tyro, beginner (veteran, ingenious)
34. Nonchalant – indifferent, negligent (attentive, considerate)
35. Nimble – prompt, brisk (sluggish, languid)
36. Niggardly – miser, covetous (generous, profuse)
37. Negligent – inattentive, careless (vigilant, careful)
38. Overwhelm – triumph, subjugate (flounder, falter)
39. Outrage – offence, maltreatment (praise, favour)
40. Outbreak – eruption, insurrection (compliance, subjection)
41. Ornamental – decorative, adorned (unseemly, plain)
42. Ordain – order, impose (revoke, abolish)
43. Oracular – cryptic, vague (lucid, distinct)
44. Opaque – obscure, shady (transparent, bright)
45. Offspring – descendant, sibling (ancestor, forefather)
46. Offensive – abhorrent, arrogant (docile, compliant)
47. Odious – malevolent, obnoxious (engaging, fascinating)
48. Occult – latent, ambiguous (intelligible, transparent)
49. Obvious – evident, apparent (obscure, ambiguous)
50. Obstruct – impede, prevent (hasten, encourage)
51. Prudent – cautious, discreet (impetuous, unwise)
52. Provoke – inflame, incite (pacify, comfort)
53. Protract – prolong, delay (abbreviate, curtail)
54. Proscribe – prohibit, exclude (solicit, include)
55. Profuse – lavish, abundant (scarce, scantly)
56. Profligate – dissolute, degenerate (virtuous, upright)
57. Prodigy – miracle, marvel (normal, average)
58. Prodigious – vast, enormous (unimpressive, diminutive)
59. Premature – precocious, untimely (belated, opportune)
60. Predicament – plight, dilemma (resolution, confidence)
61. Precarious – doubtful, insecure (assured, undeniable)
62. Pompous – haughty, arrogant (unpretentious, humble)
63. Perverse – petulant, obstinate (complacent, docile)
64. Pertness – flippancy, impudence (modesty, diffidence)
65. Peevish – perverse, sullen (suave, amiable)
66. Peerless – matchless, unrivalled (mediocre, commonplace)
67. Paramount – foremost, eminent (trivial, inferior)
68. Pamper – flatter, indulge (deny, disparage)
69. Placid – tranquil, calm (turbulent, hostile)
70. Quell – subdue, reduce (exacerbate, agitate)
71. Quaint – queer, strange (familiar, usual)
72. Quack – impostor, deceiver (upright, unfeigned)
73. Quibble – equivocate, prevaricate (unfeign, plain)
74. Quarantine – seclude, screen (befriend, socialize)
75. Questionable – dubious, disputable (reliable, authentic)
76. Reverence – respect, esteem (disrespect, affront)
77. Ratify – consent, approve (deny, dissent)
78. Ravage – destroy, ruin (reconstruct, renovate)
79. Redeem – recover, liberate (conserve, lose)
80. Ruthless – remorseless, inhumane (compassionate, lenient)
81. Rustic – rural uncivilised (cultured, refined)
82. Rout – vanquish, overthrow (succumb, withdraw)
83. Retract – recant, withdraw (confirm, assert)
84. Remote – inaccessible, farther (adjoining, adjacent)
85. Remorse – regret, penitence (ruthlessness, obduracy)
86. Resentment – displeasure, wrath (content, cheer)
87. Rescind – annul, abrogate (delegate, permit)
88. Remonstrate – censure, protest (agree, laud)
89. Remnant – residue, piece (entire, whole)
90. Sycophant – parasite, flatterer (devoted, loyal)
91. Superficial – partial, shallow (profound, discerning)
92. Subvert – demolish, sabotage (generate, organise)
93. Substantial – considerable, solid (tenuous, fragile)
94. Subsequent – consequent, following (Preceding, Previous)
95. Stain – blemish, tarnish (honour, purify)
96. Scanty – scarce, insufficient (lavish, multitude)
97. Sarcastic – ironical, derisive (courteous, gracious)
98. Shrewd – cunning, crafty (simple, imbecile)
99. Stupor – lethargy, unconsciousness (sensibility, consciousness)
100. Squalid – dirty, filthy (tidy, attractive)
101. Sporadic – intermittent, scattered (incessant, frequent)
102. Solicit – entreat, implore (protest, oppose)
103. Sneer – mock, scorn (flatter, praise)
104. Slander – defame, malign (applaud, approve)
105. Shabby – miserable, impoverished (prosperous, thriving)
106. Saucy – impudent, insolent (modest, humble)
107. Tyro – beginner, learner (proficient, veteran)
108. Trivial – trifling, insignificant (significant veteran)
109. Trenchant – assertive, forceful (feeble, ambiguous)
110. Transient – temporal, transitory (lasting, enduring)
111. Tranquil – peaceful, composed (violent, furious)
112. Timid – diffident, coward (bold, intrepid)
113. Temperate – cool, moderate (boisterous, violent)
114. Tedious – wearisome, irksome (exhilarating, lively)
115. Taciturn – reserved, silent (talkative, extrovert)
116. Taboo – prohibit, ban (permit, consent)
117. Throng – assembly, crowd (dispersion, sparsity)
118. Tumultuous – violent, riotous (peaceful, harmonious)
119. Utterly – completely, entirely (deficiently, incompletely
120. Usurp – seize, wrest (restore, compensate)
121. Uncouth – awkward, ungraceful (elegant, graceful)
122. Umbrage – resentment, bitterness (sympathy, goodwill)
123. Vulgar – inelegant, offensive (elegant, civil)
124. Vouch – confirm, consent (repudiate, prohibit)
125. Volatile – light, changing (heavy, ponderous)
126. Vicious – corrupt, obnoxious (noble, virtuous)
127. Venerable – esteemed, honoured (unworthy, immature)
128. Vanity – conceit, pretension (modesty, humility)
129. Valour – bravery, prowess (fear, cowardice)
130. Vagrant – wanderer, roaming (steady, settled)
131. Vigilant – cautious, alert (careless, negligent)
132. Valid – genuine, authentic (fallacious, deceptive)
133. Veteran – ingenious, experienced (novice, tyro)
134. Venom – poison, malevolence (antidote, benevolent)
135. Waive – relinquish, remove (impose, clamp)
136. Wary – cautious, cirumspect (heedless, negligent)
137. Wane – decline, dwindle (ameliorate, rise)
138. Wilt – wither, perish (revive, bloom)
139. Wield – use, employ (forgo, avoid)
140. Wan – pale, faded (bright, healthy)
141. Wicked – vicious, immoral (virtuous, noble)
142. Wed – marry, combine (divorce, separate)
143. Yoke – connect, harness (liberate, release)
144. Yield – surrender, abdicate (resist, protest)
145. Yearn – languish, crave (content, satisfy)
146. Yell – shout, shriek (whisper, muted)
147. Zest – delight, enthusiasm (disgust, passive)
148. Zenith – summit, apex (nadir, base)
149. Zeal – eagerness, fervour (apathy, lethargy)
150. Zig-zag – oblique, wayward (straight, unbent).

ಮುಂದುವರೆಯುವುದು. 

Sunday, 13 November 2016

●.PART: II - ಭಾರತದ ಪ್ರಮುಖ ನದಿಗಳು ಹಾಗೂ ಅವುಗಳ ವಿಶೇಷತೆಗಳು: (India's Drainage System / Famous Indian Rivers)

●.PART: II -  ಭಾರತದ ಪ್ರಮುಖ ನದಿಗಳು ಹಾಗೂ ಅವುಗಳ ವಿಶೇಷತೆಗಳು:
(India's Drainage System / Famous Indian Rivers)
━━━━━━━━━━━━━━━━━━━━━━━━━━━━━━━━━━━━━━━━━━━━━
★ ಭಾರತದ ಪ್ರಾಕೃತಿಕ ಭೂಗೋಳ.
(Indian Physical Geography

★ ಭಾರತದ ನದಿಗಳು
(Indian Drainage System)

ಸ್ಪರ್ಧಾತ್ಮಕ ಪರೀಕ್ಷಾ ದೃಷ್ಟಿಕೋನದಿಂದ ಅತ್ಯುಪಯುಕ್ತವೆಂದೆನಿಸಿದ ಭೌಗೋಳಿಕವಾಗಿ ಪ್ರಮುಖವೆಂದೆನಿಸಿದ ಭಾರತದ ಕೆಲವು ನದಿಗಳು ಹಾಗೂ ಅವುಗಳ ವಿಶೇಷತೆಗಳೊಂದಿಗೆ ನಿಮ್ಮ 'ಸ್ಪರ್ಧಾಲೋಕ'ದಲ್ಲಿ ವಿವರಿಸಲು ಪ್ರಯತ್ನಿಸಲಾಗಿದ್ದು, ಏನಾದರೂ ತಪ್ಪುತಡಿಗಳಿದ್ದಲ್ಲಿ ನನ್ನ ಗಮನಕ್ಕೆ ತರಬೇಕೆಂದು ವಿನಂತಿ.


★ ದಕ್ಷಿಣ ಭಾರತದ ನದಿಗಳು :



1.ನದಿ :— ಕೃಷ್ಣಾ  (ದ.ಭಾರತದ ಪೂರ್ವಕ್ಕೆ ಹರಿಯುವ ನದಿ) 

●.ನದಿಯ ಉಗಮ ಸ್ಥಾನ :— ಮಹಾರಾಷ್ಟ್ರದ ಮಹಾಬಲೇಶ್ವರ.

