"ಮನುಷ್ಯ ದೀಪವಾದರೂ ಆಗಬೇಕು, ಕನ್ನಡಿಯಾದರೂ ಆಗಬೇಕು. ಒಂದು ಬೆಳಕನ್ನು ಕೊಡುತ್ತದೆ ಮತ್ತೊಂದು ಅದನ್ನು ಪ್ರತಿಬಿಂಬಿಸುತ್ತದೆ. ಪ್ರತಿಯೊಬ್ಬರೂ ದೀಪ ಆಗದೇ ಹೋಗಬಹುದು ಆದರೆ ಕನ್ನಡಿ ಆಗಬಲ್ಲರು. ತಿಳಿದಿರುವ ಜ್ಞಾನವನ್ನು ಮತ್ತೊಬ್ಬರಿಗೆ ಹಂಚುವುದೇ ಜೀವನ.."—ಅರಿಸ್ಟಾಟಲ್

Friday 4 September 2015

☀ಈ ದಿನದ ಪ್ರಚಲಿತ (KAS/IAS) ಪ್ರಶ್ನೆ:—   "ಅತ್ಯಾಧುನಿಕ ಜಿಪಿಎಸ್‌ ಆಧಾರಿತ ಪಥದರ್ಶಕ ವ್ಯವಸ್ಥೆಯಾದ ‘ಗಗನ್', ದೇಶದ ವಿಮಾನಯಾನ ಹಾಗು ರೈಲ್ವೆಯಾನಗಳಿಗೆ ವರವಾಗಿದ್ದು, ಪಥದರ್ಶಕ ಕ್ಷೇತ್ರದಲ್ಲಿ ಹೊಸ ಕ್ರಾಂತಿಕಾರಕ ಹೆಜ್ಜೆಯಾಗಿದೆ. ಚರ್ಚಿಸಿ" -(The most Advanced GPS-based Navigation System 'GAGAN', is the new revolutionary step in providing navigational support to the country's Railways and aviation field. Discuss)

☀ಈ ದಿನದ ಪ್ರಚಲಿತ (KAS/IAS) ಪ್ರಶ್ನೆ:—
 "ಅತ್ಯಾಧುನಿಕ ಜಿಪಿಎಸ್‌ ಆಧಾರಿತ ಪಥದರ್ಶಕ ವ್ಯವಸ್ಥೆಯಾದ ‘ಗಗನ್', ದೇಶದ ವಿಮಾನಯಾನ ಹಾಗು ರೈಲ್ವೆಯಾನಗಳಿಗೆ ವರವಾಗಿದ್ದು, ಪಥದರ್ಶಕ ಕ್ಷೇತ್ರದಲ್ಲಿ ಹೊಸ ಕ್ರಾಂತಿಕಾರಕ ಹೆಜ್ಜೆಯಾಗಿದೆ. ಚರ್ಚಿಸಿ"

-(The most Advanced GPS-based Navigation System 'GAGAN', is the new revolutionary step in providing navigational support to the country's Railways and aviation field. Discuss)
━━━━━━━━━━━━━━━━━━━━━━━━━━━━━━━━━━━━━━━━━━━━━

★ ವಿವರಣಾತ್ಮಕ ಸಾಮಾನ್ಯ ಅಧ್ಯಯನ.
(General Studies notes in Kannada Medium)

★ ಐಎಎಸ್ / ಕೆಎಎಸ್ ಪರೀಕ್ಷಾ ವಿಶೇಷಾಂಕ
(KAS/IAS Examination Special)


