☀️ III.ಉಜ್ವಲಾ : (ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಪ್ರಮುಖ ಯೋಜನೆಗಳು)
(UJJAWALA Scheme)
━━━━━━━━━━━━━━━━━━━━━━━━━━━━━━━━━━━━━━━━━━━━━
★ ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಪ್ರಮುಖ ಯೋಜನೆಗಳು :
(Central Sponsored schemes)
★ ಉಜ್ವಲಾ:
(UJJAWALA : A Comprehensive Scheme for Prevention of trafficking and Resue, Rehabilitation and Re-integration of Victims of Trafficking and Commercial Sexual Exploitation)
•► ಉಜ್ವಲಾ ಕೇಂದ್ರ ಸರ್ಕಾರದ ಯೋಜನೆಯಾಗಿದ್ದು, ವಾಣಿಜ್ಯಾತ್ಮಕ ಲೈಂಗಿಕ ಶೋಷಣೆಗೆ ಒಳಗಾಗಿ ಸಾಗಾಣಿಕೆಗೆ ಒಳಗಾದ ಮಹಿಳೆಯರು ಹಾಗೂ ಮಕ್ಕಳನ್ನು ಗುರುತಿಸಿ, ರಕ್ಷಿಸಿ, ಪುನರ್‌ವಸತಿ ಕಲ್ಪಿಸುವುದು ಈ ಯೋಜನಯೆ ಮೂಲ ಉದ್ದೇಶವಾಗಿದೆ.
•► ಇದರೊಂದಿಗೆ ಮಹಿಳೆಯರು ಹಾಗೂ ಮಕ್ಕಳ ಸಾಗಾಣಿಕೆಯನ್ನು ತಡೆಗಟ್ಟುವುದು ಸರ್ಕಾರದ ಉದ್ದೇಶವಾಗಿದ್ದು, ಇದಕ್ಕಾಗಿ ಜಾಗೃತಿ ಮೂಡಿಸುವ ಕಾರ್ಯವನ್ನೂ ಈ ಯೋಜನೆಯ ಅಡಿಯಲ್ಲಿ ರೂಪಿಸಲಾಗಿದೆ. ಕಳ್ಳ ಸಾಗಾಣಿಕೆಗೆ ಒಳಪಟ್ಟು, ಲೈಂಗಿಕ ಶೋಷಣೆಯ ಜಾಲಕ್ಕೆ ಗುರಿಯಾಗುವವರನ್ನು ರಕ್ಷಿಸುವ ಜೊತೆಯಲ್ಲಿ, ಸಾಮಾಜಿಕವಾಗಿ ಜಾಗೃತಿ ಮೂಡಿಸುವುದರೊಂದಿಗೆ, ಸ್ಥಳೀಯ ಮಟ್ಟದಲ್ಲೂ ಜಾಗೃತಿ ಮೂಡಿಸುವುದು ಉದ್ದೇಶವಾಗಿದೆ.
•► ಇದಕ್ಕಾಗಿ ವಿವಿಧ ರೀತಿಯ ಸೆಮಿನಾರ್, ವರ್ಕ್‌ಶಾಪ್‌ಗಳು ಸೇರಿದಂತೆ ಕ್ರಿಯಾತ್ಮಕ ಕಾರ್ಯಗಳನ್ನು ಇದರಲ್ಲಿ ಹಮ್ಮಿಕೊಳ್ಳಲಾಗುತ್ತಿದೆ. ದುಷ್ಕರ್ಮಿಗಳ ಜಾಲದಲ್ಲಿ ಸಿಲುಕಿರುವವರನ್ನು ಪತ್ತೆ ಮಾಡಿ, ಅವರಿಗೆ ಪುನರ್‌ವಸತಿ ಕಲ್ಪಿಸಿ, ರಕ್ಷಣೆ ನೀಡಲಾಗುತ್ತದೆ.
•► ರಕ್ಷಿಸಲಾದ ಮಹಿಳೆಯರು ಹಾಗೂ ಮಕ್ಕಳಿಗೆ ವಸತಿ, ಊಟ, ಔಷಧೋಪಚಾರ, ಕೌನ್ಸಿಲಿಂಗ್, ಕಾನೂನು ನೆರವು ನೀಡುವುದು ಸೇರಿದಂತೆ ಮುಂದಿನ ಜೀವನ ರೂಪಿಸಿಕೊಳ್ಳಲು ಸಹಕಾರಿಯಾಗುವಂತೆ ಕೌಶಲ್ಯಾಧಾರಿತ ತರಬೇತಿಯನ್ನು ನೀಡಲಾಗುತ್ತದೆ.
•► ಸರ್ಕಾರ ಈ ಯೋಜನೆಯನ್ನು ಸಮರ್ಪಕವಾಗಿ ಜಾರಿಗೊಳಿಸಲು ಸಮಾಜ ಕಲ್ಯಾಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಇಲಾಖೆ, ಮಹಿಳಾ ಅಭಿವೃದ್ಧಿ ಇಲಾಖೆ, ಸ್ಥಳೀಯ ಸಂಸ್ಥೆಗಳು, ಸ್ಥಳೀಯ ಮಟ್ಟದ ಹೆಸರಾಂತ ಸಾರ್ವಜನಿಕ ಅಥವಾ ಖಾಸಗೀ ಸಂಸ್ಥೆಗಳ ಸಹಯೋಗದಲ್ಲಿ ಯೋಜನೆಯನ್ನು ಜಾರಿಗೊಳಿಸಲಾಗುತ್ತಿದೆ.
•► ಯೋಜನೆಯ ಸಮರ್ಪಕ ಜಾರಿಗಾಗಿ ಐದು ಹಂತದ ಕ್ರಿಯಾಯೋಜನೆಯನ್ನು ಜಾರಿಗೊಳಿಸಲಾಗಿದೆ.
1.ತಡೆಗಟ್ಟುವಿಕೆ
2.ರಕ್ಷಣೆ
3.ಪುನರ್‌ವಸತಿ
4.ಏಕೀಕರಣ
5.ವಾಪಾಸಾತಿ
•► ಕೇಂದ್ರ ಸರ್ಕಾರ ರಾಜ್ಯ ಸರ್ಕಾರ, ಸ್ಥಳೀಯ ಸಂಸ್ಥೆಗಳು, ಎನ್‌ಜಿಒ ಹಾಗೂ ಖಾಸಗಿ ಸಂಸ್ಥೆಗಳ ಸಹಯೋಗದಲ್ಲಿ ಉಜ್ವಲಾ ಯೋಜನೆಯನ್ನು ಜಾರಿಗೊಳಿಸುತ್ತಿದ್ದು, ಇದಕ್ಕಾಗಿ ಕೇಂದ್ರ ಸರ್ಕಾರ ಬೃಹತ್ ಮೊತ್ತದ ಹಣವನ್ನು ವ್ಯಯ ಮಾಡುತ್ತಿದೆ. ಇದಕ್ಕಾಗಿ ಇದುವರೆಗೂ, ಎ ಗ್ರೇಡ್ ನಗರಗಳಲ್ಲಿನ ಜಾರಿಗಾಗಿ 18,86,000 ರೂ, ಬಿ ಗ್ರೇಡ್ ನಗರದಲ್ಲಿ ಜಾರಿಗಾಗಿ 18,26,500 ಮೊತ್ತವನ್ನು ವಾರ್ಷಿಕ ವ್ಯಯ ಮಾಡುತ್ತಿದೆ.

No comments:
Post a Comment