●.ಕೊನೆಗೆ ಸೇರುವ ಪ್ರದೇಶ :— ಬಂಗಾಳ ಕೊಲ್ಲಿ (ಆಂಧ್ರಪ್ರದೇಶ)

●.ವ್ಯಾಪ್ತಿ ರಾಜ್ಯಗಳು :— ಕರ್ನಾಟಕ, ಆಂಧ್ರಪ್ರದೇಶ ಮತ್ತು ಮಹಾರಾಷ್ಟ್ರ

●.ಪ್ರಮುಖ ಉಪನದಿಗಳು :— ತುಂಗಭದ್ರ, ಕೊಯ್ನ, ಘಟಪ್ರಭಾ, ಮಲಪ್ರಭಾ, ಭೀಮಾ, ದಿಂಡಿ, ಯೆರ್ಲಾ, ವರ್ಣಾ, ಪಂಚಗಂಗಾ, ಧೂದಗಂಗಾ, ದೋಣಿ ಮತ್ತು ಮುಸಿ.

●.ಪ್ರಮುಖ ಅಣೆಕಟ್ಟುಗಳು :— ನಾಗಾರ್ಜುನ ಸಾಗರ ಜಲಾಶಯ, ಶ್ರೀಶೈಲಂ ಅಣೆಕಟ್ಟು, ಆಲಮಟ್ಟಿ ಅಣೆಕಟ್ಟು, ಧೋಮ್ ಅಣೆಕಟ್ಟು

●.ವಿಶೇಷತೆಗಳು :
ಇದು ದಕ್ಷಿಣ ಭಾರತದ 2 ನೇ ಅತಿ ಉದ್ದವಾದ ಮತ್ತು ಪ್ರಸ್ಥಭೂಮಿಯಲ್ಲಿ ಗೋದಾವರಿ ನದಿಯ ನಂತರದ 2 ನೇ ಅತಿ ದೊಡ್ಡ ನದಿ.



2..ನದಿ :— ನರ್ಮದಾ (ರೇವಾ)  (ದ.ಭಾರತದ ಪಶ್ಚಿಮಕ್ಕೆ ಹರಿಯುವ ನದಿ) 

●.ನದಿಯ ಉಗಮ ಸ್ಥಾನ :— ಅಮರಕಂಟಕ್, ಮಧ್ಯಪ್ರದೇಶ

●.ಕೊನೆಗೆ ಸೇರುವ ಪ್ರದೇಶ (Drain Into) :— ಅರಬ್ಬೀ ಸಮುದ್ರ (ಗುಜರಾತ್)

●.ವ್ಯಾಪ್ತಿ ರಾಜ್ಯಗಳು :— ಮಧ್ಯ ಪ್ರದೇಶ, ಮಹಾರಾಷ್ಟ್ರ ಗುಜರಾತ್

●.ಪ್ರಮುಖ ಉಪನದಿಗಳು :— ಶೇರ್, ಶಕ್ಕರ್, ದುಧಿ, ತವಾ, ಹಿರನ್, ಬರ್ನ, ಚೊರಲ್, ಕರಮ್

●.ಪ್ರಮುಖ ಅಣೆಕಟ್ಟುಗಳು :— ಸರ್ದಾರ್ ಸರೋವರ್ (ಗುಜರಾತ್), ನರ್ಮದಾ ಸಾಗರ್ (ಮಧ್ಯಪ್ರದೇಶ)

●.ರಾಷ್ಟ್ರೀಯ ಉದ್ಯಾನಗಳು / ಅಭಯಾರಣ್ಯಗಳು :— ಕನ್ಹಾ ರಾಷ್ಟ್ರೀಯ ಉದ್ಯಾನ (ಸುರ್ಪನ್ ನದಿ)

●.ವಿಶೇಷತೆಗಳು :—
1. ಭಾರತೀಯ ಉಪಖಂಡದಲ್ಲಿ ಹರಿಯುವ 5ನೇ ಉದ್ದದ ನದಿ.
2.ಇದು ಪಶ್ಚಿಮಕ್ಕೆ ಹರಿಯುವ ಉದ್ದವಾದ ನದಿಗಳಲ್ಲಿ 1ನೇಯದು.
3.ಇದು ಕಪಿಲಧಾರ್, ಧರ್ದಿ ಮತ್ತು ಧುವಂಧರ್ ಗಳೆಂಬ ಮೂರು ಜಲಪಾತಗಳನ್ನು ಹೊಂದಿದೆ.
4. 'ಅಲಿಯಾಬೆಟ್' ಎಂಬುವುದು ನರ್ಮದಾ ನದಿ ನಿರ್ಮಿತ ದ್ವೀಪಗಳಲ್ಲಿ ಅತಿದೊಡ್ಡ ದ್ವೀಪ.



3.ನದಿ :— ಮಹಾನದಿ  (ದ.ಭಾರತದ ಪೂರ್ವಕ್ಕೆ ಹರಿಯುವ ನದಿ) 

●.ನದಿಯ ಉಗಮ ಸ್ಥಾನ :— ನಗರಿ ಟೌನ್, ಛತ್ತೀಸ್ ಗಢ.

●.ಕೊನೆಗೆ ಸೇರುವ ಪ್ರದೇಶ (Drain Into) :— ಬಂಗಾಳ ಕೊಲ್ಲಿ (ಒಡಿಶಾ)

●.ವ್ಯಾಪ್ತಿ ರಾಜ್ಯಗಳು :— ಛತ್ತೀಸ್ ಗಢ, ಒಡಿಶಾ

●.ಪ್ರಮುಖ ಉಪನದಿಗಳು :— ಸೆಯೊನಾಥ್, ಹಸ್ಡೆಯೋ, ಜೋಂಕ್, ಇಬ್, ಓಂಗ್, ಮಂಡ್, ಟೆಲೆನ್, ಸುವರ್ಣರೇಖಾ.

●.ಪ್ರಮುಖ ಅಣೆಕಟ್ಟುಗಳು :— ಹಿರಾಕುಡ್ ಅಣೆಕಟ್ಟು (ದೊಡ್ಡ ಅಣೆಕಟ್ಟು), ತಿಕ್ಕರಪಾರಾ ಅಣೆಕಟ್ಟು, ನಾರಾಜು ಅಣೆಕಟ್ಟು.



4.ನದಿ :— ಕಾವೇರಿ (ದ.ಭಾರತದ ಪೂರ್ವಕ್ಕೆ ಹರಿಯುವ ನದಿ) 

●.ನದಿಯ ಉಗಮ ಸ್ಥಾನ :— ಕೊಡಗು,  ಕರ್ನಾಟಕ.

●.ಕೊನೆಗೆ ಸೇರುವ ಪ್ರದೇಶ (Drain Into) :— ಬಂಗಾಳ ಕೊಲ್ಲಿ.

●.ವ್ಯಾಪ್ತಿ ರಾಜ್ಯಗಳು :— ಕರ್ನಾಟಕ, ಕೇರಳ ಮತ್ತು ತಮಿಳುನಾಡು

●.ಪ್ರಮುಖ ಉಪನದಿಗಳು :— ಅಮರಾವತಿ, ಹಾರಂಗಿ,, ಲೋಕಪಾವನಿ, ಅರ್ಕಾವತಿ, ಲಕ್ಷಣತೀರ್ಥ, ಕಪಿಲಾ,, ಶಿಂಷಾ, ಹೇಮಾವತಿ, ನೋಯಲ್ , ಕಬಿನಿ, ಸುವರ್ಣಾವತಿ, ಭವಾನಿ ಮತ್ತು ಅಮರಾವತಿ.

●.ಪ್ರಮುಖ ಅಣೆಕಟ್ಟುಗಳು :— ಕೃಷ್ಣ ರಾಜ ಸಾಗರ ಅಣೆಕಟ್ಟು, ಮೆಟ್ಟೂರ್ ಅಣೆಕಟ್ಟು, ಬನಸುರಾ ಸಾಗರ ಅಣೆಕಟ್ಟು (ಕಬಿನಿ ನದಿ)

●.ರಾಷ್ಟ್ರೀಯ ಉದ್ಯಾನಗಳು / ಅಭಯಾರಣ್ಯಗಳು :— ಮುದುಮಲೈ ರಾಷ್ಟ್ರೀಯ ಉದ್ಯಾನ (ಮೊಯರ್ ನದಿ), ಬಂಡೀಪುರ ರಾಷ್ಟ್ರೀಯ ಉದ್ಯಾನ (ಮೊಯರ್ ನದಿ)

●.ವಿಶೇಷತೆಗಳು :—
1. ಇದನ್ನು 'ದಕ್ಷಿಣದ ಗಂಗೆ' ಎಂದು ಕರೆಯುವರು.
2.(ಶಿವನಸಮುದ್ರಂ) ಗಗನಚುಕ್ಕಿ ಮತ್ತು ಭರಚುಕ್ಕಿ, ಚುಂಚನಕಟ್ಡೆ  ಮತ್ತು ಹೊಗೇನಕಲ್ ಜಲಪಾತಗಳನ್ನು ಹೊಂದಿದೆ.
3. ಇದು ಮೂರು ಅಂತರ್ ನದಿ ದ್ವೀಪಗಳನ್ನು ಒಳಗೊಂಡಿದೆ.
1)ಶ್ರೀರಂಗಪಟ್ಟಣ 2)ಶಿವನಸಮುದ್ರಂ 3) ಶ್ರೀರಂಗ.



5.ನದಿ :— ಗೋದಾವರಿ (ದ.ಭಾರತದ ಪೂರ್ವಕ್ಕೆ ಹರಿಯುವ ನದಿ) 

●.ನದಿಯ ಉಗಮ ಸ್ಥಾನ :— ತ್ರಿಯಂಬಕ್, ನಾಸಿಕ್

●.ಕೊನೆಗೆ ಸೇರುವ ಪ್ರದೇಶ :— ಆಂಧ್ರಪ್ರದೇಶ, ಬಂಗಾಳ ಕೊಲ್ಲಿ.

