"ಮನುಷ್ಯ ದೀಪವಾದರೂ ಆಗಬೇಕು, ಕನ್ನಡಿಯಾದರೂ ಆಗಬೇಕು. ಒಂದು ಬೆಳಕನ್ನು ಕೊಡುತ್ತದೆ ಮತ್ತೊಂದು ಅದನ್ನು ಪ್ರತಿಬಿಂಬಿಸುತ್ತದೆ. ಪ್ರತಿಯೊಬ್ಬರೂ ದೀಪ ಆಗದೇ ಹೋಗಬಹುದು ಆದರೆ ಕನ್ನಡಿ ಆಗಬಲ್ಲರು. ತಿಳಿದಿರುವ ಜ್ಞಾನವನ್ನು ಮತ್ತೊಬ್ಬರಿಗೆ ಹಂಚುವುದೇ ಜೀವನ.."—ಅರಿಸ್ಟಾಟಲ್

Saturday, 12 November 2016

●.ಇತ್ತೀಚೆಗೆ ಭಾರತೀಯ ನೌಕಾಪಡೆಗೆ ಸೇರ್ಪಡೆಗೊಂಡ ಸಂಪೂರ್ಣ ದೇಶೀಯ ನಿರ್ಮಾಣದ ಮೊದಲ ಅಣುಶಕ್ತಿ ಚಾಲಿತ ಜಲಾಂತರ್ಗಾಮಿ 'ಐಎನ್‌ಎಸ್‌ ಅರಿಹಂತ್‌' ಕುರಿತ ಪ್ರಮುಖ ಮಾಹಿತಿಗಳು: (INS Arihant Submarine)

●.ಇತ್ತೀಚೆಗೆ ಭಾರತೀಯ ನೌಕಾಪಡೆಗೆ ಸೇರ್ಪಡೆಗೊಂಡ ಸಂಪೂರ್ಣ ದೇಶೀಯ ನಿರ್ಮಾಣದ ಮೊದಲ ಅಣುಶಕ್ತಿ ಚಾಲಿತ ಜಲಾಂತರ್ಗಾಮಿ 'ಐಎನ್‌ಎಸ್‌ ಅರಿಹಂತ್‌' ಕುರಿತ ಪ್ರಮುಖ ಮಾಹಿತಿಗಳು:
(INS Arihant Submarine)
━━━━━━━━━━━━━━━━━━━━━━━━━━━━━━━━━━━━━━━━━━━━━

★ ಪ್ರಚಲಿತ ಘಟನೆಗಳು
(current Affairs)

★ ವಿಜ್ಞಾನ ಮತ್ತು ತಂತ್ರಜ್ಞಾನ
(Science and Technology)



ಬಹುನಿರೀಕ್ಷಿತ, ಅಣುಶಕ್ತಿ ಚಾಲಿತ ಜಲಾಂತರ್ಗಾಮಿ ಐಎನ್‌ಎಸ್‌ ಅರಿಹಂತ್‌ ಇದೀಗ ಭಾರತೀಯ ನೌಕಾಪಡೆ ಬತ್ತಳಿಕೆಗೆ ಸದ್ದಿಲ್ಲದೇ ಸೇರ್ಪಡೆಯಾಗಿದೆ. ಅಣುಶಕ್ತಿ ಚಾಲಿತ, ಅಣ್ವಸ್ತ್ರ ಸಜ್ಜಿತ ಕ್ಷಿಪಣಿಗಳನ್ನು ಉಡಾಯಿಸಬಲ್ಲ ಸಾಮರ್ಥ್ಯದ ಸಂಪೂರ್ಣ ದೇಶೀಯ ನಿರ್ಮಾಣದ ಮೊದಲ ಜಲಾಂತರ್ಗಾಮಿ ಇದಾಗಿದೆ. ಭಾರತೀಯ ಸಾಗರ ತೀರದಲ್ಲಿ ಹೆಚ್ಚಿನ ಕಣ್ಗಾವಲಿನೊಂದಿಗೆ ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿದ ಶತ್ರುನಾಶಕ ಜಲಾಂತರ್ಗಾಮಿ ಇದಾಗಿದೆ. ಈ ಹಿನ್ನೆಲೆಯಲ್ಲಿ 'ಅರಿಹಂತ್‌' ಕುರಿತ ಪ್ರಮುಖ ಮಾಹಿತಿಗಳು ಇಲ್ಲಿವೆ.