— ಇದು ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೊ ಅಭಿವೃದ್ಧಿಪಡಿಸಿರುವ ಗಗನ್ ಸ್ವದೇಶಿ ತಂತ್ರಜ್ಞಾನದ ನ್ಯಾವಿಗೇಶನಲ್ ವ್ಯವಸ್ಥೆಯಾಗಿದ್ದು, ಜಿಪಿಎಸ್ ತಂತ್ರಜ್ಞಾನ ಆಧಾರಿತ ಗಗನ್ ನ್ಯಾವಿಗೇಶನ್ ವ್ಯವಸ್ಥೆ ಇದಾಗಿದೆ. ಪ್ರಮುಖವಾಗಿ ದೇಶದ ರೈಲ್ವೆ ಇಲಾಖೆ ಮತ್ತು ವಿಮಾನ ಯಾನ ಗಮನದಲ್ಲಿಟ್ಟುಕೊಂಡು ನ್ಯಾವಿಗೇಶನ್ ಅನುಕೂಲವನ್ನು ಒದಗಿಸಿಕೊಡಲಿದೆ. ಈ ಮೂಲಕ 'ವಿಮಾನದ ಉಪಗ್ರಹ ಆಧಾರಿತ ಜಿಪಿಎಸ್ ವ್ಯವಸ್ಥೆ' ಹೊಂದಿರುವ ರಾಷ್ಟಗಳಾದ ಅಮೆರಿಕ, ಐರೋಪ್ಯ ಒಕ್ಕೂಟ ಮತ್ತು ಜಪಾನ್‌ನ ಗಣ್ಯ ರಾಷ್ಟ್ರಗಳ ಸಾಲಿಗೆ ಭಾರತ ಸೇರಿದೆ.


☀ಮುಖ್ಯಾಂಶಗಳು :
•┈┈┈┈┈┈┈┈┈┈┈•

●.ಇಸ್ರೊ ಮತ್ತು ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರ (ಎಎಐ) ಜಂಟಿಯಾಗಿ ಅಭಿವೃದ್ಧಿಪಡಿಸಿರುವ ವಿಮಾನದ ದಿಕ್ಸೂಚಿ ಅಥವಾ ಜಿಪಿಎಸ್ ವ್ಯವಸ್ಥೆಗೆ 'ಗಗನ್' (ಜಿಪಿಎಸ್ ಏಡೆಡ್ ಜಿಯೊ ಆಗ್ಮೆಂಟೆಡ್ ನ್ಯಾವಿಗೇಷನ್-ಜಿಎಜಿಎಎನ್) ಎಂದು ಹೆಸರಿಡಲಾಗಿದೆ.

●.ಸುಮಾರು 15 ವರ್ಷಗಳ ಅವಿರತ ಶ್ರಮದಿಂದ ಗಗನ್ ವ್ಯವಸ್ಥೆ ಭಾರತಕ್ಕೆ ಒಲಿದಿದ್ದು, ಇದಕ್ಕಾಗಿ ಸುಮಾರು 774 ಕೋಟಿ ರೂ. ವೆಚ್ಚ ಮಾಡಲಾಗಿದೆ.

●.ಗಗನ್ ವ್ಯವಸ್ಥೆ ಭೂಮಿ ಮೇಲಿನ 45 ಅಂತರಿಕ್ಷ ಮಾಹಿತಿ ನಿಲ್ದಾಣಗಳಿಗೆ ಏಕಕಾಲದಲ್ಲಿ ಸಂಪರ್ಕ ಹೊಂದುವ ಸಾಮರ್ಥ್ಯ ಹೊಂದಿದೆ.

●.ಯಾವುದೇ ಸಮಯದಲ್ಲಿ ಭಾರತದ ವಾಯುಮಂಡಲ ವ್ಯಾಪ್ತಿಯಲ್ಲಿ 10 ರಿಂದ 11 ಜಿಪಿಎಸ್ ಉಪಗ್ರಹಗಳು ತೇಲುತ್ತಿರುತ್ತವೆ. ಇವುಗಳಿಂದ ಭಾರತ ಪಡೆಯುತ್ತಿದ್ದ ಮಾಹಿತಿಗಳು ಉಪಯೋಗವಾಗುವಂಥವೇ; ಆದರೆ ಇವು ಯಾವಾಗಲೂ ನಿಖರವಿರುತ್ತಿರಲಿಲ್ಲ. ಈಗ ಗಗನ್ ವ್ಯವಸ್ಥೆಯು ವಿಮಾನಗಳಿಗೆ ಅತ್ಯಂತ ನಿಖರ ದಿಕ್ಕನ್ನು ತೋರಿಸಬಲ್ಲದು.