●.ವ್ಯಾಪ್ತಿ ರಾಜ್ಯಗಳು :— ಮಹಾರಾಷ್ಟ್ರ, ತೆಲಂಗಾಣ, ಆಂಧ್ರಪ್ರದೇಶ, ಪುದುಚೇರಿ, ಛತ್ತೀಸ್ಗಢ

●.ಪ್ರಮುಖ ಉಪನದಿಗಳು :— ಪೂರ್ಣಾ, ಪ್ರವರ, ಇಂದ್ರಾವತಿ, ಮಂಜೀರಾ, ಬಿಂದುಸಾರ, ಶಬರಿ, ವಾರ್ಧಾ, ವೇನ್ ಗಾಂಗಾ

●.ಪ್ರಮುಖ ಅಣೆಕಟ್ಟುಗಳು :— ಜಯಕ್ವಾಡಿ ಅಣೆಕಟ್ಟು , ಪೊಲಾವರಮ್ ಪ್ರಾಜೆಕ್ಟ್

●.ರಾಷ್ಟ್ರೀಯ ಉದ್ಯಾನಗಳು / ಅಭಯಾರಣ್ಯಗಳು :— ಇಲ್ಲಾ.

●.ವಿಶೇಷತೆಗಳು :—
1.  ಸಂಪೂರ್ಣವಾಗಿ ಭಾರತದೊಳಗೆ ಹರಿಯುವ ಉದ್ದವಾದ ನದಿಗಳಲ್ಲಿ ಮೊದಲನೆಯದು.
2.ದಕ್ಷಿಣ ಭಾರತದ ಅತಿ ಉದ್ದವಾದ ನದಿ
3.ದಕ್ಷಿಣ ಭಾರತದ ವೃದ್ಧ ನದಿ.



6.ನದಿ :— ತಪತಿ (ದ.ಭಾರತದ ಪಶ್ಚಿಮಕ್ಕೆ ಹರಿಯುವ ನದಿ) 

●.ನದಿಯ ಉಗಮ ಸ್ಥಾನ :— ಬೇತುಲ್, ಮಧ್ಯಪ್ರದೇಶ

●.ಕೊನೆಗೆ ಸೇರುವ ಪ್ರದೇಶ (Drain Into) :— ಅರಬ್ಬೀ ಸಮುದ್ರ (ಗುಜರಾತ್)

●.ವ್ಯಾಪ್ತಿ ರಾಜ್ಯಗಳು :— ಮಧ್ಯಪ್ರದೇಶ, ಗುಜರಾತ್

●.ಪ್ರಮುಖ ಉಪನದಿಗಳು :—ಪೂರ್ಣ, ಬೆಟುಲ್, ಗುಲಿ, ಬೊಕಾರ್, ಗಂಜಾಲ್, ದತ್ ಗಂಜ್, ಬೊಕಾಡ್, ಮಿಂಡೊಲಾ, ಗಿರ್ಣ, ಪಂಝರಾ, ವಾಘೂರ್, ಬೋರಿ, ಆನೆರ್.

●.ಪ್ರಮುಖ ಅಣೆಕಟ್ಟುಗಳು :— ಊಕಾಯಿ ಅಣೆಕಟ್ಟು,  ಹಥನೂರ್ ಅಣೆಕಟ್ಟು (ಮಹಾರಾಷ್ಟ್ರ),

-ಸಶೇಷ. 

Saturday, 12 November 2016

●.PART: I - ಭಾರತದ ಪ್ರಮುಖ ನದಿಗಳು ಹಾಗೂ ಅವುಗಳ ವಿಶೇಷತೆಗಳು: (India's Drainage System / Famous Indian Rivers)

●.PART: I -  ಭಾರತದ ಪ್ರಮುಖ ನದಿಗಳು ಹಾಗೂ ಅವುಗಳ ವಿಶೇಷತೆಗಳು:
(India's Drainage System / Famous Indian Rivers)
━━━━━━━━━━━━━━━━━━━━━━━━━━━━━━━━━━━━━━━━━━━━━

★ ಭಾರತದ ಪ್ರಾಕೃತಿಕ ಭೂಗೋಳ.
(Indian Physical Geography

★ ಭಾರತದ ನದಿಗಳು
(Indian Drainage System)


ಸ್ಪರ್ಧಾತ್ಮಕ ಪರೀಕ್ಷಾ ದೃಷ್ಟಿಕೋನದಿಂದ ಅತ್ಯುಪಯುಕ್ತವೆಂದೆನಿಸಿದ ಭೌಗೋಳಿಕವಾಗಿ ಪ್ರಮುಖವೆಂದೆನಿಸಿದ ಭಾರತದ ಕೆಲವು ನದಿಗಳು ಹಾಗೂ ಅವುಗಳ ವಿಶೇಷತೆಗಳೊಂದಿಗೆ ನಿಮ್ಮ 'ಸ್ಪರ್ಧಾಲೋಕ'ದಲ್ಲಿ ವಿವರಿಸಲು ಪ್ರಯತ್ನಿಸಲಾಗಿದ್ದು, ಏನಾದರೂ ತಪ್ಪುತಡಿಗಳಿದ್ದಲ್ಲಿ ನನ್ನ ಗಮನಕ್ಕೆ ತರಬೇಕೆಂದು ವಿನಂತಿ.


★ ಉತ್ತರ ಭಾರತದ ನದಿಗಳು :


1.ನದಿ :— ಸಿಂಧೂ (ಇಂಡಸ್ ನದಿ) 

●.ನದಿಯ ಉಗಮ ಸ್ಥಾನ :— ಮಾನಸ ಸರೋವರ, ಟಿಬೆಟ್

●.ಕೊನೆಗೆ ಸೇರುವ ಪ್ರದೇಶ (Drain Into) :— ಪಾಕಿಸ್ತಾನ, ಅರಬ್ಬೀ ಸಮುದ್ರ

●.ವ್ಯಾಪ್ತಿ ರಾಜ್ಯಗಳು :—  (ಪಾಕಿಸ್ತಾನ, ಭಾರತ) ಜಮ್ಮು ಕಾಶ್ಮೀರ, ಗುಜರಾತ್

●.ಪ್ರಮುಖ ಉಪನದಿಗಳು :— ಝಸ್ಕಾರ್, ರವಿ, ಬಿಯಾಸ್, ಸಟ್ಲೇಜ್, ಚೆನಾಬ್, ಝೀಲಂ

●.ಪ್ರಮುಖ ಅಣೆಕಟ್ಟುಗಳು :— ಮಂಗ್ಲಾ ಅಣೆಕಟ್ಟು (ಝೀಲಂ ನದಿ), ತರಬೇಲಾ ಅಣೆಕಟ್ಟು

●.ರಾಷ್ಟ್ರೀಯ ಉದ್ಯಾನಗಳು / ಅಭಯಾರಣ್ಯಗಳು :— ಇಲ್ಲಾ.

●.ವಿಶೇಷತೆಗಳು :— 
1.ಟಿಬೆಟ್ ನಲ್ಲಿ ಸಿಂಧೂ ನದಿಗೆ 'ಸಿಂಘೆ ಕಂಬಾಬ್' ಎಂದು ಕರೆಯುವರು.
2.ಸಿಂಧೂ ನದಿಗೆ ಪಾಕಿಸ್ತಾನದಲ್ಲಿ ಸೇರುವ ಉಪನದಿಗಳೆಂದರೆ 'ಜೋದಾಲ್, ಕಾಬೂಲ್, ತಾಚಿ' ಪ್ರಮುಖವಾದವುಗಳು.


2.ನದಿ :— ಗಂಗಾ

●.ನದಿಯ ಉಗಮ ಸ್ಥಾನ :— ಗಂಗೋತ್ರಿ, ಉತ್ತರಾಖಂಡ್

●.ಕೊನೆಗೆ ಸೇರುವ ಪ್ರದೇಶ :— ಬಾಂಗ್ಲಾದೇಶ, ಬಂಗಾಳ ಕೊಲ್ಲಿ.

●.ವ್ಯಾಪ್ತಿ ರಾಜ್ಯಗಳು :— ಉತ್ತರಾಖಂಡ್, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ಬಿಹಾರ, ಜಾರ್ಖಂಡ್

●.ಪ್ರಮುಖ ಉಪನದಿಗಳು :— ಗೋಮತಿ, ಘಗ್ರಾ, ಗಂಡಕ್, ಕೊಸಿ, ಯಮುನಾ, ಸೊನ್, ಪುಂಪುನ್, ದಾಮೋದರ್, ರಿಹಾಂದ್,ರಾಮಗಂಗಾ, ಬೇಟ್ವಾ,

●.ಪ್ರಮುಖ ಅಣೆಕಟ್ಟುಗಳು :— ತೆಹ್ರಿ ಅಣೆಕಟ್ಟು (ಭಾಗೀರಥಿ ನದಿ), ಬನಸಾಗರ್ ಅಣೆಕಟ್ಟು (ಸನ್ ನದಿ)

●.ರಾಷ್ಟ್ರೀಯ ಉದ್ಯಾನಗಳು / ಅಭಯಾರಣ್ಯಗಳು :— ಕಾರ್ಬೆಟ್ ರಾಷ್ಟ್ರೀಯ ಪಾರ್ಕ್ (ರಾಮಗಂಗಾ ನದಿ)

●.ವಿಶೇಷತೆಗಳು :—  
1.ಭಾರತದ ಅತೀ ಉದ್ದವಾದ ನದಿ
2.ಪ್ರಪಂಚದ ಅತ್ಯಂತ ದೊಡ್ಡ ನದೀಮುಖಜ ಭೂಮಿಯಾದ 'ಸುಂದರ್ ಬನ್ಸ್' ಗಂಗಾನದಿಯ ಮುಖಜ ಭೂಮಿಯಾಗಿದೆ.
3.ದಾಮೋದರ್ ನದಿಯು ಪಶ್ಚಿಮ ಬಂಗಾಳದ ದುಃಖದ ನದಿಯಾಗಿದೆ.
4.ಕೊಸಿ ನದಿಯು ಬಿಹಾರದ ದುಃಖದ ನದಿಯಾಗಿದೆ.


