"ಮನುಷ್ಯ ದೀಪವಾದರೂ ಆಗಬೇಕು, ಕನ್ನಡಿಯಾದರೂ ಆಗಬೇಕು. ಒಂದು ಬೆಳಕನ್ನು ಕೊಡುತ್ತದೆ ಮತ್ತೊಂದು ಅದನ್ನು ಪ್ರತಿಬಿಂಬಿಸುತ್ತದೆ. ಪ್ರತಿಯೊಬ್ಬರೂ ದೀಪ ಆಗದೇ ಹೋಗಬಹುದು ಆದರೆ ಕನ್ನಡಿ ಆಗಬಲ್ಲರು. ತಿಳಿದಿರುವ ಜ್ಞಾನವನ್ನು ಮತ್ತೊಬ್ಬರಿಗೆ ಹಂಚುವುದೇ ಜೀವನ.."—ಅರಿಸ್ಟಾಟಲ್

Saturday, 12 November 2016

●.PART: I - ಭಾರತದ ಪ್ರಮುಖ ನದಿಗಳು ಹಾಗೂ ಅವುಗಳ ವಿಶೇಷತೆಗಳು: (India's Drainage System / Famous Indian Rivers)

●.PART: I -  ಭಾರತದ ಪ್ರಮುಖ ನದಿಗಳು ಹಾಗೂ ಅವುಗಳ ವಿಶೇಷತೆಗಳು:
(India's Drainage System / Famous Indian Rivers)
━━━━━━━━━━━━━━━━━━━━━━━━━━━━━━━━━━━━━━━━━━━━━

★ ಭಾರತದ ಪ್ರಾಕೃತಿಕ ಭೂಗೋಳ.
(Indian Physical Geography

★ ಭಾರತದ ನದಿಗಳು
(Indian Drainage System)


ಸ್ಪರ್ಧಾತ್ಮಕ ಪರೀಕ್ಷಾ ದೃಷ್ಟಿಕೋನದಿಂದ ಅತ್ಯುಪಯುಕ್ತವೆಂದೆನಿಸಿದ ಭೌಗೋಳಿಕವಾಗಿ ಪ್ರಮುಖವೆಂದೆನಿಸಿದ ಭಾರತದ ಕೆಲವು ನದಿಗಳು ಹಾಗೂ ಅವುಗಳ ವಿಶೇಷತೆಗಳೊಂದಿಗೆ ನಿಮ್ಮ 'ಸ್ಪರ್ಧಾಲೋಕ'ದಲ್ಲಿ ವಿವರಿಸಲು ಪ್ರಯತ್ನಿಸಲಾಗಿದ್ದು, ಏನಾದರೂ ತಪ್ಪುತಡಿಗಳಿದ್ದಲ್ಲಿ ನನ್ನ ಗಮನಕ್ಕೆ ತರಬೇಕೆಂದು ವಿನಂತಿ.


★ ಉತ್ತರ ಭಾರತದ ನದಿಗಳು :


1.ನದಿ :— ಸಿಂಧೂ (ಇಂಡಸ್ ನದಿ) 

●.ನದಿಯ ಉಗಮ ಸ್ಥಾನ :— ಮಾನಸ ಸರೋವರ, ಟಿಬೆಟ್

●.ಕೊನೆಗೆ ಸೇರುವ ಪ್ರದೇಶ (Drain Into) :— ಪಾಕಿಸ್ತಾನ, ಅರಬ್ಬೀ ಸಮುದ್ರ

●.ವ್ಯಾಪ್ತಿ ರಾಜ್ಯಗಳು :—  (ಪಾಕಿಸ್ತಾನ, ಭಾರತ) ಜಮ್ಮು ಕಾಶ್ಮೀರ, ಗುಜರಾತ್

●.ಪ್ರಮುಖ ಉಪನದಿಗಳು :— ಝಸ್ಕಾರ್, ರವಿ, ಬಿಯಾಸ್, ಸಟ್ಲೇಜ್, ಚೆನಾಬ್, ಝೀಲಂ

●.ಪ್ರಮುಖ ಅಣೆಕಟ್ಟುಗಳು :— ಮಂಗ್ಲಾ ಅಣೆಕಟ್ಟು (ಝೀಲಂ ನದಿ), ತರಬೇಲಾ ಅಣೆಕಟ್ಟು

●.ರಾಷ್ಟ್ರೀಯ ಉದ್ಯಾನಗಳು / ಅಭಯಾರಣ್ಯಗಳು :— ಇಲ್ಲಾ.

●.ವಿಶೇಷತೆಗಳು :— 
1.ಟಿಬೆಟ್ ನಲ್ಲಿ ಸಿಂಧೂ ನದಿಗೆ 'ಸಿಂಘೆ ಕಂಬಾಬ್' ಎಂದು ಕರೆಯುವರು.
2.ಸಿಂಧೂ ನದಿಗೆ ಪಾಕಿಸ್ತಾನದಲ್ಲಿ ಸೇರುವ ಉಪನದಿಗಳೆಂದರೆ 'ಜೋದಾಲ್, ಕಾಬೂಲ್, ತಾಚಿ' ಪ್ರಮುಖವಾದವುಗಳು.


