"ಮನುಷ್ಯ ದೀಪವಾದರೂ ಆಗಬೇಕು, ಕನ್ನಡಿಯಾದರೂ ಆಗಬೇಕು. ಒಂದು ಬೆಳಕನ್ನು ಕೊಡುತ್ತದೆ ಮತ್ತೊಂದು ಅದನ್ನು ಪ್ರತಿಬಿಂಬಿಸುತ್ತದೆ. ಪ್ರತಿಯೊಬ್ಬರೂ ದೀಪ ಆಗದೇ ಹೋಗಬಹುದು ಆದರೆ ಕನ್ನಡಿ ಆಗಬಲ್ಲರು. ತಿಳಿದಿರುವ ಜ್ಞಾನವನ್ನು ಮತ್ತೊಬ್ಬರಿಗೆ ಹಂಚುವುದೇ ಜೀವನ.."—ಅರಿಸ್ಟಾಟಲ್

Friday 4 September 2015

☀ಎಸ್ ಡಿ ಎ ಮತ್ತು ಎಫ್ ಡಿ ಎ ಎಕ್ಸಾಂ ಗಾಗಿ ಸಾಮಾನ್ಯ ಜ್ಞಾನ (ಭಾಗ - 20) (General knowledge for SDA and FDA Exam (Part-20))  ☆.. ಎಸ್ ಡಿ ಎ ಮತ್ತು ಎಫ್ ಡಿ ಎ ವಿಶೇಷಾಂಕ. ...

☀ಎಸ್ ಡಿ ಎ ಮತ್ತು ಎಫ್ ಡಿ ಎ ಎಕ್ಸಾಂ ಗಾಗಿ ಸಾಮಾನ್ಯ ಜ್ಞಾನ (ಭಾಗ - 20)
(General knowledge for SDA and FDA Exam (Part-20))
☆.. ಎಸ್ ಡಿ ಎ ಮತ್ತು ಎಫ್ ಡಿ ಎ ವಿಶೇಷಾಂಕ. ...
━━━━━━━━━━━━━━━━━━━━━━━━━━━━━━━━━━━━━━━━━━━━━

★ ಎಸ್ ಡಿ ಎ ಮತ್ತು ಎಫ್ ಡಿ ಎ ವಿಶೇಷಾಂಕ
(SDA and FDA Special)

★ ಸಾಮಾನ್ಯ ಜ್ಞಾನ
(General Knowledge)


781. ನರೇಂದ್ರ ಮೋದಿಯವರು ಜಾರಿಗೆ ತಂದ 'ದೀನ ದಯಾಳು ಉಪಾದ್ಯಾಯ ಗ್ರಾಮ ಜ್ಯೋತಿ ಯೋಜನೆ' ಯ ಮುಖ್ಯ ಉದ್ದೇಶ?

●.ಉತ್ತರ :- 24 ತಾಸು ವಿದ್ಯುತ ಪೂರೈಕೆ


782. ಯಾವ ದೇಶದ ಸಂವಿಧಾನದಿಂದ 'ರಾಷ್ಟ್ರಪತಿ ದೋಷಾರೋಪಣ ಪದ್ದತಿ'ಯನ್ನು ಭಾರತದ ಸಂವಿಧಾನವು ಎರವಲು ಪಡೆದುಕೊಂಡಿದೆ ?

●.ಉತ್ತರ :- ಐರ್ಲೆಂಡ್ ಸಂವಿಧಾನ


783. 2015 ನೇ ಸಾಲಿನ ಮ್ಯಾಗ್ಸೆಸ್ಸ ಪ್ರಶಸ್ತಿ ವೀಜೆತರಾದ ಭಾರತಿಯ ಯಾರು?

●.ಉತ್ತರ :- ಅಂಶು ಗುಪ್ತಾ


784. ಯಾವ ಅನುಚ್ಚೇದದ ಪ್ರಕಾರ ಸಂಸತ್ತು ವಿದಾನ ಪರಿಷತ್ ನ್ನು ರಚಿಸಬಹುದು ಅಥವಾ ರದ್ದುಪಡಿಸಬಹುದು?

●.ಉತ್ತರ :- 169ನೇ ವಿಧಿ.


785. ಕೇಂದ್ರೀಯ ಜಾಗ್ರತ ಆಯೋಗವನ್ನು (ಸೆಂಟ್ರಲ್ ವಿಜಿಲೆನ್ಸ್ ಕಮಿಷನ್) ಕೇಂದ್ರ ಸರ್ಕಾರವು ಯಾವಾಗ ರಚಿಸಿತು?

