"ಮನುಷ್ಯ ದೀಪವಾದರೂ ಆಗಬೇಕು, ಕನ್ನಡಿಯಾದರೂ ಆಗಬೇಕು. ಒಂದು ಬೆಳಕನ್ನು ಕೊಡುತ್ತದೆ ಮತ್ತೊಂದು ಅದನ್ನು ಪ್ರತಿಬಿಂಬಿಸುತ್ತದೆ. ಪ್ರತಿಯೊಬ್ಬರೂ ದೀಪ ಆಗದೇ ಹೋಗಬಹುದು ಆದರೆ ಕನ್ನಡಿ ಆಗಬಲ್ಲರು. ತಿಳಿದಿರುವ ಜ್ಞಾನವನ್ನು ಮತ್ತೊಬ್ಬರಿಗೆ ಹಂಚುವುದೇ ಜೀವನ.."—ಅರಿಸ್ಟಾಟಲ್

Friday, 30 December 2016

☀ ಪಂಚಾಯತ ರಾಜ್ ವ್ಯವಸ್ಥೆಯಲ್ಲಿ ಸ್ಥಾಯಿ ಸಮಿತಿಗಳು (2015 ರ ತಿದ್ದು ಪಡಿಯನ್ವಯ ) (The Standing Committees of the Panchayati Raj system)

☀ ಪಂಚಾಯತ ರಾಜ್ ವ್ಯವಸ್ಥೆಯಲ್ಲಿ ಸ್ಥಾಯಿ ಸಮಿತಿಗಳು (2015 ರ ತಿದ್ದು ಪಡಿಯನ್ವಯ )
(The Standing Committees of the Panchayati Raj system)
─━━━━━═══════════━━━━━─••─━━━━━═══════════━━━━━─•
★  ಪಂಚಾಯತ್ ರಾಜ್
(Panchayat Raj)



●.I) ಗ್ರಾಮ ಪಂಚಾಯತಿ (ಪ್ರಕರಣ-61)
━━━━━━━━━━━━━━━━━━━━━━━

    ಗ್ರಾಮ ಪಂಚಾಯತಿಯ 3 ಸ್ಥಾಯಿ ಸಮಿತಿಗಳು ಈ ಕೆಳಗಿನಂತಿವೆ.

    1) ಸಾಮಾನ್ಯ ಸ್ಥಾಯಿ ಸಮಿತಿ :  ಗ್ರಾಮ ಪಂಚಾಯತಿಯ ಉಪಾಧ್ಯಕ್ಷರು ಈ ಸಮಿತಿಯ ಪದನಿಮಿತ್ತ ಅಧ್ಯಕ್ಷರಾಗಿರುತ್ತಾರೆ
    2) ಹಣಕಾಸು ಲೆಕ್ಕ ಪರಿಶೋಧನೆ ಮತ್ತು ಯೋಜನೆ ಸ್ಥಾಯಿ ಸಮಿತಿ : ಗ್ರಾಮ ಪಂಚಾಯತಿಯ ಅಧ್ಯಕ್ಷರು ಈ ಸಮಿತಿಯ ಪದನಿಮಿತ್ತ ಅಧ್ಯಕ್ಷರಾಗಿರುತ್ತಾರೆ
   3) ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ : SC/ST  ಪೈಕಿ ಒಬ್ಬರು ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿಯ ಅಧ್ಯಕ್ಷರಾಗಿರುತ್ತಾರೆ. ಒಬ್ಬರು ಮಹಿಳಾ ಸದಸ್ಯರನ್ನು ಹೊಂದಿರತಕ್ಕದ್ದು


   ವಿವರಣೆ : * ಪ್ರತಿಯೊಂದು ಸ್ಥಾಯಿ ಸಮಿತಿಯು ಅಧ್ಯಕ್ಷರನ್ನು ಒಳಗೊಂಡಂತೆ 3 ಕಿಂತ ಕಡಿಮೆ ಇಲ್ಲದ ಹಾಗು 05 ಕಿಂತ ಹೆಚ್ಚಿಲ್ಲದ ಸದಸ್ಯರನ್ನು ಒಳಗೊಂಡಿರತಕ್ಕದ್ದು
               * ಪ್ರತಿ ಸಮಿತಿಯ ಸದಸ್ಯರ ಪಧಾವಧಿಯು(ಕಾಲಾವಧಿಯು) 30 ತಿಂಗಳು ಆಗಿರುತ್ತದೆ

