"ಮನುಷ್ಯ ದೀಪವಾದರೂ ಆಗಬೇಕು, ಕನ್ನಡಿಯಾದರೂ ಆಗಬೇಕು. ಒಂದು ಬೆಳಕನ್ನು ಕೊಡುತ್ತದೆ ಮತ್ತೊಂದು ಅದನ್ನು ಪ್ರತಿಬಿಂಬಿಸುತ್ತದೆ. ಪ್ರತಿಯೊಬ್ಬರೂ ದೀಪ ಆಗದೇ ಹೋಗಬಹುದು ಆದರೆ ಕನ್ನಡಿ ಆಗಬಲ್ಲರು. ತಿಳಿದಿರುವ ಜ್ಞಾನವನ್ನು ಮತ್ತೊಬ್ಬರಿಗೆ ಹಂಚುವುದೇ ಜೀವನ.."—ಅರಿಸ್ಟಾಟಲ್
Showing posts with label ಉಜ್ವಲಾ ಯೋಜನೆ. Show all posts
Showing posts with label ಉಜ್ವಲಾ ಯೋಜನೆ. Show all posts

Tuesday, 27 December 2016

III.ಉಜ್ವಲಾ : (ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಪ್ರಮುಖ ಯೋಜನೆಗಳು) (UJJAWALA Scheme )

☀️ III.ಉಜ್ವಲಾ : (ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಪ್ರಮುಖ ಯೋಜನೆಗಳು)
(UJJAWALA Scheme)
━━━━━━━━━━━━━━━━━━━━━━━━━━━━━━━━━━━━━━━━━━━━━

★ ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಪ್ರಮುಖ ಯೋಜನೆಗಳು :
(Central Sponsored schemes)

★ ಉಜ್ವಲಾ:


(UJJAWALA : A Comprehensive Scheme for Prevention of trafficking and Resue, Rehabilitation and Re-integration of Victims of Trafficking and Commercial Sexual Exploitation)

•► ಉಜ್ವಲಾ ಕೇಂದ್ರ ಸರ್ಕಾರದ ಯೋಜನೆಯಾಗಿದ್ದು, ವಾಣಿಜ್ಯಾತ್ಮಕ ಲೈಂಗಿಕ ಶೋಷಣೆಗೆ ಒಳಗಾಗಿ ಸಾಗಾಣಿಕೆಗೆ ಒಳಗಾದ ಮಹಿಳೆಯರು ಹಾಗೂ ಮಕ್ಕಳನ್ನು ಗುರುತಿಸಿ, ರಕ್ಷಿಸಿ, ಪುನರ್‌ವಸತಿ ಕಲ್ಪಿಸುವುದು ಈ ಯೋಜನಯೆ ಮೂಲ ಉದ್ದೇಶವಾಗಿದೆ.

•► ಇದರೊಂದಿಗೆ ಮಹಿಳೆಯರು ಹಾಗೂ ಮಕ್ಕಳ ಸಾಗಾಣಿಕೆಯನ್ನು ತಡೆಗಟ್ಟುವುದು ಸರ್ಕಾರದ ಉದ್ದೇಶವಾಗಿದ್ದು, ಇದಕ್ಕಾಗಿ ಜಾಗೃತಿ ಮೂಡಿಸುವ ಕಾರ್ಯವನ್ನೂ ಈ ಯೋಜನೆಯ ಅಡಿಯಲ್ಲಿ ರೂಪಿಸಲಾಗಿದೆ. ಕಳ್ಳ ಸಾಗಾಣಿಕೆಗೆ ಒಳಪಟ್ಟು, ಲೈಂಗಿಕ ಶೋಷಣೆಯ ಜಾಲಕ್ಕೆ ಗುರಿಯಾಗುವವರನ್ನು ರಕ್ಷಿಸುವ ಜೊತೆಯಲ್ಲಿ, ಸಾಮಾಜಿಕವಾಗಿ ಜಾಗೃತಿ ಮೂಡಿಸುವುದರೊಂದಿಗೆ, ಸ್ಥಳೀಯ ಮಟ್ಟದಲ್ಲೂ ಜಾಗೃತಿ ಮೂಡಿಸುವುದು ಉದ್ದೇಶವಾಗಿದೆ.