●.ವಾಯುಮಾರ್ಗ, ಸಂಚಾರ ದಟ್ಟಣೆ, ರನ್‌ವೇ ಬಗ್ಗೆ ಗಗನ್‌ ಸ್ಪಷ್ಟ ಮತ್ತು ಕರಾರುವಾಕ್ಕಾದ ಚಿತ್ರಣ ನೀಡಲಿದೆ.

●.ಕಳೆದ ಫೆಬ್ರುವರಿಯಿಂದ ಜಿಸ್ಯಾಟ್‌ 8 ಮತ್ತು ಜಿಸ್ಯಾಟ್ 10 ಉಪಗ್ರಹಗಳೊಂದಿಗೆ ಸಂಪರ್ಕ ಸಾಧಿಸಿರುವ ಗಗನ್ ವಿಮಾನಯಾನ ಕ್ಷೇತ್ರದಲ್ಲಿ ಭಾರಿ ಬದಲಾವಣೆ ತರಲಿದೆ ಎಂದು ನಂಬಲಾಗಿದೆ.


☀ವಿಮಾನ ಸಂಚಾರಕ್ಕಾಗುವ ಪ್ರಯೋಜನಗಳು :
•┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈•

●.ದೇಶದ 50 ವಿಮಾನ ನಿಲ್ದಾಣಗಳು ಹೊಸ ವ್ಯವಸ್ಥೆಯ ಲಾಭ ಪಡೆಯಲಿದ್ದು, ಸುಗಮ ವಿಮಾನ ಸಂಚಾರ,  ಸುರಕ್ಷತೆ, ಇಂಧನ ಕ್ಷಮತೆ, ದರ ಕಡಿತಕ್ಕೆ ಈ ವ್ಯವಸ್ಥೆ ನೆರವಾಗಲಿದೆ.

●.ಸೇನೆ, ರಸ್ತೆ ಸಂಚಾರ, ಕೃಷಿ, ಪ್ರಕೃತಿ ವಿಕೋಪದಂಥ ಸಂದರ್ಭದಲ್ಲಿ ಗಗನ್‌ ನೆರವಿಗೆ ಬರಲಿದ್ದು,  ಪೈಲಟ್‌ ಸೇರಿದಂತೆ ವಿಮಾನದ ಸಿಬ್ಬಂದಿ ಹಾಗೂ ವಾಯು ಸಂಚಾರ ನಿಯಂತ್ರಣ ಕೇಂದ್ರದ ಸಿಬ್ಬಂದಿಯ ಕಾರ್ಯಭಾರ ಮತ್ತು ಒತ್ತಡವನ್ನು ಅರ್ಧದಷ್ಟು ಕಡಿಮೆ ಮಾಡಲಿದೆ.

●.ದೇಶೀಯ ಪಥನಿರ್ದೇಶಕ ವ್ಯವಸ್ಥೆಗಾಗಿ ಇಸ್ರೊ ಭೂ ಕಕ್ಷೆಗೆ ಸೇರಿಸಿರುವ ಮೂರು ಜಿಪಿಎಸ್ ಉಪಗ್ರಹಗಳು, ಭೂಮಿಯ ಮೇಲಿನ ಸಂದೇಶವಾಹಕ ನಿಲ್ದಾಣಗಳು ನೀಡುವ ಮಾಹಿತಿ ಆಧರಿಸಿ ಗಗನ್ ವ್ಯವಸ್ಥೆ ವಿಮಾನಗಳಿಗೆ ಮಾರ್ಗದರ್ಶನ ಮಾಡಲಿದೆ.

