"ಮನುಷ್ಯ ದೀಪವಾದರೂ ಆಗಬೇಕು, ಕನ್ನಡಿಯಾದರೂ ಆಗಬೇಕು. ಒಂದು ಬೆಳಕನ್ನು ಕೊಡುತ್ತದೆ ಮತ್ತೊಂದು ಅದನ್ನು ಪ್ರತಿಬಿಂಬಿಸುತ್ತದೆ. ಪ್ರತಿಯೊಬ್ಬರೂ ದೀಪ ಆಗದೇ ಹೋಗಬಹುದು ಆದರೆ ಕನ್ನಡಿ ಆಗಬಲ್ಲರು. ತಿಳಿದಿರುವ ಜ್ಞಾನವನ್ನು ಮತ್ತೊಬ್ಬರಿಗೆ ಹಂಚುವುದೇ ಜೀವನ.."—ಅರಿಸ್ಟಾಟಲ್

Tuesday 27 December 2016

☀️ IV.ನ್ಯಾಶನಲ್ ಪಾಲಿಸಿ ಆನ್ ಎಲೆಕ್ಟ್ರಾನಿಕ್ಸ್ : (ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಪ್ರಮುಖ ಯೋಜನೆಗಳು) (National Policy on Electronics)

☀️ IV.ನ್ಯಾಶನಲ್ ಪಾಲಿಸಿ ಆನ್ ಎಲೆಕ್ಟ್ರಾನಿಕ್ಸ್ : (ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಪ್ರಮುಖ ಯೋಜನೆಗಳು)
(National Policy on Electronics)
━━━━━━━━━━━━━━━━━━━━━━━━━━━━━━━━━━━━━━━━━━━━━

★ ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಪ್ರಮುಖ ಯೋಜನೆಗಳು :
(Central Sponsored schemes)


•► ನ್ಯಾಶನಲ್ ಪಾಲಿಸಿ ಆನ್ ಎಲೆಕ್ಟ್ರಾನಿಕ್ಸ್ :


•► ಇದು ಕೇಂದ್ರ ಸರ್ಕಾರದ ಅತ್ಯಾಧುನಿಕ ತಂತ್ರಜ್ಞಾನ ಆಧಾರಿತ ಯೋಜನೆಯಾಗಿದ್ದು, 2012ರಲ್ಲಿ ಇದು ಜಾರಿಯಾಯಿತು.

•► ಭಾರತದ ಎಲೆಕ್ಟ್ರಾನಿಕ್ಸ್ ಸಿಸ್ಟಮ್ ಡಿಸೈನ್ ಹಾಗೂ ಮ್ಯಾನುಫಾಕ್ಚರಿಂಗ್ ಸೆಕ್ಟರ್‌ನಲ್ಲಿ ಜಾಗತಿಕ ಹೂಡಿಕೆದಾರರನ್ನು ಆಕರ್ಷಿಸುವುದು ಹಾಗೂ ಇದಕ್ಕೆ ಪೂರಕವಾಗಿ ಬೇಕಾಗಿರುವ ಅವಕಾಶ ಮತ್ತು ಸಹಕಾರಿ ವಾತಾವರಣವನ್ನು ಸೃಷ್ಠಿಸುವುದು ಈ ಯೋಜನೆಯ ಪ್ರಮುಖ ಉದ್ದೇಶವಾಗಿದೆ.

•► ಇಎಸ್‌ಡಿಎಂನಲ್ಲಿ ಹಾಗೂ ಇದರ ಉತ್ಪಾದನೆಯಲ್ಲಿ ಭಾರತವೇ ಅಚಿತಿಮ ಗುರಿಯಾಗುವಂತೆ ಮಾಡುವುದು ಹಾಗೂ ಮಧ್ಯಮ ಹಾಗೂ ಉನ್ನತ ಮಟ್ಟದ ತಂತ್ರಜ್ಞಾನ ಆಧಾರಿತ ಎಲೆಕ್ಟ್ರಾನಿಕ್ಸ್ ಉತ್ಪನ್ನಗಳನ್ನು ಭಾರತದಲ್ಲೇ ಉತ್ಪಾದಿಸಿ, ಭಾರತವನ್ನು ಎಲೆಕ್ಟ್ರಾನಿಕ್ಸ್ ಮ್ಯಾನುಫಾಕ್ಚರಿಂಗ್ ಹಬ್‌ನ್ನಾಗಿ ಮಾಡುವುದು ಯೋಜನೆಯ ಗುರಿಯಾಗಿದೆ.