●.ಉತ್ತರ :- 1964ರಲ್ಲಿ.


786. ಇತ್ತೀಚೆಗೆ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ನೂತನ ಅದ್ಯಕ್ಷರು ಯಾರು?

●.ಉತ್ತರ :- ಕೃಪಾ ಆಳ್ವಾ


787. ಮೃತದೇಹವನ್ನು ಕೆಡದಂತೆ ಇರಿಸಲು ಬಳಸುವ ರಾಸಾಯನಿಕ ಯಾವುದು?

●.ಉತ್ತರ :- ಫಾರ್ಮಲ್ಡಿಹೈಡ.


788. ವಿಸ್ತೀರ್ಣದಲ್ಲಿ ಭಾರತದ ಅತೀ ದೊಡ್ಡ ದ್ವೀಪ ಯಾವುದು?

●.ಉತ್ತರ :- ಅಂಡಮಾನ್


789. ಇಪ್ಪತ್ತನೆಯ ಕಾನೂನು ಆಯೋಗದ ಮುಖ್ಯಸ್ಥರು ಯಾರು ?

●.ಉತ್ತರ :- ನ್ಯಾ. ಎ ಪಿ ಶಹಾ.


790. ಭಾರತ ಸರ್ಕಾರವು ಯಾವಾಗ 'ಕ್ಯೋಟೊ ಪ್ರೋಟೊಕಾಲ್' ಅನ್ನು ಅನುಮೋದಿಸಿತು?

●.ಉತ್ತರ :- 2002


791. ರಾಮಾಯಣದ ರಾಮನ ತಾಯಿಯ ಹೆಸರೇನು?

 ●.ಉತ್ತರ :- ಕೌಸಲ್ಯೆ.


792. ಜಲಿಯನ್ ವಾಲಾಬಾಗ್ ಹತ್ಯಾಕಾಂಡದ ಕುರಿತು ಅಧ್ಯಯನ ಮಾಡಲು ನೇಮಕವಾಗಿದ್ದ ಆಯೋಗ ಯಾವುದು?

●.ಉತ್ತರ :- ಹಂಟರ್ ಆಯೋಗ.


793. 'ಹೈಡ್ರಾಲಿಕ್ ಬ್ರೇಕ್'ಗಳು ಯಾವ ನಿಯಮದ ಆಧಾರದ ಮೇಲೆ ಕೆಲಸ ನಿರ್ವಹಿಸುತ್ತದೆ?

●.ಉತ್ತರ :- ಫಾಸ್ಕಲ್ ನಿಯಮ


794. ಶಕ ಪಂಚಾಂಗದ ಪ್ರಕಾರ ಭಾರತದ ಪ್ರಸ್ತುತ ವರ್ಷ (ಇಸ್ವಿ) ಯಾವುದು?

●.ಉತ್ತರ :- 1936


795. ಇತ್ತೀಚೆಗೆ ಅತ್ಯಂತ ಆರೋಗ್ಯಕರ ಚಹಾ ಎಂದು ಪರಿಗಣಿತವಾಗಿರುವ 'ಪರ್ಪಲ್ ಟೀ' ಯನ್ನು ಉತ್ಪಾದಿಸುವ ವಿಶ್ವದ ಏಕೈಕ ರಾಷ್ಟ್ರ ಯಾವುದು ?

●.ಉತ್ತರ :- ಕೀನ್ಯಾ


796. ಇರಾಕಿನ ಹಳೆಯ ಹೆಸರೇನು?

●.ಉತ್ತರ :- ಮೆಸಪಟೋಮಿಯಾ.


797. 2015 ನೇ ಸಾಲಿನ ಚಾವುಂಡರಾಯ ಪ್ರಸಶ್ತಿಗೆ ಪಾತ್ರರಾದವರು ಯಾರು?

●.ಉತ್ತರ :- ಎಸ ಪಿ ಪದ್ಮಪ್ರಸಾದ


798. ಕನ್ನಡದ ಎರಡನೇ ಕವಿಚಕ್ರವರ್ತಿ ಎಂದು ಯಾರು ಪ್ರಸಿದ್ದಿ ಹೊಂದಿದ್ದಾರೆ?