2.ನದಿ :— ಗಂಗಾ

●.ನದಿಯ ಉಗಮ ಸ್ಥಾನ :— ಗಂಗೋತ್ರಿ, ಉತ್ತರಾಖಂಡ್

●.ಕೊನೆಗೆ ಸೇರುವ ಪ್ರದೇಶ :— ಬಾಂಗ್ಲಾದೇಶ, ಬಂಗಾಳ ಕೊಲ್ಲಿ.

●.ವ್ಯಾಪ್ತಿ ರಾಜ್ಯಗಳು :— ಉತ್ತರಾಖಂಡ್, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ಬಿಹಾರ, ಜಾರ್ಖಂಡ್

●.ಪ್ರಮುಖ ಉಪನದಿಗಳು :— ಗೋಮತಿ, ಘಗ್ರಾ, ಗಂಡಕ್, ಕೊಸಿ, ಯಮುನಾ, ಸೊನ್, ಪುಂಪುನ್, ದಾಮೋದರ್, ರಿಹಾಂದ್,ರಾಮಗಂಗಾ, ಬೇಟ್ವಾ,

●.ಪ್ರಮುಖ ಅಣೆಕಟ್ಟುಗಳು :— ತೆಹ್ರಿ ಅಣೆಕಟ್ಟು (ಭಾಗೀರಥಿ ನದಿ), ಬನಸಾಗರ್ ಅಣೆಕಟ್ಟು (ಸನ್ ನದಿ)

●.ರಾಷ್ಟ್ರೀಯ ಉದ್ಯಾನಗಳು / ಅಭಯಾರಣ್ಯಗಳು :— ಕಾರ್ಬೆಟ್ ರಾಷ್ಟ್ರೀಯ ಪಾರ್ಕ್ (ರಾಮಗಂಗಾ ನದಿ)

●.ವಿಶೇಷತೆಗಳು :—  
1.ಭಾರತದ ಅತೀ ಉದ್ದವಾದ ನದಿ
2.ಪ್ರಪಂಚದ ಅತ್ಯಂತ ದೊಡ್ಡ ನದೀಮುಖಜ ಭೂಮಿಯಾದ 'ಸುಂದರ್ ಬನ್ಸ್' ಗಂಗಾನದಿಯ ಮುಖಜ ಭೂಮಿಯಾಗಿದೆ.
3.ದಾಮೋದರ್ ನದಿಯು ಪಶ್ಚಿಮ ಬಂಗಾಳದ ದುಃಖದ ನದಿಯಾಗಿದೆ.
4.ಕೊಸಿ ನದಿಯು ಬಿಹಾರದ ದುಃಖದ ನದಿಯಾಗಿದೆ.


3.ನದಿ :— ಬ್ರಹ್ಮಪುತ್ರ

●.ನದಿಯ ಉಗಮ ಸ್ಥಾನ :— (ಮಾನಸ ಸರೋವರ) ಚೆಮಯಂಗ್ ಡಂಗ್, ಟಿಬೆಟ್

●.ಕೊನೆಗೆ ಸೇರುವ ಪ್ರದೇಶ (Drain Into) :— ಬಾಂಗ್ಲಾದೇಶ, ಬಂಗಾಳ ಕೊಲ್ಲಿ.

●.ವ್ಯಾಪ್ತಿ ರಾಜ್ಯಗಳು :— ಅಸ್ಸಾಂ, ಅರುಣಾಚಲ ಪ್ರದೇಶ, ಪಶ್ಚಿಮ ಬಂಗಾಳ.

●.ಪ್ರಮುಖ ಉಪನದಿಗಳು :— ದಿಬಂಗ್, ದಿಕು, ಕೊಪಿಲಿ, ಬುರ್ಹಿ, ದಿಹಿಂಗ್, ಧನಶ್ರೀ, ತೀಸ್ತಾ, ಲೋಹಿತ್, ಕಮೆಂಗ್, ಮಾನಸ್

●.ಪ್ರಮುಖ ಅಣೆಕಟ್ಟುಗಳು :— ಫರಕ್ಕಾ ಬ್ಯಾರೇಜ್ (ಪಶ್ಚಿಮ ಬಂಗಾಳ)

●.ರಾಷ್ಟ್ರೀಯ ಉದ್ಯಾನಗಳು / ಅಭಯಾರಣ್ಯಗಳು :— ಕಾಜಿರಂಗಾ ರಾಷ್ಟ್ರೀಯ ಉದ್ಯಾನ (ಬ್ರಹ್ಮಪುತ್ರ ನದಿ)