3.ನದಿ :— ಬ್ರಹ್ಮಪುತ್ರ

●.ನದಿಯ ಉಗಮ ಸ್ಥಾನ :— (ಮಾನಸ ಸರೋವರ) ಚೆಮಯಂಗ್ ಡಂಗ್, ಟಿಬೆಟ್

●.ಕೊನೆಗೆ ಸೇರುವ ಪ್ರದೇಶ (Drain Into) :— ಬಾಂಗ್ಲಾದೇಶ, ಬಂಗಾಳ ಕೊಲ್ಲಿ.

●.ವ್ಯಾಪ್ತಿ ರಾಜ್ಯಗಳು :— ಅಸ್ಸಾಂ, ಅರುಣಾಚಲ ಪ್ರದೇಶ, ಪಶ್ಚಿಮ ಬಂಗಾಳ.

●.ಪ್ರಮುಖ ಉಪನದಿಗಳು :— ದಿಬಂಗ್, ದಿಕು, ಕೊಪಿಲಿ, ಬುರ್ಹಿ, ದಿಹಿಂಗ್, ಧನಶ್ರೀ, ತೀಸ್ತಾ, ಲೋಹಿತ್, ಕಮೆಂಗ್, ಮಾನಸ್

●.ಪ್ರಮುಖ ಅಣೆಕಟ್ಟುಗಳು :— ಫರಕ್ಕಾ ಬ್ಯಾರೇಜ್ (ಪಶ್ಚಿಮ ಬಂಗಾಳ)

●.ರಾಷ್ಟ್ರೀಯ ಉದ್ಯಾನಗಳು / ಅಭಯಾರಣ್ಯಗಳು :— ಕಾಜಿರಂಗಾ ರಾಷ್ಟ್ರೀಯ ಉದ್ಯಾನ (ಬ್ರಹ್ಮಪುತ್ರ ನದಿ)

●.ವಿಶೇಷತೆಗಳು :—  
1. ಈ ನದಿಗೆ ಟಿಬೆಟಿನಲ್ಲಿ 'ಸಾಂಗ್ ಪೋ', 'ಯಾರ್ಲುಂಗ್ ಜಾಂಗ್ಬೋ ಜಿಯಾಂಗ್' ಹೆಸರಿನಿಂದ ಕರೆಯುತ್ತಾರೆ.
2.. ಅರುಣಾಚಲ ಪ್ರದೇಶವನ್ನು ಪ್ರವೇಶಿಸುವ ಮೂಲಕ ಭಾರತಕ್ಕೆ ಪ್ರವೇಶಿಸುತ್ತದೆ. ಆ ಪ್ರವೇಶಿಸುವ ಭಾಗವನ್ನು 'ಡಿಹಾಂಗ್ ಕಂದರ' ಎನ್ನುವರು.
3. ಈ ನದಿ ಆಸ್ಸಾಂ ರಾಜ್ಯದ ದುಃಖದ ನದಿಯಾಗಿದೆ.
4.ಆಸ್ಸಾಂ ರಾಜ್ಯದಲ್ಲಿ ಬ್ರಹ್ಮಪುತ್ರ ನದಿಯಲ್ಲಿ 'ಮಜೂಲಿ ಎಂಬ ಅಂತರ ನದಿ ದ್ವೀಪವಿದ್ದು, ಇದು ಪ್ರಪಂಚದ ಅತ್ಯಂತ ದೊಡ್ಡ ಅಂತರ ನದಿ ದ್ವೀಪ ವ್ಯವಸ್ಥೆಯಾಗಿದೆ.
5.ತ್ಸಾಂಗ್ ಪೋ ನದಿಗೆ ಟಿಬೆಟಿನ ಕಣ್ಣೀರಿನ ನದಿ ಎನ್ನುವರು.


4..ನದಿ :— ಯಮುನಾ

●.ನದಿಯ ಉಗಮ ಸ್ಥಾನ :— ಯಮುನೋತ್ರಿ, ಉತ್ತರಾಖಂಡ್.

●.ಕೊನೆಗೆ ಸೇರುವ ಪ್ರದೇಶ (Drain Into) :— ಬಂಗಾಳ ಕೊಲ್ಲಿ.

●.ವ್ಯಾಪ್ತಿ ರಾಜ್ಯಗಳು :— ಉತ್ತರ ಪ್ರದೇಶ, ಹರಿಯಾಣ & ಉತ್ತರಾಖಂಡ್,

●.ಪ್ರಮುಖ ಉಪನದಿಗಳು :— ಹಿಂದೊನ್, ಕೆನ್, ಚಂಬಲ್, ಬೇತ್ವಾ, ಸಿಂಧ್, ಟೊನ್ಸ್.

●.ಪ್ರಮುಖ ಅಣೆಕಟ್ಟುಗಳು :— ಗಾಂಧಿ ಸಾಗರ ಅಣೆಕಟ್ಟು (ಚಂಬಲ್), ರಾಣಾ ಪ್ರತಾಪ್ ಸಾಗರ ಅಣೆಕಟ್ಟು (ಚಂಬಲ್),

●.ರಾಷ್ಟ್ರೀಯ ಉದ್ಯಾನಗಳು / ಅಭಯಾರಣ್ಯಗಳು :— ಪನ್ನಾ ರಾಷ್ಟ್ರೀಯ ಉದ್ಯಾನ (ಕೆನ್ ನದಿ)

●.ವಿಶೇಷತೆಗಳು :—  
1. ಭಾರತದ ಅತ್ಯಂತ ಉದ್ದವಾದ ಉಪನದಿ (ಗಂಗಾ)


5..ನದಿ :— ಸಬರಮತಿ

●.ನದಿಯ ಉಗಮ ಸ್ಥಾನ :— ಉದಯಪುರ್,  ರಾಜಸ್ಥಾನ .

●.ಕೊನೆಗೆ ಸೇರುವ ಪ್ರದೇಶ (Drain Into) :— ಅರಬ್ಬೀ ಸಮುದ್ರ.

●.ವ್ಯಾಪ್ತಿ ರಾಜ್ಯಗಳು :— ಗುಜರಾತ್, ರಾಜಸ್ಥಾನ

●.ಪ್ರಮುಖ ಉಪನದಿಗಳು :— ವಕಾಲ್, ಸೇಯ್ ನಾಡಿ, ಮಧುಮತಿ, ಹರ್ನಾವ್, ಹಾಥ್ ಮತಿ

●.ಪ್ರಮುಖ ಅಣೆಕಟ್ಟುಗಳು :— ಧರೋಯಿ ಅಣೆಕಟ್ಟು

... ಮುಂದುವರೆಯುವುದು. 

●.ಇತ್ತೀಚೆಗೆ ಭಾರತೀಯ ನೌಕಾಪಡೆಗೆ ಸೇರ್ಪಡೆಗೊಂಡ ಸಂಪೂರ್ಣ ದೇಶೀಯ ನಿರ್ಮಾಣದ ಮೊದಲ ಅಣುಶಕ್ತಿ ಚಾಲಿತ ಜಲಾಂತರ್ಗಾಮಿ 'ಐಎನ್‌ಎಸ್‌ ಅರಿಹಂತ್‌' ಕುರಿತ ಪ್ರಮುಖ ಮಾಹಿತಿಗಳು: (INS Arihant Submarine)

●.ಇತ್ತೀಚೆಗೆ ಭಾರತೀಯ ನೌಕಾಪಡೆಗೆ ಸೇರ್ಪಡೆಗೊಂಡ ಸಂಪೂರ್ಣ ದೇಶೀಯ ನಿರ್ಮಾಣದ ಮೊದಲ ಅಣುಶಕ್ತಿ ಚಾಲಿತ ಜಲಾಂತರ್ಗಾಮಿ 'ಐಎನ್‌ಎಸ್‌ ಅರಿಹಂತ್‌' ಕುರಿತ ಪ್ರಮುಖ ಮಾಹಿತಿಗಳು:
(INS Arihant Submarine)
━━━━━━━━━━━━━━━━━━━━━━━━━━━━━━━━━━━━━━━━━━━━━

★ ಪ್ರಚಲಿತ ಘಟನೆಗಳು
(current Affairs)

★ ವಿಜ್ಞಾನ ಮತ್ತು ತಂತ್ರಜ್ಞಾನ
(Science and Technology)



ಬಹುನಿರೀಕ್ಷಿತ, ಅಣುಶಕ್ತಿ ಚಾಲಿತ ಜಲಾಂತರ್ಗಾಮಿ ಐಎನ್‌ಎಸ್‌ ಅರಿಹಂತ್‌ ಇದೀಗ ಭಾರತೀಯ ನೌಕಾಪಡೆ ಬತ್ತಳಿಕೆಗೆ ಸದ್ದಿಲ್ಲದೇ ಸೇರ್ಪಡೆಯಾಗಿದೆ. ಅಣುಶಕ್ತಿ ಚಾಲಿತ, ಅಣ್ವಸ್ತ್ರ ಸಜ್ಜಿತ ಕ್ಷಿಪಣಿಗಳನ್ನು ಉಡಾಯಿಸಬಲ್ಲ ಸಾಮರ್ಥ್ಯದ ಸಂಪೂರ್ಣ ದೇಶೀಯ ನಿರ್ಮಾಣದ ಮೊದಲ ಜಲಾಂತರ್ಗಾಮಿ ಇದಾಗಿದೆ. ಭಾರತೀಯ ಸಾಗರ ತೀರದಲ್ಲಿ ಹೆಚ್ಚಿನ ಕಣ್ಗಾವಲಿನೊಂದಿಗೆ ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿದ ಶತ್ರುನಾಶಕ ಜಲಾಂತರ್ಗಾಮಿ ಇದಾಗಿದೆ. ಈ ಹಿನ್ನೆಲೆಯಲ್ಲಿ 'ಅರಿಹಂತ್‌' ಕುರಿತ ಪ್ರಮುಖ ಮಾಹಿತಿಗಳು ಇಲ್ಲಿವೆ.


