"ಮನುಷ್ಯ ದೀಪವಾದರೂ ಆಗಬೇಕು, ಕನ್ನಡಿಯಾದರೂ ಆಗಬೇಕು. ಒಂದು ಬೆಳಕನ್ನು ಕೊಡುತ್ತದೆ ಮತ್ತೊಂದು ಅದನ್ನು ಪ್ರತಿಬಿಂಬಿಸುತ್ತದೆ. ಪ್ರತಿಯೊಬ್ಬರೂ ದೀಪ ಆಗದೇ ಹೋಗಬಹುದು ಆದರೆ ಕನ್ನಡಿ ಆಗಬಲ್ಲರು. ತಿಳಿದಿರುವ ಜ್ಞಾನವನ್ನು ಮತ್ತೊಬ್ಬರಿಗೆ ಹಂಚುವುದೇ ಜೀವನ.."—ಅರಿಸ್ಟಾಟಲ್
Showing posts with label ಜಲ್ಲಾ ಪಂಚಾಯಿತಿ ರಚನೆ. Show all posts
Showing posts with label ಜಲ್ಲಾ ಪಂಚಾಯಿತಿ ರಚನೆ. Show all posts

Wednesday, 19 October 2016

☀.ಪಿಡಿಓ ಪರೀಕ್ಷೆ ವಿಶೇಷಾಂಕ -VI : ಜಿಲ್ಲಾ ಪಂಚಾಯಿತಿ ರಚನೆ ಮತ್ತು ಇತರೆ ಮಹತ್ವದ ಅಂಶಗಳು : (Constitution of Zilla Panchayat)

☀.ಪಿಡಿಓ ಪರೀಕ್ಷೆ ವಿಶೇಷಾಂಕ -VI : ಜಿಲ್ಲಾ ಪಂಚಾಯಿತಿ ರಚನೆ ಮತ್ತು ಇತರೆ ಮಹತ್ವದ ಅಂಶಗಳು :
(Constitution of Zilla Panchayat)
•─━━━━━═══════════━━━━━─••─━━━━━═══════════━━━━━─•

★ ಪಿಡಿಓ ಪರೀಕ್ಷಾ ಅಧ್ಯಯನ ವಿಶೇಷಾಂಕ
(PDO Exam Study Notes)

★ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್
(Rural Development & Panchayat Raj)



●.ಜಿಲ್ಲಾ ಪಂಚಾಯಿತಿ


1. ರಚನೆ: ಪ್ರತಿ ಜಿಲ್ಲೆಗೊಂದು ಜಿಲ್ಲಾ ಪಂಚಾಯಿತಿ.


2. ಸದಸ್ಯರು: 35,000-45,000ದ ನಡುವಿನ ಜನಸಂಖ್ಯೆಗೆ ಒಬ್ಬ ಸದಸ್ಯನಿರಬೇಕು.

# ಉತ್ತರ ಕನ್ನಡ ಮತ್ತು ಚಿಕ್ಕಮಗಳೂರು ಜಿಲ್ಲೆ =30,000;

# ಬೆಂಗಳೂರು ನಗರ ಜಿಲ್ಲೆ =20,000;

# ಕೊಡಗು ಜಿಲ್ಲೆ =18,000ಕ್ಕೆ ಒಬ್ಬ ಸದಸ್ಯನಿರಬೇಕು.

# ಪ್ರತಿ ಜಿಲ್ಲಾ ಪಂಚಾಯಿತಿಯ ಕ್ಷೇತ್ರಗಳ ಚುನಾವಣೆಯಲ್ಲಿ ಆಯ್ಕೆಯಾದ ಸದಸ್ಯರು ಮಾತ್ರವಲ್ಲದೆ, ಜಿಲ್ಲೆಯ ಪ್ರತಿನಿಧಿಸುವ ಸಂಸತ್ತು (ಲೋಕಸಭೆ & ರಾಜ್ಯಸಭೆ), ವಿಧಾನ ಸಭೆ ಮತ್ತು ವಿಧಾನ ಪರಿಷತ್ತಿನ ಸದಸ್ಯರು ಜಿಲ್ಲಾ ಪಂಚಾಯಿತಿಯ ಸದಸ್ಯರಾಗಿರುತ್ತಾರೆ.

# ಜಿಲ್ಲೆಯ ತಾಲ್ಲೂಕು ಪಂಚಾಯಿತಿಯ ಅಧ್ಯಕ್ಷರು ಸಹ ಸದಸ್ಯರಾಗಿರುತ್ತಾರೆ.


 3. ಸದಸ್ಯರ ಮೀಸಲಾತಿ ಸ್ಥಾನಗಳು:

# ಅನುಸೂಚಿತ ಜಾತಿ ಅಥವಾ ಅನುಸೂಚಿತ ಪಂಗಡಗಳ ಜನಸಂಖ್ಯೆಯ ಅದೇ ಅನುಪಾತದಲ್ಲಿರಬೇಕು. (ಕನಿಷ್ಠ ಅ,ಜಾತಿ ಮತ್ತು ಅ.ಪಂಗಡದವರಿಗೆ ಒಂದೊಂದು ಸ್ಥಾನ ಮೀಸಲಿರಬೇಕು).

# ಹಿಂದುಳಿದ ವರ್ಗದವರಿಗೆ 1/3 ಸ್ಥಾನಗಳು. (80% A ಪ್ರವರ್ಗ ಮತ್ತು 20% B ಪ್ರವರ್ಗ)

# ಅನುಸೂಚಿತ ಜಾತಿ + ಅನುಸೂಚಿತ ಪಂಗಡ + ಹಿಂದುಳಿದ ವರ್ಗ = 50% ಮೀರುವಂತಿಲ್ಲ.

# ಮೀಸಲಿಟ್ಟಿರುವ ಸ್ಥಾನಗಳಲ್ಲಿ ಮಹಿಳೆಯರ ಸ್ಥಾನಗಳ ಪ್ರಮಾಣ 50% ಕ್ಕಿಂತ ಕಡಿಮೆ ಇರಬಾರದು.

# ರಾಜ್ಯ ಚುನಾವಣಾ ಆಯೋಗ ಮೀಸಲಾತಿಗಳನ್ನು ಮೀಸಲಿರಿಸತಕ್ಕದ್ದು.


4. ಮತದಾರರ ಪಟ್ಟಿಯನ್ನು ತಯಾರಿಸುವವರು: 

ರಾಜ್ಯ ಚುನಾವಣಾ ಆಯೋಗದ ನಿರ್ದೇಶನದ ಮೇರೆಗೆ ಅಸಿಸ್ಟೆಂಟ್ ಕಮೀಷನರ್. ಮತ್ತು ರಾಜ್ಯ ವಿಧಾನ ಸಭೆಯ ಚುನಾವಣೆಗಾಗಿ ತಯಾರಿಸಲಾದ ಮತದಾರರ ಪಟ್ಟಿಯನ್ನೇ ಜಿಲ್ಲಾ ಪಂಚಾಯಿತಿ ಚುನಾವಣೆಯ ಮತದಾರರ ಪಟ್ಟಿ ಎಂದು ಭಾವಿಸತಕ್ಕದ್ದು.

5. ಸದಸ್ಯನಾಗಲು ಅವಶ್ಯಕ ವಯಸ್ಸು: 21 ವರ್ಷ

...ಮುಂದುವರೆಯುವುದು.