"ಮನುಷ್ಯ ದೀಪವಾದರೂ ಆಗಬೇಕು, ಕನ್ನಡಿಯಾದರೂ ಆಗಬೇಕು. ಒಂದು ಬೆಳಕನ್ನು ಕೊಡುತ್ತದೆ ಮತ್ತೊಂದು ಅದನ್ನು ಪ್ರತಿಬಿಂಬಿಸುತ್ತದೆ. ಪ್ರತಿಯೊಬ್ಬರೂ ದೀಪ ಆಗದೇ ಹೋಗಬಹುದು ಆದರೆ ಕನ್ನಡಿ ಆಗಬಲ್ಲರು. ತಿಳಿದಿರುವ ಜ್ಞಾನವನ್ನು ಮತ್ತೊಬ್ಬರಿಗೆ ಹಂಚುವುದೇ ಜೀವನ.."—ಅರಿಸ್ಟಾಟಲ್

Wednesday, 19 October 2016

☀.ಪಿಡಿಓ ಪರೀಕ್ಷೆ ವಿಶೇಷಾಂಕ -V : ತಾಲ್ಲೂಕು ಪಂಚಾಯಿತಿ ರಚನೆ ಮತ್ತು ಇತರೆ ಮಹತ್ವದ ಅಂಶಗಳು : (Constitution of Talluq Panchayat)

☀.ಪಿಡಿಓ ಪರೀಕ್ಷೆ ವಿಶೇಷಾಂಕ -V : ತಾಲ್ಲೂಕು ಪಂಚಾಯಿತಿ ರಚನೆ ಮತ್ತು ಇತರೆ ಮಹತ್ವದ ಅಂಶಗಳು :
(Constitution of Talluq Panchayat)
•─━━━━━═══════════━━━━━─••─━━━━━═══════════━━━━━─•

★ ಪಿಡಿಓ ಪರೀಕ್ಷಾ ಅಧ್ಯಯನ ವಿಶೇಷಾಂಕ
(PDO Exam Study Notes)

★ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್
(Rural Development & Panchayat Raj)


●.ತಾಲ್ಲೂಕು ಪಂಚಾಯಿತಿ


1. ರಚನೆ: ಪ್ರತಿ ತಾಲ್ಲೂಕಿಗೊಂದು ತಾಲ್ಲೂಕು ಪಂಚಾಯಿತಿ.


2. ಸದಸ್ಯರು: 12,500-15,000ರ ನಡುವಿನ ಜನಸಂಖ್ಯೆಗೆ ಒಬ್ಬ ಸದಸ್ಯನಿರಬೇಕು. (1,00,000ಕ್ಕಿಂತ ಕಡಿಮೆ ಜನಸಂಖ್ಯೆಗೆ ಕನಿಷ್ಠ 11ಜನ ಸದಸ್ಯರಿರಬೇಕು.)

# ಪ್ರತಿ ತಾಲ್ಲೂಕು ಪಂಚಾಯಿತಿಯ ಕ್ಷೇತ್ರಗಳ ಚುನಾವಣೆಯಲ್ಲಿ ಆಯ್ಕೆಯಾದ ಸದಸ್ಯರು ಮಾತ್ರವಲ್ಲದೆ, ತಾಲ್ಲೂಕನ್ನು ಪ್ರತಿನಿಧಿಸುವ ಸಂಸತ್ತು (ಲೋಕಸಭೆ & ರಾಜ್ಯಸಭೆ), ವಿಧಾನ ಸಭೆ ಮತ್ತು ವಿಧಾನ ಪರಿಷತ್ತಿನ ಸದಸ್ಯರು ತಾಲ್ಲೂಕು ಪಂಚಾಯಿತಿಯ ಸದಸ್ಯರಾಗಿರುತ್ತಾರೆ.

# ಒಂದು ವರ್ಷದ ಅವಧಿಗೆ, ಸರದಿ ಪ್ರಕಾರ ತಾಲ್ಲೂಕಿನ 1/5 ಭಾಗದ ಗ್ರಾಮ ಪಂಚಾಯಿತಿಯ ಅಧ್ಯಕ್ಷರುಗಳು ಸದಸ್ಯರಾಗಿರುತ್ತಾರೆ. ( ಈ ಪೈಕಿ ಒಬ್ಬರು ಮಹಿಳೆ, ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡಗಳಿಂದ ಒಬ್ಬೊಬ್ಬರಂತೆ)


 3. ಸದಸ್ಯರ ಮೀಸಲಾತಿ ಸ್ಥಾನಗಳು:

# ಅನುಸೂಚಿತ ಜಾತಿ ಅಥವಾ ಅನುಸೂಚಿತ ಪಂಗಡಗಳ ಜನಸಂಖ್ಯೆಯ ಅದೇ ಅನುಪಾತದಲ್ಲಿರಬೇಕು. (ಕನಿಷ್ಠ ಅ,ಜಾತಿ ಮತ್ತು ಅ.ಪಂಗಡದವರಿಗೆ ಒಂದೊಂದು ಸ್ಥಾನ ಮೀಸಲಿರಬೇಕು).

# ಹಿಂದುಳಿದ ವರ್ಗದವರಿಗೆ 1/3 ಸ್ಥಾನಗಳು. (80% A ಪ್ರವರ್ಗ ಮತ್ತು 20% B ಪ್ರವರ್ಗ)

# ಅನುಸೂಚಿತ ಜಾತಿ + ಅನುಸೂಚಿತ ಪಂಗಡ + ಹಿಂದುಳಿದ ವರ್ಗ = 50% ಮೀರುವಂತಿಲ್ಲ.

# ಮೀಸಲಿಟ್ಟಿರುವ ಸ್ಥಾನಗಳಲ್ಲಿ ಮಹಿಳೆಯರ ಸ್ಥಾನಗಳ ಪ್ರಮಾಣ 50% ಗಿಂತ ಕಡಿಮೆ ಇರಬಾರದು.

# ರಾಜ್ಯ ಚುನಾವಣಾ ಆಯೋಗ ಮೀಸಲಾತಿಗಳನ್ನು ಮೀಸಲಿರಿಸತಕ್ಕದ್ದು.

4. ಮತದಾರರ ಪಟ್ಟಿಯನ್ನು ತಯಾರಿಸುವವರು: ಸಂಬಂಧಪಟ್ಟ ತಹಶೀಲ್ದಾರನು ಮತ್ತು ಮತದಾರರ ಪಟ್ಟಿಯ ಒಂದು ಪ್ರತಿಯನ್ನು ತಾಲ್ಲೂಕು ಪಂಚಾಯಿತಿಯ ಕಾರ್ಯದರ್ಶಿ ಇಟ್ಟುಕೊಳ್ಳತಕ್ಕದ್ದು.


5. ಸದಸ್ಯನಾಗಲು ಅವಶ್ಯಕ ವಯಸ್ಸು : 21 ವರ್ಷ

...ಮುಂದುವರೆಯುವುದು. 

No comments:

Post a Comment