•► ಕೊನೆಗೂ ಕನಸು ನನಸು

ಐಎನ್‌ಎಸ್‌ ಅರಿಹಂತ್‌ನ ಯೋಜನೆ ತುಂಬ ಹಳೆಯದು. 1970ರಲ್ಲೇ ಭಾರತ ಈ ಬಗ್ಗೆ ಚಿಂತಿಸಿತ್ತು. ಆದರೆ ಯೋಜನೆಗೆ ಕೇಂದ್ರ ಸರ್ಕಾರದಿಂದ ಹಸಿರು ನಿಶಾನೆ ಸಿಕ್ಕಿದ್ದು 1984ರಲ್ಲಿ, ಕೆಲಸ ಶುರುವಾಗಿದ್ದು 1998ರಲ್ಲಿ. ವಿವಿಧ ಖಾಸಗಿ ಕಂಪನಿಗಳ ನೆರವಿನೊಂದಿಗೆ ವಿಶಾಖಪಟ್ಟಣದ ಎಸ್‌ಬಿಸಿ 'ಶಿಪ್‌ಬಿಲ್ಡಿಂಗ್‌ ಸೆಂಟರ್‌'ನಲ್ಲಿ ಐಎನ್‌ಎಸ್‌ ಅರಿಹಂತ್‌ ಜನ್ಮ ತಳೆದಿತ್ತು. 2009ರಲ್ಲಿ ಇದನ್ನು ಮೊದಲ ಬಾರಿಗೆ ನೀರಿಗಿಳಿಸಲಾಗಿತ್ತು. ಬಳಿಕ ಇದರ ವ್ಯಾಪಕ ಸಂಶೋಧನೆ, ಯುದ್ಧ ಸಾಮರ್ಥ್ಯ ಪರೀಕ್ಷೆಗಳು ನಡೆದಿದ್ದು, ಇದೀಗ ನೌಕಾಪಡೆ ಬತ್ತಳಿಕೆಗೆ ಸೇರಿದೆ.


•► ವಿನ್ಯಾಸದ ನೆರವಿಗೆ ರಷ್ಯಾ

ಐಎನ್‌ಎಸ್‌ ಅರಿಹಂತ್‌ ವಿನ್ಯಾಸದ ಮೂಲ ರಷ್ಯಾದ್ದು. ಈ ಅಣುಜಲಾಂತರ್ಗಾಮಿಯ ರೂಪುರೇಷೆ ಬಗ್ಗೆ ಭಾಬಾ ಪರಮಾಣು ಸಂಶೋಧನಾ ಕೇಂದ್ರದ ವಿಜ್ಞಾನಿಗಳೊಂದಿಗೆ ರಷ್ಯಾ ನೆರವು ನೀಡಿದೆ. ಜೊತೆಗೆ ಅಣು ರಿಯಾಕ್ಟರನ್ನು ಜಲಾಂತರ್ಗಾಮಿ ಒಳಗೆ ಕೂರಿಸುವುದರಲ್ಲೂ ನೆರವು ನೀಡಿದೆ. ಹಿಂದಿನಿಂದಲೂ ಭಾರತದ ರಕ್ಷಣಾ ಕ್ಷೇತ್ರಕ್ಕೆ ರಷ್ಯಾ ನೆರವು ನೀಡುತ್ತಲೇ ಬಂದಿದ್ದು, ಅದನ್ನು ಅರಿಹಂತ್‌ ವಿಚಾರದಲ್ಲೂ ಆ ದೇಶ ಮುಂದುವರಿಸಿತ್ತು.


•► ಭಾರತದ ಪ್ಲಾನ್‌ ಏನು?

ಐಎನ್‌ಎಸ್‌ ಅರಿಹಂತ್‌ ಒಂದೇ ಅಲ್ಲ. ಭಾರತ ಸದ್ಯ ಒಟ್ಟು ಐದು ಅಣುಚಾಲಿತ ಜಲಾಂತರ್ಗಾಮಿಗಳನ್ನು ಹೊಂದಲು ಪ್ಲಾನ್‌ ಮಾಡಿದೆ. ಅದರಲ್ಲಿ ಐಎನ್‌ಎಸ್‌ ಅರಿಹಂತ್‌ ಮೊದಲನೆಯದ್ದು. ರಷ್ಯಾದ ನೆರವಿನೊಂದಿಗೆ 'ಎಸ್‌ಎಸ್‌ಬಿಎನ್‌' (ಅಣುಚಾಲಿತ ಜಲಾಂತರ್ಗಾಮಿ) ನಿರ್ಮಾಣದ ಯೋಜನೆಗಳಿಗೆ ಭಾರತ ಈಗಾಗಲೇ ಕೈ ಹಾಕಿದೆ.


