"ಮನುಷ್ಯ ದೀಪವಾದರೂ ಆಗಬೇಕು, ಕನ್ನಡಿಯಾದರೂ ಆಗಬೇಕು. ಒಂದು ಬೆಳಕನ್ನು ಕೊಡುತ್ತದೆ ಮತ್ತೊಂದು ಅದನ್ನು ಪ್ರತಿಬಿಂಬಿಸುತ್ತದೆ. ಪ್ರತಿಯೊಬ್ಬರೂ ದೀಪ ಆಗದೇ ಹೋಗಬಹುದು ಆದರೆ ಕನ್ನಡಿ ಆಗಬಲ್ಲರು. ತಿಳಿದಿರುವ ಜ್ಞಾನವನ್ನು ಮತ್ತೊಬ್ಬರಿಗೆ ಹಂಚುವುದೇ ಜೀವನ.."—ಅರಿಸ್ಟಾಟಲ್

Friday, 16 December 2016

☀️ 2015-16ನೇ ಸಾಲಿನ ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಪ್ರಮುಖ ಯೋಜನೆಗಳು : 2.ಪ್ರಧಾನಮಂತ್ರಿ ಕೌಶಲ ವಿಕಾಸ್ ಯೋಜನಾ (PMKVY) (Pradhan Mantri Kousal Vikas Yojana)

☀️ 2015-16ನೇ ಸಾಲಿನ ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಪ್ರಮುಖ ಯೋಜನೆಗಳು :
2.ಪ್ರಧಾನಮಂತ್ರಿ ಕೌಶಲ ವಿಕಾಸ್ ಯೋಜನಾ (PMKVY)
(Pradhan Mantri Kousal Vikas Yojana)
━━━━━━━━━━━━━━━━━━━━━━━━━━━━━━━━━━━━━━━━━━━━━

★ ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಪ್ರಮುಖ ಯೋಜನೆಗಳು :I
(Central Sponsored schemes)


★ ಪ್ರಧಾನಮಂತ್ರಿ ಕೌಶಲ ವಿಕಾಸ್ ಯೋಜನೆಯ ಮುಖ್ಯಾಂಶಗಳು :    


•► ಇದೊಂದು ಕೇಂದ್ರ ಸರ್ಕಾರದ ಯೋಜನೆಯಾಗಿದ್ದು, 24 ಲಕ್ಷ ಯುವಕರಿಗೆ ಅರ್ಥಪೂರ್ಣ, ಕೈಗಾರಿಕೆ ಆಧಾರಿತ ಕೌಶಲ್ಯ ಆಧಾರಿತ ತರಬೇತಿ ನೀಡುವ ಉದ್ದೇಶವನ್ನು ಹೊಂದಿದ್ದು, ಇದರ ಅಡಿಯಲ್ಲಿ ತರಬೇತಿ ಪಡೆಯುವ ಯುವಕರಿಗೆ ವಿದ್ಯಾರ್ಥಿವೇತನ ಹಾಗೂ ಪ್ರಮಾಣ ಪತ್ರವನ್ನು ನೀಡಲಾಗುತ್ತದೆ.

•► ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಮೇಕ್ ಇನ್ ಇಂಡಿಯಾಗೆ ಇದನ್ನು ಪೂರಕವಾಗಿ ಆರಂಭಿಸಲಾಗಿದೆ. ಕೇಂದ್ರ ಕೌಶಲ್ಯಾಭಿವೃದ್ದಿ ಹಾಗೂ ವಾಣಿಜ್ಯೋದ್ಯಮ ಸಚಿವಾಲಯ ಈ ಯೋಜನೆಯನ್ನು 2015 ಮಾರ್ಚ್ 20ರಂದು ಜಾರಿಗೊಳಿಸಿತು.

•► ಪ್ರಸಕ್ತ ವರ್ಷದಲ್ಲಿ ಯೋಜನೆ ಜಾರಿಗೆ 1500 ಕೋಟಿ ಹಣವನ್ನು ಮೀಸಲಿಡಲಾಗಿದ್ದು, ಈ ಯೋಜನೆ ಮೂಲಕ ಪ್ರಮುಖವಾಗಿ 10 ಹಾಗೂ 12ನೇ ತರಗತಿಗಳಲ್ಲಿ ಫೇಲಾದ, ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಕೌಶಲ್ಯಾಧಾರಿತ ತರಬೇತಿ ನೀಡುವ ಗುರಿಯನ್ನು ಹೊಂದಿದೆ.

•► ಆರಂಭಿಕ ಹಂದಲ್ಲಿ ಬಿಹಾರ ರಾಜ್ಯದಲ್ಲಿ ಈ ಯೋಜನೆಯನ್ನು ಜಾರಿಗೊಳಿಲಾಗಿ, 2015ರ ಜುಲೈ 1ರ ವೇಳೆಗೆ 1.17,564 ಯುವಕರ ನೋಂದಣಿ ಮಾಡಿಕೊಂಡರು. ಇದರಲ್ಲಿ 1,07,080 ಯುವಕರಿಗೆ ಈಗಾಗಲೇ ತರಬೇತಿ ನೀಡಲಾಗಿದ್ದು, ಇದರಲ್ಲಿ 24 ಬಗೆಯ ವಿವಿಧ ರೀತಿಯ ಕೌಶಲ್ಯಾಧಾರಿತ ತರಬೇತಿ ಸೇರಿದೆ.

•► ಅಭಿವೃದ್ಧಿ ಹೊಂದಿರುವ ರಾಷ್ಟ್ರಗಳಿಗೆ ಪೈಪೋಟಿ ನೀಡುವ ಪ್ರಮುಖ ಪ್ರಯತ್ನದಲ್ಲಿ ಯುವಕರ ಪಾತ್ರ ಮಹತ್ವದ್ದು ಎಂದು ಮನಗಂಡ ಕೇಂದ್ರ ಸರ್ಕಾರದ ಈ ಯೋಜನೆಯಿಂದ ವಿದ್ಯೆಯನ್ನು ಅರ್ಧದಲ್ಲೆ ನಿಲ್ಲಿಸಿದ ವಿದ್ಯಾರ್ಥಿಗಳಿಗೆ ಜೀವನ ರೂಪಿಸಿಕೊಳ್ಳಲು ಸಹಕಾರಿಯಾಗಿದೆ. ಈಗಾಗಲೇ ದೇಶದಾದ್ಯಂತ 402832 ಅಭ್ಯರ್ಥಿಗಳು ನೋಂದಣಿ ಮಾಡಿಕೊಂಡಿದ್ದು, 256385 ತರಬೇತಿ ಪೂರ್ಣಗೊಳಿಸಿದ್ದಾರೆ.

•► ಪ್ರಸ್ತುತ ನೋಂದಣಿ ನಡೆಯುತ್ತಿದ್ದು, ಅ.31ಕ್ಕೆ ಮುಕ್ತಾಯವಾಗಲಿದೆ. ಮುಂದಿನ ನೋಂದಣಿ ನ.10ರಿಂದ 20ರವರೆಗೂ ನಡೆಯಲಿದೆ. ಮಾಹಿತಿಗಾಗಿ http://pmkvyofficial.org/Index.aspx ಸಂಪರ್ಕಿಸಬಹುದು.

...ಮುಂದುವರೆಯುವುದು. 

1 comment:

  1. Sir
    Nanagu civil police Aguva ase adaka nangu help sir
    Nana home kade hinda tuba problems barateve Adaka sir plz plz sir notes and tips hele sir
    Plz

    ReplyDelete