"ಮನುಷ್ಯ ದೀಪವಾದರೂ ಆಗಬೇಕು, ಕನ್ನಡಿಯಾದರೂ ಆಗಬೇಕು. ಒಂದು ಬೆಳಕನ್ನು ಕೊಡುತ್ತದೆ ಮತ್ತೊಂದು ಅದನ್ನು ಪ್ರತಿಬಿಂಬಿಸುತ್ತದೆ. ಪ್ರತಿಯೊಬ್ಬರೂ ದೀಪ ಆಗದೇ ಹೋಗಬಹುದು ಆದರೆ ಕನ್ನಡಿ ಆಗಬಲ್ಲರು. ತಿಳಿದಿರುವ ಜ್ಞಾನವನ್ನು ಮತ್ತೊಬ್ಬರಿಗೆ ಹಂಚುವುದೇ ಜೀವನ.."—ಅರಿಸ್ಟಾಟಲ್

Thursday 29 December 2016

☀️ V.ಜೆನರ್ಮ್: ಜವಾಹರ ಲಾಲ್ ನೆಹರೂ ನ್ಯಾಶನಲ್ ಅರ್ಬನ್ ರಿನೀವಲ್ ಮಿಷನ್ (ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಪ್ರಮುಖ ಯೋಜನೆಗಳು) (JNURM- Javaharlal Nehru National Urban Renewal Mission)

☀️ V.ಜೆನರ್ಮ್: ಜವಾಹರ ಲಾಲ್ ನೆಹರೂ ನ್ಯಾಶನಲ್ ಅರ್ಬನ್ ರಿನೀವಲ್ ಮಿಷನ್ (ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಪ್ರಮುಖ ಯೋಜನೆಗಳು)
(JNURM- Javaharlal Nehru National Urban Renewal Mission)
━━━━━━━━━━━━━━━━━━━━━━━━━━━━━━━━━━━━━━━━━━━━━

★ ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಪ್ರಮುಖ ಯೋಜನೆಗಳು :
(Central Sponsored schemes)



•► ಜೆನರ್ಮ್ : ಜವಾಹರ ಲಾಲ್ ನೆಹರೂ ನ್ಯಾಶನಲ್ ಅರ್ಬನ್ ರಿನೀವಲ್ ಮಿಷನ್


•► ಜವಾಹರ ಲಾಲ್ ನೆಹರೂ ನ್ಯಾಶನಲ್ ಅರ್ಬನ್ ರಿನೀವಲ್ ಮಿಷನ್ ಕೇಂದ್ರ ಸರ್ಕಾರದ ಯೋಜನೆಯಾಗಿದ್ದು, ಕೇಂದ್ರದ ಅನುದಾನದ ಅಡಿಯಲ್ಲಿ ನಗರಗಳನ್ನು ಆಧುನೀಕರಣಗೊಳಿಸುವುದಾಗಿದೆ.

•► ಕೇಂದ್ರ ನಗರಾಭಿವೃದ್ದಿ ಇಲಾಖೆ ಮೂಲಕ ಈ ಯೋಜನೆಯನ್ನು ಜಾರಿಗೊಳಿಸಲಾಗಿದ್ದು, 2005ರ ಡಿಸೆಂಬರ್ 3ರಂದು ಅಂದಿನ ಪ್ರಧಾನಿ ಮನಮೋಹನ್ ಸಿಂಗ್ ಚಾಲನೆ ನೀಡಿದ್ದರು. ಈ ಯೋಜನೆಯ ಅಡಿಯಲ್ಲಿ ಮೊದಲ 7 ವರ್ಷದಲ್ಲಿ ಸುಮಾರು 20 ಬಿಲಿಯನ್ ಅಮೆರಿಕನ್ ಡಾಲರ್ ಮೊತ್ತವನ್ನು ವಿನಿಯೋಗಿಸಲಾಗಿದ್ದು, ನಗರ ಪ್ರದೇಶಗಳಲ್ಲಿ ಮೂಲ ಸೌಕರ್ಯ ವೃದ್ದಿಸುವುದೇ ಇದರ ಪ್ರಮುಖ ಉದ್ದೇಶವಾಗಿದೆ.

