"ಮನುಷ್ಯ ದೀಪವಾದರೂ ಆಗಬೇಕು, ಕನ್ನಡಿಯಾದರೂ ಆಗಬೇಕು. ಒಂದು ಬೆಳಕನ್ನು ಕೊಡುತ್ತದೆ ಮತ್ತೊಂದು ಅದನ್ನು ಪ್ರತಿಬಿಂಬಿಸುತ್ತದೆ. ಪ್ರತಿಯೊಬ್ಬರೂ ದೀಪ ಆಗದೇ ಹೋಗಬಹುದು ಆದರೆ ಕನ್ನಡಿ ಆಗಬಲ್ಲರು. ತಿಳಿದಿರುವ ಜ್ಞಾನವನ್ನು ಮತ್ತೊಬ್ಬರಿಗೆ ಹಂಚುವುದೇ ಜೀವನ.."—ಅರಿಸ್ಟಾಟಲ್

Thursday 29 December 2016

☀️ ಭಾಗ - IV: 2016 ರ ಪ್ರಮುಖ ಸ್ಥಳೀಯ / ರಾಷ್ಟ್ರೀಯ / ಅಂತರರಾಷ್ಟ್ರೀಯ ಘಟನೆಗಳು - ಒಂದು ಹಿನ್ನೋಟ : (Important Current Affairs of 2016 at glance)

☀️ ಭಾಗ - IV: 2016 ರ ಪ್ರಮುಖ ಸ್ಥಳೀಯ / ರಾಷ್ಟ್ರೀಯ / ಅಂತರರಾಷ್ಟ್ರೀಯ ಘಟನೆಗಳು - ಒಂದು ಹಿನ್ನೋಟ :
(Important Current Affairs of 2016 at glance)
━━━━━━━━━━━━━━━━━━━━━━━━━━━━━━━━━━━━━━━━━━━━━

★ 2016ರ ಪ್ರಚಲಿತ ಘಟನೆಗಳು.
(2016 current affairs in short)

...ಮುಂದುವರೆದ ಭಾಗ.



•►  ಬಜೆಟ್ ಘೊಷಣೆ

ರಾಜ್ಯ ಸರ್ಕಾರ:

*.ಕೃಷಿ ಅನುದಾನ 4,344 ಕೋಟಿ ರೂ.
*.ವಿಶೇಷ ಕೃಷಿ ವಲಯ ಸ್ಥಾಪನೆ
*.ಸುವರ್ಣ ಕೃಷಿ ಗ್ರಾಮ
*.ಕೃಷಿ ನವೋದ್ಯಮ
*.ಕರ್ನಾಟಕ ರಾಜ್ಯ ಕೃಷಿ ಮತ್ತು ರೈತರ ಕಲ್ಯಾಣ ಸಮಿತಿ ರಚನೆ
*.ಆರ್.ಕೆ.ವಿ.ವೈ., ಕೃಷಿ ಭಾಗ್ಯ ಹಾಗೂ ಮುಖ್ಯಮಂತ್ರಿಗಳ ಸೂಕ್ಷ್ಮ ನೀರಾವರಿ ಯೋಜನೆ
*/740 ರೈತ ಸಂಪರ್ಕ ಕೇಂದ್ರದ ವ್ಯಾಪ್ತಿಯಲ್ಲಿರುವ 12 ಲಕ್ಷ ರೈತರಿಗೆ ಹವಾಮಾನ ಮುನ್ಸೂಚನೆ, ಕೃಷಿ ಸಲಹೆ

•► ತೋಟಗಾರಿಕೆಗೆ 753 ಕೋಟಿ ರೂ.