•► ಕೊನೆಗೂ ಕನಸು ನನಸು

ಐಎನ್‌ಎಸ್‌ ಅರಿಹಂತ್‌ನ ಯೋಜನೆ ತುಂಬ ಹಳೆಯದು. 1970ರಲ್ಲೇ ಭಾರತ ಈ ಬಗ್ಗೆ ಚಿಂತಿಸಿತ್ತು. ಆದರೆ ಯೋಜನೆಗೆ ಕೇಂದ್ರ ಸರ್ಕಾರದಿಂದ ಹಸಿರು ನಿಶಾನೆ ಸಿಕ್ಕಿದ್ದು 1984ರಲ್ಲಿ, ಕೆಲಸ ಶುರುವಾಗಿದ್ದು 1998ರಲ್ಲಿ. ವಿವಿಧ ಖಾಸಗಿ ಕಂಪನಿಗಳ ನೆರವಿನೊಂದಿಗೆ ವಿಶಾಖಪಟ್ಟಣದ ಎಸ್‌ಬಿಸಿ 'ಶಿಪ್‌ಬಿಲ್ಡಿಂಗ್‌ ಸೆಂಟರ್‌'ನಲ್ಲಿ ಐಎನ್‌ಎಸ್‌ ಅರಿಹಂತ್‌ ಜನ್ಮ ತಳೆದಿತ್ತು. 2009ರಲ್ಲಿ ಇದನ್ನು ಮೊದಲ ಬಾರಿಗೆ ನೀರಿಗಿಳಿಸಲಾಗಿತ್ತು. ಬಳಿಕ ಇದರ ವ್ಯಾಪಕ ಸಂಶೋಧನೆ, ಯುದ್ಧ ಸಾಮರ್ಥ್ಯ ಪರೀಕ್ಷೆಗಳು ನಡೆದಿದ್ದು, ಇದೀಗ ನೌಕಾಪಡೆ ಬತ್ತಳಿಕೆಗೆ ಸೇರಿದೆ.


•► ವಿನ್ಯಾಸದ ನೆರವಿಗೆ ರಷ್ಯಾ

ಐಎನ್‌ಎಸ್‌ ಅರಿಹಂತ್‌ ವಿನ್ಯಾಸದ ಮೂಲ ರಷ್ಯಾದ್ದು. ಈ ಅಣುಜಲಾಂತರ್ಗಾಮಿಯ ರೂಪುರೇಷೆ ಬಗ್ಗೆ ಭಾಬಾ ಪರಮಾಣು ಸಂಶೋಧನಾ ಕೇಂದ್ರದ ವಿಜ್ಞಾನಿಗಳೊಂದಿಗೆ ರಷ್ಯಾ ನೆರವು ನೀಡಿದೆ. ಜೊತೆಗೆ ಅಣು ರಿಯಾಕ್ಟರನ್ನು ಜಲಾಂತರ್ಗಾಮಿ ಒಳಗೆ ಕೂರಿಸುವುದರಲ್ಲೂ ನೆರವು ನೀಡಿದೆ. ಹಿಂದಿನಿಂದಲೂ ಭಾರತದ ರಕ್ಷಣಾ ಕ್ಷೇತ್ರಕ್ಕೆ ರಷ್ಯಾ ನೆರವು ನೀಡುತ್ತಲೇ ಬಂದಿದ್ದು, ಅದನ್ನು ಅರಿಹಂತ್‌ ವಿಚಾರದಲ್ಲೂ ಆ ದೇಶ ಮುಂದುವರಿಸಿತ್ತು.


•► ಭಾರತದ ಪ್ಲಾನ್‌ ಏನು?

ಐಎನ್‌ಎಸ್‌ ಅರಿಹಂತ್‌ ಒಂದೇ ಅಲ್ಲ. ಭಾರತ ಸದ್ಯ ಒಟ್ಟು ಐದು ಅಣುಚಾಲಿತ ಜಲಾಂತರ್ಗಾಮಿಗಳನ್ನು ಹೊಂದಲು ಪ್ಲಾನ್‌ ಮಾಡಿದೆ. ಅದರಲ್ಲಿ ಐಎನ್‌ಎಸ್‌ ಅರಿಹಂತ್‌ ಮೊದಲನೆಯದ್ದು. ರಷ್ಯಾದ ನೆರವಿನೊಂದಿಗೆ 'ಎಸ್‌ಎಸ್‌ಬಿಎನ್‌' (ಅಣುಚಾಲಿತ ಜಲಾಂತರ್ಗಾಮಿ) ನಿರ್ಮಾಣದ ಯೋಜನೆಗಳಿಗೆ ಭಾರತ ಈಗಾಗಲೇ ಕೈ ಹಾಕಿದೆ.


•► ಕ್ಷಿಪಣಿ ಶಕ್ತಿ

ಐಎನ್‌ಎಸ್‌ ಅರಿಹಂತ್‌ನ ಶಕ್ತಿ ಕೆ-5, ಕೆ-4 ಮಾದರಿ ಕ್ಷಿಪಣಿಗಳು. 12 ಕೆ-5 ಕಡಿಮೆ ದೂರದ ಕ್ಷಿಪಣಿಗಳು ಮತ್ತು 10 ದೂರಗಾಮಿ ಮಾದರಿಯ ಕ್ಷಿಪಣಿಗಳನ್ನು ಇದು ಹೊಂದಿರುತ್ತದೆ. ಈ ಕ್ಷಿಪಣಿಗಳು ಸುಮಾರು 1 ಟನ್‌ಗಳಷ್ಟು ಅಣ್ವಸ್ತ್ರ ಸಿಡಿತಲೆಗಳನ್ನು ಹೊತ್ತೂಯ್ಯಬಲ್ಲದು. ಜೊತೆಗೆ 200ಕೇಜಿ ಸಿಡಿತಲೆಗಳನ್ನು ಇಡುವ ಮೂಲಕ ಅದರ ದೂರವನ್ನೂ ಹೆಚ್ಚಿಸಬಹುದು. ಇದರೊಂದಿಗೆ ಕೆ- 4 ಮಾದರಿಯ ಅಣ್ವಸ್ತ್ರ ಸಿಡಿತಲೆ ಹೊಂದಿರುವ 4 ಕ್ಷಿಪಣಿಗಳನ್ನೂ ಇದು ಹೊಂದಿರಲಿದೆ. 3500 ಕಿ.ಮೀ.ಗುರಿಯನ್ನು ಇದು ಛೇದಿಸುತ್ತದೆ.


•► ನೆಲ-ಜಲ-ಆಗಸದಿಂದ ಅಣ್ವಸ್ತ್ರ ದಾಳಿಗೆ ಭಾರತ ಸೈ

ಮೂರೂ ವಿಧಗಳಲ್ಲಿ ಅಣ್ವಸ್ತ್ರ ದಾಳಿ ನಡೆಸುವ ಸಾಮರ್ಥ್ಯ ಇದೀಗ ಭಾರತಕ್ಕೆ ಬಂದಿದೆ. ಐಎನ್‌ಎಸ್‌ ಅರಿಹಂತ್‌ ಸೇರ್ಪಡೆಯಿಂದ ಇದು ಸಾಧ್ಯವಾಗಿದೆ. ವಿಶ್ವದಲ್ಲಿ ಬೆರಳೆಣಿಕೆಯ ರಾಷ್ಟ್ರಗಳು ಮಾತ್ರ ಇಂತಹ ದಾಳಿ ಸಾಮರ್ಥ್ಯವನ್ನು ಹೊಂದಿದೆ. ಮೊದಲು ಭಾರತ ನೆಲ-ಆಗಸದಿಂದ ಅಣ್ವಸ್ತ್ರ ದಾಳಿ ನಡೆಸುವ ಸಾಮರ್ಥ್ಯವನ್ನು ಹೊಂದಿತ್ತು. ಮಿರಾಜ್‌, ಸುಖೋಯ್‌ ವಿಮಾನಗಳ ಮೂಲಕ ಅಣು ಬಾಂಬ್‌ ದಾಳಿ ನಡೆಸುವ ಸಾಮರ್ಥ್ಯ ಹೊಂದಿತ್ತು. ಇದರೊಂದಿಗೆ ಅಗಿ ಮಾದರಿಯ ಕಿಪಣಿಗಳೂ ಭಾರತಕ್ಕೆ ನೆಲದಿಂದ ದಾಳಿ ನಡೆಸುವ ಸಾಮರ್ಥ್ಯ ತಂದುಕೊಟ್ಟಿದ್ದವು. ಇದೀಗ ಸಮುದ್ರದಾಳದಿಂದ ಅಣ್ವಸ್ತ್ರ ದಾಳಿ ನಡೆಸುವ ಸಾಮರ್ಥ್ಯ ಪಡೆದ ಅರಿಹಂತ್‌ ಕೊರತೆಯನ್ನು ತುಂಬಿಸಿದೆ. ಇದು ಶತ್ರು ರಾಷ್ಟ್ರಗಳ ಪಾಲಿಗೆ ಎಚ್ಚರಿಕೆಯ ಗಂಟೆಯೂ ಹೌದು.