●.ಐರೋಪ್ಯ ಒಕ್ಕೂಟ ಮತ್ತು ಜಪಾನ್ ಹೊಂದಿರುವ ವಿಮಾನ ದಿಕ್ಸೂಚಿ ವ್ಯವಸ್ಥೆಯ ವ್ಯಾಪ್ತಿ ಮೀರಿದ ಪ್ರದೇಶಗಳಲ್ಲಿ ಗಗನ್ ಕೆಲಸ ಮಾಡಲಿದ್ದು, ಈ ಎರಡು ವ್ಯವಸ್ಥೆಗಳ ಕಂದರವನ್ನು ತುಂಬಲಿದೆ.

●.ದೇಶಕ್ಕೆ ವರವಾದ ವ್ಯವಸ್ಥೆ ಗಗನ್ ವ್ಯವಸ್ಥೆ ವಿಮಾನಗಳಿಗೆ ನಿಖರ ಮಾರ್ಗದರ್ಶನ ಮಾಡುವುದರಿಂದ ಅನಗತ್ಯ ದಾರಿ ಕ್ರಮಿಸುವುದು ತಪ್ಪಲಿದೆ.

●.ಗುಂಡು ಹೊಡೆದಂತೆ ನಿಶ್ಚಿತ ದಾರಿಯಲ್ಲಿ ಹಾರಾಟ ನಡೆಸಿ ಗುರಿ ಮುಟ್ಟಲಿವೆ.ಇದರಿಂದ ಪ್ರಯಾಣದ ಅವಧಿ ಕಡಿಮೆಯಾಗುವುದಷ್ಟೇ ಅಲ್ಲದೆ, ಇಂಧನ ವೆಚ್ಚವೂ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗಲಿದೆ.

●.ಉಪಗ್ರಹ ಆಧಾರಿತ ದಿಕ್ಸೂಚಿ ವ್ಯವಸ್ಥೆ (ಎಸ್‌ಬಿಎಎಸ್) ಅಳವಡಿಸಿರುವ ವಿಮಾನಗಳಲ್ಲಿ ಮಾತ್ರ ಗಗನ್ ಕೆಲಸ ಮಾಡಲಿದೆ. ಈಗ ಇರುವ ವಿಮಾನಗಳಲ್ಲಿ ಎಸ್‌ಬಿಎಎಸ್ ಸಾಧನಾ ಅಳವಡಿಕೆಯಾಗಿಲ್ಲ.

●.ಇವು ದುಬಾರಿಯಾಗಿರುವುದರಿಂದ ಹಾಗೂ ಈಗಾಗಲೇ ಭಾರತೀಯ ವಿಮಾನಯಾನ ಕ್ಷೇತ್ರ ಹಣದ ಮುಗ್ಗಟ್ಟಿನಿಂದ ನರಳುತ್ತಿರುವುದರಿಂದ ಎಸ್‌ಬಿಎಎಸ್ ಉಪಕರಣ ಅಳವಡಿಕೆ ಕಷ್ಟ ಸಾಧ್ಯ. ಹೀಗಾಗಿಯೇ, ಗಗನ್ ತಂತ್ರಜ್ಞಾನ ಬಳಸಿಕೊಳ್ಳುವುದನ್ನು ಎಲ್ಲ ವಿಮಾನ ಸಂಸ್ಥೆಗಳಿಗೆ ಕಡ್ಡಾಯ ಮಾಡುವುದಿಲ್ಲ; ಆದರೆ, ಹೊಸದಾಗಿ ಖರೀದಿಯಾಗುವ ವಿಮಾನಗಳಿಗೆ ಕಡ್ಡಾಯವಾಗಿ ಈ ಸಾಧನಾ ಅಳವಡಿಕೆಯಾಗಿರುವುದನ್ನು ಖಚಿತಪಡಿಸಿಕೊಳ್ಳಲು ಸಚಿವಾಲಯ ನಿರ್ಧರಿಸಿದೆ.