*.ತೋಟಗಾರಿಕೆ ಪ್ರದೇಶವನ್ನು ಪ್ರತಿವರ್ಷ ಶೇ.5ರಂತೆ ಮತ್ತು ಉತ್ಪಾದನೆ ಶೇ.8.7 ದರದಲ್ಲಿ ಹೆಚ್ಚಿಸುವ ಪ್ರಸ್ತಾಪ.
*.ಆಲೂಗಡ್ಡೆ ಬೆಳೆಗಾರರಿಗೆ ಕೆ.ಜಿ.ಗೆ 10 ರೂ.ಗಳವರೆಗೆ ಶೇ.50ರಷ್ಟು ಸಹಾಯಧನ.
*.ಪಶುಸಂಗೋಪನೆಗೆ 1886 ಕೋಟಿ ರೂ.
*.ದೇಶೀಯ ತಳಿ ಪಶುಗಳ ವೀರ್ಯ ಬ್ಯಾಂಕ್​ಗಳ ಸ್ಥಾಪನೆ, ಸ್ಥಳೀಯ ತಳಿಗಳ ಹಾಲು ಸಂಗ್ರಹಣೆ, ಮಾರಾಟ ವ್ಯವಸ್ಥೆ
*.ಅನಿಯಂತ್ರಿತ ತಳಿ ಸಂವರ್ಧನಾ ಚಟುವಟಿಕೆ ನಿಯಂತ್ರಿಸಲು ‘ಕರ್ನಾಟಕ ಪಶು ತಳಿ ವಿಧೇಯಕ’ ಜಾರಿ.
*.ಕೆಎಂಎಫ್ ಹೂಡಿಕೆಯೊಡನೆ ಹಾಸನದ ಅರಕಲಗೂಡಿನಲ್ಲಿ ಪಶು ಆಹಾರ ಘಟಕ ಸ್ಥಾಪನೆ.

•►  ಮೀನುಗಾರಿಕೆಗೆ 302 ಕೋಟಿ ರೂ.

*.ಮತ್ಸ್ಯಾಶ್ರಯ ಯೋಜನೆಯಡಿ ವಸತಿರಹಿತ ಮೀನುಗಾರರಿಗೆ 3000 ಮನೆಗಳ ನಿರ್ವಣ.

 •►  ಸಹಕಾರಕ್ಕೆ 1463 ಕೋಟಿ ರೂ.

*.2016-17ನೇ ಸಾಲಿನಲ್ಲಿ 23 ಲಕ್ಷ ರೈತರಿಗೆ 11 ಸಾವಿರ ಕೋಟಿ ರೂ. ಕೃಷಿ ಸಾಲ ವಿತರಿಸುವ ಗುರಿ.
ಉಗಾಣ ನಿಗಮದ ಗೋದಾಮುಗಳ ಮೇಲ್ಛಾವಣಿಗಳ ಮೇಲೆ 1.8 ಕೋಟಿ ಚ.ಅಡಿ ವಿಸ್ತೀರ್ಣದ ಸೌರಶಕ್ತಿ ಪ್ಯಾನಲ್​ಗಳನ್ನು ಅಳವಡಿಸಿ 150 ಮೆ.ವ್ಯಾ. ವಿದ್ಯುತ್ ಉತ್ಪಾದಿಸಲು ಖಾಸಗಿ ಸಹಭಾಗಿತ್ವ ಮತ್ತು ಬಂಡವಾಳದೊಂದಿಗೆ ಯೋಜನೆ.
* ಎಪಿಎಂಸಿಯಲ್ಲಿ ಮಹಿಳಾ ಪ್ರಾತಿನಿಧ್ಯವನ್ನು 1ರಿಂದ 3ಕ್ಕೆ ಹೆಚ್ಚಿಸಲು ಉದ್ದೇಶ.


•► ಕೇಂದ್ರ ಸರ್ಕಾರ
ಕೃಷಿ/ಕೃಷಿಕರ ಕಲ್ಯಾಣ ಅನುದಾನ 35,984 ಕೋಟಿ ರೂ.