•► ಕ್ಷಿಪಣಿ ಶಕ್ತಿ

ಐಎನ್‌ಎಸ್‌ ಅರಿಹಂತ್‌ನ ಶಕ್ತಿ ಕೆ-5, ಕೆ-4 ಮಾದರಿ ಕ್ಷಿಪಣಿಗಳು. 12 ಕೆ-5 ಕಡಿಮೆ ದೂರದ ಕ್ಷಿಪಣಿಗಳು ಮತ್ತು 10 ದೂರಗಾಮಿ ಮಾದರಿಯ ಕ್ಷಿಪಣಿಗಳನ್ನು ಇದು ಹೊಂದಿರುತ್ತದೆ. ಈ ಕ್ಷಿಪಣಿಗಳು ಸುಮಾರು 1 ಟನ್‌ಗಳಷ್ಟು ಅಣ್ವಸ್ತ್ರ ಸಿಡಿತಲೆಗಳನ್ನು ಹೊತ್ತೂಯ್ಯಬಲ್ಲದು. ಜೊತೆಗೆ 200ಕೇಜಿ ಸಿಡಿತಲೆಗಳನ್ನು ಇಡುವ ಮೂಲಕ ಅದರ ದೂರವನ್ನೂ ಹೆಚ್ಚಿಸಬಹುದು. ಇದರೊಂದಿಗೆ ಕೆ- 4 ಮಾದರಿಯ ಅಣ್ವಸ್ತ್ರ ಸಿಡಿತಲೆ ಹೊಂದಿರುವ 4 ಕ್ಷಿಪಣಿಗಳನ್ನೂ ಇದು ಹೊಂದಿರಲಿದೆ. 3500 ಕಿ.ಮೀ.ಗುರಿಯನ್ನು ಇದು ಛೇದಿಸುತ್ತದೆ.


•► ನೆಲ-ಜಲ-ಆಗಸದಿಂದ ಅಣ್ವಸ್ತ್ರ ದಾಳಿಗೆ ಭಾರತ ಸೈ

ಮೂರೂ ವಿಧಗಳಲ್ಲಿ ಅಣ್ವಸ್ತ್ರ ದಾಳಿ ನಡೆಸುವ ಸಾಮರ್ಥ್ಯ ಇದೀಗ ಭಾರತಕ್ಕೆ ಬಂದಿದೆ. ಐಎನ್‌ಎಸ್‌ ಅರಿಹಂತ್‌ ಸೇರ್ಪಡೆಯಿಂದ ಇದು ಸಾಧ್ಯವಾಗಿದೆ. ವಿಶ್ವದಲ್ಲಿ ಬೆರಳೆಣಿಕೆಯ ರಾಷ್ಟ್ರಗಳು ಮಾತ್ರ ಇಂತಹ ದಾಳಿ ಸಾಮರ್ಥ್ಯವನ್ನು ಹೊಂದಿದೆ. ಮೊದಲು ಭಾರತ ನೆಲ-ಆಗಸದಿಂದ ಅಣ್ವಸ್ತ್ರ ದಾಳಿ ನಡೆಸುವ ಸಾಮರ್ಥ್ಯವನ್ನು ಹೊಂದಿತ್ತು. ಮಿರಾಜ್‌, ಸುಖೋಯ್‌ ವಿಮಾನಗಳ ಮೂಲಕ ಅಣು ಬಾಂಬ್‌ ದಾಳಿ ನಡೆಸುವ ಸಾಮರ್ಥ್ಯ ಹೊಂದಿತ್ತು. ಇದರೊಂದಿಗೆ ಅಗಿ ಮಾದರಿಯ ಕಿಪಣಿಗಳೂ ಭಾರತಕ್ಕೆ ನೆಲದಿಂದ ದಾಳಿ ನಡೆಸುವ ಸಾಮರ್ಥ್ಯ ತಂದುಕೊಟ್ಟಿದ್ದವು. ಇದೀಗ ಸಮುದ್ರದಾಳದಿಂದ ಅಣ್ವಸ್ತ್ರ ದಾಳಿ ನಡೆಸುವ ಸಾಮರ್ಥ್ಯ ಪಡೆದ ಅರಿಹಂತ್‌ ಕೊರತೆಯನ್ನು ತುಂಬಿಸಿದೆ. ಇದು ಶತ್ರು ರಾಷ್ಟ್ರಗಳ ಪಾಲಿಗೆ ಎಚ್ಚರಿಕೆಯ ಗಂಟೆಯೂ ಹೌದು.