●.II) ತಾಲ್ಲೂಕು ಪಂಚಾಯತಿ
   ━━━━━━━━━━━━━━━━━━━━━━━

 ತಾಲ್ಲೂಕು ಪಂಚಾಯತಿಯ ಸ್ಥಾಯಿ ಸಮಿತಿಗಳು ಈ ಕೆಳಗಿನಂತಿವೆ.

    1) ಸಾಮಾನ್ಯ ಸ್ಥಾಯಿ ಸಮಿತಿ :  ತಾಲ್ಲೂಕು ಪಂಚಾಯತಿಯ ಉಪಾಧ್ಯಕ್ಷರು ಈ ಸಮಿತಿಯ ಪದನಿಮಿತ್ತ ಅಧ್ಯಕ್ಷರಾಗಿರುತ್ತಾರೆ
    2) ಹಣಕಾಸು ಲೆಕ್ಕ ಪರಿಶೋಧನೆ ಮತ್ತು ಯೋಜನೆ ಸ್ಥಾಯಿ ಸಮಿತಿ : ತಾಲ್ಲೂಕು ಪಂಚಾಯತಿಯ ಅಧ್ಯಕ್ಷರು ಈ ಸಮಿತಿಯ ಪದನಿಮಿತ್ತ ಅಧ್ಯಕ್ಷರಾಗಿರುತ್ತಾರೆ
   3) ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ : ಆಯ್ಕೆಯಾದ ಸದಸ್ಯರ ಪೈಕಿ ಒಬ್ಬರು ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿಯ ಅಧ್ಯಕ್ಷರಾಗಿರುತ್ತಾರೆ.


   ವಿವರಣೆ : * ಪ್ರತಿಯೊಂದು ಸ್ಥಾಯಿ ಸಮಿತಿಯು ಅಧ್ಯಕ್ಷರನ್ನು ಒಳಗೊಂಡಂತೆ  06 ಕಿಂತ ಹೆಚ್ಚಿಲ್ಲದ ಸದಸ್ಯರನ್ನು ಒಳಗೊಂಡಿರತಕ್ಕದ್ದು
               * ಪ್ರತಿ ಸಮಿತಿಯ ಸದಸ್ಯರ ಪಧಾವಧಿಯು(ಕಾಲಾವಧಿಯು) 30 ತಿಂಗಳು ಆಗಿರುತ್ತದೆ
               * ಒಬ್ಬ ತಾಲ್ಲೂಕು ಪಂಚಾಯತಿಯ ಸದಸ್ಯ ಒಂದಕ್ಕಿಂತ ಹೆಚ್ಚು ಸ್ಥಾಯಿ ಸಮಿತಿಯಲ್ಲಿ ಸದಸ್ಯನಾಗಿ ಸೇವೆ ಸಲ್ಲಿಸಲು ಅರ್ಹನಲ್ಲ.
              * ತಾಲ್ಲೂಕು ಪಂಚಾಯತಿಯ ಕಾರ್ಯ ನಿರ್ವಾಹಕ ಅಧಿಕಾರಿಯು ಪ್ರತಿಯೊಂದು ಸ್ಥಾಯಿ ಸಮಿತಿಯ ಕಾರ್ಯದರ್ಶಿಯಾಗಿರತಕ್ಕದ್ದು


●.III) ಜಿಲ್ಲಾ ಪಂಚಾಯತಿ
━━━━━━━━━━━━━━━━━━━━━━━

    ಜಿಲ್ಲಾ ಪಂಚಾಯತಿಯು ಈ ಕೆಳಗಿನ 05 ಸ್ಥಾಯಿ ಸಮಿತಿಗಳನ್ನು ಹೊಂದಿರುತ್ತದೆ.