*.‘ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆ’ ಸಮರೋಪಾದಿಯಲ್ಲಿ ಅನುಷ್ಠಾನ, ಮೂರು ವರ್ಷಗಳ ಅವಧಿಯಲ್ಲಿ 28.5 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಸಾವಯವ ಕೃಷಿ, 5 ಲಕ್ಷ ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ.
*.ಎಐಬಿಪಿ ಯೋಜನೆ ಅಡಿ ದೀರ್ಘಕಾಲದಿಂದ ಬಾಕಿ ಇರುವ 89 ನೀರಾವರಿ ಯೋಜನೆ ಅನುಷ್ಠಾನ ಪ್ರಕ್ರಿಯೆ ತ್ವರಿತಗೊಳಿಸುವಿಕೆ
*.ಆರಂಭಿಕ 20,000 ಕೋಟಿ ರೂಪಾಯಿಗಳ ಮೂಲನಿಧಿಯೊಂದಿಗೆ ನಬಾರ್ಡ್​ನಲ್ಲಿ ದೀರ್ಘಾವಧಿಯ ನೀರಾವರಿ ನಿಧಿ ಸ್ಥಾಪನೆ
*.ಅಂತರ್ಜಲ ಮೂಲಗಳ ಸುಸ್ಥಿರ ನಿರ್ವಹಣೆಯ ಕಾರ್ಯಕ್ರಮ ಅನುಷ್ಠಾನಕ್ಕೆ ವಿವಿಧ ಮೂಲಗಳಿಂದ 6,000 ಕೋಟಿ ರೂ. ಮೀಸಲು
*.ನರೇಗಾ ಯೋಜನೆಯಂತೆ, ಮಳೆಯಾ ಧಾರಿತ ಕೃಷಿ ಪ್ರದೇಶಗಳಲ್ಲಿ 5 ಲಕ್ಷ ಕೃಷಿ ಹೊಂಡ, ಸಾವಯವ ಗೊಬ್ಬರ ತಯಾರಿಕೆಗೆ 10 ಲಕ್ಷ *.ಗೊಬ್ಬರದ ಹೊಂಡ ರಚನೆ
*.ಮುಂದಿನ ಮೂರು ವರ್ಷಗಳ ಅವಧಿಯಲ್ಲಿ ದೇಶದಲ್ಲಿ ಗೊಬ್ಬರದ ಕಂಪನಿ ಗಳ 2,000 ಮಾದರಿ ಔಟ್​ಲೆಟ್​ಗಳ ಸ್ಥಾಪನೆ
*.ರೈತರ ಸಾಲ ಮರುಪಾವತಿ ಹೊರೆ ಕಡಿಮೆ ಮಾಡುವುದಕ್ಕಾಗಿ ಬಡ್ಡಿ ಭರಿಸುವುದಕ್ಕೆ 15,000 ಕೋಟಿ ರೂ. ಅನುದಾನ
*.ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಗೆ 5,500 ಕೋಟಿ ರೂ.