☀ನಿಖರ ದಿಕ್ಸೂಚಿ ಹೇಗೆ?
•┈┈┈┈┈┈┈┈┈┈┈┈┈•

●.ಈಗಲೂ ಎಲ್ಲ ವಿಮಾನಗಳು ಜಿಪಿಎಸ್ ಉಪಗ್ರಹಗಳಿಂದ ಮಾಹಿತಿ ಪಡೆದೇ ಹಾರಾಟ ನಡೆಸುತ್ತವೆ.

●.ಭಾರತವೂ ಸೇರಿ ಸಾರ್ಕ್ ದೇಶಗಳ ಆಕಾಶದಲ್ಲಿ ಮೂರು ಜಿಪಿಎಸ್ ಉಪಗ್ರಹಗಳು ಪ್ರತಿ ವಿಮಾನದ ಜಾಡು ಹಿಡಿಯುತ್ತವೆ. ಆದರೆ, ಜಿಪಿಎಸ್ ಉಪಗ್ರಹಗಳು ನೀಡುವ ವಿಮಾನಗಳ ಹಾರಾಟ ಬಿಂದು 50 ಮೀಟರ್ ಆಚೀಚೆ ಇರುತ್ತದೆ. ಈ ಅಂತರವನ್ನು ಗಗನ್ ವ್ಯವಸ್ಥೆ ಬರೀ 3.5 ಮೀಟರ್‌ಗೆ ಇಳಿಸುತ್ತದೆ. ಹೀಗಾಗಿ ಪೈಲಟ್‌ಗಳಿಗೆ ನಿಖರವಾಗಿ ಏರ್ ಕಂಟ್ರೋಲರ್‌ಗಳು ಮಾರ್ಗದರ್ಶನ ಮಾಡಲು ಅನುವಾಗಲಿದೆ.

●.ವಿಶ್ವಕ್ಕೆ ಗಗನ ವಿಸ್ಮಯ ಗಗನ್ ವ್ಯವಸ್ಥೆಯು ಬಂಗಾಳ ಕೊಲ್ಲಿ, ಆಗ್ನೇಯ ಏಷ್ಯಾ, ಹಿಂದೂ ಮಹಾಸಾಗರ, ಮಧ್ಯಪ್ರಾಚ್ಯ ಮತ್ತು ಆಫ್ರಿಕಾದ ಪ್ರಾಂತ್ಯಗಳಲ್ಲಿ ಕೆಲಸ ಮಾಡಲಿದೆ. ಹೀಗಾಗಿ ದಕ್ಷಿಣ ಕೊರಿಯಾ, ಜಪಾನ್ ಮತ್ತು ಆಸಿಯಾನ್ ರಾಷ್ಟ್ರಗಳು ಗಗನ್ ವ್ಯವಸ್ಥೆಯತ್ತ ಕಣ್ಣರಳಿಸಿ ನೋಡುತ್ತಿವೆ.

●.ಗಗನ್ ವ್ಯವಸ್ಥೆಯು ಭಾರತ, ಬಂಗಾಳ ಕೊಲ್ಲಿ, ಆಗ್ನೇಯ ಏಷ್ಯಾ ಭಾಗ, ಮಧ್ಯ ಪ್ರಾಚ್ಯ ಪ್ರದೇಶ ಮತ್ತು ಆಫ್ರಿಕಾದ ಸ್ವಲ್ಪ ಭಾಗಗಳನ್ನು ಒಳಗೊಳ್ಳಲಿದೆ.