●.ವಿಶೇಷತೆಗಳು :—  
1. ಈ ನದಿಗೆ ಟಿಬೆಟಿನಲ್ಲಿ 'ಸಾಂಗ್ ಪೋ', 'ಯಾರ್ಲುಂಗ್ ಜಾಂಗ್ಬೋ ಜಿಯಾಂಗ್' ಹೆಸರಿನಿಂದ ಕರೆಯುತ್ತಾರೆ.
2.. ಅರುಣಾಚಲ ಪ್ರದೇಶವನ್ನು ಪ್ರವೇಶಿಸುವ ಮೂಲಕ ಭಾರತಕ್ಕೆ ಪ್ರವೇಶಿಸುತ್ತದೆ. ಆ ಪ್ರವೇಶಿಸುವ ಭಾಗವನ್ನು 'ಡಿಹಾಂಗ್ ಕಂದರ' ಎನ್ನುವರು.
3. ಈ ನದಿ ಆಸ್ಸಾಂ ರಾಜ್ಯದ ದುಃಖದ ನದಿಯಾಗಿದೆ.
4.ಆಸ್ಸಾಂ ರಾಜ್ಯದಲ್ಲಿ ಬ್ರಹ್ಮಪುತ್ರ ನದಿಯಲ್ಲಿ 'ಮಜೂಲಿ ಎಂಬ ಅಂತರ ನದಿ ದ್ವೀಪವಿದ್ದು, ಇದು ಪ್ರಪಂಚದ ಅತ್ಯಂತ ದೊಡ್ಡ ಅಂತರ ನದಿ ದ್ವೀಪ ವ್ಯವಸ್ಥೆಯಾಗಿದೆ.
5.ತ್ಸಾಂಗ್ ಪೋ ನದಿಗೆ ಟಿಬೆಟಿನ ಕಣ್ಣೀರಿನ ನದಿ ಎನ್ನುವರು.


4..ನದಿ :— ಯಮುನಾ

●.ನದಿಯ ಉಗಮ ಸ್ಥಾನ :— ಯಮುನೋತ್ರಿ, ಉತ್ತರಾಖಂಡ್.

●.ಕೊನೆಗೆ ಸೇರುವ ಪ್ರದೇಶ (Drain Into) :— ಬಂಗಾಳ ಕೊಲ್ಲಿ.

●.ವ್ಯಾಪ್ತಿ ರಾಜ್ಯಗಳು :— ಉತ್ತರ ಪ್ರದೇಶ, ಹರಿಯಾಣ & ಉತ್ತರಾಖಂಡ್,

●.ಪ್ರಮುಖ ಉಪನದಿಗಳು :— ಹಿಂದೊನ್, ಕೆನ್, ಚಂಬಲ್, ಬೇತ್ವಾ, ಸಿಂಧ್, ಟೊನ್ಸ್.

●.ಪ್ರಮುಖ ಅಣೆಕಟ್ಟುಗಳು :— ಗಾಂಧಿ ಸಾಗರ ಅಣೆಕಟ್ಟು (ಚಂಬಲ್), ರಾಣಾ ಪ್ರತಾಪ್ ಸಾಗರ ಅಣೆಕಟ್ಟು (ಚಂಬಲ್),

●.ರಾಷ್ಟ್ರೀಯ ಉದ್ಯಾನಗಳು / ಅಭಯಾರಣ್ಯಗಳು :— ಪನ್ನಾ ರಾಷ್ಟ್ರೀಯ ಉದ್ಯಾನ (ಕೆನ್ ನದಿ)

●.ವಿಶೇಷತೆಗಳು :—  
1. ಭಾರತದ ಅತ್ಯಂತ ಉದ್ದವಾದ ಉಪನದಿ (ಗಂಗಾ)


5..ನದಿ :— ಸಬರಮತಿ

●.ನದಿಯ ಉಗಮ ಸ್ಥಾನ :— ಉದಯಪುರ್,  ರಾಜಸ್ಥಾನ .

●.ಕೊನೆಗೆ ಸೇರುವ ಪ್ರದೇಶ (Drain Into) :— ಅರಬ್ಬೀ ಸಮುದ್ರ.

●.ವ್ಯಾಪ್ತಿ ರಾಜ್ಯಗಳು :— ಗುಜರಾತ್, ರಾಜಸ್ಥಾನ

●.ಪ್ರಮುಖ ಉಪನದಿಗಳು :— ವಕಾಲ್, ಸೇಯ್ ನಾಡಿ, ಮಧುಮತಿ, ಹರ್ನಾವ್, ಹಾಥ್ ಮತಿ

●.ಪ್ರಮುಖ ಅಣೆಕಟ್ಟುಗಳು :— ಧರೋಯಿ ಅಣೆಕಟ್ಟು

... ಮುಂದುವರೆಯುವುದು. 

No comments:

Post a Comment