 ಸಂಕ್ರಾಂತಿ ಕೊಡುಗೆ
•► ಫಸಲ್ ಬಿಮಾ: ಬರ, ಅನಾವೃಷ್ಟಿ ಸೇರಿದಂತೆ ನೈಸರ್ಗಿಕ ವಿಕೋಪಗಳಿಂದ ಅಪಾರ ಬೆಳೆ ಹಾನಿ ಸಂಭವಿಸಿದ ಸಂದರ್ಭದಲ್ಲಿ ರೈತರಿಗೆ ನೆರವು ನೀಡುವ ಉದ್ದೇಶದಿಂದ 2016 ಜ.13ರಂದು ಈ ಯೋಜನೆ ಜಾರಿಗೊಳಿಸಲಾಗಿದೆ. ಈ ಯೋಜನೆಯಲ್ಲಿ ಮುಂಗಾರು ಬೆಳೆಗೆ ವಿಮೆ ಪ್ರೀಮಿಯಂನ ಶೇ. 2ರಷ್ಟು ಹಾಗೂ ಹಿಂಗಾರು ಬೆಳೆಗಳಿಗೆ ಪ್ರೀಮಿಯಂನ ಶೇ. 1.5ರಷ್ಟನ್ನು ರೈತರು ಪಾವತಿಸಿದರೆ ಸಾಕು. ವಾರ್ಷಿಕ ವಾಣಿಜ್ಯ ಹಾಗೂ ತೋಟಗಾರಿಕೆ ಬೆಳೆಗೆ ಮಾತ್ರ ಶೇ. 5ರಷ್ಟು ಪ್ರೀಮಿಯಂ ಭರಿಸಬೇಕು. ವಿಮೆಯ ಉಳಿದ ಮೊತ್ತವನ್ನು ರಾಜ್ಯ ಮತ್ತು ಕೇಂದ್ರ ಸರ್ಕಾರಗಳೇ ಭರಿಸುತ್ತವೆ. 27 ಆಹಾರ ಮತ್ತು ಎಣ್ಣೆಕಾಳು ಬೆಳೆಗಳು, 14 ವಾಣಿಜ್ಯ ಮತ್ತು ತೋಟಗಾರಿಕೆ ಬೆಳೆಗಳಿಗೆ ಈ ಸೌಲಭ್ಯ ದೊರೆತಿದೆ.

•► ಒಂದು ದೇಶ-ಒಂದು ಮಂಡಿ!:
ರೈತರ ಉತ್ಪನ್ನಗಳಿಗೆ ಬೇಡಿಕೆ ನಿರ್ವಿುಸುವ ನಿಟ್ಟಿನಲ್ಲಿ ‘ಒಂದು ದೇಶ ಒಂದು ಮಂಡಿ’ಗೆ ಚಾಲನೆ ನೀಡಲಾಗಿದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ಇ-ಮಂಡಿಗೆ ಚಾಲನೆ ಸಿಕ್ಕಿದೆ. 8 ರಾಜ್ಯಗಳಲ್ಲಿ 21 ಮಂಡಿಗಳ ಅಭಿವೃದ್ಧಿ ಮಾಡಲಾಗಿದೆ. 12 ರಾಜ್ಯಗಳಲ್ಲಿ 365 ಮಂಡಿಗಳ ಬೇಡಿಕೆ ಪೂರೈಸಲು ಕೇಂದ್ರ ಮುಂದಾಗಿದೆ. 2018ಕ್ಕೆ ದೇಶಾದ್ಯಂತ 585 ಮಂಡಿಗಳನ್ನು ಸ್ಥಾಪಿಸುವುದರ ಜತೆಗೆ ಎಲ್ಲ ಮಂಡಿಗಳನ್ನು ಇ-ವ್ಯಾಪಾರದ ವ್ಯಾಪ್ತಿಗೆ ತರುವ ಗುರಿ ಹೊಂದಲಾಗಿದೆ. ಮಂಡಿ ಯೋಜನೆಯಡಿ 17 ರಾಜ್ಯಗಳು ಈಗಾಗಲೇ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿವೆ.

•► ಕರ್ನಾಟಕ ಮಾದರಿ:
ರಾಜ್ಯದಲ್ಲಿ ಈಗಾಗಲೇ ಏಕೀಕೃತ ಮಾರುಕಟ್ಟೆ ವ್ಯವಸ್ಥೆ ಜಾರಿಯಲ್ಲಿದೆ. ರಾಜ್ಯದ 105 ಎಪಿಎಂಸಿಗಳನ್ನು ಆನ್​ಲೈನ್ ಮೂಲಕ ಸಮನ್ವಯಗೊಳಿಸಲಾಗಿದ್ದು, ಈ ಮಾರುಕಟ್ಟೆಗೆ ರೈತರು ತರುವ ಕೃಷಿ ಉತ್ಪನ್ನಗಳಿಗೆ ಆನ್​ಲೈನ್ ಮೂಲಕ ಬಿಡ್ ಸಲ್ಲಿಸಬಹುದು. ಪ್ರತಿದಿನ ಮಾರುಕಟ್ಟೆಗೆ ಬರುವ ಉತ್ಪನ್ನಗಳು, ಅವುಗಳ ಬೆಲೆಗಳ ಕುರಿತೂ ರೈತರಿಗೆ ಮಾಹಿತಿ ನೀಡಲಾಗುತ್ತಿದೆ.