•► ತಾಂತ್ರಿಕ ಮಾಹಿತಿಗಳು :

- 6 ಸಾವಿರ ಟನ್‌ ಒಟ್ಟು ತೂಕ

- 111 ಮೀ. ಒಟ್ಟು ಉದ್ದ

- 22-28 ಕಿ.ಮೀ. ಸಮುದ್ರದ ಮೇಲ್ಭಾಗದಲ್ಲಿ ಸಂಚರಿಸುವ ವೇಗ

- 44 ಕಿ.ಮೀ. ಸಮುದ್ರಾಳದಲ್ಲಿ ಸಂಚರಿಸುವ ವೇಗ

- 1,11,305 ಲಕ್ಷ ಎಚ್‌.ಪಿ.ಯ ಎಂಜಿನ್‌

- 95-100 ನಾವಿಕರನ್ನು ಹೊತ್ತೂಯ್ಯುವ ಸಾಮರ್ಥ್ಯ



•► ವಿಶೇಷತೆಗಳೇನು?

- ಅಣು ಚಾಲಿತ ಸಂಪೂರ್ಣ ಸ್ವದೇಶಿ ನಿರ್ಮಿತ

- ಕೆ-4 ಹೆಸರಿನ 3500 ಕಿ.ಮೀ. ದೂರದ ವ್ಯಾಪ್ತಿಯ ಅಣ್ವಸ್ತ್ರ ಸಿಡಿತಲೆ ಹೊತ್ತೂಯ್ಯುವ ಸಾಮರ್ಥಯದ ಕ್ಷಿಪಣಿಗಳ ಉಡಾವಣೆ ಮಾಡುವ ಸಾಮರ್ಥ್ಯ ಹೊಂದಿದೆ. ಬೊ5 ಹೆಸರಿನ ಕ್ಷಿಪಣಿಗಳು

- ಸಮುದ್ರದಾಳದಿಂದ ಅಣ್ವಸ್ತ್ರ ದಾಳಿ ನಡೆಸುವ ಸಾಮರ್ಥ್ಯ ಹೊಂದಿದ ಪ್ರಥಮ ಜಲಾಂತರ್ಗಾಮಿ ಅತ್ಯಾಧುನಿಕ ಟಾರ್ಪೆಡೋಗಳನ್ನು ಹೊಂದಿದೆ.

- ಭೂಮಿಯ ಮೇಲಿನ, ಇತರ ನೌಕೆ ಗುರಿಗಳಿಗೂ ದಾಳಿ ನಡೆಸುವ ಸಾಮರ್ಥ್ಯ

- ಅಣು ಚಾಲಿತ ಜಲಾಂತರ್ಗಾಮಿಗಳ ನಿರ್ಮಾಣ ವಿಶ್ವದಲ್ಲಿ ಕೇವಲ 6 ರಾಷ್ಟ್ರಗಳಿಗೆ ಮಾತ್ರ ಗೊತ್ತಿದ್ದು, ಇವುಗಳಲ್ಲಿ ಭಾರತವೂ ಒಂದು.

- ಅಡ್ವಾನ್ಸ್‌ಡ್‌ ಟೆಕ್ನಾಲಜಿ ವೆಸೆಲ್ಸ್‌ (ಎಟಿವಿ) ಯೋಜನೆ ಅಡಿಯಲ್ಲಿ ಐಎನ್‌ಎಸ್‌ ಅರಿಹಂತ್‌ ನಿರ್ಮಾಣ ಅತಿ ಪ್ರಬಲ, ಶತ್ರು ನೌಕೆಗಳನ್ನು ಕಂಡುಹಿಡಿವ ಯುಎಸ್‌ ಎಚ್‌ಯುಎಸ್‌ ಸೋನಾರ್‌ ಉಪಕರಣಗಳು

(courtesy :ಉದಯವಾಣಿ)

Wednesday, 19 October 2016

☀.ಪಿಡಿಓ ಪರೀಕ್ಷೆ ವಿಶೇಷಾಂಕ -VII : ಕನ್ನಡ ಸಾಹಿತ್ಯ ಚರಿತ್ರೆ ಸಂಬಂಧಿತ ಪ್ರಮುಖ ಅಂಶಗಳು : (Kannada Literature Notes for PDO)

☀.ಪಿಡಿಓ ಪರೀಕ್ಷೆ ವಿಶೇಷಾಂಕ -VII : ಕನ್ನಡ ಸಾಹಿತ್ಯ ಚರಿತ್ರೆ ಸಂಬಂಧಿತ ಪ್ರಮುಖ ಅಂಶಗಳು :
(Kannada Literature Notes for PDO)
•─━━━━━═══════════━━━━━─••─━━━━━═══════════━━━━━─•

★ ಪಿಡಿಓ ಪರೀಕ್ಷಾ ಅಧ್ಯಯನ ವಿಶೇಷಾಂಕ
(PDO Exam Study Notes)

★ ಕನ್ನಡ ಸಾಹಿತ್ಯ ಚರಿತ್ರೆ
(Kannada Literature)


*.ಪೆತ್ತಜಯನ್ ಎಂಬ ಪದವು ಹಲ್ಮಿಡಿ ಶಾಸನದಲ್ಲಿದ್ದು ಇದು ಸಮಾಸಪದವಾಗಿದೆ

*.ಕನ್ನಡ ಛಂದಸ್ಸಿನ ತಾಯಿಬೇರು-ತ್ರಿಪದಿ

*.ಛಂದೋನುಶಾಸನದ ಕರ್ತೃ -ಜಯಕಿರ್ತ

*.ಕವಿರಾಜಮಾರ್ಗದ ಆಕರ -ದಂಡಿಯ ಕಾವಾಯದರ್ಶಿ

*.ನಾಡವರ್ಗಳ್ ನಿಜವಾಗಿಯೂ ಚದುರರ್ ಕುರಿತೋದಯೊ ಕಾವ್ಯ ಪ್ರಯೋಗಪರಿಣಿತಮತಿಗಳ್ ಎಂಬ ಸ್ತುತಿ ವಾಕ್ಯವು -ಕವಿರಾಜಮಾರ್ಗದಲ್ಲಿದೆ

*.ಬೃಹತ್ಕಥೆಯ ಕರ್ತೃ -ಗುಣಾಢ್ಯ

*.ಬೃಹತ್ಕಥೆಯ ಭಾಷೆ -ಪೈಶಾಚಿ

*. ಕವಿರಾಜಮಾರ್ಗವು-ಲಕ್ಷಣಗ್ರಂಥ /ಅಲಂಕಾರಗ್ರಂಥ

*.ಕನ್ನಡದ ಮೊದಲನೇ ಅಷ್ಟಕ -ಗಜಷ್ಟಾಕ

*. ಕನ್ನಡ ಕವಿತೆಯೊಲ್ ಅಸಗಂ ನೂರ್ಮಡಿ ಎಂದವರು -ಪೊನ್ನ

*.ನಜುಂಡಕವಿಯ ಕೃತಿ -ಕುಮಾರರಾಮನ ಕಥೆ

*.ಚಿತ್ತಾಣ ಬೆದಂಡೆಗಳು -ಕಾವ್ಯರೂಪಕಗಳು

*.ವಡ್ಡರಾಧನೆಯ ಆಕರ-ಜಿನಸೇನಾಚಾರ್ಯನ ಪೂರ್ವಪುರಾಣ ಕರ್ತೃ-ಶಿವಕೋಟ್ಯಾಚಾರ್ಯ

* ಪಂಪನಿಗೆ ಆಶ್ರಯ ನೀಡಿದ್ದ ದೊರೆ-ಚಾಲುಕ್ಯದೊರೆ ಅರಿಕೇಸರಿ

*.ಪಂಪನ ಧಾರ್ಮಿಕ ಕಾವ್ಯ (ಆಗಮಿಕ ) -ಆದಿಪುರಾಣ (ಕನ್ನಡದ ಮೊದಲ ಕಾವ್ಯ)

*.ಪಂಪನ ಆದಿಪುರಾಣ ಮತ್ತು ವಿಕ್ರಮಾರ್ಜುನ ವಿಜಯ ವೆಂಬ ಕೃತಿಗಳ ಸ್ವರೂಪ -ಚಂಪೂಕಾವ್ಯ (ಗದ್ಯ ಪದ್ಯ ಮಿಶ್ರಿತ )

*.ವಿಕ್ರಮಾರ್ಜುನ ವಿಜಯ ವೆಂಬ ಕೃತಿಯ ಮತ್ತೊಂದು ಹೆಸರು -ಪಂಪಭಾರತ

*.ಕವಿತಾಗುಣಾರ್ಣವ ಸಂಸಾರ ಸಾರೊದಯ ಎಂಬ ಬಿರುದುಳ್ಲ ಕವಿ -ಪಂಪ

*.ಪಂಪನು ಬರೆದ ಕಾವ್ಯಗಳ ಶೈಲಿ -ತಿರುಳ್ಗನ್ನಡ (ಪುಲಿಗೆರೆಯ

*.ಬೆಳಗುವೆನಿಲ್ಲಿ ಲೌಕಿಕಮನಲ್ಲಿ ಜಿನಾಗಮಮಂ ಎಂದವರು -ಪಂಪ

*.ಪಂಪನ ಆದಿಪುರಾಣಕ್ಕೆ ಆಕರ ಗ್ರಂಥ -ಜಿನಸೇನಾಚಾರ್ಯನಸಂಸ್ಕೃತದ ಪೂರ್ವಪುರಾಣ

*. ಚಲದೊಳ್ ದುರ್ಯೋಧನಂ ನನ್ನಿಯೊಳ್ ಇನಯತನಯಂ ಗಂಡಿನೊಳ್ ಭೀಮಸೇನಂ ಎಂಬ ವರ್ಣನೆಯಿರುವ ಕೃತಿ
-ಪಂಪಭಾರತ ( ವಿಕ್ರಮಾರ್ಜುನ ವಿಜಯ )