•► ಆರಂಭಿಕ ಹಂತದಲ್ಲಿ ಕೇವಲ 7 ವರ್ಷಕ್ಕಾಗಿ ಅಂದರೆ, 2005ರಿಂದ 2012ರವರೆಗೆ ಮಾತ್ರ ಈ ಯೋಜನೆಯನ್ನು ಜಾರಿಗೊಳಿಸಲಾಯಿತು. ಆನಂತರ ಅಂದರೆ 2012ರ ಏಪ್ರಿಲ್‌ನಿಂದ 2014ರ ಮಾರ್ಚ್ 31ರವರೆಗೂ ವಿಸ್ತರಣೆ ಮಾಡಲಾಯಿತು.

•► ಭಾರತೀಯ ನಗರಗಳು ಮೂಲಭೂತ ಸೌಕರ್ಯಗಳಿಂದ ದೂರ ಎನ್ನುವ ಅಪವಾದವನ್ನು ದೂರವಾಗಿಸುವ ಸಲುವಾಗಿ ಈ ಯೋಜನೆಯನ್ನು ಜಾರಿಗೊಳಿಸಲಾಗಿದ್ದು, ನಗರ ಪ್ರದೇಶಗಳನ್ನು ಬೇರು ಮಟ್ಟದಿಂದ ಅಭಿವೃದ್ಧಿಗೊಳಿಸುವುದಾಗಿದೆ.

•► ನಗರ ಪ್ರದೇಶಗಳಲ್ಲಿ ಆರ್ಥಿಕ ಸಬಲೀಕರಣ ಮಾಡುವುದು, ಸಮಾನ ಪ್ರಾತಿನಿಧ್ಯ ಒದಗಿಸುವುದು, ಸಾಮಾಜಿಕ-ಆರ್ಥಿಕ ಅಭಿವೃದ್ಧಿ, ನಗರ ಪ್ರದೇಶಗಳಲ್ಲಿರುವ ಬಡ ವರ್ಗದ ಜನರಿಗೆ ಅಗತ್ಯವಿರುವ ಮೂಲಭೂತ ಸೌಲಭ್ಯ ಒದಗಿಸುವುದು, ಈ ಯೋಜನೆಯ ಅಡಿಯಲ್ಲಿವೆ. ಇದಕ್ಕಾಗಿ 1992ರಲ್ಲಿ ಸಂವಿಧಾನಕ್ಕೆ ತರಲಾದ 74ನೆಯ ತಿದ್ದುಪಡಿಯಲ್ಲಿನ ಅಂಶಗಳು ಆಧಾರವಾಗಿದ್ದು, ಮುನ್ಸಿಪಲ್ ಗವರ್ನೆನ್ಸ್‌ನ್ನೂ ಸಹ ಬಲಗೊಳಿಸುವುದು ಇದರ ಗುರಿಗಳಲ್ಲಿ ಒಂದಾಗಿದೆ.

•► ಯೋಜನೆಯ ಪ್ರಾಥಮಿಕ ಹಂತದಲ್ಲಿ ಎರಡು ವಿಭಾಗ ಮಾಡಲಾಗಿದ್ದು, ಇದರಲ್ಲಿ ನಗರ ಪ್ರದೇಶದಲ್ಲಿ ನೀರು ಸರಬರಾಜು, ಉತ್ತಮವಾದ ಚರಂಡಿ ವ್ಯವಸ್ಥೆ, ಘನ ತ್ಯಾಜ್ಯ ನಿರ್ವಹಣೆ, ರಸ್ತೆ ಸಂಪರ್ಕದ ಉನ್ನತೀಕರಣ, ನಗರ ಸಾರಿಗೆ ಸೌಲಭ್ಯ ಹಾಗೂ ಪ್ರಸ್ತುತ ಇರುವ ಬಡಾವಣೆಗಳ ಮರು ಅಭಿವೃದ್ಧಿ ಇದರಲ್ಲಿ ಸೇರಿದೆ.

ಜೆನರ್ಮ್ ಕುರಿತಾದ ಮಾಹಿತಿಗಾಗಿ  http://jnnurm.nic.in/  ವೀಕ್ಷಿಸಬಹುದು.

No comments:

Post a Comment