•► ಮೊದಲ ತದ್ರೂಪಿ ಮೇಕೆ:
ಚೀನಾದ ಯುನ್ನಾನ್ ಮತ್ತು ಮಂಗೋಲಿಯಾ ಪ್ರಾಂತ್ಯದ ಕೃಷಿ ವಿವಿಗಳು ಡಿಸೆಂಬರ್ 18ರಂದು ತದ್ರೂಪಿ ಮೇಕೆಯನ್ನು ಸೃಷ್ಟಿಸಿದ್ದಾರೆ. ಇದು ವಿಶ್ವದ ಮೊದಲ ತದ್ರೂಪಿ ಮೇಕೆ. ಈ ತಳಿಯಿಂದ ಸಿಗುವ ಕ್ಯಾಶ್​ವಿುಯರ್ ಉಣ್ಣೆ ಇನ್ನಷ್ಟು ತೆಳ್ಳಗಿರಲಿದೆ. ಅಂದರೆ ಕ್ಯಾಶ್​ವಿುಯರ್ ಉಣ್ಣೆಗಾಗಿ ಖ್ಯಾತಿ ಪಡೆದಿರುವ ಇರ್ಲಾಂಗ್ ಬೆಟ್ಟದ ಮೇಕೆಗಳ ಉಣ್ಣೆ 15.8 ಮೈಕ್ರೋ ಮೀಟರ್​ನಷ್ಟು ತೆಳ್ಳಗಿದ್ದರೆ ನೂತನ ತಳಿಯ ಉಣ್ಣೆ 13.8 ಮೈಕ್ರೋಮೀಟರ್​ನಷ್ಟಿರಲಿದೆ.


•► ಸಾಧನೆ ಘೊಷಣೆ

•► ಬಾಸ್ಮತಿ ಪರಿಮಳ:
ಪಂಜಾಬ್, ಹರಿಯಾಣ, ಹಿಮಾಚಲ ಪ್ರದೇಶ, ಉತ್ತರಾಖಂಡ, ಉತ್ತರಪ್ರದೇಶ ಹಾಗೂ ಜಮ್ಮುಕಾಶ್ಮೀರಗಳಲ್ಲಿ ಬೆಳೆಯುವ ಬಾಸ್ಮತಿ ಅಕ್ಕಿಗೆ ಭೌಗೋಳಿಕ ಸಂಕೇತ(ಜಿಐ)ದ ಟ್ಯಾಗ್ ನೀಡುವಂತೆ ಇಂಟಲೆಕ್ಚುವಲ್ ಪ್ರಾಪರ್ಟಿ ಅಪ್ಪಿಲೇಟ್ ಬೋರ್ಡ್ ಫೆಬ್ರವರಿಯಲ್ಲಿ ಜಿಯಾಗ್ರಫಿಕಲ್ ಇಂಡಿಕೇಷನ್ಸ್ ರಿಜಿಸ್ಟ್ರಿಗೆ ಆದೇಶಿಸಿತ್ತು.