•► ಇದನ್ನು ಸಾಕಾರಗೊಳಿಸಲು 2012ರಲ್ಲಿ ಕೇಂದ್ರ ಸರ್ಕಾರ ಇದನ್ನು ಜಾರಿಗೊಳಿಸಿದ್ದು, ಈ ಯೋಜನೆಯ ಪ್ರಮುಖಾಂಶಗಳು ಈ ರೀತಿ ಇವೆ.
*ಸುಧಾರಿತ ವಿಶೇಷ ತಂತ್ರಜ್ಞಾನ ಯೋಜನೆಗಳಿಗೆ ಶೇ.25ರಷ್ಟು ಸಬ್ಸಿಡಿ ನೀಡಲಾಗುತ್ತದೆ.
*ಎಲೆಕ್ಟ್ರಾನಿಕ್ ಮ್ಯಾನುಫಾಕ್ಚರಿಂಗ್ ಕ್ಲಸ್ಟರ್ ಸ್ಕೀಂ ಎನ್ನುವುದು ಯೋಜನೆಯ ಭಾಗವಾಗಿದ್ದು, ಸಂಪನ್ಮೂಲ ಅಭಿವೃದ್ಧಿಯ ವೆಚ್ಚದಲ್ಲಿ ಶೇ. 50ರಷ್ಟು ಸಹಾಯಧನ, ಗ್ರೀನ್‌ಫೀಲ್ಡ್ ಸೆಕ್ಟರ್‌ನಲ್ಲಿನ ಅಭಿವೃದ್ಧಿಗಾಗಿ ಶೇ.75ರಷ್ಟು ಸಹಾಯಧನ ನೀಡಲಾಗುತ್ತದೆ.
*ಎಲೆಕ್ಟ್ರಾನಿಕ್ಸ್ ಸಾಧನಗಳನ್ನು ದೇಶದಲ್ಲೇ ಹೆಚ್ಚು ಹೆಚ್ಚು ಉತ್ಪಾದನೆ ಮಾಡಲು ಸಹಕಾರ ಹಾಗೂ ಪ್ರೋತ್ಸಾಹ ನೀಡುವುದು. ಇದಕ್ಕಾಗಿ ಶೇ.30ಕ್ಕೂ ಅಧಿಕ ಮೊತ್ತದ ಸಹಕಾರ ನೀಡುವುದು.
*ಪ್ರಮುಖವಾಗಿ ಬೇಡಿಕೆಯಿರುವ ಸೆಟ್ ಟಾಪ್ ಬಾಕ್ಸ್‌ಗಳನ್ನು ತಯಾರಿಸಿ ವಿದೇಶಗಳಿಗೆ ರಫ್ತು ಮಾಡುವುದು ಇದರಲ್ಲಿನ ಒಂದು ಅಂಶವಾಗಿದ್ದು, ಇದಕ್ಕಾಗಿ ಶೇ.2ರಿಂದ 5 ರಷ್ಟು ಇನ್‌ಸೆಂಟಿವ್ ನೀಡಲಾಗುತ್ತದೆ.
*ಎಲೆಕ್ಟ್ರಾನಿಕ್ಸ್ ಕ್ಷೇತ್ರದಲ್ಲಿನ ಹೊಸ ಆವಿಷ್ಕಾರಗಳಿಗೆ ಪೂರಕವಾಗಿ ಸಂಶೋಧನೆ ನಡೆಸಲು ಅನುದಾನವನ್ನು ನಿಗದಿಪಡಿಸಿ, ಪ್ರತ್ಯೇಕ ಮೊತ್ತವನ್ನು ಇಡುವುದು.
*ಬೇಡಿಕೆಯಿರುವ ಎಫ್‌ಎಬಿ ತಯಾರಿಕೆಗೆ ಹೆಚ್ಚಿನ ಒತ್ತು ನೀಡುವುದು.
*ಎಲೆಕ್ಟ್ರಾನಿಕ್ಸ್ ಕ್ಷೇತ್ರದತ್ತ ಯುವಕರನ್ನು ಹೆಚ್ಚು ಆಕರ್ಷಿಸಲು ಕೌಶಲ್ಯ ಅಭಿವೃದ್ಧಿಗಾಗಿ ವಿವಿಧ ಹಂತದ ಯೋಜನೆಗಳನ್ನು ರೂಪಿಸಿ, ಜಾರಿಗೊಳಿಸುವುದು.

No comments:

Post a Comment