"ಮನುಷ್ಯ ದೀಪವಾದರೂ ಆಗಬೇಕು, ಕನ್ನಡಿಯಾದರೂ ಆಗಬೇಕು. ಒಂದು ಬೆಳಕನ್ನು ಕೊಡುತ್ತದೆ ಮತ್ತೊಂದು ಅದನ್ನು ಪ್ರತಿಬಿಂಬಿಸುತ್ತದೆ. ಪ್ರತಿಯೊಬ್ಬರೂ ದೀಪ ಆಗದೇ ಹೋಗಬಹುದು ಆದರೆ ಕನ್ನಡಿ ಆಗಬಲ್ಲರು. ತಿಳಿದಿರುವ ಜ್ಞಾನವನ್ನು ಮತ್ತೊಬ್ಬರಿಗೆ ಹಂಚುವುದೇ ಜೀವನ.."—ಅರಿಸ್ಟಾಟಲ್

Saturday 12 September 2015

☀ಈ ದಿನದ (ಐಎಎಸ್/ಕೆಎಎಸ್) ಪರೀಕ್ಷಾ ಪ್ರಶ್ನೆ : ☀ ಜಾಮ್‌ (ಜೆಎಎಂ) ಎಂದರೇನು ? (ಟಿಪ್ಪಣಿ ಬರಹ) (What do you mean by "JAM"?)

☀ಈ ದಿನದ (ಐಎಎಸ್/ಕೆಎಎಸ್) ಪರೀಕ್ಷಾ ಪ್ರಶ್ನೆ :
☀ ಜಾಮ್‌ (ಜೆಎಎಂ) ಎಂದರೇನು ? (ಟಿಪ್ಪಣಿ ಬರಹ)
(What do you mean by "JAM"?)
━━━━━━━━━━━━━━━━━━━━━━━━━━━
★ಸಾಮಾನ್ಯ ಅಧ್ಯಯನ
(General Studies)

●."ಜೆ' ಎಂದರೆ ಕೇಂದ್ರ ಸರ್ಕಾರದ ಮಹತ್ವದ ಯೋಜನೆಗಳಲ್ಲಿ ಒಂದಾದ "ಜನ್‌ ಧನ್‌' ಯೋಜನೆ. ಇದರಡಿ ಪ್ರತಿಯೊಬ್ಬರು ಬ್ಯಾಂಕ್‌ ಖಾತೆಗಳನ್ನು ತೆರೆಯಲು ಅನುವು ಮಾಡಿಕೊಟ್ಟಿದೆ.

●."ಎ' ಎಂದರೆ ಆಧಾರ್‌. "ಜನ್‌ ಧನ್‌' ಮೂಲಕ ತೆರೆಯಲಾದ ಬ್ಯಾಂಕ್‌ ಖಾತೆಗಳಿಗೆ ಅಥವಾ ನೇರವಾಗಿ ತೆರೆದ ಬ್ಯಾಂಕ್‌ ಖಾತೆಗಳಿಗೆ ಈ ಆಧಾರ್‌ ನಂಬರ್‌ ಅನ್ನು ಜೋಡಿಸಬಹುದಾಗಿದೆ.

●.ಇನ್ನು "ಎಂ' ಎಂದರೆ ಮೊಬೈಲ್‌ ನಂಬರ್‌. ಹೀಗೆ ಬ್ಯಾಂಕ್‌ ಖಾತೆಗಳಿಗೆ ಆಧಾರ್‌ ಹಾಗೂ ಮೊಬೈಲ್‌ ನಂಬರ್‌ನ್ನು ಜೋಡಿಸುವ ಮೂಲಕ ಸಬ್ಸಿಡಿ ಸೌಲಭ್ಯಗಳು ನೇರವಾಗಿ ಬ್ಯಾಂಕ್‌ ಖಾತೆಗಳಿಗೆ ವರ್ಗಾಯಿಸಬಹುದು.

No comments:

Post a Comment