•► ಕಬ್ಬಿನ ಜಲ್ಲೆಯಿಂದ ಕಾರ್ಬನ್ ಉತ್ಪಾದನೆ:
ಪುಣೆಯ ನ್ಯಾಷನಲ್ ಕೆಮಿಕಲ್ ಲ್ಯಾಬ್ ಮತ್ತು ಇಂಡಿಯನ್ ಇನಿಸ್ಟಿಟ್ಯೂಟ್ ಆಫ್ ಸೈನ್ಸ್ ಆಂಡ್ ರೀಸರ್ಚ್​ನ ವಿಜ್ಞಾನಿಗಳ ತಂಡ ಕಬ್ಬಿನ ಜಲ್ಲೆಯಿಂದ ಗರಿಷ್ಠ ಗುಣಮಟ್ಟದ ಕಾರ್ಬನ್ ಉತ್ಪಾದಿಸಬಹುದೆಂಬುದನ್ನು ವರ್ಷದ ಮಧ್ಯಭಾಗದಲ್ಲಿ ಕಂಡುಕೊಂಡಿದ್ದಾರೆ. ಇದನ್ನು ಲಿಯೋನ್ ಬ್ಯಾಟರಿಗಳಲ್ಲಿ ಬಳಸುವುದು ಸಾಧ್ಯ ಎಂಬುದನ್ನೂ ಸಾಬೀತು ಪಡಿಸಿದ್ದಾರೆ.

•► ಸಿಕ್ಕಿಂಗೆ ಸಿಕ್ಕಿದ ಸಾವಯವ ಗರಿ:
ಗ್ಯಾಂಗ್ಟಕ್​ನಲ್ಲಿ ಜನವರಿ 4ರಂದು ‘ಸುಸ್ಥಿರ ಕೃಷಿ’ ಸಮಾವೇಶ ಉದ್ಘಾಟಿಸಿದ ಪ್ರಧಾನಮಂತ್ರಿ ನರೇಂದ್ರ ಮೋದಿ, ‘ಸಿಕ್ಕಿಂ ಅನ್ನು ದೇಶದ ಮೊದಲ ಸಾವಯವ ರಾಜ್ಯ’ ಎಂದು ಘೊಷಿಸಿದರು. ಸಿಕ್ಕಿಂನ 75,000 ಹೆಕ್ಟೇರ್ ವಿಸ್ತಾರದ ಕೃಷಿ ಭೂಮಿಯಲ್ಲಿ ಸಾವಯವ ಪದ್ಧತಿಯ ಕೃಷಿಯನ್ನು ಅಳವಡಿಸಿಕೊಳ್ಳಲಾಗಿದೆ.

•► ಮತ್ತೆ ಕುಲಾಂತರಿ ಸದ್ದು:
ದೆಹಲಿ ವಿಶ್ವವಿದ್ಯಾಲಯ ಸಿದ್ಧಪಡಿಸಿದ ಕುಲಾಂತರಿ ಸಾಸಿವೆ ಡಿಎಂಎಚ್-11 ಹಾಗೂ ಇತರ ಎರಡು ತಳಿಗಳು ಮಾನವ, ಪ್ರಾಣಿಗಳು ಹಾಗೂ ಪರಿಸರಕ್ಕೆ ಮಾರಕವಲ್ಲ ಎಂದು ಕುಲಾಂತರಿ ಅನುಮೋದನಾ ಸಮಿತಿ (ಜಿಇಎಸಿ)ಯ ತಜ್ಞರ ತಂಡ ಸರ್ಕಾರಕ್ಕೆ ಈ ವರ್ಷದ ಮಧ್ಯಭಾಗದಲ್ಲಿ ವರದಿ ನೀಡಿತ್ತು. ಕುಲಾಂತರಿ ಸಾಸಿವೆಯನ್ನು ಪ್ರಾಯೋಗಿಕವಾಗಿ ಹಾಗೂ ವಾಣಿಜ್ಯಿಕವಾಗಿ ಬೆಳೆಯಲು ಅನುಮತಿ ನೀಡುವ ಪ್ರಸ್ತಾವವನ್ನು ಜಿಇಎಸಿ ಪರಿಶೀಲಿಸಲು ಕೈಗೆತ್ತಿಕೊಂಡು ಸಾರ್ವಜನಿಕ ಅಭಿಪ್ರಾಯ ಕೋರಿತ್ತು. ಇದಕ್ಕೆ ಪರ-ವಿರೋಧ ವ್ಯಕ್ತವಾಗಿತ್ತು.