☀ರೈಲ್ವೆಗಾಗುವ ಪ್ರಯೋಜನಗಳು :
•┈┈┈┈┈┈┈┈┈┈┈┈┈┈┈┈┈┈•

●.ಉಪಗ್ರಹಗಳಿಂದ ದೊರೆಯುವ ಮಾಹಿತಿಯನ್ನು ಇಸ್ರೊ ತನ್ನ ಬಾಹ್ಯಾಕಾಶ ತಂತ್ರಜ್ಞಾನ ಸಾಧನಗಳ ನೆರವಿನಿಂದ ರೈಲ್ವೆಗೆ ನೀಡಲಿದೆ. ಇದರಿಂದ ರೈಲ್ವೆಗೆ ಗಗನ್‌ನಿಂದ ಹಲವಾರು ಪ್ರಯೋಜನಗಳು ಇವೆ.

●.ಕಾವಲು ರಹಿತ ಲೆವೆಲ್ ಕ್ರಾಸಿಂಗ್ ಇರುವ ಸ್ಥಳಗಳ ಬಗ್ಗೆ ಮುಂಚಿತವಾಗಿ ರೈಲಿಗೆ ಗಗನ್ ಮಾಹಿತಿ ಕೊಡಬಲ್ಲುದು. ಇಂತಹ ಕ್ರಾಸಿಂಗ್‌ನಲ್ಲಿ ಎಚ್ಚರಿಕೆಯ ಸಿಗ್ನಲ್ ತೋರಿಸುತ್ತದೆ. ಕೂಡಲೇ ರೈಲ್ವೆಯ ಹಾರ್ನ್ ಮೊಳಗುತ್ತದೆ. ಇದರಿಂದ ಸಂಭವನೀಯ ಅವಘಡಗಳನ್ನು ತಪ್ಪಿಸಬಹುದು.

●.ಕೆಲವು ಪ್ರದೇಶಗಳಲ್ಲಿ ರೈಲ್ವೆ ಹಳಿಗಳಲ್ಲಿ ನೀರು ತುಂಬಿಕೊಳ್ಳುತ್ತದೆ. ಅಂತಹ ಸಂದರ್ಭದಲ್ಲಿ ಗಗನ್ ಮೂಲಕ ಅಂತಹ ಹಳಿಗಳ ಬಗ್ಗೆ ಮಾಹಿತಿ ಪಡೆಯಬಹುದು.

●.ಸುರಂಗ ಮಾರ್ಗಗಳಲ್ಲಿ ಹೋಗುವಾಗ ಹೆಚ್ಚು ಸದೃಢವಾಗಿರುವ ಹಳಿಗಳನ್ನು ಗುರುತಿಸಬಹುದು.

●.‘ಗಗನ್‌ ವ್ಯವಸ್ಥೆಯು ಅಮೆರಿಕದ ಜಿಪಿಎಸ್‌ ಅನ್ನು ಆಧಾರವಾಗಿಟ್ಟು ಕೊಂಡು ಇಸ್ರೊ ಅಭಿವೃದ್ಧಿಪಡಿಸಿರುವ ಸ್ಥಾನಿಕ ಸಂಚಾರ ಮಾರ್ಗದರ್ಶಿ ಸಾಧನ.

●.‘ಗುಡ್ಡಗಾಡು ಪ್ರದೇಶಗಳಲ್ಲಿ ರೈಲ್ವೆ ಹಳಿಯನ್ನು ಸರಿಯಾಗಿ ಜೋಡಿಸುವ ಬಗ್ಗೆ ಸ್ಪಷ್ಟವಾದ ಮಾಹಿತಿಯನ್ನು ಈ ವ್ಯವಸ್ಥೆ ನೀಡುತ್ತದೆ.

●.ಸುರಂಗದಲ್ಲಿ ಪ್ರಯಾಣಿಸುವ ಸಂದರ್ಭದಲ್ಲಿ ಹೆಚ್ಚು ಸ್ಥಿರವಾಗಿರುವ ಹಳಿ ಯಾವುದು ಎನ್ನುವುದರ ಬಗ್ಗೆಯೂ ಇದು ಮಾಹಿತಿ ನೀಡು ತ್ತದೆ

No comments:

Post a Comment