•► ಇದಕ್ಕಾಗಿ ವಿವಿಧ ರೀತಿಯ ಸೆಮಿನಾರ್, ವರ್ಕ್‌ಶಾಪ್‌ಗಳು ಸೇರಿದಂತೆ ಕ್ರಿಯಾತ್ಮಕ ಕಾರ್ಯಗಳನ್ನು ಇದರಲ್ಲಿ ಹಮ್ಮಿಕೊಳ್ಳಲಾಗುತ್ತಿದೆ. ದುಷ್ಕರ್ಮಿಗಳ ಜಾಲದಲ್ಲಿ ಸಿಲುಕಿರುವವರನ್ನು ಪತ್ತೆ ಮಾಡಿ, ಅವರಿಗೆ ಪುನರ್‌ವಸತಿ ಕಲ್ಪಿಸಿ, ರಕ್ಷಣೆ ನೀಡಲಾಗುತ್ತದೆ.

•► ರಕ್ಷಿಸಲಾದ ಮಹಿಳೆಯರು ಹಾಗೂ ಮಕ್ಕಳಿಗೆ ವಸತಿ, ಊಟ, ಔಷಧೋಪಚಾರ, ಕೌನ್ಸಿಲಿಂಗ್, ಕಾನೂನು ನೆರವು ನೀಡುವುದು ಸೇರಿದಂತೆ ಮುಂದಿನ ಜೀವನ ರೂಪಿಸಿಕೊಳ್ಳಲು ಸಹಕಾರಿಯಾಗುವಂತೆ ಕೌಶಲ್ಯಾಧಾರಿತ ತರಬೇತಿಯನ್ನು ನೀಡಲಾಗುತ್ತದೆ.

•► ಸರ್ಕಾರ ಈ ಯೋಜನೆಯನ್ನು ಸಮರ್ಪಕವಾಗಿ ಜಾರಿಗೊಳಿಸಲು ಸಮಾಜ ಕಲ್ಯಾಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಇಲಾಖೆ, ಮಹಿಳಾ ಅಭಿವೃದ್ಧಿ ಇಲಾಖೆ, ಸ್ಥಳೀಯ ಸಂಸ್ಥೆಗಳು, ಸ್ಥಳೀಯ ಮಟ್ಟದ ಹೆಸರಾಂತ ಸಾರ್ವಜನಿಕ ಅಥವಾ ಖಾಸಗೀ ಸಂಸ್ಥೆಗಳ ಸಹಯೋಗದಲ್ಲಿ ಯೋಜನೆಯನ್ನು ಜಾರಿಗೊಳಿಸಲಾಗುತ್ತಿದೆ.


•► ಯೋಜನೆಯ ಸಮರ್ಪಕ ಜಾರಿಗಾಗಿ ಐದು ಹಂತದ ಕ್ರಿಯಾಯೋಜನೆಯನ್ನು ಜಾರಿಗೊಳಿಸಲಾಗಿದೆ.

1.ತಡೆಗಟ್ಟುವಿಕೆ

2.ರಕ್ಷಣೆ

3.ಪುನರ್‌ವಸತಿ

4.ಏಕೀಕರಣ

5.ವಾಪಾಸಾತಿ


•► ಕೇಂದ್ರ ಸರ್ಕಾರ ರಾಜ್ಯ ಸರ್ಕಾರ, ಸ್ಥಳೀಯ ಸಂಸ್ಥೆಗಳು, ಎನ್‌ಜಿಒ ಹಾಗೂ ಖಾಸಗಿ ಸಂಸ್ಥೆಗಳ ಸಹಯೋಗದಲ್ಲಿ ಉಜ್ವಲಾ ಯೋಜನೆಯನ್ನು ಜಾರಿಗೊಳಿಸುತ್ತಿದ್ದು, ಇದಕ್ಕಾಗಿ ಕೇಂದ್ರ ಸರ್ಕಾರ ಬೃಹತ್ ಮೊತ್ತದ ಹಣವನ್ನು ವ್ಯಯ ಮಾಡುತ್ತಿದೆ. ಇದಕ್ಕಾಗಿ ಇದುವರೆಗೂ, ಎ ಗ್ರೇಡ್ ನಗರಗಳಲ್ಲಿನ ಜಾರಿಗಾಗಿ 18,86,000 ರೂ, ಬಿ ಗ್ರೇಡ್ ನಗರದಲ್ಲಿ ಜಾರಿಗಾಗಿ 18,26,500 ಮೊತ್ತವನ್ನು ವಾರ್ಷಿಕ ವ್ಯಯ ಮಾಡುತ್ತಿದೆ.