•►  ಕೃಷಿಕರ ಆದಾಯ ದುಪ್ಪಟ್ಟು
ಯೋಜನೆಯ ಕಾರ್ಯಕ್ರಮಗಳು

*.ರಾಷ್ಟ್ರದ 14 ಕೋಟಿ ಕೃಷಿಕರಿಗೆ ಮಣ್ಣು ಆರೋಗ್ಯ ಪತ್ರ ವಿತರಣೆ.
* ಪರಂಪರಾಗತ್ ಕೃಷಿ ವಿಕಾಸ, ಪ್ರಧಾನಮಂತ್ರಿ ಕೃಷಿ ಸಿಂಚಾಯಿ, ಫಸಲ್ ವಿಮಾ ಯೋಜನೆಗಳಿಗೆ ಚಾಲನೆ
*.ರೈತರಿಗೆ ಬೇವು ಮಿಶ್ರಿತ ಯೂರಿಯಾ, ವೈವಿಧ್ಯಮಯ ಬೀಜಗಳ ಅಭಿವೃದ್ಧಿ, ಬಿತ್ತನೆ ವಸ್ತುಗಳ ಪೂರೈಕೆ
*/ದೇಶದಲ್ಲಿ 14 ಗೋಕುಲ ಗ್ರಾಮಗಳ ನಿರ್ವಣಕ್ಕೆ ಮಾನ್ಯತೆ
*.ದೇಶದಲ್ಲಿ ಎರಡು ಕೇಂದ್ರ ಕೃಷಿ ವಿಶ್ವವಿದ್ಯಾಲಯಗಳ ಸ್ಥಾಪನೆ
*.14 ಕೃಷಿ ಕಾಲೇಜುಗಳು ಮತ್ತು ವಿವಿಧ ಕೃಷಿ ಸಂಶೋಧನಾ ಕೇಂದ್ರಗಳ ಸ್ಥಾಪನೆ
*.ಹೆಚ್ಚಿನ ಕೃಷಿ ವಿಜ್ಞಾನಿಗಳ ನೇಮಕ
*.ಗ್ರಾಮೀಣ ಪ್ರದೇಶದ ಹತ್ತಿರದಲ್ಲೇ ಕೃಷಿ ವಿಜ್ಞಾನ ಕೇಂದ್ರಗಳ ನಿರ್ಮಾಣ
*. ಇ-ಪಶುಹಾತ್ ತಾಣ:
ಪಶುಸಂಗೋಪನೆಯಲ್ಲಿ ತೊಡಗಿರುವವರಿಗೆ ಅನುಕೂಲವಾಗುವಂತೆ ದೇಶದ ಕೃಷಿಕರು, ಸಹಕಾರಿ ಸಂಘಟನೆ, ಹಾಲು ಉತ್ಪಾದಕರ ಸಂಘ, ಖಾಸಗಿಯವರ ನಡುವೆ ಸಂಪರ್ಕ ಕಲ್ಪಿಸಲು ಕೇಂದ್ರ ಸರ್ಕಾರ ಆರಂಭಿಸಿದ ಅಂತರ್ಜಾಲ ತಾಣ ಇದಾಗಿದ್ದು, ನವೆಂಬರ್ ಕೊನೆಯಲ್ಲಿ ಲೋಕಾರ್ಪಣೆಗೊಂಡಿದೆ.