    1) ಸಾಮಾನ್ಯ ಸ್ಥಾಯಿ ಸಮಿತಿ :  ಜಿಲ್ಲಾ ಪಂಚಾಯತಿಯ ಉಪಾಧ್ಯಕ್ಷರು ಈ ಸಮಿತಿಯ ಪದನಿಮಿತ್ತ ಅಧ್ಯಕ್ಷರಾಗಿರುತ್ತಾರೆ
    2) ಹಣಕಾಸು ಲೆಕ್ಕ ಪರಿಶೋಧನೆ ಮತ್ತು ಯೋಜನೆ ಸ್ಥಾಯಿ ಸಮಿತಿ : ಜಿಲ್ಲಾ ಪಂಚಾಯತಿಯ ಅಧ್ಯಕ್ಷರು ಈ ಸಮಿತಿಯ ಪದನಿಮಿತ್ತ ಅಧ್ಯಕ್ಷರಾಗಿರುತ್ತಾರೆ
   3) ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ : ಆಯ್ಕೆಯಾದ ಸದಸ್ಯರ ಪೈಕಿ ಒಬ್ಬರು ಈ ಸಮಿತಿಯ ಅಧ್ಯಕ್ಷರಾಗಿರುತ್ತಾರೆ.
   4) ಶಿಕ್ಷಣ ಮತ್ತು ಆರೋಗ್ಯ ಸಮಿತಿ : ಆಯ್ಕೆಯಾದ ಸದಸ್ಯರ ಪೈಕಿ ಒಬ್ಬರು ಈ ಸಮಿತಿಯ ಅಧ್ಯಕ್ಷರಾಗಿರುತ್ತಾರೆ.
   5) ಕೃಷಿ ಮತ್ತು ಕೈಗಾರಿಕಾ ಸಮಿತಿ : ಆಯ್ಕೆಯಾದ ಸದಸ್ಯರ ಪೈಕಿ ಒಬ್ಬರು ಈ ಸಮಿತಿಯ ಅಧ್ಯಕ್ಷರಾಗಿರುತ್ತಾರೆ.


   ವಿವರಣೆ : * ಪ್ರತಿಯೊಂದು ಸ್ಥಾಯಿ ಸಮಿತಿಯು ಅಧ್ಯಕ್ಷರನ್ನು ಒಳಗೊಂಡಂತೆ  07 ಕಿಂತ ಹೆಚ್ಚಿಲ್ಲದ ಸದಸ್ಯರನ್ನು ಒಳಗೊಂಡಿರತಕ್ಕದ್ದು
               * ಪ್ರತಿ ಸಮಿತಿಯ ಸದಸ್ಯರ ಪಧಾವಧಿಯು(ಕಾಲಾವಧಿಯು) 30 ತಿಂಗಳು ಆಗಿರುತ್ತದೆ
               * ಜಿಲ್ಲಾ ಪಂಚಾಯತಿಯ ಕಾರ್ಯ ನಿರ್ವಾಹಕ ಅಧಿಕಾರಿಯು ಸಾಮಾನ್ಯ ಸ್ಥಾಯಿ ಸಮಿತಿಯ ಪದನಿಮಿತ್ತ ಕಾರ್ಯದರ್ಶಿಯಾಗಿರತಕ್ಕದ್ದು
              * ಉಳಿದ ಸ್ಥಾಯಿ ಸಮಿತಿಗಳಿಗೆ ಜಿಲ್ಲಾ ಪಂಚಾಯತಿಯ ಉಪಕಾರ್ಯದರ್ಶಿಗಳನ್ನು ಪದನಿಮಿತ್ತ ಕಾರ್ಯದರ್ಶಿಯಾಗಿ ಜಿಲ್ಲಾ ಪಂಚಾಯತಿಯ ಕಾರ್ಯ ನಿರ್ವಾಹಕ ಅಧಿಕಾರಿಯು ನಾಮನಿರ್ದೇಶನ ಮಾಡುವರು.

(courtesy :Manjunath Nerti)

No comments:

Post a Comment