●.ಉತ್ತರ :- ಜನ್ನ


799. ಯುರೋಪ ಒಕ್ಕೂಟದಲ್ಲಿರುವ ಒಟ್ಟು ರಾಷ್ಟ್ರಗಳೆಷ್ಟು?

●.ಉತ್ತರ :- 28.


800. ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆಯನ್ನು ಇತ್ತೀಚೆಗೆ ಯಾವ ದಿನದಂದು ಆಚರಿಸಲಾಯಿತು ?

●.ಉತ್ತರ :- ಜನೆವರಿ 24


801. ಕರ್ನಾಟಕದಲ್ಲಿ ಅತಿ ಹೆಚ್ಚು ರಾಷ್ಟ್ರೀಯ ಉದ್ಯಾನವನಗಳು ಹಾಗೂ ವನ್ಯಜೀವಿ ರಕ್ಷಣಾ ಧಾಮಗಳನ್ನು ಹೊಂದಿರುವ ಜಿಲ್ಲೆ ಯಾವುದು?

●.ಉತ್ತರ :- ಮೈಸೂರು.


802. ಪೋಂಗ್ ಅಣೆಕಟ್ಟನ್ನು ಯಾವ ಹೆಸರಿನಿಂದ ಈಗ ಕರೆಯಲಾಗುತ್ತದೆ?

●.ಉತ್ತರ :- ಮಹಾರಾಣಾ ಪ್ರತಾಪ್ ಸಾಗರ್ ಲೇಕ್


803. ಭಾರತದ ಮೊಟ್ಟ ಮೊದಲ ದೇಶೀಯ ಬ್ಯಾಂಕ್ ಯಾವುದು?

●.ಉತ್ತರ :- ಪಂಜಾಬ್ ನ್ಯಾಷನಲ್ ಬ್ಯಾಂಕ್


804. ಅಂತರಾಷ್ಟ್ರೀಯ ಏಕದಿನ ಪಂದ್ಯದಲ್ಲಿಮೊದಲ ಬಾರಿಗೆ 6 ಏಸೆತಗಳಿಗೆ 6 ಸಿಕ್ಸರ್ ಸಿಡಿಸಿದ ಆಟಗಾರ ಯಾರು?

●.ಉತ್ತರ :- ಹರ್ಷಲ್ ಗಿಬ್ಸ್.


805. ಮಿರ್ ಖಾಸಿಮ್‌ನ ನಂತರ ಬಂಗಾಳದ ಸಿಂಹಾಸಕ್ಕೆ ಯಾರನ್ನು ನೇಮಿಸಲಾಯಿತು?

 ●.ಉತ್ತರ :- ಮಿರ್ ಜಾಫರ್


806. ಭೂಮಿ ಮತ್ತು ಚಂದ್ರನ ನಡುವೆ ಇರುವ ಅಂತರವನ್ನು ನಿಖರವಾಗಿ ಯಾವ ವಿಧಾನ/ಸಾಧನದಿಂದ ಅಳೆಯಲಾಗಿದೆ?

●.ಉತ್ತರ :- ರಿಟ್ರೋ ರಿಫ್ಲೆಕ್ಟರ್.


807. ಯಾವ ನದಿಗೆ ಅಣೆಕಟ್ಟು ಕಟ್ಟುವ ಮೂಲಕ ದೇಬರ್ ಸರೋವರವನ್ನು ರಚಿಸಲಾಗಿದೆ?

●.ಉತ್ತರ :- ಗೋಮತಿ


808. ತೆಲಂಗಾಣ ರಾಜ್ಯ ಎಂದು ಉದಯವಾಯಿತು ?.

●.ಉತ್ತರ :- ಜೂನ್ 02, 2014


809. ಜೀವಿಗಳ ಕುರಿತಂತೆ 'ಉಳಿವಿಗಾಗಿ ಹೋರಾಟ' (struggle for existence) ಇದು ಯಾರ ಪ್ರಸಿದ್ದ ಹೇಳಿಕೆಯಾಗಿದೆ.?

●.ಉತ್ತರ :- ಚಾರ್ಲ್ಸ ಡಾರ್ವಿನ್.


810. ಶಾಂತಿಗಾಗಿ ನೊಬೆಲ್ ಪ್ರಶಸ್ತಿ ಪಡೆದ ಏಕೈಕ ವಿಜ್ಞಾನಿ ಯಾರು?

●.ಉತ್ತರ :- ನಾರ್ಮನ್ ಬೊಲಾರ್ಗ.

...To be continued. 

No comments:

Post a Comment