•►  ಸಂಶೋಧನೆ
ತದ್ರೂಪಿ ಕೋಣ ಸೃಷ್ಟಿ:
ಹರಿಯಾಣದ ಹಿಸ್ಸಾರ್​ನ ಸೆಂಟ್ರಲ್ ಇನ್​ಸ್ಟಿಟ್ಯೂಟ್ ಫಾರ್ ರೀಸರ್ಚ್ ಆನ್ ಬಫಲ್ಲೋಸ್(ಸಿಐಆರ್​ಬಿ)ನ ವಿಜ್ಞಾನಿಗಳು ಜನವರಿ ಮಧ್ಯಭಾಗದಲ್ಲಿ ತದ್ರೂಪಿ ಕೋಣನನ್ನು ಸೃಷ್ಟಿಸುವಲ್ಲಿ ಯಶಸ್ಸು ಕಂಡಿದ್ದಾರೆ. ಅದಕ್ಕೆ ‘ಸಿಐಆರ್​ಬಿ ಗೌರವ್’ ಎಂದು ನಾಮಕರಣ ಮಾಡಿದ್ದಾರೆ.

ಹೆಣ್ಣು ಕರುವೇ ಹುಟ್ಟುತ್ತೆ!: ಹಸುಗಳು ಹೆಣ್ಣು ಕರುವಿಗೇ ಜನ್ಮನೀಡುವಂತೆ ಮಾಡಲು ಬೆಂಗಳೂರಿನ ಎಬಿಎಸ್ ಕಂಪನಿ ಹೊಸ ವಿಧಾನ ಕಂಡುಹಿಡಿದದ್ದು ವರ್ಷದ ಮಧ್ಯಭಾಗದಲ್ಲಿ ಸುದ್ದಿಯಾಗಿತ್ತು. ಗಂಡು ಮತ್ತು ಹೆಣ್ಣು ಲಿಂಗ ನಿರ್ಧರಿಸುವ ಎಕ್ಸ್ ಮತ್ತು ವೈ ಕ್ರೊಮೊಸೊಮ್ಳನ್ನು ಗೂಳಿಯ ವೀರ್ಯದಿಂದ ಬೇರ್ಪಡಿಸಿ ಕೃತಕ ಗರ್ಭಧಾರಣೆ ಮಾಡಿಸುವುದೇ ಇದರ ವಿಶೇಷತೆ. ಆಕಳಿಗೆ ಎಕ್ಸ್ ಕ್ರೊಮೊಸೋಮ್ಂದ ವಿಶೇಷವಾಗಿ ಚಿಕಿತ್ಸೆ ನೀಡಿದರೆ ಹೆಣ್ಣು ಆಕಳು ಹುಟ್ಟುತ್ತದೆ ಎಂಬುದು ಕಂಪನಿಯ ವಾದ.

•► ಇಂದು ರಾಷ್ಟ್ರೀಯ ರೈತ ದಿನ
ಮಾಜಿ ಪ್ರಧಾನಿ ಚೌಧರಿ ಚರಣ್ ಸಿಂಗ್(23/12/1902- 29/05/1987) ಅವರ ಜಯಂತಿ ದಿನವಾದ ಡಿಸೆಂಬರ್ 23ರನ್ನು ರಾಷ್ಟ್ರೀಯ ರೈತ ದಿನವಾಗಿ ಆಚರಿಸಲಾಗುತ್ತದೆ. ಸ್ವತಃ ಕೃಷಿಕರಾಗಿದ್ದ ಚರಣ್ ಸಿಂಗ್, ಭಾರತದ ಕೃಷಿಕರ ಉನ್ನತಿಗಾಗಿ ಮಾಡಿದ ಕೆಲಸಗಳು ಇಂದಿಗೂ ಸ್ಮರಣೀಯ. ಜಮೀನ್ದಾರಿಕೆ ನಿಮೂಲನೆ ಕಾಯ್ದೆ, ಕೃಷಿ ಉತ್ಪನ್ನ ಮಾರುಕಟ್ಟೆ ಮಸೂದೆ ಸೇರಿ ಅನೇಕ ಯೋಜನೆಗಳನ್ನು ಅವರು ಜಾರಿಗೆ ತಂದಿದ್ದರು.

...ಮುಂದುವರೆಯುವುದು. 

No comments:

Post a Comment