•► ತಾಂತ್ರಿಕ ಮಾಹಿತಿಗಳು :

- 6 ಸಾವಿರ ಟನ್‌ ಒಟ್ಟು ತೂಕ

- 111 ಮೀ. ಒಟ್ಟು ಉದ್ದ

- 22-28 ಕಿ.ಮೀ. ಸಮುದ್ರದ ಮೇಲ್ಭಾಗದಲ್ಲಿ ಸಂಚರಿಸುವ ವೇಗ

- 44 ಕಿ.ಮೀ. ಸಮುದ್ರಾಳದಲ್ಲಿ ಸಂಚರಿಸುವ ವೇಗ

- 1,11,305 ಲಕ್ಷ ಎಚ್‌.ಪಿ.ಯ ಎಂಜಿನ್‌

- 95-100 ನಾವಿಕರನ್ನು ಹೊತ್ತೂಯ್ಯುವ ಸಾಮರ್ಥ್ಯ



•► ವಿಶೇಷತೆಗಳೇನು?

- ಅಣು ಚಾಲಿತ ಸಂಪೂರ್ಣ ಸ್ವದೇಶಿ ನಿರ್ಮಿತ

- ಕೆ-4 ಹೆಸರಿನ 3500 ಕಿ.ಮೀ. ದೂರದ ವ್ಯಾಪ್ತಿಯ ಅಣ್ವಸ್ತ್ರ ಸಿಡಿತಲೆ ಹೊತ್ತೂಯ್ಯುವ ಸಾಮರ್ಥಯದ ಕ್ಷಿಪಣಿಗಳ ಉಡಾವಣೆ ಮಾಡುವ ಸಾಮರ್ಥ್ಯ ಹೊಂದಿದೆ. ಬೊ5 ಹೆಸರಿನ ಕ್ಷಿಪಣಿಗಳು

- ಸಮುದ್ರದಾಳದಿಂದ ಅಣ್ವಸ್ತ್ರ ದಾಳಿ ನಡೆಸುವ ಸಾಮರ್ಥ್ಯ ಹೊಂದಿದ ಪ್ರಥಮ ಜಲಾಂತರ್ಗಾಮಿ ಅತ್ಯಾಧುನಿಕ ಟಾರ್ಪೆಡೋಗಳನ್ನು ಹೊಂದಿದೆ.

- ಭೂಮಿಯ ಮೇಲಿನ, ಇತರ ನೌಕೆ ಗುರಿಗಳಿಗೂ ದಾಳಿ ನಡೆಸುವ ಸಾಮರ್ಥ್ಯ

- ಅಣು ಚಾಲಿತ ಜಲಾಂತರ್ಗಾಮಿಗಳ ನಿರ್ಮಾಣ ವಿಶ್ವದಲ್ಲಿ ಕೇವಲ 6 ರಾಷ್ಟ್ರಗಳಿಗೆ ಮಾತ್ರ ಗೊತ್ತಿದ್ದು, ಇವುಗಳಲ್ಲಿ ಭಾರತವೂ ಒಂದು.

- ಅಡ್ವಾನ್ಸ್‌ಡ್‌ ಟೆಕ್ನಾಲಜಿ ವೆಸೆಲ್ಸ್‌ (ಎಟಿವಿ) ಯೋಜನೆ ಅಡಿಯಲ್ಲಿ ಐಎನ್‌ಎಸ್‌ ಅರಿಹಂತ್‌ ನಿರ್ಮಾಣ ಅತಿ ಪ್ರಬಲ, ಶತ್ರು ನೌಕೆಗಳನ್ನು ಕಂಡುಹಿಡಿವ ಯುಎಸ್‌ ಎಚ್‌ಯುಎಸ್‌ ಸೋನಾರ್‌ ಉಪಕರಣಗಳು

(courtesy :ಉದಯವಾಣಿ)

No comments:

Post a Comment