*.ಪಸರಿಪ ಕನ್ನಡಕ್ಕೊಡೆಯನೋರ್ವನೆ ಸತ್ಕವಿ ಪಂಪನಾವಗಂ ಎಂದು ಹೇಳಿದವರು -ನಾಗರಾಜ

*.ಪಂಪನನ್ನು ಕನ್ನಡ ಕಾಳಿದಾಸ ಎಂದು ಕರೆದವರು -ತೀನಂಶ್ರೀ

*.ಪೊನ್ನನ ಪ್ರಸಿದ್ಧ ಕೃತಿ -ಶಾಂತಿ ಪುರಾಣ

*. ಭುವನೈಕ ರಾಮಾಭ್ಯದಯ ಗ್ರಂಥದ ಮತ್ತೊಂದು ಹೆಸರು -ರಾಮಕಥೆ

*.ಶಾಂತಿಪುರಾಣವು ೧೯ನೇ ತೀರ್ಥಂಕರನಾದ ಶಾಂತಿನಾಥನ ಚರಿತ್ರೆಯನ್ನೊಳಗೊಂಡಿದೆ (ಚಂಪೂ )

*.ಪೊನ್ನನಿಗಿದ್ದ ಬಿರುದು -ಕವಿಚಕ್ರವರ್ತಿ

*.ರನ್ನನ ತಂದೆ ತಾಯಿ -ಜಿನವಲ್ಲಭ ಅಬ್ಬಲಬ್ಬೆ

*.ರನ್ನನಿಗೆ ಆಶ್ರಯ ನೀಡಿದ್ದ ದೊರೆ -ಸತ್ಯಾಶ್ರಯ (ಇರುವೆ ಬೆಡಂಗ ಚಾಲುಕ್ಯ ದೊರೆ

*.ರನ್ನನ ಕೃತಿಗಳು
—-ರನ್ನಕಂದ (ನಿಘಂಟು)
— ಪರುಶುರಾಮಚರಿತ
ಚಕ್ರೆಶ್ವರ ಚರಿತ ಅಜಿತತೀರ್ಥೇಶ್ವರಚರಿತೆ (ಅಜಿತತಿರ್ಥಂಕರ ಪುರಾಣ ) ಆಗಮಿಕ ಕಾವ್ಯ ಸಾಹಸ ಭೀಮ ವಿಜಯ (ಲೌಕಿಕ ಕಾವ್ಯ )

*. ಸಿಂಹಾವಲೋಕನ ಕ್ರಮದಿಂದ ಕಾವ್ಯವನ್ನು  ಅರುಪಿದವನು -ರನ್ನ

*.ಚಾವುಂಡರಾಯನ ಚಾವುಂಡರಾಯ ಪುರಾಣಕ್ಕಿರುವ ಮತ್ತೊಂದು ಹೆಸರು -ತ್ರಿಷಷ್ಟಿಲಕ್ಷಣಮಹಾಪುರಾಣ

*.ಕರ್ನಾಟಕ ಕಾದಂಬರಿಯ ಕರ್ತೃ -೧ನೇ ನಾಗವರ್ಮ

*.ಕನ್ನಡದಲ್ಲಿನ ಮೊದಲನೆಯ ಛಂದಶಾಸ್ತ್ರ ಗ್ರಂಥ -ಛಂದೋಬುದಿ (೧ನೇ ನಾಗವರ್ಮ)

*. ಕನ್ನಡದ ಮೊದಲನೆಯ ಜೋತಿಷ್ಯ ಗ್ರಂಥ -ಜಾತಕ ತಿಲಕ

*. ರಾಮಚಂದ್ರ ಚರಿತ ಪುರಾಣ (ಪಂಪರಾಮಾಯಣ) ಕೃತಿಯ ಕರ್ತೃ -ನಾಗಚಂದ್ರ

*.ಮಲ್ಲಿನಾಥ ಪುರಾಣ ಗ್ರಂಥ ಬರೆದವರು -ನಾಗಚಂದ್ರ

*. ಧರ್ಮಾಮೃತ ಗ್ರಂಥದ ಕರ್ತೃ-ನಯಸೇನ

*.ಕನ್ನಡದಲ್ಲಿ ಉಪಲಬ್ದವಾದ ಮೊದಲನೆಯ ಜೈನ ರಾಮಾಯಣ -ರಾಮಚಂದ್ರಚರಿತ ಪುರಾಣ (ನಾಗಚಂದ್ರ )

*.ಅಭಿನವ ಪಂಪ ಎಂದು ಕರೆದು ಕೊಂಡಿರುವವನು -ನಾಗಚಂದ್ರ

*.ಮೊದಲನೆಯ ಗೋವೈದ್ಯ ಗ್ರಂಥವನ್ನು ಬರೆದವರು -ಕೀರ್ತಿವರ್ಮ

*. ನೇಮಿನಾಥ ಪುರಾಣದ ಆಕಾರ ಗ್ರಂಥ -ಉತ್ತರ ಪುರಾಣ

*.ನೇಮಿನಾಥ ಪುರಾಣದ ಕರ್ತೃ -ಕರ್ಣಪಾರ್ಯ

*.ಯೋಗಾಂಗ ತ್ರಿವಿಧಿಯ ಕರ್ತೃ -ಅಕ್ಕಮಹಾದೇವಿ

*. ಹರಿಹರನ ಗಿರಿಜಾಕಲ್ಯಾಣವು -ಚಂಪೂಶೈಲಿಯಲ್ಲಿದೆ

*.ಹರಿಹರನ ಪಂಪಾಶತಕ ಕೃತಿಯು -ವೃತ್ತ ಛಂದಸ್ಸಿನಲ್ಲಿದೆ

*.ರಾಘವಾಂಕನ ಉದ್ದಂಡ ಷಟ್ಪದಿಯಲ್ಲಿರುವ ಕೃತಿ -ವೀರೆಷ ಚರಿತೆ

*. ಅನಂತನಾಥ ಪುರಾಣ ದ ಕರ್ತೃ -ಜನ್ನ (ಚಂಪೂ)

 *.ಕೇಶಿರಾಜನ ಶಬ್ದಮಣಿದರ್ಪಣ ಕೃತಿಯು (ಕರ್ನಾಟಕ ಲಕ್ಷಣ ಶಬ್ದಶಾಸ್ತ್ರ ) -ಕಂದಪದ್ಯದಲ್ಲಿದೆ ೮ ಪ್ರಕರಣ

*.ಜನ್ನ ಕವಿಗೆ ಆಶ್ರಯ ನೀಡಿದ ದೊರೆ -ವೀರಬಲ್ಲಾಳ ನರಸಿಂಹ

*.ಕನ್ನಡದ ಮೊದಲನೆಯ ಸಂಕಲನ ಗ್ರಂಥ -ಸೂಕ್ತಿ ಸುಧಾರ್ಣವ

*.ಕನ್ನಡದ ಮೊದಲ ವ್ಯಾಕರಣ ಗ್ರಂಥ ಹಳಗನ್ನಡ:  -ಶಬ್ದಮಣಿದರ್ಪಣ (ಕೇಶಿರಾಜ

(Courtesy : VISION group)
... ಮುಂದುವರೆಯುವುದು. 

☀.ಪಿಡಿಓ ಪರೀಕ್ಷೆ ವಿಶೇಷಾಂಕ -VI : ಜಿಲ್ಲಾ ಪಂಚಾಯಿತಿ ರಚನೆ ಮತ್ತು ಇತರೆ ಮಹತ್ವದ ಅಂಶಗಳು : (Constitution of Zilla Panchayat)

☀.ಪಿಡಿಓ ಪರೀಕ್ಷೆ ವಿಶೇಷಾಂಕ -VI : ಜಿಲ್ಲಾ ಪಂಚಾಯಿತಿ ರಚನೆ ಮತ್ತು ಇತರೆ ಮಹತ್ವದ ಅಂಶಗಳು :
(Constitution of Zilla Panchayat)
•─━━━━━═══════════━━━━━─••─━━━━━═══════════━━━━━─•

★ ಪಿಡಿಓ ಪರೀಕ್ಷಾ ಅಧ್ಯಯನ ವಿಶೇಷಾಂಕ
(PDO Exam Study Notes)

★ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್
(Rural Development & Panchayat Raj)



●.ಜಿಲ್ಲಾ ಪಂಚಾಯಿತಿ


1. ರಚನೆ: ಪ್ರತಿ ಜಿಲ್ಲೆಗೊಂದು ಜಿಲ್ಲಾ ಪಂಚಾಯಿತಿ.


2. ಸದಸ್ಯರು: 35,000-45,000ದ ನಡುವಿನ ಜನಸಂಖ್ಯೆಗೆ ಒಬ್ಬ ಸದಸ್ಯನಿರಬೇಕು.

# ಉತ್ತರ ಕನ್ನಡ ಮತ್ತು ಚಿಕ್ಕಮಗಳೂರು ಜಿಲ್ಲೆ =30,000;

# ಬೆಂಗಳೂರು ನಗರ ಜಿಲ್ಲೆ =20,000;

# ಕೊಡಗು ಜಿಲ್ಲೆ =18,000ಕ್ಕೆ ಒಬ್ಬ ಸದಸ್ಯನಿರಬೇಕು.

# ಪ್ರತಿ ಜಿಲ್ಲಾ ಪಂಚಾಯಿತಿಯ ಕ್ಷೇತ್ರಗಳ ಚುನಾವಣೆಯಲ್ಲಿ ಆಯ್ಕೆಯಾದ ಸದಸ್ಯರು ಮಾತ್ರವಲ್ಲದೆ, ಜಿಲ್ಲೆಯ ಪ್ರತಿನಿಧಿಸುವ ಸಂಸತ್ತು (ಲೋಕಸಭೆ & ರಾಜ್ಯಸಭೆ), ವಿಧಾನ ಸಭೆ ಮತ್ತು ವಿಧಾನ ಪರಿಷತ್ತಿನ ಸದಸ್ಯರು ಜಿಲ್ಲಾ ಪಂಚಾಯಿತಿಯ ಸದಸ್ಯರಾಗಿರುತ್ತಾರೆ.

# ಜಿಲ್ಲೆಯ ತಾಲ್ಲೂಕು ಪಂಚಾಯಿತಿಯ ಅಧ್ಯಕ್ಷರು ಸಹ ಸದಸ್ಯರಾಗಿರುತ್ತಾರೆ.


 3. ಸದಸ್ಯರ ಮೀಸಲಾತಿ ಸ್ಥಾನಗಳು:

# ಅನುಸೂಚಿತ ಜಾತಿ ಅಥವಾ ಅನುಸೂಚಿತ ಪಂಗಡಗಳ ಜನಸಂಖ್ಯೆಯ ಅದೇ ಅನುಪಾತದಲ್ಲಿರಬೇಕು. (ಕನಿಷ್ಠ ಅ,ಜಾತಿ ಮತ್ತು ಅ.ಪಂಗಡದವರಿಗೆ ಒಂದೊಂದು ಸ್ಥಾನ ಮೀಸಲಿರಬೇಕು).

# ಹಿಂದುಳಿದ ವರ್ಗದವರಿಗೆ 1/3 ಸ್ಥಾನಗಳು. (80% A ಪ್ರವರ್ಗ ಮತ್ತು 20% B ಪ್ರವರ್ಗ)

# ಅನುಸೂಚಿತ ಜಾತಿ + ಅನುಸೂಚಿತ ಪಂಗಡ + ಹಿಂದುಳಿದ ವರ್ಗ = 50% ಮೀರುವಂತಿಲ್ಲ.

# ಮೀಸಲಿಟ್ಟಿರುವ ಸ್ಥಾನಗಳಲ್ಲಿ ಮಹಿಳೆಯರ ಸ್ಥಾನಗಳ ಪ್ರಮಾಣ 50% ಕ್ಕಿಂತ ಕಡಿಮೆ ಇರಬಾರದು.

# ರಾಜ್ಯ ಚುನಾವಣಾ ಆಯೋಗ ಮೀಸಲಾತಿಗಳನ್ನು ಮೀಸಲಿರಿಸತಕ್ಕದ್ದು.


4. ಮತದಾರರ ಪಟ್ಟಿಯನ್ನು ತಯಾರಿಸುವವರು: 

ರಾಜ್ಯ ಚುನಾವಣಾ ಆಯೋಗದ ನಿರ್ದೇಶನದ ಮೇರೆಗೆ ಅಸಿಸ್ಟೆಂಟ್ ಕಮೀಷನರ್. ಮತ್ತು ರಾಜ್ಯ ವಿಧಾನ ಸಭೆಯ ಚುನಾವಣೆಗಾಗಿ ತಯಾರಿಸಲಾದ ಮತದಾರರ ಪಟ್ಟಿಯನ್ನೇ ಜಿಲ್ಲಾ ಪಂಚಾಯಿತಿ ಚುನಾವಣೆಯ ಮತದಾರರ ಪಟ್ಟಿ ಎಂದು ಭಾವಿಸತಕ್ಕದ್ದು.

5. ಸದಸ್ಯನಾಗಲು ಅವಶ್ಯಕ ವಯಸ್ಸು: 21 ವರ್ಷ

...ಮುಂದುವರೆಯುವುದು. 

☀.ಪಿಡಿಓ ಪರೀಕ್ಷೆ ವಿಶೇಷಾಂಕ -V : ತಾಲ್ಲೂಕು ಪಂಚಾಯಿತಿ ರಚನೆ ಮತ್ತು ಇತರೆ ಮಹತ್ವದ ಅಂಶಗಳು : (Constitution of Talluq Panchayat)

☀.ಪಿಡಿಓ ಪರೀಕ್ಷೆ ವಿಶೇಷಾಂಕ -V : ತಾಲ್ಲೂಕು ಪಂಚಾಯಿತಿ ರಚನೆ ಮತ್ತು ಇತರೆ ಮಹತ್ವದ ಅಂಶಗಳು :
(Constitution of Talluq Panchayat)
•─━━━━━═══════════━━━━━─••─━━━━━═══════════━━━━━─•

★ ಪಿಡಿಓ ಪರೀಕ್ಷಾ ಅಧ್ಯಯನ ವಿಶೇಷಾಂಕ
(PDO Exam Study Notes)

★ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್
(Rural Development & Panchayat Raj)


●.ತಾಲ್ಲೂಕು ಪಂಚಾಯಿತಿ


1. ರಚನೆ: ಪ್ರತಿ ತಾಲ್ಲೂಕಿಗೊಂದು ತಾಲ್ಲೂಕು ಪಂಚಾಯಿತಿ.


2. ಸದಸ್ಯರು: 12,500-15,000ರ ನಡುವಿನ ಜನಸಂಖ್ಯೆಗೆ ಒಬ್ಬ ಸದಸ್ಯನಿರಬೇಕು. (1,00,000ಕ್ಕಿಂತ ಕಡಿಮೆ ಜನಸಂಖ್ಯೆಗೆ ಕನಿಷ್ಠ 11ಜನ ಸದಸ್ಯರಿರಬೇಕು.)

# ಪ್ರತಿ ತಾಲ್ಲೂಕು ಪಂಚಾಯಿತಿಯ ಕ್ಷೇತ್ರಗಳ ಚುನಾವಣೆಯಲ್ಲಿ ಆಯ್ಕೆಯಾದ ಸದಸ್ಯರು ಮಾತ್ರವಲ್ಲದೆ, ತಾಲ್ಲೂಕನ್ನು ಪ್ರತಿನಿಧಿಸುವ ಸಂಸತ್ತು (ಲೋಕಸಭೆ & ರಾಜ್ಯಸಭೆ), ವಿಧಾನ ಸಭೆ ಮತ್ತು ವಿಧಾನ ಪರಿಷತ್ತಿನ ಸದಸ್ಯರು ತಾಲ್ಲೂಕು ಪಂಚಾಯಿತಿಯ ಸದಸ್ಯರಾಗಿರುತ್ತಾರೆ.

# ಒಂದು ವರ್ಷದ ಅವಧಿಗೆ, ಸರದಿ ಪ್ರಕಾರ ತಾಲ್ಲೂಕಿನ 1/5 ಭಾಗದ ಗ್ರಾಮ ಪಂಚಾಯಿತಿಯ ಅಧ್ಯಕ್ಷರುಗಳು ಸದಸ್ಯರಾಗಿರುತ್ತಾರೆ. ( ಈ ಪೈಕಿ ಒಬ್ಬರು ಮಹಿಳೆ, ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡಗಳಿಂದ ಒಬ್ಬೊಬ್ಬರಂತೆ)


 3. ಸದಸ್ಯರ ಮೀಸಲಾತಿ ಸ್ಥಾನಗಳು:

# ಅನುಸೂಚಿತ ಜಾತಿ ಅಥವಾ ಅನುಸೂಚಿತ ಪಂಗಡಗಳ ಜನಸಂಖ್ಯೆಯ ಅದೇ ಅನುಪಾತದಲ್ಲಿರಬೇಕು. (ಕನಿಷ್ಠ ಅ,ಜಾತಿ ಮತ್ತು ಅ.ಪಂಗಡದವರಿಗೆ ಒಂದೊಂದು ಸ್ಥಾನ ಮೀಸಲಿರಬೇಕು).

# ಹಿಂದುಳಿದ ವರ್ಗದವರಿಗೆ 1/3 ಸ್ಥಾನಗಳು. (80% A ಪ್ರವರ್ಗ ಮತ್ತು 20% B ಪ್ರವರ್ಗ)

# ಅನುಸೂಚಿತ ಜಾತಿ + ಅನುಸೂಚಿತ ಪಂಗಡ + ಹಿಂದುಳಿದ ವರ್ಗ = 50% ಮೀರುವಂತಿಲ್ಲ.

# ಮೀಸಲಿಟ್ಟಿರುವ ಸ್ಥಾನಗಳಲ್ಲಿ ಮಹಿಳೆಯರ ಸ್ಥಾನಗಳ ಪ್ರಮಾಣ 50% ಗಿಂತ ಕಡಿಮೆ ಇರಬಾರದು.

# ರಾಜ್ಯ ಚುನಾವಣಾ ಆಯೋಗ ಮೀಸಲಾತಿಗಳನ್ನು ಮೀಸಲಿರಿಸತಕ್ಕದ್ದು.

4. ಮತದಾರರ ಪಟ್ಟಿಯನ್ನು ತಯಾರಿಸುವವರು: ಸಂಬಂಧಪಟ್ಟ ತಹಶೀಲ್ದಾರನು ಮತ್ತು ಮತದಾರರ ಪಟ್ಟಿಯ ಒಂದು ಪ್ರತಿಯನ್ನು ತಾಲ್ಲೂಕು ಪಂಚಾಯಿತಿಯ ಕಾರ್ಯದರ್ಶಿ ಇಟ್ಟುಕೊಳ್ಳತಕ್ಕದ್ದು.


5. ಸದಸ್ಯನಾಗಲು ಅವಶ್ಯಕ ವಯಸ್ಸು : 21 ವರ್ಷ

...ಮುಂದುವರೆಯುವುದು.